Tag: Old Mysore

  • ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

    ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

    ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದಲ್ಲಿ ಕಾಂಗ್ರೆಸ್- ಜೆಡಿಎಸ್‍ಗೆ (Congresss- JDS) ನೇರ ಠಕ್ಕರ್ ಕೊಟ್ಟು ಮತ ಬೇಟೆಯಾಡಿರುವ ಮೋದಿ (PM Narendra Modi) ಕಾಂಗ್ರೆಸ್-ಜೆಡಿಎಸ್ ಅಸ್ಥಿರದ ಪ್ರತೀಕ ಅಂತ ವಾಗ್ದಾಳಿ ನಡೆಸಿದ್ದಾರೆ.

    ಚುನಾವಣೆ ಸಮಯದಲ್ಲಿ ಎರಡೂ ಪಕ್ಷಗಳು ಡಬ್ಲ್ಯೂ ಡಬ್ಲ್ಯೂಎಫ್‌ ರೀತಿ ಕಾದಾಡಿ ನಂತರ ಇಬ್ಬರು ಒಂದಾಗುತ್ತಾರೆ. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಕನಸು ಕಾಣುತ್ತಿದೆ. ಜೆಡಿಎಸ್‌ ಕಾಂಗ್ರೆಸ್‌ನ ಬಿ ಟೀಂ ಎಂದು ಹೇಳುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯೇ ಪರ್ಯಾಯ ಪಕ್ಷ ಎಂದು ದಾಳ ಉರುಳಿಸಿದ್ದಾರೆ.

    ನಮೋ ಸಂದೇಶ ಏನು?
    ಕರಾವಳಿ, ಬೆಂಗಳೂರು ನಗರ, ಮಧ್ಯ ಕರ್ನಾಟಕ ಸೇರಿದಂತೆ ಹಲವು ಕಡೆ ಬಿಜೆಪಿ ಭದ್ರವಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆದಿಲ್ಲ. ಈ ಕಾರಣಕ್ಕೆ ಇಲ್ಲಿ ಬಿಜೆಪಿ ಸಂಘಟನೆಯಾಗಲು ಜೆಡಿಎಸ್ ಜೊತೆ ಯಾವುದೇ ಒಳ ಒಪ್ಪಂದ, ಅಡ್ಜೆಸ್ಟ್‌ಮೆಂಟ್‌ ಪಾಲಿಟಿಕ್ಸ್ ಇಲ್ಲ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.  ಇದನ್ನೂ ಓದಿ: ಡಿಕೆಶಿ ಸಿಎಂ; ರಾಹುಲ್‌ ಅಭಯ : ಕಾಂಗ್ರೆಸ್‌ ಇನ್‌ಸೈಡ್‌ ಸುದ್ದಿ ರಿವೀಲ್‌ ಮಾಡಿದ ಅಮಿತ್‌ ಶಾ

    ಕಾಂಗ್ರೆಸ್-ಜೆಡಿಎಸ್ ನಮಗೆ ಸಮಾನ ವಿರೋಧಿಗಳು. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಹುದ್ದೆಯ ಕನಸು ಕಾಣುತ್ತಿದೆ. ಜೆಡಿಎಸ್, ಕಾಂಗ್ರೆಸ್‍ನಂತೆ ಕುಟುಂಬ ರಾಜಕೀಯಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಸಂದೇಶ ಕಳುಹಿಸುವ ಯತ್ನ ಮಾಡಿದ್ದಾರೆ.

    ಇತ್ತೀಚೆಗೆ ಪಕ್ಷ ಸೇರಿದವರ ಮೂಲಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ದಳಪತಿಗಳ ಹಿಡಿತದಿಂದ ಒಕ್ಕಲಿಗ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸುಮಲತಾ, ವರ್ತೂರು ಪ್ರಕಾಶ್, ಮುದ್ದಹನುಮೇಗೌಡ, ಎಲ್.ಆರ್ ಶಿವರಾಮೇಗೌಡ, ಅಶೋಕ್ ಜಯರಾಮ್ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೊಸ ಆಶಯದೊಂದಿಗೆ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 25+ ಸ್ಥಾನಕ್ಕಾಗಿ ಬಿಜೆಪಿ ಶತಾಯಗತಾಯ ಹೋರಾಟ ಮಾಡುತ್ತಿದೆ.

    ಎಷ್ಟು ಸ್ಥಾನಗಳಿವೆ?
    ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಹಳೇ ಮೈಸೂರು ಭಾಗ ಎಂದು ಕರೆಯಲಾಗುತ್ತದೆ. ಒಟ್ಟುಇಲ್ಲಿ 57 ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್‌ 19, ಜೆಡಿಎಸ್‌ 27, ಇತರರು 2 ಸ್ಥಾನವನ್ನು ಗೆದ್ದಿದ್ದರು.

  • ಸಿದ್ದರಾಮಯ್ಯ ನೇತೃತ್ವದಲ್ಲಿ ಹಳೆ ಮೈಸೂರು ‘ಕೈ’ ಮುಖಂಡರ ಸಭೆ: ಏನೆಲ್ಲ ಚರ್ಚೆ ಆಯ್ತು?

    ಸಿದ್ದರಾಮಯ್ಯ ನೇತೃತ್ವದಲ್ಲಿ ಹಳೆ ಮೈಸೂರು ‘ಕೈ’ ಮುಖಂಡರ ಸಭೆ: ಏನೆಲ್ಲ ಚರ್ಚೆ ಆಯ್ತು?

    ಬೆಂಗಳೂರು: ಮಾಜಿ ಸಿಎಂ, ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಹಳೆ ಮೈಸೂರು ಪ್ರಾಂತ್ಯದ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಯಿತು.

    ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಮುಖವಾಗಿ ಜೆಡಿಎಸ್ ಜೊತೆಗಿನ ಮೈತ್ರಿ ಹಾಗೂ ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಚರ್ಚೆ ನಡೆಸಲಾಗಿದೆ.

    ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎ.ಮಂಜು, ಚಲುವರಾಯಸ್ವಾಮಿ, ಮಾಜಿ ಶಾಸಕರಾದ ನರೇಂದ್ರಸ್ವಾಮಿ, ಬಾಲಕೃಷ್ಣ, ಮಾಜಿ ಸಂಸದ ವಿಜಯ್ ಶಂಕರ್ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.

    ಹಾಸನ, ಮಂಡ್ಯಕ್ಕಾಗಿ ಪಟ್ಟು: ಸಭೆಯಲ್ಲಿ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಬಗ್ಗೆ ಪ್ರಮುಖ ಚರ್ಚೆ ನಡೆದಿದ್ದು, ಒಂದೊಮ್ಮೆ ಮೈತ್ರಿ ಆದರೆ ಹಾಸನ ಅಥವಾ ಮಂಡ್ಯ ಎರಡರಲ್ಲಿ ಒಂದು ಕ್ಷೇತ್ರವನ್ನ ಕಾಂಗ್ರೆಸ್ ಕೇಳಲೇಬೇಕು ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಹಾಸನ ಕ್ಷೇತ್ರವನ್ನು ಬಿಟ್ಟು ಕೊಡುವುದಾದರೆ ಹಾಲಿ ಸಂಸದರಾದ ಎಚ್‍ಡಿ ದೇವೇಗೌಡ ಅವರೇ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆಯೂ ಒತ್ತಡ ಹಾಕಲು ಮುಖಂಡರು ಆಗ್ರಹಿಸಿದ್ದಾರೆ ಎನ್ನಲಾಗಿದ್ದು, ಎಚ್‍ಡಿಡಿ ಸ್ಪರ್ಧೆ ಮಾಡಿದರೆ ಮಾತ್ರ ಮೈತ್ರಿಗಾಗಿ ಕಾರ್ಯನಿರ್ವಹಿಸುತ್ತೇವೆ ಪ್ರಜ್ವಲ್ ಅಭ್ಯರ್ಥಿ ಆದರೆ ಹಾಸನದಲ್ಲಿ ಮೈತ್ರಿಯೇ ಬೇಡ. ಒಂದೊಮ್ಮೆ ಮುಂದುವರಿದರೆ ಹಾಸನ ಜಿಲ್ಲಾ ಕಾಂಗ್ರೆಸ್ ನಿಂದಲೇ ಅಭ್ಯರ್ಥಿ ಸ್ಪರ್ಧೆ ನಡೆಯುತ್ತದೆ ಎಂಬ ಎಚ್ಚರಿಕೆಯನ್ನು ನಾಯಕರಿಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

    ಸದ್ಯ ಮಂಡ್ಯದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲು ಕಾಂಗ್ರೆಸ್ ನಾಯಕರ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಏರ್ಪಟ್ಟರೆ ಮಂಡ್ಯವನ್ನ ಜೆಡಿಎಸ್‍ಗೆ ಬಿಟ್ಟು ಕೊಡಲೇ ಬೇಕು. ಆದ್ದರಿಂದ ಮೈತ್ರಿ ಮಾತುಕತೆ ನಡೆಯುವವರೆಗೂ ಕಾದು ನೋಡಿ ಅಭ್ಯರ್ಥಿ ಬಗ್ಗೆ ಯೋಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಸುಮಲತಾ ಅಂಬರೀಶ್ ಅಭ್ಯರ್ಥಿ: ಒಂದೊಮ್ಮೆ ಮೈತ್ರಿಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೇಳಿದರೆ ಕಾಂಗ್ರೆಸ್ ನಿಂದ ಅವರನ್ನು ಸ್ಪರ್ಧೆಗೆ ಕೇಳುವುದು ಬೇಡ ಎಂಬ ಬಗ್ಗೆಯೂ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರು ಅಭ್ಯರ್ಥಿ ಆದರೆ ಮುಂದೇ ತೀರ್ಮಾನ ಮಾಡೋಣ. ಮೈತ್ರಿ ಆದರೆ ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಮುನ್ನವೇ ಕೇಳುವುದು ಬೇಡ ಎಂಬ ಗಂಭೀರ ಚರ್ಚೆ ನಡೆದಿದ್ದು, ಅವರ ಸ್ಪರ್ಧೆ ಬಗ್ಗೆಯೂ ಸಾಕಷ್ಟು ಸುದ್ದಿಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರಕ್ಕೆ ಸಭೆಯಲ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv