Tag: older sister

  • ತಂಗಿಗೆ ಡ್ರಗ್ಸ್  ಚಟ ಕಲಿಸಿ, ವೇಶ್ಯಾವಾಟಿಕೆ ತಳ್ಳಿದ ಅಕ್ಕ ಅರೆಸ್ಟ್!

    ತಂಗಿಗೆ ಡ್ರಗ್ಸ್ ಚಟ ಕಲಿಸಿ, ವೇಶ್ಯಾವಾಟಿಕೆ ತಳ್ಳಿದ ಅಕ್ಕ ಅರೆಸ್ಟ್!

    ಭೋಪಾಲ್: ಅಪ್ರಾಪ್ತ ತಂಗಿಗೆ ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಲಿಸಿ, ವೇಶ್ಯಾವಾಟಿಕೆಗೆ ತಳ್ಳಿರುವ ಆರೋಪದ ಮೇಲೆ ಬಾಲಕಿಯ ಅಕ್ಕನನ್ನು ಬಂಧಿಸಿರುವ ಘಟನೆ ಭೋಪಾಲ್‍ನಲ್ಲಿ ನಡೆದಿದೆ.

     

    ಬಾಲಕಿಯು ಎನ್‍ಜಿಓ ಒಂದರ ಕೌನ್ಸಿಲಿಂಗ್‍ಗೆ ಭಾಗಿಯಾಗಿದ್ದಳು. ಈ ವೇಳೆ ಬಾಲಕಿ ನನ್ನ ಸಹೋದರಿ ನನಗೆ ಗಾಂಜಾವನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾಳೆ ಏಂದು ಹೇಳಿದ್ದಾಳೆ. ಈ ವಿಚಾರವಾಗಿ ಎನ್‍ಜಿಒ ಸಿಬ್ಬಂದಿ ಬಾಲಕಿಯ ಕುಟುಂಬಕ್ಕೆ ಮಾಹಿತಿಯನ್ನು ನೀಡಿದ್ದಾರೆ. ನಂತರ ಬಾಲಕಿ ಪೋಷಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಪೊಕ್ಸೊ ಕಾಯ್ದೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಗಾಂಧಿನಗರ ಪೊಲೀಸ್ ಠಾಣೆ ಎಸೆಚ್‍ಒ ನಿಲೇಶ್ ಅವಸ್ಥಿ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಅಪ್ರಾಪ್ತ ಬಾಲಕಿ ನಾನು 13 ವರ್ಷವಳಿದ್ದಾಗಲೇ ನನ್ನ ಅಕ್ಕ ನನಗೆ ಗಾಂಜಾವನ್ನು ಪರಿಚಯಿಸಿದ್ದಾಳೆ. ಒಮ್ಮೆ ನನ್ನನ್ನು ಇಂದೋರ್‍ಗೆ ಕರೆದುಕೊಂಡು ಹೋಗಿದ್ದಳು. ಆಗ ಅವಳು ಸಮೀರ್ ಎನ್ನುವ ವ್ಯಕ್ತಿಯೊಂದಿಗೆ ಉಳಿದುಕೊಂಡಿದ್ದಳು. ಆಗ ಆ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅವನಿಂದ ಅಕ್ಕ ಎರಡು ಸಾವಿರ ಹಣವನ್ನು ಪಡೆದುಕೊಂಡಿದ್ದಾಳೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

    ಬಾಲಕಿಯ ಮೇಲೆ ಅತ್ಯಾಚರ ಎಸಗಿದ ಇನ್ನೂ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಅಕ್ಕನನ್ನು ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.