Tag: Old Hate

  • ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ರಕ್ತಸಿಕ್ತವಾದ ರಸ್ತೆ

    ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ರಕ್ತಸಿಕ್ತವಾದ ರಸ್ತೆ

    ಗದಗ: ಹಳೆ ವೈಷಮ್ಯದ ಹಿನ್ನೆಲೆ ಎರಡು ಕುಟುಂಬಗಳು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿರುವ ಘಟನೆ ಗದಗದ ಬೆಟಗೇರಿ ಸೆಟಲ್ಮೆಂಟ್‍ನಲ್ಲಿ ನಡೆದಿದೆ.

    ನಡು ರಸ್ತೆಯಲ್ಲೆ ಲಾಂಗು, ಮಚ್ಚುಗಳು ಝಳಪಿದ ಹಿನ್ನೆಲೆ ರಸ್ತೆ ಅನೇಕ ಕಡೆಗೆ ರಕ್ತಸಿಕ್ತವಾಗಿದೆ. ಬುಲೆಟ್ ಬೈಕ್, ಕಾರ್, ಮನೆಯ ಕಿಟಕಿ, ಬಾಗಿಲು ಸಂಪೂರ್ಣ ಜಖಂ ಆಗಿವೆ. ಘಟನೆಯಿಂದ ಯೇಸುಕುಮಾರ ಹೊಸಮನಿ (34), ಅನಿಲ ಮುತಗಾರ (35), ಗೋವಿಂದ ಮುತಗಾರ (43) ಮತ್ತು ಶಾಕಮ್ಮ (37)ಗೆ ಗಂಭೀರವಾಗಿ ಗಾಯಗಳಾಗಿವೆ.

    ಗಾಯಾಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ ಜಾವಾವ್, ವಿಕಾಸ್ ಜಾದಾವ ಎಂಬವರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ. ಪ್ರಹ್ಲಾದ್, ಸಿಪಿಐ ಕಿರಣ್ ಕುಮಾರ್ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಳೇ ದ್ವೇಷ – 12 ಬಾರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ

    ಹಳೇ ದ್ವೇಷ – 12 ಬಾರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ

    ಹುಬ್ಬಳ್ಳಿ: ಹಳೆಯ ದ್ವೇಷದ ಹಿನ್ನಲೆಯಲ್ಲಿ ಹಾಡಹಗಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಕಸಬಾಪೇಟೆಯ ಪಠಾಣಗಲ್ಲಿಯಲ್ಲಿ ನಡೆದಿದೆ.

    ಶಂಶುದ್ದೀನ್ ಅನ್ನು ಕೊನೆಯಾದ ಯುವಕ. ಹಾಜಿ ಶಂಶುದ್ದೀನ್ ಅನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೆಲವು ದಿನಗಳ ಹಿಂದೆ ಹಾಜಿ ಮತ್ತು ಸಂಶುದ್ದೀನ್ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ ಶಂಶುದ್ದೀನ್ ಹಾಜಿಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.

    ಈ ಜಗಳವಾದ ನಂತರ ಊರಿನ ಹಿರಿಯರು ಹಾಜಿ ಮತ್ತು ಶಂಶುದ್ದೀನ್ ಅನ್ನು ಕರೆಸಿ ಜಗಳ ಮಾಡಿಕೊಳ್ಳದಂತೆ ಬುದ್ಧಿ ಹೇಳಿದ್ದರು. ಆದರೆ ಇಂದು ಶಂಶುದ್ದೀನ್ ಮತ್ತೆ ಹಾಜಿ ಮುಖಾಮುಖಿಯಾದಾಗ ಜಗಳಕ್ಕೆ ಇಳಿದಿದ್ದಾರೆ. ಇಬ್ಬರ ನಡುವೆ ಗಲಾಟೆಯಾಗಿ ಅದು ವಿಕೋಪಕ್ಕೆ ಹೋಗಿ ಹಾಜಿ 12 ಬಾರಿ ಚಾಕುವಿನಿಂದ ಇರಿದು ಶಂಶುದ್ದೀನ್ ಅನ್ನು ಹತ್ಯೆಗೈದಿದ್ದಾನೆ.

    ಈ ಸಂಬಂಧ ಸ್ಥಳಕ್ಕೆ ಕಸಬಾಪೇಟೆ ಪೋಲಿಸರು ಬಂದಿದ್ದು ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.