Tag: officer

  • ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಬೆಂಗಳೂರು: ಲೋಕಸಭಾ ಚುನಾವಣಾ ಕಾರ್ಯಕ್ಕೆ ಗೈರಾದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್ ರೆಡ್ಡಿ ಚುನಾವಣಾ ಕಾರ್ಯಗಳಿಗೆ ಗೈರಾಗುತ್ತಿದ್ದರು. ಆದರೆ ಹಾಜರಾತಿಯಲ್ಲಿ ಮಾತ್ರ ಹೆಸರು ನಮೂದಿಸಿ ಅಶ್ರದ್ಧೆ, ಅಸಡ್ಡೆ, ಅದಕ್ಷತೆ ತೋರಿದ್ದಾರೆ.

    ಚುನಾವಣಾ ಲೋಪ ಎಸಗಿದ ಸಂಬಂಧ ಅನೇಕ ಬಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಮಂಜುನಾಥ್ ರೆಡ್ಡಿ ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ವಿಜಯಶಂಕರ್ ಹಾಗೂ ಚುನಾವಣಾಧಿಕಾರಿ ಮದನ್ ಮೋಹನ್ ಅಮಾನತುಗೊಳಿಸಿದ್ದಾರೆ.

    ಚುನಾವಣೆಗೆ ಲೋಪ ಮಾಡಿದವರು ಯಾರೆ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯ ಬಡ ರಿಕ್ಷಾ ಚಾಲಕರೊಬ್ಬರ ಮಗನೊಬ್ಬ ದಿನಕ್ಕೆ 18 ಗಂಟೆಗಳ ಓದಿ ಚಿಕ್ಕವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಗೋವಿಂದ್ ಜೈಸ್ವಾಲ್ ತಮ್ಮ 21 ವಯಸ್ಸಿಗೆ ತುಂಬಾ ಪರಿಶ್ರಮದಿಂದ ಓದಿ ತಂದೆ-ತಾಯಿ ಆಶೀರ್ವಾದಿಂದ ತಮ್ಮ ಕನಸನ್ನು ಬೇಗ ತಲುಪಿದ್ದಾರೆ. ಪೋಷಕರಿಗೆ ಗೋವಿಂದ್ ಸೇರಿ ಮೂವರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳಲ್ಲಿ ಕಿರಿಯವನಾದ ಗೋವಿಂದ್ ಕಡುಬಡತನದಲ್ಲಿಯೂ ದಿನಕ್ಕೆ 18 ಗಂಟೆಗಳ ಸಮಯ ಓದಿ ಈಗ ಉನ್ನತ ಹುದ್ದೆಗೆ ಆಯ್ಕೆ ಆಗಿದ್ದಾರೆ.

    ಗೋವಿಂದ್ ಅವರ ಕುಟುಂಬ 12×8 ಅಳತೆಯ ರೂಮಿನಲ್ಲಿ ವಾಸವಾಗಿತ್ತು. ಉಸ್ಮಾನಪುರ ಸರ್ಕಾರಿ ಶಾಲೆಯಲ್ಲಿ ಓದಿದ ಬಳಿಕ ವಾರಣಾಸಿಯ ಸರ್ಕಾರಿ ಕಾಲೇಜಿನಲ್ಲಿ ಗಣಿತದಲ್ಲಿ ಪದವಿ ಪಡೆದಿದ್ದರು. ನಂತರ ಓದಿನಲ್ಲಿ ಆಸಕ್ತಿ ಹೊಂದಿದ್ದ ಗೋವಿಂದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 48ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

    ಗೋವಿಂದ್ ಅವರ ತಂದೆ ಒಬ್ಬ ಆಟೋರಿಕ್ಷಾ ಚಾಲಕನಾಗಿದ್ದು, ಕುಟುಂಬ ನಿರ್ವಹಣೆ ಮಾತ್ರ ನೋಡಿಕೊಳ್ಳುತ್ತಿದ್ದರು. ಐಎಎಸ್ ಪರೀಕ್ಷೆಗೆ ಅಧ್ಯಯನ ಮಾಡುವಾಗ ದಿನಕ್ಕೊಂದು ಸಮಸ್ಯೆಯನ್ನು ಎದುರಿಸುತ್ತಿದ್ದರು. ಗೋವಿಂದ್ ಅಧ್ಯಯನ ಮಾಡುವಾಗ ಹಲವು ಸಲ ವಿದ್ಯುತ್ ಕೈ ಕೊಡುತಿತ್ತು. ಒಮ್ಮೆ ಹೋದರೆ ಒಂದೊಂದು ದಿನ ಮತ್ತೆ ಕರೆಂಟ್ ಬರುತ್ತಿರಲಿಲ್ಲ. ಅಷ್ಟೇ ಅಲ್ಲದೇ ಪವರ್ ಹೋದರೆ ನೆರೆಮನೆಯಲ್ಲಿ ಜನರೇಟರ್ ಆನ್ ಆಗುತ್ತಿತ್ತು. ಇದರಿಂದ ಅಧಿಕ ಶಬ್ಧ ಬರುತ್ತಿತ್ತು. ಹೀಗಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಧೃತಿಗೆಡದ ಗೋವಿಂದ ಕೊನೆಗೆ ಮನೆಯ ಕಿಟಕಿಗಳನ್ನು ಮುಚ್ಚಿ ಕಿವಿಗೆ ಹತ್ತಿ ಹಾಕಿಕೊಂಡು ಓದುತ್ತಿದ್ದರು.

    ಗೋವಿಂದ್ ಪದವಿ ಮುಗಿಸಿ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಯ ಸಿದ್ಧತೆಗಾಗಿ ವಾರಣಾಸಿಯಿಂದ ದೆಹಲಿಗೆ ಬಂದಿದ್ದರು. ಕೆಲವು ದಿನಗಳ ನಂತರ ಮೆಟ್ರೋ ಜೀವನ ಶೈಲಿನಿಂದ ಗೋವಿಂದ್ ಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಅವರ ತಂದೆ ನಾರಾಯಣ ಜೈಸ್ವಾಲ್ ಅವರು ಊರಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿ ಅದರಲ್ಲಿ ಬಂದಂತಹ ಕೇವಲ 4 ಸಾವಿರ ರೂ. ನೀಡಿ ಮಗನ ಓದಿಗೆ ಸಹಾಯ ಮಾಡಿದ್ದರು.

    ಗೋವಿಂದ್ ದಿನಕ್ಕೆ ಬರೋಬ್ಬರಿ 18 ರಿಂದ 20 ಗಂಟೆಯ ಸಮಯ ಓದುತ್ತಿದ್ದರು. ನಂತರ 2006ರಲ್ಲಿ ಮೊದಲ ಬಾರಿಗೆ ಯುಪಿಎಸ್‍ಸಿ ಪರೀಕ್ಷೆ ಬರೆದರು. ಪರೀಕ್ಷೆ ಬರೆದ ನಂತರ ಗೋವಿಂದ್ ಅವರು ಫಲಿತಾಂಶ ಬರುವತನಕ ಸರಿಯಾಗಿ ನಿದ್ದೆಯೇ ಮಾಡದೆ ಕಾಯುತ್ತಿದ್ದರು. ಕೊನೆಗೂ 48ನೇ ರ್‍ಯಾಂಕ್ ಪಡೆದು ಪಾಸಾಗಿದ್ದರು. ಫಲಿತಾಂಶ ಬಂದಾಗ ಗೋವಿಂದ್ ಅವರೇ ವಿಸ್ಮಿತರಾಗಿದ್ದರು. ನಂತರ ಸಂತೋಷ ಪಟ್ಟು ಮನೆಯ ಸದಸ್ಯರಿಗೆ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದರು.

  • ಕಚೇರಿ ಅವಧಿಯಲ್ಲೇ ಗಡದ್ದಾಗಿ ನಿದ್ದೆಗೆ ಜಾರಿದ ನೀರಾವರಿ ಅಧಿಕಾರಿ!

    ಕಚೇರಿ ಅವಧಿಯಲ್ಲೇ ಗಡದ್ದಾಗಿ ನಿದ್ದೆಗೆ ಜಾರಿದ ನೀರಾವರಿ ಅಧಿಕಾರಿ!

    ಬಳ್ಳಾರಿ: ಬೇಸಿಗೆ ಆರಂಭದಲ್ಲೇ ಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಪರಿಣಾಮ ಜನರು ಹನಿ ನೀರಿಗೆ ಪರಿತಪಿಸುತ್ತಿದ್ದಾರೆ. ಆದರೆ ನೀರು ಸರಬರಾಜು ಹೊಣೆ ಹೊತ್ತ ಅಧಿಕಾರಿ ಮಾತ್ರ ಕಚೇರಿಯಲ್ಲಿ ನಿದ್ದಗೆ ಜಾರಿದ್ದ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

    ಹೊಸಪೇಟೆ ನಗರಸಭೆ ನೀರು ಸರಬರಾಜು ಇಲಾಖೆಯ ಎಇಇ ಮಹೇಶ್ವರಪ್ಪ ಅವರು ಕೆಲಸದ ಅವಧಿಯಲ್ಲೇ ನಿದ್ದೆಗೆ ಜಾರಿದ್ದಾರೆ. ನಗರದ ಎಲ್ಲಾ ವಾರ್ಡ್ ಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ಹೊಣೆಯನ್ನು ಮಹೇಶ್ವರಪ್ಪ ಹೊತ್ತಿದ್ದಾರೆ.

    ಕೆಲಸ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿ ಕಚೇರಿಯ ಫ್ಯಾನ್ ಕೆಳಗೆ ನಿದ್ದೆ ಜಾರಿದ್ದನ್ನು ಕಂಡ ಸ್ಥಳೀಯರು ಅಧಿಕಾರಿಯ ನಿರ್ಲಕ್ಷ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಧಿಕಾರಿ ನಿದ್ದೆ ಮಾಡುತ್ತಿರುವ ಫೋಟೋ ತೆಗೆದು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ – ಸ್ಥಳದಲ್ಲೇ ಎಎಸ್‍ಐ ಸಾವು

    ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ – ಸ್ಥಳದಲ್ಲೇ ಎಎಸ್‍ಐ ಸಾವು

    ಹಾವೇರಿ: ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಎಎಸ್‍ಐ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ.

    ರಾಚಪ್ಪ ಚಾಕಲಬ್ಬಿ(56) ಮೃತಪಟ್ಟ ಎಎಸ್‍ಐ. ಹವಾಲ್ದಾರ ಇಸ್ಮಾಯಿಲ್ ಹುಡೇದ(45) ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

    ಚಾಕಲಬ್ಬಿ ಗುತ್ತಲ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾವೇರಿ ತಾಲೂಕಿನ ಹಾವನೂರು ಜಾತ್ರೆಯ ಬಂದೋಬಸ್ತ್ ಕರ್ತವ್ಯ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ಕೆ. ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧುಕರ ಶೆಟ್ಟಿ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ರು: ಶೋಭಾ ಕರಂದ್ಲಾಜೆ

    ಮಧುಕರ ಶೆಟ್ಟಿ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ರು: ಶೋಭಾ ಕರಂದ್ಲಾಜೆ

    ಬೆಂಗಳೂರು: ಕರ್ನಾಟಕ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ತಮ್ಮ ಕರ್ತವ್ಯದಲ್ಲಿ ಭ್ರಷ್ಟರ ಪಾಲಿನ ಸಿಂಹ ಸ್ವಪ್ನವಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಮಧುಕರ ಶೆಟ್ಟಿ ನಮ್ಮ ಜಿಲ್ಲೆಯವರು. ಶೃಂಗೇರಿಯಲ್ಲಿ ನಕ್ಸಲರ ವಿರುದ್ಧ ಉತ್ತಮ ಕೆಲಸ ಮಾಡಿ, ನಕ್ಸಲರನ್ನ ಪತ್ತೆ ಹಚ್ಚೋಕೆ ಸಾಕಷ್ಟು ಶ್ರಮ ವಹಿಸಿದ್ದರು. ಅಲ್ಲದೇ ಲೋಕಾಯುಕ್ತದಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದರು ಎಂದು ತಿಳಿಸಿದರು.

    ಮಧುಕರ ಶೆಟ್ಟಿ ಅವರ ಸಾವು ಶ್ವಾಸಕೋಶದ ಅಥವಾ ಹೆಚ್1ಎನ್1 ನಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಆದರೆ ಪ್ರಾಮಾಣಿಕರಾಗಿದ್ದ ಅವರ ಸಾವಿನ ಸುದ್ದಿ ನಮಗೆ ದಿಗ್ಭ್ರಮೆ ಮೂಡಿಸಿದೆ. 47 ವರ್ಷಕ್ಕೆ ಅವರು ನಿಗೂಢವಾಗಿ ಸಾವನ್ನಪ್ಪಿರುವುದು ನಮಗೂ ಕೂಡ ಭಯ ಉಂಟಾಗುವಂತೆ ಮಾಡಿದೆ ಎಂದರು. ಇದನ್ನು ಓದಿ: ಸಿಂಗಂ ಸಾವಿನ ಬಗ್ಗೆ ಅನುಮಾನಕ್ಕೆ ಕಾರಣಗಳು ಇಲ್ಲಿವೆ

    ಇದೇ ವೇಳೆ ಮಧುಕರ್ ಶೆಟ್ಟಿ ಅವರ ಸಾವಿನ ಬಗ್ಗೆ ವ್ಯಕ್ತವಾಗಿರುವ ಸಂಶಯದ ಬಗ್ಗೆ ಪ್ರತಿಕ್ರಿಯೆ ನೀಡಿ, ಅನಾರೋಗ್ಯದಿಂದ ಅವರು ಸಾವನ್ನಪ್ಪಿದ್ರಾ? ಅಥವಾ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ರಾ ಎಂಬುವುದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಸರ್ಕಾರಗಳ ಕೆಲ ವರ್ತನೆಗಳಿಂದ ಅವರು ಬೇಸಗೊಂಡಿದ್ದರು. ಹೀಗಾಗಿ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದರು. ಅವರ ಸಾವಿಗೆ ನಕ್ಸಲರು ಕಾರಣ ಅಂತ ಹೇಳಲು ಈಗಲೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಸೂಕ್ತ ತನಿಖೆಯ ಬಳಿಕೆ ಸತ್ಯಾಂಶ ಗೊತ್ತಾಗಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯಿಂದ ರಸ್ತೆಯಲ್ಲಿ 2 ಕಿ.ಮೀ ಓಡಿದ ಟಾಪ್ ಅಧಿಕಾರಿ!

    ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯಿಂದ ರಸ್ತೆಯಲ್ಲಿ 2 ಕಿ.ಮೀ ಓಡಿದ ಟಾಪ್ ಅಧಿಕಾರಿ!

    – ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯ ಹುಚ್ಚಾಟ
    – ಪ್ರಶ್ನೆಗೆ ಹೆದರಿ ಓಡಿ ಹೋದ ಐಟಿ ಮುಖ್ಯಸ್ಥ ಸೂರಿ ಪಾಯಲ್
    – ಈತನಿಗೆ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ

    -ಪವಿತ್ರ ಕಡ್ತಲ
    ಬೆಂಗಳೂರು: ತಿಂಗಳಿಗೆ ಒಂದೂವರೆ ಲಕ್ಷ ಸಂಪಾದನೆ ಮಾಡೋ ಅಧಿಕಾರಿಯೊಬ್ಬ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯ ಚೇಂಬರ್ ನಿಂದ ಹುಚ್ಚನಂತೆ 2 ಕಿ.ಮೀ ಓಡಿದ್ದಾನೆ. ಓಡಿದ್ದು ಮಾತ್ರವಲ್ಲದೇ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೋಗಿ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

    ರಸ್ತೆಯಲ್ಲಿ ಹುಚ್ಚರಂತೆ ಓಡಿದ್ದು ಬೇರೆ ಯಾರು ಅಲ್ಲ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಐಟಿ ಹೆಡ್ ಸೂರಿ ಪಾಯಲ್ ಪಬ್ಲಿಕ್ ಟಿವಿಯ ಪ್ರಶ್ನೆಗೆ ಉತ್ತರ ನೀಡದೇ ರಸ್ತೆಯಲ್ಲೇ ಓಡಿದ್ದಾನೆ.

    ಯಾರು ಈ ಅಧಿಕಾರಿ?
    ಆಂಧ್ರ ಮೂಲದ ಪಾಯಲ್ ಸಿದ್ದರಾಮಯ್ಯ ಸೊಸೆಗೆ ಸೋದರ ಸಂಬಂಧಿಯಾಗಿದ್ದಾನೆ. ಸೊಸೆ ಸಂಬಂಧಿಗಾಗಿ ಹುದ್ದೆ ಕೊಡಿಸಲು ಸಿದ್ದರಾಮಯ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮೂಲಕ ಪಾಯಲ್ ಗೆ ಕೆಲಸ ಕೊಡಿಸಿದ್ದಾರೆ. ಕೇವಲ 5 ತಿಂಗಳಲ್ಲಿಯೇ ಈತನ ನೇಮಕಾತಿ ಮುಗಿದಿದ್ದು ಅಷ್ಟರಲ್ಲಿಯೇ ಶಿಸ್ತಾಗಿ ಹುದ್ದೆಗೆ ಹಾಜರಾಗಿದ್ದಾನೆ. ಈ ವಿಚಾರ ಪಬ್ಲಿಕ್ ಟಿವಿಗೆ ಗೊತ್ತಾಗುತ್ತಿದ್ದಂತೆ ಸೂರಿ ಪಾಯಲ್‍ನನ್ನು ಪ್ರಶ್ನಿಸಲು ತೆರಳಿದೆ. ಆದರೆ ಕ್ಯಾಮೆರಾ ಕಂಡೊಡನೆ ಈತನಿಗೆ ಭಯ ಶುರುವಾಗಿ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ ಗಲ್ಲಿ ಗಲ್ಲಿಯಲ್ಲಿ ಓಡಿದ್ದಾನೆ.

    ಉದ್ಯೋಗ ಸಿಕ್ಕಿದ್ದು ಹೇಗೆ?
    ಸೂರಿ ಪಾಯಲ್ ಸಾಮಾನ್ಯ ವ್ಯಕ್ತಿಯಲ್ಲ. ಈತನಿಗೆ ಈ ಹುದ್ದೆ ಕೊಡಿಸಬೇಕಾದರೆ ರಾಜಕೀಯ ವಲಯದಲ್ಲೇ ದೊಡ್ಡ ಬಿರುಗಾಳಿ ಎದ್ದಿತ್ತು. ರಾಜಕೀಯ ಮುಖಂಡರು ತಲೆ ಕೆಡಿಸಿಕೊಂಡು ಈತನಿಗೆ ಹುದ್ದೆ ಕೊಡಿಸಿದ್ದರು. ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ(ಕೆಐಎಡಿಬಿ) ಈತನಿಗೆ ಸರ್ಕಾರಿ ಹುದ್ದೆ ಕೊಡಿಸಲು ಪ್ರಯತ್ನ ನಡೆದಿತ್ತು. ಆದರೆ ಸಕ್ಸಸ್ ಆಗದೇ ಇದ್ದಾಗ ಸಿದ್ದರಾಮಯ್ಯನವರು ಮಾಸ್ಟರ್ ಪ್ಲಾನ್ ರೂಪಿಸಿ, 6 ತಿಂಗಳು ಕಷ್ಟಪಟ್ಟ ನಂತರ ಮಾಲಿನ್ಯ ನಿಯಂತ್ರಣ ಇತಿಹಾಸವನ್ನೇ ಬದಲಾಯಿಸಿ ಐಟಿ ಹೆಡ್ ಅನ್ನೋ ಹುದ್ದೆ ಕರುಣಿಸಿದ್ದಾರೆ. ಗೊತ್ತು ಗುರಿ ಇಲ್ಲದ ಈ ಸೂರಿ ಪಾಯಲ್‍ಗಾಗಿ ಎಲ್ಲ ನಿಯಮಾವಳಿಗಳನ್ನು ಕೈಬಿಡಲಾಗಿದೆ. ಈತನ ನೇಮಕಕ್ಕೆ ಕಮಿಟಿ ರಚನೆ ಮಾಡಿ ಕೆಪಿಎಸ್ಸಿ ಮೂಲಕ ಆಯ್ಕೆ ಆಗುವಂತೆ ಮಾಡಲಾಗಿದೆ.

    ಚೇಸಿಂಗ್ ಆಗಿದ್ದು ಹೀಗೆ:
    ಪಬ್ಲಿಕ್ ಟಿವಿ ಪರಿಸರ ಭವನದಲ್ಲಿರುವ ಸೂರಿ ಪಾಯಲ್ ಹೊಸ ಚೇಂಬರ್ ಗೆ ಎಂಟ್ರಿ ಕೊಟ್ಟಿದೆ. ಎಂಟ್ರಿಯಾಗುತ್ತಿದ್ದಂತೆ ಸೂರಿಗೆ ಅಕ್ಕ-ಪಕ್ಕದ ಅಧಿಕಾರಿಗಳು ಕಚೇರಿ ಬಿಟ್ಟು ಬೇರೆ ಕಚೇರಿಗೆ ಪರಾರಿಯಾಗುವಂತೆ ಮಾಹಿತಿ ನೀಡಿದ್ದಾರೆ. ಪಬ್ಲಿಕ್ ಟಿವಿ ಫಾಲೋ ಮಾಡುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸೂರಿ ಪರಿಸರ ಭವನದಿಂದ ರಸ್ತೆಗಿಳಿದು ಚರ್ಚ್ ಸ್ಟ್ರೀಟ್ ರಸ್ತೆ ದಾಟಿ ಮುಂದೆ ಹೋಗಿದ್ದಾನೆ.

    ಅಲ್ಲೇ ಪಕ್ಕದ ಮೋರಿ ಲೆಕ್ಕಿಸದೇ ಹಿಂದೆ ತಿರುಗದೇ ಬಡ ಬಡ ಅಂತ ವೇಗವಾಗಿ ನಡೆದುಕೊಂಡು ಹೋಗಿದ್ದಾನೆ. ಪಬ್ಲಿಕ್ ಟಿವಿ ಆತನನ್ನೇ ಹಿಂಬಾಲಿಸಿಕೊಂಡು ಹೋದಾಗ ಈ ಮಧ್ಯೆ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ.

    ಕೊನೆಗೆ ಲೋಗೋ ಹಿಡಿದು ಮಾತನಾಡಿಸಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಜನ ಬಂದರೂ ಲೆಕ್ಕಿಸದೇ ಓಡುವುದಕ್ಕೆ ಶುರು ಮಾಡಿದ್ದಾನೆ. ಬಳಿಕ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್‍ ಗೆ ಓಡಿ ಹೋಗಿದ್ದಾನೆ. ಅಲ್ಲಿಂದ ಎತ್ತರದ ಡಿವೈಡರ್ ಇದ್ದರೂ ಲೆಕ್ಕಿಸದೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದಾನೆ. ಅಲ್ಲಿ ಆತನನ್ನು ಮಾತನಾಡಿಸಿದಾಗ, ನೀವು ಗೂಂಡಾಗಳು ನನ್ನ ಹೊಡೆಯಲು ಜನ ಕರಕೊಂಡು ಬಂದಿದ್ದೀರಿ ಅದಕ್ಕೆ ಓಡಿ ಬಂದೆ ಅಂತ ಕಥೆ ಕಟ್ಟಿದ್ದಾನೆ.

    ಬಳಿಕ ಈ ಹುದ್ದೆ ಹೇಗೆ ಸಿಕ್ತು? ಮೇಲಾಧಿಕಾರಿಗಳು ಪರಿಚಯ ಇದ್ದಾರಾ ಎಂದು ಕೇಳಿದಾಗ, ನನಗೆ ಯಾವ ಸಿದ್ದರಾಮಯ್ಯನೂ ಪರಿಚಯ ಇಲ್ಲ. ನಿಮ್ಮ ಮೇಲೆಯೇ ದೂರು ನೀಡ್ತೀನಿ ಅಂತ ಹೇಳಿ ವಾಪಸ್ ಹೋಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಏಕಾಂಗಿಯಾಗಿ ಕಾರ್ಯಾಚರಣೆ- ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ಹಿಡಿದ ಆರ್​ಟಿಒ ಅಧಿಕಾರಿ

    ಮಧ್ಯರಾತ್ರಿ ಏಕಾಂಗಿಯಾಗಿ ಕಾರ್ಯಾಚರಣೆ- ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ಹಿಡಿದ ಆರ್​ಟಿಒ ಅಧಿಕಾರಿ

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಏಕಾಂಗಿಯಾಗಿ ತಮ್ಮ ಖಾಸಗಿ ವಾಹನದಲ್ಲಿ ಆರ್​ಟಿಒ ಅಧಿಕಾರಿಯೊಬ್ಬರು ಕಾರ್ಯಾಚರಣೆಗೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ ಅವರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಅಧಿಕ ಭಾರ ಹೊತ್ತು ಅತಿವೇಗದಿಂದ ಸಾಗುತ್ತಿದ್ದ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಚಾಲಕ ಟಿಪ್ಪರ್ ನಿಲ್ಲಿಸದೇ ಪರಾರಿಯಾಗುತ್ತಿದ್ದ. ಈ ವೇಳೆ ನಾಗಿರೆಡ್ಡಿ ತಮ್ಮ ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ತಡೆದರು. ಆರ್​ಟಿಒ ಚೇಸ್ ಮಾಡುವಾಗ ಚಾಲಕ ಟಿಪ್ಪರ್ ನಿಲ್ಲಿಸದೇ ಆರ್​ಟಿಒ ಅಧಿಕಾರಿಗೆ ಸೈಡ್ ಕೊಡಲಿಲ್ಲ. ಕೊನೆಗೆ ನಾಗಿರೆಡ್ಡಿ ಅವರು ಹರಸಾಹಸ ಪಟ್ಟು ಚೇಸ್ ಮಾಡಿ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.

    ದಾಳಿ ವೇಳೆ ನೀವು ಆರ್​ಟಿಒ ಆದರೆ ದಾಖಲೆ ಕೊಡಿ ಎಂದು ಚಾಲಕ ನಾಗಿರೆಡ್ಡಿ ಅವರನ್ನು ಪ್ರಶ್ನಿಸಿದ್ದಾನೆ. ಆಗ ನಾಗಿರೆಡ್ಡಿ ಐಡಿ ಕಾರ್ಡ್ ತೋರಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಾಗಿರೆಡ್ಡಿ ಟಿಪ್ಪರ್ ವಶಕ್ಕೆ ಪಡೆದ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಎಸ್ಕೇಪ್ ಆಗಿದ್ದಾನೆ.

    ಇದಾದ ಬಳಿಕ ಆರ್​ಟಿಒ ಕಾರ್ಯಾಚರಣೆ ನಡೆಸಿ ಮತ್ತೆರೆಡು ಟಿಪ್ಪರ್ ಲಾರಿ ವಶಕ್ಕೆ ಪಡೆದರು. ಟಿಪ್ಪರ್ ಮಾಲೀಕರ ಕಡೆಯವರಿಂದ ಆರ್​ಟಿಒ ಕಾರ್ಯಾಚರಣೆಗೆ ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಯಾಕೆ ಟಿಪ್ಪರ್ ಮಾತ್ರ ಹಿಡಿತೀರಾ ಎಲ್ಲಾ ವಾಹನಗಳ ಪರಿಶೀಲನೆ ನಡೆಸಿ ಅಂತ ಅಗ್ರಹಿಸಿದರು. ಟಿಪ್ಪರ್ ವಶಕ್ಕೆ ಪಡೆದ ಬಳಿಕ ನಾಗಿರೆಡ್ಡಿ ಆರ್​ಟಿಒ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನಾಗದೋಷ – ಜ್ಯೋತಿಷಿಗಳ ಮಾತುಕೇಳಿ ಅಧಿಕಾರಿಯಿಂದ ಹೋಮ

    ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನಾಗದೋಷ – ಜ್ಯೋತಿಷಿಗಳ ಮಾತುಕೇಳಿ ಅಧಿಕಾರಿಯಿಂದ ಹೋಮ

    ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಜೂಲಕಟ್ಟಿ ವಿದ್ಯುತ್ ಉಪ ಪ್ರಸರಣ ಕೇಂದ್ರಕ್ಕೆ ನಾಗದೋಷ ಎಂದು ಮಾತು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಹೋಮ ಹವನ ನಡೆಸಲಾಗಿದೆ.

    ಪ್ರಸರಣ ಕೇಂದ್ರದಲ್ಲಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ವಿದ್ಯುತ್ ಪ್ರಸರಣ ಕೇಂದ್ರದ ಶಾಖಾಧಿಕಾರಿ ಭೋಗಾಪುರೇಶ್ ದೇಸಾಯಿ ಅವರು ಹೋಮ ಮಾಡಿಸಿದ್ದಾರೆ. ಪ್ರಸರಣ ಕೇಂದ್ರದಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದ್ದವು. ಬಳಿಕ ಈ ಬಗ್ಗೆ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಆಗ ಜ್ಯೋತಿಷಿಗಳು ಇಲ್ಲಿ ನಾಗದೋಷ, ವಾಸ್ತುದೋಷವಿದೆ. ಆದ್ದರಿಂದ ಹೋಮ-ಹವನ ಮಾಡಿಸಿದರೆ ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ.

    ಜ್ಯೋತಿಷಿಗಳ ಮಾತನ್ನು ಕೇಳಿ ನಾಗದೋಷ ವಾಸ್ತುದೋಷದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋಮ ಹವನದ ಮೊರೆ ಹೋಗಿದ್ದಾರೆ. ಅದರಂತೆಯೇ ಜ್ಯೋತಿಷಿಗಳ ಸಲಹೆ ಮೇರೆಗೆ ಎರಡು ದಿನಗಳ ಹಿಂದೆ ಶಾಖಾಧಿಕಾರಿ ಹೋಮ ಹವನ ಮಾಡಿಸಿದ್ದಾರೆ.

    ಅಷ್ಟೇ ಅಲ್ಲದೇ ನಾಗದೋಷದ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರದಲ್ಲಿ ನಾಗಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಪೂಜೆ ಮಾಡಿಸಲಾಗಿದೆ. ಈಗ ಹೋಮ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಪರ, ವಿರೋಧ ಮಾತುಗಳು ಕೇಳಿಬಂದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜನರ ಗಂಭೀರ ಸಮಸ್ಯೆಗಳ ಚರ್ಚೆ ವೇಳೆ ಮೊಬೈಲ್‍ನಲ್ಲೇ ಮುಳುಗಿದ ಅಧಿಕಾರಿಗಳು

    ಜನರ ಗಂಭೀರ ಸಮಸ್ಯೆಗಳ ಚರ್ಚೆ ವೇಳೆ ಮೊಬೈಲ್‍ನಲ್ಲೇ ಮುಳುಗಿದ ಅಧಿಕಾರಿಗಳು

    ಹಾಸನ: ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯುವ ವೇಳೆ ಅಧಿಕಾರಿಗಳು ಮೊಬೈಲ್ ನಲ್ಲೇ ಮುಳುಗಿ ಕಾಲ ಕಳೆದ ಘಟನೆ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಸಭೆಯಲ್ಲಿ ನಡೆದಿದೆ.

    ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸೇರಿದಂತೆ ಸಾಮಾನ್ಯ ಜನರಿಗೆ ಹೆಚ್ಚಿನ ಹಾನಿ ಆಗಿತ್ತು. ಈ ಬಗ್ಗೆ ಹಾಸನ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಚರ್ಚೆ ಏನೋ ಗಂಭೀರವಾಗಿಯೇ ನಡೆಯಿತು. ಕೆಲ ಅಧಿಕಾರಿಗಳು ತಮ್ಮ ಇಲಾಖಾವಾರು ಪ್ರಗತಿಯನ್ನು ಸಭೆಯ ಮುಂದಿಟ್ಟರು. ಆದರೆ ಸಭೆಯಲ್ಲಿ ಹಾಜರಾಗಿದ್ದ ಬಹುತೇಕ ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

    ಮಹಿಳಾ ಹಾಗೂ ಪುರುಷ ಅಧಿಕಾರಿಗಳು ಎನ್ನದೇ ಬಹುತೇಕ ಅಧಿಕಾರಿಗಳು ಸಭೆಗೆ ಯಾವುದೇ ರೀತಿಯ ಮಹತ್ವ ನೀಡದೇ ತಮ್ಮ ಪಾಡಿಗೆ ತಾವು ಮೊಬೈಲ್ ನಲ್ಲಿ ಮುಳುಗಿದ್ದರು. ಕೆಲವರು ಕಾಲ್ ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೆ ಕೆಲವರು ವಾಟ್ಸಾಪ್ ನಲ್ಲಿ ಮಗ್ನರಾಗಿದ್ದರು. ಇನ್ನೂ ಕೆಲವರು ಯಾವ ಪರಿ ಫ್ರೀಯಾಗಿದ್ರು ಎಂದರೆ ಆನ್‍ಲೈನ್ ಶಾಪಿಂಗ್ ತಾಣದ ಮೂಲಕ ಹೊಸ ಹೊಸ ವಸ್ತುಗಳ ಬುಕ್ಕಿಂಗ್ ಮಾಡಲು ಸಮಯ ಮೀಸಲಿಟ್ಟಿದ್ದರು.

    ಮಾಸಿಕ ಪ್ರಗತಿ ಪರಿಶೀಲನಾ ಸಭೆಗೂ, ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೊಬೈಲ್ ಮೊರೆ ಹೋಗಿದ್ದು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನ ಸಾಮಾನ್ಯರ ಅಧಿಕಾರಿಗಳ ಬಳಿ ಹೋದರೆ ಸಭೆಯ ಕಾರಣ ನೀಡುವ ಅಧಿಕಾರಗಳು ಕೆಲಸ ಮುಂದೂಡುತ್ತಾರೆ. ಆದರೆ ಸಭೆಗೆ ಬರುವ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ಮಾಡದೇ ಅಸಡ್ಡೆ ತೋರಿದ್ದಾರೆ. ಸದ್ಯ ಅಧಿಕಾರಿಗಳ ಈ ವರ್ತನೆ ಗಮನಿಸಿದ ಸಾರ್ವಜನಿಕರು ಯಾವ ಪುರುಷಾರ್ಥಕ್ಕೆ ಸಭೆ ನಡೆಸಲಾಗುತ್ತದೆ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯಾಂಕ್ ಅಧಿಕಾರಿ ಕೊಲೆಗೈದು, 10 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

    ಬ್ಯಾಂಕ್ ಅಧಿಕಾರಿ ಕೊಲೆಗೈದು, 10 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

    ಪಾಟ್ನಾ: ದುಷ್ಕರ್ಮಿಗಳ ತಂಡವೊಂದು ಬ್ಯಾಂಕ್ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಕೊಂದು 10 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಬಿಹಾರ್ ರಾಜ್ಯದ ಕಟಿಹಾರ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಕಟಿಹಾರ್ ಜಿಲ್ಲೆಯ ಅಮೀನ್ ಚೌಕ್ ಪ್ರದೇಶದಲ್ಲಿರುವ ಬಂಧನ್ ಬ್ಯಾಂಕ್ ಶಾಖೆಗೆ ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿದ್ದ ಸಿಬ್ಬಂದಿಯನ್ನು ಹೆದರಿಸಿ ಹಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳನ್ನು ತಡೆಯಲು ಮುಂದಾದ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಗುಂಡಿಟ್ಟಿ ಕೊಂದಿದ್ದಾರೆ. ಅಲ್ಲದೇ ಮತ್ತೋರ್ವ ಬ್ಯಾಂಕ್ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ.

    ಬಳಿಕ ಬ್ಯಾಂಕಿನಲ್ಲಿದ್ದ 10 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಪೂರ್ನಿಯ ಬಳಿಯಿರುವ ಆಸ್ಪತ್ರೆಗೆ ರವಾನಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ. ಘಟನೆ ಸಂಬಂಧ ಪೊತಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv