Tag: Official residence

  • ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ  ಇಮ್ರಾನ್‍ಖಾನ್

    ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ ಇಮ್ರಾನ್‍ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲು ಮುಂದಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಇಮ್ರಾನ್ ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲಿದ್ದಾರೆ. ಈ ಕುರಿತಾಗಿ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. 2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.

    ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ:  45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿ ಇದೀಗ ಬಾಡಿಗೆಗೆ ನೀಡುತ್ತಿರುವುದ್ಯಾಕೆ ಎಂಬುದಕ್ಕೆ ಉತ್ತರ ಹಣಕಾಸಿನ ಕೊರತೆಯಾಗಿದೆ. ಈ ಹಿಂದೆ ಇಮ್ರಾನ್‍ಖಾನ್ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೆ ಸುದ್ದಿಯಾಗಿದ್ದರು. ಇದೀಗ ನಿವಾಸವನ್ನು ಬಾಡಿಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಹೈದರಾಬಾದ್: 8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ತೆಲುಗುದೇಶಂ ಪಕ್ಷದ (ಟಿಡಿಪಿ) ಕಚೇರಿ `ಪ್ರಜಾ ವೇದಿಕೆ’ ಧ್ವಂಸಗೊಳಿಸಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದೆ.

    ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದೆ. ಪ್ರಜಾ ವೇದಿಕೆ ಸ್ಥಳದಿಂದ ಕೂಗಳತೆ ದೂರದಲ್ಲಿ ಚಂದ್ರಬಾಬು ನಾಯ್ಡು ಮನೆ ಇದೆ. ಪ್ರಸ್ತುತ ನಾಯ್ಡು ಅವರ ಕುಟುಂಬ ವಿದೇಶ ಪ್ರವಾಸದಲ್ಲಿದ್ದು, ನೊಟೀಸ್ ಅನ್ನು ಅವರ ನಿವಾಸಕ್ಕೆ ಅಂಟಿಸಲಾಗಿದೆ. ಒಂದು ವಾರದೊಳಗೆ ಉತ್ತರಿಸದಿದ್ದರೆ, ಕಟ್ಟಡ ತೆರವುಗೊಳಿಸುವ ಕುರಿತು ನಿರ್ಧರಿಸಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.

    ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದಾರೆ.

    ಪ್ರಜಾ ವೇದಿಕಾ ಎಂಬ ಅತಿಥಿ ಗೃಹದ ಒಂದು ಭಾಗವನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪ್ರಜಾ ವೇದಿಕಾವನ್ನು ಸರ್ಕಾರಿ ವೆಚ್ಚದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದೆ ಎಂದು ಹೇಳಿ ಆಂಧ್ರ ಸರ್ಕಾರ ನೆಲಸಮಗೊಳಿಸಲು ಆದೇಶ ನೀಡಿತ್ತು. ಇದೀಗ ಇದೇ ಕಾರಣವನ್ನು ನೀಡಿ ಮನೆಯನ್ನು ತೆರವುಗೊಳಿಸುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೂಚಿಸಲಾಗಿದೆ.