Tag: Odisha Train Tragedy

  • ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ: ರಾಹುಲ್ ಕಿಡಿ

    ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ: ರಾಹುಲ್ ಕಿಡಿ

    ವಾಷಿಂಗ್ಟನ್: ಪ್ರಧಾನಿ ಮೋದಿ (Narendra Modi) ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅಲ್ಲದೇ ತಮ್ಮ ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಅಮೆರಿಕಾದ (America) ಜಾವಿಟ್ಸ್ ಸೆಂಟರ್‌ನಲ್ಲಿ (Javits Centre) ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹದೇ ಒಂದು ರೈಲು ಅಪಘಾತವಾಗಿತ್ತು. ಆಗ ರೈಲು ಅಪಘಾತವಾಗಲು ಬ್ರಿಟಿಷರೇ ಕಾರಣ ಎಂದು ಕಾಂಗ್ರೆಸ್ ದೂಷಿಸಲಿಲ್ಲ. ಅದರ ಬದಲಾಗಿ ಕಾಂಗ್ರೆಸ್ ಸಚಿವರೊಬ್ಬರು, ಇದು ನನ್ನ ಜವಾಬ್ದಾರಿ, ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮೂರು ರೈಲುಗಳನ್ನು ಒಳಗೊಂಡ ಅಪಘಾತದಲ್ಲಿ ಅನೇಕರು ಸಾವನ್ನಪಿದ್ದು, ರೈಲ್ವೇ ಸುರಕ್ಷತೆಯ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ರಾಜೀನಾಮೆ ನೀಡಬೇಕು ಎಂದು ಕೆಲವೆಡೆ ಆಗ್ರಹ ಕೇಳಿಬರುತ್ತಿದೆ ಎಂದರು. ಇದನ್ನೂ ಓದಿ: ಮುಸ್ಲಿಂ ಲೀಗ್ ಜಾತ್ಯಾತೀತ ಪಕ್ಷ ಎಂದ ರಾಹುಲ್ – ಬಿಜೆಪಿ ಕೆಂಡಾಮಂಡಲ

    ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ನೋಡುವುದಿಲ್ಲ. ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ಭವಿಷ್ಯವನ್ನು ನೋಡಲು ಅಸಮರ್ಥವಾಗಿದೆ. ಅವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಭೂತಕಾಲದ ಬಗ್ಗೆ ಮಾತನಾಡಿ ಅದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಭಾರತದಲ್ಲಿ ಎರಡು ಸಿದ್ಧಾಂತದ ನಡುವೆ ಹೋರಾಟ ನಡೆಯುತ್ತಿದೆ. ಒಂದು ಸಿದ್ಧಾಂತವನ್ನು ಕಾಂಗ್ರೆಸ್ ಪ್ರತಿನಿಧಿಸಿದರೆ, ಇನ್ನೊಂದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿನಿಧಿಸುತ್ತದೆ. ಈ ಸಿದ್ಧಾಂತವನ್ನು ಸರಳವಾಗಿ ವಿವರಿಸಬೇಕೆಂದರೆ ಒಂದು ಕಡೆ ಮಹಾತ್ಮಗಾಂಧಿ (Mahatma Gandhi) ಮತ್ತು ಇನ್ನೊಂದು ಕಡೆ ನಾಥುರಾಮ್ ಗೋಡ್ಸೆ ಇದ್ದಂತೆ ಎಂದು ಉದಾಹರಣೆ ನೀಡುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೇಲೆ ಹರಿಹಾಯ್ದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬರಲಿದೆ – ರಾಹುಲ್ ಗಾಂಧಿ

  • ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ನವದೆಹಲಿ: ಬರೋಬ್ಬರಿ 275 ಮಂದಿಯ ಜೀವ ಬಲಿ ಪಡೆದ ಬಾಲಸೋರ್ ತ್ರಿವಳಿ ರೈಲು ದುರಂತ (Odisha Train Tragedy) ಪ್ರಕರಣ ಇಡೀ ದೇಶವನ್ನೆ ಆಘಾತಕ್ಕೀಡು ಮಾಡಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಮಾರ್ಟಂ ನಡೆಯುತ್ತಿದ್ದು, ಘಟನೆಗೆ ಅಸಲಿ ಕಾರಣಗಳೇನು ಎಂಬುದು ಒಂದೊಂದಾಗಿಯೇ ಬಯಲಿಗೆ ಬರುತ್ತಿದೆ.

    ದೇಶ ಕಂಡ 3ನೇ ಅತಿ ದೊಡ್ಡ ರೈಲು ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸಿಗ್ನಲಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಟರ್‌ಲಾಕ್ ಸಿಸ್ಟಮ್ ಕಾರಣದಿಂದ ಈ ಘೋರ ದುರಂತ ಸಂಭವಿಸಿದೆ ಎಂಬ ಮಾಹಿತಿ ರೈಲ್ವೇ ಇಲಾಖೆಯ ಪ್ರಾಥಮಿಕ ವರದಿಯಲ್ಲಿದೆ.

    ಮುಖ್ಯವಾದ ಹಳಿ ಸರಿಯಿದ್ದರೂ ಇದ್ದಕ್ಕಿಂದ್ದಂತೆ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ಗೆ ಕೋರಮಂಡಲ್ ಎಕ್ಸ್‌ಪ್ರೆಸ್ ಬಂದಿದ್ದು ಯಾಕೆ? ಇಂಟರ್‌ಲಾಕ್ ಸಿಸ್ಟಂ ಬದಲಾಗಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಹಲವು ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಹೆಗಲಿಗೆ ವಹಿಸಲಾಗಿದೆ.

    ಆಗಿರುವ ತಪ್ಪನ್ನು ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡಾ ಒಪ್ಪಿಕೊಂಡಿದ್ದಾರೆ. ದುರಂತಕ್ಕೆ ಕಾರಣ ಏನೆಂದು ಗೊತ್ತಾಗಿದೆ. ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಕ್ರಮವಷ್ಟೇ ಬಾಕಿ ಉಳಿದಿದೆ ಎಂದು ರೈಲ್ವೇ ಮಂತ್ರಿ ಹೇಳಿಕೊಂಡಿದ್ದಾರೆ.

    ಯಾಕೆ ಅನುಮಾನ?
    ಪ್ರಧಾನಿ ನರೇಂದ್ರ ಮೋದಿ ಅವರು ಈ ದುರ್ಘಟನೆಗೆ ಕಾರಣರಾದ ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದು ವಿಧ್ವಂಸಕ ಕೃತ್ಯ ಎಂದು ಖಚಿತವಾಗದ ಹೊರತು ಮೋದಿ ಈ ಪದವನ್ನು ಬಳಸುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

    ಈ ಹಿಂದೆ ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಹೆಲಿಕಾಪ್ಟರ್‌ ಪತನಗೊಂಡ ಸಮಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಈ ರೀತಿಯ ಹೇಳಿಕೆ ಬಂದಿರಲಿಲ್ಲ. ಆದರೆ ಇಲ್ಲಿ ಪ್ರಧಾನಿ ಬಾಯಿಯಿಂದಲೇ ಈ ಹೇಳಿಕೆ ಬಂದಿದೆ. ಪ್ರಾಥಮಿಕ ತನಿಖೆ ಮತ್ತು ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎನ್ನಲಾಗುತ್ತಿದೆ.

    ಘೋರ ದುರಂತಕ್ಕೆ ಕಾರಣಗಳೇನು?
    ಭೀಕರ ರೈಲ್ವೆ ಅಪಘಾತಕ್ಕೆ 2 ಮುಖ್ಯ ಕಾರಣಗಳಿವೆ ಎನ್ನಲಾಗಿದೆ. ಅವುಗಳಲ್ಲಿ ಮೊದಲನೆಯದ್ದು ಇಂಟರ್‌ಲಾಕ್ ಸಿಸ್ಟಂ ವೈಫಲ್ಯ. ಯಾವುದೇ ರೈಲು ಯಾವ ನಿಲ್ದಾಣಕ್ಕೆ ಯಾವ ಟ್ರ‍್ಯಾಕ್‌ನ ಮೂಲಕ ಹೋಗಬೇಕು, ನಿರ್ಗಮಿಸಬೇಕು ಎಂಬುದನ್ನು ಇಂಟರ್ ಲಾಕ್‌ನ ಮೂಲಕ ನಿರ್ಧಾರ ಮಾಡಲಾಗುತ್ತದೆ. ಮಾರ್ಗ ಬದಲಾವಣೆಗೂ ಇಂಟರ್ ಲಾಕ್ ಸಿಸ್ಟಮ್ ಅನ್ನೇ ಬಳಸಲಾಗುತ್ತಿದೆ. ಇದರಲ್ಲಿ ದೋಷವಿರುವ ಬಗ್ಗೆ ಕಿರಿಯ ಅಧಿಕಾರಿಗಳು ಫೆಬ್ರವರಿ 9 ರಂದೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರಲಿಲ್ಲ ಎನ್ನಲಾಗುತ್ತಿದೆ.

    ಅಪಘಾತಕ್ಕೆ 2ನೇ ಕಾರಣ ಸಿಗ್ನಲಿಂಗ್ ವ್ಯವಸ್ಥೆಯ ದೋಷ. ಪಾರಾದೀಪ್‌ನಿಂದ ಮುಖ್ಯ ಲೈನ್‌ನಲ್ಲಿ ತೆರಳುತ್ತಿದ್ದ ಗೂಡ್ಸ್ ರೈಲನ್ನು ಕೋರಮಂಡಲ್ ರೈಲಿಗೆ ದಾರಿ ಮಾಡಿಕೊಡಲು ಬಹನಾಗ್ ನಿಲ್ದಾಣದಲ್ಲಿ ಲೂಪ್ ಲೈನ್‌ಗೆ ತರಲಾಗಿತ್ತು. ಲೂಪ್ ಲೈನ್ ಅನ್ನು ರೆಡ್‌ನಲ್ಲಿ ಇರಿಸಿ, ಕೋರಮಂಡಲ್‌ಗೆ ಮುಖ್ಯ ಲೈನ್‌ನಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದನ್ನು ತ್ರೂ ಲೈನ್ ಎನ್ನುತ್ತಾರೆ. ಹೀಗೆ ಸಿಗ್ನಲ್ ನೀಡಿದಾಗ ಹಳಿ ಬಳಿಯ ಪಾಯಿಂಟ್ ಬದಲಾಗಬೇಕು. ಕೋರಮಂಡಲ್ ಮುಖ್ಯ ಲೈನ್‌ನಲ್ಲಿ ತೆರಳುವಂತೆ ತ್ರೂ ಆಗಬೇಕು. ಆದರೆ ತ್ರೂ ಆಗಿಲ್ಲ. ಸಿಗ್ನಲ್ ಮತ್ತು ಪಾಯಿಂಟ್ ನಡುವೆ ಲೋಪ ಉಂಟಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

    ಸಿಗ್ನಲ್ ಸರಿಯಾಗಿದ್ದರೂ ಪಾಯಿಂಟ್ ಬದಲಾಗದ ಕಾರಣ ಗೂಡ್ಸ್ ಇದ್ದ ಲೂಪ್ ಲೈನ್‌ಗೆ ಕೋರಮಂಡಲ್ ಕೂಡ ಎಂಟ್ರಿ ಕೊಟ್ಟಿದೆ. ಇಲ್ಲಿ ಸಿಗ್ನಲ್ ಕೊಟ್ಟರೂ ರೈಲು ಲೂಪ್ ಲೈನ್‌ನಲ್ಲಿ ಹೋಗಿದ್ದಕ್ಕೆ ಕಾರಣವೇನು? ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯವೆ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಸಿಗ್ನಲ್ ನೀಡುವುದು ಹಾಗೂ ಪಾಯಿಂಟ್ ಬದಲಿಸುವ ಜವಾಬ್ದಾರಿ ಸ್ಟೇಷನ್ ಮಾಸ್ಟರ್‌ದೇ ಆಗಿರುತ್ತದೆ.

    ಅಪಘಾತ ಹೇಗಾಯ್ತು?
    ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್ ಹಳಿಗಳು. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಗೂಡ್ಸ್ ರೈಲುಗಳನ್ನು ನಿಲ್ದಾಣದ ಲೂಪ್ ಲೈನಿನಲ್ಲಿ ನಿಲ್ಲಿಸಿರುತ್ತಾರೆ. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಮುಖ್ಯ ಹಳಿಯಲ್ಲಿ ಬರುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂನಿಂದ ಗೂಡ್ಸ್ ರೈಲು ನಿಂತಿದ್ದ ಹಳಿಯನ್ನು ಪ್ರವೇಶಿಸಿ ಗುದ್ದಿದೆ. ಈ ರೈಲು ಡಿಕ್ಕಿ ಹೊಡೆಯುವ ಸಮಯದಲ್ಲೇ ಇನ್ನೊಂದು ಮುಖ್ಯ ಹಳಿಯಲ್ಲಿ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಂದಿದೆ. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ. ಇದನ್ನೂ ಓದಿ: ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್

  • ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್

    ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್


    ನವದೆಹಲಿ: ಒಡಿಶಾದಲ್ಲಿ ನಡೆದ ಭೀಕರ ರೈಲ್ವೆ ಅಪಘಾತದ (Odisha Train Tragedy) ಬಳಿಕ ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. 270ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ರೈಲ್ವೆ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ (Adani Group) ವಹಿಸಿಕೊಳ್ಳುತ್ತದೆ ಎಂದು ಗೌತಮ್ ಅದಾನಿ ಭಾನುವಾರ ಘೋಷಿಸಿದ್ದಾರೆ.

    ಒಡಿಶಾ ರೈಲು ಅಪಘಾತದಿಂದ ನಾವೆಲ್ಲರೂ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇವೆ. ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಅಮಾಯಕ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹ ವಹಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ಒದಗಿಸುವುದು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ಬಿಲಿಯನೇರ್ ಗೌತಮ್ ಅದಾನಿ ತಿಳಿಸಿದ್ದಾರೆ.

    ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಲ್ಲಿಯವರೆಗೆ 275 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 88 ಶವಗಳನ್ನು ಗುರುತಿಸಲಾಗಿದೆ. ಉಳಿದ ಮೃತದೇಹಗಳ ಪೈಕಿ 170 ಶವಗಳನ್ನು ಭುವನೇಶ್ವರದ ಶವಾಗಾರ ಹಾಗೂ ಇತರ ಆಸ್ಪತ್ರೆಗಳಾದ ಏಮ್ಸ್, ಕ್ಯಾಪಿಟಲ್, ಎಸ್‌ಯುಎಂ, ಕೆಐಎಂ ಹಾಗೂ ಎಎಂಆರ್‌ಐ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ವೇಳೆ ಕವಚ್‌ ಅಳವಡಿಸಿದ್ದರೂ ಈ ದುರಂತವನ್ನು ತಪ್ಪಿಸಲು ಆಗುತ್ತಿರಲಿಲ್ಲ- ಅಪಘಾತಕ್ಕೆ ಕಾರಣ ತಿಳಿಸಿದ ರೈಲ್ವೇ

    ಒಟ್ಟಾರೆಯಾಗಿ 1,175 ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಬೆಳಗಿನ ಜಾವದವರೆಗೆ 793 ಗಾಯಾಳುಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

  • ರೈಲು ದುರಂತದ ಬೆನ್ನಲ್ಲೇ ಕೋಲ್ಕತ್ತಾಗೆ ಉಚಿತ ಬಸ್‌ ಸೇವೆ ಘೋಷಿಸಿದ ಒಡಿಶಾ ಸಿಎಂ

    ರೈಲು ದುರಂತದ ಬೆನ್ನಲ್ಲೇ ಕೋಲ್ಕತ್ತಾಗೆ ಉಚಿತ ಬಸ್‌ ಸೇವೆ ಘೋಷಿಸಿದ ಒಡಿಶಾ ಸಿಎಂ

    ಭುವನೇಶ್ವರ: ಒಡಿಶಾ (Odisha Train Tragedy) ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ (Naveen Patnaik), ಕೋಲ್ಕತ್ತಾಗೆ (Kolkata) ಉಚಿತ ಬಸ್‌ ಸೇವೆ ಒದಗಿಸಲಾಗಿದೆ ಎಂದು ಘೋಷಿಸಿದ್ದಾರೆ.

    ಪ್ರಯಾಣಿಕರ ಹೆಚ್ಚಿನ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಪಟ್ನಾಯಕ್, ಇಂದಿನಿಂದ ಪುರಿ, ಭುವನೇಶ್ವರ ಮತ್ತು ಕಟಕ್‌ನಿಂದ ಕೋಲ್ಕತ್ತಾಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

    ಪ್ರತಿದಿನ ಸುಮಾರು 50 ಬಸ್ಸುಗಳು ಕೋಲ್ಕತ್ತಾ ಮತ್ತು ಒಡಿಶಾದ ನಡುವಿನ ಮೂರು ನಗರಗಳಲ್ಲಿ ಸಂಚಾರ ನಡೆಸಲಿವೆ. ಇದಕ್ಕೆ ತಗಲುವ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು. ಬಾಲಸೋರ್ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಯನ್ನು ಮರುಸ್ಥಾಪಿಸುವವರೆಗೆ ಈ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಿಂದಾಗಿ ಈವರೆಗೆ 270 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1,000 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಮುಖ್ಯಮಂತ್ರಿ ಪಟ್ನಾಯಕ್ ಅವರು, ರಾಜ್ಯದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು

  • ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

    ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

    ಚಿಕ್ಕಬಳ್ಳಾಪುರ: ದೇವರ ದಯೆಯಿಂದ ನಾವು ಅಪಘಾತಗೊಂಡ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಲಿಲ್ಲ ಎಂದು ವಾಲಿಬಾಲ್ ಕೋಚ್ (Coach) ಮಮತಾ ಶೆಟ್ಟಿ ಹೇಳಿದ್ದಾರೆ.

    ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ನಡೆದ ಚಾಂಪಿಯನ್‍ಶಿಪ್ ಮುಗಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದೆವು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇಷನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೆವು. ಆದರೆ ಕೊನೆ ಕ್ಷಣದಲ್ಲಿ ಎರಡು ತಂಡ ಒಂದೇ ರೈಲಿನಲ್ಲಿ ಹೋಗೋಣ, ಬೇರೆ ಬೇರೆ ರೈಲು ಬೇಡ ಎಂದು ನಿರ್ಧಾರ ಮಾಡಲಾಯಿತು. ಇದರಿಂದಾಗಿ ಕೋರಮಂಡಲ್ ಟ್ರೈನ್‍ನಲ್ಲಿ ನಾವು ಪ್ರಯಾಣ ಮಾಡಲಿಲ್ಲ. ಅದೃಷ್ಟವಶಾತ್ ನಾವೆಲ್ಲ ಬದುಕಿ ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರೈಲು ಸಿಗದೆ ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ವಿಮಾನದ ಮೂಲಕ ರಾಜ್ಯಕ್ಕೆ ಆಗಮನ

    ಒಡಿಶಾದಲ್ಲಿ ರೈಲುಗಳ ನಡುವಿನ ಅಪಘಾತದ (Odisha Train Tragedy) ಬಳಿಕ ಆ ಮಾರ್ಗದ 58 ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿತ್ತು. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಪಶ್ಚಿಮ ಬಂಗಾಳಕ್ಕೆ‌ (West Bengal) ತೆರಳಿದ್ದ ವಾಲಿಬಾಲ್ ಆಟಗಾರರ (Volleyball Players) ತಂಡ ವಾಪಾಸ್ ಆಗಲು ಪರದಾಡಿತ್ತು. ಬಳಿಕ ರಾಜ್ಯ ಸರ್ಕಾರ ಕ್ರೀಡಾಪಟುಗಳನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡಿತ್ತು. ಭಾನುವಾರ ಮುಂಜಾನೆ ಕ್ರೀಡಾಪಟುಗಳು ಬೆಂಗಳೂರಿಗೆ ತಲುಪಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು

  • ರೈಲು ಸಿಗದೆ ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ವಿಮಾನದ ಮೂಲಕ ರಾಜ್ಯಕ್ಕೆ ಆಗಮನ

    ರೈಲು ಸಿಗದೆ ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ವಿಮಾನದ ಮೂಲಕ ರಾಜ್ಯಕ್ಕೆ ಆಗಮನ

    ಚಿಕ್ಕಬಳ್ಳಾಪುರ: ಒಡಿಶಾ ರೈಲು ದುರಂತ (Odisha Train Tragedy) ಪ್ರಕರಣದ ಪರಿಣಾಮದ ಹಿನ್ನೆಲೆ ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ ರೈಲು ಮಾರ್ಗ ಸಂಚಾರ ರದ್ದಾಗಿದೆ. ಇದರಿಂದಾಗಿ ಪಶ್ಚಿಮ ಬಂಗಾಳದ (West Bengal) ಹೌರಾದಿಂದ ಬೆಂಗಳೂರಿಗೆ (Bengaluru) ಬರಲು ರೈಲು ಸಿಗದೆ ಪರದಾಡಿದ್ದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಚಿದೆ.

    ರೈಲು ಸಂಚಾರ ರದ್ದಾದ ಹಿನ್ನೆಲೆ ಕರ್ನಾಟಕ ಸರ್ಕಾರ ವಿಮಾನದ ಮೂಲಕ ಕ್ರೀಡಾಪಟುಗಳನ್ನು ರಾಜ್ಯಕ್ಕೆ ಕರೆತಂದಿದೆ. ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗಾಗಿ 16 ವರ್ಷದ ಒಳಗಿನ ಬಾಲಕರ ಹಾಗೂ ಬಾಲಕಿಯರ ತಂಡ ಸೇರಿದಂತೆ ಒಟ್ಟು 24 ಆಟಗಾರರು ಮತ್ತು 6 ಮಂದಿ ಕೋಚ್‌ಗಳು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರಲು ರೈಲು ಸಿಗದ ಹಿನ್ನೆಲೆ ವಿಡಿಯೋ ಮೂಲಕ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು

    ಈ ವಿಡಿಯೋ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾದ ಸಚಿವರು ಮತ್ತು ಅಧಿಕಾರಿಗಳು ಕ್ರೀಡಾಪಟುಗಳನ್ನು ಬೆಂಗಳೂರಿಗೆ ಕರೆತರಲು ವಿಮಾನದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಇದೀಗ ಇಂಡಿಗೋ ವಿಮಾನದ ಮೂಲಕ ಕ್ರೀಡಾಪಟುಗಳು (Volleyball Players) ಮತ್ತು ಕೋಚ್‌ಗಳು (Coach) ಸುರಕ್ಷಿತವಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಮಾತನಾಡಿದ ಕೋಚ್‌ಗಳಾದ ಮಮತಾ ಶೆಟ್ಟಿ ಮತ್ತು ತೇಜಸ್ವಿನಿ, ದೇವರ ದಯೆಯಿಂದ ನಾವೂ ಸಹ ಬದುಕಿ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೂ ನಡೆಯಲಿದೆ ಶೈಕ್ಷಣಿಕ ಮೇಳ ವಿದ್ಯಾಪೀಠ- ಮಿಸ್ ಮಾಡದೇ ಬನ್ನಿ

  • ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್‌ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು

    ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್‌ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು

    ಭುವನೇಶ್ವರ: ಒಡಿಶಾ (Odisha Train Tragedy) ರೈಲು ಅಪಘಾತ ಸಂಭವಿಸಿದ ನಂತರ ಈ ದುರಂತ ಕುರಿತು ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ದುರಂತಕ್ಕೂ ಮುಂಚೆ ರೆಕಾರ್ಡ್‌ ಮಾಡಲಾಗಿದ್ದು ಎನ್ನಲಾದ ವೀಡಿಯೋ ವೈರಲ್‌ ಆಗಿದೆ.

    ದುರಂತಕ್ಕೀಡಾದ ರೈಲೊಂದರ ಜನರಲ್‌ ಬೋಗಿಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ರೈಲು ದುರಂತ ಸಂಭವಿಸಿದಾಗ ಅಪಾರ ಪ್ರಮಾಣದಲ್ಲಿ ಸಾವು-ನೋವಾಗಲು ಇದೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ದುರಂತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಗಳು ಫುಲ್ ರಶ್ ಆಗಿದ್ದವು. ಪ್ರಯಾಣದ ವೇಳೆ ಫುಲ್ ರಶ್ ಆದ ವೀಡಿಯೋ ಮಾಡಿಕೊಂಡಿದ್ದ ಕೆಲ ಪ್ರಯಾಣಿಕರು ಅದನ್ನು ತಮ್ಮ ಸ್ನೇಹಿತರು, ಇತರರಿಗೆ ಶೇರ್ ಮಾಡಿದ್ದರು. ಆ ವೀಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

    ಒಡಿಶಾದಲ್ಲಿ 3 ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇದುವರೆಗೆ 288 ಮಂದಿ ಮೃತಪಟ್ಟಿದ್ದಾರೆ. 803 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತಕ್ಕೆ ಜಾಗತಿಕ ನಾಯಕರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ

    ಚೆನ್ನೈ-ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿತ್ತು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ದುರಂತ ಜರುಗಿತ. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ.

  • ಒಡಿಶಾ ರೈಲು ದುರಂತ- ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂತಾಪ

    ಒಡಿಶಾ ರೈಲು ದುರಂತ- ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂತಾಪ

    ಲಂಡನ್: ಒಡಿಶಾ ರೈಲು ಅಪಘಾತದಲ್ಲಿ (Odisha Train Tragedy) ಮೃತಪಟ್ಟ ವ್ಯಕ್ತಿಗಳಿಗೆ ಬ್ರಿಟನ್ ಪ್ರಧಾನಿ ರಿಶಿ ಸುನಕ್ (Rishi Sunak) ಸಂತಾಪ ಸೂಚಿಸಿದ್ದಾರೆ.

    ಈ ದುರ್ಘಟನೆಯಿಂದ ಸಂಕಟ ಅನುಭವಿಸುತ್ತಿರುವ ಕುಟುಂಬಸ್ಥರೊಂದಿಗೆ ನನ್ನ ಹಾರೈಕೆ ಹಾಗೂ ಪ್ರಾರ್ಥನೆ ಜೊತೆಗಿದೆ. ದುರಂತದಿಂದಾಗಿ ಮನಸ್ಸಿಗೆ ಘಾಸಿಯಾಗಿದೆ. ಮೃತಪಟ್ಟವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ಘಟನೆಯಲ್ಲಿ ಬದುಕುಳಿದವರ ರಕ್ಷಣೆಗಾಗಿ ದಣಿವರಿಯದೆ ಶ್ರಮಿಸುತ್ತಿರುವವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ (arendra Modi) ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ

    ಶುಕ್ರವಾರ ರಾತ್ರಿ ಚೆನ್ನೈ-ಕೊರಮಂಡಲ್ ಎಕ್ಸ್‍ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಪರಸ್ಪರ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತ್ತು. ಎಕ್ಸ್‍ಪ್ರೆಸ್ ರೈಲು ಡಿಕ್ಕಿಯಾದ (Train Accident) ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ್ದವು. ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

  • ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ: ಸಿಎಂ ಸಿದ್ದರಾಮಯ್ಯ

    ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ನಾವು ಒಡಿಶಾ ಸರ್ಕಾರ (Odisha Government) ದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕರ್ನಾಟಕದ ಬಗ್ಗೆ ಮಾಹಿತಿ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಸಚಿವ ಸಂತೋಷ್ ಲಾಡ್ (Santhosh Lad) ಅವರನ್ನ ಕಳಿಸಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾವತ್ತೂ ಆಗಿರಲಿಲ್ಲ. ದೊಡ್ಡ ಪ್ರಮಾಣದ ಅಪಘಾತ. ಕರ್ನಾಟಕದವರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಸಂತೋಷ್ ಲಾಡ್ 3 ಗಂಟೆ ಫ್ಲೈಟ್‍ಗೆ ಹೋಗಿದ್ದಾರೆ ಎಂದರು.

    ಕೇಂದ್ರ ರೈಲ್ವೆ ಇಲಾಖೆ ಮತ್ತು ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಒಡಿಶಾ ರೈಲು ದುರಂತ ಸಂಬಂಧ ಯಶವಂತಪುರ ರೈಲ್ವೆ ನಿಲ್ದಾಣ (Yeshwantpura Railway Station) ದಲ್ಲಿಯೂ ಹೆಲ್ಪ್ ಡೆಸ್ಕ್ ಕಾರ್ಯಾರಂಭ ಮಾಡಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಕಾರ್ಯ ನಡೆಯುತ್ತಿದೆ. ಕರ್ನಾಟಕದವರಿಗೆ ಯಾವುದೇ ಹಾನಿ ಆಗಿರೋ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಂದ ಜನ ಪ್ರಯಾಣ ಮಾಡಿರೋ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.