Tag: Om Rawat

  • ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ತಿಮ್ಮಪ್ಪನ ಸನ್ನಿಧಾನದಲ್ಲೇ ನಟಿಗೆ ಮುತ್ತಿಟ್ಟ ಡೈರೆಕ್ಟರ್ : ಭಕ್ತರ ಆಕ್ರೋಶ

    ನಿನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ (Adipurush) ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದಾಗುತ್ತಿದೆ. ಗ್ರಾಫಿಕ್ಸ್ ಕಾರಣದಿಂದಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ, ಪಾತ್ರಗಳ ಆಯ್ಕೆ ಮತ್ತು ಅದರ ಪೋಷಣೆಯ ಕಾರಣದಿಂದಾಗಿ ಹಿಂದೂಗಳ ಕಣ್ಣು ಕೆಂಪಾಗಿಸಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಟೀಸರ್ ರಿಲೀಸ್ ಮಾಡುವ ಮೂಲಕ ಹಿಂದೂಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ಲ್ಯಾನ್ ಉಲ್ಟಾ ಆಗಿದೆ. ಹಾಗಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿದೆ.

    ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನುವುದು ಚಿತ್ರತಂಡದ ಮೇಲಿನ ಆರೋಪ. ಇದೀಗ ಅದು ಕೇವಲ ಆರೋಪವಾಗಿ ಉಳಿದುಕೊಂಡಿಲ್ಲ. ಕಾನೂನು ಸಮರಕ್ಕೂ ರೆಡಿಯಾಗಿದೆ. ನಟ ಪ್ರಭಾಸ್ , ಸೈಫ್ ಅಲಿಖಾನ್ (Saif Ali Khan) ಹಾಗೂ ನಿರ್ದೇಶಕ ಓಂ ರಾವತ್ (Om Rawat) ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಆದಿಪುರುಷ್ ಸಿನಿಮಾದಲ್ಲಿ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ನ್ಯಾಯಾಲಯವು (Court) ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಹಿಂದೆಯೂ ದೆಹಲಿಯಲ್ಲೂ ಮತ್ತೊಂದು ದೂರು ಚಿತ್ರತಂಡದ ವಿರುದ್ಧ ದಾಖಲಾಗಿತ್ತು.

    ಐನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, 3 ಡಿಯಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಗ್ರಾಫಿಕ್ಸ್ ಕಳಪೆಯಾಗಿಲ್ಲ, ಅದು 3 ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದರಿಂದ ಮಸುಕಾಗಿ ಕಾಣಿಸುತ್ತಿದೆ ಎಂದು ಮೊನ್ನೆಯಷ್ಟೇ ನಿರ್ದೇಶಕರು ಸ್ಪಷ್ಟನೆ ಕೊಟ್ಟಿದ್ದರು. ಆ ಪಾತ್ರಗಳ ಪೋಷಣೆಯನ್ನು ಯಾಕೆ ಆ ರೀತಿಯಲ್ಲಿ ಚಿತ್ರಿಸಿದ್ದಾರೆ ಎನ್ನುವುದನ್ನು ಕೋರ್ಟನಲ್ಲಿ ನಿರ್ದೇಶಕರು ಹೇಳಬೇಕಿದೆ. ಅಲ್ಲದೇ, ಎಲ್ಲವನ್ನೂ ಸರಿ ಮಾಡಿಕೊಂಡೇ ಚಿತ್ರವನ್ನು ರಿಲೀಸ್ ಮಾಡಬೇಕಿದೆ.

    Live Tv
    [brid partner=56869869 player=32851 video=960834 autoplay=true]