Tag: officer

  • ಕಲುಷಿತ ನೀರನ್ನು ತಾವು ಕುಡಿದು ಅಧಿಕಾರಿಗೂ ಕುಡಿಸಿದ ಶಾಸಕ- ವಿಡಿಯೋ ನೋಡಿ

    ಕಲುಷಿತ ನೀರನ್ನು ತಾವು ಕುಡಿದು ಅಧಿಕಾರಿಗೂ ಕುಡಿಸಿದ ಶಾಸಕ- ವಿಡಿಯೋ ನೋಡಿ

    -ಅಧಿಕಾರಿಗಳಿಗೆ ಜನರ ಸಮಸ್ಯೆ ಅರ್ಥ ಮಾಡಿಸಿದ ಶಾಸಕರು

    ರಾಯ್‍ಪುರ: ಛತ್ತೀಸ್‍ಗಢ್‍ದ ಕಾಂಗ್ರೆಸ್ ಶಾಸಕರೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಕಲುಷಿತ ನೀರು ಕುಡಿದು, ಅಧಿಕಾರಿಗೂ ಕುಡಿಸಿ ಸ್ಥಳೀಯ ಜನರ ಸಮಸ್ಯೆಯನ್ನು ಮನವರಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಛತ್ತೀಸ್‍ಗಢ್‍ದ ಬಸ್ತರ್ ಜಿಲ್ಲೆಯ ಚಿಂದ್ವಾರಾ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ಈ ವೇಳೆ ಚಿತ್ರಕೋಟ್ ಶಾಸಕ ದೀಪಕ್ ಬೈಜ್ ಕಲುಷಿತ ನೀರು ಕುಡಿದು, ಅಧಿಕಾರಿಗೂ ಕುಡಿಸಿದ್ದಾರೆ. ನನ್ನ ಜನತೆ ಇಂತಹ ನೀರನ್ನು ಕುಡಿಯುತ್ತಿದ್ದಾರೆ. ಇದೇ ನೀರನ್ನು ಕುಡಿಯುತ್ತಾ ಸುಮಾರು ವರ್ಷಗಳಿಂದ ಕಾಲ ಕಳೆದಿದ್ದಾರೆ. ನಾನು ಇದನ್ನು ಕುಡಿಯುತ್ತೇನೆ ಎಂದು ಕುಡಿದು, ನೀವು ಕುಡಿದು ಪರೀಕ್ಷೆ ಮಾಡಿ ಎಂದು ಅಧಿಕಾರಿಗೆ ಬಾಟಲ್ ನೀಡಿದರು. ಅಧಿಕಾರಿ ನೀರು ಕುಡಿದು, ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ ಎನ್ನುತ್ತ ಸಮಸ್ಯೆಯನ್ನು ದಾಖಲಿಸಿಕೊಂಡಿದ್ದಾರೆ.

    ಚಿಂದ್ವಾರ್ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಗ್ರಾಮದ ಬೋರ್ ನ್ನು ಅವಲಂಬಿಸಿದ್ದಾರೆ.. ಆದ್ರೆ ಬೋರ್ ನಿಂದ ಬರುವ ಕಬ್ಬಿಣ ಮಿಶ್ರಿತ ನೀರನ್ನು ಹಲವು ವರ್ಷಗಳಿಂದ ಕುಡಿಯುತ್ತಾ ಬಂದಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದ್ರೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿರಲಿಲ್ಲ. ಶಾಸಕರು ಬಂದಾಗ ಗ್ರಾಮಸ್ಥರು ನೀರಿನ ಗುಣಮಟ್ಟದ ಬಗ್ಗೆ ದೂರು ನೀಡಿದ್ರು. ಗ್ರಾಮಸ್ಥರು ಕುಡಿಯುವ ನೀರನ್ನೆ ಶಾಸಕರು ಕುಡಿದು, ಅಧಿಕಾರಿಗಳಿಗೂ ಕುಡಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಪರಮೇಶ್ವರ್ ಧಿಡೀರ್ ಭೇಟಿ, ಅಧಿಕಾರಿಗಳಿಗೆ ಕ್ಲಾಸ್

    ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಪರಮೇಶ್ವರ್ ಧಿಡೀರ್ ಭೇಟಿ, ಅಧಿಕಾರಿಗಳಿಗೆ ಕ್ಲಾಸ್

    ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಬೆಳಗ್ಗೆ ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಧಿಡೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ ಪರಿಶೀಲನೆ ಮಾಡಿದ್ದಾರೆ. ಬಯೋಮೆಟ್ರಿಕ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಕಚೇರಿ ಸಮಯ ಪ್ರಾರಂಭವಾಗಿ ಮುಕ್ಕಾಲು ಗಂಟೆ ಕಳೆದರೂ ಅಧಿಕಾರಿಗಳು ಗೈರಾಗಿದ್ದರು. ಅಷ್ಟೇ ಅಲ್ಲ ಜಂಟಿ ಆಯುಕ್ತ ಮತ್ತು ಎಂಜಿನಿಯರ್‍ಗಳು ಇರಲಿಲ್ಲ. ಹಲವು ಸಿಬ್ಬಂದಿ ಕಚೇರಿಗೆ ಆಗಮಿಸಿರಲಿಲ್ಲ. ಎಲ್ಲವನ್ನೂ ಗಮನಿಸಿದ ಪರಮೇಶ್ವರ್ ಅವರು, ಸಮಯಪ್ರಜ್ಞೆ ಇಲ್ಲದ ಹಾಗೂ ಅಶಿಸ್ತು ತೋರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸುವುದಾಗಿ ತಿಳಿಸಿದರು.

    ಅಧಿಕಾರಿಗಳು ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ದಾಖಲೆಗಳ ಪರಿಶೀಲನೆ ನಡೆಸಿ, 2014ರಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವರ ಮುಂದೆ ಕೃಷಿ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ರೈತ

    ಸಚಿವರ ಮುಂದೆ ಕೃಷಿ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ರೈತ

    ದಾವಣಗೆರೆ: ಕೃಷಿ ಅಧಿಕಾರಿಗಳನ್ನು ರೈತರೊಬ್ಬರು ಸಚಿವರ ಮುಂಭಾಗವೇ ತರಾಟೆಗೆ ತೆಗೆದುಕೊಂಡು, ಸಚಿವರ ಕಾರಿಗೆ ಅಡ್ಡ ಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಈರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಇಂದು ಕೃಷಿ ಸಚಿವ ಶಿವಶಂಕರರೆಡ್ಡಿ ರೈತರ ಜೊತೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಜಿಲ್ಲೆಯ ಕೃಷಿ ಅಧಿಕಾರಿಗಳು ವ್ಯವಸಾಯ ಉಪಕರಣಕ್ಕೆ ಯಾವುದೇ ಸಬ್ಸಿಡಿ ಕೊಡುತ್ತಿಲ್ಲ. ಕಚೇರಿಗೆ ತೆರಳಿದ್ರು ಯಾವುದೇ ಸ್ಪಂದನೆ ಮಾಡುತ್ತಿಲ್ಲ. ನಾಳೆ ಕಚೇರಿಗೆ ಹೋಗುತ್ತೇನೆ. ಆಗ ಏನಾದ್ರು ಸಬ್ಸಿಡಿ ಕೊಡದೇ ಇದ್ರೆ ಅಧಿಕಾರಿಗಳ ಮನೆ ಮುಂದೆ ಧರಣಿ ಕೂರುತ್ತೇನೆ. ಅದಕ್ಕೂ ಜಗ್ಗಲ್ಲಿಲ್ಲ ಎಂದರೆ ನಿಮ್ಮನ್ನು ಕಾಣುತ್ತೇನೆ ಎಂದು ಜಗಳೂರು ತಾಲ್ಲೂಕಿನ ರೈತ ಹಾಲೇಶ್ ಸಚಿವರಿಗೆ ತರಾಟೆಗೆ ತೆಗೆದುಕೊಂಡರು.

    ಕಾರ್ಯಕ್ರಮಕ್ಕೂ ಮುಂಚಿತವಾಗಿ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಜಮೀನಿನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿದರು. ಆದರೆ ಮಳೆಯೇ ಇಲ್ಲದ ಜಿಲ್ಲೆಯಲ್ಲಿ ಕೃಷಿ ಹೊಂಡ ಕ್ಕೆ ಬೋರ್‍ವೆಲ್ ನೀರನ್ನು ತುಂಬಿಸಿ ಸಚಿವರಿಂದ ಮೆಚ್ಚುಗೆ ಪಡಿಯಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಗ್ರಾಮಸ್ಥರು ಹೇಳಿದ್ದಾರೆ.

    ಮಳೆ ನೀರಿನ ಮೂಲಕ ಕೃಷಿ ಹೊಂಡ ತುಂಬಿಸುವ ಯೋಜನೆಗೆ ಇದಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಿದ್ದಾರೆ. ಇದರ ಮಾಹಿತಿ ಅರಿಯದ ಕೃಷಿ ಸಚಿವರು ತುಂಬಿದ್ದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿ ಸಂವಾದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲದೇ ಕೃಷಿ ಸಚಿವರು ಬರುತ್ತಾರೆಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ತಂತಿ ಬೇಲಿಯನ್ನು ಸಹ ನಿರ್ಮಿಸಿದ್ದರು. ನಂತರ ರೈತರ ಸಂವಾದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃಷಿ ಭಾಗ್ಯ ಪರಿಕರ ವಿತರಿಸಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡು ಸತ್ತವರೆಲ್ಲಾ ಸಾಲಭಾದೆಯಿಂದ ಸಾವನ್ನಪ್ಪಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನು ಮಾಧ್ಯಮಗಳು ವೈಭವಿಕರಿಸುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಉಪನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ!

    ಉಪನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ!

    ಹಾಸನ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶನ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸುತ್ತಿರುವುದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ಅರ್ಧಕ್ಕೆ ನಿಂತುಕೊಂಡಿವೆ.

    ಹೌದು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ನಡುವೆ ಹುದ್ದೆಗಾಗಿ ಕಿತ್ತಾಟ ಶುರುವಾಗಿದೆ. ಕಳೆದ ಒಂದೂವರೆ ವರ್ಷದಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ್ ಎಂಬುವರನ್ನು ಸಿಎಂ ತವರು ಕ್ಷೇತ್ರ ರಾಮನಗರಕ್ಕೆ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಈ ಹಿಂದೆ ಹಾಸನ ಜಿಲ್ಲೆಯಲ್ಲೇ ಇದ್ದ ಪುರುಷೋತ್ತಮ್ ಎಂಬುವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹಾಸನದಿಂದ ಹೋಗದೆ ಶ್ರೀಧರ್ ರವರು ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಪತ್ನಿ ಭವಾನಿಯವರ ಪ್ರಭಾವದಿಂದ ಇಲ್ಲೇ ಉಳಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಗೆ ವರ್ಗವಾಗಿ ಬಂದಿರುವ ಪುರುಷೋತ್ತಮ್‍ರವರು ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

    ಮೂಲಗಳ ಪ್ರಕಾರ ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಗೋಪಾಲಸ್ವಾಮಿಯವರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪುರುಷೋತ್ತಮ್ ಅವರನ್ನು ಹಾಸನಕ್ಕೆ ವರ್ಗ ಮಾಡಿದ್ದಾರೆ. ಇದರಿಂದ ಹೆಚ್.ಡಿ.ರೇವಣ್ಣ ಅಸಮಾಧಾನಗೊಂಡಿದ್ದು, ಇದೇ ಕಾರಣದಿಂದಾಗಿ ಭೇಟಿಯಾಗಲು ಬಂದ ಪುರುಷೋತ್ತಮ್ ಅವರೊಂದಿಗೆ ಸಚಿವರು ಸಕಾರಾತ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.

    ಅಧಿಕಾರಿಗಳ ಕಚ್ಚಾಟದಿಂದ ಬೇಸತ್ತ ಸಾರ್ವಜನಿಕರು, ಆಯಕಟ್ಟಿನ ಸ್ಥಳದಲ್ಲಿರುವ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಚ್ಚಾಡುವುದು ಸರಿಯಲ್ಲ. ಇವರಿಗೆ ಸಮಾಜ ಕಲ್ಯಾಣ ಇಲಾಖೆ ಮೇಲೆ ಕಾಳಜಿ ಇದ್ದರೆ ಇಬ್ಬರು ಬೇರೆ ಕಡೆ ಹೋಗಿ ಕೆಲಸ ಮಾಡಲಿ. ಇವರ ಬದಲಿಗೆ ಬೇರೆಯವರು ಬರಲಿ ಎಂದು ಹೇಳುತ್ತಿದ್ದಾರೆ. ಅಲ್ಲದೇ ಉಭಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಲಿತ ಅಧಿಕಾರಿಗಳನ್ನು ಕಚ್ಚಾಡುವಂತೆ ಮಾಡಿದ್ದಾರೆ. ದಲಿತ ಸಮುದಾಯಗಳ ಒಳ ಪಂಗಡಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆಯಾದ ಸಮತಾ ಸೈನಿಕ ದಳದ ಮುಖಂಡ ಸತೀಶ್ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸರಿಯಾಗಿ ಕೆಲ್ಸ ಮಾಡಿಲ್ಲ ಅಂದ್ರೆ ಬಳ್ಳಾರಿಗೆ ಕಳಿಸ್ತೀನಿ – ಉನ್ನತ ಶಿಕ್ಷಣ ಸಚಿವರ ಖಡಕ್ ಎಚ್ಚರಿಕೆ

    ಸರಿಯಾಗಿ ಕೆಲ್ಸ ಮಾಡಿಲ್ಲ ಅಂದ್ರೆ ಬಳ್ಳಾರಿಗೆ ಕಳಿಸ್ತೀನಿ – ಉನ್ನತ ಶಿಕ್ಷಣ ಸಚಿವರ ಖಡಕ್ ಎಚ್ಚರಿಕೆ

    ಮೈಸೂರು: ಸರಿಯಾಗಿ ಕೆಲಸ ಮಾಡದೆ ಇದ್ದರೆ ಎಲ್ಲರನ್ನೂ ಒಟ್ಟಾಗಿ ಬಳ್ಳಾರಿಗೆ ವರ್ಗಾಯಿಸಿ ಬಿಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಮೈಸೂರಿನ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿಲ್ಲ. ಇದೇ ವೇಳೆ ಕಾಲೇಜನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಗರಂ ಆದ್ರು. ಮಹಾರಾಣಿ ಕಾಲೇಜು ಪ್ರತಿಷ್ಠಿತ ಕಾಲೇಜಾಗಿದೆ. ನೀವು ಜವಾಬ್ದಾರಿಯುತ ಅಧಿಕಾರಿಗಳಾಗಿದ್ದೀರಿ ಎಂದು ತರಾಟೆಗೆ ತೆಗೆದು ಕೊಂಡರು.

    ಇದೇ ವೇಳೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿ, ನೀವು ಹೀಗೆ ಇದ್ದರೆ ಒಬ್ಬರನ್ನು ಬಿಡದಂತೆ ಎಲ್ಲರನ್ನು ಬಳ್ಳಾರಿಗೆ ಕಳುಹಿಸಿ ಬಿಡುತ್ತೇನೆ ಎಂದರು. ಸಚಿವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸುತ್ತಿದ್ದಂತೆ ಕಾಲೇಜಿನಲ್ಲಿದ್ದ ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿದರು.

    ಕಾಲೇಜು ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಸ್ವತಃ ಆಲಿಸಿದ ಸಚಿವರು, ಸ್ಥಳದಲ್ಲೇ ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಅಲ್ಲದೇ ಸರ್ಕಾರ ಕಲ್ಪಿಸಿರುವ ಸೌಲಭ್ಯಗಳನ್ನೇ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

  • ಸಭೆಯಲ್ಲಿ ಯುವತಿಯ ಇಮೇಜ್ ನೋಡುವುದರಲ್ಲಿ ಅಧಿಕಾರಿ ಬ್ಯೂಸಿ

    ಸಭೆಯಲ್ಲಿ ಯುವತಿಯ ಇಮೇಜ್ ನೋಡುವುದರಲ್ಲಿ ಅಧಿಕಾರಿ ಬ್ಯೂಸಿ

    ಧಾರವಾಡ: ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು ಚರ್ಚೆ ನಡೆಯೊದು ಸಾಮಾನ್ಯ. ಆದರೆ ಪಂಚಾಯತ್ ಸಭೆಯಲ್ಲಿ ಅಧಿಕಾರಿಯೊಬ್ಬರು ಯುವತಿಯ ಫೋಟೋ ನೋಡುವುದರಲ್ಲಿ ಬ್ಯುಸಿಯಾಗಿದ್ದಿದ್ದು ಕಂಡು ಬಂದಿದೆ.

    ಧಾರವಾಡದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಗಂಭೀರವಾಗಿ ಇರೋದೇ ಇಲ್ಲ. ಬುಧವಾರ ಸಭಾ ಭವನದಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ಯುವತಿಯ ಇಮೇಜ್ ನೋಡುತ್ತಾ ಕುಳಿತಿದ್ದ ಘಟನೆ ನಡೆದಿದೆ.

    ಮತ್ತೊಬ್ಬ ಮಹಿಳಾ ಅಧಿಕಾರಿ ಮೊಬೈಲ್ ನಲ್ಲಿ ಶಾಪಿಂಗ್ ಮಾಡುತ್ತಾ ಕುಳಿತ್ತಿದ್ದರು. ಕೆಆರ್ ಡಿಸಿಎಲ್‍ನ ಎಇಇ ಲಕ್ಷ್ಮಣ್ ನಾಯಕ ಅವರೇ ಯುವತಿಯ ಫೋಟೊ ನೋಡುತ್ತಾ ಕೂತಿದ್ದ ಅಧಿಕಾರಿ. ಇನ್ನು ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುತ್ತಾ ಇದ್ದ ಮಹಿಳಾ ಅಧಿಕಾರಿ ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂದು ತಿಳಿದು ಬಂದಿದೆ.

  • ಎಚ್‍ಡಿಕೆ ಗವರ್ನಮೆಂಟ್‍ನಲ್ಲೂ ಲೂಟಿಕೋರರಿಗೆ ಶ್ರೀರಕ್ಷೆ- ಸಸ್ಪೆಂಡ್ ಆಗಿರೋ ಅಧಿಕಾರಿ ಮತ್ತೆ ನೇಮಕ

    ಎಚ್‍ಡಿಕೆ ಗವರ್ನಮೆಂಟ್‍ನಲ್ಲೂ ಲೂಟಿಕೋರರಿಗೆ ಶ್ರೀರಕ್ಷೆ- ಸಸ್ಪೆಂಡ್ ಆಗಿರೋ ಅಧಿಕಾರಿ ಮತ್ತೆ ನೇಮಕ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೋಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಬಂದರೂ ಲೂಟಿಕೋರರಿಗೆ ಶ್ರೀರಕ್ಷೆಯಾಗಿದ್ದು, ಮತ್ತೆ ಅಮಾನತು ಆಗಿದ್ದ ಅಧಿಕಾರಿಯನ್ನು ನೇಮಕ ಮಾಡಲು ಮನವಿ ಮಾಡಲಾಗಿದೆ.

    ಸಣ್ಣ ಕೈಗಾರಿಗಳ ಸಚಿವ ಎಸ್.ಆರ್ ಶ್ರೀನಿವಾಸ್ ಭ್ರಷ್ಟ ಅಧಿಕಾರಿಯ ಮರುನೇಮಕಕ್ಕೆ ಕಡತ ನೀಡುವಂತೆ ಪತ್ರ ಬರೆದಿರೋದು ಬೆಳಕಿಗೆ ಬಂದಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಶಂಕರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಅಷ್ಟೇ ಅಲ್ಲದೇ ಆತನ ವಿರುದ್ಧ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶ ಪದ್ಮರಾಜ್ ನೇತೃತ್ವದಲ್ಲಿ ಕಮಿಟಿಯನ್ನು ಸಹ ರಚನೆ ಮಾಡಿತ್ತು.

    ಕಮಿಟಿಯ ವರದಿಯಲ್ಲಿ ಶಂಕರ್ ವಿರುದ್ಧ ಹಲವು ಆರೋಪಗಳನ್ನು ಹೊರಿಸಿತ್ತು. ಇದರಿಂದ ಶಂಕರ್ ಅವರನ್ನು ಸಸ್ಪೆಂಡ್ ಸಹ ಮಾಡಲಾಗಿತ್ತು. ಕೋರ್ಟ್ ಸಹ ಅಮಾನತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಶಂಕರ್ ಅವರ ಮರು ನೇಮಕಕ್ಕೆ ಕಡತ ಕಳಿಸುವಂತೆ ಸಣ್ಣ ಕೈಗಾರಿಗಳ ಮಂತ್ರಿ ಶ್ರೀನಿವಾಸ್ ಪತ್ರ ಬರೆದಿರೋದು ಇದೀಗ ಅನುಮಾನಕ್ಕೆ ಕಾರಣವಾಗಿದೆ.

    ಅಷ್ಟೇ ಅಲ್ಲದೆ ವಿಧಾನ ಪರಿಷತ್ ಸದಸ್ಯ ಕಾಂತ್‍ರಾಜ್ ಸಹ ಶಂಕರ್ ಅವರ ಮರು ನೇಮಕಕ್ಕೆ ಒತ್ತಾಯ ಮಾಡಿರೋದು ಸರ್ಕಾರ ಭ್ರಷ್ಟರ ಪರ ವಕಾಲತ್ತು ವಹಿಸುತ್ತಿದೆ ಅನ್ನೋ ಟೀಕೆಗಳು ಕೇಳಿ ಬರುತ್ತಿವೆ.

  • ಯಾರನ್ನೂ ವರ್ಗಮಾಡದೆ ನಾನೇನು ಉತ್ತರ ಕೊಡಲಿ – ಕಾಗಿನೆಲೆ ಶ್ರೀಗಳಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು

    ಯಾರನ್ನೂ ವರ್ಗಮಾಡದೆ ನಾನೇನು ಉತ್ತರ ಕೊಡಲಿ – ಕಾಗಿನೆಲೆ ಶ್ರೀಗಳಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು

    ಬೆಂಗಳೂರು: ನಾವು ಯಾವ ಸಮುದಾಯದ ಅಧಿಕಾರಿಗಳನ್ನೂ ವರ್ಗ ಮಾಡಿಲ್ಲ. ಯಾರನ್ನೂ ವರ್ಗ ಮಾಡದೆ ನಾನೇನು ಉತ್ತರ ಕೊಡಲಿ ಎಂದು ಕಾಗಿನೆಲೆಶ್ರೀಗಳಿಗೆ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ಕುಮಾರಸ್ವಾಮಿ, ನಾವು ಯಾವ ಸಮುದಾಯದ ಅಧಿಕಾರಿಗಳನ್ನೂ ವರ್ಗ ಮಾಡಿಲ್ಲ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ವರ್ಗಮಾಡದೇ ನಾನೇನು ಉತ್ತರ ಕೊಡಲಿ ಎಂದು ಪ್ರಶ್ನೆ ಮಾಡಿ ನಗುಮುಖದಲ್ಲೇ ಮಾತನಾಡಿದರು.

    ಇದಕ್ಕೂ ಮುನ್ನ ದಾವಣೆಗೆರೆಯ ಬೆಳ್ಳೂಡಿಯ ಕಾಗಿನೆಲೆ ಕನಕ ಗುರು ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿರಂಜಾನಂದಪುರಿ ಸ್ವಾಮೀಜಿ, ಸಾಕಷ್ಟು ಅಧಿಕಾರಿಗಳು ನನ್ನ ಬಳಿ ಬಂದು ವರ್ಗಾವಣೆ ಮಾಡುತ್ತಿರುವ ಕುರಿತು ಅಳಲು ತೊಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದರು.

    ಇದೇ ವೇಳೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಅವರಿಗೆ ಮಂತ್ರಿಗಿರಿ ನೀಡಿದ್ದು, ಪಕ್ಷೇತರ ಎಂಬ ಉದ್ದೇಶಕ್ಕೆ ಹೊರತು ಕುರುಬ ಸಮಾಜದವರು ಅಂತಾ ಅಲ್ಲ. ನಮ್ಮ ಸಮಾಜಕ್ಕೆ ಎರಡು ಸಚಿವ ಸ್ಥಾನ ಕೊಡಬೇಕಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಗೌಡರು, ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ. ಕುರುಬ ಸಮುದಾಯಕ್ಕೆ ಉತ್ತಮ ಸ್ಥಾನ ಮಾನ ಒದಗಿಸಿಕೊಡಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದರು.  ಇದನ್ನು ಓದಿ: ಟಗರು ಹೆಜ್ಜೆ ಹಿಂದಕ್ಕೆ ಇಟ್ಟಿದೆ ಅಂದ್ರೆ ಮುಂದೆ ಹೆಜ್ಜೆ ಇಡಲು ಸಿದ್ಧವಾಗುತ್ತಿದೆ ಎಂದರ್ಥ: ಸಿದ್ದು ಪರ ಕಾಗಿನೆಲೆ ಶ್ರೀ ಬ್ಯಾಟಿಂಗ್

  • ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ದಾವಣಗೆರೆ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ರೇಣುಕಾಚಾರ್ಯ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡರಾಗಿದ್ದು, ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಏರು ಧ್ವನಿಯಲ್ಲೇ ಉತ್ತರ ನೀಡಿದ್ದಾರೆ.

    ಇಂದು ನಗರದಲ್ಲಿ ನಡೆಸಿದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ರೇಣುಕಾಚಾರ್ಯ, ಜಿಲ್ಲಾ ಸಿಇಓ ಸಿ.ಅಶ್ವತಿ ಅವರು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಯಾವ ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಜಿಲ್ಲಾ ಪಂಚಾಯತ್ ನ ಯಾವುದೇ ಕೆಲಸ ಆಗಲಿ ಸಿಇಓ ಅನುಮತಿ ಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಫೈಲನ್ನು ನಿಗಧಿತ ಸಮಯದಲ್ಲಿ ಕಳುಹಿಸುವುದಿಲ್ಲ. ನಿಮ್ಮ ದರ್ಬಾರ್ ಏನು ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಶಾಸಕರ ಮಾತಿಗೆ ಸಭೆಯಲ್ಲೇ ತಿರುಗೇಟು ಕೊಟ್ಟ ಸಿಇಓ ಅಧಿಕಾರಿ ಅಶ್ವತಿ ಅವರು, ನಾನು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿದ್ದೇನೆ. ಯಾರಿಗೂ ಅಗೌರವ ತೋರುತ್ತಿಲ್ಲ. ನಾನು ಆ ರೀತಿ ನಡೆದುಕೊಂಡಿಲ್ಲ. ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಏರುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದ್ದಾರೆ.

    ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಅಧಿಕಾರಿಗಳ ವಿರುದ್ಧ ನಾನು ವಾಗ್ದಾಳಿ ನಡೆಸಿಲ್ಲ. ಆದರೆ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದ್ದು ಎಲ್ಲಾ ಚುನಾಯಿತ ಸದಸ್ಯರು ಈ ಕುರಿತು ದೂರು ನೀಡಿದ್ದಾರೆ. ಅದ್ದರಿಂದ ಅವರಿಗೆ ಈ ಕುರಿತು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಶಾಸಕರು ಸೇರಿದಂತೆ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

  • ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾರವಾರ: ತಮ್ಮ ಅವಧಿಯ ಅನುದಾನದ ಕಾಮಗಾರಿಗಳನ್ನು ಪ್ರಾರಂಭಿಸದೇ ಸುಳ್ಳು ನೆಪ ಹೇಳುತ್ತಿದ್ದ ಅಧಿಕಾರಿಗಳಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ತರಾಟೆಗೆ ತಗೆದುಕೊಂಡಿದ್ದಾರೆ.

    ಕಾರವಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮೂಲಸೌಕರ್ಯ ಯೋಜನೆಗಳ ವಿಚಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದರು, ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಸರ್ಕಾರಿ ಕೆಲಸ ಅಂದರೆ ಆಟ ಆಡುವುದು ಅಂದುಕೊಂಡಿದ್ದಿರಾ. ನನಗೆ ಸೂಕ್ತ ಮಾಹಿತಿ ನೀಡದೇ ಇಂದು ಕಾರವಾರದಿಂದ ಹೋಗುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.

    ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 851 ವಿವಿಧ ಕಾಮಗಾರಿಗಳಲ್ಲಿ 838 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 796 ಕಾಮಗಾರಿಗಳಿಗೆ ಅನುಮೋದನೆ ದೊರತಿದೆ. 2012-13ರ ಅವಧಿಯಲ್ಲಿಯೇ ಅನುಮೋದನೆಗೊಂಡಿದ್ದ 55 ಕಾಮಗಾರಿಗಳು ಇಂದಿಗೂ ಪ್ರಾರಂಭಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅನುಮೋಧನೆಗೊಂಡ ಕಾಮಗಾರಿಗಳಲ್ಲಿ ರಸ್ತೆ ಬದಲಿಗೆ ಚರಂಡಿಯನ್ನು ನಿರ್ಮಿಸಿ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆ. ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಗಳು ಅನುಮೋದನೆಗೊಂಡ 37 ಕಾಮಗಾರಿಗಳಲ್ಲಿ 34 ಕಾಮಗಾರಿಗಳನ್ನು ಪ್ರಾರಂಭವೇ ಮಾಡಿಲ್ಲ. ಇನ್ನು ನಾಲ್ಕು ವರ್ಷದ ಸಂಸದ ಅವಧಿಯಲ್ಲಿ ಕೇವಲ ನಾಲ್ಕು ಕಾಮಗಾರಿಗಳನ್ನು ಮಾತ್ರ ಮುಗಿಸಿದ್ದು ಉಳಿದ ಕಾಮಗಾರಿಗಳ ಯಾವಾಗ ಪೂರ್ಣಗೊಳ್ಳುತ್ತವೆ ಎಂದು ಅಧಿಕಾರಿಗಳನ್ನು ಅನಂತ್ ಕುಮಾರ್ ಹೆಗ್ಡೆ ಖರವಾಗಿ ಪ್ರಶ್ನಿಸಿದರು.

    ಸಚಿವರು ಪ್ರಶ್ನೆಗಳಿಗೆ ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಸಹಾಯಕ ಎಂಜಿನಿಯರ್ ಗಳಾದ ಜಿ.ಎಸ್.ಪಾಟೀಲ್, ಆರ್.ವಿ.ಚತುವಾಡಿಗಿ ಅವರು ಉತ್ತರ ನೀಡಲು ತಡಕಾಡಿದರು. ಇದರಿಂದ ಕೋಪಗೊಂಡ ಸಚಿವರು ಸಭೆಯಿಂದ ಹೊರ ನಡೆದು, ಮಾಹಿತಿ ತರುವಂತೆ ಸೂಚಿಸಿದರು. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ಸಾಕಷ್ಟು ಕಾಮಗಾರಿಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಕೆಲವರು ಹಳೇ ಕಟ್ಟಡಗಳ ಫೋಟೋ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಹೇಳಿ, ಸಮರ್ಪಕ ಉತ್ತರ ನೀಡುವವರಗೂ ಕಾರವಾರದಿಂದ ತೆರಳದಂತೆ ಅಧಿಕಾರಿಗಳಿಗೆ ಸೂಚಿಸಿದರು.