Tag: Okalipuram

  • ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು

    ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು

    ಬೆಂಗಳೂರು: ಕಾರು ಟಚ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ (Taxi Driver) ಮೇಲೆ ಇನ್ನೋವಾ ಕಾರು (Innova Car) ಚಾಲಕ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಸಾರ್ವಜನಿಕರು ಇನ್ನೋವಾ ಕಾರು ಪುಡಿಗಟ್ಟಿದ ಘಟನೆ ಬೆಂಗಳೂರಿನ (Bengaluru) ಓಕಳಿಪುರಂ (Okalipuram) ಜಂಕ್ಷನ್‌ನಲ್ಲಿ ನಡೆದಿದೆ.

    ಮೆಜೆಸ್ಟಿಕ್ ಸಮೀಪದಲ್ಲಿರುವ ರೈಲ್ವೇ ಗೇಟ್ ಹಿಂಭಾಗದ ರಸ್ತೆಯಲ್ಲಿ ಕ್ಯಾಬ್ ಚಾಲಕ ಕುಮಾರ್ ಪ್ಯಾಸೆಂಜರ್ ಕರೆದುಕೊಂಡು ವಿಜಯನಗರದಿಂದ ಬರುತ್ತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಈ ವೇಳೆ ಇಬ್ಬರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ. ಕಾರಲ್ಲಿ ಪ್ಯಾಸೆಂಜರ್ ಇದ್ದಿದ್ದರಿಂದ ಇಟಿಯೋಸ್ ಕಾರು ಚಾಲಕ ಸುಮ್ಮನಿದ್ದ. ಇಷ್ಟಾದರೂ ಸುಮ್ಮನಾಗದ ಇನ್ನೋವ ಕಾರು ಚಾಲಕ ಕಾರಿನಿಂದ ಮಚ್ಚು ತಂದು ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ಆತ ಭಯಗೊಂಡರೇ, ಅಲ್ಲೇ ಇದ್ದ ಜನರು ರೊಚ್ಚಿಗೆದ್ದರು. ಇನ್ನೋವಾ ಕಾರು ಚಾಲಕನ ಅಟ್ಟಹಾಸ ಕಂಡ ಜನರು ಆತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಲ್ಲಿನಿಂದ ಕಾರಿನ ಗಾಜುಗಳನ್ನ ಪುಡಿಪುಡಿ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಆಸಾಮಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ. ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

    ಸ್ಥಳಕ್ಕೆ ಬಂದ ಶೇಷಾದ್ರಿಪುರಂ ಸಂಚಾರ ಪೊಲೀಸರು ಕಾರನ್ನು ಸ್ಥಳಾಂತರಗೊಳಿಸಿದರು. ಇನ್ನು ಕ್ಯಾಬ್ ಚಾಲಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಇನ್ನೋವಾ ಕಾರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

  • ಕಾರಿನ ಮೇಲೆ ಮಳೆ ನೀರು ಹಾರಿಸಿದ್ದಕ್ಕೆ ಹಲ್ಲೆ – ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ

    ಕಾರಿನ ಮೇಲೆ ಮಳೆ ನೀರು ಹಾರಿಸಿದ್ದಕ್ಕೆ ಹಲ್ಲೆ – ಬೆರಳು ಕಚ್ಚಿ ವಿಕೃತಿ ಮೆರೆದ ಮಾಲೀಕ

    ಬೆಂಗಳೂರು: ಮಳೆ ನೀರನ್ನು ಕಾರಿನ ಮೇಲೆ ಹಾರಿಸಿದ್ದಕ್ಕೆ ಮಾಲೀಕನೊಬ್ಬ ಕಾರು ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ನಗರದ ಓಕಳಿಪುರಂ (Okalipuram) ಅಂಡರ್‌ಪಾಸ್‌ನಲ್ಲಿ ನಡೆದಿದೆ.

    ಗಾಯಾಳುವನ್ನು ಜಯಂತ್ ಎಂದು ಗುರುತಿಸಲಾಗಿದೆ. ಮೇ 25ರಂದು ಜಯಂತ್ ದಂಪತಿ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಕಡೆ ತೆರಳುತ್ತಿದ್ದರು. ಈ ವೇಳೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ತಾಗಿದೆ. ಇದನ್ನು ಕಂಡ ಮಾಲೀಕ ಕೂಡಲೇ ಕಾರನ್ನು ಅಡ್ಡ ಹಾಕಿ, ಜಯಂತ್‌ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಕೊನೆಗೆ ಜಯಂತ್ ಆತನಿಗೆ ಕ್ಷಮೆ ಕೇಳಿ ಮುಂದೆ ಹೋಗಿದ್ದಾರೆ.ಇದನ್ನೂ ಓದಿ: ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?

    ಆದರೂ ಬಿಡದೇ ಕಾರು ಮಾಲೀಕ ಮೆಜೆಸ್ಟಿಕ್ ಅಂಡರ್‌ಪಾಸ್‌ನಿಂದ ಲುಲು ಮಾಲ್ ಅಂಡರ್‌ಪಾಸ್‌ವರೆಗೂ ಹಿಂಬಾಲಿಸಿಕೊಂಡು ಜಯಂತ್ ಕಾರನ್ನು ಅಡ್ಡಗಟ್ಟಿದ್ದಾರೆ. KA02 MT0512 ಕಾರಿನಿಂದ ಕೆಳಗಿಳಿದು ಕಾರ್‌ನಲ್ಲಿದ್ದ ಜಯಂತ್‌ರನ್ನು ಎಳೆದುಕೊಂಡು ಹಲ್ಲೆ ನಡೆಸಿ, ಮುಖಕ್ಕೆ ಗುದ್ದಿ ರೌಡಿಸಂ ನಡೆಸಿದ್ದಾರೆ. ಜೊತೆಗೆ ಅವರ ಬಲಗೈ ಬೆರಳನ್ನು ಮಾಂಸ ಬರುವಂತೆ ಕಚ್ಚಿ, ವಿಕೃತಿ ಮೆರೆದಿದ್ದಾರೆ.

    ಜಯಂತ್ ಕೈಬೆರಳಿಗೆ ಸರ್ಜರಿ ಮಾಡಿದ ವೈದ್ಯರು ಐದು ಸ್ಟಿಚ್ ಹಾಕಿ, 6 ತಿಂಗಳು ರೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ. ತನ್ನದಲ್ಲದ ತಪ್ಪಿಗೆ ಜಯಂತ್ 2 ಲಕ್ಷ ರೂ. ಬಿಲ್ ಕಟ್ಟಿದ್ದಾರೆ.

    ಸದ್ಯ ಘಟನೆ ಸಂಬಂಧ ಮಾಗಡಿ ರೋಡ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ನನ್ನಿಷ್ಟ ನನ್ನ ಗಾಡಿ, ದಂಡ ಕಟ್ಟಲ್ಲ, ನೀವ್ಯಾರು ಕೇಳೋಕೆ – ಟ್ರಾಫಿಕ್ ಪೊಲೀಸರೊಂದಿಗೆ ಮಹಿಳೆಯ ಹೆಲ್ಮೆಟ್ ಕಿರಿಕ್