Tag: olavina nildana

  • ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ನ್ನಡದ ಸಿನಿಮಾರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದ ಆದಿ ಲೋಕೇಶ್ (Adi Lokesh) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ಟಿವಿ ಪರದೆಗೆ ಖಡಕ್ ವಿಲನ್ ಆದಿ ಲೋಕೇಶ್ ಅವರು ಮರಳಿದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ‘ಪೂಜಾರಿ’ (Poojari) ಸಿನಿಮಾದಲ್ಲಿ ನೀತುಗೆ ನಾಯಕನಾಗಿ ಆದಿ ಲೋಕೇಶ್ ನಟಿಸಿದ್ದರು. ಆದರೆ ಹೀರೋಗಿಂತ ಖಳನಟನ ಪಾತ್ರಗಳು ಅವರ ಕೈ ಹಿಡಿದಿತ್ತು. ಕನ್ನಡದ ಸಾಕಷ್ಟು ಸ್ಟಾರ್ ನಟರಿಗೆ ವಿಲನ್ ಆಗಿ ಆದಿ ಲೋಕೇಶ್ ಅಬ್ಬರಿಸಿದ್ದರು. ಕೊರೋನಾ ಬಳಿಕ ಗರುಡ, ಚಾಂಪಿಯನ್‌, ಪ್ರಭುತ್ವ, ಸೇರಿದಂತೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಮಿಂಚಿದ್ದರು. ಈಗ ‘ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ಪವಿತ್ರಾ ಲೋಕೇಶ್‌ ಸಹೋದರ, ಆದಿ ಟಿವಿ ಪರದೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಬಿಗ್‌ ಬಾಸ್‌ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.

    ಸಿನಿಮಾದಲ್ಲಿ ಒಳ್ಳೆಯ ಅವಕಾಶವಿದ್ದರೂ ಈ ಸೀರಿಯಲ್‌ ಒಪ್ಪಿಕೊಂಡಿಡ್ಯಾಕೆ ಅಂತಾ ಆದಿ ಲೋಕೇಶ್‌ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ನಾಯ್ಡು ಅವರು ನನ್ನ ಒಳ್ಳೆಯ ಸ್ನೇಹಿತೆ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಲು ಹೇಳಿದಾಗ ಖುಷಿಯಿಂದ ಒಪ್ಪಿಕೊಂಡೆ, ನನ್ನ ಪಾತ್ರ ಕೂಡ ಚೆನ್ನಾಗಿದೆ. ಡಿಫರೆಂಟ್‌ ಎಂದು ಎನಿಸಿದಕ್ಕೆ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಶ್ರುತಿ ನಾಯ್ಡು ಅವರ ತಂಡ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಈ ಸೀರಿಯಲ್‌ನ ನನ್ನ ಮೊದಲ ಪ್ರೋಮೋ ನೋಡಿ ತುಂಬಾ ಇಷ್ಟ ಆಯ್ತು. ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡಿ ತೋರಿಸಿದ್ದಾರೆ. ಅದರಲ್ಲಿ ಅವರ ಶ್ರಮ ಕಾಣ್ತಿದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ. ಇದರಲ್ಲಿ ನನ್ನ ವಿಶೇಷ ಪಾತ್ರ, ಸೀರಿಯಲ್‌ ನೋಡಿ ನಿಮಗೆ ಅಚ್ಚರಿ ಮೂಡಿಸುತ್ತೆ. ತುಂಬಾ ಟ್ವಿಸ್ಟ್‌ ಇದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ.

    ಶ್ರುತಿ ನಾಯ್ಡು (Shruti Naidu) ನಿರ್ಮಾಣದ ಸೀರಿಯಲ್ ‘ಒಲವಿನ ನಿಲ್ದಾಣ’ವು 300 ಎಪಿಸೋಡ್‌ಗಳನ್ನ ಪೂರೈಸಿದೆ. ತಾರಿಣಿ- ಸಿದ್ಧಾಂತ್ ಕಥೆ ಫ್ಯಾನ್ಸ್ ಖುಷಿ ಕೊಟ್ಟಿದೆ. ಈ ಕಥೆಯಲ್ಲಿ ಹೊಸ ಟ್ವಿಸ್ಟ್ ಕೊಡೊದಕ್ಕೆ ಆದಿ ಲೋಕೇಶ್ ಎಂಟ್ರಿಯಾಗಿದೆ. ಪ್ರೋಮೋ ಕೂಡ ರಿವೀಲ್ ಆಗಿದೆ. ಖಡಕ್ ಆಗಿ ಆದಿ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಪ್ರೋಮೊಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ನಟ ಆದಿ ರೋಲ್ ಜುಲೈ 20ರ ಸಂಜೆ 6ಕ್ಕೆ ಪ್ರಸಾರವಾಗಲಿದೆ.

    ಈ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಆದಿ ಲೋಕೇಶ್ ನಟಿಸುತ್ತಿದ್ದಾರೆ. ತಾರಿಣಿ- ಸಿದ್ಧಾಂತ್ ಬದುಕಿನಲ್ಲಿ ಏನೆಲ್ಲಾ ಟ್ವಿಸ್ಟ್ ಇರಲಿದೆ ಕಾದು ನೋಡಬೇಕಿದೆ. ಒಲವಿನ ನಿಲ್ದಾಣದಲ್ಲಿ ಅಮಿತಾ ಕುಲಾಲ್, ಅಕ್ಷಯ್ ನಾಯಕ್, ಮಂಡ್ಯ ರಮೇಶ್, ಅಶೋಕ್, ಪ್ರಥಮ ಪ್ರಸಾದ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮುದ್ದಾದ ಜೋಡಿಯ ಚೆಂದದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡ್ತಿದೆ. ಅವರ ಮದುವೆಯ ಸುಂದರ ಆಲ್ಬಂ ಇಲ್ಲಿದೆ ನೋಡಿ.

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ಸಚಿನ್‌ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

    ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.

    ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.

    ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ʻಒಲವಿನ ನಿಲ್ದಾಣʼ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    ಇನ್ನೂ ʻಜೊತೆ ಜೊತೆಯಲಿʼ ಸೀರಿಯಲ್‌ನಿಂದ ನಟ ಅನಿರುದ್ಧ್‌ ದೂರ ಸರಿದಿದ್ದರು ಕೂಡ ಸಹನಟಿ ಶಿಲ್ಪಾ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ತಂಡದ ಜೊತೆ ಸೇರಿ ನಟಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ನಟಿ ವಿಜಯ್‌ ಲಕ್ಷ್ಮಿ ಸಿಂಗ್‌, ಪ್ರಥಮಾ ಪ್ರಸಾದ್‌ ಕೂಡ ಭಾಗಿಯಾಗಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಜೊತೆ ಜೊತೆಯಲಿ’ ನಟಿ ಶಿಲ್ಪಾ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಜೊತೆ ಜೊತೆಯಲಿ’ ನಟಿ ಶಿಲ್ಪಾ ಅಯ್ಯರ್

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ (Olavina Nildana) ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ (Engage) ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.

    ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ (Lawyer) ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ (Wedding) ಏರಿದ್ದಾರೆ.

    ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

    ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಸೀಸನ್ 9ರ ವಿನ್ನರ್ (Bigg Boss Kannada) ಆಗಿ ಮಿಂಚಿದ ರೂಪೇಶ್ ಶೆಟ್ಟಿ (Roopesh Shetty) ಎಲ್ಲಿ ಹೋದ್ರು ಏನ್ಮಾಡ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಇದ್ದ ಅಭಿಮಾನಿಗಳಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ರೂಪೇಶ್ ಶೆಟ್ಟಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ದೊಡ್ಮನೆಯಲ್ಲಿ ಹಾಡು, ಡ್ಯಾನ್ಸ್, ಮನರಂಜನೆ ಅಂತಾ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡ ಮಂಗಳೂರಿನ ಪ್ರತಿಭೆ ರೂಪೇಶ್ ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ಗೆಲುವನ್ನ ವಿಜೃಂಭಿಸುವುದರಲ್ಲಿ ಬ್ಯುಸಿಯಾಗಿದ್ದರು. ಬಳಿಕ `ಮಂಕು ಭಾಯಿ ಫಾಕ್ಸಿ ರಾಣಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ದೊಡ್ಮನೆಗೆ ಕಾಲಿಡುವ ಮುಂಚೆ ಚಿತ್ರೀಕರಿಸಿದ ಸಿನಿಮಾ ಇದಾಗಿತ್ತು.

    ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ರು ಕೂಡ ತಮ್ಮ ಮುಂದಿನ ಹೆಜ್ಜೆ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ `ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ರೂಪೇಶ್ ಶೆಟ್ಟಿ ಕಿರುತೆರೆಗೆ ಮರಳಿದ್ದಾರೆ. ನಾಯಕಿ ತಾರಿಣಿ (Tharini) ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಅತಿಥಿಯಾಗಿ ಸಾಥ್ ನೀಡ್ತಿದ್ದಾರೆ.

    ಧೀರಜ್ ಮತ್ತು ಸಿದ್ಧಾಂತ್ ಈ ಇಬ್ಬರಲ್ಲಿ ಯಾರನ್ನ ಮದುವೆಯಾಗಲಿ ಎಂದು ಗೊಂದಲದಲ್ಲಿರುವ ತಾರಿಣಿಗೆ ಪರಿಹಾರ ನೀಡಲು ಬರುತ್ತಿದ್ದಾರೆ. ಈ ಮೂಲಕ ಟಿವಿ ಪರದೆಯಲ್ಲಿ ಮತ್ತೆ ಮಿಂಚಲು ರೂಪೇಶ್ ಶೆಟ್ಟಿ ಸಜ್ಜಾಗಿದ್ದಾರೆ. ಇನ್ನೂ ಈ ಕುರಿತ ಪ್ರೋಮೋ ಕೂಡ ರಿವೀಲ್ ಆಗಿದ್ದು, ಆರ್‌ಜೆ ಆಗಿ ರೂಪೇಶ್ ಕಾಣಿಸಿಕೊಂಡಿರುವ ತುಣುಕು ಸಖತ್ ಸದ್ದು ಮಾಡ್ತಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಕಿರುತೆರೆ ನಟಿ ಶಿಲ್ಪಾ ಅಯ್ಯರ್ (Actress Shilpa Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ನಟಿ ಶಿಲ್ಪಾ ಅವರು ಎಂಗೇಜ್ ಆಗಿದ್ದು, ಇದೀಗ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ (Sachin Vishwanath) ಜೊತೆ ಎಂಗೇಜ್ ಆಗಿದ್ದಾರೆ.

    ಕುಟುಂಬಸ್ಥರು ಸೂಚಿಸಿದ ವರನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವೀಡಿಯೋ ಶೇರ್ ಮಾಡಿಕೊಳ್ಳುವ ಸಿಹಿಸುದ್ದಿ ನೀಡಿದ್ದಾರೆ. ಶಿಲ್ಪಾ- ಸಚಿನ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ.

    ಸಚಿನ್ ವಿಶ್ವನಾಥ್ ಅವರು ಲಾಯರ್ (Advocate) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇನ್ನೂ ಶಿಲ್ಪಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, Classy Captures ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ಫೋಟೋಗಳು ಸೆರೆಯಾಗಿದೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ಇದೀಗ ಕಿರುತೆರೆಯಲ್ಲಿ ನಟಿಯಾಗಿ ಛಾಪು ಮೂಡಿಸುತ್ತಿದ್ದಾರೆ. ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ `ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k