Tag: old couple

  • Bengaluru | ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

    Bengaluru | ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

    ಬೆಂಗಳೂರು: ವೃದ್ಧಾಶ್ರಮಕ್ಕೆ (Old Age Home) ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.

    ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. ಕೃಷ್ಣಮೂರ್ತಿ (81), ರಾಧ (74) ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ವಯಸ್ಸಾದ ತಂದೆ ತಾಯಿಯನ್ನು ಮಗ ಕಳೆದ ತಿಂಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಾವು ಬೆಳೆಗೆ ಬೆಂಬಲ ಬೆಲೆ ಕೊಡಿಸಿದ್ದು ಕುಮಾರಣ್ಣ, ಡಿಕೆ ಬ್ರದರ್ಸ್ ಏನ್ಮಾಡ್ತಿದ್ದಾರೆ: ನಿಖಿಲ್‌ ಕಿಡಿ

    ಮಂಗಳವಾರ ಬೆಳಗಿನ ಜಾವ ದಂಪತಿ ಬಾಗಿಲು ತೆಗೆದಿರಲಿಲ್ಲ. ಅನುಮಾನಗೊಂಡ ಆಶ್ರಮದವರು ಬಾಗಿಲು ತೆಗೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಕುಲುವಿನಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ – ಉಕ್ಕಿ ಹರಿದ ಪಾರ್ವತಿ ನದಿ

  • ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

    ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

    ಬೆಂಗಳೂರು: ರಾಡ್‌ನಿಂದ (Rod) ಹೊಡೆದು ಮನೆಯಲ್ಲಿದ್ದ ವೃದ್ಧ ದಂಪತಿಯನ್ನು (Old Couple) ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ (Sulibele) ನಡೆದಿದೆ.

    ರಾಮಕೃಷ್ಣಪ್ಪ (70) ಹಾಗೂ ಮುನಿರಾಮಕ್ಕ (65) ಕೊಲೆಯಾದ ದಂಪತಿ. ಇನ್ನು ಆಸ್ತಿ (Property) ವಿಚಾರವಾಗಿ ಮಗ ತಂದೆ ತಾಯಿಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮಗ ನರಸಿಂಹನನ್ನು ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಾದಗಲಿನಿಂದಲೂ ನರಸಿಂಹ ತಂದೆ ತಾಯಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದು, ಒಬ್ಬನೇ ಮಗನಾದರೂ ತಂದೆ ತಾಯಿಯನ್ನು ಹೊರಗಿಟ್ಟಿದ್ದ. ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಬಸ್ ಅಪಘಾತ – 17 ಮಂದಿಗೆ ಗಾಯ

    ವೃದ್ಧ ದಂಪತಿಗೆ ಒಟ್ಟು 5 ಜನ ಮಕ್ಕಳಿದ್ದು, ಈ ಪೈಕಿ ನಾಲ್ಕು ಮಂದಿ ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗ. ಮದುವೆಯಾದಗಿನಿಂದ ನರಸಿಂಹಮೂರ್ತಿ ಬೇರೆ ಇದ್ದು, ತನ್ನ ಎಲ್ಲಾ ಮಕ್ಕಳನ್ನು ಸಾಕಿ ವೃದ್ಧ ದಂಪತಿ ಮದುವೆ ಮಾಡಿಕೊಟ್ಟಿದ್ದರು. ಹೆಣ್ಣು ಮಕ್ಕಳಿಗೆಲ್ಲಾ ಮದುವೆ ಮಾಡಿಕೊಡಲಾಗಿದೆ, ಇನ್ನು ಯಾವುದೇ ಆಸ್ತಿಯನ್ನು ಭಾಗ ಮಾಡುವಂತಿಲ್ಲ ಎಂದು ನರಸಿಂಹಮೂರ್ತಿ ಹೇಳುತ್ತಿದ್ದ. ಅಲ್ಲದೇ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ತನ್ನ ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ನೀಡಬೇಕು ಎಂದು ವೃದ್ಧ ದಂಪತಿ ಹೇಳುತ್ತಿದ್ದು, ಇದೇ ವಿಚಾರವಾಗಿ ಕಳೆದ ಶನಿವಾರ ಸಂಜೆ ನರಸಿಂಹಮೂರ್ತಿ ತಂದೆ ತಾಯಿ ವಾಸವಿದ್ದ ಮನೆಗೆ ಹೋಗಿದ್ದ. ಈ ವೇಳೆ ಜಗಳ ಮಾಡಿ ರಾಮಕೃಷ್ಣಪ್ಪನಿಗೆ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದು, ನಂತರ ತಾಯಿಯನ್ನು ದಾರುಣವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದಕ್ಕೆ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ

    ಕೊಲೆ ಮಾಡಿ ತಲೆ ಮರೆಸಿಕೊಳ್ಳದೆ ತನಗೆ ಏನು ತಿಳಿಯದ ಹಾಗೆ ನರಸಿಂಹಮೂರ್ತಿ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ. ಪ್ರತಿ ದಿನ ತನ್ನ ಹೆಣ್ಣುಮಕ್ಕಳಿಗೆ ವೃದ್ಧ ದಂಪತಿ ಕರೆ ಮಾಡುತ್ತಿದ್ದರು. ಆದರೆ ಶನಿವಾರದಿಂದ ಕರೆ ಮಾಡಿರಲಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಅನುಮಾನಗೊಂಡಿದ್ದು, ಕೊನೆಯ ಮಗಳು ಶಾಕುಂತಲ ಮನೆಯ ಬಳಿ ಬಂದು ನೋಡಿದ್ದಾರೆ. ಈ ವೇಳೆ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಕ್ಷಣ ಶಾಕುಂತಲ ತನ್ನ ತಂದೆ ತಾಯಿಗೆ ಕರೆ ಮಾಡಿದ್ದು, ಇಬ್ಬರ ನಂಬರ್ ಕೂಡಾ ಸ್ವಿಚ್‌ಆಫ್ ಆಗಿತ್ತು. ಈ ಹಿನ್ನೆಲೆ ಶಾಕುಂತಲ ಆತಂಕಗೊಂಡು ಸೂಲಿಬೆಲೆಯಲ್ಲಿ ಇರುವ ತನ್ನ ಅಕ್ಕನ ಮನೆಗೆ ಹೋಗಿ ಮರಳಿ ತಂದೆ ತಾಯಿಯ ಮನೆಯ ಬಳಿ ಬಂದಿದ್ದರು. ಇದನ್ನೂ ಓದಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿ – ದೇಶದಲ್ಲೇ ಬೆಂಗಳೂರು ನಂಬರ್ 1

    ಈ ವೇಳೆ ಮನೆಯ ಹೊರಗಿನ ಬಾತ್ ರೂಂ ಬೀಗ ಯಾರೋ ತೆರೆದಿರುವುದು ಗಮನಿಸಿದ ಅವರು, ತಕ್ಷಣ ಮನೆಯ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲ ಬಳಿಯೇ ತಂದೆಯ ಮೃತ ದೇಹ ಮತ್ತು ಅಡುಗೆ ಮನೆಯ ಬಳಿ ತಾಯಿಯ ಮೃತ ದೇಹ ನೋಡಿ ಶಾಕುಂತಲ ಶಾಕ್ ಆಗಿದ್ದು, ಸದ್ಯ ಆರೋಪಿ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ (Hoskote) ತಾಲೂಕಿನ ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಮಂಡ್ಯ ಬಸ್ ಹತ್ತುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

  • ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ

    ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ

    ಚಿತ್ರದುರ್ಗ: ಮನೆಯಲ್ಲಿದ್ದ ಇಬ್ಬರು ವೃದ್ಧ ದಂಪತಿಯ (Elderly Couple) ಕತ್ತು ಕೊಯ್ದು ಹತ್ಯೆಗೈದಿರುವ (Murder) ಕೃತ್ಯ ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.

    ನಗರದ ವಿನಾಯಕ ಬಡಾವಣೆಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ಮನೆಯಲ್ಲಿ ಇಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಮೃತರನ್ನು ಪ್ರಭಾಕರ್ ಶೆಟ್ರು (75) ವಿಜಯ ಲಕ್ಷ್ಮಿ (65) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಘಟನೆ ನಡೆದಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

    ವೃದ್ಧ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಚಿಕ್ಕನಾಯಕನಹಳ್ಳಿ ಹಾಗೂ ದಾವಣಗೆರೆಗೆ ಮದುವೆ ಮಾಡಿ ಕೊಟ್ಟಿದ್ದರು. ಮನೆಯಲ್ಲಿ ವೃದ್ಧ ದಂಪತಿ ಮಾತ್ರವೇ ವಾಸವಾಗಿದ್ದರು. ಹೊಸದುರ್ಗದಲ್ಲಿ ಅಡುಗೆ ಎಣ್ಣೆ ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್ ಶೆಟ್ರು ಮೇಲಿನ ವೈಯುಕ್ತಿಕ ದ್ವೇಷದಿಂದ ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ನನಗೆ ಸರ್ವಿಸ್‌ ಕೊಡ್ತೀರಾ, ದಿನಕ್ಕೆ 50 ಸಾವಿರ ರೂ. ಕೊಡ್ತೀನಿ – ಲೆಟರ್ ಬರೆದು ಮಹಿಳೆಗೆ ಲೈಂಗಿಕ ಕಿರುಕುಳ

    ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣ:
    ಹೊಸದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಹಗಲು ವೇಳೆ ಮನೆಗಳನ್ನು ನೋಡಿಕೊಂಡು ಪ್ಲಾನ್ ಮಾಡುವ ಕಳ್ಳರು ರಾತ್ರಿ ಸಮಯದಲ್ಲಿ ಬೀಗ ಹಾಕಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಒಂದು ವೇಳೆ ಅವರ ಕೃತ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ಹತ್ಯೆಗೈಯುತ್ತಾರೆ ಎಂಬ ಆತಂಕ ಇಲ್ಲಿನ ನಿವಾಸಿಗಳಲ್ಲಿದೆ. ಹೀಗಾಗಿ ಈ ಕೃತ್ಯಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಬೇಕೆಂಬ ಮನವಿ ಸ್ಥಳೀಯರಿಂದ ಕೇಳಿಬಂದಿದೆ. ಇದನ್ನೂ ಓದಿ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮೂರು ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು

    Live Tv
    [brid partner=56869869 player=32851 video=960834 autoplay=true]

  • 30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    ತಿರುವನಂತಪುರಂ: 30 ವರ್ಷದ ಹಳೆ ವೈಷಮ್ಯ ಹಿನ್ನೆಲೆ ಮಾಜಿ ಸೈನಿಕನೊಬ್ಬ ವೃದ್ಧ ದಂಪತಿಯ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ನಂತರ ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram) ನಡೆದಿದೆ.

    ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಭಾಕರ ಕುರುಪ್ ಮತ್ತು ಅವರ ಪತ್ನಿ ವಿಮಲಾ ಕುಮಾರಿ ಮೃತ ದುರ್ದೈವಿಗಲಾಗಿದ್ದು, ಆರೋಪಿಯನ್ನು ಶಶಿಧರನ್ ನಾಯರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ದಂಪತಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಘಟನೆ ವೇಳೆ ವೃದ್ಧ ದಂಪತಿಯಷ್ಟೇ ಮನೆಯಲ್ಲಿದ್ದರು ಎಂಬ ವಿಚಾರ ತಿಳಿದುಬಂದಿದೆ.

    ಘಟನೆಗೆ ಕಾರಣವೇನು?
    ಶಶಿಧರನ್ ನಾಯರ್ ಅವರ ಮಗ ಸುಮಾರು ಮೂವತ್ತು ವರ್ಷಗಳ ಹಿಂದೆ ಬಹ್ರೇನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಭಾಕರ ಕುರುಪ್ ಅವರು ಶಶಿಧರ್ ನಾಯರ್ ಅವರ ಮಗನಿಗೆ ವಿದೇಶಕ್ಕೆ ಹೋಗಲು ಸಹಾಯ ಮಾಡಿದ್ದರು. ಆದರೆ ಅವರು ಬಯಸಿದ ಕೆಲಸ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ನಂತರ ಆತ್ಮಹತ್ಯೆಗೆ ಶರಣಾದರು. ತಮ್ಮ ಮಗ ಸಾಯಲು ಪ್ರಭಾಕರ ಕುರುಪ್ ಕೂಡ ಕಾರಣ ಎಂದು ಶಶಿಧರನ್ ನಾಯರ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ : ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ಹಲವು ವರ್ಷಗಳ ಕಾಲ ಈ ಪ್ರಕರಣವನ್ನು ಎಳೆದಾಡಿದ್ದ ನ್ಯಾಯಾಲಯ ಶುಕ್ರವಾರ ಪ್ರಭಾಕರ್ ಕುರುಪ್ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಇದರಿಂದ ಆಕ್ರೋಶಗೊಂಡ ಶಶಿಧರ್ ನಾಯರ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಶನಿವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಯಿತು. ಈ ವೇಳೆ ವಿಮಲಾ ಕುಮಾರಿ ಅವರು ಪ್ರಭಾಕರ ಕುರುಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಶಶಿಧರ್ ನಾಯರ್ ಸುತ್ತಿಗೆಯಿಂದ ಇಬ್ಬರ ತಲೆಗೆ ಹೊಡೆದಿದ್ದಾನೆ. ಬಳಿಕ ದಂಪತಿ ಮೇಲೆ ಬಾಟಲಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಈ ವೇಳೆ ಮನೆಯಿಂದ ಬೆಂಕಿ ಹೊತ್ತಿ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜೊತೆಗೆ ಘಟನೆ ವೇಳೆ ಶಶಿಧರನ್‍ಗೂ ಸುಟ್ಟಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ- ನಿರ್ಮಾಣಗೊಂಡ 45 ದಿನಕ್ಕೆ ತಡೆಗೋಡೆ ಕುಸಿತ

    Live Tv
    [brid partner=56869869 player=32851 video=960834 autoplay=true]

  • ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು

    ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು

    ಹಾವೇರಿ: ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ವಂಗಿ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಪತಿ ಬಸಪ್ಪ ಕಂಬಳಿ(87) ತೀವ್ರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಪತ್ನಿ ದ್ಯಾಮವ್ವ ಬಸಪ್ಪನ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದಿದ್ದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

    ಈ ಜೋಡಿ ಐವತ್ತೈದು ವರ್ಷಗಳ ಕಾಲ ಒಟ್ಟಿಗೆ ಜೀವನ ಕಳೆದಿದ್ದು, ಇಲ್ಲಿವರೆಗೂ ಜಗಳವಾಡದೆ ದಾಂಪತ್ಯ ಜೀವನ ನಡೆಸಿದ್ದರು. ನಾಲ್ಕು ಜನ ಮಕ್ಕಳು, ಹನ್ನೊಂದು ಜನ ಮೊಮ್ಮಕ್ಕಳನ್ನು ಈ ದಂಪತಿ ಅಗಲಿದ್ದಾರೆ. ಇದನ್ನೂ ಓದಿ: ರಾಜಪಕ್ಸೆ ಪಲಾಯನ – ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ದಂಪತಿಯ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಕ್ರಿಯೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ವೃದ್ಧ ದಂಪತಿ ಡಬಲ್ ಮರ್ಡರ್ ಮಾಡಿದ್ದ ಮೂವರು ಅರೆಸ್ಟ್

    ವೃದ್ಧ ದಂಪತಿ ಡಬಲ್ ಮರ್ಡರ್ ಮಾಡಿದ್ದ ಮೂವರು ಅರೆಸ್ಟ್

    ಚಿಕ್ಕಬಳ್ಳಾಪುರ: ವೃದ್ಧ ದಂಪತಿಯನ್ನು ಮರ್ಡರ್ ಮಾಡಿದ್ದ ಮೂವರು ಆರೋಪಿತಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಫೆಬ್ರವರಿ 9 ರಂದು ಶಿಡ್ಲಘಟ್ಟ ನಗರದ ಶಾಮಣ್ಣ ಬಾವಿ ಬಳಿ ಬಟ್ಟೆ ವ್ಯಾಪಾರಿ ಶ್ರೀನಿವಾಸ್ ಹಾಗೂ ಅವರ ಪತ್ನಿ ಪದ್ಮಾವತಮ್ಮ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆಗೈಯ್ಯಲಾಗಿತ್ತು. ಮನೆ ಕೆಲಸದಾಕೆ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಮೇಲಿನ ಗವಾಕ್ಷಿ ಮೂಲಕವೂ ಕೊಲೆಗಾರರು ಬಂದಿರುವುದು ಗೊತ್ತಾಗಿತ್ತು. ಮನೆಯಲ್ಲಿದ್ದ ನಗದು, ಚಿನ್ನಾಭರಣ ವೃದ್ಧೆಯ ಕತ್ತಿನಲ್ಲಿದ್ದ ಸರ ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಒಂದು ಒಂದೂವರೆ ತಿಂಗಳು ಕಳೆದರೂ ಸಣ್ಣ ಸುಳಿವು ಸಿಕ್ಕರಲಿಲ್ಲ. ಇತ್ತೀಚೆಗೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊರ್ವನನ್ನು ಕುರಿ ಕಳುವು ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಈ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಬಳಿ ಹೆಚ್ಚಿನ ವಿಚಾರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಲ್ಲಿ ಶ್ರೀನಿವಾಸಪುರ ಮೂಲದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ 18 ವರ್ಷದ ಫೈಝ್ ಹಾಗೂ ಉಳಿದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.

    Chikkaballapura

    ಯಾಕೆ ಕೊಲೆ?
    ಮೂವರು ಆರೋಪಿಗಳಲ್ಲಿ ಓರ್ವ 18 ವರ್ಷದ ಯುವಕ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಫೈಜ್ ಆಗಿದ್ದರೆ, ಉಳಿದಿಬ್ಬರು ಅಪ್ರಾಪ್ತರಾಗಿದ್ದು, ಫೈಜ್‍ನ ಜೊತೆ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಂದಹಾಗೆ ಕೊಲೆಗೂ ಮುನ್ನ ಕೆರೆಗಳಲ್ಲಿ ಮೀನು ಹಿಡಿಯುವುದ್ದಕ್ಕೆಂದು ಶ್ರೀನಿವಾಸಪುರದಿಂದ ಶಿಡ್ಲಘಟ್ಟ ಕಡೆ ಬಂದಿದ್ದ ಆರೋಪಿಗಳು. ಒಂದು ವಾರ ಶಿಡ್ಲಘಟ್ಟ ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿದ್ದು, ಈ ವೇಳೆ ಬಟ್ಟೆ ವ್ಯಾಪಾರಿ ಶ್ರೀನಿವಾಸ್ ಮನೆ ಮೇಲೆ ಕಣ್ಣು ಹಾಕಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್

    Chikkaballapura

    ನಂತರ ಫೆಬ್ರವರಿ 9 ರಂದು ಮೂವರಲ್ಲಿ ಒಬ್ಬ ದಾರಿ ಕಾವಲು ಕಾಯುತ್ತಿದ್ದರೆ, ಮತ್ತಿಬ್ಬರಲ್ಲಿ ಓರ್ವ ಬಾಗಿಲು ಬಡಿದಿದ್ದು, ಬಾಗಿಲು ತೆಗೆದ ವೃದ್ದನನ್ನು ಬಲವಾಗಿ ಹೊಡೆದು ಕೆಳಗೆ ಬೀಳಿಸಿದ್ದ. ಅಷ್ಟರಲ್ಲಿ ಮನೆಯ ಮೇಲಿನ ಗವಾಕ್ಷಿ ಮೂಲಕ ಮನೆಗೆ ಇಳಿದಿದ್ದ ಮತ್ತೋರ್ವ ವೃದ್ದೆಗೆ ಬಲವಾಗಿ ಹೊಡೆದು ಕೆಳಗೆ ಬೀಳುವಂತೆ ಮಾಡಿದ್ದ. ಕಳ್ಳತನದ ವೇಳೆ ಇಬ್ಬರು ಜೋರಾಗಿ ಕಿರುಚಾಡಿದ ಕಾರಣ ಇಬ್ಬರನ್ನು ಬೇರೆ, ಬೇರೆ ಕಡೆ ಎಳೆದು ಹಾಕಿ ಹೊಡೆದು ಕೊಲೆ ಮಾಡಿದ್ದರು. ಕೊಲೆ ಮಾಡಿ ಮನೆಯಿಂದ 7,000ಕ್ಕೂ ಹೆಚ್ಚು ಹಣ ಹಾಗೂ 80 ಗ್ರಾಂ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ

  • ಡಬಲ್ ಮರ್ಡರ್‌ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ

    ಡಬಲ್ ಮರ್ಡರ್‌ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ

    – ಆರೋಪಿಗಳ ಪತ್ತೆಗೆ 4 ತಂಡ ರಚನೆ

    ಬೆಂಗಳೂರು: ಎಲ್ಲರೂ ಇಂದು ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ರು. ಪೂಜೆಗೆ ಅಂತ ಅಕ್ಕಪಕ್ಕದ ಮನೆಯವ್ರನ್ನ ಕರೆದುಕೊಂಡು ಹೆಣ್ಮಕ್ಕಳು ಓಡಾಡ್ತಿದ್ರು. ಈ ವೇಳೆ ಓರ್ವ ಜೋರಾಗಿ ಕಿರುಚುಕೊಂಡು ನಡು ರಸ್ತೆಗೆ ಓಡೋಡಿ ಬಂದಿದ್ದ. ಅಷ್ಟರಲ್ಲೇ ಮನೆಯಲ್ಲಿದ್ದ ಜನ ಎಲ್ಲಾ ಜಮಾಯಿಸಿದ್ರು. ಪೊಲೀಸರಿಗೆ ವಿಚಾರ ತಿಳಿದು ಸ್ಪಾಟ್‍ಗೆ ಬಂದಿದ್ರು. ಹಬ್ಬದ ಮೂಡ್‍ನಲ್ಲಿದ್ದ ಜನರಿಗೆ ಡಬಲ್ ಮರ್ಡರ್ ಪದ ಕಿವಿಗಪ್ಪಳಿಸಿತ್ತು.

    ಹೌದು. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿ ನಗರದಲ್ಲಿ ವೃದ್ಧ ದಂಪತಿಯ ಕೊಲೆ ನಡೆದಿದೆ. ಮೃತರನ್ನು ಪ್ರೇಮಲತಾ(61) ಶಾಂತರಾಜ್ ( 65) ಎಂದು ಗುರುತಿಸಲಾಗಿದೆ. ಶಾಂತ ರಾಜ್ ಬಿಎಂಟಿಸಿಯಲ್ಲಿ ಮೆಕಾನಿಕ್ ಆಗಿ ಸೇವೆ ಮಾಡಿದ್ದು ನಿವೃತ್ತಿ ಹೊಂದಿದ್ರು. ಇವರಿಗೆ ಎರಡು ಬಾಡಿಗೆ ಮನೆಯಿದ್ದು, ಬಂದ ಹಣದಲ್ಲಿ ದಂಪತಿ ಜೀವನ ನಡೆಸುತ್ತಿದ್ದರು. ದಂಪತಿಗೆ ಮಕ್ಕಳಿಲ್ಲವಾದ್ರು ಅನ್ಯೋನ್ಯವಾಗಿದ್ರು. ಹೀಗಿರುವಾಗ ಇಂದು ಮಧ್ಯಾಹ್ನ ದಂಪತಿ ಮನೆಗೆ ಬಂದ ಪರಿಚಿತ ಹಂತಕರು ಜೊತೆಯಲ್ಲೇ ಕಾಫಿ ಕುಡಿದು ಹರಟೆ ಹೊಡೆದಿದ್ದಾರೆ. ವೃದ್ಧೆ ಪ್ರೇಮಲತಾ ಕುತ್ತಿಗೆಗೆ ಕೇಬಲ್ ಬಿಗಿದು ಹತ್ಯೆ ಮಾಡಿದ್ದು, ಶಾಂತರಾಜುಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. 2 ಪ್ರತ್ಯೇಕ ರೂಮಿನಲ್ಲಿ ಮೃತದೇಹಗಳು ಪತ್ತೆಯಾಗಿದೆ. ಕೃತ್ಯದ ವೇಳೆ ತಪ್ಪಿಸಿಕೊಳ್ಳಲು ವೃದ್ಧ ದಂಪತಿ ಯತ್ನಿಸಿದ್ದು, ದಿಂಬಿನಿಂದ ಮುಖ ಮುಚ್ಚಿ ಕೊಲೆಗೈಯಲಾಗಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಮಿಷನರ್ ಕಮಲ್ ಪಂಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಮನೆಯಲ್ಲಿ ಪರಿಶೀಲಿಸಿದ ಬಳಿಕ ಮಾತನಾಡಿದ ಕಮಿಷನರ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಲ್ಕು ತಂಡ ರಚನೆ ಮಾಡಿ ತನಿಖೆ ನಡೆಸಲು ಸೂಚಿಸಿದ್ದೇನೆ. ಮನೆಯಲ್ಲಿ ಅಲ್ಮೆರಾ ಓಪನ್ ಆಗಿದೆ. ಇವರು ಅಷ್ಟೂ ಏನೂ ಶ್ರೀಮಂತರಲ್ಲ. ಮನೆಯೊಳಗಿನ ದೃಶ್ಯ ನೋಡಿದ್ರೆ ಯಾರೋ ಗೊತ್ತಿರುವವರೇ ಮಾಡಿದ್ದಾರೆ. ಎಫ್ ಎಸ್ ಎಲ್ ಮತ್ತು ಡಾಗ್ ಸ್ಕ್ವಾಡ್ ನಿಂದ ಎವಿಡೆನ್ಸ್ ಕಲೆಕ್ಟ್ ಮಾಡಲಾಗುತ್ತಿದೆ. ಇಬ್ಬರೇ ಮನೆಯಲ್ಲಿದ್ರು, ಅವರ ರಿಲೇಟಿವ್ಸ್ ಬಳಿಯೂ ಮಾಹಿತಿ ಕಲೆ ಹಾಕ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧನ ಮಾಡ್ತೀವಿ ಅಂತ ಹೇಳಿದ್ರು.

    ಸದ್ಯ ಕೆಎಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಜೊತೆಗೆ ಮೃತ ವೃದ್ದ ದಂಪತಿಯ ಸಂಬಂದಿಕರನ್ನ ಸಂಪರ್ಕಿಸಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಲಿದ್ದಾರೆ. ಅದೇನೇ ಇರಲಿ ಹಾಡುಹಗಲೇ ಹಬ್ಬದ ದಿನ ಜನಸಂದಣಿ ಇರೋ ಸ್ಥಳದಲ್ಲೇ ಜೋಡಿ ಕೊಲೆ ಆಗಿರೋದು ಸ್ಥಳೀಯರಿಗೆ ಭಯವನ್ನುಂಟು ಮಾಡಿದೆ.

  • ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ದೇವಸ್ಥಾನ, ಮನೆಯಲ್ಲಿ ಕಳ್ಳರ ಕೈಚಳಕ -ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪಾರಾರಿ

    ಮಂಡ್ಯ/ಮೈಸೂರು/ಕೊಪ್ಪಳ: ದಿನೆ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಡ್ಯ, ಮೈಸೂರು ಹಾಗೂ ಕೊಪ್ಪಳದಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೆ.ಎಸ್.ನಗರ ಬಡಾವಣೆಯಲ್ಲಿ ಜರುಗಿದೆ. ಕೊಪ್ಪ ಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕುಮಾರ್ ಹಾಗೂ ಅವರು ಕುಟುಂಬ ಸದಸ್ಯರು ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರಿನ ಹುಣಸೂರಿನಲ್ಲಿ ವೃದ್ಧ ದಂಪತಿಯ ಹಲ್ಲೆ ನಡೆಸಿ ನಗದು ಹಾಗೂ ಆಭರಣ ದೋಚಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಪೊಲೀಸರು 6 ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ಮೋಸಿನ್, ಹುಣಸೂರಿನ ಇಮ್ರಾನ್, ಮಿರ್ಜಾ ತಸ್ವೀರ್ ಬೇಗ್, ಕುಶಾಲನಗರದ ಅಫ್ರಿನ್, ಮಡಿಕೇರಿ ತಾಲೂಕು ಮೇಕೇರಿ ಗ್ರಾಮದ ಅಶಿಕ್ ಹುಸೇನ್ ಮತ್ತು ಮಡಿಕೇರಿ ಪಟ್ಟಣದ ಮಹಮ್ಮದ್ ಅಜರುದ್ದೀನ್ ಬಂಧಿತರು.

    ಜುಲೈ 26 ರಂದು ಸಂಜೆ ಹುಣಸೂರು ಪಟ್ಟಣ ನಿವಾಸಿ ಗಜಾಲಾ ತರಾನಮ್ ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದಾಗ, ದುಷ್ಕರ್ಮಿಗಳು ಕಾಲಿಂಗ್ ಬೆಲ್ ಮಾಡಿದ್ದಾರೆ. ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿದ್ದ ಅಪರಿಚಿತರು 36 ಲಕ್ಷ ನಗದು ಮತ್ತು 500 ಗ್ರಾಂ ತೂಕದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಆರೋಪಿಗಳು 20 ರಿಂದ 35 ವರ್ಷ ಒಳಗಿನವರಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

    ಆರೋಪಿಗಳಲ್ಲಿ ಮಿರ್ಜಾ ತನ್ವೀರ್ ಬೇಗ್ ಎಂಬವನು ಹುಣಸೂರಿನಲ್ಲಿ ನಡೆದ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣ ಮತ್ತು ತ್ಯಾಗರಾಜ ಪಿಳ್ಳೆ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಅಫ್ರಿನ್ ಎಂಬಾತ ಕುಶಾಲನಗರದ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

    ಕೊಪ್ಪಳ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಾಲಯದ ಹುಂಡಿ, ದೇವರ ಮೂರ್ತಿ ಹಾಗೂ ಅಲ್ಲಿಯ ಆಭರಣಗಳನ್ನೂ ಸಹ ಬಿಡದೇ ಕಳ್ಳರು ದೋಚಿರುವ ಘಟನೆ ನಡೆದಿದೆ. ಕಳ್ಳತನದ ಮೊದಲು ಆರೋಪಿಗಳು ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮೆರಾದ ಕನೆಕ್ಷನ್ ಡಿಸ್ ಕನೆಕ್ಟ್ ಮಾಡಿರುವ ಬಗ್ಗೆ ಪರಿಶೀಲನೆ ವೇಳೆ ಕೊಪ್ಪಳ ನಗರ ಠಾಣೆಯ ಪೊಲೀಸರಿಗೆ ತಿಳಿದುಬಂದಿದೆ. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಸಣ್ಣ ಬೆಟ್ಟದ ಮೇಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವು ಸುಂದರ ಹಾಗೂ ಪ್ರಶಾಂತವಾಗಿದೆ. ಈ ದೇವಸ್ಥಾನವು ಬೆಟ್ಟದಲ್ಲಿದ್ದು, ಬೆಟ್ಟದ ಕೆಳಗೆ ಮನೆಗಳಿವೆ. ಸಂಜೆ ವೇಳೆ ಇಲ್ಲಿ ಜನರ ಸಂಚಾರ ಕಡಿಮೆ, ಇಂತಹ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

    ಮೊದಲಿಗೆ ದೇವಸ್ಥಾನಕ್ಕೆ ಅಳವಡಿಸಿದ್ದ ಸಿಸಿಟಿವಿ ವೈಯರನ್ನು ಡಿಸ್‍ ಕನೆಕ್ಟ್ ಮಾಡಿದ ಕಳ್ಳರು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಬಳಿಕ ಅರ್ಧ ಕೆಜಿ ತೂಕದ ದೇವರ ವಿಗ್ರಹ, ದೇವರಿಗೆ ಹಾಕಿದ್ದ 15 ತೊಲ ಬಂಗಾರದ ಆಭರಣವನ್ನು ಕದ್ದಿದ್ದಾರೆ. ಇದೇ ವೇಳೆ ದೇವರ ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿಯನ್ನು ಕದ್ದಿದ್ದಾರೆ. ದೇವರ ಹುಂಡಿಯನ್ನು ದೇವಸ್ಥಾನದಿಂದ ಹೊರ ತಂದು ಹುಂಡಿ ಒಡೆದು ಚಿಲ್ಲರೆ ಹಣ ಅಲ್ಲಿಯೇ ಬಿಟ್ಟು ನೋಟುಗಳನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ನಂತರ ಕೊಪ್ಪಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ಅವಕಾಶ ಕೊಟ್ರೆ ಕೆಲಸ ಮಾಡ್ತೀನಿ: ನಿರಂಜನ್ ಕುಮಾರ್

  • ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ವೃದ್ಧ ವ್ಯಾಪಾರಸ್ಥ ದಂಪತಿಗೂ ತಟ್ಟಿದೆ. ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆಂದು ಬಂದ ವೃದ್ಧ ದಂಪತಿ ವಾಹನ ಸಿಗದೆ ಪರದಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ವೃದ್ಧರು ಮರಳಿ ತಮ್ಮೂರಿಗೆ ಹೋಗಲಾಗದೇ 2 ದಿನಗಳಿಂದ ಪರದಾಡುತ್ತಿರುವ ಸ್ಥಿತಿ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರದಂದು ಕಸಬಾರಿಗೆ, ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕೆಂದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದರು. ನಿನ್ನೆಯೇ ಇಳಕಲ್ ಗೆ ಹೋಗಬೇಕಿತ್ತು. ಆದರೆ 2 ದಿನಗಳಿಂದ ಬಸ್ ಇಲ್ಲದಕ್ಕೆ ಇಳಕಲ್ ಹೋಗಲಾಗದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಖಾಸಗಿ ವಾಹನಗಳ ದುಪ್ಪಟ್ಟು ಹಣಕ್ಕೆ ಬೇಸತ್ತಿದ್ದಾರೆ. ಗದಗದಿಂದ ಗಜೇಂದ್ರಗಡಕ್ಕೆ 300 ರೂಪಾಯಿ ಹಣ ಕೇಳುತ್ತಿದ್ದಾರೆ. ಗಜೇಂದ್ರಗಡದಿಂದ ಮುಂದೆ ಇಳಕಲ್ ಗೆ ಹೋಗಬೇಕು. ಅಲ್ಲಿ ಎಷ್ಟು ಹಣ ಕೇಳುತ್ತಾರೋ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು ಎಂದು ಸರ್ಕಾರ ಹಾಗೂ ಸಾರಿಗೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಲಾಕ್‍ಡೌನ್, ಬೆಲೆ ಏರಿಕೆ ಮಧ್ಯೆ ದುಡಿದ ಹಣ ಖಾಸಗಿ ವಾಹನಕ್ಕೆ ಕೊಡುವ ಸ್ಥಿತಿ ಬಂತಲ್ಲಾ ಅಂತ ಗೋಳಾಡಿದರು.

  • ಹೆಣ್ಣು ಮಗುವಿನ ತಂದೆಯಾದ 80ರ ಅಜ್ಜ

    ಹೆಣ್ಣು ಮಗುವಿನ ತಂದೆಯಾದ 80ರ ಅಜ್ಜ

    ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ 80ರ ಅಜ್ಜ ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಸೋಮವಾರ ಅಜ್ಜನ 65 ವರ್ಷದ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜೊತೆ ಹಿರಿಯ ದಂಪತಿ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

    80 ವರ್ಷದ ಹಕೀಮ್ ಧಮ್ ತಂದೆಯಾದ ಅಜ್ಜ. ಪೂಂಛ್ ಜಿಲ್ಲೆಯ ಕೆಸೈಲಾದ ಸುರನ್‍ಕೋಟ್ ನಿವಾಸಿಯಾಗಿರುವ ಹಕೀಮ್ ಸೋಮವಾರ ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

    65ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಹಕೀಮ್ ಪತ್ನಿ ಜಮ್ಮು ಕಾಶ್ಮೀರ ಹಿರಿಯ ಅಮ್ಮ ಎನಿಸಿಕೊಂಡಿದ್ದಾರೆ. ದಂಪತಿಗೆ 10 ವರ್ಷದ ಓರ್ವ ಮಗನಿದ್ದು, ಎರಡನೇ ಬಾರಿ ಪೋಷಕರಾದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯವಾಗಿ 47ನೇ ವಯಸ್ಸಿನವರೆಗೂ ಮಹಿಳೆಯರು ತಾಯಿ ಆಗುತ್ತಾರೆ. ಆದ್ರೆ ಇದೊಂದು ಅಪರೂಪದ ಪ್ರಕರಣ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.