ಸೌರವ್ ಲೋಕೇಶ್ ಹೀಗಂದ್ರೆ ಎಷ್ಟೋ ಜನಕ್ಕೆ ಗೊತ್ತಾಗ್ಲಿಕ್ಕಿಲ್ಲ. ಭಜರಂಗಿ ಲೋಕಿ ಅಂದ್ರೆ ಎಲ್ಲರಿಗೂ ಗೊತ್ತು. ಭಜರಂಗಿ ಸಿನಿಮಾ ಮೂಲಕ ಯಾರಪ್ಪ ಈ ನಟ ಅಂತ ಇಡೀ ಇಂಡಸ್ಟ್ರೀ ಒಮ್ಮೆಲೆ ತಿರುಗಿ ನೋಡುವಂತೆ ಮಾಡಿದ ಕಲಾವಿದ. ತನ್ನ ಅಮೋಘ ಅಭಿನಯದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಸೌರವ್ ಲೋಕೇಶ್ ಭಜರಂಗಿ ಸಿನಿಮಾ ನಂತರ ಭಜರಂಗಿ ಲೋಕಿ ಎಂದೇ ಫೇಮಸ್ ಅಂತ ಆದರು. ಈಗ ತೆಲುಗಿನ ಒಜಿ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮುಂದೆ ಅಬ್ಬರಿಸಿದ್ದಾರೆ.
ಭಜರಂಗಿ ಯಶಸ್ಸಿನ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ ಲೋಕಿ ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಪ್ರಪಂಚದಾದ್ಯಂತ ತೆರೆಗೆ ಬರ್ತಿರೋ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಓಜಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಭಜರಂಗಿ ಲೋಕಿ ಕೂಡ ಅಭಿನಯಿಸಿದ್ದಾರೆ. ಖಡಕ್ ಹಾಗೂ ಸ್ಟೈಲಿಷ್ ವಿಲನ್ ಆಗಿ ಲೋಕಿ ಪವನ್ ಕಲ್ಯಾಣ್ ಎದುರು ಕಾಣಿಸಿಕೊಳ್ತಿರೋದು ವಿಶೇಷ.

ಸದ್ಯ ಬಿಡುಗಡೆ ಆಗಿರೋ ಟ್ರೇಲರ್ ನಲ್ಲಿ ಭಜರಂಗಿ ಲೋಕಿ ಲುಕ್ ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದಕ್ಕೆ ಲೋಕಿ ಸಂತಸ ವ್ಯಕ್ತ ಪಡಿಸಿದ್ದಾರೆ. ಅದಷ್ಟೇ ಅಲ್ಲದೆ ಓಜಿ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರವಹಿಸಿದ್ದು ಇಮ್ರಾನ್ ಹಶ್ಮಿ ಅವರ ಜೊತೆಯಲ್ಲಿಯೂ ಲೋಕಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಓಜಿ 90 ರ ದಶಕದ ಮುಂಬೈ ಮಾಫಿಯಾ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ, ಸೌರವ್ ಲೋಕೇಶ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಥಮನ್ ಎಸ್. ಅವರು ಸಂಗೀತ ನೀಡಿದ್ದಾರೆ. ಸುಜೀತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.



