Tag: omni

  • ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – ಹುಡುಗಿ ಸಜೀವ ದಹನ

    ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – ಹುಡುಗಿ ಸಜೀವ ದಹನ

    – 7 ಮಂದಿಗೆ ಗಾಯ, ಮಾದಾವರ ಬಳಿ ಘಟನೆ

    ಬೆಂಗಳೂರು: ನೆಲಮಂಗಲದ ಮಾದಾವರ (Madavara, Nelamangala) ಬಳಿ ಭಾರೀ ಅಪಘಾತ ಸಂಭವಿಸಿದೆ. ಸಹೋದರನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಹುಡುಗಿಯೊಬ್ಬಳು ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ.

    ಬೆಂಗಳೂರು- ತುಮಕೂರು ಹೈವೆಯ ಮಾದಾವರ ಟೋಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಓಮ್ನಿ ಕಾರಿಗೆ ಬಲೆನೋ ಕಾರು ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಓಮ್ನಿ‌ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿ ಒಟ್ಟು 8 ಜನ ಪ್ರಯಾಣ ಮಾಡ್ತಿದ್ರು. ಏಳು ಜನಕ್ಕೆ ಸುಟ್ಟ ಗಾಯಗಳಾಗಿದ್ರೇ 15 ವರ್ಷದ ಹುಡುಗಿಯೊಬ್ಬಳು ಸಜೀವ ದಹನವಾಗಿದ್ದಾಳೆ.

    ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡ್ತಿದ್ದ 8 ಜನರಲ್ಲಿ ದಿವ್ಯಾ ಸಾವನ್ನಪ್ಪಿದ್ರೆ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಾಳುಗಳಾಗಿದ್ದಾರೆ. ಇವರಲ್ಲಿ ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ. ಮಾದಾವರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳುಗಳೆಲ್ಲರೂ ಗುಜರಾತಿ ಮೂಲದ ಕುಟುಂಬದವರು. ಇದನ್ನೂ ಓದಿ: ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್‌ ಹೇಳಿತ್ತು: ಮೋದಿ ಕಿಡಿ

    ಸ್ಥಳಕ್ಕೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್. ಪಿ ಮಲ್ಲಿಕಾರ್ಜುನ್ ಬಾಲಾದಂಡಿ ನಂತರ ಘಟನೆಯ ವಿವರ ನೀಡಿದ್ರು. ತುಮಕೂರು ರಸ್ತೆ ಹೈವೇಯಲ್ಲಿ 10ಗಂಟೆ ರಾತ್ರಿಯಲ್ಲಿ ಘಟನೆ ನಡೆದಿದೆ. ಬಲೆನೋ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮುಂದಿದ್ದ ಕಾರು ಎರಡು ಮೂರು ಪಲ್ಟಿ ಆಗಿದ್ದು ನಂತರ ಬೆಂಕಿ ಹತ್ತಿಕೊಂಡಿದೆ.

    ಇನ್ನು ಡಿಕ್ಕಿಯೊಡೆದ ಬಲೆನೋ ಕಾರಿನಲ್ಲಿದ್ದವರನ್ನು ಪರಿಶೀಲನೆ ನಡೆಸಬೇಕಿದೆ.‌ ಅವರು ಮದ್ಯ ಸೇವಿಸಿ ಚಾಲನೆ ಮಾಡಿದ್ರಾ ಅನ್ನೋ‌ ಬಗ್ಗೆ ತನಿಖೆ ಮಾಡುತ್ತಿದ್ದೇವೆ.‌ ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ ಎಂದು ಮಾಹಿತಿ ನೀಡಿದ್ರು.

    ಒಟ್ಟಾರೆ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಖುಷಿಯಿಂದ‌ ಮನೆಗೆ ವಾಪಸ್ ಆಗುತ್ತಿದ್ದ ಕುಟುಂಬಕ್ಕೆ ದೊಡ್ಡ ಅಘಾತವಾಗಿದೆ. ಮನೆ ಮಗಳು ಧಗಧಗನೇ ಹೊತ್ತಿ ಉರಿಯುತ್ತಿದ್ರೂ ಕಾಪಾಡಲಾಗದ ದುಸ್ಥಿತಿ ನಿರ್ಮಾಣವಾಗಿದ್ದು ದುರಂತ.

  • ಓಮ್ನಿ ಮೇಲೆ ಮಗುಚಿ ಬಿದ್ದ ಲಾರಿ- ವ್ಯಕ್ತಿ ಸಾವು

    ಓಮ್ನಿ ಮೇಲೆ ಮಗುಚಿ ಬಿದ್ದ ಲಾರಿ- ವ್ಯಕ್ತಿ ಸಾವು

    ಮಂಗಳೂರು: ಓಮ್ನಿ ಮೇಲೆ ಲಾರಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಎಂಬಲ್ಲಿ ನಡೆದಿದೆ.

    ಮೃತನನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಲಾರಿಯು ಉಡುಪಿ ಕಡೆಗೆ ಗೋಣಿ ಚೀಲಗಳನ್ನು ಹೊತ್ತು ಸಾಗುತ್ತಿತ್ತು. ಬ್ರೇಕ್ ಹಾಕಿದಾಗ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ರಸ್ತೆಯಲ್ಲಿ ಲಾರಿ ಎಡಭಾಗಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮ್ನಿ ಮೇಲೆ ಮಗುಚಿ ಬಿದ್ದಿದೆ.

    ಕಾರಿನಲ್ಲಿದ್ದ ಚಿತ್ರಾಪುರ ನಿವಾಸಿ ಲೋಕೇಶ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಲೋಕೇಶ್ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್ ಮೃತಪಟ್ಟಿದ್ದಾರೆ.

    ಘಟನೆ ಸಂಬಂದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 13 ಜಿಲ್ಲೆಗಳಲ್ಲಿ ಮಳೆ ಹಾನಿ, ಈವರೆಗೂ 12 ಜನ, 62 ಜಾನುವಾರುಗಳು ಸಾವು: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ಓಮ್ನಿ

    ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ಓಮ್ನಿ

    ನೆಲಮಂಗಲ: ಹಾಸನ ಮಾರ್ಗವಾಗಿ ಬೆಂಗಳೂರು ಕಡೆ ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ನೋಡನೋಡುತ್ತಲೇ, ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಸರ್ಕಲ್ ಬಳಿ ನಡೆದಿದೆ.

    ಓಮ್ನಿ ಕಾರು ಹಾಸನದಿಂದ ಬೆಂಗಳೂರು ಕಡೆಗೆ ಚಲಿಸುತ್ತಿತ್ತು. ಇತ್ತ ಕುಣಿಗಲ್ ಸರ್ಕಲ್ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನ ಚಾಲಕ ಕಾರು ನಿಲ್ಲಿಸಿ ಕಾರಿನಲ್ಲಿದ್ದ ಪ್ರಾಯಾಣಿಕರನ್ನು ಕೆಳಗಿಳಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್ – ನರೇಶ್ ಗೌಡಗೆ ಯುವ ಕಾಂಗ್ರೆಸ್ ಮುಖಂಡ ಪಟ್ಟ

    ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

  • ಪೆಟ್ರೋಲ್ ಹಾಕುವಾಗ ಓಮ್ನಿಗೆ ಹೊತ್ತಿಕೊಂಡ ಬೆಂಕಿ

    ಪೆಟ್ರೋಲ್ ಹಾಕುವಾಗ ಓಮ್ನಿಗೆ ಹೊತ್ತಿಕೊಂಡ ಬೆಂಕಿ

    – ಇಂಡಿ ಪಂಪ್ ಪೆಟ್ರೋಲ್ ಬಂಕ್ ನಲ್ಲಿ ಅವಘಡ

    ಹುಬ್ಬಳ್ಳಿ: ಪೆಟ್ರೋಲ್ ಹಾಕುವ ವೇಳೆ ಮಾರುತಿ ಓಮ್ನಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರಿನ ಇಂಡಿಪಂಪ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ.

    ಮಾರುತಿ ಓಮ್ನಿಗೆ ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಯ ವಾಹನ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಬೆಂಕಿ ಕಾಣುತ್ತಿದಂತೆಯೇ ಜನರು ಆತಂಕಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿನ ನಂದಿಸಿದ ನಂತರ ಸ್ಥಳೀಯರು ನಿರಾಳರಾದರು.

  • ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಆನೇಕಲ್: ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡು ಈರೋಡ್‍ನ ಕಾವೇರಿಪಟ್ಟಣಂ ಬಳಿ ನಡೆದಿದೆ.

    ಘಟನೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ಪ್ಯಾಸೆಂಜರ್ ಹಾಗೂ ಓಮ್ನಿಯಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳನ್ನು ಪ್ರಶಾಂತ್, ಲಿಂಗಾ, ಸುರೇಂದರ್, ಶಿವಕುಮಾರ್, ಓಮ್ನಿ ಚಾಲಕ ಹಾಗೂ ಬಸ್ ಪ್ಯಾಸೆಂಜರ್ ದೇವರಾಜು ಎಂದು ಗುರುತಿಸಲಾಗಿದೆ.

    ಸ್ನೇಹಿತರೆಲ್ಲ ಸೇರಿ ಈರೋಡ್ ಜಿಲ್ಲೆಯ ಭವಾನಿಯಿಂದ ಬೆಂಗಳೂರಿನ ವಂಡರ್ ಲಾ ಹೊರಟಿದ್ದರು. ಈ ಸಂದರ್ಭದಲ್ಲಿ ಅಂದರೆ ಮುಂಜಾನೆ 4 ಗಂಟೆ ಸುಮಾರಿಗೆ ಪ್ರವಾಸಿ ತಾಣಕ್ಕೆ ಹೋಗುವ ದಾರಿಯಲ್ಲಿ ಈ ದುರಂತ ಸಂಭವಿಸಿದೆ.

    ವ್ಯಕ್ತಿಯೊಬ್ಬರು ರಸ್ತೆ ದಾಟಲು ಯತ್ನಿಸಿದ್ದಾರೆ. ಹೀಗಾಗಿ ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಓಮ್ನಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಪರಿಣಾಮ 5 ಮಂದಿ ಸ್ಥಳದಲ್ಲಿ ಮೃತಪಟ್ಟರೆ ಓಮ್ನಿಯಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಎಂಬವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ರಸ್ತೆ ಬದಿ ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ- ಮೂವರ ದುರ್ಮರಣ

    ರಸ್ತೆ ಬದಿ ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ- ಮೂವರ ದುರ್ಮರಣ

    – ತಾಯಿ, ಇಬ್ಬರು ಮಕ್ಕಳಿಗೆ ಗಂಭೀರ ಗಾಯ

    ಚಿತ್ರದುರ್ಗ: ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿರುವ ದುರ್ಘಟನೆ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಓಮ್ನಿ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೇಣುಕಮ್ಮಾ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಪುಟ್ಟಿಲಿಂಗಯ್ಯ(39) ಹಾಗೂ ಶಿವರಾಜ್(55) ಸಾವನ್ನಪ್ಪಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದಾರೆ.

    ಈ ವೇಳೆ ಅಂಬುಲೆನ್ಸ್ ಗೆ ಕರೆ ಮಾಡಿ, ಸುಮಾರು ಅರ್ಧ ಗಂಟೆಗಳ ಕಾಲ ಪರದಾಡಿದರೂ ಯಾರು ಸ್ಪಂದಿಸಲಿಲ್ಲ. ಕೊನೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಇಂದು ಮಧ್ಯಾಹ್ನ ಓಮ್ನಿಯಲ್ಲಿ ಬೆಂಗಳೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದ್ದು, ಇನ್ನುಳಿದ ತಾಯಿ ಜಯಶ್ರೀ (25), ಮಗಳು ಮೋನಿಕಾ(05) ಹಾಗೂ ಮಗ ಶೋಬಿತ್(07) ಗಾಯಾಳುಗಳು ಅಧೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮೀಣ ಠಾಣೆಯ ಸಿಪಿಐ ಬಾಲಚಂದ್ರ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದ್ದಾರೆ.

  • ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    – ಭಯಾನಕ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ವೇಗವಾಗಿ ಬಂದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಆಟೋ, ಓಮಿನಿ ಹಾಗೂ ಕಾರಿಗೆ ಡಿಕ್ಕಿಯಾಗಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ.

    ಮುನಿಯಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬ್ರೇಕ್ ಫೇಲ್  ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ, ಕಾರಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಭಾರೀ ವೇಗವಾಗಿದ್ದರಿಂದ ಮುಂದಿನ ಅಡ್ಡ ರಸ್ತೆಯಲ್ಲಿ ಬರುತ್ತಿದ್ದ ಆಟೋಗೂ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲ ಮೂರೂ ವಾಹನಗಳು ನಜ್ಜುಗುಜ್ಜಾಗಿವೆ.

    ಆಟೋ ಮತ್ತು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಓಮ್ನಿ- ತಪ್ಪಿದ ಭಾರೀ ಅನಾಹುತ

    ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಓಮ್ನಿ- ತಪ್ಪಿದ ಭಾರೀ ಅನಾಹುತ

    ಚಾಮರಾಜನಗರ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರ್ ಒಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ಘಟನೆ ನಡೆದಿದೆ.

    ಗುಂಡ್ಲುಪೇಟೆಯ ಅಶೋಕ್ ಅವರಿಗೆ ಸೇರಿದ್ದ ಮಾರುತಿ ಓಮ್ನಿ ಕಾರ್ ಇದ್ದಾಗಿದ್ದು, ಭೀಮನಬೀಡು ಗ್ರಾಮದ ಬಳಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಅಶೋಕ್ ಹಾಗೂ ಅವರ ಪತ್ನಿ, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಶೋಕ್ ಅವರು ಪತ್ನಿ ಹಾಗೂ ಮಕ್ಕಳ ಜೊತೆಗೆ ಗುಂಡ್ಲುಪೇಟೆ ಕಡೆಗೆ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಒಕ್ಕಣೆ ಮಾಡಲು ರೈತರು ರಸ್ತೆಯ ಮೇಲೆ ಹುರುಳಿ ಸತ್ತೆ ಸುರಿದಿದ್ದರು. ಓಮ್ನಿ ಚಕ್ರಗಳಿಗೆ ಹುರುಳಿ ಸತ್ತೆ ಸುತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮಿಸಿದ ಅಶೋಕ್ ತಕ್ಷಣವೇ ಎಲ್ಲರನ್ನೂ ಕಾರಿನಿಂದ ಕೆಳಗಿಳಿಸಿದ್ದಾರೆ. ಅಶೋಕ್ ಅವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ಕೈತಪ್ಪಿದೆ.

    ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ವಾಹನ ಚಾಲಕರು, ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣೆ ಮಾಡುವವರಿಗೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

  • ಓಮ್ನಿ ಮೇಲೆ ಉರುಳಿದ ಕಂಟೈನರ್- ಮಹಿಳೆಯರಿಬ್ಬರ ದುರ್ಮರಣ

    ಓಮ್ನಿ ಮೇಲೆ ಉರುಳಿದ ಕಂಟೈನರ್- ಮಹಿಳೆಯರಿಬ್ಬರ ದುರ್ಮರಣ

    ಬೆಂಗಳೂರು: ಓಮ್ನಿ ಮೇಲೆ ಕಂಟೈನರ್ ಲಾರಿ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸೂರು ಸಮೀಪದ ಕಾಮನದೊಡ್ಡಿ ಬಳಿ ನಡೆದಿದೆ.

    ಬೆಂಗಳೂರಿನ ಅರಕೆರೆ ನಿವಾಸಿಗಳಾದ ಅಂಬಿಕಾ (38) ಹೇಮಾ (40) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಇಬ್ಬರು ಮಕ್ಕಳು, ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅರಕೆರೆಯ ನಾಗಭೂಷಣ್ ಎಂಬವರು ಕುಟುಂಬ ಸಮೇತ ತಿರುವಣ್ಣಮಲೈಗೆ ತೆರಳಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಓಮ್ನಿ ಮೇಲೆ ಕಂಟೈನರ್ ಲಾರಿ ಬಿದ್ದಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಾಗಭೂಷಣ್ ಬಿಎಂಟಿಸಿ ಸಂಸ್ಥೆಯಲ್ಲಿ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಸ್ಥಳಕ್ಕೆ ಸುಳಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ

  • ಕೆಎಸ್‌ಆರ್‌ಟಿಸಿ, ಓಮ್ನಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರ ದುರ್ಮರಣ

    ಕೆಎಸ್‌ಆರ್‌ಟಿಸಿ, ಓಮ್ನಿ ನಡುವೆ ಡಿಕ್ಕಿ- ಒಂದೇ ಕುಟುಂಬದ ಮೂವರ ದುರ್ಮರಣ

    ಹಾಸನ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಮಾರುತಿ ಓಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಲಕ್ಷ್ಮಿದೇವರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದೆ. ಮೃತರನ್ನು ಮುಜೀಬ್(53), ಮಹಮದ್ ಸಾದಿಕ್ (22) ಹಾಗೂ ಮುಸ್ಕಾನ್ (19) ಎಂದು ಗುರುತಿಸಲಾಗಿದೆ.

    ಶಲೀನಾ ಬಾನು, ಇಮ್ರಾನ್ ಅಹಮದ್, ಶಲೀನಾ ತಾಜ್ ಮತ್ತು ಮೊಹಮದ್ ಶಲೀನಾರಿಗೆ ಗಾಯಾಳುಗಳಾಗಿದ್ದು, ಇವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv