ಭುವನೇಶ್ವರ (ಗಂಜಾಂ): ಮದುವೆ ಸಮಾರಂಭದಲ್ಲಿ (Wedding) ಪಾಲ್ಗೊಂಡಿದ್ದ 14 ಮತ್ತು 15 ವರ್ಷ ಇಬ್ಬರು ಹುಡುಗಿಯರನ್ನು ಅಪಹರಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ (Odisha) ಗಂಜಾಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬ್ರಹ್ಮಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರವಣ್ ವಿವೇಕ್ ಅವರು ಹೇಳುವಂತೆ, ಘಟನೆ ಜೂನ್ 3ರಂದು ನಡೆದಿದೆ. ಇಬ್ಬರು ಹೆಣ್ಣುಮಕ್ಕಳು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಇಬ್ಬರನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ, ಜೊತೆಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು
ಪ್ರಾಥಮಿಕ ತನಿಖೆಯಲ್ಲಿ ಹುಡುಗಿಯರಿಗೆ ಮೊದಲು ಇಬ್ಬರು ಪುರುಷರು ಆಮಿಷವೊಡ್ಡಿದ್ದಾರೆ, ಈ ಪೈಕಿ ಒಬ್ಬ ಆರೋಪಿ ಸಂತ್ರಸ್ತೆಗೆ ಪರಿಚಯವಿದ್ದ. ಅವರೊಂದಿಗೆ ಇನ್ನಿಬ್ಬರು ಸೇರಿಕೊಂಡು ಅಪಹರಿಸಿದ ಬಳಿಕ ಕೃತ್ಯ ಎಸಗಿದ್ದಾರೆ ಅನ್ನೋದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ
ಬಳಿಕ ವಿಷಯ ತಿಳಿದ ಪೋಷಕರು ಜೂನ್ 4 ರಂದು ದೂರು ದಾಖಲಿಸಿದ್ರು, ಅದರನ್ವಯ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಯಿತು. ಜೂನ್ 6 ರಂದು ಬಾಲಕಿಯರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಬಾಲಕಿಯನ್ನು ಕೌನ್ಸೆಲಿಂಗ್‌ಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
– ಸೇನಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಎಚ್ಚೆತ್ತ ಒಡಿಶಾ ಪೊಲೀಸ್
– ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್, ಅಮಾನತು
ಭುವನೇಶ್ವರ: ಇಲ್ಲಿನ ಭರತ್‌ಪುರ ಪೊಲೀಸ್ ಠಾಣೆಯಲ್ಲಿ (Bharatpur police Station) ಹಲ್ಲೆಗೊಳಗಾದ ಸೇನಾ ಅಧಿಕಾರಿಯ ಭಾವಿ ಪತ್ನಿ ಜೈಲಿಂದ ಬಿಡುಗಡೆಯಾದ ಬಳಿಕ ಪೊಲೀಸರ ವಿರುದ್ಧ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪ ಮಾಡಿದ್ದಾರೆ.
ಹೌದು. ಇದೇ ಸೆಪ್ಟೆಂಬರ್ 14ರಂದು ಭುವನೇಶ್ವರದಲ್ಲಿ (Bhubaneswar) ರೆಸ್ಟೋರೆಂಟ್ ಮುಚ್ಚಿದ ಬಳಿಕ ನಾನು ನನ್ನ ಭಾವಿ ಪತಿಯ ಜೊತೆ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದೆವು. ಆದ್ರೆ ದೂರು ನೀಡಲು ಹೋದ ನಮ್ಮನ್ನೇ ಲಾಕಪ್‌ಗೆ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ಧ್ರುವಿ ಪಟೇಲ್‌ಗೆ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟ!
ಆ ದಿನ ಏನಾಯ್ತು?
ರೆಸ್ಟೋರೆಂಟ್‌ನಿಂದ ಮನೆಗೆ ಹೋಗುವಾಗ ದುಷ್ಕರ್ಮಿಗಳ ಗುಂಪೊಂದು ನಮ್ಮ ಬೆಟ್ಟಿತು. ನಾವು ಭರತ್‌ಪುರ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಅಲ್ಲಿ ಒಬ್ಬ ಮಹಿಳಾ ಕಾನ್‌ಸ್ಟೆಬಲ್ ಮಾತ್ರ ಸಿವಿಲ್ ಡ್ರೆಸ್‌ನಲ್ಲಿದ್ದರು. ಅವರು ನಮಗೆ ಸಹಾಯ ಮಾಡಲು ನಿರಾಕರಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಈ ವೇಳೆ ಕೆಲ ಪುರುಷ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಿಖಿತ ಹೇಳಿಕೆ ಕೊಡುವಂತೆ ನಮ್ಮನ್ನ ಕೇಳಿದರು. ಬಳಿಕ ನನ್ನ ಸಂಗಾತಿಯನ್ನು ಲಾಕಪ್‌ಗೆ ಹಾಕಿದರು. ಆರ್ಮಿ ಅಧಿಕಾರಿಗಳನ್ನು ಅಕ್ರಮವಾಗಿ ಕಸ್ಟಡಿಯಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿಗಳು ಬಂದು ನನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಲಾಕಪ್‌ನಲ್ಲಿ ಕೂಡಿ ಹಾಕಿದರು ಎಂದು ಮಹಿಳೆ ಆರೋಪಿಸಿದ್ದಾರೆ.
ನಂತರ ನಾನು ಸಹಾಯಕ್ಕಾಗಿ ಚೀರಾಡುತ್ತಿದ್ದಾಗ ಯಾರೂ ಬರಲಿಲ್ಲ. ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಂದರು. ತಮ್ಮ ಪ್ಯಾಂಟ್ ಅನ್ನು ಕೆಳಕ್ಕೆ ಇಳಿಸಿ, ಅವರ ಖಾಸಗಿ ಅಂಗಾಂಗಳನ್ನು ತೋರಿಸಿ ಹಿಂಸೆ ಮಾಡಿದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದರು, ನನ್ನ ಎದೆಗೆ ಜಾಡಿಸಿ ಒದ್ದರು ಎಂದು ಆರೋಪಿಸಿದ್ದಾರೆ. ಮಹಿಳೆಯ ಆರೋಪದ ತೀವ್ರತೆಯನ್ನು ಪರಿಗಣಿಸಿ ಒಡಿಶಾ ಹೈಕೋರ್ಟ್ ಮಹಿಳೆಗೆ ಗುರುವಾರ ಜಾಮೀನು ನೀಡಿತು. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ
ಇದಕ್ಕೂ ಮುನ್ನ ಪೊಲೀಸರು ಸಹ ಸೇನಾ ಅಧಿಕಾರಿ ಮತ್ತವರ ಭಾವಿ ಪತ್ನಿ ವಿರುದ್ಧ ಆರೋಪಿಸಿದ್ದರು. ಅವರಿಬ್ಬರು ಕುಡಿದು ಕೋಲ್ಕತ್ತಾದ 22 ಸಿಖ್ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ, ಪೊಲೀಸ್ ಠಾಣೆಯೊಳಗಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಪ್ರಕರಣವು ತೀವ್ರ ಸ್ವರೋಪ ಪಡೆದುಕೊಳ್ಳುತ್ತಿದ್ದಂತೆ ಭರತ್‌ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಅಧಿಕಾರಿಗಳನ್ನ ಅಮಾನತುಗೊಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ಈ ಕುರಿತು ಪೊಲೀಸರಿಂದ ವರದಿಯನ್ನು ಕೇಳಿದೆ ಎಂದು ಒಡಿಶಾ ಪೊಲೀಸ್ ಉನ್ನತ ಮೂಲಗಳು ತಿಳಿಸಿದೆ. ಈ ಮಧ್ಯೆ ಸೇನಾಧಿಕಾರಿ ದೂರು ದಾಖಲಿಸಿದ ನಂತರ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ
ಪ್ರಕರಣದ ಇಂಚಿಂಚು ಮಾಹಿತಿ: ಸೆಪ್ಟೆಂಬರ್ 14: ಮಧ್ಯರಾತ್ರಿ
* ಅಪರಿಚಿತರ ದುಷ್ಕರ್ಮಿಗಳ ಗುಂಪೊಂದು ಸೇನಾಧಿಕಾರಿ ಮತ್ತು ಅವರ ಪತ್ನಿಯನ್ನು ಭುವನೇಶ್ವರದಲ್ಲಿ ಬೆನ್ನಟ್ಟಿಕೊಂಡು ಬಂದಿತು. ಕೊನೆಗೆ ಅವರು ರಕ್ಷಣೆ ಕೋರಿ ಸಮೀಪದ ಠಾಣೆಗೆ ದೌಡಾಯಿಸಿದರು.
ಸೆಪ್ಟೆಂಬರ್ 15: ಮಧ್ಯರಾತ್ರಿ 1 ಗಂಟೆ
ಸೇನಾ ಅಧಿಕಾರಿ ಹಾಗೂ ಭಾವಿ ಪತ್ನಿ ಇಬ್ಬರು ಭರತ್‌ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಬಂದರು.
ಸೆಪ್ಟೆಂಬರ್ 15: ಮಧ್ಯರಾತ್ರಿ 1.30 ರಿಂದ 3 ಗಂಟೆ
ದೂರು ನೀಡಲು ಹೋದವರನ್ನೇ ಪೊಲೀಸರು ಲಾಕಪ್‌ಗೆ ತಳ್ಳಿ ತೀವ್ರವಾಗಿ ಹಲ್ಲೆ ನಡೆಸಿದರು. ಈ ವೇಲೆ ತನ್ನ ಬಟ್ಟೆ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ, ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸೆಪ್ಟೆಂಬರ್ 16:
ಘಟನೆಯ ಬಗ್ಗೆ ಸೇನೆಗೆ ತಿಳಿದ ನಂತರ, ಅದು ಒಡಿಶಾ ಸರ್ಕಾರದೊಂದಿಗೆ ಸಂಪರ್ಕಿಸಲಾಯಿತು.
ಸೆಪ್ಟೆಂಬರ್ 17:
ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಒಡಿಶಾ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತು.
ಸೆಪ್ಟೆಂಬರ್ 18:
ಸೇನಾಧಿಕಾರಿ ಭಾವಿ ಪತ್ನಿ ಆರೋಪದ ಬಳಿಕ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆಗೆ ಜಾಮೀನು ನೀಡಿದೆ.
ಸೆಪ್ಟೆಂಬರ್ 19:
ಜೈಲಿಂದ ಬಿಡುಗಡೆ ಮಾಡಲಾಯಿತು. ಬಳಿಕ ಅವರು ಪೊಲೀಸ್ ಠಾಣೆಯಲ್ಲಿ ಅನುಭವಿಸಿದ ನರಕಯಾತನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಸೆಪ್ಟೆಂಬರ್ 20:
ಸೇನಾಧಿಕಾರಿ ದೂರನ್ನು ದಾಖಲಿಸಿದ ನಂತರ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ಭುವನೇಶ್ವರ: ಕರಿ (Curry) ಜೊತೆಗೆ ಅನ್ನ (Cooking Rice) ಮಾಡಿಲ್ಲ ಅಂತಾ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಹೊಡೆದೇ ಕೊಂದಿರುವ ಘಟನೆ ಒಡಿಶಾದ (Odisha) ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಪತಿ ಸನಾತನ ಧಾರುವಾ (40)ನನ್ನ ಬಂಧಿಸಲಾಗಿದೆ. ಮೃತ ಪತ್ನಿ ಪುಷ್ಪಾ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ
ಏನಿದು ಘಟನೆ?
ಧಾರುವಾ ಭಾನುವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಆಗ ಪುಷ್ಪಾ ಕರಿಯನ್ನು ಮಾತ್ರ ಮಾಡಿದ್ದು, ಅದರ ಜೊತೆಗೆ ಅನ್ನ ಮಾಡಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ, ಪತಿ ಪುಷ್ಪಾಳ ಮೇಲೆ ಹಲ್ಲೆ ನಡೆಸಿ ಕೊಂದೇಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗ ಮನೆಗೆ ಹಿಂದಿರುಗಿದಾಗ ತಾಯಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ನಂತರ ಮಗ ಮಾಹಿತಿ ನೀಡಿದ್ದು, ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.