Tag: old aged home

  • ಅನಾಥ ಹಿರಿಜೀವಗಳಿಗೆ ಆಸರೆಯಾದ ಕುಂದಾಪುರದ ರಂಜಿತ್‌ ಶೆಟ್ಟಿ

    ಅನಾಥ ಹಿರಿಜೀವಗಳಿಗೆ ಆಸರೆಯಾದ ಕುಂದಾಪುರದ ರಂಜಿತ್‌ ಶೆಟ್ಟಿ

    ಬೆಂಗಳೂರು/ಉಡುಪಿ: ತಂದೆ-ತಾಯಿಗೆ ವಯಸ್ಸಾಯ್ತು ಅಂತಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ 23ರ ತರುಣ ವೃದ್ಧಾಶ್ರಮವನ್ನ ಕಟ್ಟಿ ಬೀದಿಯಲ್ಲಿ ಬಿದ್ದಿದ್ದವರನ್ನ ತಂದು ನೋಡಿಕೊಳ್ಳತ್ತಿದ್ದಾರೆ.

    ಮೂಲತಃ ಕುಂದಾಪುರದವರಾದ ರಂಜಿತ್ ಶೆಟ್ಟಿ (Ranjith Shetty Kundapura) ಬಾಲ್ಯದಲ್ಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದು ನಾನಾ ಕಡೆ ಕೆಲಸ ಮಾಡಿ, ಬೀದಿಯಲ್ಲೇ ಜೀವನ ಕಳೆದ್ದಿದ್ದರು. ಆದರೆ ತಾನು ಆ ದಿನಗಳಲ್ಲಿ ಬೀದಿಯಲ್ಲಿ ಅನುಭವಿಸಿದ್ದ ನೋವು, ಹಸಿವು, ಸಂಕಟ ಯಾರಿಗೂ ಬರಬಾರದು ಅನ್ನೋ ಉದ್ದೇಶದಿಂದ ಈಗ ತಾನೇ ಒಂದು ವೃದ್ದಾಶ್ರಮವನ್ನ ನಡೆಸುತ್ತಿದ್ದಾರೆ.

    ಬೆಂಗಳೂರಿನ ಕೆಂಗೇರಿ (Kengeri Bengaluru) ಬಳಿಯ ಚಿಕ್ಕಬಸ್ತಿಯಲ್ಲಿ ಒಂದು ಮನೆ ಮಾಡಿ ಸರಿಸುಮಾರು ಎರಡೂವರೆ ವರ್ಷಗಳಿಂದ ವಯೋವೃದ್ಧರ ಆರೈಕೆ ಮಾಡುತ್ತಿದ್ದಾರೆ. ತಮ್ಮ ಆಶ್ರಮಕ್ಕೆ ‘ಆರೈಕೆ’ (Aaraike) ಎಂದೇ ಹೆಸರಿಟ್ಟಿರೋ ಅವರು ಈಗ ತನ್ನ ಸಂಪಾದನೆಯನ್ನ ಅನಾಥರಾಗಿ ರಸ್ತೆಯಲ್ಲಿ ಇರೋ ವಯೋವೃದ್ದರಿಗೆ ಮೀಸಲಿಟ್ಟಿದ್ದಾರೆ. ತನ್ನದೇ ಆದ ಬೇಕರಿ ಮತ್ತು ಹೋಟಲ್ ಉದ್ಯೋಗ ನಡೆಸುತ್ತಿರುವ ರಂಜಿತ್ ದುಡಿಮೆಯಲ್ಲಿ ಬಂದ ಲಾಭವನ್ನ ಆಶ್ರಮಕ್ಕೆ ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    ಒಟ್ಟಿನಲ್ಲಿ 23 ವರ್ಷಕ್ಕೆ ಹೀಗೆ ಜನರ ಸೇವೆ ಮಾಡಬೇಕು ಅನ್ನೋ ಮನಸ್ಸು ಯಾರಿಗೆ ಬರುತ್ತೆ ಹೇಳಿ, ತಂದೆ ತಾಯಿಯನ್ನೇ ನೋಡಿಕೊಳ್ಳೋದು ಕಷ್ಟ ಅಂತದ್ರಲ್ಲಿ ಈ ಆರೈಕೆ ಕೇಂದ್ರದಲ್ಲಿ ಬರೋಬ್ಬರಿ 40 ಜನರನ್ನ ರಂಜಿತ್ ತಮ್ಮ ಸ್ವಂತ ತಂದೆತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧಾಶ್ರಮದ ಹೆಸರಿನಲ್ಲಿ ಆಸ್ತಿ ಕಬಳಿಸಲು ನಿವೃತ್ತ ಪಿಎಸ್‍ಐಯನ್ನೇ ಕಿಡ್ನಾಪ್ ಮಾಡಿದ್ರು!

    ವೃದ್ಧಾಶ್ರಮದ ಹೆಸರಿನಲ್ಲಿ ಆಸ್ತಿ ಕಬಳಿಸಲು ನಿವೃತ್ತ ಪಿಎಸ್‍ಐಯನ್ನೇ ಕಿಡ್ನಾಪ್ ಮಾಡಿದ್ರು!

    ತುಮಕೂರು: ಸಮಾಜದಲ್ಲಿ ನೊಂದಿರುವ ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಸಂತಸದಿಂದ ಕಾಲ ಕಳೆಯುವಂತೆ ಆಗಲಿ. ಹಣದ ಅಮಲಿನಲ್ಲಿ ತೇಲುವ ಮಕ್ಕಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಇಲ್ಲಾದ್ರು ನೆಮ್ಮದಿ ಜೀವನ ಸಿಗಲಿ ಅಂತ ವೃದ್ಧಾಶ್ರಮಗಳನ್ನು ಮಾಡ್ತಾರೆ.

    ಆದ್ರೆ ಮಾಜಿ ಗೃಹ ಸಚಿವರೊಬ್ಬರ ಜಿಲ್ಲೆಯಲ್ಲೊಂದು ಉಲ್ಟಾ ಕೇಸ್. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಎನ್ ಗೋಪಾಲಯ್ಯ ಎಂಬವರು ಬೆಂಗಳೂರಿನ ಎಮ್‍ಎಸ್ ಬಿಲ್ಡಿಂಗ್‍ನಲ್ಲಿರುವ ಸಹಕಾರಿ ಇಲಾಖೆ ಉಪ ಕಾರ್ಯದರ್ಶಿ. ಆಸ್ತಿ ಕಬಳಿಸುವ ಉದ್ದೇಶದಿಂದ ವೃದ್ಧಾಶ್ರಮ ನಡೆಸುವ ನಾಟಕ ಮಾಡ್ತಿದ್ದಾರೆ ಅನ್ನೋ ಆರೋಪ ಎದುರಾಗಿದೆ.

    ಗೋಪಾಲಯ್ಯ ಶಿರಾ ಪಟ್ಟಣದ ನಿವೃತ್ತ ಪಿಎಸ್‍ಐ ನರಸಿಂಹಯ್ಯರನ್ನು ಕಿಡ್ನಾಪ್ ಮಾಡಿ ಆಸ್ತಿ ಬರೆಸಿಕೊಳ್ಳಲು ಸಂಚು ರೂಪಿಸಿದ್ದಾರೆ ಅಂತ ಸ್ವತಃ ನರಸಿಂಹಯ್ಯ ಪತ್ನಿ ತಿಪ್ಪಮ್ಮ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನನ್ನ ಗಂಡನ ಬಳಿ 60 ಕೋಟಿಗೂ ಹೆಚ್ಚು ಆಸ್ತಿ ಇದ್ದು, ನಿವೃತ್ತ ಜೀವನ ನಡೆಸುವ ಉದ್ದೇಶದಿಂದ 9 ಎಕರೆ ಜಮೀನು ಖರೀದಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 3 ಎಕರೆ ಜಮೀನು ಗೋಪಾಲಯ್ಯನೇ ಬರೆಸಿಕೊಂಡಿದ್ದು, ಇನ್ನುಳಿದ ಜಮೀನು ಕಬಳಿಸುವ ಪ್ಲಾನ್ ಮಾಡಿದ್ದಾರೆ ಅಂತ ಪತ್ನಿ ದೂರಿನಲ್ಲಿ ಹೇಳಿದ್ದಾರೆ.

    ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸಲು 3 ಎಕರೆ ದಾನ ಕೊಡಿ ಎಂದು ದುಂಬಾಲು ಬಿದ್ದ ಗೋಪಾಲಯ್ಯ, ಅನಾಥಾಶ್ರಮದ ಬದಲು ತನ್ನ ಮಗಳು ಹಾಗೂ ಮಗನ ಹೆಸರಿಗೆ 3 ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ. ನರಸಿಂಹಯ್ಯ ಕಟ್ಟಿಸಿದ ಮನೆಯಿಂದ ಅವರನ್ನೇ ಹೊರಹಾಕಿ ತನ್ನ ಮಗಳ ಹೆಸರಿಗೆ ಮನೆ ಖಾತೆ ಮಾಡಿಸಿಕೊಂಡಿದ್ದಾರೆ. 8 ಜನ ಮಕ್ಕಳ ನಡುವೆಯೇ ವೈಷಮ್ಯ ತಂದಿಟ್ಟು ಆಸ್ತಿ ಲಪಟಾಯಿಸುವ ಯತ್ನ ನಡೆಸಿದ್ದಾರಂತೆ.

    ಡಿಎಸ್‍ಎಸ್ ಮುಖಂಡ ಭರತ್ ಕುಮಾರ್ ಸಹಕಾರಿ ಇಲಾಖೆ ಉಪಕಾರ್ಯದರ್ಶಿ 420 ಕೆಲಸಕ್ಕೆ ಸಾಥ್ ನೀಡುತ್ತಿದ್ದಾನೆ. ಗ್ಯಾಂಗ್ರಿನ್‍ನಿಂದ ಬಳಲುತ್ತಿದ್ದ ನರಸಿಂಹಯ್ಯರ ಕಾಲು ತೆಗೆಯಲಾಗಿತ್ತು. ಕಿಡ್ನ್ಯಾಪ್ ಆಗಿದ್ದಾರೆ ಅಂತ ದೂರು ಕೊಟ್ರೂ ಕಾನೂನು ಸಚಿವರ ಜಿಲ್ಲೆಯ ಖಾಕಿಗಳು ಕೈ ಕಟ್ಟಿ ಕುಳಿತಿದ್ದಾರೆ ಅನ್ನೋದು ವೃದ್ಧ ಪತ್ನಿ ಮತ್ತು ಮಕ್ಕಳ ಆರೋಪವಾಗಿದೆ.