Tag: oily skin

  • ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ

    ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ

    ಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಮನೆಯಿಂದ ಹೊರಬಂದ ತಕ್ಷಣ ಮುಖದಲ್ಲಿ ಎಣ್ಣೆ, ಬೆವರು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಹಾಗೂ ಮುಖದ ಅಂದವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಮಾಯಿಶ್ಚರೈಸ್‍ಗಳನ್ನು ಬಳಸಿರುತ್ತೀರಾ. ಆದರೂ ಅದು ಕಡಿಮೆ ಆಗಿರುವುದಿಲ್ಲ. ಈ ಬೆವರು ಹಾಗು ಮುಖದಲ್ಲಿ ಉಂಟಾಗುವ ಅತಿಯಾದ ಎಣ್ಣೆಯನ್ನು ಹೊಗಲು ಸಿಂಪಲ್ಲಾಗಿ ಇಲ್ಲೊಂದಿಷ್ಟು ಮನೆ ಮದ್ದುಗಳಿವೆ.

    ಮುಖವನ್ನು ಆಗಾಗೆ ತೊಳಿಯಿರಿ: ನಿಯಮಿತವಾಗಿ ಮುಖವನ್ನು ತೊಳೆಯುವುದರಿಂದ ಚರ್ಮದ ಮೇಲಿನ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿನಿತ್ಯ ಬೆಚ್ಚಗಿನ ನೀರನ್ನು ಮುಖಕ್ಕೆ ಸಿಂಪಡಿಸಿಕೊಳ್ಳಿ. ಇದರಿಂದ ಎಣ್ಣೆಯುಕ್ತ ಜಿಡ್ಡನ್ನು ಹೊಗಲಾಡಿಸಬಹುದು.

    ರೋಸ್ ವಾಟರ್ ಸ್ಪ್ರೇ: ರೋಸ್ ವಾಟರ್ ಸ್ಪ್ರೇ ಮುಖಕ್ಕೆ ಸಿಂಪಡಿಸುವುದರಿಂದ ನಿಮಗೆ ತಾಜಾತನದ ಅನುಭವ ದೊರೆಯುತ್ತದೆ. ನಿಮ್ಮ ಮುಖ ಎಣ್ಣೆಯಿಂದ ಜಿಡ್ಡಾಗಿ ಕಾಣಿಸಿದಾಗ ಜೊತೆಗೆ ಮುಖದಲ್ಲಿ ಬೆವರುವಿಕೆಯನ್ನು ಅನುಭವಿಸುತ್ತಿರುವಾಗ ರೋಸ್ ವಾಟರ್‌ ಅನ್ನು ಸಿಂಪಡಿಸಿ ಅದನ್ನು ಯಾವುದಾದರೂ ಮೃದು ಬಟ್ಟೆ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ. ತಕ್ಷಣ ನಿಮ್ಮಲ್ಲಿರುವ ಆಯಾಸ ಮುಖ ತೊಲಗಿ ಫ್ರೆಶ್ ಆಗಿ ಕಾಣುತ್ತಿರಾ. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ

    ಗ್ರೀನ್ ಟೀ: ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕರ ಜೀವನವನ್ನು ಪಡೆಯುತ್ತೀರಾ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೇ ಗ್ರೀನ್ ಟೀಯನ್ನು ಕುಡಿಯುವ ಬದಲು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತ ಚರ್ಮವನ್ನು ಹೊಗಲಾಡಿಸಬಹುದು. ಅದಕ್ಕಾಗಿ ತಯಾರಿಸಿದ ಗ್ರೀನ್ ಟೀಯನ್ನು ತಣ್ಣಗಾಗುವವರೆಗೆ ಹಾಗೇ ಬಿಡಿ. ನಂತರ ಒಂದು ಸಣ್ಣ ಬಾಟಲಿಯಲ್ಲಿ ಗ್ರೀ ಟೀಯನ್ನು ಸಿಂಪಡಿಸಿ. ಅದನ್ನು ಮುಖಕ್ಕೆ ಸ್ಪ್ರೇ ಮಾಡಿ. ಇದರಿಂದ ಎಣ್ಣೆಯುಕ್ತ ಚರ್ಮ ತೊಲಗುತ್ತದೆ.

    ತುಳಸಿ ಸ್ಪ್ರೇ: ತುಳಸಿ ಸ್ಪ್ರೇಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಒಂದು ಕಪ್ ನೀರಿನಲ್ಲಿ 3-4 ತುಳಸಿ ಎಲೆಗಳನ್ನು ಹಾಕಿ ಮತ್ತು 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದನ್ನ ತಣ್ಣಗಾಗಿಸಿ, ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅಗತ್ಯವಿದ್ದಾಗ ಬಳಸಿ, ಇದು ಮೊಡವೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ಎಣ್ಣೆಯುಕ್ತ ಚರ್ಮ ಹೊಗಲಾಡಿಸಿ, ಫ್ರೇಶ್‍ನೆಸ್ ಸಿಗುತ್ತೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ

    ಟೊಮೆಟೊ: ಟೊಮೆಟೊವನ್ನು ಮುಖದಲ್ಲಿ ಮುಡುವ ಮೊಡವೆಗೆ ಮನೆಮದ್ದಾಗಿದೆ. ಟೊಮೆಟೊದಲ್ಲಿ ಆಮ್ಲಗಳು ಚರ್ಮದಲ್ಲಿರುವ ಎಣ್ಣೆಯನ್ನು ಹಿರಿಕೊಂಡು ಮುಖವನ್ನು ಕಾಂತಿಯುತವಾಗಿ ಮಾಡುತ್ತದೆ. ನೀವು ಪ್ರತಿನಿತ್ಯ ಟೊಮೆಟೊವನ್ನು ಫೆಸ್ ಮಾಸ್ಕ್ ತರ ಮಾಡಿಕೊಂಡು 5 ನಿಮಿಷಗಳ ಕಾಲ ಬಳಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

    ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

    ಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ನಿಮ್ಮದಾಗಿದ್ರೆ ಅದರ ಫಜೀತಿ ಎಂತದ್ದು ಅಂತ ನಿಮಗೆ ಗೊತ್ತೇ ಇರುತ್ತೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ ಉಂಟಾಗುತ್ತದೆ. ಅದಕ್ಕಾಗಿ ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳು ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ

    1. ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ
    ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್‍ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.(ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು). ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್‍ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್‍ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.

    2. ಮುಲ್ತಾನಿ ಮಿಟ್ಟಿ
    ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಬೇಕಾಗುವಷ್ಟು ರೋಸ್‍ವಾಟರ್ ಬೆರೆಸಿ ಚೆನ್ನಾಗಿ ಕಲಸಿ. ಇದನ್ನ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನ ವಾರಕ್ಕೆ ಒಂದು ಬಾರಿ ಮಾಡಬಹುದು.

    3. ನಿಂಬೆ ರಸ ಜೇನುತುಪ್ಪ
    ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್‍ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ.

    4. ಪುದೀನಾ
    ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದ್ರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.

    5. ಸೌತೇಕಾಯಿ
    2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.