Tag: Omelette

  • ಮನೆಯಲ್ಲಿಯೇ ಮಾಡಿ ರುಚಿಕರವಾದ ಆಮ್ಲೆಟ್

    ಮನೆಯಲ್ಲಿಯೇ ಮಾಡಿ ರುಚಿಕರವಾದ ಆಮ್ಲೆಟ್

    ನಿಮ್ಮ ದಿನದ ಆರೋಗ್ಯಕರ ಮತ್ತು ಸಂತೋಷದ ಆರಂಭಕ್ಕಾಗಿ ಆಮ್ಲೆಟ್ ಮಾಡಿ ಸವಿಯಿರಿ. ಇದನ್ನು ತಯಾರಿಸಲು ತುಂಬಾ ಸುಲಭ.  ಇಲ್ಲಿ ನಿಮಗೆ ಇಷ್ಟವಾದ ತರಕಾರಿ ಬಳಸಿ ಆಮ್ಲೆಟ್ ಸುಲಭವಾಗಿ ಮಾಡಬಹುದು.

    ಬೇಕಾಗಿರುವ ಪದಾರ್ಥಗಳು:
    * ಮೊಟ್ಟೆಗಳು – 2
    * ಕೆಂಪು ಮೆಣಸು – 1 ಟೀಸ್ಪೂನ್
    * ಚೀಸ್ – 2 ಟೀಸ್ಪೂನ್
    * ಪಾಲಕ್ ಎಲೆ – 1 ಕಪ್


    * ಕಟ್ ಮಾಡಿದ ಟೊಮಾಟೊ – 1 ಕಪ್
    * ಮೆಣಸು – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು ಮತ್ತು
    * ಬೆಣ್ಣೆ – ಅರ್ಧ ಟೀಸ್ಪೂನ್
    * ಈರುಳ್ಳಿ – 1 ಕಪ್

    ಮಾಡುವ ವಿಧಾನಗಳು:
    * ಟೊಮಾಟೊ, ಈರುಳ್ಳಿ ಮತ್ತು ಪಾಲಕ್ ಎಲೆಗಳನ್ನು ಕಟ್ ಮಾಡಿ.
    * ಒಂದು ಬಟ್ಟಲಿಗೆ ಮೊಟ್ಟೆಯನ್ನು ಹಾಕಿ ಇದಕ್ಕೆ ಉಪ್ಪು, ಮೆಣಸಿನಕಾಯಿ ಮತ್ತು ಕಟ್ ಮಾಡಿದ ಟೊಮಾಟೊ, ಈರುಳ್ಳಿ ಮತ್ತು ಪಾಲಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.


    * ಈ ಮಿಶ್ರಣವನ್ನು ಪ್ಯಾನ್‍ಗೆ ಹಾಕಿ ಸಮವಾಗಿ ಹರಡಿ. ಅದು ಗಟ್ಟಿಯಾಗಲು ಪ್ರಾರಂಭಿಸಿದಾಗ, ಆದರೆ ಇನ್ನೂ ಮೇಲೆ ಸ್ವಲ್ಪ ತುರಿದ ಚೀಸ್, ಕೆಂಪು ಮೆಣಸು ಸೇರಿಸಿ.
    * ಬಳಿಕ ಚಾಕುವಿನಿಂದ ಪ್ಯಾನ್ ಅಂಚುಗಳನ್ನು ಸರಾಗಗೊಳಿಸಿ ಮತ್ತು ಅದನ್ನು ಇನ್ನೊಂದು ಬದಿಗೆ ತಿರುಗಿಸಿ. ಇದನ್ನು 1-2 ನಿಮಿಷಗಳ ಕಾಲ ಬೇಯಿಸಿ.
    * ವೆಜಿಟೇರಿಯನ್ ಆಮ್ಲೆಟ್ ಸವಿಯಲು ಸಿದ್ಧವಾಗಿದ್ದು, ಬಿಸಿ ಇರುವಾಗಲೇ ಸವಿಯಿರಿ.

  • ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಮುಂಬೈ: ಆಮ್ಲೆಟ್ ಸೀದು ಹೋಗಿದೆ ಎಂದ ಗ್ರಾಹಕನಿಗೆ ಹೋಟೆಲ್ ಮಾಲೀಕ ಬಿಸಿ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ವಿನೋದ್ ರಾಥೋಡ್(48) ಬಂಧಿತ ಆರೋಪಿಯಾಗಿದ್ದಾನೆ. ಗಾಯಾಳು ಸಂದೀಪ್ ಸಾಯರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿನೋದ್ ರಸ್ತೆ ಬದಿಯ ಸಣ್ಣ ಹೋಟೆಲ್‍ನಲ್ಲಿ ಆಮ್ಲೆಟ್ ಮಾರಾಟ ಮಾಡುತ್ತಿದ್ದನು. ಈತ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ.

    ಸಯಾರೆ ಸಮೀಪದ ರೈಲ್ವೇ ನಿಲ್ದಾಣ ಸಮೀಪದ ಹೋಟೆಲ್‍ವೊಂದರಲ್ಲಿ ಸಂದೀಪ್ ಸಾಯರೆ 40 ರೂ. ಬೆಲೆಯ ಆಮ್ಲೆಟ್ ಆರ್ಡರ್ ಮಾಡಿದ್ದನು. ಆದರೆ ಆ ಅಂಗಡಿಯವನು ಕೊಟ್ಟ ಆಮ್ಲೆಟ್ ಸುಟ್ಟು ಹೋಗಿದ್ದರಿಂದ ಅದರ ಬದಲಾಗಿ ಬೇರೆ ಆಮ್ಲೆಟ್ ನೀಡುವಂತೆ ಆತ ಒತ್ತಾಯಿಸಿದ್ದ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ನಡೆದಿತ್ತು. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

    ನಂತರ ಆ ಅಂಗಡಿಯ ಮಾಲೀಕ ಸಂದೀಪ್ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ. ಸಂದೀಪ್ ರಾಥೋಡ್ ಸಾಯರೆಗೆ ಹೊಡೆದಿದ್ದಕ್ಕಾಗಿ ಐಪಿಸಿ ಸೆಕ್ಷನ್ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸಂದೀಪ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಗನನ್ನ ನೀರಿನ ಸಂಪ್‍ಗೆ ಎಸೆದು ತಂದೆ ಆತ್ಮಹತ್ಯೆ

  • ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    – ಚರಿತ್ರಿಯಾ ಮುದ್ದು ಮಾತಿಗೆ ನೆಟ್ಟಿಗರು ಫಿದಾ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ತನ್ನ ಮಗಳು ಮುದ್ದು ಮುದ್ದಾಗಿ ಮಾತನಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ವೈರಲ್ ಆಗಿದೆ.

    ಗಣೇಶ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ತಮ್ಮ ಸಿನಿಮಾ ವಿಚಾರಗಳ ಜೊತೆ ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಮಗಳು ಆಮ್ಲೆಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಗಣೇಶ್ ಮಗಳ ಮುದ್ದು ಮಾತಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ವಿಡಿಯೋದಲ್ಲಿ ಏನಿದೆ
    ಗಣೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು ಚರಿತ್ರಿಯಾ ಗಣೇಶ್ ಅವರು ಆಮ್ಲೆಟ್ ಮಾಡುತ್ತಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಾ ಅಲ್ಲಿಗೆ ಬಂದ ಗಣೇಶ್ ಅವರು ಮಗಳೇ ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಚರಿತ್ರಿಯಾ ಇಂಗ್ಲಿಷಿನಲ್ಲಿ ಆಮ್ಲೆಟ್ ಮಾಡುವ ವಿಧಾವನ್ನು ವಿವರಿಸುತ್ತಾರೆ. ಈ ವೇಳೆ ಹತ್ತಿರ ಬಂದ ಗಣೇಶ್ ಮಗಳೇ ಏನ್ ಮಾಡುತ್ತಿದ್ದೀಯಾ ಸರಿಯಾಗಿ ಹೇಳು ಅಂದಾಗ ಕನ್ನಡದಲ್ಲಿ ಆಮ್ಲೆಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತಾರೆ.

    ಈ ವಿಡಿಯೋದಲ್ಲಿ ಚಿರಿತ್ರಿಯಾ ಮುದ್ದು ಮುದ್ದಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾತನಾಡಿರುವುದು ಗಣೇಶ್ ಅಭಿಮಾನಿಗಳ ಹೃದಯ ಕದ್ದಿದೆ. ಜೊತೆಗೆ ಕೆಲ ನಟ ನಟಿಯರು ಕೂಡ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಮೊದಲಿಗೆ ಕಮೆಂಟ್ ಮಾಡಿರುವ ನಟಿ ಅಮೂಲ್ಯ ಅವರು ಚೆರ್ರಿ ಎಂದು ಬರೆದುಕೊಂಡರೆ, ಪ್ರಜ್ವಲ್ ದೇವರಾಜ್ ಅವರು ಕಮೆಂಟ್ ಮಾಡಿ ಸೋ ಕ್ಯೂಟ್ ಎಂದಿದ್ದಾರೆ. ಜೊತೆಗೆ ಆರ್.ಜೆ ನೇತ್ರಾ ಮತ್ತು ರ್ಯಾಪಿಡ್ ರಶ್ಮಿ ಕೂಡ ಕಮೆಂಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಮಗ ಸೇಬು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದ ಗಣೇಶ್ ಅವರು, ಟಿವಿ ಪೇಪರ್ ನೋಡಿ. ಏನೋ ಪ್ಲ್ಯಾನು ಮಾಡಿ. ಕೇಳಿದ ಒಂದು ಸೇಬು, ತಿನೋಕೆ ಅನ್ಕೊಂಡ್ರೆ ಕೊಟ್ಟ ಕೊರೊನಾ ಜವಾಬು. ಎಲ್ಲರೂ ಕೊರೊನಾದಿಂದ ಓಡಿದರೆ, ವಿಹಾನ್ ಕೊರೊನಾವನ್ನೆ ಸೃಷ್ಠಿಸುತ್ತಿದ್ದಾನೆ. ನನಗೆ ನಿಜವಾಗಲೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದರು. ಸದ್ಯ ಗಣೇಶ್ ಅವರ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ.