Tag: Old Mysuru

  • ಹಳೇಮೈಸೂರು ಭಾಗದಲ್ಲಿ ರಂಗೇರಿದ ರಾಜಕೀಯ-JDS ಮಣಿಸಲು Congress ಮಾಸ್ಟರ್ ಪ್ಲಾನ್

    ಹಳೇಮೈಸೂರು ಭಾಗದಲ್ಲಿ ರಂಗೇರಿದ ರಾಜಕೀಯ-JDS ಮಣಿಸಲು Congress ಮಾಸ್ಟರ್ ಪ್ಲಾನ್

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಗೆ ಈಗಿನಿಂದಲೇ ತಯಾರಿಗಳು ಆರಂಭವಾಗಿದ್ದು, ಹಳೇ ಮೈಸೂರಿನಲ್ಲಿ ಜೆಡಿಎಸ್ (JDS) ವರ್ಸಸ್ ಕಾಂಗ್ರೆಸ್ (Congress) ತಿಕ್ಕಾಟ ಶುರುವಾಗಿದೆ. ಜೆಡಿಎಸ್ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ.

    ಹೌದು. ನಾಗಮಂಗಲದಲ್ಲಿ ಶಿವರಾಮೇಗೌಡ (Shivarame Gowda) ರನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದ್ದು, ಇತ್ತ ಮಂಡ್ಯದಿಂದ ಚಲುವರಾಯಸ್ವಾಮಿ (Chaluvarayaswamy) ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶಿವರಾಮೇಗೌಡ, ಚಲುವರಾಯಸ್ವಾಮಿ ಒಂದಾದ್ರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದಾಗಿದೆ.

    ಭಾರತ್ ಜೋಡೋ ಯಾತ್ರೆ (Bharat Jodo Yatre) ಯಿಂದ ಸಿದ್ಧತೆ ತಯಾರಾಗುತ್ತಿದೆ. ಶಿವರಾಮೇಗೌಡ-ಚಲುವರಾಯಸ್ವಾಮಿ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೇ ದಲಿತ ಸಿಎಂ ಕೂಗು – ಸಿದ್ದು ಸೋಲಿಸಿ, ದಲಿತ CM ಹಾದಿ ಸುಗಮಗೊಳಿಸಿ ಅಭಿಯಾನ

    ಡಿಕೆಶಿ (DK Shivakumar) ಜೊತೆ ಶಿವರಾಮೇಗೌಡ ನಡೆಸಿರುವ ಮಾತುಕತೆಯಲ್ಲಿ ಚಲುವರಾಯಸ್ವಾಮಿ ಸೇರಿ ಮಂಡ್ಯ ಕೈ ನಾಯಕರು ಭಾಗಿಯಾಗಿದರು. ಡಿಕೆಶಿ ಭೇಟಿಯ ವೇಳೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಶಿವರಾಮೇಗೌಡ ಜೆಡಿಎಸ್ ಸೋಲಿಸಲು ಮತ್ತೆ ಮರಳಿ ಕಾಂಗ್ರೆಸ್ ಬರಲು ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇತ್ತ ಚಲುವರಾಯಸ್ವಾಮಿ ಜೆಡಿಎಸ್ ಮಣಿಸಲು ಕ್ಷೇತ್ರ ಬದಲಾವಣೆಯತ್ತ ಮುಂದಾಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಓಲ್ಡ್ ಮೈಸೂರು ಆಪರೇಷನ್ ಕಮಲಕ್ಕೆ ಹೈಕಮಾಂಡ್ ಅಸಮಾಧಾನ – ಅಖಾಡಕ್ಕಿಳಿಯಲು ಸಜ್ಜಾದ ಅಮಿತ್ ಶಾ?

    ಓಲ್ಡ್ ಮೈಸೂರು ಆಪರೇಷನ್ ಕಮಲಕ್ಕೆ ಹೈಕಮಾಂಡ್ ಅಸಮಾಧಾನ – ಅಖಾಡಕ್ಕಿಳಿಯಲು ಸಜ್ಜಾದ ಅಮಿತ್ ಶಾ?

    ಬೆಂಗಳೂರು: ಬಿಜೆಪಿಯ (BJP) ಆಪರೇಷನ್ ಓಲ್ಡ್ ಮೈಸೂರು (Old Mysuru) ಬಗ್ಗೆ ವರಿಷ್ಠರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮೈಸೂರು ಕರ್ನಾಟಕದಲ್ಲಿ ಬಿಜೆಪಿ ಟಾರ್ಗೆಟ್ 35+ ಫಿಕ್ಸ್ ಮಾಡ್ಕೊಂಡಿದೆ. ಆದ್ರೆ ಈ ಭಾಗದಲ್ಲಿ ಆಪರೇಷನ್ ಕಮಲ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್ ಗರಂ ಆಗಿದೆ.

    ನಿರೀಕ್ಷಿತ ಮಟ್ಟದಲ್ಲಿ ಆಪರೇಷನ್ ಕಮಲ ನಡೀತಿಲ್ಲ. ಆಪರೇಷನ್ ಓಲ್ಡ್ ಮೈಸೂರು ತೃಪ್ತಿದಾಯಕವಾಗಿಲ್ಲ ಅಂತ ವರಿಷ್ಠರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ಬಾರಿ ಹೆಚ್ಚಿನ ಫೋಕಸ್ ಮಾಡಿರುವ ಮಂಡ್ಯ, ಮೈಸೂರು, ಹಾಸನ, ರಾಮನಗರ ಜಿಲ್ಲೆಗಳಿಂದ ಹೆಚ್ಚಿನ ಪ್ರಭಾವಿಗಳು ಬಿಜೆಪಿ ಸೇರಲು ಮುಂದೆ ಬಂದಿಲ್ಲ. ಈ ಜಿಲ್ಲೆಗಳ ಪ್ರಭಾವಿಗಳನ್ನು ಸೆಳೆಯಲು ರಾಜ್ಯ ಬಿಜೆಪಿ ನಾಯಕರು ವಿಫಲರಾಗಿದ್ದಾರೆಂದು ಹೈಕಮಾಂಡ್ ಸಿಟ್ಟಾಗಿದೆ. ಜೊತೆಗೆ ಅಮಿತ್ ಶಾ (Amit Shah) ರಾಜ್ಯ ನಾಯಕರಿಗೆ ನೀಡಿದ್ದ ಆಪರೇಷನ್‍ನ ಟಾಸ್ಕ್ ಕಂಪ್ಲೀಟ್ ಮಾಡಿಲ್ಲದಿರುವುದಕ್ಕೂ ರಾಜ್ಯ ನಾಯಕರು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


    ಹಾಲಿ ಮಾಜಿ ಶಾಸಕರ ಸೇರ್ಪಡೆ ಯಾವಾಗ, ಇನ್ನೂ ಆಗಿಲ್ಲ ಯಾಕೆ?
    ಆರಂಭ ಶೂರತ್ವ ಮಾತ್ರ ತೋರಿಸಿದ್ರಿ, ನಂತರ ವಿಫಲರಾಗಿದೀರಿ ಅಂತ ದೆಹಲಿ ದೊರೆಗಳು ಚಾಟಿ ಬೀಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಆಪರೇಷನ್ ಕಮಲದ ಕಂಪ್ಲೀಟ್ ರಿಪೋರ್ಟ್ ಕೊಡುವಂತೆ ಹೈಕಮಾಂಡ್ ತಾಕೀತು ಮಾಡಿದೆ. ಆಪರೇಷನ್‍ಗೆ ಲಿಸ್ಟ್ ಮಾಡಿಕೊಂಡ ಪ್ರಭಾವಿಗಳು ಯಾರು? ಅವರ ಸೇರ್ಪಡೆ ವಿಳಂಬ ಯಾಕೆ? ಎಲ್ಲಿ, ಏನು ತೊಡಕಾಗಿದೆ? ಎಲ್ಲಿ ಎಡವಿದ್ದೀರಿ ಅಂತ ವರಿಷ್ಠರು ವಿವರಣೆ ಕೇಳಿದ್ದಾರೆ.

    ಆಪರೇಷನ್ ಓಲ್ಡ್ ಮೈಸೂರು ಪ್ರಗತಿ ಕಾಣದ ಹಿನ್ನೆಲೆಯಲ್ಲಿ, ಸಮಯ ವ್ಯರ್ಥ ಆಗದಂತೆ ತಡೆಯಲು ವರಿಷ್ಠರೇ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಪಕ್ಷ ಸೇರಲು ಮನಸು ತೋರಿರುವವರ ಜೊತೆ ಖುದ್ದು ಅಮಿತ್ ಶಾ ನೇರ ಟಾಕ್ ನಡೆಸಲು ಪ್ಲಾನ್ ರೂಪಿಸಲಾಗಿದೆ. ರಾಜ್ಯ ಘಟಕದಿಂದ ವರದಿ ಪಡೆದು ಆಯ್ದ ಪ್ರಭಾವಿಗಳ ಜೊತೆ ಶಾ ಚರ್ಚೆ ನಡೆಸುವ ಸಾಧ್ಯತೆ ಇದೆ.

    ಹಳೇ ಮೈಸೂರು ಭಾಗದಿಂದ ಬಿಜೆಪಿ ಸೇರಿದ ಪ್ರಭಾವಿಗಳು:
    ತುಮಕೂರಿನಿಂದ – ಮುದ್ದಹನುಮೇಗೌಡ, ಕೋಲಾರದಿಂದ – ವರ್ತೂರು ಪ್ರಕಾಶ್, ಮಂಜುನಾಥ್ ಗೌಡ., ಮಂಡ್ಯದಿಂದ – ಲಕ್ಷ್ಮಿ ಅಶ್ವಿನ್ ಗೌಡ, ಅಶೋಕ್ ಜಯರಾಂ, ಸಚ್ಚಿದಾನಂದ., ಬೆಂಗಳೂರು ಗ್ರಾಮಾಂತರದಿಂದ – ಪಿಳ್ಳ ಮುನಿಶಾಮಪ್ಪ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

    ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

    ರಾಯಚೂರು: ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ (JDS) ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರನ್ನಾಗಲಿ (Deve Gowda), ಕುಮಾರಣ್ಣನನ್ನಾಗಲಿ (H.D Kumarswamy), ಜೆಡಿಎಸ್ ಪಕ್ಷವನ್ನಾಗಲಿ ಏನೂ ಮಾಡಲು ಆಗಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಗುಡುಗಿದ್ದಾರೆ.

    ರಾಯಚೂರಿನ ಸಿಂಧನೂರಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಹುಟ್ಟುಹಬ್ಬ ಸಮಾರಂಭ ಹಿನ್ನೆಲೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯಕ್ಕೆ ಅಮಿತ್ ಶಾ (AmitShah) ಅಥವಾ ಯಾರೇ ಬಂದ್ರೂ ಜೆಡಿಎಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಇಂದಿನಿಂದ ಕುಮಾರಣ್ಣ ಬೀದರ್‌ನಿಂದ ಯಾತ್ರೆ ಶುರು ಮಾಡಿದ್ದಾರೆ. ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಪತ್ರ- ಚೆನ್ನೈನಲ್ಲಿ ಓರ್ವನ ಬಂಧನ

    ಎರಡು ಪಕ್ಷಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿಲ್ಲ. ಜನಸಂಕಲ್ಪ ಯಾತ್ರೆಯೂ ನೀವೂ ನೋಡಿದ್ರಿ. ಭಾರತ್ ಜೋಡೋ ಯಾತ್ರೆಯೂ ನೋಡಿದ್ರಿ. ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ? 40 ಪೆರ್ಸೆಂಟ್ ಲೂಟಿ ಹೊಡೆಯುತ್ತಿದ್ದೀರಿ. ರಾಜ್ಯದ ಜನರ ಬೊಕ್ಕಸ ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಭಾರತ್ ಜೋಡೋ (Bharat Jodo Yatra)  ಯಾತ್ರೆ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆ ಆಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಿದ್ದಾಗಲೇ ಸ್ಯಾಂಟ್ರೋ ರವಿಯಿಂದ ಹೆಚ್ಚು ವ್ಯವಹಾರ: ಆರಗ ತಿರುಗೇಟು

    ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿವೆ. ಆದ್ರೆ ಕುಮಾರಣ್ಣ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತೂ ಚರ್ಚೆ ಮಾಡುತ್ತಾರೆ. ಪಂಚರತ್ನ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗುವ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

    ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಹಳೆ ಮೈಸೂರು (Old Mysuru) ಭಾಗದಲ್ಲಿ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕೆಂದು ಬಿಜೆಪಿ (BJP) ಸದ್ಯ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಆದರೆ ಇದೀಗ ಬಿಜೆಪಿ ಕಳೆದ ಚುನಾವಣೆಯಲ್ಲಿ ಹಳೆ‌ ಮೈಸೂರು ಭಾಗದಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿತ್ತು ಎಂದು ಬಿಜೆಪಿ ನಾಯಕರೊಬ್ಬರೇ ಆರೋಪಿಸಿದ್ದಾರೆ.

    ಜೆಡಿಎಸ್ (JDS) ಹಾಗೂ ಕಾಂಗ್ರೆಸ್‌ನ (Congress) ಭದ್ರಕೋಟೆ ಎಂದು ಹಳೆ ಮೈಸೂರು ಭಾಗ ಅಂದರೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತದೆ. ಇಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸೃಷ್ಟಿ ಮಾಡಿಕೊಳ್ಳಲು ಹೆಣಗಾಡುತ್ತಿದೆ. ಕೇಂದ್ರ ಬಿಜೆಪಿ ನಾಯಕರು ಮುಂಬರುವ ಚುನಾವಣೆಯಲ್ಲಿ‌ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸೀಟ್‌ಗಳನ್ನು‌ ಗೆಲ್ಲಬೇಕೆಂದು ಸೀರಿಯಸ್ ಆಗಿ ತೆಗೆದುಕೊಂಡು ರಾಜ್ಯ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

    ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಹಳೆ ಮೈಸೂರು ಭಾಗಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಅದರಲ್ಲೂ ಮಂಡ್ಯ‌ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ನಾಯಕರು, ಸಚಿವರು ಪ್ರತಿ ದಿನ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಒಂದೆಲ್ಲ ಒಂದು ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮ ಹೆಸರಿನಲ್ಲಿ ಭೇಟಿ ನೀಡಿ ಪಕ್ಷ ಸಂಘಟನೆಗೆ‌ ಮುಂದಾಗಿದ್ದಾರೆ. ಅಲ್ಲಿಗೆ ಈ ಬಾರಿಯ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ‌ ಪೈಕಿ ಕನಿಷ್ಠ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಾದ್ರು ಗೆಲ್ಲಬೇಕು ಎಂದು ಬಿಜೆಪಿ ನಿರ್ಧಾರ ಮಾಡಿಕೊಂಡಿದೆ.

    ಈ ಬಾರಿ ಮಂಡ್ಯ ಜಿಲ್ಲೆ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಆದರೆ ಇದೇ ಬಿಜೆಪಿಯ ಅಬ್ಬರ ಕಳೆದ ಬಾರಿ ಈ ಭಾಗದಲ್ಲಿ‌ ಇರಲಿಲ್ಲ. ಕೇವಲ ಹೆಸರಿಗಷ್ಟೇ ಅಭ್ಯರ್ಥಿಗಳನ್ನು‌ ಹಾಕಿ ಅವರ ಗೆಲುವಿಗೆ ಶ್ರಮಿಸಲಿಲ್ಲ. ಇದಕ್ಕೆ ಕಾರಣ ಎಂದರೆ ಅದು ಜೆಡಿಎಸ್‌‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದರು. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ.

    ಮಂಡ್ಯದಲ್ಲಿ ಹಾಗೂ ಹಳೆ ಮೈಸೂರು ಭಾಗದಲ್ಲಿ ನಮ್ಮ ನಾಯಕರು ಯಾಕೋ ಏನೋ ಕಳೆದ ಬಾರಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದರು. ಹೀಗಾಗಿ ಹೆಸರಿಗಷ್ಟೇ ಈ ಭಾಗದಲ್ಲಿ ಅಭ್ಯರ್ಥಿಗಳನ್ನು ಹಾಕಲಾಗಿತ್ತು. ಚುನಾವಣೆಯ ಪೂರ್ವದಲ್ಲಿ ನಮ್ಮವರು ಒಪ್ಪಂದ ಮಾಡಿಕೊಂಡಿದ್ದರು, ಆದರೆ ಚುನಾವಣೆ ನಂತರ ಜೆಡಿಎಸ್‌ನವರು ನಮ್ಮಗೆ ಕೈ ಕೊಟ್ರು. ಆದರೆ ಈ ಬಾರಿ ಹಾಗೆ ಆಗುವುದಿಲ್ಲ, ಅಮಿತ್ ಶಾ ಅವರೇ ಸೂಚನೆ ಕೊಟ್ಟಿದ್ದಾರೆ, ಮಂಡ್ಯ ಹಾಗೂ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು ಎಂದಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯ ಹಳೆ ಮೈಸೂರಿನಲ್ಲಿ ನಾವು ಸೀರಿಯಸ್ ಆಗಿ ಚುನಾವಣೆ ಮಾಡಿ ಅತಿ ಹೆಚ್ಚು ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದು ಯೋಗೇಶ್ವರ್ (CP Yogeshwar) ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    ಒಟ್ಟಾರೆ ಇಷ್ಟು ದಿನ ಬಿಜೆಪಿ ಹಾಗೂ ಜೆಡಿಎಸ್‌ ಎ, ಬಿ ಟೀಮ್ ಎಂಬ ಕಾಂಗ್ರೆಸ್ ಆರೋಪ ಬಿಜೆಪಿ ನಾಯಕನಿಂದಲೇ ನಿಜ ಎಂದು ಗೊತ್ತಾಗಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಎದುರಿಸಿ ಎಷ್ಟು ಸೀಟ್ ಗೆಲ್ಲುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: 170 ಶಾಲಾ ಮಕ್ಕಳಿಗೂ ಒಂದೇ ಶೌಚಾಲಯ- ಮರದ ಕೆಳಗೆಯೇ ನಿತ್ಯ ಪಾಠ

    Live Tv
    [brid partner=56869869 player=32851 video=960834 autoplay=true]

  • ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲ್ಯಾನ್‌

    ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲ್ಯಾನ್‌

    ಬೆಂಗಳೂರು: ಹಳೇ ಮೈಸೂರು(Old Mysuru) ಭಾಗದ ಮೇಲೆ ಕಾಂಗ್ರೆಸ್ ಬಿಜೆಪಿ ಕಣ್ಣು ಹಾಕಿದ ಹಿನ್ನೆಲೆಯಲ್ಲಿ ತನ್ನ ಭದ್ರಕೋಟೆಯಲ್ಲಿ ಹಿಡಿತ ಸಡಿಲಿಕೆ ಆಗದಂತೆ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಪ್ಲ್ಯಾನ್‌ ಮಾಡಿದ್ದಾರೆ.

    ವಿಧಾನಸಭಾ ಚುನಾವಣೆ(Election) ತಿಂಗಳು ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಕೋಟೆಯನ್ನು ಛಿದ್ರ ಮಾಡಲು ರಣತಂತ್ರ ಮಾಡುತ್ತಿದೆ. ಈ ತಂತ್ರಕ್ಕೆ ಪ್ರತಿ ತಂತ್ರ ಹೂಡಲು ಕುಮಾರಸ್ವಾಮಿ ಅವರೇ ನೇರವಾಗಿ ಅಖಾಡಕ್ಕೆ ಧುಮುಕಿದ್ದಾರೆ.

    ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕುಮಾರಸ್ವಾಮಿ ಇಳಿದಿದ್ದು, ಪಕ್ಷ ತೊರೆದ ಎರಡನೇ ಹಂತದ ನಾಯಕರನ್ನು ಕರೆತರಲು ದಳಪತಿ‌ ಮುಂದಾಗಿದ್ದಾರೆ. ರೆಬೆಲ್ ಶಾಸಕರ ಕ್ಷೇತ್ರ, ಉಪ ಚುನಾವಣೆಯಲ್ಲಿ ಸೋಲುಂಡ ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.  ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    ಶಿರಾ, ಕೆ.ಆರ್.ಪೇಟೆ, ಗುಬ್ಬಿ, ಚಾಮುಂಡೇಶ್ವರಿ, ಕೋಲಾರ ಕ್ಷೇತ್ರಗಳ ಮುಖಂಡರ ಜೊತೆ ನಿರಂತರ ಸಂಪರ್ಕ‌ ಇಟ್ಟುಕೊಂಡಿದ್ದು, ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದಿರುವ ಕಲ್ಕೆರೆ ರವಿಕುಮಾರ್, ಎಸ್.ಆರ್.ಗೌಡ‌ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಕಲ್ಕೆರೆ ರವಿ, ಎಸ್.ಆರ್.ಗೌಡ ಶಿರಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದು ಅವರನ್ನು ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಮೂಲಕ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂಬ ಸಂದೇಶವನ್ನು ಎಚ್‌ಡಿಕೆ ರವಾನಿಸಿದ್ದಾರೆ.

    ive Tv
    [brid partner=56869869 player=32851 video=960834 autoplay=true]

  • ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ದೂರ ಇಟ್ಟು ಓಲ್ಡ್ ಮೈಸೂರು ಆಪರೇಷನ್ ಕಮಲ ನಡೆಯುತ್ತಿದೆ. ಡಿಸಿಎಂ ಆಗಿ ಅಶ್ವತ್ಥನಾರಾಯಣ ಪ್ರಯೋಗ ಮಾಡಿ ಹೈಕಮಾಂಡ್ ಫೇಲ್ಯೂರ್ ಆಗಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿದೆ.

    ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಸಂಘಟನೆ ಮಾಡಲು ಅಶ್ವತ್ಥನಾರಾಯಣ ವಿಫಲ ಎಂಬ ವರದಿ ರವಾನೆಯಾಗಿದ್ದು, ಹೈಕಮಾಂಡ್ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಹಾಗಾಗಿಯೇ ಅಶ್ವತ್ಥನಾರಾಯಣ ಬಿಟ್ಟು ಹಳೇ ಮೈಸೂರು ಭಾಗದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಕಾರ್ಯತಂತ್ರ ನಡೆಯುತ್ತಿದೆ ಅಂತಾ ಮೂಲಗಳು ತಿಳಿಸಿವೆ.

    BASAVARAJ BOMMAI

     

    ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೂ ಅಶ್ವತ್ಥನಾರಾಯಣ ದೂರ ಇಟ್ಟಿದ್ದರು. ಬಹಿರಂಗವಾಗಿ ಅಬ್ಬರಿಸುವುದನ್ನು ಬಿಟ್ಟರೆ ಸಂಘಟನೆಗೆ ಶಕ್ತಿ ತರಲು ಸಾಧ್ಯ ಆಗಿಲ್ಲ ಎಂಬ ಅಸಮಾಧಾನ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ. ಹೈಕಮಾಂಡ್ ಅಸಮಾಧಾನದ ಬೆನ್ನಲ್ಲೇ ಮೈಸೂರು ಭಾಗಗಳ ಪ್ರವಾಸಕ್ಕೆ ಅಶ್ವತ್ಥನಾರಾಯಣ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಇದ್ದಕ್ಕಿದ್ದಂತೆ ಸ್ಟಾರ್ ಆಗಿ ಡಿಸಿಎಂ ಪಟ್ಟ ಪಡೆದಿದ್ದ ಅಶ್ವತ್ಥನಾರಾಯಣ ಹೈಕಮಾಂಡ್ ಕಣ್ಣಲ್ಲಿ ಫೇಲ್ಯೂರ್ ಆಗಿದ್ದಾರಾ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಕಿತ್ತಾಟ ಶುರು ಆಗಿದೆಯಾ? ಅಶ್ವತ್ಥನಾರಾಯಣ ಒಂಟಿಯಾದಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ. ಅಶೋಕ್, ಸುಧಾಕರ್, ಯೋಗೇಶ್ವರ್ ಒಂದು ಗುಂಪು ಸೇರಿದ್ದು, ಹಳೇ ಮೈಸೂರು ಭಾಗದ ಸಂಘಟನೆಯಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು ನಡೆಯುತ್ತಿದ್ದು, ಅಶ್ವತ್ಥನಾರಾಯಣ ಹೊರಗಿಟ್ಟು ಆಪರೇಷನ್ ಚಟುವಟಿಕೆಗಳು ಜೋರಾಗಿದೆ ಮತ್ತು ತ್ರಿಮೂರ್ತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    ಹಾಗಾದರೆ ಅಶ್ವತ್ಥನಾರಾಯಣ್ ಓವರ್ ಸ್ಮಾರ್ಟ್ ಬಿಜೆಪಿಯ ಇತರೆ ಒಕ್ಕಲಿಗ ನಾಯಕರನ್ನು ಕೆರಳಿಸುತ್ತಾರಾ? ಚೊಚ್ಚಲ ಬಾರಿಗೆ ಕ್ಯಾಬಿನೆಟ್ ಸೇರ್ಪಡೆ ಬೆನ್ನಲ್ಲೇ ಡಿಸಿಎಂ ಪಟ್ಟ ಗಿಟ್ಟಿಸಿದ ಅಶ್ವತ್ಥನಾರಾಯಣ ಈಗ ಒಂಟಿಯಾಗಿ ಏನು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

  • ಪಕ್ಷ ತೊರೆಯಲು ಸಿದ್ಧರಾದ 6 ಜೆಡಿಎಸ್ ಶಾಸಕರು

    ಪಕ್ಷ ತೊರೆಯಲು ಸಿದ್ಧರಾದ 6 ಜೆಡಿಎಸ್ ಶಾಸಕರು

    ಬೆಂಗಳೂರು: ಆರು ಮಂದಿ ಜೆಡಿಎಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಹಾಲಿ 6 ಜೆಡಿಎಸ್ ಶಾಸಕರು, ಕಳೆದ ಬಾರಿ ಸೋತ 6 ಅಭ್ಯರ್ಥಿಗಳು ಸೇರಿ ಒಟ್ಟು 12 ಮಂದಿ ಜೆಡಿಎಸ್‍ಗೆ ಗುಡ್‍ಬೈ ಹೇಳಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಆಪರೇಷನ್ ಕಮಲಕ್ಕೆ ಒಳಗಾಗದೇ ಪಕ್ಷದ ಹಿರಿಯ ನಾಯಕರ ವರ್ತನೆಗೆ ಬೇಸತ್ತು ಶಾಸಕರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ನೀಡುವ 12 ಶಾಸಕರ ಪಟ್ಟಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕೈ ಸೇರಿದೆ. ರಾಜೀನಾಮೆ ನೀಡುವ ಬಹುತೇಕ ಜೆಡಿಎಸ್ ಶಾಸಕರು ಕಾಂಗ್ರೆಸ್‍ನತ್ತ ಒಲವು ತೋರಿಸಿದ್ದಾರೆ.

    ಯಾರು ರಾಜೀನಾಮೆ?
    ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರು ಈಗಾಗಲೇ ಜೆಡಿಎಸ್ ನಾಯಕರ ಜೊತೆ ಮುನಿಸಿಕೊಂಡಿದ್ದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರುವ ಜಿಟಿಡಿ ಕಮಲ ಸೇರುವುದು ಬಹುತೇಕ ಖಚಿತವಾಗಿದೆ.

    ಪಿರಿಯಾಪಟ್ಟಣದ ಶಾಸಕ ಮಹದೇವ್, ನಾಗಮಂಗಲದ ಸುರೇಶ್ ಗೌಡ ಕಾಂಗ್ರೆಸ್ ಅಥವಾ ಬಿಜೆಪಿ ಪೈಕಿ ಒಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಯಾವುದು ಎನ್ನುವುದು ಇನ್ನು ಅಧಿಕೃತವಾಗಿಲ್ಲ.  ಇದನ್ನೂ ಓದಿ: ಎಚ್‍ಡಿಕೆಗೆ ಡಿಕೆಶಿ ಮೇಲೆ ಪ್ರೀತಿ ಇಲ್ಲ, ಫೋನ್ ಕದ್ದಾಲಿಕೆ ನಿಜ – ದಳ ಶಾಸಕ ಶ್ರೀನಿವಾಸ್

    ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಗುಬ್ಬಿ ಶಾಸಕ ಶ್ರೀನಿವಾಸ್, ಚಿಕ್ಕನಾಯಕನ ಹಳ್ಳಿಯ ಸುರೇಶ್ ಬಾಬು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮಾಗಡಿಯ ಮಂಜುನಾಥ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.

  • ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

    ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

    ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ.

    ಹೌದು. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗದಲ್ಲಿ ಎಂಟು ಶಾಸಕರು ಇದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

    ಕಡೆ ಕ್ಷಣದವರೆಗೂ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಅನಂತಕುಮಾರ್ ನಿಧನ, ವೈಯಕ್ತಿಕವಾದ ಕೇಸ್ ಗಳು, ಎಚ್. ವಿಶ್ವನಾಥ್ ಎಫೆಕ್ಟ್, ಆರ್ ಎಸ್‍ಎಸ್ ನಲ್ಲಿ ರಾಮದಾಸ್ ಪರ ಗಟ್ಟಿಯಾಗಿ ಮಾತನಾಡುವವರು ಇಲ್ಲದ ಕಾರಣ ಮಂತ್ರಿ ಸ್ಥಾನ ತಪ್ಪಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಕೊಡಗಿನ ಅಪ್ಪಚ್ಚು ರಂಜನ್ ಅಥವಾ ಬೋಪಯ್ಯ ಇಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕೊನೆಗೆ ಬೋಪಯ್ಯ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ವಿಚಾರ ಬಿಜೆಪಿ ಮೂಲಗಳಿಂದ ಪ್ರಕಟವಾಗಿತ್ತು. ಆದರೆ ಈಗ ಇಬ್ಬರಿಗೂ ಮಂತ್ರಿ ಸ್ಥಾನ ಕೈ ತಪ್ಪಿದೆ.

    ಕುಮಾರಸ್ವಾಮಿ ಸರ್ಕಾರದಲ್ಲಿ ರೇವಣ್ಣ, ಜಿಟಿ ದೇವೇಗೌಡ, ಸಿಎಸ್ ಪುಟ್ಟರಾಜು, ಎನ್ ಮಹೇಶ್, ಸಾ.ರಾ. ಮಹೇಶ್, ಪುಟ್ಟರಂಗ ಶೆಟ್ಟಿ, ಡಿಸಿ ತಮ್ಮಣ್ಣ ಮಂತ್ರಿ ಸ್ಥಾನ ಪಡೆದಿದ್ದರು.