Tag: Odisha Train Crash

  • ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್

    ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್

    ಭುವನೇಶ್ವರ್: ಒಡಿಶಾ (Odisha) ರೈಲು ದುರಂತ (Train Crash) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೇ (Railway) ಸಿಬ್ಬಂದಿಗಳನ್ನು ಸಿಬಿಐ (CBI) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತರನ್ನು ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಟೆಕ್ನಿಶಿಯಲ್ ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 304 (ಅಪರಾಧಿಕ ಮಾನವ ಹತ್ಯೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    ಒಂದು ತಿಂಗಳ ತನಿಖೆ ನಡೆಸಿರುವ ಸಿಬಿಐ ಬಂಧಿತರ ಮೇಲೆ ಕಠಿಣ ಸೆಕ್ಷನ್‍ಗಳನ್ನು ಹಾಕಿ ಬಂಧಿಸಿದೆ. ಒಡಿಶಾ ಪೊಲೀಸರು ಈ ಮೊದಲು ದಾಖಲಿಸಿದ್ದ ಎಫ್‍ಐಆರ್ ಇದರಲ್ಲಿ ಅನ್ವಯಿಸಿಲ್ಲ. ಮೂವರು ಆರೋಪಿಗಳು ಈ ಅಪಘಾತಕ್ಕೆ ಹೇಗೆ ಪಾತ್ರರು ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಸಿಆರ್‍ಎಸ್ ವರದಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಅಪಘಾತ ಸಂಭವಿಸಿದ್ದನ್ನು ತಳ್ಳಿ ಹಾಕಲಾಗಿತ್ತು. ಅಲ್ಲದೇ ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ಘಟನೆಯ ಹಿಂದೆ ಏನಾದರೂ ಸಂಚು ಅಥವಾ ಪಿತೂರಿ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಒಡಿಶಾದ ಬಾಲಸೋರ್‍ನ ಬಹನಾಗ್ ರೈಲ್ವೇ ನಿಲ್ದಾಣದಲ್ಲಿ ಜೂನ್ 2 ರಂದು ಸಂಜೆ 6:56 ರ ಸುಮಾರಿಗೆ ಕೋರಮಂಡಲ್ ಎಕ್ಸ್‍ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಬೋಗಿಗಳು ಪಕ್ಕದ ಟ್ರ್ಯಾಕ್‍ನಲ್ಲಿ ಉರುಳಿ ಬಿದ್ದಿದ್ದವು. ಇದೇ ಸಮಯದಲ್ಲಿ ಆ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಹೌರಾದಿಂದ ಹೊರಟ ಯಶವಂತಪುರ ಎಕ್ಸ್‍ಪ್ರೆಸ್ ಬೋಗಿಗಳಿಗೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದರು. ಈ ಅಪಘಾತದ ನಂತರ ಕೆಲವು ಅಧಿಕಾರಿಗಳನ್ನು ಅಲ್ಲಿಂದ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

    ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

    ನವದೆಹಲಿ: ಯಾವುದೇ ದುರಂತ ನಡೆದಾಗ ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅಂತಹದರಲ್ಲಿ ಒಡಿಶಾ ದುರಂತದಲ್ಲಿ (Odisha Train Crash) ಮೃತಪಟ್ಟ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ರೈಲ್ವೇ ಭಾರೀ ಸಾಹಸ ಮಾಡಿದೆ. ಕೇಂದ್ರದ ವಿವಿಧ ಸಂಸ್ಥೆಗಳ ನೆರವಿನಿಂದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial intelligence) ತಂತ್ರಜ್ಞಾನದ ಸಹಾಯ ಪಡೆದು ರೈಲ್ವೇ ಸಚಿವಾಲಯ ಮೃತರ ದೇಹಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

    ಒಡಿಶಾ ರೈಲು ದುರಂತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದರು. ಈ ಪೈಕಿ ಕೆಲವರ ದೇಹ ಗುರುತು ಸಿಗದಷ್ಟು ಛಿದ್ರವಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೇ ಟೆಲಿಕಾಂ ಸಚಿವಾಲಯ, ಸೈಬರ್‌ ಸೆಲ್‌, ಸರ್ಕಾರಿ ಅಧಿಕಾರಿಗಳು, ಆಧಾರ್‌ ಅಧಿಕಾರಿಗಳ ಜೊತೆ ಚರ್ಚಿಸಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೆರವಿನ ಮೊರೆ ಹೋಯಿತು.  ಇದನ್ನೂ ಓದಿ: 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಮೊದಲು ಆಧಾರ್‌ ತಜ್ಞರು (Aadhar Experts) ಮೃತ ವ್ಯಕ್ತಿಗಳ ಎಡಗೈಯಿಂದ ಬೆರಳಚ್ಚನ್ನು ಪಡೆದರು. ಫಿಂಗರ್‌ಪ್ರಿಂಟ್‌ನಿಂದಾಗಿ 65 ಮಂದಿಯ ದೇಹದ ಗುರುತು ಪತ್ತೆಯಾಯಿತು.

    ಮೃತದೇಹಗಳ ಪೈಕಿ ಕೆಲವರ ಕೈಗಳ ಚರ್ಮವೇ ಕಿತ್ತು ಹೋಗಿತ್ತು. ಹೀಗಾಗಿ ಫಿಂಗರ್‌ ಪ್ರಿಂಟ್‌ನಿಂದ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸಂಚಾರ್‌ ಸಾಥಿ ತಂತ್ರಜ್ಞಾನ ಬಳಸಿ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.

    ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಕೆಲ ದಿನಗಳ ಹಿಂದೆ ಈ ಸಂಚಾರ್‌ ಸಾಥಿ (Sanchar Saathi) ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದ್ದರು. ಫೋನ್‌ ನಂಬರ್‌ (Phone Number) ಮೂಲಕ ಪ್ರಯಾಣಿಕರ ಮಾಹಿತಿಯನ್ನು ಸಂಚಾರ್‌ ಸಾಥಿ ಟೂಲ್‌ ಪತ್ತೆ ಹಚ್ಚುತ್ತದೆ.

    ಈ ಟೂಲ್‌ ಸಹಾಯದಿಂದ ಸಂತ್ರಸ್ತರ ಮುಖವನ್ನು ಸ್ಕ್ಯಾನ್‌ ಮಾಡಲಾಯಿತು. ಬಂದ ಫೋಟೋವನ್ನು  ಆಧಾರ್‌ ಕಾರ್ಡ್‌ ಭಾವಚಿತ್ರ ತಾಳೆ ಹಾಕಿ ಹೆಚ್ಚು ಸಾಮ್ಯತೆ ಕಂಡು ಬಂದ ಬಳಿಕ ಆಧಾರ್‌ ಲಿಂಕ್‌ ಮೊಬೈಲ್‌ ನಂಬರ್‌ ಪಡೆದು ವಿವರವನ್ನು ಪತ್ತೆ ಹಚ್ಚಲಾಯಿತು.

    ಹೀಗಿದ್ದರೂ ಇನ್ನೂ ಕೆಲವು ಮೃತದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಅಪಘಾತ ನಡೆಯುವ ಕೆಲ ಕ್ಷಣಗಳ ಮೊದಲು ಸಕ್ರಿಯವಾಗಿ ನಂತರ ನಿಷ್ಕ್ರಿಯವಾದ ಫೋನ್‌ ನಂಬರ್‌ಗಳನ್ನು ಪತ್ತೆ ಹಚ್ಚಿ ಮೃತರ ಗುರುತುಗಳನ್ನು ಪತ್ತೆ ಮಾಡಲಾಯಿತು.

  • ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ (Odisha Train Crash) ಮೃತಪಟ್ಟವರ ದೇಹಗಳನ್ನು ಇರಿಸಲಾಗಿದ್ದ ಬಹನಾಗ್‍ನ (Bahanaga) ಸರ್ಕಾರಿ ಶಾಲೆಯ (School) ಕಟ್ಟಡವನ್ನು ಶುಕ್ರವಾರ ಕೆಡವಲಾಗಿದೆ.

    ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಆವರಣಕ್ಕೆ ಬರಲು ಹಿಂದೇಟು ಹಾಕಿದ್ದರು. ಇದರಿಂದಾಗಿ ಶಾಲಾ ಆಡಳಿತ ಸಮಿತಿ ಹಳೆಯ ಶಾಲಾ ಕಟ್ಟಡವನ್ನು ನೆಲಸಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಶವಗಳನ್ನು ಇರಿಸಿದ್ದರಿಂದ ಹಾಗೂ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದರು. ಅಲ್ಲದೇ ಶಾಲಾ ಕಟ್ಟಡ ಹಳೆಯದಾಗಿದೆ ಎಂದು ಸಮಿತಿ ಹೇಳಿಕೊಂಡಿದೆ. ಇದನ್ನೂ ಓದಿ: ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

    ರೈಲು ಅಪಘಾತದ ನಂತರ ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳು ಮತ್ತು ಎನ್‍ಸಿಸಿ ಕೆಡೆಟ್‍ಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ಕಿರಿಯ ವಿದ್ಯಾರ್ಥಿಗಳು ಇದರಿಂದ ಆಘಾತಕ್ಕೊಳಗಾಗಿದ್ದಾರೆ. ಇದನ್ನೂ ಹೋಗಲಾಡಿಸಲು ಶಾಲಾ ಆವರಣದಲ್ಲಿ ಧಾಮಿಕ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಪ್ರಮಿಳಾ ಸ್ವೈನ್ ತಿಳಿಸಿದ್ದಾರೆ.

    ಜೂ. 2ರಂದು ನಡೆದ ಬಾಲಾಸೂರ್‌ನ ರೈಲು ಅಪಘಾತದಲ್ಲಿ 275 ಜನ ಸಾವಿಗೀಡಾಗಿದ್ದರು. ನಂತರ, 65 ವರ್ಷ ಹಳೆಯ ಶಾಲಾ ಕಟ್ಟಡವನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

  • ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    – ರೈಲು ದುರಂತಕ್ಕೆ ಸಿಲುಕಿದ್ದ ಮಗನಿಗಾಗಿ 230 ಕಿಮೀ ದೂರದಿಂದ ಬಂದ ಅಪ್ಪನ ನಂಬಿಕೆ ಹುಸಿಯಾಗಲಿಲ್ಲ

    ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ (Odisha Train Accident) ಮೃತಪಟ್ಟಿದ್ದಾನೆಂದು ನೂರಾರು ಶವಗಳ ರಾಶಿಯಲ್ಲಿ ಇಟ್ಟಿದ್ದ ತನ್ನ ಮಗನನ್ನು ಜೀವಂತವಾಗಿ ಗುರುತಿಸಿ ತಂದೆ ಹೊರ ತೆಗೆಸಿರುವ ಅಚ್ಚರಿಯ ಘಟನೆ ನಡೆದಿದೆ.

    ಹೆಲರಾಮ್‌ ಮಲಿಕ್‌ ಅವರು ತನ್ನ ಪುತ್ರ ಬಿಸ್ವಜಿತ್‌ ಬದುಕಿದ್ದಾನೆ ಎಂಬುದನ್ನು ಗುರುತಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮಗನನ್ನು ವಾಪಸ್‌ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ರೈಲು ದುರಂತದಲ್ಲಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಮಾತನ್ನು ಒಪ್ಪಲು ನಿರಾಕರಿಸಿದ ತಂದೆ ತನ್ನ ಮಗನಿಗಾಗಿ ಕೋಲ್ಕತ್ತಾದಿಂದ ಬಾಲಾಸೋರ್‌ಗೆ 230 ಕಿಮೀ ಪ್ರಯಾಣ ಮಾಡಿದ್ದರು.

    ಶವಗಾರದಲ್ಲಿ ಶವಗಳ ಮಧ್ಯೆ ಇರಿಸಿದ್ದ ಮಗನನ್ನು ಗುರುತಿಸಿ ಆತ ಬದುಕಿರುವುದನ್ನು ಖಚಿತ ಪಡಿಸಿಕೊಂಡರು. ನಂತರ ಒಡಿಶಾದಿಂದ ಮನೆಗೆ ಕರೆತಂದ ನಂತರ, ಮಗನನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಗಂಭೀರ ಗಾಯಗಳ ಹೊರತಾಗಿಯೂ, ಬಿಸ್ವಜಿತ್‌ ಆರೋಗ್ಯ ಸ್ಥಿರವಾಗಿದೆ. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!

    ಒಡಿಶಾದ ಬಾಲಾಸೋರ್‌ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕುಗಳಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

  • ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ

    ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ

    ನವದೆಹಲಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

    ರೈಲು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಇದೊಂದು ನೋವಿನ ಘಟನೆ. ಗಾಯಾಳುಗಳ ಚಿಕಿತ್ಸೆಗೆ ಸರ್ಕಾರ ನೆರವು ನೀಡಲಿದೆ. ಇದೊಂದು ಗಂಭೀರ ಘಟನೆಯಾಗಿದ್ದು, ಪ್ರತಿಯೊಂದು ಕೋನದಿಂದ ತನಿಖೆಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ನಾನು ಗಾಯಗೊಂಡ ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅವರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕನಿಷ್ಠ 288 ಜನರು ಸಾವನ್ನಪ್ಪಿದ ಮತ್ತು 800 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಸ್ಥಳದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮೋದಿ ಅವರು ಫಕೀರ್ ಮೋಹನ್ ಆಸ್ಪತ್ರೆ ಬಾಲಾಸೋರ್‌ಗೆ ಭೇಟಿ ನೀಡಿದ್ದರು.

    ಶುಕ್ರವಾರ ಸಂಜೆ ನಡೆದ ಒಡಿಶಾ ರೈಲು ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಅಪಘಾತದ ಕುರಿತು ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಅಪಘಾತದ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರು. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಮೋದಿ ಹೇಳಿದ್ದರು.

    ಸಂತ್ರಸ್ತ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ, ಅವರು ಅಗತ್ಯವಿರುವ ಸಹಾಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

  • ಒಡಿಶಾ ರೈಲು ದುರಂತ: ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯಗೆ ವಾಲಿಬಾಲ್ ಕ್ರೀಡಾಪಟುಗಳ ಧನ್ಯವಾದ

    ಒಡಿಶಾ ರೈಲು ದುರಂತ: ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯಗೆ ವಾಲಿಬಾಲ್ ಕ್ರೀಡಾಪಟುಗಳ ಧನ್ಯವಾದ

    ಬೆಂಗಳೂರು: ಒಡಿಶಾ ರೈಲು ಅಪಘಾತದಿಂದ (Odisha Train Crash) ಕೋಲ್ಕತ್ತಾದಲ್ಲಿ (Kolkata) ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ಆಟಗಾರರನ್ನು (Volleyball Players) ಕರೆತರಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕ್ರೀಡಾಪಟುಗಳು ಧನ್ಯವಾದ ತಿಳಿಸಿದ್ದಾರೆ.

    ಕೋಲ್ಕತಾದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡ ತೆರಳಿತ್ತು. ಈ ವೇಳೆ ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಪರಿಣಾಮವಾಗಿ ಮರಳಿ ರಾಜ್ಯಕ್ಕೆ ವಾಪಸ್ ಬರಲು ಪರಿತಪಿಸುತ್ತಿದ್ದ ತಂಡಕ್ಕೆ ರಾಜ್ಯ ಸರ್ಕಾರ ನಿಯೋಜಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ನೀಡಿದ್ದಾರೆ. ಈ ಮೂಲಕ ತಂಡ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ಸಾಗಲು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ರೈಲು ಸಂಚಾರ ಸ್ಥಗಿತ- ಹೌರಾದಲ್ಲಿ ಸಿಲುಕಿದ ರಾಜ್ಯದ ವಾಲಿಬಾಲ್ ಆಟಗಾರರಿಗೆ ವಿಶೇಷ ವಿಮಾನ

    ತಂಡದ ತರಬೇತುದಾರರು ಸೇರಿದಂತೆ 32 ಸದಸ್ಯರನ್ನೊಳಗೊಂಡ ತಂಡ ತಮ್ಮ ಸಂಕಷ್ಟವನ್ನು ವೀಡಿಯೋ ಮಾಡಿ ಹೇಳಿಕೊಂಡಿದ್ದರು. ಈ ವೀಡಿಯೋ ತಲುಪಿದ ತಕ್ಷಣ ಕಾರ್ಯ ಪ್ರವೃತ್ತರಾದ ಸಚಿವರು ಮತ್ತು ಅಧಿಕಾರಿಗಳ ತಂಡ ಎಲ್ಲರಿಗೂ ಬೆಂಗಳೂರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದೆ. ಅಲ್ಲದೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ಥೆ ಒದಗಿಸಿದ್ದಾರೆ.

    ಶುಕ್ರವಾರ ರಾತ್ರಿ ಬಾಲಸೋರ್‍ನಲ್ಲಿ ಮೂರು ರೈಲುಗಳು ಕೋಲ್ಕತ್ತಾ-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು-ಹೌರಾ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 288 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರೈಲು ಅಪಘಾತದ ಬಳಿಕ ಆ ಮಾರ್ಗದ 58ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿದೆ. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

  • ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

    ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

    ಇಸ್ಲಾಮಾಬಾದ್‌: ಭಾರತದ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ (Odisha Train Crash) ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು 900ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ 650ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

    ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದ ತ್ರಿಪಲ್‌ ರೈಲು ದುರಂತಕ್ಕೆ ಪಾಕಿಸ್ತಾನ (Pakistan) ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ (Bilawal Bhutto Zardari) ಹಾಗೂ ಅಫ್ಘಾನಿಸ್ತಾನದ ತಾಲಿಬಾನ್‌ನ (Taliban) ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಭಾರತದ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಹೆಚ್ಚಿನ ಸಾವು ನೋವಾಗಿರುವುದು ತಿಳಿದು ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ. ರೈಲು ದುರಂತದಲ್ಲಿ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿವೆ. ಅಷ್ಟೇ ಅಲ್ಲದೇ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ, ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಸೇರಿದಂತೆ ದೇಶ-ವಿದೇಶ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ