Tag: Olympic

  • 2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

    2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

    ವಾಷಿಂಗ್ಟನ್‌: ಒಲಿಂಪಿಕ್ಸ್‌ ಕ್ರೀಡೆಯಲ್ಲಿ (2016 Olympic) ಮೂರು ಪದಕಗಳು ಹಾಗೂ ಎರಡು ಬಾರಿ ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿಗಳನ್ನು ಗೆದ್ದಿದ್ದ ಟೋರಿ ಬೋವಿ (32) (Tori Bowie) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

    ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ.

    ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಮ್ಮ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್‌ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಟೋರಿ 2016ರ ಒಲಿಂಪಿಕ್ಸ್‌ನಲ್ಲಿ ಮೂರು ಪದಗಳನ್ನು ಬಾಚಿಕೊಂಡಿದ್ದರು. 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ (Gold Medallist), 100 ಮೀಟರ್‌ ರಿಲೇನಲ್ಲಿ (Relay) ಬೆಳ್ಳಿ ಹಾಗೂ 200 ಮೀಟರ್‌ ಓಟದಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದರು. 2017ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್‌ ಓಟ ಮತ್ತು 4*100 ಮೀಟರ್‌ ರಿಲೇನಲ್ಲಿ ಚಿನ್ನದ ಪದಕ, 2019ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಲಾಂಗ್‌ ಜಂಪ್‌ನಲ್ಲಿ 4ನೇ ಸ್ಥಾನ ಪಡೆದು ಮಿಂಚಿದ್ದರು. ಕೊನೆಯದ್ದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: IPL 2023: ಜಯದ ನಿರೀಕ್ಷೆಯಲ್ಲಿದ್ದ ಚೆನ್ನೈಗೆ ಭಾರೀ ನಿರಾಸೆ – ಮಳೆಗೆ ಪಂದ್ಯ ರದ್ದು

  • ಕುಸ್ತಿ ಪಟುಗಳಿಗೆ ನ್ಯಾಯ ಸಿಗುತ್ತಾ – ಬ್ಯಾಟ್‍ನಂತೆ ಚಾಟಿ ಬೀಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

    ಕುಸ್ತಿ ಪಟುಗಳಿಗೆ ನ್ಯಾಯ ಸಿಗುತ್ತಾ – ಬ್ಯಾಟ್‍ನಂತೆ ಚಾಟಿ ಬೀಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

    ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಬೆಂಬಲ ನೀಡಿದ್ದಾರೆ. ಅವರು ಇನ್ಸ್ಟಾಗ್ರಾಮ್‍ನಲ್ಲಿ ಪ್ರತಿಭಟನಾ ನಿರತರ ಫೋಟೋ ಹಂಚಿಕೊಂಡು ನ್ಯಾಯ ಸಿಗುತ್ತದೆಯೇ? ಎಂದು ಬರೆದುಕೊಂಡಿದ್ದಾರೆ.

     

    ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ವಿನೇಶ್ ಫೋಗಟ್ (Vinesh Phogat), ಬಜರಂಗ್ ಪುನಿಯಾ (Bajrang Punia), ಸಾಕ್ಷಿ ಮಲಿಕ್ (Sakshi Malik) ಸೇರಿ ಹಲವಾರು ಕುಸ್ತಿ ಪಟುಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ದೇವ್ ಅವರಿಗೆ ಬೆಂಬಲ ನೀಡಿದ್ದು ಹೊಸ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

    ಇದಕ್ಕೂ ಮುನ್ನ ಒಲಿಂಪಿಕ್ಸ್ (Olympic) ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಪ್ರತಿಭಟನಾ ನಿರತ ಕುಸ್ತಿ ಪಟುಗಳಿಗೆ ಬೆಂಬಲ ಸೂಚಿಸಿದ್ದರು. ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಕುಸ್ತಿಪಟುಗಳು ಬೀದಿಗಿಳಿದಿರುವುದು ದುಃಖದ ಸಂಗತಿ ಎಂದು ಹೇಳಿಕೊಂಡಿದ್ದರು.

    ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (Indian Olympic Association) ಅಧ್ಯಕ್ಷೆ ಪಿ.ಟಿ ಉಷಾ (PT Usha) ಕುಸ್ತಿ ಪಟುಗಳ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ದೇಶದ ಘನತೆಗೆ ಧಕ್ಕೆ ತರಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸೋಸಿಯೇಷನ್ ಬಳಿ ಬರುವುದು ಬಿಟ್ಟು ರಸ್ತೆಗಿಳಿದಿರುವುದ ಸರಿಯಲ್ಲ ಎಂದು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ

  • ಭಾರತೀಯ ಒಲಿಂಪಿಕ್ ಸಂಸ್ಥೆಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆ

    ಭಾರತೀಯ ಒಲಿಂಪಿಕ್ ಸಂಸ್ಥೆಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆ

    ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (IOA) ಇದೇ ಮೊದಲ ಬಾರಿ ಮಹಿಳಾ ಅಧ್ಯಕ್ಷರಾಗಿ ಕ್ರೀಡಾ ದಿಗ್ಗಜೆ ಪಿಟಿ ಉಷಾ (PT Usha) ಆಯ್ಕೆಯಾಗಿದ್ದಾರೆ. ಈ ಮೂಲಕ ಉಷಾ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿಹಾಡಿದ್ದಾರೆ.

    58 ವಯಸ್ಸಿನ ಪಿಟಿ ಉಷಾ ಐಒಎಗೆ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 95 ವರ್ಷಗಳ ಇತಿಹಾಸದಲ್ಲೇ ಈ ಸ್ಥಾನಕ್ಕೇರಿದ ಮೊದಲ ಒಲಂಪಿಯನ್ ಹಾಗೂ ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿದ್ದಾರೆ.

    ಪಿಟಿ ಉಷಾಯ ಆಯ್ಕೆಯಿಂದ ಐಒಎಯಲ್ಲಿ ದೀರ್ಘಕಾಲದಿಂದಿದ್ದ ಬಿಕ್ಕಟ್ಟು ಅಂತ್ಯವಾಗಿದೆ. ಇದಕ್ಕೂ ಮೊದಲು ಈ ತಿಂಗಳ ಒಳಗಾಗಿ ಅಧ್ಯಕ್ಷರ ನೇಮಕವಾಗದೇ ಹೋದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನೇ ಅಮಾನತುಗೊಳಿಸುವ ಸಾಧ್ಯತೆಯಿತ್ತು.

    ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (NRAI) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ದೇವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (IWF) ಅಧ್ಯಕ್ಷ ಸಹದೇವ್ ಯಾದವ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಅಧ್ಯಕ್ಷ ಮತ್ತು ಮಾಜಿ ಗೋಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ (BAI) ಅಲಕಾನಂದ ಅಶೋಕ್ ಅವರು ಶಾಲಿನಿ ಠಾಕೂರ್ ಚಾವ್ಹಾ ಮತ್ತು ಸುಮನ್ ಕೌಶಿಕ್ ಅವರನ್ನು ಹಿಂದಿಕ್ಕಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

    ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಬಿಲ್ಲುಗಾರ್ತಿ ಡೋಲಾ ಬ್ಯಾನರ್ಜಿ ಅವರು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರತಿನಿಧಿಗಳಾಗಿದ್ದಾರೆ. ಲೆಜೆಂಡರಿ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ಅಥ್ಲೀಟ್ ಆಯೋಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರುವ ಕಾರಣದಿಂದ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದಾರೆ.

    ಭೂಪೇಂದರ್ ಸಿಂಗ್ ಬಾಜ್ವಾ, ಅಮಿತಾಭ್ ಶರ್ಮಾ, ಹರ್ಪಾಲ್ ಸಿಂಗ್ ಮತ್ತು ರೋಹಿತ್ ರಾಜ್‌ಪಾಲ್ ಕೂಡ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್ ಕಾಂಗ್ರೆಸ್ ಸೇರದಂತೆ ಮನವೊಲಿಸಲು ನಾನು ಮುಂದಾಳತ್ವ ವಹಿಸಲ್ಲ: ಹೆಬ್ಬಾರ್

    Live Tv
    [brid partner=56869869 player=32851 video=960834 autoplay=true]

  • NationalGames: ಚಿನ್ನ ಬೇಟೆಯಾಡಿದ ಮೀರಾಬಾಯಿ ಚಾನು

    NationalGames: ಚಿನ್ನ ಬೇಟೆಯಾಡಿದ ಮೀರಾಬಾಯಿ ಚಾನು

    ಗಾಂಧಿನಗರ: 2020ರ ಟೋಕಿಯೋ ಒಲಿಂಪಿಕ್ಸ್ (Olympics) ಪದಕ ವಿಜೇತೆ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Olympics, CommonWealth Games) ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಸಾಯಿಕೋಮ್ ಮೀರಾಬಾಯಿ ಚಾನು (Mirabai Chanu) ಇದೀಗ ಗುಜರಾತ್‌ನಲ್ಲಿ ನಡೆಯುತ್ತಿರುವ ನ್ಯಾಷನಲ್ ಗೇಮ್ಸ್-2022 (National Games 2022) ಕ್ರೀಡಾಕೂಡದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

    49 ಕೆಜಿ ವೇಟ್‌ಲಿಫ್ಟಿಂಗ್ (WeightLifting) ವಿಭಾಗದಲ್ಲಿ ಒಟ್ಟು 191 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ (GoldMedal)ಕ್ಕೆ ಕೊರಳೊಡ್ಡಿದ್ದಾರೆ. ಸ್ನ್ಯಾಚ್‌ನಲ್ಲಿ 84 ಕೆಜಿ ಹಾಗೂ ಕ್ಲೀನ್ ಅಂಡ್ ಜೆರ್ಕ್‌ನಲ್ಲಿ 107 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಇದನ್ನೂ ಓದಿ: CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು

    ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಹೊಸ ದಾಖಲೆ ಬರೆದಿದ್ದರು. ಅಲ್ಲದೇ 2014ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ, 2018ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2017ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ನಂತರ ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನೂ ಬೇಟೆಯಾಡಿದ್ದಾರೆ. 2022ರ ಕಾಮನ್‌ವೆಲ್ತ್‌ ಗೇಮ್ಸ್‌  ಬಳಿಕ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮೀರಾಬಾಯಿ ಚಾನು, ಶೀಘ್ರದಲ್ಲೇ ಚೇತರಿಕೆ ಕಂಡು ಮತ್ತೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಮುಂಬೈ: ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ.

    ಪಿ.ವಿ ಸಿಂಧು ಅವರು ಸದ್ಯ ಕಾಲಿನ ಪಾದದ ಫ್ರ್ಯಾಕ್ಚರ್‌ ಸಮಸ್ಯೆಯಿಂದಾಗಿ ಬಳಲುತ್ತಿದ್ದು, ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    ಕಾಮನ್‌ಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ.ಸಿಂದು ಕಾಲು ನೋವಿನ ಹೊರತಾಗಿಯೂ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ಸ್ ಪಂದ್ಯವನ್ನು ಆಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಸಿಂಧು, `ದುರಾದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಹೊರಗುಳಿಯಬೇಕಿದೆ. ಸದ್ಯ ನಾನು ಗಾಯದ ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದೇನೆ. ಕಾಮನ್‌ವೆಲ್ತ್ ಕ್ವಾಲಿಫೈಯರ್‌ನಲ್ಲಿಯೇ ಗಾಯದ ಭಯವಿತ್ತು. ಆದರೆ ನನ್ನ ತರಬೇತುದಾರರು ಹಾಗೂ ದೈಹಿಕ ತರಬೇತುದಾರರ ಸಹಾಯದಿಂದ ಪಂದ್ಯವನ್ನಾಡಿದೆ ಎಂದು ಸಿಂಧು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಫೋಟಕ ಆಟವಾಡಿದ ಟೆಸ್ಟ್ ಸ್ಪೆಷಲಿಷ್ಟ್‌ – ಒಂದೇ ಓವರ್‌ನಲ್ಲಿ 22 ರನ್ ಚಚ್ಚಿದ ಪೂಜಾರ

    ಬರ್ಮಿಂಗ್‌ಹ್ಯಾಮ್‌ನಿಂದ ಹೈದರಾಬಾದ್‌ಗೆ ಹಿಂದಿರುಗಿದ ನಂತರ ತಕ್ಷಣ ನಾನು ಎಂಆರ್‌ಐ ಸ್ಕ್ಯಾನ್‌ಗೆ ಧಾವಿಸಿದೆ. ವೈದ್ಯರು ನನ್ನ ಎಡಪಾದದಲ್ಲಿ ಗಂಭೀರ ಸಮಸ್ಯೆಯಾಗಿರುವುದನ್ನು ಗುರುತಿಸಿ ಕೆಲ ವಾರಗಳ ವರೆಗೆ ವಿಶ್ರಾಂತಿ ಪಡೆಯುವಂತೆ ಶಿಫಾರಸು ಮಾಡಿದ್ದಾರೆ. ಕೆಲವೇ ವಾರಗಳಲ್ಲಿ ನಾನು ತರಬೇತಿಗೆ ಹಿಂದಿರುಗಬೇಕು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    2020ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ, 2019ರ ಟೂರ್ನಿಯಲ್ಲಿ ಚಿನ್ನದ ಪದಕ ನಂತರ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕೊನೆಯದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    ಮುಂಬೈ: 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಅವರಿಗೆ ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟ ಪ್ರವೇಶಿಸಲು ಮಾನ್ಯತೆ ನೀಡಲಾಗಿದೆ.

    `ನಾನು ಕಾಮನ್‌ವೆಲ್ತ್ ಗೇಮ್ಸ್-2022ಗೆ ಮಾನ್ಯತೆ ಪಡೆದುಕೊಂಡಿದ್ದೇನೆ’ ಎಂದು ಲವ್ಲಿನಾ ಬಾರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ನನ್ನ ಕೋಚ್ (ತರಬೇತುದಾರ)ಗೆ ಮಾನ್ಯತೆ ಇಲ್ಲದಿರುವುದರಿಂದ ನನಗೆ ಮಾನಸಿಕ ಕಿರುಕುಳ ಎದುರಾಗಿದೆ. ನನ್ನ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೂ ಅಡ್ಡಿಯಾಗುತ್ತಿದೆ ಎಂದು ಲವ್ಲಿನಾ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದರು.

    ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಲವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿತ್ತು. ಇದನ್ನೂ ಓದಿ: ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    https://twitter.com/LovlinaBorgohai/status/1551520397832720385?ref_src=twsrc%5Etfw%7Ctwcamp%5Etweetembed%7Ctwterm%5E1551520397832720385%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fother-sports%2Flovlina-borgohains-coach-sandhya-gurung-gets-accreditation-for-cwg-2022-after-boxer-makes-harassment-claims-2489788.html

    ಯಾರಿದು ಲವ್ಲಿನಾ?
    ಭಾರತೀಯ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಕೋಚ್‌ನಿಂದಲೇ ನಿರಂತರ ಕಿರುಕುಳ – ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಗಂಭೀರ ಆರೋಪ

    ನನ್ನ ಕೋಚ್‌ನಿಂದಲೇ ನಿರಂತರ ಕಿರುಕುಳ – ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಗಂಭೀರ ಆರೋಪ

    ನವದೆಹಲಿ: ನನ್ನ ಕೋಚ್ (ತರಬೇತುದಾರ) ನಿಂದಲೇ ನನಗೆ ನಿರಂತರ ಕಿರುಕುಳ ಆಗುತ್ತಿದ್ದು, ಇದರಿಂದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಡ್ಡಿಯಾಗುತ್ತಿದೆ ಎಂದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಗಂಭೀರ ಆರೋಪ ಮಾಡಿದ್ದಾರೆ.

    https://twitter.com/LovlinaBorgohai/status/1551520397832720385?ref_src=twsrc%5Etfw%7Ctwcamp%5Etweetembed%7Ctwterm%5E1551520397832720385%7Ctwgr%5E%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbreaking-news-i-am-being-harassed-a-lot-olympic-medallist-lovlina-borgohain-accuses-coach%2F

    ಲೊವ್ಲಿನಾ ತಮ್ಮ ಕೋಚ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು, ನಿಜವಾಗಿ ನನಗೆ ಸಾಕಷ್ಟು ಕಿರುಕುಳ ಆಗುತ್ತಿದೆ ಎಂದು ಬಹಳ ದುಃಖದಿಂದ ಹೇಳುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ಪದಕಗಳನ್ನ ಪಡೆಯಲೂ ನನಗೆ ಸಹಾಯ ಮಾಡಿದ ನನ್ನ ತರಬೇತುದಾರರು ಪ್ರತಿ ಬಾರಿಯೂ ನನ್ನ ತರಬೇತಿ ಪ್ರಕ್ರಿಯೆ ವೇಳೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ

    ನಾನಿಂದು ಬಹಳಷ್ಟು ದುಃಖದಿಂದ ನನ್ನ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಎಲ್ಲರಿಗೂ ಹೇಳಲು ಬಯಸುತ್ತೇನೆ. ನಮ್ಮ ತರಬೇತುದಾರರಲ್ಲಿ ಒಬ್ಬರಾದ ಸಂಧ್ಯಾ ಗುರುಂಗ್ಜಿ ದ್ರೋಣಾಚಾರ್ಯ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವರಿಗೆ ಕೈ ಮುಗಿದು ಮನವಿ ಮಾಡಬೇಕಾಯಿತು. ಈ ಅಗ್ನಿ ಪರೀಕ್ಷೆಯಿಂದಾಗಿ ನಾನು ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದೇನೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಇದಕ್ಕೆ ಕೂಡಲೇ ಸ್ಪಂದಿಸಿರುವ ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಲೊವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ಯಾರಿದು ಲೊವ್ಲಿನಾ?
    ಭಾರತೀಯ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸಾಕಷ್ಟು ಭಾರತದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭರ್ಜರಿ ಜಯ ಸಾಧಿಸಿದ್ದು, ಮೊದಲ ಸೂಪರ್-500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಚೀನಾದ ವಾಂಗ್ ಝಿ ಯಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಸೂಪರ್-500 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಆರಂಭದಲ್ಲೇ ವಾಂಗ್ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ 21-9 ಅಂತರದಿAದ ಗೆದ್ದುಕೊಂಡರು. 2ನೇ ಸೆಟ್‌ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. 2ನೇ ಸುತ್ತಿನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್‌ ಮೂಲಕ 6 ಪಾಯಿಂಟ್ ಗಳಿಸಿ ಸಿಂಧು ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದರು. ಪರಿಣಾಮ 2ನೇ ಸುತ್ತಿನಲ್ಲಿ ಸಿಂಧು 11-21 ಅಂತರದಲ್ಲಿ ಸೋತರು. ಇದನ್ನೂ ಓದಿ: ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಮೊದಲೆರಡು ಸುತ್ತಿನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಅಂತಿಮ ಸುತ್ತಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದರಂತೆ ಮೊದಲ 5 ಪಾಯಿಂಟ್‌ವರೆಗೂ ಜಿದ್ದಾ-ಜಿದ್ದಿನ ಹೋರಾಟ ಕಂಡು ಬಂದಿತು. ಈ ಹಂತದಲ್ಲಿ ಸಿಂಧು ಭರ್ಜರಿ ಸ್ಮ್ಯಾಶ್‌ಗಳ ಮೂಲಕ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಇದರಿಂದ ವಾಂಗ್ ಝಿ ಯಿ ಅವರ ಪಾಯಿಂಟ್ 6 ಇದ್ದಾಗಲೇ ಸಿಂಧು ಅವರ ಪಾಯಿಂಟ್ 11ಕ್ಕೆ ಏರಿತ್ತು.

    ಮಧ್ಯಂತರದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು. ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಅವರು ಮತ್ತೊಮ್ಮೆ ಅಬ್ಬರಿಸಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.

    ನಿನ್ನೆ 32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನಿನ ಸೈನಾ ಕವಾಕಮಿ ಅವರನ್ನು 21-15 21-7 ಅಂತರದಲ್ಲಿ ಸೋಲಿಸುವ ಮೂಲಕ ಸಿಂಧು ಮೇಲುಗೈ ಸಾಧಿಸಿದ್ದರು. ಈ ಮೂಲಕ ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ: Singapore Open 2022: ಫೈನಲ್‍ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು

    ಎರಡು ಬಾರಿ ಒಲಿಂಪಿಕ್ಸ್ ಪ್ರಶಸ್ತಿ ವಿಜೇತರಾಗಿರುವ ಪಿ.ವಿ.ಸಿಂಧು 2022ನೇ ಋತುವಿನಲ್ಲಿ ಸಿಂಗಾಪುರ್ ಓಪನ್ 2022 ಸೈಯದ್ ಮೋದಿ ಇಂಟರ್‌ನ್ಯಾಷನಲ್ ಹಾಗೂ ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ -300 ಪ್ರಶಸ್ತಿಗಳನ್ನು ಗೆದ್ದ ನಂತರ ಸೂಪರ್ 500 ಪ್ರಶಸ್ತಿ ಸಿಂಧು ಅವರ 3ನೇ ಪ್ರಶಸ್ತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಲಂಡನ್: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಓಟಗಾರ ಮೊ ಫರಾ ತಮ್ಮ 9ನೇ ವಯಸ್ಸಿನಲ್ಲಿ ಜಿಬೌಟಿಯಿಂದ ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತಾನು ಹಿಂದೆಂದೂ ಭೇಟಿಯಾಗದ ಮಹಿಳೆ ತನ್ನ ನಕಲಿ ಪ್ರಯಾಣದ ದಾಖಲೆಗಳನ್ನು ಸೃಷ್ಟಿಸಿ ಬ್ರಿಟನ್‌ಗೆ ಕರೆದೊಯ್ದಿದ್ದಳು. ತನ್ನ ಹೊಟ್ಟೆಪಾಡಿಗಾಗಿ ಅಲ್ಲಿ ಮನೆಕೆಲಸ ಹಾಗೂ ಮಕ್ಕಳನ್ನು ಆರೈಕೆ ಮಾಡಲು ಒತ್ತಾಯಿಸಲಾಗಿತ್ತು. ಮಾತ್ರವಲ್ಲದೇ ತನ್ನ ನಿಜ ಹೆಸರು ಹುಸೇನ್ ಅಬ್ದಿ ಕಹಿನ್‌ನಿಂದ ಮೊಹಮ್ಮದ್ ಫರಾ ಎಂದು ಬದಲಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

    ತಾನು ಬ್ರಿಟನ್‌ಗೆ ಬಂದ ಬಳಿಕ ಮಹಿಳೆ ಪಶ್ಚಿಮ ಲಂಡನ್‌ನ ಹೌನ್ಸ್ಲೋನಲ್ಲಿರುವ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಳು. ತನ್ನ ಸಂಬಂಧಿಕರ ಸಂಪರ್ಕದ ದಾಖಲೆಗಳನ್ನು ಆಕೆ ಹರಿದು ಹಾಕಿದ್ದಳು. ತನಗೆ 12 ವರ್ಷಗಳ ವರೆಗೂ ಆಕೆ ಶಾಲೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹಿಂದಿನ ಘಟನೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಈ ಸಂದರ್ಭ ನನಗೆ ಅಲ್ಲಿಂದ ಹೊರ ಬರಬೇಕಿತ್ತು. ಆಗಾಗ ನಾನು ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡು ಅಳುತ್ತಿದ್ದೆ. ಬಳಿಕ ನಾನು ಈ ಪರಿಸ್ಥಿತಿಯಿಂದ ಓಡಿ ಹೋಗುವ ನಿರ್ಧಾರ ಮಾಡಿದೆ. ನನಗೆ ಆಗ ದೈಹಿಕ ಶಿಕ್ಷಕ ಅಲನ್ ವಾಟ್ಕಿನ್ಸನ್ ಅವರ ಪರಿಚಯವಾಗಿ, ಅವರು ನನಗಾಗಿ ಸಾಮಾಜಿಕ ಸೇವಾ ಕೇಂದ್ರವನ್ನು ಸಮಪರ್ಕಿಸಿದರು. ನನ್ನನ್ನು ಸಾಕಲು ಸೋಮಾಲಿ ಸಮುದಾಯದ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು ಎಂದರು.

    ಅವರ ಸಹಾಯದಿಂದ ನನಗೆ ನನ್ನ ಭುಜದಿಂದ ಒಂದು ದೊಡ್ಡ ಹೊರೆ ಇಳಿದಂತಾಗಿತ್ತು. ನನ್ನಂತಹ ಅದೆಷ್ಟೋ ಮಕ್ಕಳು ಇದೇ ರೀತಿ ಕಳ್ಳಸಾಗಣೆಗೊಳಪಟ್ಟಿದ್ದಾರೆ. ಆದರೆ ನಾನೊಬ್ಬ ಅದೃಷ್ಟಶಾಲಿಯಾಗಿದ್ದೆ. ಇದರಿಂದ ನಾನು ಉಳಿದುಕೊಂಡೆ, ಇತರರಿಗಿಂತ ಭಿನ್ನವಾದೆ ಎಂದು ಹೇಳಿದರು. ಇದನ್ನೂ ಓದಿ: ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    2012 ಹಾಗೂ 2016ರ ಒಲಿಂಪಿಕ್‌ನಲ್ಲಿ 5,000 ಹಾಗೂ 10,000 ಮೀ.ನ ಓಟದಲ್ಲಿ ಗೆದ್ದಿರುವ ಫರಾ ಈ ಬಾರಿ ಅಕ್ಟೋಬರ್‌ನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಲಂಡನ್‌ನ 10,000 ಮೀ. ಓಟದಲ್ಲಿ ರನ್ನರ್ ಅಪ್ ಆದ ಫರಾ ಈ ತಿಂಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಮೇ ತಿಂಗಳಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಶೀಘ್ರವೇ ವಿದಾಯ ಹೇಳುವ ಸುಳಿವನ್ನು ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಮಾಸ್ಕೋ: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಅದು ಯಾರಿಗೆ ಯಾವಾಗ ಬೇಕಾದರೂ ಆಗಬಹುದು. ಹಾಗೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 69 ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಉಕ್ರೇನ್ ನಡುವಿನ ಯುದ್ಧದ ಬ್ಯೂಸಿಯಲ್ಲೂ ಪ್ರೇಮಕ್ಕೂ ಸೈ ಎಂದಿದ್ದಾರೆ.

    putin daughters

    ತನ್ನ ಪ್ರೇಯಸಿ ಜಿಮ್‌ಪಟು ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾದ ಪುಟಿನ್ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ ಪಟು 3ನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

    ಈ ದಂಪತಿ ಈಗಾಗಲೇ 2 ಮಕ್ಕಳನ್ನು ಹೊಂದಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳಿಗೆ ಪುಟಿನ್‌ಗೆ 70 ವರ್ಷ ಪೂರ್ಣಗೊಳ್ಳಲಿದೆ. ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಪುಟಿನ್‌ಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ನಡುವೆ ಅವರು 3ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

    putin

    ಯಾರಿದು ಅಲಿನಾ ಕಬೀವಾ? ಅಲಿನಾ ಯಶಸ್ವಿ ಜಿಮ್ ಪಟು. ಈಕೆ 2 ಬಾರಿ ಒಲಿಂಪಿಕ್ಸ್ ಪದಕ, 14 ವಿಶ್ವಚಾಂಪಿಯನ್ ಹಾಗೂ 21 ಬಾರಿ ಯುರೋಪಿಯನ್ ಚಾಂಪಿಯನ್ ಶಿಪ್ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪುಟಿನ್ ಹಾಗೂ ಅಲಿನಾ ಮೊದಲಿನಿಂದಲೂ ಪ್ರೀತಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಪುಟಿನ್ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದೀಗ 3ನೇ ಮಗುವಿಗೆ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ವಿಷಯ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    putin Alina Kabaeva (1)

    1983 ರಲ್ಲಿ ಲ್ಯುಡ್ಮಿಲಾ ಅಲೆಕ್ಸಾಂಡ್ರೊವ್ನಾ ಒಚೆರೆಟ್ನಾಯಾ ಅವರನ್ನು ವಿವಾಹವಾಗಿದ್ದ ಪುಟಿನ್ 30 ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿ ನಂತರ ಇಬ್ಬರೂ 2014 ರಲ್ಲಿ ವಿಚ್ಛೇದನ ಪಡೆದರು. ಪುಟಿನ್ ಮತ್ತು ಲ್ಯುಡ್ಮಿಲಾ ಅವರಿಗೆ ಮರಿಯಾ ಪುಟಿನ್ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪುಟಿನ್‌ನಿಂದ ವಿಚ್ಛೇದನ ಪಡೆದ ಲ್ಯುಡ್ಮಿಲಾ ತನಗಿಂತ 21 ವರ್ಷದ ಕಿರಿಯ ಉದ್ಯಮಿಯನ್ನು ವಿವಾಹವಾಗಿದ್ದರು.