Tag: Odisha Train Accident
-

ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಸರಣಿ ರೈಲು ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಎಐಸಿಸಿ (AICC) ಅಧ್ಯಕ್ಷ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದಿದ್ದು, ಇಲಾಖೆ ಮೇಲಿನ ನಿರ್ಲಕ್ಷ್ಯಗಳನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಾಲ್ಕು ಪುಟಗಳ ಪತ್ರ (Letter) ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ, ತಾಂತ್ರಿಕ ಸಮಸ್ಯೆ ಮತ್ತು ಹಿಂದಿನ ತನಿಖೆಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೇ ಇಲಾಖೆಯಲ್ಲಿ (Railway Department) ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಅಪಘಾತದ ನಡೆದ ವಿಭಾಗದಲ್ಲೂ ಸುಮಾರು 8,278 ಹುದ್ದೆಗಳು ಖಾಲಿ ಇವೆ. 90ರ ದಶಕದಲ್ಲಿ 18 ಲಕ್ಷಕ್ಕೂ ಹೆಚ್ಚು ರೈಲ್ವೇ ಉದ್ಯೋಗಿಗಳಿದ್ದು, ಈಗ ಅದನ್ನು ಸುಮಾರು 12 ಲಕ್ಷಕ್ಕೆ ಇಳಿಸಲಾಗಿದೆ. ಅದರಲ್ಲೂ 3.18 ಲಕ್ಷ ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ
ಲೊಕೊ ಪೈಲಟ್‌ಗಳು ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಾರೆ ಎಂದು ಮಂಡಳಿ ಹೇಳಿದೆ. ಲೊಕೊ ಪೈಲಟ್‌ಗಳ ನೇಮಕಾತಿ ಯಾಕೆ ನಡೆದಿಲ್ಲ? ಅವರ ಮೇಲೆ ಹೊರೆ ಹಾಕುವುದು ಜನರ ಸುರಕ್ಷತೆ ಸವಾಲು ಸ್ವೀಕರಿಸಿದಂತೆ. ಮೈಸೂರಿನಲ್ಲಿ ಎರಡು ರೈಲುಗಳ ಡಿಕ್ಕಿ ಸಾಧ್ಯತೆ ಉಲ್ಲೇಖಿಸಿ ಸಿಗ್ನಲ್ ಸಮಸ್ಯೆ ಕ್ರಮಕ್ಕೆ ಒತ್ತಾಯಿಸಿತ್ತು. ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಮಂಡಳಿಯ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ಟೀಕಿಸಿದೆ. ಇದರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ರೈಲ್ವೆ ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಸಿಎಜಿ ಕೂಡ ವರದಿ ನೀಡಿದೆ. 68% ಪ್ರಕರಣಗಳಲ್ಲಿ ತಡವಾಗಿ ತನಿಖಾ ವರದಿ ಸಲ್ಲಿಸಿದ್ದು, ಸೂಕ್ತ ಕ್ರಮವೂ ತೆಗೆದುಕೊಂಡಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ
2011ರ ಹಿಂದಿನ ಸರ್ಕಾರದ ಅವಧಿಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಯಶಸ್ವಿಯಾಗಿ ರಕ್ಷಾ ಕವಚ್ ಪರೀಕ್ಷಿಸಿತು. ಇದು ರೈಲುಗಳ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿತ್ತು. ನಿಮ್ಮ ಸರ್ಕಾರ ಕವಚ್ ಮರು ನಾಮಕರಣ ಮಾಡಿತು. ಇದಾದ ಮೇಲೂ ಈವರೆಗೂ ಕೇವಲ 4% ಅನುಷ್ಠಾನವಾಗಿದೆ. 100% ತಂತ್ರಜ್ಞಾನ ಅಳವಡಿಕೆಗೆ ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು
ಇನ್ನೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಜವಾಬ್ದಾರಿ ಹೊರದೆ ಸಿಬಿಐ (CBI) ತನಿಖೆಗೆ ನೀಡಿದ್ದಾರೆ. ಸಿಬಿಐ ಅಪರಾಧಗಳ ತನಿಖೆಗಿದೆ. ಸಿಬಿಐ ಅಥವಾ ಯಾವುದೇ ಇತರ ಕಾನೂನು ಜಾರಿ ಸಂಸ್ಥೆಯು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಅವರಿಗೆ ರೈಲ್ವೇ ಸಿಗ್ನಲ್ ಬಗ್ಗೆ ಜ್ಞಾನವೂ ಇರುವುದಿಲ್ಲ. ಅವರಿಂದ ತನಿಖೆ ಹೇಗೆ ನಿರೀಕ್ಷಿಸಬಹುದು? 2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿ 150 ಮಂದಿ ಪ್ರಾಣ ಕಳೆದುಕೊಂಡರು. ಚುನಾವಣೆ ವೇಳೆ ಪಿತೂರಿ ಎಂದು ಆರೋಪಿಸಿ ಎನ್‌ಐಎ (NIA) ತನಿಖೆಗೆ ನೀಡಿದ್ದಿರಿ. 2018ರಲ್ಲಿ ಎನ್‌ಐಎ ತನಿಖೆಯನ್ನು ಮುಕ್ತಾಯಗೊಳಿಸಿತು. ಆದರೆ ಆರೋಪ ಪಟ್ಟಿ ಸಲ್ಲಿಸಲು ನಿರಾಕರಿಸಿತು. 150 ಮಂದಿಯ ಸಾವಿಗೆ ಹೊಣೆ ಯಾರು ಎಂದು ಕೇಳಿದವರು ಇನ್ನಾದರೂ ಜನರ ಸುರಕ್ಷತೆ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ
-

ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ – ಪೊಲೀಸರಿಂದ ಖಡಕ್ ಎಚ್ಚರಿಕೆ
ಭುವನೇಶ್ವರ: ಒಡಿಶಾ ರೈಲು ದುರಂತಕ್ಕೆ (Odisha Train Accident) ಕೋಮು ಬಣ್ಣ (Communal Colour) ನೀಡುವವರ ವಿರುದ್ಧ ಒಡಿಶಾ ಪೊಲೀಸರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.
It has come to notice that some social media handles are mischievously giving communal colour to the tragic train accident at Balasore. This is highly unfortunate.
Investigation by the GRP, Odisha into the cause and all other aspects of the accident is going on.
— Odisha Police (@odisha_police) June 4, 2023
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಬಾಲಸೋರ್ ಅಪಘಾತದ ಕುರಿತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುತ್ತಿದ್ದಾರೆ. ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು
ಪ್ರಾಥಮಿಕ ತನಿಖೆಯಲ್ಲಿ ಅಪಘಾತದ ಟ್ರ್ಯಾಕ್ ಮ್ಯಾನೇಜ್‍ಮೆಂಟ್ ಸಿಸ್ಟಮ್‍ನಲ್ಲಿನ ವೈಫಲ್ಯ ಇರುವುದು ಗೊತ್ತಾಗಿದೆ. ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್ (Railway Interlock System) ಸಮಸ್ಯೆ ಅವಘಡಕ್ಕೆ ಕಾರಣವಾಗಿರಬಹುದು. ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟವಾದ ಕಾರಣ ತಿಳಿದು ಬರಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.
ಈ ಹಿಂದೆ ಇಂಟರ್‌ಲಾಕಿಂಗ್ ಸಮಸ್ಯೆಯ ವರದಿ ನೀಡಿಯೂ ಸಹ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ. ರೈಲ್ವೇ ಹಳಿಗಳ ತಪಾಸಣೆಯಲ್ಲಿನ ಕೊರತೆ, ಆದ್ಯತೆಯ ಕಾರ್ಯಗಳಿಗೆ ಮೀಸಲಾದ ರೈಲ್ವೆ ನಿಧಿಯನ್ನು ಬಳಸಿಲ್ಲ. ಈ ಕಾರಣಗಳು ಅವಘಡಕ್ಕೆ ಕಾರಣವಾಗಿರುವ ಸಾಧ್ಯತೆಗಳಿದೆ ಎಂಬ ಆರೋಪಗಳು ಕೇಳಿಬಂದಿವೆ. ಶುಕ್ರವಾರ ಸಂಭವಿಸಿದ್ದ ದುರಂತದಲ್ಲಿ 275 ಜನ ಸಾವಿಗೀಡಾಗಿದ್ದರು. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
-

ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
– ಏನಿದು ಇಂಟರ್‌ಲಾಕ್ ಸಿಸ್ಟಮ್?
ನವದೆಹಲಿ: ಒಡಿಶಾ ರೈಲು ದುರಂತದ (Odisha Train Accident) ಪ್ರಾಥಮಿಕ ತನಿಖೆಯನ್ನು ಅಧಿಕಾರಿಗಳು ಪೂರೈಸಿದ್ದು, ವರದಿ ನೀಡಿದ್ದಾರೆ. ಇಂಟರ್‌ಲಾಕ್ ಸಿಸ್ಟಮ್ (Railway Interlock System) ಸಮಸ್ಯೆಯಿಂದಾಗಿ ಒಡಿಶಾ ರೈಲು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
ಈ ಬಗ್ಗೆ ಕಿರಿಯ ಅಧಿಕಾರಿಗಳು ಫೆಬ್ರವರಿ 9 ರಂದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರಲಿಲ್ಲ. ಇದರಿಂದಾಗಿ ತೊಂದರೆ ಸಂಭವಿಸಿರುವ ಸಾಧ್ಯತೆಗಳ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು
ಅಪಘಾತ ಸ್ಥಳದಿಂದ ಎಲ್ಲಾ ಮೃತದೇಹಗಳನ್ನು ತೆಗೆದುಹಾಕಲಾಗಿದೆ. ಬುಧವಾರ ಬೆಳಿಗ್ಗೆಯಿಂದ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಇದು ಒಂದಾಗಿದೆ. ಅಪಘಾತದಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಬಾಲಸೋರ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಏನಿದು ಇಂಟರ್‌ಲಾಕ್ ಸಿಸ್ಟಮ್?
ರೈಲು ಯಾವ ನಿಲ್ದಾಣಕ್ಕೆ ಯಾವ ಟ್ರ್ಯಾಕ್ ಮೂಲಕ ಹೋಗಬೇಕೆಂದು ಇಂಟರ್‌ಲಾಕ್ ಸಿಸ್ಟಮ್ ಮೂಲಕ ನಿರ್ಧಾರ ಮಾಡಲಾಗುತ್ತದೆ. ಮಾರ್ಗ ಬದಲಾವಣೆಯನ್ನು ಸಹ ಇಂಟರ್‌ಲಾಕ್ ಸಿಸ್ಟಮ್ ಮೂಲಕವೇ ಮಾಡಲಾಗುತ್ತದೆ. ಹಳಿಯಿಂದ ಹಳಿಗೆ ರೈಲು ಸಂಚಾರ ಮಾರ್ಗವನ್ನು ಬದಲಾಯಿಸಲು ಇಂಟರ್‌ಲಾಕ್ ಸಿಸ್ಟಮ್ ಕೆಲಸ ನಿರ್ವಹಿಸುತ್ತದೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ -

ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು
ಭುವನೇಶ್ವರ: ನಾನು ರೈಲಿನ ಕಿಟಕಿಯ ಬದಿಯಲ್ಲಿ ಕುಳಿತಿದ್ದೆ. ದೊಡ್ಡದಾಗಿ ಶಬ್ದ ಕೇಳಿಸಿ ರೈಲು ಕಂಪಿಸಿತು. ನಾನು ಕೂಡಲೇ ಕಿಟಕಿಯ ಸರಳುಗಳನ್ನು ಹಿಡಿದುಕೊಂಡೆ. ನಾನಿದ್ದ ಬೋಗಿ ಉರುಳಿದರೂ ಸರಳಗಳನ್ನು ಬಿಟ್ಟಿರಲಿಲ್ಲ ಇದರಿಂದಾಗಿ ನಾನು ಬದುಕಿದೆ ಎಂದು ಒಡಿಶಾದಲ್ಲಿ ನಡೆದ ರೈಲು ಅಪಘಾತದಿಂದ ಬಚಾವಾದ ಅಸ್ಸಾಂ ಮೂಲದ ದೀಪಕ್ ದಾಸ್ ಹೇಳಿದ್ದಾರೆ.
ಬಿಹಾರ ಮೂಲದ ಮತ್ತೊಬ್ಬ ವ್ಯಕ್ತಿಯೊಬ್ಬರು ಮಾತನಾಡಿ, ನಮ್ಮ ರೈಲು ಬೇರೆ ರೈಲಿಗೆ ಡಿಕ್ಕಿ ಹೊಡೆದಾಗ ನನಗೆ ದೊಡ್ಡ ಶಬ್ದ ಮಾತ್ರ ಕೇಳಿಸಿತು. ಏನಾಯಿತು ಎಂದು ನನಗೆ ನಿಖರವಾಗಿ ನೆನಪಿಲ್ಲ. ನನ್ನ ಕುಟುಂಬಕ್ಕೆ ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ತಿಳಿಸಲಾಗಿದೆ. ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ಬರುತ್ತಿದ್ದಾರೆ ಎಂದಿದ್ದಾರೆ. ಇಬ್ಬರು ಸಹ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಭುವನೇಶ್ವರದಲ್ಲಿ ಅಧಿಕಾರಿಗಳೊಂದಿಗೆ ಸಂತೋಷ್ ಲಾಡ್ ಸಭೆ
ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಇದು ಒಂದಾಗಿದೆ. ಅಪಘಾತದಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಬಾಲಸೋರ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಮೂಲ ಕಾರಣ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಲ್ಲಾ ಮೃತದೇಹಗಳನ್ನು ತೆಗೆದುಹಾಕಲಾಗಿದೆ. ಬುಧವಾರ ಬೆಳಿಗ್ಗೆಯಿಂದ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅಲ್ಲದೆ ಉನ್ನತ ಮಟ್ಟದ ತನಿಖೆಗೆ ರೈಲ್ವೆ ಸಚಿವಾಲಯ ಆದೇಶಿಸಿದೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವಾಲಯ ಘೋಷಿಸಿದೆ. ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‍ಆರ್‍ಎಫ್) ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಪುತ್ರನ ಡ್ರಗ್ಸ್ ಕೇಸಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ
-

ಒಡಿಶಾ ರೈಲು ದುರಂತ – ಭುವನೇಶ್ವರದಲ್ಲಿ ಅಧಿಕಾರಿಗಳೊಂದಿಗೆ ಸಂತೋಷ್ ಲಾಡ್ ಸಭೆ
ಭುವನೇಶ್ವರ: ಒಡಿಶಾದ ಬಹನಾಗ್‍ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ (Odisha Train Accident) ಸಂಬಂಧಿಸಿದಂತೆ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರು ಭುವನೇಶ್ವರದ (Bhubaneswar) ರಾಜೀವ್ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಆಯುಕ್ತರು ಹಾಗೂ ಎನ್‍ಡಿಆರ್‍ಎಫ್ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು. ಅಲ್ಲದೆ ದುರಂತದಲ್ಲಿ ಕರ್ನಾಟಕದ ಪ್ರಯಾಣಿಕರು ಸಿಲುಕಿ ತೊಂದರೆಗೊಳಗಾಗಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ
ಸಂತೋಷ್ ಲಾಡ್ ಅವರು ಈಗಾಗಲೇ ದುರಂತ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಕರ್ನಾಟಕದ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರು. ಸಚಿವರೊಂದಿಗೆ ರಾಜ್ಯದ ಅಧಿಕಾರಿಗಳು ಸಹ ತೆರಳಿದ್ದಾರೆ. ಅವರು ಆಸ್ಪತ್ರೆ, ಶವಾಗಾರಗಳಿಗೆ ಭೇಟಿ ನೀಡಿ ರಾಜ್ಯದ ಪ್ರಯಾಣಿಕರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅಪಘಾತವಾದ ರೈಲುಗಳಲ್ಲಿದ್ದ ಕರ್ನಾಟಕದ ಪ್ರಯಾಣಿಕರ ರಕ್ಷಣೆಗೆ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ
-

300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಿಗರು ಇಲ್ಲ: ಸಂತೋಷ್ ಲಾಡ್
ಬೆಂಗಳೂರು: ಒಡಿಶಾ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ 300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲಿಸಿದ್ದೇನೆ. ಯಾರೂ ಕನ್ನಡಿಗರು ಇಲ್ಲ ಎಂದು ಸಚಿವ ಸಂತೋಷ್ ಲಾಡ್ (Santhosh Lad) ತಿಳಿಸಿದ್ದಾರೆ.
ರೈಲು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಎರಡ್ಮೂರು ಶವಗಾರ, ನಾಲ್ಕು ಆಸ್ಪತ್ರೆಗಳಲ್ಲಿ ಹುಡುಕಾಟ ಮಾಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ 750 ಗಾಯಾಳು ರೋಗಿಗಳನ್ನು ಮಾತನಾಡಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ
ನಂತರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 750 ಗಾಯಾಳುಗಳಲ್ಲಿ ಯಾರೂ ಕನ್ನಡಿಗರು ಇಲ್ಲ. 300ಕ್ಕೂ ಹೆಚ್ಚು ಡೆಡ್‌ಬಾಡಿಗಳನ್ನು ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಗರಿಲ್ಲ. ಕನ್ನಡಿಗರು ಸೇಫ್ ಆಗಿದ್ದಾರೆ. 110 ಜನ ಕಳಸದವರು ವಾಪಾಸ್ ಆಗುತ್ತಿದ್ದಾರೆ. ಪುರಿ ಜಗನ್ನಾಥ ದರ್ಶನಕ್ಕೆ (Puri Jagannatha Temple) ಬಂದವರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ
ಒಡಿಶಾದ ಪುರಿ ಜಗನ್ನಾಥ ದರ್ಶನಕ್ಕೆ ತೆರಳಿದ್ದ 12 ಯಾತ್ರಿಗಳು ವಾಪಸ್ಸಾಗಲು ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದು, ಸಂತೋಷ್ ಲಾಡ್ ಯಾತ್ರಿಗಳನ್ನು ವಾಪಸ್ ಕರೆತರುವ ಸಲುವಾಗಿ ಬೆಂಗಳೂರಿಗೆ (Bengaluru) ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಭುವನೇಶ್ವರದಿಂದ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದು, ಯಾತ್ರಿಗಳು ಇಂದು (ಭಾನುವಾರ) ಸಂಜೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು
-

ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು
ಚಿಕ್ಕಮಗಳೂರು: ಒಡಿಶಾ ರೈಲು ದುರಂತದಿಂದ (Odisha Train Accident) ಸಂಕಷ್ಟಕ್ಕೆ ಸಿಲುಕಿದ್ದ 110 ಜನ ಕನ್ನಡಿಗರು ಸುರಕ್ಷಿತವಾಗಿ ಜಾರ್ಖಂಡ್‌ನ (Jharkhand) ಸುಮೇದ್ ಸಿಖರ್ಜಿಗೆ ತಲುಪಿದ್ದಾರೆ. ಅಲ್ಲದೇ ತಾವು ಸೇಫ್ ಆಗಿದ್ದೇವೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಹೌರಾ ರೈಲಿನಲ್ಲಿ ಚಿಕ್ಕಮಗಳೂರಿನ (Chikkamagaluru) ಕಳಸ, ಸಂಸೆ, ಹೊರನಾಡು, ಕುದುರೆಮುಖದ ಸುಮಾರು 110 ಜನರು ಜೈನ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು. ಈ ವೇಳೆ ರೈಲು ಅಪಘಾತಗೊಂಡಿತ್ತು. ಈಗ ಎಲ್ಲಾ ಯಾತ್ರಿಕರು ಕೋಲ್ಕತ್ತಾ (Kolkata) ರೈಲು ನಿಲ್ದಾಣದಿಂದ ಮೂರು ಬಸ್‍ಗಳ ಮೂಲಕ ಯಾತ್ರಾ ಸ್ಥಳಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ಬಂದಿದೆ. ಇದನ್ನೂ ಓದಿ: ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು
ಈಗಾಗಲೇ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಯಾತ್ರಿಕರು, ತಾವು ಸೇಫ್ ಆಗಿದ್ದೇವೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಅಪಘಾತದಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ
-

ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ
ಕೊಲ್ಕತ್ತಾ: ಒಡಿಶಾದ ಬಾಲಾಸೋರ್‌ನಲ್ಲಿ ನಡೆದ ರೈಲು ಅಪಘಾತದ (Odisha Train Accident) ಸ್ಥಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹಲವರು ಗಂಭೀರ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ (West Bengal) ಮೇದಿನಿಪುರದಲ್ಲಿ ನಡೆದಿದೆ.
ಮೇದಿನಿಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಬಸ್ಸಿನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಗಾಯಾಳುಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಿಂದ ರೈಲು ಸಂಚಾರ ಸ್ಥಗಿತ- ಹೌರಾದಲ್ಲಿ ಸಿಲುಕಿದ ರಾಜ್ಯದ ವಾಲಿಬಾಲ್ ಆಟಗಾರರಿಗೆ ವಿಶೇಷ ವಿಮಾನ
ಶುಕ್ರವಾರ ರಾತ್ರಿ ಬಾಲಸೋರ್‍ನಲ್ಲಿ ಮೂರು ರೈಲುಗಳು ಕೋಲ್ಕತ್ತಾ (Kolkata)-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು (Bengaluru)-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 288 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಘಟನೆಯ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಆ ಮಾರ್ಗದ 58ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿದೆ. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ಯಾರಾದ್ರೂ ಲಂಚ ಕೇಳಿದ್ರೆ ನೇರವಾಗಿ ನನಗೆ ಪತ್ರ ಬರೆಯಿರಿ, ಒದ್ದು ಒಳಗೆ ಹಾಕಿಸ್ತೀನಿ: ಡಿಕೆಶಿ
-

ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ
ಬೆಂಗಳೂರು: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ (Odisha Train Accident) ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ (Santosh Lad) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿಯೋಜಿಸಿದ್ದಾರೆ.

ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವು ಒದಗಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

ಸಂತೋಷ್ ಲಾಡ್ ಅವರ ಜೊತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್





