Tag: Oman

  • ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

    ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

    ಸದಾ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ತಮ್ಮ ಹುಟ್ಟುಹಬ್ಬ ಆಚರಣೆಗೆ ಕೊಂಚ ರಿಲೀಫ್‌ ಮಾಡಿಕೊಂಡಿದ್ದಾರೆ. 29ನೇ ವರ್ಷದ ಹುಟ್ಟುಹಬ್ಬವನ್ನು (Rashmika Mandannaʼs Birthday) ಇನ್ನಷ್ಟು ಸ್ಪೆಷಲ್‌ ಆಗಿ ಸೆಲೆಬ್ರೇಟ್‌ ಮಾಡೋಕೆ ನಟಿ ವಿದೇಶಕ್ಕೆ ಹಾರಿದ್ದಾರೆ.

    ಹೌದು. ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಗಲ್ಫ್‌ ರಾಷ್ಟ್ರವಾದ ಒಮನ್‌ಗೆ (Oman) ಹಾರಿದ್ದಾರೆ. ರಶ್ಮಿಕಾ ಒಬ್ಬರೇ ಹೋಗಿಲ್ಲ, ಬದಲಾಗಿ ಗೆಳೆಯ ವಿಜಯ್ ದೇವರಕೊಂಡ ಸಹ ಒಮನ್‌ಗೆ ಹಾರಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಜೊತೆಗೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವ್ರ ಕಾಮನ್ ಫ್ರೆಂಡ್ಸ್ ಕೂಡ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಲಿದ್ದಾರಂತೆ. ಈ ಹಿಂದೆಯೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿದೇಶದಲ್ಲಿ ಒಟ್ಟಾಗಿ, ಗುಟ್ಟಾಗಿ ಪಾರ್ಟಿ ಮಾಡಿದ್ದರು. ಇದೀಗ ರಶ್ಮಿಕಾ ಹುಟ್ಟುಹಬ್ಬವನ್ನ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡೋದಕ್ಕೆ ದೇವರಕೊಂಡ ಸಹ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.

    ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸುದ್ದಿಗಳು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಲೇ ಇರುತ್ತದೆ. ಈ ಹಿಂದೆಯೂ ಇಬ್ಬರು ಪ್ರೀತಿಯಲ್ಲಿದ್ದು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು. ಈ ಬಗ್ಗೆ ಪ್ರಶ್ನೆ ರಶ್ಮಿಕಾರನ್ನ ಪ್ರಶ್ನೆ ಮಾಡಿದಾಗ ʻನಿಮಗೆ ಗೊತ್ತಿಲ್ಲದೇ ಇರುವುದು ಏನಿದೆ?ʼ ಎಂದು ಹೇಳಿದ್ದರು. ಇದನ್ನೂ ಓದಿ: ರಾಜಸ್ಥಾನದಲ್ಲಿ `ಡೆವಿಲ್’ ಶೂಟಿಂಗ್ ಮುಗಿಸಿ ಪತ್ನಿ, ಪುತ್ರನೊಂದಿಗೆ ದರ್ಶನ್ ವಾಪಸ್

    ರಶ್ಮಿಕಾ ಮಂದಣ್ಣ ನಟನೆಯ ಸಿಖಂದರ್‌ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್‌ ಆಗಿದೆ. ಅಲ್ಲದೇ ತೆಲುಗಿನಲ್ಲಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ-2 ಬಳಿಕ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ್ದಾರೆ. ಇದನ್ನೂ ಓದಿ: EXCLUSIVE: ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿ ಶೈಲಶ್ರೀ – ನಟಿಗೆ ಧನ ಸಹಾಯ ಮಾಡಿದ ದರ್ಶನ್

  • ದುಬೈನಲ್ಲಿ ಕಾರು-ಲಾರಿ ಡಿಕ್ಕಿ: ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

    ದುಬೈನಲ್ಲಿ ಕಾರು-ಲಾರಿ ಡಿಕ್ಕಿ: ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

    ಬೆಳಗಾವಿ: ಒಂದು ಕುಟುಂಬದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ದುಬೈನ (Dubai) ಓಮಾನ್‌ನಲ್ಲಿ (Oman) ನಡೆದಿದೆ.

    ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ನಿವಾಸಿಗಳಾದ ಪವನಕುಮಾರ್ ತಹಶಿಲ್ದಾರ, ಪೂಜಾ, ವಿಜಯಾ, ಆದಿಶೇಷ ಮೃತಪಟ್ಟವರು.ಇದನ್ನೂ ಓದಿ: ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ


    ದುಬೈಗೆ ತಾಯಿ, ಇಬ್ಬರು ಮಕ್ಕಳು ಹಾಗೂ ಅಳಿಯನೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲೇ ನಾಲ್ವರು ಸಜೀವ ದಹನಗೊಂಡಿದ್ದಾರೆ.

    ಮೃತದೇಹಗಳನ್ನು ಭಾರತಕ್ಕೆ ತರಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತುಕತೆ ನಡೆಸುತ್ತಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಹಾಗೂ ಪ್ರಹ್ಲಾದ್ ಜೋಶಿಗೆ (Pralhad Joshi) ಮನವಿ ಸಲ್ಲಿಸಿದ್ದಾರೆ.ಇದನ್ನೂ ಓದಿ: ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ- ರೌಡಿಶೀಟರ್ ಕಾಲಿಗೆ ಪಿಎಸ್‌ಐ ಗುಂಡೇಟು

  • ಒಮಾನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ- 13 ಮಂದಿ ದುರ್ಮರಣ

    ಒಮಾನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ- 13 ಮಂದಿ ದುರ್ಮರಣ

    – ನೋಡನೋಡ್ತಿದ್ದಂತೇ ನೀರಿನಲ್ಲಿ ಕೊಚ್ಚಿ ಹೋದ ವಾಹನಗಳು

    ಮಸ್ಕತ್:‌ ಒಮಾನ್‌ನಲ್ಲಿ ಸೋಮವಾರ ಭಾರೀ ಮಳೆ (Rain In Oman) ಮುಂದುವರಿದಿದ್ದು, ಹಠಾತ್‌ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ವಾಹನಗಳು ಕೊಚ್ಚಿ ಹೋಗಿವೆ.

    ಉತ್ತರ ಅಲ್ ಶರ್ಕಿಯಾ ಗವರ್ನರೇಟ್‌ನಲ್ಲಿ ನಾಗರಿಕ ರಕ್ಷಣಾ ಮತ್ತು ಅಂಬುಲೆನ್ಸ್ ವಿಭಾಗದ ಶೋಧ ತಂಡಗಳ ಕಾರ್ಯಾಚರಣೆಯಿಂದಾಗಿ ಓರ್ವನ ಶವವನ್ನು ಹೊರತೆಗೆಯಲಾಗಿದೆ. ಮಗು ಸೇರಿದಂತೆ ಉಳಿದ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರವಾಹದಿಂದಾಗಿ ಭಾನುವಾರ ಕನಿಷ್ಟ 12 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 9 ವಿದ್ಯಾರ್ಥಿಗಳು, ಇಬ್ಬರು ಸ್ಥಳೀಯ ನಿವಾಸಿಗಳು ಮತ್ತು ವಲಸಿಗರೊಬ್ಬರು ಸೇರಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ

    ಧಾರಾಕಾರ ಮಳೆಯಿಂದಾಗಿ ಒಮಾನ್‌ನ ಹಲವು ಭಾಗಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮಾನ್‌ನ ಬೀದಿಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ವಾಹನಗಳು ಜಲಾವೃತಗೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಯಲ್ ಓಮನ್ ಪೊಲೀಸ್, ರಾಯಲ್ ಆರ್ಮಿ ಆಫ್ ಒಮಾನ್, ನಾಗರಿಕ ರಕ್ಷಣಾ ಪ್ರಾಧಿಕಾರ ಮತ್ತು ಅಂಬುಲೆನ್ಸ್ ತಂಡಗಳು ಶಾಲೆಗಳಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದವು.

    https://twitter.com/Khaledjelassi10/status/1779633187901104443

    ತುರ್ತು ನಿರ್ವಹಣೆಗಾಗಿ ಒಮಾನ್‌ನ ರಾಷ್ಟ್ರೀಯ ಸಮಿತಿಯು ಮಳೆಯಿಂದ ಪ್ರಭಾವಿತವಾಗಿರುವ ಎಲ್ಲಾ ಗವರ್ನರೇಟ್‌ಗಳನ್ನು ಎಚ್ಚರಿಸಿದೆ ಎಂದು ವರದಿ ತಿಳಿಸಿದೆ. ಒಮಾನ್ ಹೊರತುಪಡಿಸಿ, ಯುಎಇ ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು, ಮಿಂಚು ಮತ್ತು ಗುಡುಗು ಸೇರಿದಂತೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವುದಾಗಿ ವರದಿಯಾಗಿದೆ.

  • ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಮಸ್ಕತ್: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (Union Minister of State for External Affairs) ವಿ ಮುರಳೀಧರನ್ (V Muraleedharan) ಅವರು ಗುರುವಾರ ಮಸ್ಕತ್‌ನಲ್ಲಿರುವ (Muscat) ಐತಿಹಾಸಿಕ ಶಿವ ದೇವಾಲಯಕ್ಕೆ (Shiva Temple) ಭೇಟಿ ನೀಡಿ ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ಕುರಿತು ಮುರಳೀಧರನ್ ಎಕ್ಸ್‌ನಲ್ಲಿ (X) ಮಾಹಿತಿ ಹಂಚಿಕೊಂಡಿದ್ದಾರೆ. ಮೋತೀಶ್ವರ್ ಮಹಾದೇವ್ ಎಂದು ಕರೆಯಲ್ಪಡುವ ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ದೇವಾಲಯ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಇದು ಭಾರತ ಮತ್ತು ಒಮನ್ ನಡುವಿನ ನಿರಂತರ ಸಾಂಸ್ಕೃತಿಕ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಭಾರತ ಮತ್ತು ಒಮನ್ ಜನರ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಅಕ್ಟೋಬರ್ 18 ಮತ್ತು 19ರಂದು ಒಮನ್ ಸುಲ್ತಾನೇಟ್‌ಗೆ ತಮ್ಮ ಮೂರನೇ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಅವರ ಭೇಟಿಯ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು ಒಮಾನಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ: ಬೈಡೆನ್

    ಈ ವೇಳೆ ಮುರಳೀಧರನ್ ಅವರು ‘ಮಾಂಡವಿಯಿಂದ ಮಸ್ಕತ್‌ಗೆ: ಭಾರತೀಯ ಸಮುದಾಯ ಮತ್ತು ಭಾರತ ಮತ್ತು ಓಮನ್‌ನ ಹಂಚಿಕೆಯ ಇತಿಹಾಸ’ ಎಂಬ ಉಪನ್ಯಾಸ ಸರಣಿಯನ್ನು ಉದ್ಘಾಟಿಸಲಿದ್ದಾರೆ. ಓಮನ್‌ನಲ್ಲಿರುವ ಭಾರತೀಯ ಸಮುದಾಯದ ಇತಿಹಾಸ ಮತ್ತು ಭಾರತ ಮತ್ತು ಓಮನ್ ನಡುವಿನ ಸಂಬಂಧಗಳಿಗೆ ಅದರ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಉಪನ್ಯಾಸ ಸರಣಿಯನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸಿದೆ. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    ಭೇಟಿಯ ಸಮಯದಲ್ಲಿ, ಅವರು ಒಮಾನಿ ನಾಯಕತ್ವ ಮತ್ತು ಗಣ್ಯರೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲಿದ್ದಾರೆ. ಅಲ್ಲದೇ ಓಮನ್‌ನ ನ್ಯಾಷನಲ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಸಂಗ್ರಹದಿಂದ ವಿಶೇಷವಾಗಿ ಸಂಗ್ರಹಿಸಲಾದ 20 ಕಲಾಕೃತಿಗಳ ಸಂಗ್ರಹವಾಗಿರುವ ‘ಇಂಡಿಯಾ ಆನ್ ಕ್ಯಾನ್ವಾಸ್: ಮಾಸ್ಟರ್‌ಪೀಸ್ ಆಫ್ ಮಾಡರ್ನ್ ಇಂಡಿಯನ್ ಪೇಂಟಿಂಗ್’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಮುರಳೀಧರನ್ ಅವರು ವಿವಿಧ ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಮತ್ತು ವೃತ್ತಿಪರರು, ನೀಲಿ ಕಾಲರ್ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಓಮನ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

    ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

    ನವದೆಹಲಿ: ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಒಮಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಾಸರ್ ಅಲ್ ಝಾಬಿ ಸೇರಿದಂತೆ ಹಲವಾರು ಉನ್ನತ ಮಟ್ಟದ ರಕ್ಷಣಾ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ಭೇಟಿ ಬಳಿಕ ಭಾರತ ಮತ್ತು ಒಮಾನ್ ರಕ್ಷಣಾ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಜಂಟಿ ಮಿಲಿಟರಿ ಸಹಕಾರ ಸಮಿತಿ(ಜೆಎಂಎಂಸಿ) ಭಾರತ ಮತ್ತು ಒಮಾನ್ ನಡುವಿನ ರಕ್ಷಣಾ ವೇದಿಕೆಯಾಗಿದೆ.

    ಕೊನೆಯ (ಜೆಎಂಸಿಸಿ) 2018 ರಲ್ಲಿ ಒಮಾನ್‍ನಲ್ಲಿ ನಡೆದಿತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ 3 ವರ್ಷಗಳ ಅಂತರದ ನಂತರ ನಡೆಯುತ್ತಿರುವ ಭೇಟಿ ಇದಾಗಿದೆ. ಭಾರತ ಪ್ರವಾಸದ ವೇಳೆ ಝಾಬಿ ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ವೇಳೆ ರಕ್ಷಣಾ ಉತ್ಪನ್ನಗಳ ಖರೀದಿ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಫೆಬ್ರವರಿಯಲ್ಲಿ ಒಮಾನ್‍ನ ವಾಯುಪಡೆಯ ಮುಖ್ಯಸ್ಥರು ಮತ್ತು ರಾಯಲ್ ನೌಕಾಪಡೆ ಮುಖ್ಯಸ್ಥರು ಸಹ ಭಾರತಕ್ಕೆ ಭೇಟಿಯಾಗಲಿದ್ದಾರೆ

    ಒಮಾನ್‍ನ ನೌಕಾ ಮತ್ತು ವಾಯುಪಡೆ ಮುಖ್ಯಸ್ಥರ ಭೇಟಿಯು 5 ವರ್ಷಗಳ ನಂತರ ನಡೆಯುತ್ತಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಒಮಾನ್ ವಾಯುಪಡೆಯ ನಡುವೆ ಜೋಧ್‍ಪುರದಲ್ಲಿ ಜಂಟಿಯಾಗಿ ವೈಮಾನಿಕ ಸಮರ ಅಭ್ಯಾಸ ನಡೆಯಲಿದೆ. ಒಮಾನ್‍ನಿಂದ 150 ಕ್ಕೂ ಹೆಚ್ಚು ಸಿಬ್ಬಂದಿ ಈ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.  ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಒಮಾನ್ ದೇಶವು ಭಾರತದ ಅತ್ಯಂತ ನಿಕಟ ರಕ್ಷಣಾ ಪಾಲುದಾರರ ದೇಶಗಳಲ್ಲಿ ಒಂದಾಗಿದೆ. ಗಲ್ಫ್ ವಲಯದಲ್ಲಿರುವ ದೇಶಗಳ ಪೈಕಿ ಭಾರತದ ಮೂರು ಸೇನೆಯ ಜೊತೆ ಜಂಟಿಯಾಗಿ ಸಮರಭ್ಯಾಸ ನಡೆಸುತ್ತಿರುವ ಏಕೈಕ ದೇಶ ಒಮಾನ್ ಆಗಿದೆ.

  • ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ಹೈದರಾಬಾದ್: 62 ವರ್ಷದ ಪತಿಯೊಬ್ಬ 29 ವರ್ಷದ ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿರುವ ಘಟನೆ ತೆಲಂಗಾಣದ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಹೈದರಾಬಾದ್ ನಿವಾಸಿ ಹುಮ ಸೈರಾ (29) ತನ್ನ 62 ವರ್ಷದ ಪತಿಯಿಂದ ವಾಟ್ಸಪ್ ಮೂಲಕ ತಲಾಕ್ ಪಡೆದ ಪತ್ನಿಯಾಗಿದ್ದಾರೆ. ಸೈರಾ ಎಂಬವರು 2017 ರ ಮೇ ತಿಂಗಳಲ್ಲಿ ಓಮನ್ ನಿವಾಸಿಯಾದ 62 ವರ್ಷದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ವಿವಾಹದ ಬಳಿಕ ಆತನೊಂದಿಗೆ ಓಮನ್‍ಗೆ ತೆರಳಿ ಒಂದು ವರ್ಷಗಳ ಕಾಲ ಜೀವನ ಸಾಗಿಸಿದ್ದರು.

    ಈ ವೇಳೆ ಸೈರಾ ಓಮನ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದಿಂದಾಗಿ ಮಗು ತನ್ನ 8ನೇ ತಿಂಗಳಿನಲ್ಲಿ ಮೃತಪಟ್ಟಿತ್ತು. ಇದಾದ ಬಳಿಕ ಪತಿ ಸೈರಾರನ್ನು ಚಿಕಿತ್ಸೆಯ ನೆಪವೊಡ್ಡಿ ಜುಲೈ 30 ರಂದು ಹೈದರಾಬಾದ್‍ನ ಆಕೆಯ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾನೆ.

    ಪತ್ನಿ ಭಾರತಕ್ಕೆ ಮರಳಿದ ಮೇಲೆ ಆಕೆಯೊಂದಿಗೆ ಫೋನ್ ಸಂಭಾಷಣೆಯನ್ನು ನಿಲ್ಲಿಸಿದ್ದ. ಹೀಗಾಗಿ ಸೈರಾ ಎಷ್ಟೇ ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ದರೂ ಸಫಲವಾಗಿರಲಿಲ್ಲ. ಈ ವೇಳೆ ಆಗಸ್ಟ್ 12 ರಂದು ಪತಿ ತನ್ನ ವಾಟ್ಸಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ. ಪತಿಯ ತಲಾಖ್ ನಿಂದ ಆಘಾತಗೊಂಡ ಸೈರಾ ನ್ಯಾಯ ಕೊಡಿಸುವಂತೆ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv