Tag: oil

  • ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ

    ರೂಪಾಯಿ ನೀಡಿ ರಷ್ಯಾದಿಂದ ತೈಲ ಖರೀದಿ ಮಾಡಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ರಷ್ಯಾದ ಜೊತೆ ಕಚ್ಚಾ ತೈಲವನ್ನು ರೂಪಾಯಿ ಮೂಲಕ ಖರೀದಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಭಾರತದ ತೈಲ ಕಂಪನಿಗಳು ರೂಪಾಯಿ ಮೂಲಕ ಖರೀದಿಸುವ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಮತ್ತು ಯಾವುದೇ ಪ್ರಸ್ತಾಪ ಇಲ್ಲ. ರಷ್ಯಾ ಅಲ್ಲದೇ ಯಾವುದೇ ದೇಶಗಳಿಂದ ರೂಪಾಯಿ ನೀಡಿ ತೈಲ ಖರೀದಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ಉಕ್ರೇನ್‌ ಮೇಲೆ ಯುದ್ಧ ಆರಂಭ ಮಾಡಿದ್ದಕ್ಕೆ ಅಮೆರಿಕ, ಯುರೋಪ್‌ ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧವನ್ನು ಹೇರಿದೆ. ಹೀಗಾಗಿ ಭಾರತ ಮತ್ತು ರಷ್ಯಾ ಮಧ್ಯೆ ರೂಪಾಯಿ- ರುಬೆಲ್‌ ವ್ಯವಹಾರ ನಡೆಯಬಹುದು ಎಂದು ವರದಿಯಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ರೂಪಾಯಿ ಮೂಲಕ ತೈಲ ಖರೀದಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

  • ನಮ್ಮ ಕಾನೂನು ಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರ್ದು – ಭಾರತದ ತೀಕ್ಷ್ಣ ತಿರುಗೇಟು

    ನಮ್ಮ ಕಾನೂನು ಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರ್ದು – ಭಾರತದ ತೀಕ್ಷ್ಣ ತಿರುಗೇಟು

    ನವದೆಹಲಿ: ತೈಲ ಸ್ವಾವಲಂಬಿ ದೇಶಗಳು ರಷ್ಯಾದೊಂದಿಗಿನ ಇಂಧನ ವ್ಯವಹಾರಗಳನ್ನು ಟೀಕಿಸುವ ಅಗತ್ಯವಿಲ್ಲ, ನಮ್ಮ ಕಾನೂನು ಬದ್ಧ ಇಂಧನ ವಹಿವಾಟುಗಳನ್ನು ರಾಜಕೀಯಗೊಳಿಸಬಾರದು ಎಂದು ಭಾರತ ತಿರುಗೇಟು ನೀಡಿದೆ.

    ದೇಶದ ಅತಿದೊಡ್ಡ ತೈಲ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಚಾಲ್ತಿಯಲ್ಲಿರುವ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಯಲ್ಲಿ ರಷ್ಯಾದಿಂದ ಮೂರು ಮಿಲಿಯನ್ ಬ್ಯಾರಲ್ ಕಚ್ಚಾತೈಲ ಖರೀದಿಸಿದ ಬೆನ್ನಲ್ಲೆ ಭಾರತ ಸರ್ಕಾರ ಇಂತದೊಂದು ತೀಕ್ಷ್ಣ ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

    ರಷ್ಯಾ ಈ ನಡುವೆ ಭಾರತಕ್ಕೆ ಇಂಧನ ರಫ್ತು ಹೆಚ್ಚಿಸಿದೆ. ಭಾರತ ಪ್ರತಿದಿನ 3,60,000 ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಇದು 2021ರ ಸರಾಸರಿಗೆ ಹೋಲಿಸಿದ್ರೆ ನಾಲ್ಕು ಪಟ್ಟು ಹೆಚ್ಚು ಎನ್ನಲಾಗಿದೆ. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಹಿನ್ನೆಲೆ ರಷ್ಯಾ ವಿರುದ್ಧ ಯುರೋಪಿಯನ್ ದೇಶಗಳು ಆರ್ಥಿಕ ನಿರ್ಬಂಧ ಹೇರಿವೆ. ಯಾವುದೇ ದೇಶಗಳು ರಷ್ಯಾ ಜೊತೆಗೆ ಆರ್ಥಿಕ ಸಂಬಂಧ ಹೊಂದದಂತೆ ಒತ್ತಡ ಹೇರುವ ಪ್ರಯತ್ನವೂ ಮಾಡುತ್ತಿವೆ. ಈ ಒತ್ತಡದ ನಡುವೆ ಭಾರತ ಶೇಕಡಾ 20-25% ರಿಯಾಯಿತಿ ಯಲ್ಲಿ ಕಚ್ಚಾತೈಲ ಖರೀದಿಸಿರುವುದು ಟೀಕೆಗೆ ಕಾರಣವಾಗಿತ್ತು.

    ಈ ಟೀಕೆಗೆ ಉತ್ತರ ನೀಡಿರುವ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ತಿರುಗೇಟು ನೀಡಿದೆ. ಭಾರತ ಕಚ್ಚಾತೈಲ ಆಮದಿನ ಮೇಲೆ 85% ರಷ್ಟು ಅವಲಂಬನೆಯಾಗಿದೆ. ಪ್ರತಿದಿನ 5 ಮಿಲಿಯನ್ ಬ್ಯಾರಲ್ ಆಮದು ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಾವು ವಹಿವಾಟು ನಡೆಸುತ್ತಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    ಸದ್ಯ ಭಾರತ ಹೆಚ್ಚಿನ ಆಮದುಗಳು ಪಶ್ಚಿಮ ಏಷ್ಯಾದ ಇರಾಕ್ 23%, ಸೌದಿ ಅರೇಬಿಯಾ 18%, ಯುಎಇ 11% ಆಮದಾಗುತ್ತಿದೆ. ಅಮೆರಿಕ ಈಗ ಭಾರತಕ್ಕೆ 7.3% ಪ್ರಮುಖ ಕಚ್ಚಾ ತೈಲ ರಫ್ತು ಮಾಡುತ್ತಿದೆ. ಪ್ರಸ್ತುತ ವರ್ಷದಲ್ಲಿ ಅಮೇರಿಕಾದಿಂದ ರಫ್ತು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ, ಬಹುಶಃ ಸುಮಾರು 11% ರಷ್ಟು ಏರಬಹುದು.

  • ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

    ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

    ವಾಷಿಂಗ್ಟನ್‌: ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರ ನಡುವೆಯೇ ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಸಂಪರ್ಕಿಸಲು ಅಮೆರಿಕ ಮುಂದಾಗಿದೆ. ಆದರೆ ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಈ ಎರಡೂ ದೇಶಗಳ ರಾಜರು ಕ್ಯಾರೆ ಎಂದಿಲ್ಲ.

    ಸೌದಿ ಅರೇಬಿಯಾದ ರಾಜ ಮಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಸಂಯುಕ್ತ ಅರಬ್‌ ಒಕ್ಕೂಟದ ಶೇಖ್‌ ಮಹಮ್ಮದ್‌ ಬಿನ್‌ ಜಯಾದ್‌ ಅಲ್‌ ನಹ್ಯಾನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಫೋನ್‌ ಕರೆಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

    ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ನಿರ್ಬಂಧ ವಿಧಿಸಿದ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಅನ್ನು ಭೇಟಿಯಾಗಲು ಯೋಜನೆ ರೂಪಿಸಿತ್ತು. ಸೌದಿ ಮತ್ತು ಯುಎಇ ಅಧಿಕಾರಿಗಳು ಬೈಡೆನ್‌ ಆಡಳಿತದೊಂದಿಗೆ ಸಂವಾದ ನಡೆಸಲು ನಿರಾಕರಿಸಿದ್ದಾರೆ.

    ಕೆಲವು ನಿರೀಕ್ಷೆಗಳನ್ನಿಟ್ಟುಕೊಂಡು ಫೋನ್‌ ಕರೆ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೌದಿ ಮತ್ತು ಯುಎಇ ನಿಲುವಿನ ಬಗ್ಗೆ ಅಮೆರಿಕ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

    Joe Biden

    2018ರಲ್ಲಿ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಆರೋಪವನ್ನು ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮೇಲೆ ಅಮೆರಿಕ ಹೊರಿಸಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಸಹಿ ಹಾಕಿದ್ದ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಸೌದಿ ಅರೆಬಿಯಾಕ್ಕೆ ಶಸ್ತ್ರಾಸ್ತ್ರಗಳ ಮಾರಾಟವನ್ನು ಬೈಡೆನ್‌ ಆಡಳಿತ ಸ್ಥಗಿತಗೊಳಿಸಿತ್ತು. ಇರಾನ್‌ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಯುಎಸ್‌ ಅಧ್ಯಕ್ಷರ ಪ್ರಯತ್ನ ಮತ್ತು ಆಸ್ಟ್ರಿಯಾದ ವಿಯೆನ್ನಾದ ಮಾತುಕತೆ ನಡೆಸುವುದು ಸೌದಿಯನ್ನು ಕೆರಳಿಸಿತ್ತು.

    ಸುನ್ನಿ ಮುಸ್ಲಿಂ ಸೌದಿ ಅರೇಬಿಯಾ ಮತ್ತು ಅದರ ಶಿಯಾ ಪ್ರತಿಸ್ಪರ್ಧಿ ಇರಾನ್‌ ಎರಡರೊಂದಿಗೂ ರಷ್ಯಾ ಸೌಹಾರ್ದ ಸಂಬಂಧವನ್ನು ಹೊಂದಿದೆ. ಜೊತೆಗೆ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿದ ವಾಷಿಂಗ್ಟನ್‌ ವಿರುದ್ಧ ಇಡೀ ಮಧ್ಯಪ್ರಾಚ್ಯದೊಂದಿಗೆ ಅಧ್ಯಕ್ಷ ಪುಟಿನ್‌ ನಾಗರಿಕ ಯುದ್ಧದಲ್ಲಿ ಅಧ್ಯಕ್ಷ ಬಶರ್‌ ಅಸ್ಸಾದ್‌ ಅವರ ಬೆಂಬಲಕ್ಕೆ ನಿಂತಿದ್ದರು. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್

    ರಷ್ಯಾದ ತೈಲ ಆಮದು ರದ್ದುಗೊಳಿಸುತ್ತಿದ್ದಂತೆ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಯುಎಇನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಹರಸಾಹಸಪಟ್ಟಿದೆ. ಆದರೆ ಯುಎಇ ವಿದೇಶಾಂಗ ಸಚಿವಾಲಯವು ಕರೆಯನ್ನು ಮರು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

  • ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಸ್ತೆಬದಿಯಲ್ಲಿ ಆಹಾರ ವ್ಯಾಪಾರ ಮಾಡುವ ವ್ಯಕ್ತಿಯೊರ್ವ ಬಾಣಲಿಯಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಚಿಕನ್ ಬೇಯಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ನಾನ್‍ವೆಜ್ ಫುಡ್ಡಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವ್ಯಕ್ತಿಯೋರ್ವ ತನ್ನ ಕೈಗಳನ್ನು ಕುದಿಯುವ ಎಣ್ಣೆಗೆ ಅದ್ದಿ ನಂತರ ಅದನ್ನು ತಕ್ಷಣ ತೆಗೆಯುವುದನ್ನು ಕಾಣಬಹುದಾಗಿದೆ. ವ್ಯಕ್ತಿ ಬಿಸಿ ಎಣ್ಣೆಗೆ ಕೈ ಅದ್ದಿ ಕರಿದ ಚಿಕನ್ ತುಂಡುಗಳನ್ನು ಒಂದೊಂದಾಗಿ ಹೊರಗೆ ತೆಗೆದು ಅದನ್ನು ಪಾತ್ರೆಯಲ್ಲಿ ಹಾಕುತ್ತಾನೆ. ಬಳಿಕ ಅದಕ್ಕೆ ಒಂದಷ್ಟು ಮಸಾಲೆಗಳನ್ನು ಬೆರೆಸುತ್ತಾನೆ. ಇದನ್ನೂ ಓದಿ: ನೀವಿಬ್ಬರು ಇಲ್ಲ ಅನ್ನೋದು ನಂಬಲಾಗ್ತಿಲ್ಲ – ಅಪ್ಪು, ಅಂಬಿ ನೆನೆದು ಸುಮಲತಾ ಭಾವುಕ

     

    View this post on Instagram

     

    A post shared by SHAILESH | JAIPUR (@nonvegfoodie)

    ಈ ವೀಡಿಯೋ ಜೊತೆಗೆ ಚಿಕನ್ ಹೊರಗೆ ತೆಗೆಯಲು ಕುದಿಯುವ ಎಣ್ಣೆಗೆ ಕೈ ಹಾಕುವ ಇವರಿಗೆ ಕೈ ಸುಡುವುದಿಲ್ಲವೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಲಾಗಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 59,000ಕ್ಕೂ ಹೆಚ್ಚು ಲೈಕ್ ಹಾಗೂ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

  • ಗ್ಯಾಸ್, ಅಡುಗೆ ಎಣ್ಣೆ ದರ ಕಡಿಮೆ ಆಗ್ಬೇಕಿದೆ: ಡಿ.ಕೆ ಶಿವಕುಮಾರ್

    ಗ್ಯಾಸ್, ಅಡುಗೆ ಎಣ್ಣೆ ದರ ಕಡಿಮೆ ಆಗ್ಬೇಕಿದೆ: ಡಿ.ಕೆ ಶಿವಕುಮಾರ್

    ಹುಬ್ಬಳ್ಳಿ: ಪೆಟ್ರೋಲ್‌, ಡೀಸೆಲ್‌ ಮಾತ್ರವಲ್ಲ. ಗ್ಯಾಸ್, ಅಡುಗೆ ಎಣ್ಣೆ ದರವೂ ಕಡಿಮೆ ಆಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆ ಇತ್ತು. ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಸರ್ಕಾರದಿಂದಲೇ ನಿತ್ಯ ಜನರ ಪಿಕ್ ಪಾಕೆಟ್ ಆಗುತ್ತಿತ್ತು. ಇದರಿಂದ ಬೇಸತ್ತು ಹಾನಗಲ್ ಜನರು ಉತ್ತರ ಕೊಟ್ಟಿದ್ದಾರೆ. ಜನರು ಕೊಟ್ಟ ಉತ್ತರ ನೋಡಿ ಬೊಮ್ಮಾಯಿ, ಮೋದಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಈಗ ಬಿಜೆಪಿ ನಾಯಕರಿಗೆ ತಿಳುವಳಿಕೆ ಬಂದಿದೆ ಎಂದು ಟಾಂಗ್ ನೀಡಿದರು.

    PM MODI

    ಇನ್ನೂ ಗ್ಯಾಸ್, ಅಡುಗೆ ಎಣ್ಣೆ, ಮೋದಿ ಪಕೋಡ ಕರಿಯಲು ಎಣ್ಣೆ ದರ ಕಡಿಮೆ ಆಗಬೇಕಿದೆ. ದರ ಕಡಿಮೆ ಆಗದಿದ್ದರೆ ಮುಂದಿನ ಚುನಾವಣೆಯಲ್ಲೂ ಇದೇ ಉತ್ತರ ಸಿಗಲಿದೆ. ನನ್ನ ದೃಷ್ಟಿ 2023ರ ಚುನಾವಣೆ ಮೇಲಿದೆ. ಹಾನಗಲ್ ಗ್ರಾಮ ದೇವತೆಗೆ ಬೇಡಿಕೊಂಡಿದ್ದೆ. ಈಗ ದೇವಿ ವರಕೊಟ್ಟಿದ್ದಾಳೆ. ಅದಕ್ಕೆ ದೇವರ ಆಶೀರ್ವಾದ ಪಡೆಯಲು ಹೊರಟಿದ್ದೇನೆ. ಎಲ್ಲ ಜಾತಿ, ಧರ್ಮ, ಜನಾಂಗ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಹಾನಗಲ್ ಸಿಎಂ ಅವರ ತವರು ಜಿಲ್ಲೆಯ ಕ್ಷೇತ್ರ. ಅವರು ಸಿಂದಗಿಯಲ್ಲಿ ಗೆದ್ದಿದ್ದು ಜೆಡಿಎಸ್ ಸ್ಥಾನ, ಇಲ್ಲಿ ನಾವು ಬಿಜೆಪಿ ಸೀಟ್ ಗೆದ್ದಿದ್ದೇವೆ. ಹಾನಗಲ್ ನನ್ನ ಮನೆ ಅಂತ ನಾನು ಹೇಳಿರಲಿಲ್ಲ, ನಾನು ಹಾನಗಲ್ ಅಳಿಯ, ಹಾನಗಲ್ ಮೊಮ್ಮಗ ಅಂತ ಹೇಳಿರಲಿಲ್ಲ. ಅವರು ಹೇಳಿದ್ದು, ಅಷ್ಟು ಮಾತ್ರ ಅವರಿಗೆ ನೆನಪಿಸಲು ಬಯಸುತ್ತೇನೆ. ಅವರ ಮಂತ್ರಿಗಳೆಲ್ಲ ಇಲ್ಲಿಯೇ ಬೀಡುಬಿಟ್ಟಿದ್ದರು. ಹಾನಗಲ್ ಜನರು ನನ್ನ ಗೌರವ ಉಳಿಸಿ ಅಂತ ಯಾರು ಕೇಳಿದ್ದರು. ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಫಲಿತಾಂಶ ಬರುವ ಮುನ್ನವೇ ಹಾನಗಲ್‌ನಲ್ಲಿ ಸೋಲೊಪ್ಪಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪುನೀತ್ ಮಾಡುತ್ತಿದ್ದ ಕೆಲಸಕ್ಕೆ ನಾನೂ ಕೈ ಜೋಡಿಸುತ್ತೇನೆ: ರೇಣುಕಾಚಾರ್ಯ

    basavaraj bommai

    ಬಿಟ್ ಕಾಯಿನ್ ಪ್ರಕರಣ ಇಡಿ ಹಾಗೂ ಸಿಬಿಐಗೆ ಕೊಟ್ಟಿದೀವಿ ಅಂತ ಹೇಳುತ್ತಾರೆ. ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಇಡಿ ಸ್ಪಷ್ಟಪಡಿಸಲಿ ಹಾಗೂ ಸಿಬಿಐಗೆ ಬರೆದಿರುವ ಪತ್ರ ಬಹಿರಂಗಪಡಿಸಲಿ. ನಾವು ಸಹ RTI ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

  • ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

    ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

    ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅವುಗಳಿಗೆ ಹೆಚ್ಚು ಮಹತ್ವ ನೀಡಿ ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ್ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‍ಇ ಟೆಕ್‍ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೂಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‍ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ನುಡಿದರು.

    ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75ನೇ ವರ್ಷಾಚರಣೆ ಹಾಗೂ ಕೆಎಲ್‍ಇ ಟೆಕ್ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು. ಯುವಕರಲ್ಲಿ ವಿದ್ಯೆ, ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ, ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು. ಕೆಎಲ್‍ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ. ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದ್ದು, ಮತ್ತೊಮ್ಮೆ ವಿದ್ಯಾರ್ಥಿಯಾಗಿ ಪ್ರವೇಶಪಡೆಯಲು ಮನಸ್ಸಾಗುತ್ತಿದೆ ಎಂದು ತಮಗೆ ವಿದ್ಯೆ ನೀಡಿದ ಸರಸ್ವತಿ ದೇಗುಲದ ಬಗ್ಗೆ ಮನದುಂಬಿ ಮಾತನಾಡಿದರು. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

    ತಮಗೆ ವಿದ್ಯೆ ಕಲಿಸಿದ ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೇಲ್, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನು ವಿನೋದವಾಗಿ ನೆನಪಿಸಿಕೊಂಡರು. ಮುಖ್ಯಮಂತ್ರಿಯಾಗಿ ಕೈಗೊಳ್ಳುವ ಎಲ್ಲಾ ಜನಪರ ಕಾರ್ಯಗಳಲ್ಲಿ ಬಿವಿಬಿ ಕಾಲೇಜು ಕಲಿಸಿದ ಪಾಠಗಳ ಪಾತ್ರ ಇರುತ್ತದೆ. ಆಡಳಿತದಲ್ಲಿ ತಾಂತ್ರಿಕತೆ, ವೈಜ್ಞಾನಿಕತೆ ತರಲು ಉತ್ಸುಕನಾಗಿದ್ದೇನೆ. ಪ್ರತಿ ಹಂತದಲ್ಲಿಯೂ ನನ್ನ ಜ್ಞಾನವನ್ನು ಪ್ರಸ್ತುತ ಸಂಶೋಧನೆಗಳೊಂದಿಗೆ ತಾಳೆ ಮಾಡಿ ಪರೀಕ್ಷಿಸಿಕೊಳ್ಳುತ್ತಿರುತ್ತೇನೆ. ಸಾರ್ವಜನಿಕ ಉಪಯೋಗ, ಸಂಕೇತಗಳ ರವಾನೆಗೆ ವೈರ್‍ಲೆಸ್ ತಂತ್ರಜ್ಞಾನ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸಾಫ್ಟ್ ವೇರ್ ಕ್ಷೇತ್ರಗಳ ಅತ್ಯಾಧುನಿಕ ವಿದ್ಯೆ, ಸಂಶೋಧನೆಗಳಲ್ಲಿ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಮಹತ್ವದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

    ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಡಾ.ಡಿ.ಎಂ.ನಂಜುಂಡಪ್ಪ ಅವರ ಕಾಠಿಣ್ಯ, ಶಿಸ್ತು, ಬದ್ಧತೆಯಿಂದ ನಮ್ಮ ವ್ಯಾಸಂಗ ಪೂರ್ಣವಾಗಲು ಸಾಧ್ಯವಾಯಿತು. ಉತ್ತಮ ಭೂತಕಾಲವಷ್ಟೇ ಅಲ್ಲ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯ. ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ. ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ. ಎಲ್ಲಾ ದೇಶಗಳು ಈ ನೀತಿ ಪಾಲಿಸಬೇಕು. ಕರ್ತವ್ಯವನ್ನು ನೈತಿಕತೆಯ ಕಾಯಕದ ರೀತಿಯಲ್ಲಿ ನಿರ್ವಹಿಸಬೇಕು. ದೇಶದ ಬಡತನ, ಆರೋಗ್ಯ, ಶಿಕ್ಷಣ, ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು. ಅದೇ ಜನರ, ಜನಪರ ರಾಜಕೀಯವಾಗಿದೆ. ಪ್ರಧಾನಮಂತ್ರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಇಥೆನಾಲ್ ಉತ್ಪಾದನೆಗೆ ಶೇ.20 ರಷ್ಟು ಅವಕಾಶ ನೀಡಿದ್ದಾರೆ. ಮುರುಗೇಶ್ ನಿರಾಣಿ ಅವರ ಇದರ ಸದುಪಯೋಗ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 10 ವರ್ಷ ಕಾಲ ರೈತರು ಪ್ರತಿಭಟನೆಗೆ ಸಿದ್ದರಿದ್ದಾರೆ – ರಾಕೇಶ್ ಟಿಕಾಯತ್

    ಇದೇ ವೇಳೆ ಬೃಹತ್, ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ಮಾತನಾಡಿ, ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿಯವರೊಂದಿಗೆ ಹಂಚಿಕೊಳ್ಳುತ್ತಿರುವುದು ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ. ಕೆಎಲ್‍ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು, ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು. ಸರ್ಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಪ್ರಯೋಜನ ಪಡೆಯಬೇಕು. ಅಕ್ಟೋಬರ್ 15 ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದರು. ಇದನ್ನೂ ಓದಿ: ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

    ಇದೇ ಸಂದರ್ಭದಲ್ಲಿ ಕೆಎಸ್ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿರುವ ಬಸವರಾಜ ಬೊಮ್ಮಾಯಿ ಹಾಗೂ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು. ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  • ಗದಗದಲ್ಲಿ ಕಾಮುಕ ಡೋಂಗಿ ಬಾಬಾನಿಗೆ ಹಿಗ್ಗಾಮುಗ್ಗ ಥಳಿತ

    ಗದಗದಲ್ಲಿ ಕಾಮುಕ ಡೋಂಗಿ ಬಾಬಾನಿಗೆ ಹಿಗ್ಗಾಮುಗ್ಗ ಥಳಿತ

    ಗದಗ: ನಗರದಲ್ಲಿ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಕಾಮುಕ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಮೂಲತ: ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಆಸೀಫ್, ಎಸ್ ಎಂ.ಕೃಷ್ಣಾ ನಗರದಲ್ಲಿ ತನ್ನ ಪತ್ನಿ ಮನೆಯಲ್ಲಿಯೇ ಬಹಳ ದಿನಗಳಿಂದ ಠಿಕಾಣಿ ಹೂಡಿದ್ದನು. ಕಷ್ಟಪಟ್ಟು ದುಡಿಯದೇ ಆರಾಮಾಗಿ ಹಣ ಸಂಪಾದನೆ ಮಾಡಬೇಕೆಂದು ಕೊಂಡಿದ್ದ ಆಸೀಫ್, ದೇವರ ಹೆಸರಲ್ಲಿ ಮಾಟ, ಮಂತ್ರ, ಅಂತ್ರ, ತಂತ್ರಗಳನ್ನು ಮಾಡಿಕೊಡುತ್ತಿದ್ದನು. ಇದನ್ನೂ ಓದಿ: ಮಂಡ್ಯ ಕದನಕ್ಕೆ ಹೆಚ್‍ಡಿಕೆ ವಿರಾಮ – ದಳಪತಿ ಸೈಲೆಂಟ್ ಆಗಿದ್ದರ ಹಿಂದಿದ್ಯಾ ಲೆಕ್ಕಾಚಾರ..?

    ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪದಲ್ಲಿ ಕೈ ಹಾಕುವುದು, ಅದರಿಂದ ಬೊಂಡಾ ಬಜ್ಜಿ ತೆಗೆಯುವುದು, ಹೀಗೆ ದೇವರ ಪವಾಡವೆಂಬಂತೆ ಜನರಿಗೆ ಮಂಕುಬೂದಿ ಎರಚುತ್ತಿದ್ದನು. ಮೈಮೇಲೆ ದೇವರು ಬಂದಂತೆ ನಟಿಸಿ ಜನರಲ್ಲಿ ನಂಬಿಕೆ ಹುಟ್ಟಿಸಿ ಮನಬಂದಂತೆ ಹಣ ಲೂಟಿ ಮಾಡುತ್ತಿದ್ದ. ಹಿಂದೂ ದೇವರುಗಳನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದನು. ಅಲ್ಲದೇ ಸಮಸ್ಯೆ ಹೊತ್ತು ಬಂದ ಸುಂದರ ಮಹಿಳೆಯರನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

    ಈ ಡೋಂಗಿ ಬಾಬಾನ ಮೋಸದ ಪವಾಡ ಬಯಲಾಗುತ್ತಿದ್ದಂತೆ, ಆಕ್ರೋಶಗೊಂಡ ಜನರು ಆತನಿಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟು ಸ್ಥಲೀಯ ಪೊಲಿಸರಿಗೆ ಒಪ್ಪಿಸಿದ್ದಾರೆ. ಡೋಂಗಿ ಬಾಬಾನಿಗೆ ಮೋಸ ಹೋದ ಜನರು ಮುಖಮೂತಿ ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹೊಡೆತಕ್ಕೆ ಡೋಂಗಿ ಬಾಬಾ ಆಸೀಫ್, ನಾನು ಮಾಡಿದ್ದು ತಪ್ಪಾಗಿದೆ, ನಾನು ಮಾಡಿದ್ದೆಲ್ಲ ಮೋಸ, ತಪ್ಪಾಗಿದೆ ಕ್ಷಮಿಸಿ, ನನ್ನನ್ನು ಬಿಟ್ಟುಬಿಡಿ ಎಂದು ಅದೆಷ್ಟೇ ಕೈ ಕಾಲು ಹಿಡಿದು ಬೇಡಿಕೊಂಡರೂ, ಜನ ಮಾತ್ರ ಡೋಂಗಿಯ ಚಳಿ ಬಿಡಿಸಿದ್ದಾರೆ. ಓರ್ವ ಮಹಿಳೆಯಂತೂ ಬಾಬಾನಿಗೆ ಮನಸೋ ಇಚ್ಚೇ ಗೂಸಾ ಕೊಟ್ಟಿದ್ದಾಳೆ. ಇದೀಗ ಆರೋಪಿಯನ್ನು ಗದಗ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮಾಡಿ ಅಸಲಿ ಮುಖ ಬಯಲು ಮಾಡಬೇಕಾಗಿದೆ. ಮಾಟ, ಮಂತ್ರ, ತಂತ್ರ ಎಂದು ಮೋಸ ಮಾಡುವವರು ಇನ್ನು ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

    ಜನ ಎಲ್ಲಿವರೆಗೂ ಮೋಸ ಹೋಗುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುವುದು ಸತ್ಯ ಅನ್ನುವುದಕ್ಕೆ ಮುದ್ರಣಾ ನಗರಿಯಲ್ಲಿ ನಡೆದ ಈ ಘಟನೆ ಒಂದು ಸಾಕ್ಷಿಯಾಗಿದೆ. ಇದನ್ನೂ ಓದಿ: ಹಳೇ ವೈಷಮ್ಯ, ಬಿಜೆಪಿ ನಾಯಕನ ಸಂಬಂಧಿ ಹತ್ಯೆ ಕೇಸ್ – ಆರೋಪಿಗಳು ಅಂದರ್

  • ದೇಶದಲ್ಲಿ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ- ಬೆಂಗಳೂರಲ್ಲಿ ಎಷ್ಟು..?

    ದೇಶದಲ್ಲಿ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ- ಬೆಂಗಳೂರಲ್ಲಿ ಎಷ್ಟು..?

    ನವದೆಹಲಿ: ದೇಶದಲ್ಲಿ ಒಂದು ಕಡೆ ಕೊರೊನಾ ತನ್ನ ಕರಿಛಾಯೆಯನ್ನು ಮುಂದುವರಿಸುತ್ತಿದೆ. ಈ ನಡುವೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ.

    ಕಳೆದ ಎರಡು ದಿನ ತಟಸ್ಥವಾಗಿದ್ದ ತೈಲ ಬೆಲೆ ಇಂದು ಏರಿಕೆಯತ್ತ ಮುಖಮಾಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 19 ಪೈಸೆ ಏರಿಕೆ ಕಂಡು, ಲೀಟರ್‍ ಗೆ 93.04 ರೂಪಾಯಿ ಆದರೆ ಡೀಸೆಲ್ 29 ಪೈಸೆ ಏರಿಕೆ ಕಂಡು ಒಂದು ಲೀಟರ್‍ ಗೆ 83.80 ರೂಪಾಯಿ ಆಗಿದೆ.

    ರಾಜಸ್ಥಾನದಲ್ಲಿ ಅತೀ ಹೆಚ್ಚು ಪೆಟ್ರೋಲ್ ಲೀಟರ್‍ ಗೆ 104 ರೂಪಾಯಿ ಆದರೆ, ಡೀಸೆಲ್ ಲೀಟರ್‍ ಗೆ 96.62 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 96.14 ರೂಪಾಯಿ ಆದರೆ, ಡೀಸೆಲ್ ಬೆಲೆ 88.84 ರೂಪಾಯಿ ತಲುಪಿದೆ.

    ವಿವಿಧ ನಗರಗಳ ದರ ಇಂತಿದೆ.
    ಮುಂಬೈ: ಪೆಟ್ರೋಲ್-99.32 ರೂಪಾಯಿ, ಡೀಸೆಲ್ 91.01 ರೂಪಾಯಿ
    ಕೋಲ್ಕತ್ತಾ: ಪೆಟ್ರೋಲ್- 93.11 ರೂಪಾಯಿ, ಡೀಸೆಲ್ 86.64 ರೂಪಾಯಿ
    ಚೆನ್ನೈ: ಪೆಟ್ರೋಲ್- 94.71 ರೂಪಾಯಿ, ಡೀಸೆಲ್ 88.62 ರೂಪಾಯಿ

  • ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    ಮಧ್ಯಪ್ರಾಚ್ಯದ ಬದಲಾಗಿ ಬೇರೆ ದೇಶಗಳಿಂದ ತೈಲ ಖರೀದಿಗೆ ಮುಂದಾದ ಭಾರತ

    – ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡಲ್ಲ
    – ಕೇಂದ್ರದ ನಿರ್ಧಾರವನ್ನು ಖಚಿತ ಪಡಿಸಿದ 2 ಸಂಸ್ಕರಣಾ ಘಟಕಗಳು

    ನವದೆಹಲಿ: ಕಚ್ಚಾ ತೈಲ ವಿಚಾರದಲ್ಲಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೇರೆ ದೇಶಗಳಿಂದ ತೈಲ ಖರೀದಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.

    ಒಪೆಕ್‌ ರಾಷ್ಟ್ರಗಳು ಏಪ್ರಿಲ್‌ ತಿಂಗಳಿನಲ್ಲೂ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸದ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ರೀತಿಯ ಸೂಚನೆ ಸರ್ಕಾರದಿಂದ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.

    ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಶೇ.84ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ.60ರಷ್ಟು ಮಧ್ಯಪ್ರಾಚ್ಯದಿಂದಲೇ ಆಮದಾಗುತ್ತದೆ. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಮಧ್ಯಪ್ರಾಚ್ಯದ ದೇಶಗಳಿಂದ ಬರುವ ತೈಲ ಬಹಳ ಅಗ್ಗ.

    ಭಾರತದ ಮನವಿಯ ಹೊರತಾಗಿಯೂ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಸೌದಿ ಇಂಧನ ಸಚಿವರು ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಬಹಳ ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಬಳಸಿ ಎಂದು ಸೂಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಗೆ ಮುಂದಾಗಿದೆ.  ಇದನ್ನೂ ಓದಿ: ಸೌದಿ ತೈಲ ಘಟಕದ ಮೇಲೆ ಡ್ರೋನ್‌ ದಾಳಿ – ಗಗನಕ್ಕೆ ಏರಿದ ಕಚ್ಚಾ ತೈಲ ಬೆಲೆ

    ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಹುಡುಕುವಂತೆ ನಾವು ಕಂಪನಿಗಳಿಗೆ ತಿಳಿಸಿದ್ದೇವೆ. ತೈಲ ಉತ್ಪಾದಿಸುತ್ತಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ಒಪೆಕ್‌ ರಾಷ್ಟ್ರಗಳು ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆಯಾಬೇಕೆಂದು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2020ರಲ್ಲಿ ತೈಲ ಬೇಡಿಕೆ ಕುಸಿತಗೊಂಡರೂ ನಾವು ಅವರ ಜೊತೆ ಮಾಡಿಕೊಂಡಿದ್ದ ತೈಲ ಆಮದನ್ನು ರದ್ದು ಮಾಡಿರಲಿಲ್ಲ. ಹೀಗಾಗಿ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.

    ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಆರಂಭದಲ್ಲಿ ಹೆಚ್ಚು ಹಣ ಪಾವತಿಸಬೇಕಾದರೂ ಭವಿಷ್ಯದಲ್ಲಿ ಇದರಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಒಂದು ಪ್ಲಾನ್‌ ಇದೆ. ಇದರ ಜೊತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಕಂಪನಿಯು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದ ಮತ್ತೆಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುಬಹುದು ಎಂಬ ಭರವಸೆ ಭಾರತಕ್ಕಿದೆ.

    ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿದೆ. ಇರಾಕ್‌ ಈಗಾಗಲೇ ವಾರ್ಷಿಕ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.

    ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಕೇಳಿದ್ದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಒಟ್ಟಿಗೆ ಇತ್ತು. ಆದರೆ ಈಗ ಕೆಲ ದೇಶಗಳು ಅವರ ಆರ್ಥಿಕತೆಗಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿ ದೂರಿದ್ದಾರೆ.

  • ಎಲ್‌ಪಿಜಿ ಸಿಲಿಂಡರ್‌ ದರ 50 ರೂ. ಏರಿಕೆ

    ಎಲ್‌ಪಿಜಿ ಸಿಲಿಂಡರ್‌ ದರ 50 ರೂ. ಏರಿಕೆ

    ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 100ರ ಗಡಿಯತ್ತ ಬರುತ್ತಿರುವ ನಡುವೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಬಿಸಿಯೂ ತಟ್ಟಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಏರಿಕೆಯಾಗಿದೆ.

    ಎಲ್‌ಪಿಜಿ ಸಿಲಿಂಡರ್‌ ದರ ಭಾನುವಾರ ಬೆಂಗಳೂರಿನಲ್ಲಿ 722 ರೂ. ಇತ್ತು. ಈಗ ಇದು 772 ರೂ.ಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್‌ನಿಂದ ಈಚೆಗೆ ಸಿಲಿಂಡರ್‌ ದರದಲ್ಲಿ ಮೂರು ಬಾರಿ ಹೆಚ್ಚಳ ಮಾಡಲಾಗಿದೆ. ಫೆ.4 ರಂದು 25 ರೂ. ಏರಿಕೆ ಕಂಡಿತ್ತು.

    ಸರ್ಕಾರ ಪ್ರತಿ ವರ್ಷ 14.2 ಕೆಜಿ ತೂಕದ 12 ಸಿಲಿಂಡರ್‌ಗಳನ್ನುಉಚಿತವಾಗಿ ನೀಡುತ್ತಿದೆ. ಕೋವಿಡ್‌ 19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ.

    ಎಲ್‌ಪಿಜಿ ಸಿಲಿಂಡರ್‌ ದರವನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತಿರುತ್ತವೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಅಮೆರಿಕ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಹೆಚ್ಚಾಗುತ್ತದೆ ಮತ್ತು ಇಳಿಕೆಯಾಗುತ್ತದೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಆಗುತ್ತಿದೆ.

    ಎಲ್ಲಿ ಎಷ್ಟು ದರ?
    ದೆಹಲಿ 769 ರೂ., ಕೋಲ್ಕತ್ತಾ 795, ಮುಂಬೈ 769 ರೂ., ಚೆನ್ನೈ 785 ರೂ. ದರಕ್ಕೆ ಏರಿಕೆಯಾಗಿದೆ.