Tag: Okra

  • ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

    ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಯಾವಾಗಲೂ ಬೇಕೇ ಬೇಕು. ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಟ್ರೈ ಮಾಡಲು ಬಯಸಿದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಪರ್ಫೆಕ್ಟ್ ಆಗಿದೆ. ಬೆಂಡೆಕಾಯಿಯ ಈ ಕುರುಕಲು ತಿಂಡಿ ಚಹಾದೊಂದಿಗೆ ಸವಿಯಲು ಮಜವೆನಿಸುತ್ತದೆ. ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ ಬಳಸಬಹುದು.

    ಬೇಕಾಗುವ ಪದಾರ್ಥಗಳು:
    ಬೆಂಡೆಕಾಯಿ – 200 ಗ್ರಾಂ
    ಕಡಲೆ ಹಿಟ್ಟು – 2 ಟೀಸ್ಪೂನ್
    ಅಕ್ಕಿ ಹಿಟ್ಟು – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಆಮ್ಚೂರ್ ಪುಡಿ – ಕಾಲು ಟೀಸ್ಪೂನ್
    ಚಾಟ್ ಮಸಾಲಾ – 1 ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಶುಭ್ರ, ಒಣ ಬಟ್ಟೆಯಿಂದ ಒರೆಸಿಕೊಳ್ಳಿ.
    * ಬೆಂಡೆಕಾಯಿಯ ಅಂಚುಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.
    * ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.
    * ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ನಂತರ ಅದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ.
    * ಇದೀಗ ಬೆಂಡೆಕಾಯಿಯ ಕುರುಕಲು ತಿಂಡಿ ಸಿದ್ಧವಾಗಿದ್ದು, ಚಹಾದೊಂದಿಗೆ ಇಲ್ಲವೇ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಿ. ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಬೆಂಡೆಕಾಯಿ ಹಲವು ಜನರಿಗೆ ಇಷ್ಟ. ಮತ್ತೆ ಕೆಲವರಿಗೆ ವಾಸನೆ ಹಾಗೂ ಅಂಟು ಇರುವ ಕಾರಣ ಬೆಂಡೆಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ.

    ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿ ಸೇವಿಸಿದರೆ, ದೇಹದ ಮೆಟಾಬಾಲಿಸಂ ಸಿಸ್ಟಂ ಸರಿ ಇರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿ ಮಾಡಿ, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಬೆಂಡೆಕಾಯಿಯಲ್ಲಿ ಕಾರ್ಬೋಹೈಡ್ರೆಟ್, ಪ್ರೋಟಿನ್, ವಿಟಮಿನ್ ಕೆ, ಎ ಹಾಗೂ ಸಿ ಅಂಶ ಹೊಂದಿದೆ. ಇದನ್ನು ಹೊರತುಪಡಿಸಿ ಪೋಟ್ಯಾಶಿಯಂ, ಕ್ಯಾಲಿಶಿಯಂ, ಮ್ಯಾಗ್ನೀಶಿಯಂ ಅಂಶ ಕೂಡ ಇರುತ್ತದೆ. ಬೆಂಡೆಕಾಯಿ ಸೇವಿಸುವುದರಿಂದ ಅದರಲ್ಲಿ ಇರುವ ಫೈಬರ್ ನಿಂದ ಹೊಟ್ಟೆಯಲ್ಲಿನ ಮಲಬದ್ಧತೆ, ಡೈಯೇರಿಯಾ ಹಾಗೂ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

    ಇದನ್ನು ಹೊರತುಪಡಿಸಿ ಬೆಂಡೆಕಾಯಿಯಲ್ಲಿ ಇರುವ ವಿಟಮಿನ್ – ಎ ಅಂಶ ಕಣ್ಣುಗಳಿಗೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಹಾಗೂ ಬಿಟಾ ಕ್ಯಾರೋಟಿನ್‍ನಿಂದ ತ್ವಚೆ ತಾಜಾವಾಗಿ ಇಡಲು ಸಹಾಯ ಮಾಡುತ್ತದೆ.