Tag: official

  • ಪ್ರಯಾಣಿಕನ ಮೇಲೆ ಮೆಟ್ರೋ ಸಿಬ್ಬಂದಿಯ ದರ್ಪ – ಪೊಲೀಸರಿಗೆ ಕರೆ ಮಾಡಿ ಧಮ್ಕಿ

    ಪ್ರಯಾಣಿಕನ ಮೇಲೆ ಮೆಟ್ರೋ ಸಿಬ್ಬಂದಿಯ ದರ್ಪ – ಪೊಲೀಸರಿಗೆ ಕರೆ ಮಾಡಿ ಧಮ್ಕಿ

    ಬೆಂಗಳೂರು: ಪ್ರಯಾಣಿಕನ ಮೇಲೆ ಮೆಟ್ರೋ ಸಿಬ್ಬಂದಿಯೊಬ್ಬರು ದರ್ಪ ತೋರಿದ ಘಟನೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

    2 ರೂ. ಚಿಲ್ಲರೆಗಾಗಿ ಮೆಟ್ರೋ ಟಿಕೆಟ್ ಎಕ್ಸಿಟ್ ಗೇಟ್ ಬಳಿ ಪ್ರಯಾಣಿಕನನ್ನು ನಿಲ್ಲಿಸಿ ತೊಂದರೆ ಕೊಟ್ಟಿದ್ದಾರೆ. ಪ್ರದೀಪ್ ಎಂಬವರು ಲಾಲ್‍ಬಾಗ್‍ನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಲಾಲ್‍ಬಾಗ್‍ನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಟಿಕೆಟ್ ದರ 22 ರೂ. ಇದೆ. ಆದರೆ ಅಲ್ಲಿನ ಸಿಬ್ಬಂದಿ 20 ರೂ. ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ.

    ಮೆಟ್ರೋ ಸಿಬ್ಬಂದಿ ಎಡವಟ್ಟಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮೆಟ್ರೋ ಸ್ಟೇಷನ್‍ನಿಂದ ಹೊರ ಬಿಡದೇ ಪ್ರಯಾಣಿಕನನ್ನು ಸತಾಯಿಸಿದ್ದಾರೆ. ಯಲಚೇನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಾಗ 2 ರೂ. ಚಿಲ್ಲರೆ ಕೊಟ್ಟು ನಿರ್ಗಮಿಸಿ ಎಂದು ಪ್ರಯಾಣಿಕನಿಗೆ ಎಎಸ್‍ಓ ಮೆಟ್ರೋ ಸಿಬ್ಬಂದಿ ಪುಟ್ಟಸ್ವಾಮಿ ಅವಾಜ್ ಹಾಕಿದ್ದಾನೆ. ಚಿಲ್ಲರೆ ಇಲ್ಲ. ನೀವೇ ಕೊಡಿ ಸರ್ ಎಂದು ಪ್ರಯಾಣಿಕ ಹೇಳಿದಾಗ ಪ್ರಯಾಣಿಕನ ಮೇಲೆ ಪುಟ್ಟಸ್ವಾಮಿ ರೇಗಾಡಿದ್ದಾನೆ.

    ಚಿಲ್ಲರೆ ಕೊಟ್ಟೇ ಇಲ್ಲಿಂದ ಎಕ್ಸಿಟ್ ಆಗಬೇಕು ಎಂದು ಅರ್ಧಗಂಟೆಗೂ ಹೆಚ್ಚು ಕಾಲ ಮೆಟ್ರೋ ನಿಲ್ದಾಣದಲ್ಲೇ ನಿಲ್ಲಿಸಿಕೊಂಡಿದ್ದಾರೆ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕು ಸರ್ ಎಂದು ಪ್ರಯಾಣಿಕ ಎಷ್ಟೇ ಮನವಿ ಮಾಡಿದರೂ, ಮೆಟ್ರೋ ನಿಲ್ದಾಣದಿಂದ ಹೊರ ಬಿಟ್ಟಿಲ್ಲ. ಪೊಲೀಸರಿಗೆ ಹೇಳಿ ಒದ್ದಿಸ್ತಿನಿ ಎಂದು ಪ್ರಯಾಣಿಕನಿಗೆ ಹೆದರಿಸಿ, ರಾಜನಕುಂಟೆ ಪೊಲೀಸರಿಗೆ ಪುಟ್ಟಸ್ವಾಮಿ ಕರೆ ಮಾಡಿ ಪ್ರಯಾಣಿಕನಿಗೆ ಧಮ್ಕಿ ಹಾಕಿದ್ದಾನೆ.

  • ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ: ಬಿಜೆಪಿ ಶಾಸಕ

    ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ: ಬಿಜೆಪಿ ಶಾಸಕ

    – ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದ ಶಾಸಕನಿಗೆ ಜಾಮೀನು

    ಭೋಪಾಲ್: ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಶಾಸಕ ಆಕಾಶ್ ವಿಜಯ್‍ವರ್ಗಿ ಅವರು, ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯ ಅವರ ಪುತ್ರ, ಇಂದೋರ್-3 ಶಾಸಕ ಆಕಾಶ್ ಅವರು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದು ಜೈಲಿಗೆ ಸೇರಿದ್ದರು. ಅವರಿಗೆ ಭೋಪಾಲದ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿತ್ತು. ಇಂದು ಜೈಲಿನಿಂದ ಹೊರ ಬಂದಿದ್ದಾರೆ.

    ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ನಾನು ಜೈಲಿನಲ್ಲಿ ಒಳ್ಳೆಯ ರೀತಿಯಲ್ಲಿ ಕಾಲ ಕಳೆದಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

    ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆಕಾಶ್ ಅವರನ್ನು ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿದರು. ಅಷ್ಟೇ ಅಲ್ಲದೆ ಪಕ್ಷದ ಕಚೇರಿ ಮುಂದೆ ಕುಣಿದು ಕುಪ್ಪಳಿಸಿದರು.

    ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದೇನೆ. ಘಟನೆಯ ಬಗ್ಗೆ ನಾನು ಮುಜುಗುರಕ್ಕೆ ಒಳಗಾಗುವುದಿಲ್ಲ. ಆದರೆ ಮತ್ತೆ ನಾನು ಬ್ಯಾಟಿಂಗ್ ಮಾಡದಂತೆ ಕಾಯುವಂತೆ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಹೇಳಿದರು.

    ಶಾಸಕ ಆಕಾಶ್, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕರ ವರ್ತನೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಸಕರ ಬೆಂಬಲಕ್ಕೆ ನಿಂತಿದ್ದರು.

  • ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಭೋಪಾಲ್: ಅಧಿಕಾರಿ ಕೇಳಿದಷ್ಟು ಲಂಚ ನೀಡಲು ಹಣವಿಲ್ಲದೇ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಬಳಿ ಇದ್ದ ಎಮ್ಮೆಯನ್ನೇ ಆದಾಯ ಇಲಾಖೆ ಅಧಿಕಾರಿ ವಾಹನಕ್ಕೆ ಕಟ್ಟಿ ಕೆಲಸ ಮಾಡಿಕೊಡುವಂತೆ ವಿಚಿತ್ರವಾಗಿ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾರೆ.

    ಟಿಕಮ್‍ಗಢ ಜಿಲ್ಲೆಯ ಖರ್ಗಾಪುರ ಪ್ರದೇಶದಲ್ಲಿರುವ ಆದಾಯ ಇಲಾಖೆ ಕಚೇರಿ ಬಳಿ ಈ ಘಟನೆ ನಡೆದಿದೆ. ದೇವಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಯಾದವ್(50) ಲಂಚದ ಬದಲಾಗಿ ಎಮ್ಮೆಯನ್ನೇ ತಹಶೀಲ್ದಾರ್ ಅವರ ವಾಹನಕ್ಕೆ ಕಟ್ಟಿದ್ದಾರೆ.

    ರೈತ ತಾನು ಖರೀದಿಸಿದ್ದ ಸ್ವಲ್ಪ ಜಮೀನನ್ನು ತನ್ನ ಸೊಸೆಯರ ಹೆಸರಿಗೆ ಮಾಡಿಸಲು ಆದಾಯ ಇಲಾಖೆ ಕಚೇರಿಗೆ ಹೋಗಿದ್ದರು. ಆಗ ಜಮೀನು ವರ್ಗಾವಣೆ ಮಾಡಿಕೊಡಲು ತಹಶೀಲ್ದಾರ್ 1ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರಿಂದ ಹೇಗೋ ಕಷ್ಟ ಪಟ್ಟು 50 ಸಾವಿರ ರೂಪಾಯಿಯನ್ನು ರೈತ ನೀಡಿದ್ದರು. ಆದರೆ ಪೂರ್ತಿ ಹಣವನ್ನು ನೀಡುವ ವರೆಗೂ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಪಟ್ಟುಹಿಡಿದಿದ್ದಾರೆ.

    ಬಾಕಿ ಹಣವನ್ನು ಹೊಂದಿಸಲು ಆಗದೇ ಶನಿವಾರದಂದು ರೈತ ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ನನ್ನ ಬಳಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಎಮ್ಮೆಯನ್ನು ಇಟ್ಟುಕೊಂಡು ಜಮೀನು ವರ್ಗಾವಣೆ ಮಾಡಿಕೊಡಿ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೌರವ್ ಕುಮಾರ ಸುಮನ್ ಅವರು ಈ ವಿಚಾರದ ಬಗ್ಗೆ ಎಲ್ಲಾ ಮಹಿತಿ ಪಡೆದು, ಸಮಸ್ಯೆಯನ್ನು ಬಗೆಹರಿಸುವಂತೆ ಬಾಲದೇವಗಡದ ಉಪವಿಭಾಗ ಅಧಿಕಾರಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡುಬೀದಿಯಲ್ಲೇ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಶಾಸಕ ನಾಗೇಂದ್ರ!

    ನಡುಬೀದಿಯಲ್ಲೇ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಶಾಸಕ ನಾಗೇಂದ್ರ!

    ಮೈಸೂರು: ಸಿಎಂ ಜಿಲ್ಲೆಗೆ ಬರುತ್ತಿರುವ ವಿಷಯ ತಿಳಿಸಿಲ್ಲ ಅಂತ ಸಿಟ್ಟಿಗೆದ್ದ ಶಾಸಕರೊಬ್ಬರು ನಡುಬೀದಿಯಲ್ಲೇ ಅಧಿಕಾರಿಯನ್ನು ಎಲ್ಲರ ಮುಂದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.

    ಜಿಲ್ಲೆಯ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅಧಿಕಾರಿಯನ್ನು ನಿಂದಿಸಿ ಅವಾಜ್ ಹಾಕಿದ್ದಾರೆ. ಸಿಎಂ ಅವರು ಜಿಲ್ಲೆಗೆ ಬರುತ್ತಿರುವ ವಿಷಯವನ್ನು ಅಧಿಕಾರಿಗಳು ತಮಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ನಾಗೇಂದ್ರ ಅವರು ನಡುಬೀದಿಯಲ್ಲೇ ಅಧಿಕಾರಿಗೆ ಬೈದಿದ್ದಾರೆ. ಇಲ್ಲಿಗೆ ಯಾಕೆ ಬಂದಿದ್ಯಾ ರಜೆ ಹಾಕಿ ನೀನು? ಸಿಎಂ ಬರಬೇಕಾದ್ರೆ ಹೇಳಬೇಕು ಅನ್ನೋ ಯೋಗ್ಯತೆ ಇಲ್ಲ ನಿಂಗೆ ಲೋಫರ್ ತಂದು ಎಂದು ಹೇಳಿ ಅಧಿಕಾರಿಗೆ ನಿಂದಿಸಿದ್ದಾರೆ.

    ಮೈಸೂರಿನ ಲ್ಯಾನ್ಸ್ ಕಟ್ಟಡ ವೀಕ್ಷಣೆ ವೇಳೆ ಸ್ಥಳೀಯ ಶಾಸಕರ ನಿರ್ಲಕ್ಷ್ಯ ತೋರಿದ್ದು, ಸಿಎಂ ಅವರು ಕಟ್ಟಡ ವೀಕ್ಷಣೆಗೆ ಬರುತ್ತಾರೆ ಅಂತ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿರಲಿಲ್ಲ. ಆದರಿಂದ ಕೋಪಗೊಂಡ ನಾಗೇಂದ್ರ ಅವರು ಅಧಿಕಾರಿಗೆ ಬೈದು ಸಮಾಧಾನಪಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಕಲಬುರಗಿ: ಕೃಷಿ ಹೊಂಡದ ಮಾಹಿತಿ ಕೇಳಲು ಹೋದ ರೈತರಿಗೆ ಅಧಿಕಾರಿಯೋರ್ವ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೃಷಿ ಇಲಾಖೆಯಲ್ಲಿ ನಡೆದಿದೆ.

    ತಾಲೂಕಿನ ಚಿಂಚೋಳಿ ಗ್ರಾಮದ ರೈತರು ನಾವು ದಾಖಲಾತಿ ನೀಡಿದ್ದರೂ ನಮ್ಮ ಜಮೀನಿನಲ್ಲಿ ಮಾತ್ರ ಯಾಕೆ ಕೃಷಿ ಹೊಂಡ ನಿರ್ಮಿಸಿಲ್ಲ ಅಂತಾ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೊಪಗೊಂಡ ಅಧಿಕಾರಿ ನಿಮ್ಮ ಫಾರಂ ರಿಜಕ್ಟ್ ಮಾಡಿ ಹರಿದು ಹಾಕಿದ್ದೇನೆ. ಸಿಒಡಿ-ಸಿಬಿಐ ಅಲ್ಲದೇ ಯಾರಿಗಾದರೂ ಕರೆದುಕೊಂಡು ಬನ್ನಿ ನಾನು ನೋಡ್ಕೊತೀನಿ ಅಂತ ಅವಾಚ್ಯ ಶಬ್ಧಗಳಿಂದ ರೈತರಿಗೆ ನಿಂದಿಸಿದ್ದಾನೆ.

    ಅಧಿಕಾರಿ ಅಸಭ್ಯ ವರ್ತನೆಗೆ ರೈತರು ಬೇಸತ್ತು ನಾವು ನಿಮ್ಮ ಮೇಲೆ ಯಾವ ತನಿಖೆಗೂ ಹಾಕಲ್ಲ, ಹಾಗೆ ಮಾಡೋದಾಗಿದ್ರೆ ನಿಮ್ಮ ಬಳಿ ಯಾಕೆ ಬರುತ್ತಿದ್ದೇವು? ಅಧಿಕಾರಿಗಳೇ ಹೀಗೆ ಹೇಳಿದರೆ ರೈತರು ಏನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಅಧಿಕಾರಿ ಏನಾದರೂ ಮಾಡಿಕೊಳ್ಳಿ ನಾನು ಯಾರಿಗೂ ಹೆದರೋದಿಲ್ಲ ಎನ್ನುವ ರೀತಿ ಉತ್ತರ ನೀಡಿ ರೈತರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.

    ಈ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಅಧಿಕಾರಿಯ ದರ್ಪದ ವರ್ತನೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv