Tag: officers

  • ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    -ದಂಧೆಕೋರರ ಚಳಿ ಬಿಡಿಸಿದ ಅಧಿಕಾರಿಗಳು

    ಚಿಕ್ಕಬಳ್ಳಾಪುರ: ಇಷ್ಟು ದಿನ ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ಮಾಫಿಯಾ ಇದೀಗ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದೆ. ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಜಲ್ಲಿ ಕಲ್ಲು, ಗ್ರಾನೈಟ್ ದಿಮ್ಮಿಗಳು, ಕಲ್ಲಿನ ಬೋಲ್ಡರ್ಸ್ ಗಳನ್ನು ಬೃಹತ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದನ್ನರಿತ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾನ್ ಜಿ ನಾಯಕ್ ಹಾಗೂ ಸಂದೀಪ್ ದಾಳಿ ನಡೆಸಿದ್ದಾರೆ.

    ಯಲಗಲಹಳ್ಳಿ, ಚಿಕ್ಕನಾಗವಲ್ಲಿ ಗ್ರಾಮದ ಸುತ್ತಮುತ್ತಲಿನ ಕಲ್ಲು ಕ್ವಾರಿಗಳಲ್ಲಿನ ಟಿಪ್ಪರ್ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಅಧಿಕಾರಿಗಳ ಬೆನ್ನುಬಿದ್ದ ದಂಧೆಕೋರರು ಅಧಿಕಾರಿಗಳಿಗೆ ಭಯ ಹುಟ್ಟಿಸಿದ್ದಾರೆ. ನಾಲ್ಕೈದು ಕಾರು, ಬೈಕ್‍ಗಳಲ್ಲಿ ಅಧಿಕಾರಿಗಳನ್ನು ಹಿಂಬಾಲಿಸಿದ ಮಾಫಿಯಾ ಪಡೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡುವ ಹಾಗೆ ಚಮಕ್ ಕೊಟ್ಟಿದ್ದಾರೆ. ಆದ್ರೂ ಧೃತಿಗೆಡದ ಅಧಿಕಾರಿಗಳು ಯಲಗಲಹಳ್ಳಿ ಬಳಿ 8, ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದ್ರು. ಅತ್ತ ಸಾರಿಗೆ ಇಲಾಖೆಯ ಆರ್.ಟಿ.ಓ ನಾಗಿರೆಡ್ಡಿ ಸಹ ರಾಷ್ಟ್ರೀಯ ಹೆದ್ದಾರಿ 7ರ ಹೊನ್ನೇನಹಳಿ ಬಳಿ 5 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮೊರೆ ಹೋಗಿದ್ದಾರೆ.

    ಈ ಘಟನೆ ನಂತರ ಮತ್ತಷ್ಟು ಚುರುಕಾಗಿರುವ ಡಿಸಿ ಅನಿರುದ್ ಶ್ರವಣ್, ಪ್ರತಿ ದಿನ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿ ಗಣಿ ಗ್ಯಾಂಗ್‍ಗೆ ಶಾಕ್ ನೀಡಿ ಅಂತ ಆದೇಶಿಸಿದ್ದಾರೆ. ಇದರಿಂದ ದಂಧೆಕೋರರು ಅನ್ಯ ಮಾರ್ಗಗಳತ್ತ ಮುಖ ಮಾಡ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಖಲೆಯಿಲ್ಲದ ಬರೋಬ್ಬರಿ 12 ಕೋಟಿ ಮೌಲ್ಯದ ಅಡಿಕೆ ಜಪ್ತಿ

    ದಾಖಲೆಯಿಲ್ಲದ ಬರೋಬ್ಬರಿ 12 ಕೋಟಿ ಮೌಲ್ಯದ ಅಡಿಕೆ ಜಪ್ತಿ

    ಬೆಂಗಳೂರು: ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತುಮಕೂರಿನಲ್ಲಿ ಬರೋಬ್ಬರಿ 12 ಕೋಟಿ ಮೌಲ್ಯದ ದಾಖಲೆಗಳಿಲ್ಲದ ಅಡಿಕೆಯನ್ನು ಪತ್ತೆ ಮಾಡಿದ್ದಾರೆ.

    ದಾಖಲೆಯಿಲ್ಲದ ಹಿನ್ನೆಲೆಯಲ್ಲಿ 2 ಗೋಡೌನ್ ನಲ್ಲಿ ಸಂಗ್ರಹಿಸಿದ್ದ 4,670 ಕ್ವಿಂಟಾಲ್ ಅಡಿಕೆಯನ್ನು ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ 72 ಲಕ್ಷ ರೂಪಾಯಿ ದಂಡ ಕೂಡ ಹಾಕಿದ್ದಾರೆ.

    ಕಮರ್ಷಿಯಲ್ ಟ್ಯಾಕ್ಸ್ ಕಮಿಷನರ್ ನಿತೇಶ್ ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಗೋಡೌನ್ ಸಿಬ್ಬಂದಿ ಅಧಿಕಾರಿಗಳನ್ನು ತಡೆದಿದ್ದರು. ಆರಂಭದಲ್ಲಿ ಸಿಬ್ಬಂದಿ ಭತ್ತವನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿಕೆ ನೀಡಿದ್ದರು.

    ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಗೋಡೌನ್ ಒಳ ಪ್ರವೇಶಿದಾಗ ದಾಖಲೆ ಇಲ್ಲದೇ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಡಿಕೆ ಪತ್ತೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗ್ಳೂರಿನಲ್ಲಿ ಮಗುವಿನಂತೆ ವರ್ತಿಸುತ್ತಿದೆ ಕಾಡಾನೆ

    ಚಿಕ್ಕಮಗ್ಳೂರಿನಲ್ಲಿ ಮಗುವಿನಂತೆ ವರ್ತಿಸುತ್ತಿದೆ ಕಾಡಾನೆ

    ಚಿಕ್ಕಮಗಳೂರು: ಕಳೆದೊಂದು ವಾರದಿಂದ ರಾಜ್ಯಾದ್ಯಂತ ಅಲ್ಲಲ್ಲೇ ಕಾಡಾನೆಗಳ ಹಿಂಡು ನಿರಂತರ ದಾಳಿ ಮಾಡ್ತಿವೆ. ಆದರೆ ಕಾಫಿನಾಡಿನಲ್ಲಿರುವ ಇಂತಹ ಗಜರಾಜ ಇದ್ದರೆ ಅಧಿಕಾರಿಗಳಿಗೆ ತಲೆನೋವಿಲ್ಲ, ಸ್ಥಳಿಯರಿಗೆ ಆತಂಕವಿಲ್ಲ, ಬೆಳೆಗಳು ಹಾಳಾಗೋದಿಲ್ಲ. ನೋಡೋಕೆ ದೈತ್ಯಾಕಾರದ ಈ ಕಾಡಾನೆ ಮಗುವಿನಂತೆ ವರ್ತಿಸುತ್ತಿದ್ದು ಅಧಿಕಾರಿಗಳ ದೃಷ್ಠಿಯಲ್ಲಿ ಗುಡ್ ಎಲಿಫೆಂಟ್ ಆಗಿದೆ.

    ಚಿಕ್ಕಮಗಳೂರಿನ ಮುತ್ತೋಡಿ ದಟ್ಟಾರಣ್ಯದಲ್ಲಿ ವಾಸ ಮಾಡುತ್ತಿರುವ ಈ ಕಾಡಾಣೆ ತಾನಾಯ್ತ, ತನ್ನ ಆಹಾರವಾಯ್ತೆಂದು ಬದುಕುತ್ತಿದೆ. ಈ ಆನೆಯ ಪಕ್ಕದಲ್ಲೇ ಜನ ಹಾಗೂ ವಾಹನಗಳು ಓಡಾಡಿದರು ಇದು ಏನೂ ಮಾಡುವುದಿಲ್ಲವಂತೆ.

    ಮುತ್ತೋಡಿಯ ಅರಣ್ಯದ ಮಧ್ಯ ಭಾಗದಲ್ಲಿರೋ ಕಳ್ಳ ಭೇಟಿ ನಿಗ್ರಹ ದಳದ ವಸತಿ ಹಾಗೂ 1924ರಲ್ಲಿ ಬ್ರಿಟಿಷರು ನಿರ್ಮಿಸಿದ ಅತಿಥಿ ಗೃಹದ ಪಕ್ಕದಲ್ಲೇ ನಿಂತು ಗಂಟೆಗಟ್ಟಲೇ ಪೋಸ್ ನೀಡಿ ಶಾಂತಿಯಿಂದ ವರ್ತಿಸುತ್ತಿರೋದು ಆಶ್ಚರ್ಯ ತಂದಿದೆ.

    ಕಾಡಾನೆಗಳು ಅಪಾಯಕಾರಿ ಎಂಬ ಮಾತಿಗೆ ವಿರುದ್ಧವಾಗಿರುವ ಈ ಗಜರಾಜ ಮಗುವಿನಂತೆ ಬಂದು ಹೊಟ್ಟೆ ತುಂಬಿದ ಮೇಲೆ ಸೈಲೆಂಟಾಗಿ ವಾಪಸ್ಸಾಗುತ್ತಿದ್ದು, ಅಧಿಕಾರಿಗಳಲ್ಲೇ ಆಶ್ಚರ್ಯ ತಂದಿದೆ.

    https://www.youtube.com/watch?v=7BLPaWBAVlE&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ದಿನ ರಾಮನಗರ- ಚನ್ನಪಟ್ಟಣ ನಗರಗಳಿಗೆ ಕುಡಿಯುವ ನೀರು ಬಂದ್

    ಮೂರು ದಿನ ರಾಮನಗರ- ಚನ್ನಪಟ್ಟಣ ನಗರಗಳಿಗೆ ಕುಡಿಯುವ ನೀರು ಬಂದ್

    ರಾಮನಗರ: ಮಂಡ್ಯ ಜಿಲ್ಲೆಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟದ ಹಿನ್ನೆಲೆಯಲ್ಲಿ ರಾಮನಗರ- ಚನ್ನಪಟ್ಟಣ ನಗರಗಳಿಗೆ ಕುಡಿಯುವ ನೀರನ್ನು ಬಂದ್ ಮಾಡಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಘಟಕದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಇಂದಿನಿಂದ 3 ದಿನಗಳ ಕಾಲ 23 ರಿಂದ 24, 25ರ ವರೆಗೆ ಎರಡು ನಗರಗಳಿಗೂ ಕುಡಿಯುವ ನೀರು ಬಂದ್ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಶಿಂಷಾ ನದಿಯ ನೀರನ್ನು ಶುದ್ಧೀಕರಿಸಿ ಎರಡು ನಗರಗಳಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿತ್ತು.

    ಕಳೆದ 21ರಂದು ಮಂಡ್ಯದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಸ್ಪೆಂಟ್ ವಾಷ್ ಸ್ಟೋರೇಜ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಶಿಂಷಾ ನದಿಗೆ 40 ರಿಂದ 50 ಲಕ್ಷ ಲೀಟರ್ ರಾಸಾಯನಿಕ ತ್ಯಾಜ್ಯ ನೀರು ಸೇರಿದೆ. ಈ ಹಿನ್ನೆಲೆಯಲ್ಲಿ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿರುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಘಟಕದ ಚನ್ನಪಟ್ಟಣ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜನಪ್ರತಿನಿಧಿಗಳೇ ಕಟ್ತಿಲ್ಲ ಸಾವಿರಾರು ಕೋಟಿ ರೂ. ತೆರಿಗೆ!

    ಜನಪ್ರತಿನಿಧಿಗಳೇ ಕಟ್ತಿಲ್ಲ ಸಾವಿರಾರು ಕೋಟಿ ರೂ. ತೆರಿಗೆ!

    ಬೆಂಗಳೂರು: ಕಂಡಕಂಡವರಿಗೆ ನೀತಿ ಹೇಳುವ ಮಂದಿಯಿಂದ ಬಿಗ್ ದೋಖಾ ನಡೆದಿದ್ದು, ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾರೆ.

    ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಕೋಟಿ ಕೋಟಿ ರೂ. ತೆರಿಗೆ ಉಳಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ಕುಬೇರ ಬರೋಬ್ಬರಿ ಕಳೆದ 8 ವರ್ಷದಿಂದ ಆಸ್ತಿ ತೆರಿಗೆ ಕಟ್ಟಿಲ್ಲ. ಕುಪೇಂದ್ರ ರೆಡ್ಡಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕಿದೆ.

    ಮಾಜಿ ಸಚಿವ ಎಂಆರ್ ಸೀತಾರಾಮ್ ಸೋದರ 6 ಮುಕ್ಕಾಲು ಕೋಟಿ ರೂ., ರಾಮಯ್ಯ ರಸ್ತೆ ಆಸ್ತಿಯ ತೆರಿಗೆಯನ್ನು ಎಂ.ಆರ್ ಕೋದಂಡರಾಮ್ ಕಟ್ಟದೇ ಸುಮ್ಮನಿದ್ದಾರೆ. ಇತ್ತ ಮುಖೇಶ್ ಅಂಬಾನಿ ಬೀಗರ ಸಂಬಂಧಿ ಪ್ರಿಮಲ್ ಸಂಸ್ಥೆಯಿಂದಲೂ ಬಿಗ್ ದೋಖವಾಗಿದ್ದು, 9 ವರ್ಷಗಳಿಂದ 49 ಕೋಟಿ ರೂ. ತೆರಿಗೆಯನ್ನು ಪ್ರಿಮಲ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ.

    ಕೆ.ಜೆ ಜಾರ್ಜ್         ಡಿ.ಕುಪೇಂದ್ರ ರೆಡ್ಡಿ                 ಗರುಡಚಾರ್

    ಬರೀ ಇವರಷ್ಟೇ ಅಲ್ಲದೇ ಬಾಕಿ ಉಳಿಸಿಕೊಂಡ ದೊಡ್ಡವರ ಪಟ್ಟಿ ತುಂಬಾ ದೊಡ್ಡದಿದೆ:
    * ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರಿಸ್ 3.5 ಕೋಟಿ ರೂ. ಆಸ್ತಿ ತೆರಿಗೆ
    * ದೋಸ್ತಿ ಸರ್ಕಾರದ ಸಚಿವ ಕೆ.ಜೆ ಜಾರ್ಜ್ ಕೂಡ 54 ಲಕ್ಷ ರೂ. ಆಸ್ತಿ ತೆರಿಗೆ
    * ಎಂಬಸ್ಸಿ ಗ್ರೂಪ್‍ನ ಗಾಲ್ಫ್ ಲಿಂಕ್ಸ್ ಸಾಫ್ಟ್ ವೇರ್ ಪಾರ್ಕ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ತೆರಿಗೆ
    * ಶಾಸಕ ಉದಯ್ ಗರುಡಚಾರ್ ಕಟ್ಟಬೇಕಿದೆ ಸರಿಸುಮಾರು 5 ಕೋಟಿ ರೂ. ಆಸ್ತಿ ತೆರಿಗೆ
    * ಗರುಡಾಚಾರ್ ಮಾಲೀಕತ್ವದ ಮವೇರಿಕ್ ಹೋಲ್ಡಿಂಗ್ಸ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ಟ್ಯಾಕ್ಸ್
    * 6 ವರ್ಷಗಳಿಂದ 16 ಕೋಟಿ ರೂ. ಬಾಕಿ ಉಳಿಸಿಕೊಂಡ ಸಲಾರ್ ಪುರಿಯಾ ಕಂಪನಿ
    * ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಪ್ತ ಕೃಷ್ಣನ್ ಒಡೆತನ ನುಜಿವೀಡು ಸೀಡ್ಸ್ ಉಳಿಸಿಕೊಂಡಿದೆ 12 ಕೋಟಿ ರೂ. ಬಾಕಿ
    * ದಯಾನಂದ ಸಾಗರ್ ಇನ್ಸ್ ಟಿಟ್ಯೂಟ್ ಕಟ್ಟಬೇಕಿದೆ 1 ಕೋಟಿ 85 ಲಕ್ಷ ರೂ. ಆಸ್ತಿ ತೆರಿಗೆ

    ಸರ್ಕಾರಿ ಸಂಸ್ಥೆಗಳೂ ಕೂಡ ಬಿಬಿಎಂಪಿಗೆ ತೆರಿಗೆ ಪಾವತಿಸಿಲ್ಲ:
    * ಫುಡ್ ಕಾರ್ಪೋರೆಷನ್ ಆಪ್ ಇಂಡಿಯಾದಿಂದ 51 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ
    * ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಕಟ್ಟಬೇಕಿದೆ 1 ಕೋಟಿ ರೂ. ಆಸ್ತಿ ತೆರಿಗೆ
    * ಕೆಎಸ್‍ಆರ್‍ಟಿಸಿ 10 ವರ್ಷದಿಂದ ತೆರಿಗೆ ಕಟ್ಟಿಲ್ಲ. ಆ ಮೊತ್ತ 1 ಕೋಟಿ ರೂ.ಗೂ ಹೆಚ್ಚು
    * ಕರ್ನಾಟಕ ಕನ್ಸಲ್ಟೇಷನ್ ಎಂಡಿ ಮತ್ತು ಅಧ್ಯಕ್ಷ ವಸತಿಯ ತೆರಿಗೆ ಬಾಕಿ 1 ಕೋಟಿ 39 ಲಕ್ಷ ರೂ.
    * ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಅಂಡ್ ಕಾಮರ್ಸ್ ಕಟ್ಟಬೇಕಿದೆ 48 ಲಕ್ಷ ರೂ.

    ಬರೀ ಇಷ್ಟೇ ಅಲ್ಲದೇ ನೂರಾರು ಸರ್ಕಾರಿ ಸಂಸ್ಥೆಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಇದರಿಂದ ಬಿಬಿಎಂಪಿ ಆರ್ಥಿಕವಾಗಿ ನೆಲಕಚ್ಚಲು ಕಾರಣವಾಗಿದೆ. ಇದೆಲ್ಲವನ್ನು ಬಿಬಿಎಂಪಿ ಪ್ರಶ್ನೆ ಮಾಡಿದ್ರೆ, ಅವರು ಈಗಾಗಲೇ ತರಿಗೆ ಹಣವನ್ನು ಕಟ್ಟಿದ್ದಾರೆ. ಸರಿಯಾದ ಚಲನ್ ಕೊಟ್ಟಿಲ್ಲ. ಆನ್‍ಲೈನ್‍ನಲ್ಲಿ ಕಟ್ಟಿರುವುದರಿಂದ ಸರಿಯಾದ ರೀತಿಯಲ್ಲಿ ದಾಖಲಾತಿಯನ್ನು ತೋರಿಸುತ್ತಿಲ್ಲ ಎಂದು ಕುಂಟು ನೆಪವನ್ನು ಹೇಳಿದೆ.

    ಅಧಿಕಾರಿಗಳೇ ಕೋಟಿ ಕೋಟಿ ತೆರಿಗೆಯನ್ನು ಕಟ್ಟದೇ ಉಳಿಸಿಕೊಂಡಿರುವುದರಿಂದ ಇವರು ರಾಜಕೀಯವಾಗಿ ದೊಡ್ಡವರ ಬೆಂಬಲವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಖಾಶಂಪೂರ್ ಫುಲ್ ಕ್ಲಾಸ್

    ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಖಾಶಂಪೂರ್ ಫುಲ್ ಕ್ಲಾಸ್

    ಬೀದರ್: ಕಳೆದ ಬಾರಿಯ ಕೆಡಿಪಿ ಸಭೆಯಲ್ಲಿ ಕೇಳಿದ್ದ ಮಾಹಿತಿ ನೀಡದ್ದಕ್ಕೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶಂಪೂರ್ ಅವರು ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಬೀದರ್‍ನ ಹೇಳಿಕೆಗಾಗಿ ಒಬ್ಬ ಏನಾದರೂ ಬಂದಿದ್ದಿರಾ? ಕಾಟಾಚಾರಕ್ಕೆ ಯಾಕೆ ಕೆಲಸ ಮಾಡುತ್ತಿದ್ದಿರಿ. ನಮ್ಮ ಬೀದರ್ ಅನ್ನು ಉದ್ಧಾರ ಮಾಡೋಕೆ ಏನ್‍ಬೇಕು ಎಂದು ಒಬ್ಬ ಆಫೀಸರ್ ಎದ್ದು ಹೇಳಿ. ನಾನು ಕರೆದಾಗ ಬರೋದಲ್ಲ. ನೀವು ನನ್ನ ಬಳಿ ಎಂದಾದರೂ ಚರ್ಚೆ ಮಾಡಿದ್ದೀರಾ? ಏನ್ ತಿಳ್ಕೊಂದ್ದಿರಾ ನೀವು ಸರ್ಕಾರ ಅದ್ರೆ ಏನು? 14 ರಂದು ಮುಖ್ಯಮಂತ್ರಿಗಳು ಬರುತ್ತಾರೆ. ಸ್ಪೆಷಲ್ ಪ್ಯಾಕೇಜ್ ಕೊಡಬೇಕು ಅಂದುಕೊಂಡಿದ್ದೇವೆ. ನಿಮ್ಮನ್ನು ಕಟ್ಕೊಂಡು ನಾವು ಯಾವ ಪ್ಯಾಕೇಜ್ ಮಾಡುವುದು. ಬೈದ್ರೆ ಕೈ ಕಟ್ಟಿಕೊಂಡು ನಿಲ್ಲೋದು ಮಾತ್ರ ಗೊತ್ತು ಎಂದು ವಾಗ್ದಾಳಿ ನಡೆಸಿದರು.

    ಜನರು ನಮ್ಮ ಮೇಲೆ ನಿರೀಕ್ಷೆಯನ್ನು ಇಟ್ಟಿರುತ್ತಾರೆ. ಯಾವ ಅಧಿಕಾರಿ ಕೆಲಸ ಮಾಡುವುದಿಲ್ಲವೋ ಅವರನ್ನು ಮುಲಾಜು ಇಲ್ಲದೇ ತೆಗೆದು ಹಾಕುತ್ತೇನೆ ಎಂದು ಹೇಳಿ ಬಂಡೆಪ್ಪ ಖಾಶಂಪೂರ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಅಧಿಕಾರಿಗಳಿಗೆ ಸಚಿವರು ಪುಲ್‍ಕ್ಲಾಸ್ ತೆಗೆದುಕೊಳ್ಳುತ್ತಿದ್ದರೂ ಕೆಲ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಸಭೆಯ ಒಳಗಡೆ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಬಿಎಂಪಿ ಪೌರಕಾರ್ಮಿಕರಲ್ಲೂ ಆರಂಭವಾಯ್ತು #MeToo ಅಭಿಯಾನ!

    ಬಿಬಿಎಂಪಿ ಪೌರಕಾರ್ಮಿಕರಲ್ಲೂ ಆರಂಭವಾಯ್ತು #MeToo ಅಭಿಯಾನ!

    ಬೆಂಗಳೂರು: ಬಾಲಿವುಡ್, ಸ್ಯಾಂಡಲ್‍ವುಡ್ ಆಯ್ತು, ಈಗ ಬಿಬಿಎಂಪಿಯಲ್ಲೂ ಮೀಟೂ ಆರೋಪ ಕೇಳಿ ಬಂದಿದೆ. ಕೆಲಸದ ವೇಳೆ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟವಾಗಿದೆ.

    ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು, ಪೌರಕಾರ್ಮಿಕೆಯಾಗಿ ಕೆಲಸ ಮಾಡುವ ತನ್ನ ಅತ್ತೆಗೆ, ಪಾಲಿಕೆ ಅಧಿಕಾರಿಗಳಿಂದ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಡವರು ಪೌರಕಾರ್ಮಿಕ ಕೆಲಸಕ್ಕಾಗಿ ಬರುತ್ತಾರೆ. ಆದರೆ ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡ್ತಾರೆ. ನನ್ನ ಅತ್ತೆಯನ್ನು ಕೂಡಾ ನೀಚ ಅಧಿಕಾರಿಗಳು ಕಾಮಾಲೆ ಕಣ್ಣಿಂದ ನೋಡುತ್ತಾರೆ. ಈ ಬಗ್ಗೆ ಒಂದು ಗಂಟೆಗಳ ಕಾಲ ನಮ್ಮತ್ತೆ ಕಣ್ಣೀರು ಹಾಕಿದ್ದಾರೆ. ಇವರ ಕಾಮಚೇಷ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್ ಹಾಕುತ್ತೆ?

    ಬೆಂಗಳೂರಿನ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಹೇಳಿದ ಹಾಗೆ ಕೇಳದಿದ್ದರೆ ಹಾಜರಾತಿ ಕಟ್ ಮಾಡುತ್ತಾರೆ. ಪೌರಕಾರ್ಮಿಕರ ಬಳಿ ಸ್ಮಾರ್ಟ್ ಫೋನ್ ಇಲ್ಲ, ಇಲ್ಲದಿದ್ದರೆ ಎಲ್ಲರ ಮುಖವಾಡ ಬಯಲಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

    ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ತಂಡ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ.

    ಮಲ್ಲೇಶ್ವರಂನಲ್ಲಿರುವ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಮನೆ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್‍ ನಲ್ಲಿರುವ ಫ್ಲ್ಯಾಟ್ ಮೇಲೂ ದಾಳಿಯನ್ನು ಮಾಡಲಾಗಿದೆ. ದಾಳಿ ವೇಳೆ ಅಧಿಕ ಪ್ರಮಾಣದ ಅಂದರೆ 10 ಕೋಟಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

    ಕೆಐಡಿಬಿ ಚೀಫ್ ಎಂಜಿನಿಯರ್ ಸ್ವಾಮಿ ಮನೆ ಮಂತ್ರಿ ಸ್ಕೇರ್ ನಲ್ಲಿದ್ದು, ಸ್ವಾಮಿ ಮನೆಯಲ್ಲಿ ಅಧಿಕ ಪ್ರಮಾಣದ ನಗದು ಪತ್ತೆಯಾಗಿದೆ. ಟಿ.ಆರ್.ಸ್ವಾಮಿ ಅವರು ಎಸಿಬಿ ಅಧಿಕಾರಿಗಳನ್ನು ಕಂಡು ದಂಗಾಗಿ ಕಂತೆ ಕಂತೆ ನೋಟುಗಳನ್ನು ಕಿಟಕಿಯ ಹೊರಗಡೆಯಿಂದ ಎಸೆದಿದ್ದಾರೆ. ಆದರೆ ಇದೇ ವೇಳೆ ಅಧಿಕಾರಿಗಳ ಕೈಗೆ ರೆಂಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಅವರನ್ನು ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಮಂತ್ರಿ ಗ್ರೀನ್ಸ್ ಅಪಾರ್ಟ್ ನಲ್ಲಿರುವ ಎರಡು ಫ್ಲ್ಯಾಟ್‍ ನಲ್ಲಿ ಸುಮಾರು 10 ಕೋಟಿ ಹಣ ಪತ್ತೆಯಾಗಿದ್ದು, ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್ ನಲ್ಲಿ ಹಣ ಲೆಕ್ಕ ಹಾಕುತ್ತಿದ್ದಾರೆ.

    ಟಿ.ಆರ್.ಸ್ವಾಮಿ

    ಇತ್ತ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ. ಗೌಡಯ್ಯ ಅವರ ಬಸವೇಶ್ವರ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಯಾವುದೇ ರೀತಿಯ ಹಣ, ಚಿನ್ನ ಪತ್ತೆಯಾಗಿಲ್ಲ. ಬೇನಾಮಿ ಆಸ್ತಿ ಪತ್ರ ಸಿಕ್ಕಿದ್ದು, ಮೂಲ ದಾಖಲಾತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗೌಡಯ್ಯ ಎಸಿಬಿ ದಾಳಿ ಹಿನ್ನೆಲೆಯಲ್ಲಿ ಬಿಡಿಎನಲ್ಲಿರುವ ಕಚೇರಿಗೂ ಬೀಗ ಹಾಕಿದ್ದು, ಕೆಲವೇ ಕ್ಷಣದಲ್ಲಿ ಎಸಿಬಿಯಿಂದ ಗೌಡಯ್ಯ ಕಚೇರಿ ತಪಾಸಣೆ ಸಾದ್ಯತೆ ಇದೆ.

    ವಸತಿ ಸಮುಚ್ಚಯದ ಗುತ್ತಿಗೆದಾರರ ಜೊತೆ ಕಮಿಷನ್ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದಾರೆ ಅನ್ನೋ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಗೌಡಯ್ಯ ತನ್ನ ಕಾರಿನ ಡ್ರೈವರ್ ಗೂ ಸಹ ಮನೆ ತೋರಿಸಿರಲಿಲ್ಲ. ಇವರು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಮಾಹಿತಿ ಮೇರೆಗೆ ಇಂದು ಎಸಿಬಿ ತಂಡ ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಸುಮಾರು ವರ್ಷಗಳಿಂದ ಬಿಡಿಎ ಬಿಟ್ಟು ಕದಲಿಲ್ಲ. ಟ್ರಾನ್ಸ್ ಫರ್ ಆಗಿದ್ದರು ಸಹ ಮತ್ತೆ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣ ನೀಡಿ ಬಿಡಿಎಗೆ ಹಾಕಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ರಸ್ತೆಗುಂಡಿಗಳ ಹೆಸ್ರಲ್ಲಿ ಬಿಬಿಎಂಪಿ ಬೊಕ್ಕಸ ಬರಿದು ಮಾಡೋಕ್ಕೆ ನಿಂತ್ರಾ ಅಧಿಕಾರಿಗಳು?

    ರಸ್ತೆಗುಂಡಿಗಳ ಹೆಸ್ರಲ್ಲಿ ಬಿಬಿಎಂಪಿ ಬೊಕ್ಕಸ ಬರಿದು ಮಾಡೋಕ್ಕೆ ನಿಂತ್ರಾ ಅಧಿಕಾರಿಗಳು?

    ಬೆಂಗಳೂರು: ಹೈಕೋರ್ಟ್ ಆದೇಶವನ್ನು ಬಿಬಿಎಂಪಿ ಬಂಡವಾಳ ಮಾಡಿಕೊಂಡಿತೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗ ಬಿಬಿಎಂಪಿ ಅಧಿಕಾರಿಗಳು 10 ಕಿ.ಮೀ ರಸ್ತೆ ಗುಂಡಿಗಳನ್ನು ಮುಚ್ಚಲು 1,700 ಕೋಟಿ ರೂ. ಬೇಕಾಗುತ್ತದೆ ಎಂದಿದ್ದಾರಂತೆ.

    ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಿಸಲು ಮುಂದಿನ ಎರಡು ವರ್ಷಕ್ಕೆ 1,700 ಕೋಟಿ ರೂ. ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಭಾರೀ ಬೇಡಿಕೆ ಇಟ್ಟಿದ್ದಾರಂತೆ. ಈ ಮೂಲಕ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಬಿಬಿಎಂಪಿ ಬೊಕ್ಕಸವನ್ನು ಬರಿದು ಮಾಡುವುದಕ್ಕೆ ಅಧಿಕಾರಿಗಳು ಮುಂದಾದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಿಬಿಎಂಪಿ ಅಧಿಕಾರಿಗಳು ನಾಳೆ(ಶನಿವಾರ) ಹೈಕೋರ್ಟ್‍ಗೆ ಎಷ್ಟು ಗುಂಡಿ ಮುಚ್ಚಿದ್ದಾರೆ ಅಂತಾ ಲೆಕ್ಕ ನೀಡಲಿದ್ದಾರೆ. ಈ ವೇಳೆ ಗುಂಡಿ ಮುಚ್ಚಲು ಮುಂದಿನ ಎರಡು ವರ್ಷಕ್ಕೆ ಬೇಕಾಗುವ ವೆಚ್ಚದ ಕುರಿತು ಪ್ರಸ್ತಾಪ ಮಾಡಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

    ಎಲ್ಲಲ್ಲಿ ಎಷ್ಟು ಗುಂಡಿಗಳು?:
    ರಸ್ತೆ ಗುಂಡಿಗಳ ಕುರಿತು ಕೋರ್ಟ್ ಲೆಕ್ಕ ಕೇಳುತ್ತಿದ್ದಂತೆಯೇ ಆತುರವಾಗಿ ಅಧಿಕಾರಿಗಳು ಕೇವಲ 52 ಅಂತಾ ತಿಳಿಸಿದ್ದರು. ಆದರೆ ಅವುಗಳ ಸಂಖ್ಯೆ ಈಗ 798ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ಗುರುತಿಸಿದ ಹೊಸ ಪಟ್ಟಿಯ ಪ್ರಕಾರ ನಗರದಲ್ಲಿ ಹಳೇ ಗುಂಡಿ ಸೇರಿದಂತೆ ಒಟ್ಟು 850 ಗುಂಡಿಗಳಿವೆ.

    ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಕ್ಷಿಣ ವಲಯದಲ್ಲಿ 183, ರಾಜರಾಜೇಶ್ವರಿ ನಗರ ವಲಯದಲ್ಲಿ 350, ಯಲಹಂಕ ವಲಯದಲ್ಲಿ 71, ಮುಖ್ಯ ರಸ್ತೆಗಳಲ್ಲಿ 194 ಗುಂಡಿಗಳಿವೆ ಅಂತಾ ಬಿಬಿಎಂಪಿ ಲೆಕ್ಕ ಹಾಕಿದೆ. ಈವರೆಗೆ ಕೇವಲ 314 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 536 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

    ಹೈಕೋರ್ಟ್ ಹೇಳಿದ್ದೇನು?:
    ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 24ರೊಳಗೆ ಮುಚ್ಚಬೇಕು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿ ಎಂದು ಚಾಟಿ ಬೀಸಿತ್ತು. ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ರಾತ್ರಿ-ಹಗಲು ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೆ.ಆರ್.ಮಾರುಕಟ್ಟೆಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ- ಉಪ ಆಯುಕ್ತೆ ಅಮಾನತು

    ಕೆ.ಆರ್.ಮಾರುಕಟ್ಟೆಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ- ಉಪ ಆಯುಕ್ತೆ ಅಮಾನತು

    ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ಕೆ.ಆರ್.ಮಾರುಕಟ್ಟೆ ಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ನಗರಾಭಿವೃದ್ಧಿ ಸಚಿವರಾದ ಬಳಿಕ ಇದೇ ಮೊದಲ ಬಾರಿ ಪರಮೇಶ್ವರ್ ಅವರು ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾರುಕಟ್ಟೆಯ ಸ್ಥಿತಿ ಕೆಟ್ಟದಾಗಿದೆ. ಹೊಸದಾಗಿ ನಿರ್ಮಾಣವಾದ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಇಲ್ಲಿ ಯಾರೊಬ್ಬರೂ ಬಾಡಿಗೆ ಪಡೆದು, ಪ್ರತಿ ತಿಂಗಳು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹಣವನ್ನು ಪಾವತಿ ಮಾಡುತ್ತಿಲ್ಲ. ಇದನ್ನು ಸರಿಪಡಿಸಲು ನಿರ್ಧಾರ ಕೈಗೊಳ್ಳಲಿದ್ದೇವೆ. ಮೇಯರ್ ಗಂಗಾಬಿಕೆ, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಯಾವುದೇ ಅಂಗಡಿ ಮುಂಗಟ್ಟುಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ. ಹೀಗಾಗಿ ಮಾರುಕಟ್ಟೆ ಉಪ ಆಯುಕ್ತೆ ಮುನಿಲಕ್ಷ್ಮಿ ಅವರನ್ನು ಅಮಾನತುಗೊಳಿಸಿ ವರ್ಗಾವಣೆಗೆ ಆದೇಶ ನೀಡಿರುವೆ. ಸದ್ಯದಲ್ಲಿಯೇ ಹೊಸ ಉಪ ಆಯುಕ್ತರ ನೇಮಕ ಮಾಡಲಾಗುತ್ತದೆ. ಬೇರೆ ಕಡೆಯಲ್ಲಿ ಇಂತಹದ್ದೇ ಮಾರುಕಟ್ಟೆ ತರೆಯಲು ಚಿಂತನೆ ನಡೆಸಿದ್ದೇವೆ. ಮಾರುಕಟ್ಟೆಯಲ್ಲಿ ಅವ್ಯವ್ಯವಸ್ಥೆ ಹೆಚ್ಚಾಗಿದೆ. ಸ್ವಚ್ಛತೆ ಕೊರತೆಯಿದ್ದು, ಇಂತಹ ಆಹಾರ ಪದಾರ್ಥ ತಿಂದರೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ 15 ದಿನದ ಒಳಗಡೆ ಎಲ್ಲಾ ವ್ಯವಸ್ಥೆ ಬದಲಾಗಬೇಕು ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಾರುಕಟ್ಟೆಯಲ್ಲಿ ತಿರುಗಾಡಿ, ಅವ್ಯವಸ್ಥೆಯನ್ನು ಪರಮೇಶ್ವರ್ ಅವರು ಕಣ್ಣಾರೆ ಕಂಡರು. ಬಳಿಕ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಪರಮೇಶ್ವರ್ ಅವರ ಜೊತೆಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv