Tag: Om Beach

  • ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವು

    ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವು

    – ನಿರಂತರ ಸಾವಿಗೆ ಸಾಕ್ಷಿಯಾದ ಗೋಕರ್ಣ ಕಡಲತೀರ

    ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕ ಅಲೆಗಳ ಅಬ್ಬರಕ್ಕೆ ಮುಳಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.

    ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ವಿಕ್ರಮ್ ಸಾವು ಕಂಡದ್ದಾನೆ. ಆರು ಜನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜುವಾಗ ಅಲೆಗೆ ಸಿಕ್ಕು ವಿಕ್ರಮ್ ಸಾವು ಕಂಡಿದ್ದಾನೆ. ಇದನ್ನೂ ಓದಿ: ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಈತನ ಶವವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

    ಗೋಕರ್ಣ ಕಡಲತೀರ ಅಪಾಯ!
    ಇದೇ ತಿಂಗಳಲ್ಲಿ ಪ್ರವಾಸಕ್ಕೆಂದು ಬಂದ 10 ಜನ ಕಡಲಿನ ಅಲೆಗಳಿಗೆ ಕೊಚ್ಚಿ ಹೋಗಿ ಸಾವು ಕಂಡಿದ್ದಾರೆ. ಗೋಕರ್ಣದ ಕಡಲ ತೀರದಲ್ಲಿ ಲೈಫ್ ಗಾರ್ಡ್, ಪ್ರವಾಸಿ ಮಿತ್ರ ಹಾಗೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಸಮುದ್ರದಲ್ಲಿ ಈಜಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತಿದ್ದಾರೆ.

    ಲೈಫ್ ಗಾರ್ಡ್ ಗಳು ತಮ್ಮ ಜೀವ ಒತ್ತೆ ಇಟ್ಟು ಸಾಕಷ್ಟು ಪ್ರವಾಸಿಗರನ್ನು ಬದುಕಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಸಹ ಈಗಾಗಲೇ ಕಡಲ ತೀರ ಭಾಗದಲ್ಲಿ ಗೋವಾ ಮಾದರಿಯಲ್ಲಿ ಪೆಟ್ರೋಲಿಂಗ್ ಮಾಡಲು ಬೋಟ್ ಗಳನ್ನು ನೀಡುವಂತೆ ಕೇಳಿಕೊಂಡು ವರ್ಷಗಳೇ ಗತಿಸಿವೆ. ಗೋಕರ್ಣದ ಓಂ ಬೀಚ್ ನಲ್ಲಿ ಸಮುದ್ರ ಶಾಂತವಾಗಿರುವಂತೆ ಕಂಡರೂ ಬಲಭಾಗದ ಸಮುದ್ರ ಭಾಗದಲ್ಲಿ ಸುಳಿಗಳಿವೆ.

    ಸೆಲ್ಫಿ ಕ್ರೇಜ್ ನಲ್ಲಿ ಜನ ಇಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಜವರಾಯನಿಗೆ ಆಹಾರವಾಗುತ್ತಿದ್ದಾರೆ. ಗೋಕರ್ಣದ ಮುಖ್ಯ ಕೆಲತೀರ, ಕುಡ್ಲೆ ಕಡಲತೀರಗಳಲ್ಲಿ ರಭಸದ ಅಲೆಗೆ ಸಿಲುಕಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತಿದ್ದಾರೆ. ಹೆಚ್ಚು ಜನರು ಆಗಮಿಸುವ ಹಿನ್ನೆಲೆ ಪ್ರವಾಸಿಗರ ಪ್ರಾಣ ರಕ್ಷಣೆಗೆ ವಿಶೇಷ ಗಮನ ಹಾಗೂ ಲೈಫ್ ಗಾರ್ಡ್ ಗಳಿಗೆ ಹೆಚ್ಚಿನ ಸೌಲಭ್ಯವನ್ನು ಜಿಲ್ಲಾಡಳಿತ ನೀಡಬೇಕಿದೆ. ಇಲ್ಲವಾದರೆ ತಿಂಗಳಲ್ಲಿ ಅದೆಷ್ಟು ಜೀವಗಳು ಬಲಿಯಾಗಲಿದೆಯೋ ಊಹಿಸಲು ಸಾಧ್ಯವಾಗದು.

  • ಸೆಲ್ಫಿ ತೆಗೆಯಲು ಹೋಗಿ ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ

    ಸೆಲ್ಫಿ ತೆಗೆಯಲು ಹೋಗಿ ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ

    ಕಾರವಾರ: ಸೆಲ್ಫಿ ತೆಗೆದುಕೊಳ್ಳುವುದು ಇಂದಿನ ಯುವ ಜನತೆಯಲ್ಲಿ ಟ್ರೆಂಡ್ ಆಗಿ ಬದಲಾಗಿದೆ. ಎತ್ತರದ ಸ್ಥಳದಿಂದಲೋ ಅಥವಾ ತುದಿ ಅಂಚಿನಿಂದಲೋ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಸೆಲ್ಫಿ ಅವಘಡಗಳ ಬಗ್ಗೆ ಸಾಕಷ್ಟು ವರದಿಗಳು ಬಿತ್ತರವಾದ್ರೂ ಯುವ ಜನತೆ ಸೆಲ್ಫಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಫೋಟೋ ಮೊರೆ ಹೋಗ್ತಾರೆ. ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಪ್ರವಾಸಿಗನನ್ನು ರಕ್ಷಿಸಿದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ‘ಓಂ ಬೀಚ್’ನಲ್ಲಿ ನಡೆದಿದೆ.

    ರಾಣಿಬೆನ್ನೂರು ಮೂಲದ ಬಸವರಾಜ್ ಎಂ. ಎಂಬವವರೇ ರಕ್ಷಣೆಗೊಳಗಾದ ವ್ಯಕ್ತಿ. 5 ಜನರ ತಂಡ ಪ್ರವಾಸಕ್ಕೆಂದು ಗೋಕರ್ಣದ ಓಂ ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಸಮುದ್ರದ ಬಳಿ ಇದ್ದ ಬಂಡೆಯ ಮೇಲೆ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಬಸವರಾಜ್ ಸಮುದ್ರಪಾಲಾಗಿದ್ದರು.

    ಬಸವರಾಜ್ ಸಮುದ್ರಕ್ಕೆ ಬೀಳುತ್ತಿದ್ದನ್ನು ಸ್ಥಳದಲ್ಲಿದ್ದ ದ ಲೈಫ್ ಗಾರ್ಡ್ ಗಳು ಗಮನಿಸಿದ್ದಾರೆ. ಕೂಡಲೇ ಸಮುದ್ರಕ್ಕೆ ಇಳಿದ ಲೈಫ್ ಗಾರ್ಡ್ ಗಳಾದ ಪಾಂಡುರಂಗ ಹಾಗೂ ಪ್ರವೀಣ್ ಇಬ್ಬರೂ ಬಸವರಾಜ್ ಅವರನ್ನು ರಕ್ಷಣೆ ಮಾಡಿದ್ದಾರೆ.