Tag: old currency

  • 4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ

    4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ

    ಡೆಹ್ರಾಡೂನ್: ವಿಧಾನಸಭಾ ಚುನಾವಣೆಗೆ ಮುನ್ನ, ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಹರಿದ್ವಾರದಲ್ಲಿ ದಾಳಿ ನಡೆಸಿದೆ. ಈ ವೇಳೆ 4,50,00,000 ರೂ. ಮೌಲ್ಯದ ಹಳೆಯ ಕರೆನ್ಸಿಯೊಂದಿಗೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಎಸ್‍ಟಿಎಫ್ ಅವ್ಯಾವಹಾರ ನಡೆಯದಂತೆ ಎಲ್ಲ ಪಕ್ಷದವರ ಮೇಲೆ ಕಣ್ಣಿಟ್ಟಿದೆ. ಈ ವೇಳೆ ಎಸ್‍ಟಿಎಫ್ ಅಧಿಕಾರಿಗಳು ಹರಿದ್ವಾರದಲ್ಲಿ ಹಳೆ ಕರೆನ್ಸಿ ಇರುವುದರ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, 6 ಜನರು ಹಳೆ ನೋಟುಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    POLICE JEEP

    ಎಸ್‍ಟಿಎಫ್ ಹಿರಿಯ ಪೊಲೀಸ್ ಅಧೀಕ್ಷಕ(ಎಸ್‍ಎಸ್‍ಪಿ) ಅಜಯ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದಿರುವ ಮೂವರು ಹರಿದ್ವಾರದವರು ಮತ್ತು ಉಳಿದವರು ಉತ್ತರ ಪ್ರದೇಶದವರಾಗಿದ್ದಾರೆ. ಪ್ರಸ್ತುತ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಹೆಚ್ಚಿನ ತನಿಖೆ ಸಹ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ವಿಧಾನಸಭೆ ಚುನಾವಣೆ ಫೆಬ್ರವರಿ 14 ರಂದು ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪರಿಣಾಮ ಚುನಾವಣೆಗೆ ಪಕ್ಷಗಳು ಬಾರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ

  • ಬ್ಯಾನ್ ಆದ ನೋಟುಗಳ ಹಾಸಿಗೆ- 100 ಕೋಟಿ ರೂ. ಹಳೇ ನೋಟು ಜಪ್ತಿ!

    ಬ್ಯಾನ್ ಆದ ನೋಟುಗಳ ಹಾಸಿಗೆ- 100 ಕೋಟಿ ರೂ. ಹಳೇ ನೋಟು ಜಪ್ತಿ!

    ಕಾನ್ಪುರ: ಅಂದಾಜು 100 ಕೋಟಿ ರೂ. ಮೊತ್ತದ ಬ್ಯಾನ್ ಆದ ನೋಟುಗಳನ್ನ ಉತ್ತರಪ್ರದೇಶ ಪೊಲೀಸರು ಬುಧವಾರದಂದು ಕಾನ್ಪುರದಲ್ಲಿ ಜಪ್ತಿ ಮಾಡಿದ್ದಾರೆ.

    ಜಪ್ತಿ ಮಾಡಲಾಗಿರೋ ಹಣದ ನಿರ್ದಿಷ್ಟ ಮೊತ್ತವನ್ನು ತಿಳಿಯಲು ಎಣಿಕಾ ಕಾರ್ಯ ನಡೆಯುತ್ತಿದೆ. ಜಪ್ತಿಯಾಗಿರೋ ಹಣ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳಲ್ಲಿವೆ. ಕಾನ್ಪುರದ ಸೇಸಾಮೌ ಪಾಕೆಟ್‍ನಲ್ಲಿ ಈ ದಾಳಿ ನಡೆದಿದೆ.

    ಕೋಟಿಗಟ್ಟಲೆ ಬ್ಯಾನ್ ಆದ ನೋಟುಗಳು ಕಾನ್ಪುರ ನಿವಾಸಿಯೊಬ್ಬರ ಮನೆಯಲ್ಲಿದೆ ಎಂದು ನಮಗೆ ಮಾಹಿತಿ ಬಂದಿತ್ತು. ಆರ್‍ಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿತ್ತು. ಇನ್ನೂ ಶೋಧ ಕಾರ್ಯ ಹಾಗೂ ಎಣಿಕಾ ಕಾರ್ಯ ನಡೆಯುತ್ತಿರುವುದರಿಂದ ನಿಗದಿತ ಮೊತ್ತ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಸ್‍ಎಸ್‍ಪಿ ಎಕೆ ಮೀನಾ ಹೇಳಿದ್ದಾರೆ.

    ಕಂತೆ ಕಂತೆ ನೋಟುಗಳನ್ನ ಹಾಸಿಗೆಯಂತೆ ಜೋಡಿಸಿರುವ ಫೋಟೋ ಹಾಗೂ ವಿಡಿಯೋವನ್ನ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ನೋಟುಗಳ ಆರೋಪಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಐಟಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿತ್ತು.