Tag: old feud

  • ಭತ್ತದ ಗದ್ದೆಗೆ ನೀರುಕಟ್ಟಲು ಹೋದಾಗ ಮಾರಕಾಸ್ತ್ರದಿಂದ ವ್ಯಕ್ತಿಯ ಕೊಲೆ

    ಭತ್ತದ ಗದ್ದೆಗೆ ನೀರುಕಟ್ಟಲು ಹೋದಾಗ ಮಾರಕಾಸ್ತ್ರದಿಂದ ವ್ಯಕ್ತಿಯ ಕೊಲೆ

    ರಾಯಚೂರು: ಹಳೇ ವೈಷಮ್ಯದ (Old Feud) ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ರಬಣಕಲ್ ಕ್ಯಾಂಪ್ ಬಳಿ ನಡೆದಿದೆ.

    ಮದ್ಲಾಪುರ ಗ್ರಾಮದ ಪ್ರಸಾದ್ (38) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಗ್ಗೆ ಭತ್ತದ ಗದ್ದೆಗೆ ನೀರುಕಟ್ಟಲು ಹೋದ ಸಂದರ್ಭ ಏಕಾಏಕಿ ಮೂವರು ದಾಳಿ ಮಾಡಿದ್ದಾರೆ. ಜಮೀನಿನಲ್ಲಿ ಕಾದು ಕುಳಿತು ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ನೆರೆಮನೆಯಾತ ಸೀರೆ ಎಳೆದಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

    ರಬಣಕಲ್ ಗ್ರಾಮದ ರಾಮು, ಕೇಶವ ಸೇರಿ ಮೂರು ಮಂದಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾರಕಾಸ್ತ್ರದಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಹತ್ಯೆ

    ಮಾರಕಾಸ್ತ್ರದಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಹತ್ಯೆ

    ಚಿಕ್ಕೋಡಿ: ಹಳೆಯ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರದಿಂದ ಬಿಜೆಪಿ ಕಾರ್ಯಕರ್ತನನ್ನು ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ.

    ಹಿಡಕಲ್ ಡ್ಯಾಂ ಸಮೀಪದ ಹೊಸಪೇಟ ನಿವಾಸಿ ಪರಶುರಾಮ ಹಲಕರ್ಣಿ(32) ಕೊಲೆಯಾದ ವ್ಯಕ್ತಿ. ಪರುಶುರಾಮನನ್ನು ಮೂವರು ದುಷ್ಕರ್ಮಿಗಳು ಸೇರಿ ಗ್ರಾಮದ ಆಂಜನೇಯನ ಮಂದಿರದ ಹತ್ತಿರ ವಾಹನವನ್ನು ನಿಲ್ಲಿಸಿ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.

    ಮೂವರು ಆರೋಪಿಗಳಲ್ಲಿ ಮಂಜುನಾಥ್ ಪುಟ್ಜನೆ(24) ಹಾಗೂ ಕೆಂಪಣ್ಣ ನೆಸರಗಿ(30) ಪೊಲೀಸರಿಗೆ ಶರಣಾಗಿದ್ದು, ಇನ್ನೊಬ್ಬ ಆರೋಪಿ ಬಸವರಾಜ್ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದಾರೆ. ಹತ್ಯೆಗೊಳಗಾದ ಯುವಕ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದನು. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು 

    ಪ್ರಸ್ತುತ ಮೃತನ ಪತ್ನಿ ಕೊಲೆ ವಿರುದ್ಧ ದೂರು ಕೊಟ್ಟಿದ್ದಾರೆ. ಕೊಲೆಗೆ ಹಳೆಯ ವೈಷಮ್ಯ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಳೆಯ ವೈಷಮ್ಯ – ವ್ಯಕ್ತಿ ಬರ್ಬರ ಹತ್ಯೆ

    ಹಳೆಯ ವೈಷಮ್ಯ – ವ್ಯಕ್ತಿ ಬರ್ಬರ ಹತ್ಯೆ

    ಬೀದರ್: ಹಳೆಯ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿ ನಡೆದಿದೆ.

    ಹೈದ್ರಾಬಾದ್‍ನಲ್ಲಿ ವಾಸವಾಗಿದ್ದ ಚಂಡಕಾಪುರ ಗ್ರಾಮದ ನಿವಾಸಿ ಆಲೋಕ್ ಜಾಧವ್‌(35)  ಊರಿಗೆ ಬಂದಿದ್ದರು. ವಿಷಯ ತಿಳಿದ ದುಷ್ಕರ್ಮಿಗಳು ಹಳೆಯ ಹಗೆತನದಿಂದ ಮಾರಕಾಸ್ತ್ರಗಳನ್ನು ಬಳಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: 2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ 

    POLICE JEEP

    ಅದೇ ಗ್ರಾಮದ ಆರೋಪಿ ಅಂಬಾದಾಸ್ ಮತ್ತು ಅವರ ಗುಂಪಿನ ಜನರು ಆಲೋಕ್‍ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬಿಸಲಾಗಿದೆ.