Tag: Okkaligas

  • ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಬೆಂಗಳೂರು: ಕೆಂಪೇಗೌಡರ ಪ್ರತಿಮೆ (KempegowdaStatue) ಸ್ಥಾಪನೆ ಮಾಡಿದ ಕೂಡಲೇ ಒಕ್ಕಲಿಗರ (Okkaligas) ಮತ ಬಿಜೆಪಿಗೆ (BJP) ಹೋಗುವುದಿಲ್ಲ. ಅಂತಹ ಭ್ರಮೆಯಿಂದ ಬಿಜೆಪಿ ಹೊರಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೆಂಪೇಗೌಡರ ಪ್ರತಿಮೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಯಕ್ರಮದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಬರುತ್ತಾರೆ ಹೋಗುತ್ತಾರೆ ಅಷ್ಟೆ. ಕೆಂಪೇಗೌಡ ಪ್ರತಿಮೆ ಅನಾವರಣ ಒಂದು ಭಾಗ. ಈಗಾಗಲೇ ರಾಜ್ಯದ ಹಲವಾರು ಭಾಗದಲ್ಲಿ ಕೆಂಪೇಗೌಡ ಪ್ರತಿಮೆಗಳು ನಿತ್ಯ ಒಂದಲ್ಲ ಒಂದು ಭಾಗದಲ್ಲಿ ಅನಾವರಣ ಆಗುತ್ತಿವೆ. ಇದು ಬಿಜೆಪಿಯ ನಿಯೋಜಿತ ಕಾರ್ಯಕ್ರಮ ಅಷ್ಟೆ. ಅದಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯ ರಹಸ್ಯ ಸ್ಥಳದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್

    ಕೆಂಪೇಗೌಡರ ಕನಸು ನನಸಾದಾಗ ನಾವು ಕೆಂಪೇಗೌಡರಿಗೆ ಗೌರವ ಕೊಟ್ಟ ಹಾಗೆ. ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನಲ್ಲಿ ದೊಡ್ಡ ಅನಾಹುತ ಮಾಡಿವೆ. ಅದನ್ನು ಸರಿಪಡಿಸುವ ಕೆಲಸ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ

    ಕೆಂಪೇಗೌಡ ಪ್ರತಿಮೆಯಿಂದ ಬಿಜೆಪಿಗೆ ಒಕ್ಕಲಿಗರ ಮತ ಹೋಗುತ್ತದೆ ಎಂಬ ಭ್ರಮೆ ಬೇಡ. ಕೆಂಪೇಗೌಡ ಪ್ರತಿಮೆ ಮಾಡಿ, ಮೋದಿ ಕೈಯಲ್ಲಿ ಉದ್ಘಾಟನೆ ಮಾಡಿಸಿದರೆ ಒಕ್ಕಲಿಗರು ಮತ್ತು ಕನ್ನಡಿಗರು ಬಿಜೆಪಿ ಹಿಂದೆ ಹೋಗುವುದಿಲ್ಲ. ಅಂತಹ ಭ್ರಮೆಯಲ್ಲಿ ಬಿಜೆಪಿ ಅವರು ಇದ್ದರೆ, ಆ ಭ್ರಮೆಯಿಂದ ಜನರೇ ಅವರನ್ನು ಹೊರಗೆ ತರುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ, ಹೆಚ್‍ಡಿಡಿ ವಿರುದ್ಧ ಹೇಳಿಕೆ ನೀಡಿದ್ದ ವಾಲ್ಮೀಕಿ ಸ್ವಾಮೀಜಿ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಸಿಎಂ, ಹೆಚ್‍ಡಿಡಿ ವಿರುದ್ಧ ಹೇಳಿಕೆ ನೀಡಿದ್ದ ವಾಲ್ಮೀಕಿ ಸ್ವಾಮೀಜಿ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಅವರ ಬಗ್ಗೆ ಮೀಸಲಾತಿ ಹೋರಾಟದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವಹೇಳನಕಾರಿ ಹೇಳಿಕೆಗೆ ಒಕ್ಕಲಿಗ ಮುಖಂಡರು ಸಿಡಿದೆದ್ದಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ ಒಕ್ಕಲಿಗ ಮುಖಂಡರು, ವಾಲ್ಮೀಕಿ ಸ್ವಾಮೀಜಿಗಳು ಸಿಎಂ ಹಾಗೂ ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ವಾರದೊಳಗೆ ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸ್ವಾಮೀಜಿ ಅವರು ಹದ್ದು ಮೀರಿ ಮಾತನಾಡಿದ್ದು, ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ನಮ್ಮ ಸಮಾಜವನ್ನ ಅವಮಾನಿಸಲಾಗಿದೆ. ಹಕ್ಕುಗಳನ್ನು ಸರ್ಕಾರದಲ್ಲಿ ಕೇಳಬೇಕು. ಕುಮಾರಸ್ಚಾಮಿನೂ ಹೇಳಬೇಕು ಅವರಪ್ಪನೂ ಕೇಳಬೇಕು ಅನ್ನೋ ಪದ ಬಳಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ವಾಮೀಜಿ ಹೇಳಿದ್ದೇನು?
    ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಹೋರಾಟದಲ್ಲಿ ಭಾಗವಹಿಸಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು, 17 ಮಂದಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದಾರೆ. ಇವರು ರಾಜೀನಾಮೆ ನೀಡಿದರೆ ಸರ್ಕಾರ ಉರುಳುತ್ತದೆ. ಸಿಎಂ ಸರ್ಕಾರ ಉಳಿಸಲು ಕಾಲು ಹಿಡಿಯುತ್ತಾರೆ ಅನ್ನೋದು ನಂಗೆ ಗೊತ್ತಿದೆ. ಅವರು ಸಿಎಂ ಆಗಿ ಮುಂದುವರೆಯಬೇಕೇ ಅಥವಾ ಬೇಡವಾ ಎಂದು ಇವತ್ತು ನಿರ್ಧಾರವಾಗಲಿ. ನಾವು ಹೇಳಿದರೆ ಮುಖ್ಯಮಂತ್ರಿಯೂ ಕೇಳಬೇಕು ಅವರಪ್ಪನೂ ಕೇಳಬೇಕು ಎಂದು ಎಂದು ವಾಗ್ದಾಳಿ ನಡೆಸಿದ್ದರು.

    ನಮ್ಮ ವಾಲ್ಮೀಕಿ ಸಮುದಾಯದ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ಕೊಟ್ಟರೆ ಮುಖ್ಯಮಂತ್ರಿ ಗೊಟಕ್ ಅಂದುಬಿಡ್ತಾರೆ ಎಂದು ಹೇಳಿಕೆಯನ್ನು ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಈ ವಿಚಾರವಾಗಿ ಮಾತನಾಡಲು ಬಂದಿದ್ದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮುಂದೆಯೇ ಮುಖ್ಯಮಂತ್ರಿಗಳಿಗೆ ಅವಾಜ್ ಹಾಕಿದ ಸ್ವಾಮೀಜಿ, ನಮ್ಮವರು ರಾಜೀನಾಮೆ ಕೊಟ್ಟರೆ ಸರ್ಕಾರ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದ್ದರು.