Tag: officer

  • ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ಹೈದರಾಬಾದ್: ತೆಲಂಗಾಣ (Telangana) ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಅವರ ಒಟ್ಟು 100 ರೂ. ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಪತ್ತೆ ಮಾಡಿದೆ .

    ಎಸಿಬಿಯ ಪ್ರಾಥಮಿಕ ವರದಿಗಳ ಪ್ರಕಾರ, ಬಾಲಕೃಷ್ಣ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಕೋಟಿಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

    ಬಾಲಕೃಷ್ಣ ಅವರು ತಮ್ಮ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.

    ಮುಂಜಾನೆ 5 ಗಂಟೆಗೆ ಬಾಲಕೃಷ್ಣ ಅವರಿಗೆ ಸೇರಿದ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಎಸಿಬಿ ತಂಡಗಳು ಎಚ್‌ಎಂಡಿಎ ಮತ್ತು RERA ಕಚೇರಿಗಳ ಮೂಲಕ ದಾಳಿ ನಡೆಸಿದೆ. ತಮ್ಮ ಅಧಿಕೃತ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಸಂಪತ್ತು ಗಳಿಸಿರುವ ಶಂಕೆ ವ್ಯಕ್ತಪಡಿಸಿರುವ ಬಾಲಕೃಷ್ಣ ವಿರುದ್ಧ ಲೆಕ್ಕಕ್ಕೆ ಬಾರದ ಆಸ್ತಿ ಪ್ರಕರಣ ದಾಖಲಾಗಿದೆ.

    ಚಿನ್ನ, ಫ್ಲಾಟ್, ಬ್ಯಾಂಕ್ ಠೇವಣಿ, ಬೇನಾಮಿ ಆಸ್ತಿ ಸೇರಿದಂತೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ 40 ಲಕ್ಷ ನಗದು, 2 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 60 ಅತ್ಯಾಧುನಿಕ ಕೈಗಡಿಯಾರಗಳು, ಆಸ್ತಿ ದಾಖಲೆಗಳು ಮತ್ತು ಗಣನೀಯ ಬ್ಯಾಂಕ್ ಠೇವಣಿಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 14 ಫೋನ್‌ಗಳು, 10 ಲ್ಯಾಪ್‌ಟಾಪ್‌ಗಳು ಮತ್ತು ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಜಪ್ತಿ ಮಾಡಲಾಗಿದೆ.

    ಇದೀಗ ಎಸಿಬಿಯು ಬಾಲಕೃಷ್ಣ ಅವರ ಬ್ಯಾಂಕ್ ಲಾಕರ್‌ಗಳು ಮತ್ತು ಇತರ ಬಹಿರಂಗಪಡಿಸದ ಆಸ್ತಿಗಳ ಮೂಲಕ ಹುಡುಕುತ್ತಿದ್ದ, ನಾಳೆಯೂ ತನಿಖೆಯ ಮುಂದುವರಿಯುವ ಸಾಧ್ಯತೆ ಇದೆ.

  • ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ

    ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

    ಕೆಂಚಪ್ಪ ಬಾವಿಮನಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಜೆಸ್ಕಾಂ ಅಧಿಕಾರಿ. ಲಿಂಗಸುಗೂರಿನ ಆಶಿಹಾಳ ತಾಂಡದ ನಿವಾಸಿ ವಿದ್ಯುತ್ ಗುತ್ತಿಗೆದಾರ ಪ್ರೇಮಕುಮಾರ ಎಂಬವರಿಗೆ ಹೊಸ ಮನೆಯ ಆರ್ ಆರ್ ನಂಬರ್ ನೀಡಲು 10 ಸಾವಿರ ಲಂಚ ಕೇಳಿದ್ದ. ಈಗಾಗಲೇ 5 ಸಾವಿರ ರೂಪಾಯಿ ನೀಡಿದ್ದ ಗುತ್ತಿಗೆದಾರ, ಅಧಿಕಾರಿಯಿಂದ ಬೇಸತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದ.

    ಉಳಿದ 5 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದಬಳಿಕ ಅಧಿಕಾರಿ ಅನಾರೋಗ್ಯದ ಹೈಡ್ರಾಮಾ ಮಾಡಿ ಲಿಂಗಸುಗೂರು ಸರ್ಕಾರಿ ತಾಲೂಕಾಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಎಇಇ ಕೆಂಚಪ್ಪ ಬಾವಿಮನಿಯನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಆಕ್ಟೀವ್ ಆಗಿದ್ದ ಶಿಕ್ಷಕಿ – ಸಾವಿನ ಸುತ್ತ ಅನುಮಾನಗಳ ಹುತ್ತ!

  • ಗಣಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಸುಳಿವು ಸಿಕ್ಕಿದೆ: ಪರಮೇಶ್ವರ್

    ಗಣಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಸುಳಿವು ಸಿಕ್ಕಿದೆ: ಪರಮೇಶ್ವರ್

    ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ (Senior Woman Geologist Prathima) ಕೊಲೆ ಪ್ರಕರಣದಲ್ಲಿ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

    ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು (G Parameshwar), ಪ್ರತಿಮಾ ಕೊಲೆ ಪ್ರಕರಣದಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಅದರ ಆಧಾರದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡಿದ ಬಳಿಕ ಕೊಲೆಗೆ ಕಾರಣ ಏನು?. ಹಿಂದೆ ಮುಂದೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

    ಈಗಲೇ ಏನು ಹೇಳೋಕೆ ಆಗೋದಿಲ್ಲ. ಘಟನೆ ಸಂಬಂಧ ಸಿಕ್ಕಿರೋ ಲೀಡ್ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ಬಾರಿ ಆರೋಪಿಯನ್ನ ಬಂಧನ ಮಾಡಿದ ಮೇಲೆ ಎಲ್ಲವೂ ಹೊರಗೆ ಬರಲಿದೆ ಅಂತ ತಿಳಿಸಿದರು. ಇದನ್ನೂ ಓದಿ: ಪ್ರತಿಮಾ ಕೊಲೆ ಪ್ರಕರಣ- ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ

    ಇದೇ ವೇಳೆ ಪ್ರತಿಮಾ ಕೊಲೆ ವಿಚಾರದಲ್ಲಿ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ ಎಂಬ ಬಿಜೆಪಿ (BJP) ಟ್ವೀಟ್ ಗೆ ಕಿಡಿಕಾರಿದ ಅವರು, ಗೃಹ ಸಚಿವರು ಇದ್ದಾರಾ ಇಲ್ಲವಾ ಅಂತ ಬಿಜೆಪಿ ಅವರಿಗೆ ಗೊತ್ತಾಗಲಿದೆ ಎಂದು ಆಕ್ರೋಶ ಹೊರ ಹಾಕಿದ್ರು.

    ನಡೆದಿದ್ದೇನು..?: ಪ್ರತಿಮಾ ಕಳೆದ 8 ವರ್ಷಗಳಿಂದ ಒಬ್ಬರೇ ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ನವೆಂಬರ್ 4ರಂದು ರಾತ್ರಿ 8.30ಗೆ ಪ್ರತಿಮಾ ಅವರನ್ನು ಮನೆಯ ಮುಂಭಾಗದಲ್ಲೇ ಉಸಿರುಗಟ್ಟಿಸಿ ಕತ್ತು ಇರಿದು ಕೊಲೆ ಮಾಡಲಾಗಿತ್ತು. ಇದೀಗ ಘಟನೆ ಸಂಬಂಧ ಪ್ರತಿಮಾ ಕಾರು ಚಾಲಕ ಕಿರಣ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

  • ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮಂಡ್ಯ: ಬೆಂಗಳೂರು-ಮೈಸೂರು (Bengaluru- Mysuru) ದಶಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲು ತೋರಿಸಿ ಎಚ್ಚರಿಕೆ ನೀಡಿರುವ ಪ್ರಸಂಗವೊಂದು ಮಂಡ್ಯದ ಇಂಡುವಾಳು ಗ್ರಾಮದಲ್ಲಿ ನಡೆದಿದೆ.

    ನನ್ನ ಮನೆ ಒಂದಿಂಚು ಜಾಸ್ತಿ ಹೊಡೆದರೂ ಕಲ್ಲಲ್ಲಿ ಹೊಡಿತೀನಿ ಎಂದು ಮಾಲೀಕ ಅವಾಜ್ ಹಾಕಿದ್ದಾರೆ. ನಿಗದಿಯಾದ ಕಟ್ಟಡವನ್ನಷ್ಟೇ ಹೊಡೆಯಬೇಕು. ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಹೊಡೆಯುತ್ತೇನೆ ಎಂದು ಮನೆ ಮಾಲೀಕ ರಾಜೇಗೌಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ

    ಹೆದ್ದಾರಿ ಪ್ರಾಧಿಕಾರವು ದಶಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ಮನೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಪರಿಹಾರ ತಾರತಮ್ಯ ಆರೋಪ, ಮನೆ ಕೆಡವಲು ಕೆಲ ಮಾಲೀಕರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ನೀಡಿದ್ದಾರೆಂದು ಕೆಲ ಮಾಲೀಕರು ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

    ಇಂದು ಬೆಳ್ಳಂಬೆಳ್ಳಗ್ಗೆ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮನೆ ಕೆಡವಲು ಬಿಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರನ್ನು ಬಂಧಿಸಿ ತೆರವು ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ನವದೆಹಲಿ: ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳೊಂದಿಗೆ (Delhi Jal Board (DJB) officials) ಅನುಚಿತವಾಗಿ ವರ್ತಿಸಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ (BJP MP Parvesh Verma) ವಿರುದ್ಧ ಎಎಪಿ (AAP) ನಾಯಕ ವಾಗ್ದಾಳಿ ನಡೆಸಿದ್ದಾರೆ.

    ಪಶ್ಚಿಮ ದೆಹಲಿಯ (Delhi) ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಪಕ್ಷದ ಸಹೋದ್ಯೋಗಿ ತಜಿಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga) ಅವರು ಯಮುನಾದ (Yamuna) ಕಾಳಿಂದಿ ಕುಂಜ್ ಘಾಟ್‍ಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಛತ್ (Chhath)ಪೂಜೆಗೂ ಮುನ್ನ ಡಿಜೆಬಿ ಅಧಿಕಾರಿಗಳು ನದಿಗೆ ಡಿಫೋಮರ್ ಕೆಮಿಕಲ್ ಅನ್ನು ಸಿಂಪಡಿಸುತ್ತಿದ್ದರು. ಆಗ ಕೆಲವು ರಾಸಾಯನಿಕಗಳನ್ನು ಬಳಸಿದ್ದರಿಂದ ಯಮುನಾ ನದಿ ಕಲುಷಿತಗೊಂಡಿದೆ. ಇದರಿಂದ ಛತ್ ಪೂಜಾವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಪರ್ವೇಶ್ ವರ್ಮಾ ಅವರು ಜಲ ಮಂಡಳಿ (ಡಿಜೆಬಿ) ಅಧಿಕಾರಿಗೆ ನಿಂದಿಸಿದ್ದರು. ಇದನ್ನೂ ಓದಿ: ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು

    ಈ ವಿಚಾರವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಎಪಿಯ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ದೆಹಲಿ ಸರ್ಕಾರ ಛಠ್ ಪೂಜೆಗೆ ತಯಾರಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ನಾಯಕರು ಮಧ್ಯ ಪ್ರವೇಶಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಜಲ ಮಂಡಳಿ (ಡಿಜೆಬಿ) ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪೂರ್ವಾಂಚಲಿ ಸಹೋದರರು ಕಷ್ಟಪಡಬೇಕು ಮತ್ತು ಹಬ್ಬವನ್ನು ಹಾಳು ಮಾಡಬೇಕೆಂಬುವುದೇ ಬಿಜೆಪಿಯ ಬಯಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

    ಟ್ವೀಟ್ ಜೊತೆಗೆ ಘಟನೆಯ ವೀಡಿಯೋವನ್ನು ಸೌರಭ್ ಭಾರದ್ವಾಜ್ ಅವರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಬಿಜೆಪಿ ಪರ್ವೇಶ್ ವರ್ಮಾ ಬ್ಯಾರೆಲ್‍ಗಳ ಸೆಟ್ ಅನ್ನು ತೋರಿಸಿ, “ವಿಷಕಾರಿ” ರಾಸಾಯನಿಕವನ್ನು ಸಿಂಪಡಿಸಿದ್ದಕ್ಕಾಗಿ ಅಧಿಕಾರಿಯ ಮೇಲೆ ಕಿರುಚಾಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

    8 ವರ್ಷಗಳ ಬಳಿಕ ಈಗ ಇದನ್ನು ಸ್ವಚ್ಛಗೊಳಿಸಬೇಕು ಎಂದು ನೆನಪಾಗಿದ್ಯಾ? ಇಲ್ಲಿ ನೀವು ಸಾಕಷ್ಟು ಜನರನ್ನು ಕೊಲ್ಲುತ್ತಿದ್ದೀರಾ. ಎಂಟು ವರ್ಷಗಳಿಂದ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲ. ಈಗ ಬಂದು ಇಲ್ಲಿ ಸ್ನಾನ ಮಾಡಿ ಎಂದು ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಕೂಡ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ

    ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ

    ಚಾಮರಾಜನಗರ: ನಿನ್ಮನೆ ಕಾಯ್ವಾಗ ನಿಂಗೆ ಎನ್‍ಡಿಆರ್‌ಎಫ್ (NDRF) ಯಾವುದು, ಎಸ್‍ಡಿಆರ್‌ಎಫ್ (SDRF)ಯಾವುದು ಅಂತ ಗೊತ್ತಿಲ್ಲ ಎಂದು ಅಧಿಕಾರಿಯೊಬ್ಬರ ವಿರುದ್ಧ ಸಚಿವ ವಿ. ಸೋಮಣ್ಣ (V. Somanna) ಕಿಡಿಕಾರಿದ್ದಾರೆ.

    ಚಾಮರಾಜನಗರದಲ್ಲಿ (Chamarajanagara) ಇಂದು ಅಧಿಕಾರಿಗಳ ಸಭೆ ನಡೆಸಿದ ವಿ.ಸೋಮಣ್ಣ ಅವರು, ಮಳೆ ಹಾನಿಗೊಳಗಾದ ತೋಟಗಾರಿಕೆ ಬೆಳೆಗೆ ನೀಡುವ ಪರಿಹಾರದ ಬಗ್ಗೆ ಮಾಹಿತಿ ಕೇಳಿದರು. ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್  ಬಗ್ಗೆ ಪ್ರಶ್ನಿಸಿದರು. ಆದರೆ ಇದಕ್ಕೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗೇಶ್ವರರಾವ್ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್

    ಇದರಿಂದ ಕೋಪಗೊಂಡ ವಿ.ಸೋಮಣ್ಣ, ನಿನ್ಮನೆ ಕಾಯ್ವಾಗ ನಿಂಗೆ ಎನ್‍ಡಿಆರ್‌ಎಫ್ ಯಾವುದು, ಎಸ್‍ಡಿಆರ್‌ಎಫ್ ಯಾವುದು ಅಂತ ಗೊತ್ತಿಲ್ಲ. ನೀನೆಂತಾ ಅಸಿಸ್ಟೆಂಟ್ ಡೈರೆಕ್ಟರ್ ಅಪ್ಪಾ, ರಾಜೀನಾಮೆ ಕೊಟ್ಟು ಮನೆಗೆ ಹೋಗು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು ಸರಿಯಲ್ಲ – ಮುತಾಲಿಕ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ವ್ಯಕ್ತಿಯನ್ನು ಕಚ್ಚಿ ಸಾಯಿಸಿದ ಮೊಸಳೆ – ಹಲವು ಗಂಟೆಗಳ ನಂತ್ರ ಶವ ಪತ್ತೆ

    ವ್ಯಕ್ತಿಯನ್ನು ಕಚ್ಚಿ ಸಾಯಿಸಿದ ಮೊಸಳೆ – ಹಲವು ಗಂಟೆಗಳ ನಂತ್ರ ಶವ ಪತ್ತೆ

    ಗಾಂಧೀನಗರ: ಗುಜರಾತ್‍ನ ವಡೋದರಾ ಜಿಲ್ಲೆಯ ನದಿಯಲ್ಲಿ ಮೊಸಳೆಯೊಂದು 30 ವರ್ಷದ ವ್ಯಕ್ತಿಯನ್ನು ಕಚ್ಚಿ ಸಾಯಿಸಿದ್ದು, ಹಲವಾರು ಗಂಟೆಗಳ ನಂತರ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಇಮ್ರಾನ್ ದಿವಾನ್ ಎಂದು ಗುರುತಿಸಲಾಗಿದ್ದು, ಈತ ಸೋಖ್ದಾರಗು ಗ್ರಾಮದ ನಿವಾಸಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ಪದ್ರಾ ತಾಲೂಕಿನ ಸೋಖ್ದಾರಗು ಗ್ರಾಮದ ಬಳಿಯ ಧಧಾರ್ ನದಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರವಿರಾಜಸಿಂಹ ರಾಥೋಡ್ ಹೇಳಿದ್ದಾರೆ.  ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ

    ವ್ಯಕ್ತಿಯನ್ನು ಮೊಸಳೆ ನದಿಗೆ ಎಳೆದೊಯ್ದಿದ್ದು, ನಂತರ ಆತನ ದೇಹ ನೀರಿನಲ್ಲಿ ಕಣ್ಮರೆಯಾಗುತ್ತಾ, ಮತ್ತೆ ಮರುಕಳಿಸುತ್ತಿತ್ತು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದಿದ್ದರು. ನಂತರ ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಕೊನೆಗೆ ರಾತ್ರಿ 10 ಗಂಟೆ ಸುಮಾರಿಗೆ ಮೃತದೇಹವನ್ನು ನದಿಯಿಂದ ಹೊರಗೆ ತೆರೆಯಲಾಯಿತು. ವ್ಯಕ್ತಿ ದೇಹದ ಮೇಲೆ ಮತ್ತು ಭುಜದ ಮೇಲೆ ಕಚ್ಚಿದ್ದ ಗುರುತು ಪತ್ತೆಯಾಗಿದ್ದು, ವ್ಯಕ್ತಿ ನದಿಯಲ್ಲಿ ಹೇಗೆ ಸಾವನ್ನಪ್ಪಿದ್ದರು ಎಂಬುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನೀರಿನಲ್ಲಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Live Tv
    [brid partner=56869869 player=32851 video=960834 autoplay=true]

  • ವ್ಯಕ್ತಿಯನ್ನು ಕೊಚ್ಚಿ ಸಾಯಿಸಿದ ಮೊಸಳೆ – ಹಲವು ಗಂಟೆಗಳ ನಂತ್ರ ಶವ ಪತ್ತೆ

    ವ್ಯಕ್ತಿಯನ್ನು ಕೊಚ್ಚಿ ಸಾಯಿಸಿದ ಮೊಸಳೆ – ಹಲವು ಗಂಟೆಗಳ ನಂತ್ರ ಶವ ಪತ್ತೆ

    ಗಾಂಧೀನಗರ: ಗುಜರಾತ್‍ನ ವಡೋದರಾ ಜಿಲ್ಲೆಯ ನದಿಯಲ್ಲಿ ಮೊಸಳೆಯೊಂದು 30 ವರ್ಷದ ವ್ಯಕ್ತಿಯನ್ನು ಕೊಚ್ಚಿ ಸಾಯಿಸಿದ್ದು, ಹಲವಾರು ಗಂಟೆಗಳ ನಂತರ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಇಮ್ರಾನ್ ದಿವಾನ್ ಎಂದು ಗುರುತಿಸಲಾಗಿದ್ದು, ಈತ ಸೋಖ್ದಾರಗು ಗ್ರಾಮದ ನಿವಾಸಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ಪದ್ರಾ ತಾಲೂಕಿನ ಸೋಖ್ದಾರಗು ಗ್ರಾಮದ ಬಳಿಯ ಧಧಾರ್ ನದಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರವಿರಾಜಸಿಂಹ ರಾಥೋಡ್ ಹೇಳಿದ್ದಾರೆ.  ಇದನ್ನೂ ಓದಿ: 10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ

    ವ್ಯಕ್ತಿಯನ್ನು ಮೊಸಳೆ ನದಿಗೆ ಎಳೆದೊಯ್ದಿದ್ದು, ನಂತರ ಆತನ ದೇಹ ನೀರಿನಲ್ಲಿ ಕಣ್ಮರೆಯಾಗುತ್ತಾ, ಮತ್ತೆ ಮರುಕಳಿಸುತ್ತಿತ್ತು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಸೆರೆಹಿಡಿದಿದ್ದರು. ನಂತರ ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಕೊನೆಗೆ ರಾತ್ರಿ 10 ಗಂಟೆ ಸುಮಾರಿಗೆ ಮೃತದೇಹವನ್ನು ನದಿಯಿಂದ ಹೊರಗೆ ತೆರೆಯಲಾಯಿತು. ವ್ಯಕ್ತಿ ದೇಹದ ಮೇಲೆ ಮತ್ತು ಭುಜದ ಮೇಲೆ ಕಚ್ಚಿದ್ದ ಗುರುತು ಪತ್ತೆಯಾಗಿದ್ದು, ವ್ಯಕ್ತಿ ನದಿಯಲ್ಲಿ ಹೇಗೆ ಸಾವನ್ನಪ್ಪಿದ್ದರು ಎಂಬುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನೀರಿನಲ್ಲಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಕೆಸರು ಗದ್ದೆಯಾದ ಗ್ರಾಮದ ಮುಖ್ಯರಸ್ತೆ – ಅಧಿಕಾರಿಗಳಿಗೆ ಜನರ ಹಿಡಿ ಶಾಪ

    ಕೆಸರು ಗದ್ದೆಯಾದ ಗ್ರಾಮದ ಮುಖ್ಯರಸ್ತೆ – ಅಧಿಕಾರಿಗಳಿಗೆ ಜನರ ಹಿಡಿ ಶಾಪ

    ಹುಬ್ಬಳ್ಳಿ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಮುಖ್ಯರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಇರಲಿ ಜನರು ಸಹ ಒಂದು ಹೆಜ್ಜೆ ಕಿತ್ತಿಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾಲವಾಡದ ನವಗ್ರಾಮದಲ್ಲಿ 60 ಕುಟುಂಬಗಳು ಜೀವನ ನಡೆಸುತ್ತಿವೆ. ಹೆಸರು ಮಾತ್ರ ನವಗ್ರಾಮ ಆದರೆ ಅಭಿವೃದ್ಧಿಯಲ್ಲಿ ಆದಿಮಾನವರ ಕಾಲದಲ್ಲಿದ್ದಾರೆ. ಈ ಹಿಂದೆಯೂ ಗ್ರಾಮಕ್ಕೆ ಹಲವು ಬಾರಿ ಮಳೆ ಬಂದು ರಸ್ತೆಯೆಲ್ಲ ಹದಗೆಟ್ಟಿ ಜನರು ನಡೆದಾಡಲು ಬಹಳಷ್ಟು ಕಷ್ಟದಾಯಕವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಜನ ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಒಂಟಿ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಕತ್ತು ಕೊಯ್ದ ಕಿರಾತಕರು – ಕೊಲೆಯ ಹಿಂದೆ ಅನುಮಾನದ ಹುತ್ತ 

    ಈಗ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ರಸ್ತೆ ಸಂಪೂರ್ಣವಾಗಿ ಹಾಳಾಗಿ ಭತ್ತದ ಗದ್ದೆಯಂತಾಗಿದೆ. ತುರ್ತುಪರಿಸ್ಥಿತಿಯಲ್ಲಿ ಬಾಣಂತಿಯರು, ಗರ್ಭಿಣಿರು, ಅನಾರೋಗ್ಯ ಪೀಡಿತರು ಸೇರಿದಂತೆ ಗ್ರಾಮಸ್ಥರು ರಸ್ತೆಗಿಳಿಯಲು ಸಂಕಷ್ಟ ಎದುರಾಗಿದೆ.

    ಈ ರಸ್ತೆಯಲ್ಲಿ ವಾಹನಗಳನ್ನು ತಂದರೇ ಮುಗಿಯಿತೂ ಕಥೆ. ಚಕ್ರಕೆಲ್ಲಾ ಮೆಣ್ಣುಮೆತ್ತಿ ಚಕ್ರ ತಿರುಗದೆ ಕೆಳಗೆ ಬಿಳೋದೂ ಗ್ಯಾರಂಟಿ. ಒಂದು ವೇಳೆ ಗಾಡಿ ಕೈಕೊಟ್ಟರೆ ರಸ್ತೆಗೆ ಗೋಣಿಚೀಲ ಹಾಕಿ ಅದರ ಮೇಲೆ ಬೈಕ್ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಗ್ರಾಮದಲ್ಲಿ ಸಾಕಷ್ಟು ಮನೆಗಳು ಸಹ ಹಾನಿಗೊಳಗಾಗಿವೆ. ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಂಕಷ್ಟ ಕೇಳಲು ಮುಂದಾಗುತ್ತಿಲ್ಲ. ಇದನ್ನೂ ಓದಿ:  5 ವರ್ಷದ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

    Live Tv
    [brid partner=56869869 player=32851 video=960834 autoplay=true]

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಚಿಕ್ಕಮಗಳೂರು: ಎರಡು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಎಸಿಬಿ ಬಲೆಗೆ ಬಿದ್ದಿರೋ ಘಟನೆ ನಗರದಲ್ಲಿ ನಡೆದಿದೆ.

    ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನ ಎಂ.ಸಿ.ಶಿವಕುಮಾರ್ ಎಂದು ಗುರುತಿಸಲಾಗಿದೆ. ಲೇಔಟ್ ನಿರ್ಮಾಣ ವಿಚಾರ ಸಂಬಂಧ ಕಚೇರಿ ಪಕ್ಕದಲ್ಲೇ ಗೋಪಿನಾಥ್ ಅವರಿಂದ ಎರಡು ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣದ ಸಂಬಂಧ ಎಂಟು ಲಕ್ಷಕ್ಕೆ ಮಾತುಕತೆ ಮಾಡಿಕೊಂಡು ಮುಂಗಡವಾಗಿ 2 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದೂರುದಾರ ಗೋಪಿನಾಥ್ ಬ್ರೋಕರ್ ರಮೇಶ್ ಮೂಲಕ ಶಿವಕುಮಾರ್‌ನನ್ನು ಭೇಟಿ ಮಾಡಿದ್ದರು. ಎರಡು ಲಕ್ಷ ಹಣ ನೀಡುವಾಗ ನೇರವಾಗಿ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಬ್ರೋಕರ್ ರಮೇಶ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾ ಅಧಿಕಾರಿ ಶಿವಕುಮಾರ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಎಸಿಬಿ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ದಾಳಿ ನಡೆಸಿತ್ತು.