Tag: Old age man

  • ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ – ಹಿರಿಯ ನಾಗರಿಕ ಅಂದರ್

    ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ – ಹಿರಿಯ ನಾಗರಿಕ ಅಂದರ್

    ಹೈದರಾಬಾದ್: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 72 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೈದರಾಬಾದ್‍ನ ಕಾನೂನು ಪುಸ್ತಕಗಳ ಲೇಖಕ ಹಾಗೂ ಪ್ರಕಾಶಕನಾಗಿರುವ ಗಾದೆ ವೀರಾ ರೆಡ್ಡಿ ಬಂಧಿತ ಆರೋಪಿ.

    ಸಂತ್ರಸ್ತ ಬಾಲಕಿಯ ತಾಯಿ ಆರೋಪಿಯ ಮನೆಯಲ್ಲಿ ಕೆಲಸದ ಆಳಾಗಿದ್ದಳು. ಹೀಗಿರುವಾಗ ವೀರಾ ರೆಡ್ಡಿ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ತಾಯಿ ಆಕೆಯನ್ನು ಸಹೋದರನ ಮನೆಯಲ್ಲಿ ಬಿಟ್ಟು ಊರಿಗೆ ಹೋದಾಗಲೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಕ್ಕೆ ಕಾದು ಕುಳಿತು ನಂತರ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ

    ಸಂತ್ರಸ್ತ ಬಾಲಕಿ ಘಟನೆಯ ಬಗ್ಗೆ ತಾಯಿಗೆ ತಿಳಿಸಿದ್ದು, ಮೀರ್‍ಪೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆರೋಪಿ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕಿದ್ದ. ಇಲ್ಲವಾದಲ್ಲಿ ಕಿರಿಕುಳದ ಆರೋಪದಲ್ಲಿ ತಮ್ಮ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ

    ಆರೋಪಿ ಗಾದೆ ವೀರಾ ರೆಡ್ಡಿ ಮೇಲೆ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಮೀರ್‍ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲೇ ಇದ್ದ ಚಿಕ್ಕಬಳ್ಳಾಪುರ ವೃದ್ಧನಿಗೂ ಕೊರೊನಾ ಸೋಂಕು

    ಮನೆಯಲ್ಲೇ ಇದ್ದ ಚಿಕ್ಕಬಳ್ಳಾಪುರ ವೃದ್ಧನಿಗೂ ಕೊರೊನಾ ಸೋಂಕು

    ಚಿಕ್ಕಬಳ್ಳಾಪುರ: ಮನೆಯಲ್ಲೇ ಇದ್ದ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಡಿದ್ದು, ಇದು ಚಿಕ್ಕಬಳ್ಳಾಪುರ ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಇದುವೆರಗೂ ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜನ ನೆಮ್ಮದಿಯಿಂದ ಇದ್ದರು. ಆದರೆ ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಸ್ಟೀಲ್ ಪಾತ್ರೆಗಳ ವ್ಯಾಪಾರಿಯಾದ ವೃದ್ಧನಿಗೆ ಸೋಂಕು ಹೇಗೆ ತಗುಲಿತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

    ಸದ್ಯ ವೃದ್ಧನ ಪತ್ನಿ(52), ಮೊದಲ ಮಗ(38), ಎರಡನೇ ಮಗ(26) ಹಾಗೂ ಮೂರನೇ ಮಗ(24) ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೊದಲೇ ಅಸ್ತಮಾ, ಬಿಪಿ ಹಾಗೂ ಸಕ್ಕರೆ ಖಾಯಿಲೆಯಿಂದ ವೃದ್ಧ ಬಳಲುತ್ತಿದ್ದರು ಈ ಮಧ್ಯೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.

    ಮೊದಲೇ ಗೌರಿಬಿದನೂರಿನ 12 ಪ್ರಕರಣಗಳಿಂದ ರೆಡ್ ಝೋನ್ ಪಟ್ಟಿಗೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಮತ್ತಷ್ಟು ಕೊರೊನಾ ಸೋಂಕಿತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲಿ ವೃದ್ಧನ 06 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿ ನಿಗಾ ಇಡಲಾಗಿದೆ. ಆದರೆ ವೃದ್ಧನಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋದು ಜಿಲ್ಲಾಡಳಿತಕ್ಕೂ ತಲೆನೋವು ತಂದಿದೆ. ಆಸಲಿಗೆ ಈ ವೃದ್ಧ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ, ಸೋಂಕಿತ ಪ್ರದೇಶಗಳಿಗೂ ಭೇಟಿ ಮಾಡಿಲ್ಲ. ಹೀಗಾಗಿ ಹೇಗೆ ಸೋಂಕು ತಗುಲಿತು ಅನ್ನೋದು ಮತ್ತಷ್ಟು ಆತಂಕ ಹೆಚ್ಚಿಸಿದೆ.