Tag: OG Kuppam gang

  • 10 ರೂ. ತೋರಿಸಿ ಲಕ್ಷ ಲಕ್ಷ ಕಳವು ಮಾಡುತ್ತಿದ್ದ ಓಜಿಕುಪ್ಪಂ ಕಳ್ಳರ ಅರೆಸ್ಟ್

    10 ರೂ. ತೋರಿಸಿ ಲಕ್ಷ ಲಕ್ಷ ಕಳವು ಮಾಡುತ್ತಿದ್ದ ಓಜಿಕುಪ್ಪಂ ಕಳ್ಳರ ಅರೆಸ್ಟ್

    – ಬಂಧಿತರಿಂದ 11.80 ಲಕ್ಷ ರೂ., 2 ಬೈಕ್ ವಶ

    ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

    ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳು. ಆಂಧ್ರ ಪ್ರದೇಶ, ಕರ್ನಾಟಕ ಗಡಿನಾಡಿನಲ್ಲಿ ಪೋಲಿಸರ ನಿದ್ದೆ ಕೆಡಿಸಿದ್ದ ಈ ಗ್ಯಾಂಗ್ ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ, ಕೈತುಂಬ ಹಣ ದೋಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು.

    ಗ್ಯಾಂಗ್ ಹಿನ್ನೆಲೆ ಏನು?:
    ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗಮನ ಬೇರೆಡೆ ಸೆಳೆಯುವತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಅಮಾಯಕರ ಹಣವನ್ನು ಎಗರಿಸುತ್ತಿದ್ದು. ಈ ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಹೆಚ್ಚು ಆಕ್ವೀವ್ ಆಗಿತ್ತು.

    ಸಾಮಾನ್ಯ ಜನರು ಪ್ರತಿದಿನ ಈ ಮೋಸದ ಜಾಲಕ್ಕೆ ಸಿಲುಕಿ ತಮ್ಮಲ್ಲಿರುವ ಹಣವನ್ನ ಕಳೆದುಕೊಳ್ತುತ್ತಿದ್ದರು. ಇದೆ ಗ್ಯಾಂಗ್‍ನ ಇಬ್ಬರು ಚಿಕ್ಕಬಳ್ಳಾಪುರ ನಗರದಲ್ಲಿ ತಮ್ಮ ಕೈಚಳಕ ತೋರಿ ಕೊಳವನಹಳ್ಳಿ ನಿವಾಸಿ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಮೂರುವರೆ ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದರು. ಹೀಗಾಗಿ ರತ್ನಮ್ಮ ಜಯರಾಮಯ್ಯರಿಂದ ದೂರು ಪಡೆದ ಚಿಕ್ಕಬಳ್ಳಾಪುರ ನಗರ ಠಾಣೆ ಪೋಲಿಸರು, ಆರೋಪಿಗಳು ಬಳಸಿದ್ದ ಮೊಬೈಲ್ ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

    ಪ್ರತಿ ದಿನ ಒಂದೊಂದು ಊರಿನಲ್ಲಿ ಕಾರ್ಯಾಚರಣೆ ನಡೆಸುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಗಾರಿ ಮಂಡಲಂನ ಓ.ಜಿ.ಕುಪ್ಪಂ ಗ್ಯಾಂಗ್, ಬ್ಯಾಂಕ್, ಎ.ಟಿ.ಎಂ, ವಾಣಿಜ್ಯ ಸ್ಥಳಗಳಲ್ಲಿ ಹಣ ಪಡೆದು ಬರುವವರನ್ನು ಗುರಿಯಾಗಿಸಿ ಸ್ಕೆಚ್ ಹಾಕುತ್ತಿದ್ದರು. ಬಳಿಕ ಅವರಿಗೆ ಮತ್ತು ಬರುವ ಔಷಧ, ತುರಕೆ ಔಷಧ ಅಥವಾ ರಸ್ತೆಯಲ್ಲಿ ಹತ್ತು, ಇಪ್ಪತ್ತು ರೂಪಾಯಿ ಬಿಸಾಡಿ ನೋಡಿ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದು ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದರು.

    ಸದ್ಯ ಬಂಧಿತ ಆರೋಪಿಗಳಿಂದ 11.80 ಲಕ್ಷ ರೂ., 2 ಬೈಕ್ ಜಪ್ತಿ ಮಾಡಿದ್ದಾರೆ. ಅಲ್ಲದೆ ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಹಣ ಕಳೆದುಕೊಂಡ ಸಾಮಾನ್ಯ ಜನರಿಗೆ ಮರಳಿ ಹಣ ಸಿಗುವಂತೆ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿಪಿ ಅಣ್ಣಮಲೈ ತಂಡದಿಂದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್

    ಡಿಸಿಪಿ ಅಣ್ಣಮಲೈ ತಂಡದಿಂದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಬ್ಯಾಂಕಿಗೆ ಹೋಗುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಹಣ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿಕುಪ್ಪಂ  ಗ್ಯಾಂಗ್ ಸದಸ್ಯರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

    ಪ್ರವೀಣ್, ರಮೇಶ್, ರಾಜು, ಕಾರ್ತಿಕ್, ಅಂಕಯ್ಯಾ ಅಲಿಯಾಸ್ ಬಾಬು ಬಂಧಿತ ಆರೋಪಿಗಳು. ನಗರ ಸೇರಿದಂತೆ ಹಲವು ಕಡೆ ಬ್ಯಾಂಕ್ ತೆರಳುವ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾಗುತ್ತಿದ್ದರು.

    ಬ್ಯಾಂಕ್ ಗ್ರಾಹಕರನ್ನೇ ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಇದರಂತೆ ಸುಬ್ರಮಣ್ಯಪುರ ಎಸಿಪಿ ಮಹದೇವ್ ಮುಂದಾಳತ್ವದ ತಂಡ ಆರೋಪಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಇಂದು ಖತರ್ನಾಕ್ ಗ್ಯಾಂಗಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಗ್ಯಾಂಗ್ ಕಾರ್ಯಾಚರಣೆ ಹೀಗಿತ್ತು: ಬ್ಯಾಂಕ್​ನಲ್ಲಿ  50ಸಾವಿರಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಿದ ಗ್ರಾಹಕರನ್ನು ಮಾತ್ರ  ಗ್ಯಾಂಗ್ ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಬ್ಯಾಂಕ್ ಒಳಗಿದ್ದ ಗ್ಯಾಂಗ್ ಸದಸ್ಯ ಇತರೇ ಸದಸ್ಯರಿಗೆ ತಮ್ಮ ಗುರಿ ಯಾರು ಎಂದು ಖಚಿತ ಪಡಿಸುತ್ತಿದ್ದ. ಬಳಿಕ ಹಣ ಪಡೆದ ಗ್ರಾಹಕ ಬ್ಯಾಂಕ್ ನಿಂದ ಹೊರ ಬರುತ್ತಿದಂತೆ ಆತನ ಮೇಲೆ ಕೆರೆತ ಆರಂಭವಾಗುವ ಸ್ಪ್ರೇ ಮಾಡುತ್ತಿದ್ದರು. ಬಳಿಕ ಆತನನ್ನು ಹಿಂಬಾಲಿಸುತ್ತಿದ್ದರು. ಹಣ ಪಡೆದ ಗ್ರಾಹಕ ತುರಿಕೆ ಅನುಭವವಾಗಿ ವಾಹನ ನಿಲ್ಲಿಸಿ ನೀರಿನಿಂದ ತೊಳೆದುಕೊಳ್ಳಲು ಹೋಗುತ್ತಿದ್ದಂತೆ ಗ್ಯಾಂಗಿನ ಸದಸ್ಯರು ಹಣ ದೋಚಿ ಪರಾರಿಯಾಗುತ್ತಿದ್ದರು. ಇದೇ ರೀತಿ ಹಲವು ಕಡೆ ಗ್ರಾಹಕರ ಹಣ ದೋಚಿದ್ದರು.

    ಸದ್ಯ ಬಂಧಿತ ಆರೋಪಿಗಳಿಂದ 5 ಲಕ್ಷ ಹಣ ರೂ. ಹಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 2 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓಜಿಕುಪ್ಪಂ ಗ್ಯಾಂಗ್ ಬಂಧನದಿಂದ ನಗರದ ದಕ್ಷಿಣ ವಿಭಾಗದಲ್ಲಿ ಸುಮಾರು 19 ಪ್ರಕರಣಗಳು ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com