Tag: ODI WorldCup

  • ಬೀಫ್‌ ನೀಡಲ್ಲ ಅಂದ BCCI; ಚಿಕನ್‌, ಮಟನ್‌, ಫಿಶ್‌ ಔತಣಕ್ಕೆ ಪಾಕ್‌ ಆಟಗಾರರು ಫಿದಾ

    ಬೀಫ್‌ ನೀಡಲ್ಲ ಅಂದ BCCI; ಚಿಕನ್‌, ಮಟನ್‌, ಫಿಶ್‌ ಔತಣಕ್ಕೆ ಪಾಕ್‌ ಆಟಗಾರರು ಫಿದಾ

    ಹೈದರಾಬಾದ್: ಇದೇ ಅಕ್ಟೋಬರ್ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್ (ICC WorldCup) ಟೂರ್ನಿಯನ್ನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ನಲ್ಲಿ (Hyderabad) ವಾಸ್ತವ್ಯ ಹೂಡಿದೆ. ಪಾಕಿಸ್ತಾನ ತಂಡದ ಆಟಗಾರರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದ್ದು, ಇದೀಗ ಅದ್ಧೂರಿ ಔತಣವನ್ನೂ ನೀಡಲಾಗಿದೆ. ಈ ಕುರಿತ ವೀಡಿಯೋ ತುಣುಕನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ತನ್ನ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದೆ.

    ನ್ಯೂಜಿಲೆಂಡ್‌ ವಿರುದ್ಧ ಮೊದಲ ಅಭ್ಯಾಸ ಪಂದ್ಯದ ಬಳಿಕ ಪಾಕಿಸ್ತಾನ ತಂಡ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ (Hotel) ವಾಸ್ತವ್ಯ ಹೂಡಿದ್ದು, ವಿವಿಧ ಮಾಂಸಾಹಾರ (Nonveg) ಖಾದ್ಯಗಳ ಔತಣ ನೀಡಲಾಗಿದೆ. ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam), ಮೊಹಮ್ಮದ್‌ ರಿಜ್ವಾನ್‌, ಶಾಹೀನ್‌ ಶಾ ಅಫ್ರಿದಿ ಮೊದಲಾದವರು ಈ ಖುಷಿಯನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲೇ ಪಾಕ್‌ಗೆ ಸೋಲಿನ ರುಚಿ – ಕಿವೀಸ್‌ಗೆ 5 ವಿಕೆಟ್‌ಗಳ ಜಯ

    ಪಾಕಿಸ್ತಾನದಲ್ಲಿ ನಮ್ಮ ಅಭಿಮಾನಿಗಳು ನಮ್ಮನ್ನು ಹೇಗೆ ಪ್ರೀತಿಸುತ್ತಾರೋ ಹಾಗೆಯೇ ಭಾರತೀಯ ಪ್ರೇಕ್ಷಕರೂ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ಮೊಹಮ್ಮದ್‌ ರಿಜ್ವಾನ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    ಏನೆಲ್ಲಾ ಸ್ಪೆಷಲ್‌ ಫುಡ್‌ ಇದೆ ಗೊತ್ತಾ?
    ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೇರಿ ಪಾಲ್ಗೊಳ್ಳುವ ಕ್ರಿಕೆಟ್‌ ತಂಡಗಳಿಗೆ ಗೋಮಾಂಸ (ಬೀಫ್‌) ನಿಷೇಧಿಸಲಾಗಿದೆ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ದೈನಂದಿನ ಪ್ರೋಟೀನ್‌ಯುಕ್ತ ಆಹಾರವಾಗಿ ಚಿಕನ್‌, ಮಟನ್‌ ಹಾಗೂ ಫಿಶ್‌ ಮಾಂಸಾಹಾರ ಖಾದ್ಯಗಳನ್ನು ನೀಡಲಾಗುತ್ತಿದೆ. ಡಯಟ್ ಚಾರ್ಟ್‌ನಲ್ಲಿ ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ನೀಡಲಾಗುತ್ತಿದೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

    ಬಿರಿಯಾನಿಯಂತಹ ಆಹಾರ ಪದಾರ್ಥಗಳನ್ನ ತಯಾರಿಸಲು ಸ್ಟೀಮ್ಡ್ ಬಾಸುಮತಿ ರೈಸ್ ಅನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಬೊಲೊಗ್ನೀಸ್ ಸಾಸ್‌ನಲ್ಲಿರುವ ಸ್ಪಾಗೆಟ್ಟಿ, ಶೇನ್ ವಾರ್ನ್ ಚಿಕನ್ ಹಾಗೂ ವೆಜ್ ಪಲಾವ್ ಎಲ್ಲದಕ್ಕಿಂತ ಮುಖ್ಯವಾಗಿ ಹೈದರಾಬಾದ್ ಬಿರಿಯಾನಿ ಕಡ್ಡಾಯವಾಗಿದೆ. ಒಟ್ಟಿನಲ್ಲಿ ಭಾರತದಲ್ಲಿ ನೀಡುತ್ತಿರುವ ಆತಿಥ್ಯಕ್ಕೆ ಪಾಕ್‌ ಆಟಗಾರರು ಫಿದಾ ಆಗಿದ್ದಾರೆ. ಇದನ್ನೂ ಓದಿ: Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

    ನ್ಯೂಜಿಲೆಂಡ್‌ ವಿರುದ್ಧ ಶುಕ್ರವಾರ ಪಾಕಿಸ್ತಾನ ಅಭ್ಯಾಸ ಪಂದ್ಯದಲ್ಲಿ ಉತ್ತಮ ರನ್‌ ಕಲೆಹಾಕಿದರೂ ಸೋಲನ್ನು ಅನುಭವಿಸಿತು. ಈ ಪಂದ್ಯದ ಕುರಿತು ಮಾತನಾಡಿರುವ ಮೊಹಮ್ಮದ್‌ ರಿಜ್ವಾನ್‌, ಅಭ್ಯಾಸ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದೆ. ಏಕದಿನ ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡುತ್ತೇನೆ. ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಟ್‌ ಬೀಸುತ್ತೇನೆ ಎಂದು ತಿಳಿಸಿದ್ದಾರೆ.

    ಮೊದಲ ಅಭ್ಯಾಸ ಪಂದ್ಯದ ಬಳಿಕ ಹೈದರಾಬಾದ್‌ ಪಿಚ್‌ ಬಗ್ಗೆ ಅರಿತಿರುವ ಪಾಕ್‌ ತಂಡ ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಭ್ಯಾಸ ಪಂದ್ಯವನ್ನಾಡಲಿದೆ. ಆ ನಂತರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.

    ಅಕ್ಟೋಬರ್ 14 ರಂದು ಹೈವೋಲ್ಟೇಜ್ ಕದನ: ಅ.5ರಿಂದ ನ.19ರ ವರೆಗೆ ಭಾರತದ ವಿವಿಧ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕ್ ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ಅ ಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    ಹೈದರಾಬಾದ್‌: ಭಾರತದ ಆತಿಥ್ಯದಲ್ಲಿ ಇದೇ ಅಕ್ಟೋಬರ್‌ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯನ್ನಾಡಲು ಬಾಬರ್‌ ಆಜಂ (Babar Azam) ಪಾಕಿಸ್ತಾನ ಕ್ರಿಕೆಟ್​ ತಂಡ ಹೈದರಾಬಾದ್‌ನಲ್ಲಿ ವಾಸ್ತವ್ಯ ಹೂಡಿದೆ. ಪಾಕಿಸ್ತಾನ ತಂಡದ (Pakistan Team) ಆಟಗಾರರು ಬರುತ್ತಿದ್ದಂತೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ. ಇದರೊಂದಿಗೆ ಊಟೋಪಚಾರ ವಿಷಯಗಳಲ್ಲೂ ಅಷ್ಟೇ ಕಾಳಜಿ ವಹಿಸಲಾಗಿದೆ.

    ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೇರಿ ಪಾಲ್ಗೊಳ್ಳುವ 10 ತಂಡಗಳಿಗಳಿಗೆ ಗೋಮಾಂಸ ನಿಷೇಧಿಸಲಾಗಿದೆ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ದೈನಂದಿನ ಪ್ರೋಟೀನ್‌ಯುಕ್ತ ಆಹಾರಕ್ಕಾಗಿ ಕೋಳಿ (Chicken), ಕುರಿ ಹಾಗೂ ಮೀನು ಆಹಾರ ಪದಾರ್ಥಗಳ ಮೆನು ನೀಡಲಾಗಿದೆ. ಡಯಟ್‌ ಚಾರ್ಚ್‌ನಲ್ಲಿ ಗ್ರಿಲ್ಡ್‌ ಲ್ಯಾಂಬ್‌ ಚಾಪ್ಸ್ (Grilled Lamb Chops), ಮಟನ್‌ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್‌ ಚಿಕನ್‌ ಮತ್ತು ಗ್ರಿಲ್ಡ್‌ ಫಿಶ್‌ (Grilled Fish) ನೀಡಲಾಗುತ್ತಿದೆ.

    ಬಿರಿಯಾನಿಯಂತಹ ಆಹಾರ ಪದಾರ್ಥಗಳನ್ನ ತಯಾರಿಸಲು ಸ್ಟೀಮ್ಡ್‌ ಬಾಸುಮತಿ ರೈಸ್‌ ಅನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಬೊಲೊಗ್ನೀಸ್ ಸಾಸ್‌ನಲ್ಲಿರುವ ಸ್ಪಾಗೆಟ್ಟಿ, ಶೇನ್ ವಾರ್ನ್‌ ಚಿಕನ್‌ ಹಾಗೂ ವೆಜ್‌ ಪಲಾವ್‌ ಎಲ್ಲದಕ್ಕಿಂತ ಮುಖ್ಯವಾಗಿ ಹೈದರಾಬಾದ್‌ ಬಿರಿಯಾನಿ ಮೆನುವನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿರುವ ಪಾಕಿಸ್ತಾನ ತಂಡ ಗುರುವಾರ ಮೈದಾನ ವೀಕ್ಷಣೆ ಮಾಡಿದೆ. ಇದೇ ವೇಳೆ ಪಾಕ್‌ ತಂಡದ ನಾಯಯ ಬಾಬರ್‌ ಆಜಂ ಪಿಚ್‌ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

    ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನವು ಸೆಪ್ಟೆಂಬರ್ 29ರಂದು ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯದ್ದಾಗಿ ಅಭ್ಯಾಸ ಪಂದ್ಯಗಳನ್ನಾಡಲಿದೆ. ಆ ನಂತರ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಇದನ್ನೂ ಓದಿ: Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್‌

    ಅಕ್ಟೋಬರ್‌ 14 ರಂದು ಹೈವೋಲ್ಟೇಜ್‌ ಕದನ: ಅ.5ರಿಂದ ನ.19ರ ವರೆಗೆ ಭಾರತದ ವಿವಿಧ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕ್​ ನಡುವಿನ ಹೈವೋಲ್ಟೇಜ್​ ಕದನ ಅಕ್ಟೋಬರ್​ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

    ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

    ಹೈದರಾಬಾದ್‌: ಭಾರತದ ಆತಿಥ್ಯದಲ್ಲಿ ಇದೇ ಅಕ್ಟೋಬರ್‌ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯನ್ನಾಡಲು ಪಾಕಿಸ್ತಾನ ಕ್ರಿಕೆಟ್​ ತಂಡ ಬುಧವಾರ ತಡರಾತ್ರಿ ಹೈದರಾಬಾದ್​ಗೆ ಬಂದಿಳಿದಿದೆ. ಈ ವೇಳೆ ಪಾಕಿಸ್ತಾನ ತಂಡದ ಆಟಗಾರರಿಗೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ.

    ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ ಸೇರಿದಂತೆ ಕೆಲವು ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು, ಇದೀಗ ಟ್ವಿಟರ್​ನಲ್ಲಿ ಸಖತ್‌ ಟ್ರೆಂಡ್​ ಆಗಿದೆ. ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಕೇಸರಿ ಸಾಲು ಹಾಕಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಭಾರೀ ಬಿಗಿ ಭದ್ರತೆಯನ್ನೂ ನಿಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: Asian Games: ಮಹಿಳೆಯರ 60 ಕೆ.ಜಿ ವುಶು ಫೈನಲ್‍ನಲ್ಲಿ ಭಾರತಕ್ಕೆ ಬೆಳ್ಳಿ

    ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನವು ಸೆಪ್ಟೆಂಬರ್ 29ರಂದು ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯದ್ದಾಗಿ ಅಭ್ಯಾಸ ಪಂದ್ಯಗಳನ್ನಾಡಲಿದೆ. ಆ ನಂತರ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಅದಕ್ಕಾಗಿ ಪಾಕ್‌ ತಂಡ ಸೆ.27ರ ತಡರಾತ್ರಿ ಹೈದರಾಬಾದ್‌ಗೆ ಬಂದಿಳಿದಿದೆ.

    ಪಾಕ್​ ಆಟಗಾರರು ಕೇಸರಿ ಶಾಲು ಧರಿಸಿದ ಫೋಟೊ ಮತ್ತು ವೀಡಿಯೋ ಇದೀಗ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಪಾಕ್​ ತಂಡದ ನಾಯಕ ಬಾಬರ್​ ಆಜಂ ಅವರನ್ನ ನೆಟ್ಟಿಗರು ತೆಲಂಗಾಣದ ಬಿಜೆಪಿ ಯುವ ಘಟಕದ ನಾಯಕ ಎಂದು ಟ್ರೋಲ್​ ಮಾಡಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಬೌಲಿಂಗ್‌ನಲ್ಲಿ ಕೈಹಿಡಿದ ಮ್ಯಾಕ್ಸಿ – ಪಂದ್ಯ ಸೋತು ಸರಣಿ ಗೆದ್ದ ಭಾರತ

    ಪಾಕಿಸ್ತಾನ ತಂಡ ಕೆಲವು ದಿನಗಳ ಹಿಂದೆಯೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದ ಪ್ರಯಾಣ ಅಸಾಧ್ಯವಾಗಿತ್ತು. ಇದೇ ವಿಚಾರವಾಗಿ ಪಾಕ್​ ಕ್ರಿಕೆಟ್​ ಮಂಡಳಿ ವಿಶ್ವಕಪ್​ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡುವ ವ್ಯವಸ್ಥೆ ಮಾಡಿತ್ತು.

    7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟ ಪಾಕ್‌:
    ಪಾಕಿಸ್ತಾನ ಕ್ರಿಕೆಟ್‌ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. 2008ರಲ್ಲಿ ನಡೆದ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನೇ ನಿಲ್ಲಿಸಿದೆ. ಆದ್ರೆ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿ ಆಡಲು ಕೊನೆಯ ಬಾರಿ ಪಾಕ್​ ತಂಡ ಭಾರತಕ್ಕೆ ಬಂದಿತ್ತು. ಅದಾದ ನಂತರ ಐಸಿಸಿ ಟೂರ್ನಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದವು. ಇದೀಗ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿದೆ.

    ಅಕ್ಟೋಬರ್‌ 14 ರಂದು ಹೈವೋಲ್ಟೇಜ್‌ ಕದನ:
    ಅ.5ರಿಂದ ನ.19ರ ವರೆಗೆ ಭಾರತದ ವಿವಿಧ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕ್​ ನಡುವಿನ ಹೈವೋಲ್ಟೇಜ್​ ಕದನ ಅಕ್ಟೋಬರ್​ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 Blast: ವಿಶ್ವಕಪ್‌ಗೂ ಮುನ್ನ ವಿಶ್ವದಾಖಲೆ ಬರೆದ ಅಫ್ರಿದಿ, ಭಾರತಕ್ಕೆ ಎಚ್ಚರಿಕೆ ಗಂಟೆ ಎಂದ ನೆಟ್ಟಿಗರು

    T20 Blast: ವಿಶ್ವಕಪ್‌ಗೂ ಮುನ್ನ ವಿಶ್ವದಾಖಲೆ ಬರೆದ ಅಫ್ರಿದಿ, ಭಾರತಕ್ಕೆ ಎಚ್ಚರಿಕೆ ಗಂಟೆ ಎಂದ ನೆಟ್ಟಿಗರು

    ಲಂಡನ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ (Pakistan Cricket) ಯಾರ್ಕರ್‌ ಸ್ಪೆಷಲಿಸ್ಟ್‌ ಶಾಹೀನ್‌ ಅಫ್ರಿದಿ T20 ಬ್ಲಾಸ್ಟ್‌ (T20 Blast) ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ದುರದೃಷ್ಟವಶಾತ್‌ ಅಫ್ರಿದಿ ಯಾರ್ಕರ್‌ ದಾಳಿಯ ಹೊರತಾಗಿಯೂ ಪಾಕ್‌ ತಂಡ 2 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ.

    ಹೌದು. ಟಿ20 ಬ್ಲಾಸ್ಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ನಾಟಿಂಗ್ಹ್ಯಾಮ್ ಶೈರ್ (Nottinghamshire) ಪರ ಪ್ರತಿನಿಧಿಸಿದ್ದ ಎಡಗೈ ಅಫ್ರಿದಿ, ಮೊದಲ ಓವರ್‌ನಲ್ಲೇ ಅಲೆಕ್ಸ್ ಡೇವಿಡ್ಸ್(0), ಕ್ರಿಸ್ ಬೆನ್ಜಮಿನ್‌(0), ಡ್ಯಾನ್ ಮೌಸ್ಲಿ(1) ಹಾಗೂ ಎಡ್ ಬೆರ್ನಾರ್ಡ್‌(0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಟಿ20‌ ಕ್ರಿಕೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಇದರೊಂದಿಗೆ ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಿತ್ತ ಮೊದಲ ವೇಗಿ ಎಂಬ ವಿಶ್ವದಾಖಲೆಯನ್ನೂ ಬರೆದಿದ್ದಾರೆ. ಇದನ್ನೂ ಓದಿ: Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ

    ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದರೂ ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ 29 ರನ್‌ ನೀಡಿ 4 ವಿಕೆಟ್‌ ಕಿತ್ತರು. ಶಾಹೀನ್‌ ವಿಕೆಟ್‌ ಪಡೆದ ವೀಡಿಯೋ ತುಣುಕು ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

    ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ನಾಟಿಂಗ್ಹ್ಯಾಮ್ ಶೈರ್​ 20 ಓವರ್‌ಗಳಲ್ಲಿ 168ಕ್ಕೆ ಆಲೌಟ್​ ಆಯಿತು. 169 ರನ್‌ಗಳ ಗುರಿ ಬೆನ್ನಟ್ಟಿದ ಬರ್ಮಿಂಗ್‌ಹ್ಯಾಮ್‌ ಬೇರ್ಸ್‌ ತಂಡವು 19.1 ಓವರ್​ಗಳಲ್ಲೇ 8 ವಿಕೆಟ್​ಗೆ 172 ರನ್​ ಗಳಿಸಿ ಗೆಲುವು ಸಾಧಿಸಿತು. ಸೋಲು ಕಂಡ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಕ್ವಾರ್ಟರ್ವ್‌ ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ಟೀಂ ಇಂಡಿಯಾಕ್ಕೆ ಎಚ್ಚರಿಕೆ ಗಂಟೆ:
    ಅ.5 ರಿಂದ ನ.19ರ ವೆರೆಗೆ ಭಾರತದಲ್ಲಿ ಆಯೋಜನೆಗೊಂಡಿರುವ ವಿಶ್ವಕಪ್‌ ಟೂರ್ನಿಗೆ (ICC World Cup) ಪಾಕಿಸ್ತಾನ ಬರುವ ನೀರಿಕ್ಷೆಯಲ್ಲಿದೆ. ನಿಗದಿತ ವೇಳಾಪಟ್ಟಿಯಂತೆ ಭಾರತದ 5 ಪ್ರಮುಖ ನಗರಗಳಲ್ಲಿ ಪಾಕಿಸ್ತಾನ 9 ಪಂದ್ಯಗಳನ್ನಾಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್​ ಲೀಗ್​ ಪಂದ್ಯ ಅ. 15ರಂದು ಅಹಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದ್ದು, ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಇದೀಗ ಶಾಹೀನ್ ಅಫ್ರಿದಿ ಬೌಲರ್​ ಕಂಡ ಕೆಲವರು ಏಕದಿನ ವಿಶ್ವಕಪ್​ನಲ್ಲಿ ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಬಣ್ಣಿಸಿದ್ದಾರೆ. ಏಕೆಂದರೆ 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ‌ ಮೊದಲ ಓವರ್‌ನಲ್ಲೇ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಅವರ ವಿಕೆಟ್‌ಗಳನ್ನ ಉರುಳಿಸಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಗಿದ್ದರು.

    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ODI World Cup: ಟಾಪ್‌-5 ಹೈವೋಲ್ಟೇಜ್‌ ಪಂದ್ಯಗಳನ್ನು ಪಟ್ಟಿ ಮಾಡಿದ ICC

    ODI World Cup: ಟಾಪ್‌-5 ಹೈವೋಲ್ಟೇಜ್‌ ಪಂದ್ಯಗಳನ್ನು ಪಟ್ಟಿ ಮಾಡಿದ ICC

    ಮುಂಬೈ: ಭಾರತದ (India) ಆತಿಥ್ಯದಲ್ಲಿ ಆಯೋಜನೆಗೊಂಡಿರುವ 2023ರ ಏಕದಿನ ವಿಶ್ವಕಪ್‌ (ODI WorldCup) ವೇಳಾಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಐಸಿಸಿ (ICC) ಈ ಬಾರಿಯ ಟಾಪ್‌-5 ಹೈವೋಲ್ಟೇಜ್‌ ಪಂದ್ಯಗಳನ್ನು ಹೆಸರಿಸಿದೆ.

    ವಿಶ್ವಕಪ್‌ ಪಂದ್ಯದ ಲೀಗ್‌ ಹಂತದಲ್ಲಿ ಪ್ರತಿ ತಂಡವೂ ತಲಾ 9 ಪಂದ್ಯಗಳನ್ನಾಡಲಿದ್ದು, ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಈ ನಡುವೆ ಐಸಿಸಿ ಟಾಪ್‌-5 ಪಂದ್ಯಗಳ ಪಟ್ಟಿಯನ್ನ ಹಂಚಿಕೊಂಡಿದೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಕ್ಕೆ ನಂ.1 ಸ್ಥಾನ ನೀಡಿದೆ. ಇದನ್ನೂ ಓದಿ: 2023ರ ಏಕದಿನ AisaCup ಟೂರ್ನಿಗೆ ಪಾಕಿಸ್ತಾನಕ್ಕೆ ಲಗ್ಗೆ ಇಡಲಿದೆ ಭಾರತ

    1. ಭಾರತ Vs ಪಾಕಿಸ್ತಾನ – ಅಹಮದಾಬಾದ್ – ಅ.15

    ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತ್ಯಂತ ರೋಚಕತೆಯಿಂದ ಕೂಡಿದ್ದ ಭಾರತ ಮತ್ತು ಪಾಕಿಸ್ತಾನ (Pakistan) ಪಂದ್ಯಗಳು ಈ ಬಾರಿಯೂ ಅದೇ ಹವಾ ಸೃಷ್ಟಿಸಿದೆ. 2021ರ ವಿಶ್ವಕಪ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಭಾರತ ತಂಡವನ್ನು ಶೂನ್ಯ ವಿಕೆಟ್‌ಗಳಿಂದ ಪಾಕಿಸ್ತಾನ ತಂಡ ಮಣಿಸಿತ್ತು. 20 ಓವರ್‌ಗಳಲ್ಲಿ 152 ರನ್‌ ಗುರಿ ಬೆನ್ನತ್ತಿದ್ದ ಪಾಕ್‌ 17.5 ಓವರ್‌ಗಳಲ್ಲೇ ಗೆಲುವು ಸಾಧಿಸಿತ್ತು. ಆ ನಂತರ ಏಷ್ಯಾಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದ ಭಾರತ 2ನೇ ಪಂದ್ಯದಲ್ಲಿ ಪಾಕ್‌ ಎದುರು ವಿರೋಚಿತ ಸೋಲು ಕಂಡಿತ್ತು. ಆದ್ರೆ ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರು ಪಾಕಿಸ್ತಾನ ಸೋತರೂ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ಮುಖಾಮುಖಿಯಾಗುತ್ತಿವೆ.

    2. ಇಂಗ್ಲೆಂಡ್‌ Vs ನ್ಯೂಜಿಲೆಂಡ್‌ – ಅಹಮದಾಬಾದ್ – ಅ.5

    2023 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ (England) ಹಾಗೂ ನ್ಯೂಜಿಲೆಂಡ್‌ (New Zealand) ನಡುವಿನ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರಲಿದೆ. ಇದಕ್ಕೆ ಕಾರಣ 2019ರ ವಿಶ್ವಕಪ್​ನ ಫೈನಲ್​ನಲ್ಲಿ ನ್ಯೂಜಿಲೆಂಡ್‌ ಕಂಡ ವಿರೋಚಿತ ಸೋಲು. ಹೀಗಾಗಿ ಕಿವೀಸ್​ ಪಡೆ ಹಾಲಿ ಚಾಂಪಿಯನ್ಸ್‌ಗಳಿಗೆ ಮೊದಲ ಪಂದ್ಯದಲ್ಲೇ ಸೋಲುಣಿಸಲು ಸಜ್ಜಾಗಿದೆ. ಐಪಿಎಲ್​ ವೇಳೆ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ವಿಶ್ವಕಪ್‌ಗೆ ಫಿಟ್ ಆಗಿ ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2019ರ ವಿಶ್ವಕಪ್​, 2022ರ ಟಿ20 ವಿಶ್ವಕಪ್​ ಗೆದ್ದು ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಪ್ರಭಾವ ಬೀರಿರುವ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಕಿವೀಸ್‌ ಹೇಗೆ ಮಣಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.

    3. ಭಾರತ Vs ಆಸ್ಟ್ರೇಲಿಯಾ – ಚೆನ್ನೈ – ಅ.8

    ಆತಿಥೇಯ ಭಾರತವು ಅ.8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸುತ್ತಿದೆ. ಇದು 2023ರ ಕ್ರಿಕೆಟ್ ವಿಶ್ವಕಪ್ ಭಾರತದ ಮೊದಲ ಪಂದ್ಯವಾಗಿದ್ದು, ಇದನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವ ಗುರಿ ಹೊಂದಿದೆ. ಉಭಯ ತಂಡಗಳು ಪರಸ್ಪರ ಬಲಾಬಲ ಮತ್ತು ನ್ಯೂನತೆಗಳನ್ನ ಅರಿತಿದೆ. ಅಲ್ಲದೇ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಎದುರು ಹೀನಾಯ ಸೋಲನುಭವಿಸಿತ್ತು. ಇದರ ಸೇಡು ತೀರಿಸಿಕೊಳ್ಳಲು ಆಸ್ಟ್ರೇಲಿಯಾ ತಂಡವನ್ನು ಮಣಿಸಲೇಬೇಕಿದೆ. ಅಲ್ಲದೇ 1987ರಲ್ಲಿ ಆಸ್ಟ್ರೇಲಿಯಾ ಭಾರತದ ನೆಲದಲ್ಲೇ ವಿಶ್ವಕಪ್‌ ಗೆದ್ದಿತ್ತು. ವಿಶ್ವಕಪ್‌ ಫೈನಲ್‌ ಪಂದ್ಯವೂ ಅಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ನಡೆದಿತ್ತು.

    4. ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ – ಲಕ್ನೋ – ಅ.13

    2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ 9 ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಗೆದ್ದಿತ್ತು. ಈ ಸಂದರ್ಭದಲ್ಲಿ ನಾಯಕತ್ವ ವಹಿಸಿದ್ದ ಫಾಫ್‌ ಡು ಪ್ಲೆಸಿಸ್‌ ಅಮೋಘ ಶತಕದೊಂದಿಗೆ ಮ್ಯಾಂಚೆಸ್ಟರ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿತ್ತು. ಆನಂತರ ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ಮುಖಾಮುಖಿಗುತ್ತಿದೆ. ಹಾಗಾಗಿ ಈ ಪಂದ್ಯ ಕುತೂಹಲ ಮೂಡಿಸಿದೆ.

    5. ಬಾಂಗ್ಲಾದೇಶ Vs ಅಫ್ಘಾನಿಸ್ತಾನ – ಧರ್ಮಶಾಲಾ – ಅ.7

    2023ರ ಏಕದಿನ ಕ್ರಿಕೆಟ್ ವಿಶ್ವಕಪ್​ ಟೂರ್ನಿಯಲ್ಲಿ ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನದ ಎದುರು ಬಾಂಗ್ಲಾದೇಶ ಮೊದಲ ಪಂದ್ಯವನ್ನಾಡಲಿದೆ. ಅಫ್ಘಾನಿಸ್ತಾನಕ್ಕೆ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಇನ್-ಫಾರ್ಮ್ ಸೀಮರ್ ಫಜಲ್ಹಕ್ ಫಾರೂಕಿ ಅವರ ಬೌಲಿಂಗ್‌ ಬಲವಿದ್ದರೆ, ಬಾಂಗ್ಲಾದೇಶಕ್ಕೆ ಲಿಟ್ಟನ್ ದಾಸ್, ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರಂತಹ ಬ್ಯಾಟಿಂಗ್‌ ಬಲವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

    ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

    ಮುಂಬೈ: ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ (ODI WorldCup) ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಗಾದೆ ತಗೆದಿದೆ. ಭಾರತದಲ್ಲಿ ತಮಗೆ ನಿಗದಿಪಡಿಸಿದ ಸ್ಥಳಗಳು ಆರಾಮದಾಯಕವಾಗಿಲ್ಲ. ಹಾಗಾಗಿ ಸ್ಥಳ ಬದಲಾವಣೆ ಮಾಡುವಂತೆ ICCಗೆ ಪಾಕ್‌ (Pakistan) ತಂಡ ಮನವಿ ಮಾಡಿದೆ.

    ಈಗಾಗಲೇ ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾಕಪ್‌ (AisaCup) ಪಂದ್ಯವನ್ನಾಡಲು ಬಿಸಿಸಿಐ ನಿರಾಕರಿಸಿದ್ದು, ಪಾಕಿಸ್ತಾನ ತಂಡ ಕೂಡ ಭಾರತ ನಿಗದಿಪಡಿಸಿದ ಸ್ಥಳದಲ್ಲಿ ವಿಶ್ವಕಪ್‌ ಆಡುವುದಿಲ್ಲ ಎಂದು ಕಿರಿಕ್‌ ತೆಗೆದಿದೆ. ಪಾಕ್‌ ಮಾಜಿ ಕ್ರಿಕೆಟಿಗರು ಪಾಕ್‌ ತಂಡ ಭಾರತಕ್ಕೆ ಹೋಗದಂತೆ ಸಲಹೆ ನೀಡಿದ್ದಾರೆ. ಈ ಕುರಿತು ಟೀಂ ಇಂಡಿಯಾ (Team India) ಸ್ಪಿನ್‌ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅಶ್ವಿನ್‌, 2023ರ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ಪ್ರಕಟಿಸಿಲ್ಲ. ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಈ ನಡುವೆ ಪಾಕಿಸ್ತಾನ ಸ್ಥಳ ಬದಲಾಯಿಸುವಂತೆ ಮನವಿ ಮಾಡಿದೆ. ಕರಡು ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ಬೆಂಗಳೂರಿನಲ್ಲಿ, ಅಫ್ಘಾನಿಸ್ತಾನ ಆಸ್ಟ್ರೇಲಿಯಾ (Australia) ವಿರುದ್ಧ ಚೆನ್ನೈನ ಚೇಪಾಕ್‌ ಕ್ರೀಡಾಂಗಣದಲ್ಲಿ ಆಡಲಿದೆ. ಆದ್ರೆ ಆವರ ಸ್ಥಳ ಬದಲಾಯಿಸುವಂತೆ ಕೋರಿದ್ದಾರೆ. ಯಾವುದೇ ಪಂದ್ಯಗಳಿಗೆ ಭದ್ರತೆಯ ಕಾರಣವಿದ್ದರೆ ಮಾತ್ರ ಐಸಿಸಿ ಅಂತಹ ಮನವಿಯನ್ನ ಪರಿಗಣಿಸುತ್ತೆ. ಇಲ್ಲದಿದ್ದರೆ ಪಾಕಿಸ್ತಾನ ತಂಡ ನಿಗದಿ ಮಾಡಿದ ಸ್ಥಳದಲ್ಲೇ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಪಾಕಿಸ್ತಾನ ತನ್ನ ಮನವಿಯಲ್ಲೇ ಚೆನ್ನೈನಲ್ಲಿ ಆಡಲು ಪರಿಸ್ಥಿತಿ ಅನುಕೂಲವಾಗಿದೆ ಎಂದು ಹೇಳಿದೆ. ಒಂದು ವೇಳೆ ಅಫ್ಘಾನಿಸ್ತಾನ (Afghanistan) ತಂಡಕ್ಕೆ ಸ್ಥಳ ಬದಲಾವಣೆ ಮಾಡಿದರೆ ಇದರ ಪ್ರಯೋಜನ ಪಾಕಿಸ್ತಾನ ಪಡೆಯುತ್ತದೆ. ಹಾಗಾಗಿ ಐಸಿಸಿ ಈ ಮನವಿಯನ್ನ ಪರಿಗಣಿಸುವುದು ಅನುಮಾನವಿದೆ. ಒಂದು ವೇಳೆ ಪಾಕಿಸ್ತಾನ ಭದ್ರತೆಗೆ ಸಂಬಂಧಿಸಿದಂತೆ ಮೌಲ್ಯಯುತ ಕಾರಣ ನೀಡಿದ್ರೆ ಪಂದ್ಯ ಸ್ಥಳಾಂತರಕ್ಕೆ ಅನುಮತಿ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಚೆನ್ನೈ ಪಿಚ್‌ ಸ್ಪಿನ್‌ಗೆ ಪೂರಕವಾಗಿದೆ, ಆಸ್ಟ್ರೇಲಿಯಾ-ಅಫ್ಘಾನಿಸ್ತಾನದ ಎದುರು ಆಡುವುದಾದರೆ ಈಗಾಗಲೇ ಆ ಪಿಚ್‌ನಲ್ಲಿ ಅನುಭವ ಹೊಂದಿರುವ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ. 2023ರ ಐಪಿಎಲ್‌ ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದ ಆಫ್ಘನ್‌ ಬೌಲರ್‌ಗಳಾದ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಈಗಾಗಲೇ ಈ ಪಿಚ್‌ನಲ್ಲಿ ಆಡಿರುವ ಅನುಭವ ಪಡೆದಿದ್ದಾರೆ. ಆದ್ರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಪಿಚ್‌ ಆಗಿದ್ದು, ಪಾಕಿಸ್ತಾನ ಎದುರಾಳಿ ತಂಡವನ್ನ ಹೇಗೆ ಎದುರಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

  • ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಇಸ್ಲಾಮಾಬಾದ್‌/ಮುಂಬೈ: BCCI ತಮ್ಮ ತಂಡವನ್ನ ನಮ್ಮ ದೇಶಕ್ಕೆ ಕಳುಹಿಸಲು ಒಪ್ಪಿಕೊಳ್ಳುವವರೆಗೂ ಈ ವರ್ಷದ ICC ವಿಶ್ವಕಪ್‌ (ODI WorldCup) ಸೇರಿದಂತೆ ಯಾವುದೇ ಪಂದ್ಯಗಳಿಗೂ ಪಾಕಿಸ್ತಾನ (Pakistan) ನೆರೆಯ ದೇಶಕ್ಕೆ ಹೋಗುವುದಿಲ್ಲ ಎಂದು ಪಾಕ್‌ ತಂಡದ ಮಾಜಿ ನಾಯಕ ಜಾವೆದ್‌ ಮಿಯಾಂದದ್‌ ಹೇಳಿದ್ದಾರೆ.

    ಪ್ರತಿಷ್ಠಿತ ಏಷ್ಯಾ ಕಪ್‌ (ODI AisaCup) ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಪಾಕಿಸ್ತಾನಕ್ಕೆ ಭಾರತ ತಂಡವನ್ನ (Team India) ಕಳುಹಿಸಲು ನಿರಾಕರಿಸುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ವಿರುದ್ಧ ಪಾಕ್‌ ಹಿರಿಯ ಕ್ರಿಕೆಟಿಗರು ಹರಿಹಾಯ್ದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ʻಭಾರತ ತಂಡ ನರಕಕ್ಕೆ ಹೋಗಲಿʼ ಎಂದು ನಾಲಗೆ ಹರಿಬಿಟ್ಟಿದ್ದ ಜಾವೆದ್‌ ಮಿಯಾಂದದ್‌, ಪಾಕ್‌ ತಂಡ ಭಾರತಕ್ಕೆ ಹೋಗದಂತೆ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    2023ರ ಏಷ್ಯಾ ಕಪ್‌ ಟೂರ್ನಿಯ ಆಯೋಜನೆಗೆ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ತಟಸ್ಥ ಸ್ಥಳಗಳನ್ನ ಆಯ್ಕೆ ಮಾಡಿದೆ. ಭಾರತ ತಂಡದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದರೆ, ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ಜರುಗಲಿವೆ. ಏಷ್ಯಾಕಪ್‌ ಕ್ರಿಕೆಟ್‌ ಸಮಿತಿ ಈ ನಿರ್ಧಾರವನ್ನ ಜಾವೆದ್‌ ಮಿಯಾಂದದ್‌ ವಿರೋಧಿಸಿದ್ದರು. ಪಾಕಿಸ್ತಾನಕ್ಕೆ ಭಾರತ ತಂಡ ಬಂದಿಲ್ಲವಾದರೆ, ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಹೋಗುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು.

    ಮತ್ತೊಮ್ಮೆ ಈ ಬಗ್ಗೆ ಮಾತನಾಡಿರುವ ಮಿಯಾಂದ್‌, ಬಿಸಿಸಿಐ ತನ್ನ ತಂಡವನ್ನ ಪಾಕ್‌ಗೆ ಕಳುಹಿಸಲು ಒಪ್ಪಿಕೊಳ್ಳುವವರೆಗೂ ಪಾಕಿಸ್ತಾನ ಐಸಿಸಿ ವಿಶ್ವಕಪ್‌ ಸೇರಿದಂತೆ ಯಾವುದೇ ಪಂದ್ಯಗಳಿಗೆ ಭಾರತಕ್ಕೆ ಹೋಗಬಾರದು ಎಂದು ಕರೆ ನೀಡಿದ್ದಾರೆ.

    ಸದ್ಯ ಐಸಿಸಿ ಸಿದ್ಧಪಡಿಸಿರುವ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್‌ ಕದನ ನಡೆಯಲಿದೆ. ಆದ್ರೆ ಅದಕ್ಕೆ ತಗಾದೆ ತೆಗೆದಿರುವ ಮಿಯಾಂದ್‌ ಪಾಕಿಸ್ತಾನ ತಂಡ 2012 ಮತ್ತು 2016ರಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಹಾಗಾಗಿ ಭಾರತ ತಂಡ ಕೂಡ ಇಲ್ಲಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

    ನಾವು ಭಾರತದೊಂದಿಗೆ ಆಡಲು ಸಿದ್ಧರಿದ್ದೇವೆ, ಆದ್ರೆ ಅವರೂ ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಹಾಗಾಗಿ ನಾವು ಯಾವುದೇ ಪಂದ್ಯವನ್ನಾಡಲು ಭಾರತಕ್ಕೆ ಹೋಗುವುದಿಲ್ಲ ಎಂದರಲ್ಲದೆ, ಪಾಕಿಸ್ತಾನ ಕ್ರಿಕೆಟ್‌ ತುಂಬಾ ದೊಡ್ಡದು, ನಾವು ಇನ್ನೂ ಗುಣಮಟ್ಟದ ಆಟಗಾರರನ್ನ ಉತ್ಪಾದಿಸುತ್ತೇವೆ. ಭಾರತಕ್ಕೆ ಹೋಗದಿದ್ದರೂ ನಮ್ಮ ತಂಡದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

    ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?:
    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳು ಭಾಗಿಯಾಗಿದ್ದವು. ನಂತರ ಏಷ್ಯಾಕಪ್‌ ಆಡಲು ಭಾರತ ತಂಡವನ್ನು ತನ್ನ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಮನವಿಯನ್ನು ನಿರಾಕರಿಸಿದ್ದರು.

  • Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

    Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

    ದುಬೈ: ಏಷ್ಯಾಕಪ್‌ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB)ಯ ಪ್ರಸ್ತಾವನೆಯನ್ನ ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದ ನಂತರ ಏಷ್ಯಾಕಪ್‌ ಟೂರ್ನಿಯನ್ನ ದೇಶದಿಂದಲೇ ಸ್ಥಳಾಂತರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.‌

    ಸೆಪ್ಟೆಂಬರ್‌ 2 ರಿಂದ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್‌ನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಅಫ್ಘಾನಿಸ್ತಾನ, ಶ್ರೀಲಂಕಾ (SriLanka) ಹಾಗೂ ಬಾಂಗ್ಲಾದೇಶ ಸೇರಿ 6 ದೇಶಗಳು ಸ್ಪರ್ಧಿಸಲಿವೆ. ಸದ್ಯ 6 ರಾಷ್ಟ್ರಗಳ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಶ್ರೀಲಂಕಾ ಮುಂಚೂಣಿಯಲ್ಲಿದ್ದು, ಈ ಬಾರಿ ಆತಿಥ್ಯ ವಹಿಸಿಕೊಳ್ಳುವ ಸಾಧ್ಯತೆಯಿದೆ. ಆದ್ರೆ ಆತಿಥ್ಯ ಕೈತಪ್ಪಿದಲ್ಲಿ ಪಾಕಿಸ್ತಾನ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತದೆಯೇ ಇಲ್ಲವೇ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ನಿರಾಕರಿಸಿದ ನಂತರ ಪಿಸಿಬಿ ಹೈಬ್ರಿಡ್‌ ಮಾದರಿಯ ಪ್ರಸ್ತಾವನೆಯನ್ನು ಐಸಿಸಿ ಮುಂದಿಟ್ಟಿತ್ತು. ಪಾಕಿಸ್ತಾನವು ಆತಿಥೇಯ ದೇಶಗಳೊಂದಿಗೆ ತವರಿನಲ್ಲಿ ಹಾಗೂ ಭಾರತ ಪ್ರತಿಸ್ಪರ್ಧಿ ದೇಶಗಳೊಂದಿಗೆ ಆಡುವಾಗ ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಹೇಳಿತ್ತು. ಆದ್ರೆ ಸದಸ್ಯ ರಾಷ್ಟ್ರಗಳು ಈ ಪ್ರಸ್ತಾಪವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಪಾಕ್‌ನಿಂದ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಸಿಲಾಗುತ್ತಿದೆ. ಈ ಬಗ್ಗೆ ಮತತೊಂದು ಸುತ್ತಿನಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: AisaCup ಕ್ರಿಕೆಟ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗಲ್ಲ: BCCI ಅಧಿಕೃತ ಪ್ರಕಟ

    ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?:
    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳು ಭಾಗಿಯಾಗಿದ್ದವು. ನಂತರ ಏಷ್ಯಾಕಪ್‌ ಆಡಲು ಭಾರತ ತಂಡವನ್ನು ತನ್ನ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಮನವಿಯನ್ನು ನಿರಾಕರಿಸಿದ್ದರು.

  • AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಇಸ್ಲಾಮಾಬಾದ್‌: ಏಕದಿನ ಏಷ್ಯಾಕಪ್‌ 2023ರ (ODI AisaCup) ಟೂರ್ನಿಗೆ ಭಾರತ ತಂಡ (Team India) ಪಾಲ್ಗೊಳ್ಳುವ ವಿಚಾರದಲ್ಲಿ ಕೊನೆಗೂ ಭಾರತದ ಎದುರು ಪಾಕಿಸ್ತಾನ (Pakistan) ಮಂಡಿಯೂರಿದೆ.

    ಪಾಕಿಸ್ತಾನವು ಆತಿಥೇಯ ದೇಶಗಳೊಂದಿಗೆ ತವರಿನಲ್ಲಿ ಹಾಗೂ ಭಾರತ ಪ್ರತಿಸ್ಪರ್ಧಿ ದೇಶಗಳೊಂದಿಗೆ ಆಡುವಾಗ ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಹೇಳಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ನಜಮ್‌ ಸೇಥಿ (Najam Sethi) ಶುಕ್ರವಾರ ಈ ವಿಷಯವನ್ನು ಬೋರ್ಡ್‌ನಲ್ಲಿ ಪ್ರಸ್ತಾಪಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ICC) ಪ್ರಸ್ತಾವನೆ ಕಳುಹಿಸಿದ್ದಾರೆ. ಇದನ್ನೂ ಓದಿ: ಲೀಗ್‌ ಹಂತದಲ್ಲೇ ಹಲವು ಸಮಸ್ಯೆ – ಈ ಸಲ ಕಪ್‌ ಗೆಲ್ಲುತ್ತಾ RCB?

    ಸೆಪ್ಟೆಂಬರ್‌ 2 ರಿಂದ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್‌ನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೇರಿ 6 ದೇಶಗಳು ಸ್ಪರ್ಧಿಸಲಿವೆ. ಭಾರತ ತಟಸ್ಥ ಸ್ಥಳದಲ್ಲಿ ಆಡುವ ಕುರಿತು ಐಸಿಸಿ ನಿರ್ಧಾರ ಪ್ರಕಟಿಸಿದ ಬಳಿಕ ಪಂದ್ಯಗಳ ನಿರ್ಣಾಯಕ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪಿಸಿಬಿ ಹೇಳಿದೆ. ಇದನ್ನೂ ಓದಿ: ಕೊಹ್ಲಿ ಮತ್ತೆ ನಾಯಕನಾಗಲು ಇದೇ ಕಾರಣ – ನೋವಿನಲ್ಲೂ RCB ತಂಡಕ್ಕಾಗಿ ಅಬ್ಬರಿಸಿದ ಡುಪ್ಲೆಸಿಸ್‌

    ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭೂಟ್ಟೊ ಜರ್ದಾರಿ ಅವರು ಮೇ 4 ಹಾಗೂ 5 ರಂದು ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ನಿರ್ವಹಿಸಲಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಈ ಮಹತ್ವದ ಬೆಳವಣಿಗೆಯಿಂದ ಮುಂದೆ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಪಾಕಿಸ್ತಾನದಲ್ಲಿ ಆಡುವ ಸಾಧ್ಯತೆಯಿದೆ. ಅದಕ್ಕಾಗಿ ಏಷ್ಯಾಕಪ್‌ ಅನ್ನು ತಟಸ್ಥ ಸ್ಥಳದಲ್ಲಿ ಆಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

    ಭಾರತವು ತನ್ನ ದೇಶದಲ್ಲಿ ಕ್ರಿಕೆಟ್‌ ಆಡಬೇಕೆಂದು ಇಲ್ಲಿನ ಜನ ಬಯಸಿದ್ದಾರೆ. ನಮ್ಮ ಸರ್ಕಾರವೂ ಭಾರತದ ವಿರುದ್ಧ ಆಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ನಾವು ಭಾರತದೊಂದಿಗೆ ಗೌರವಯುತವಾಗಿ ಕ್ರಿಕೆಟ್‌ ಆಡಲು ಬಯಸುತ್ತೇವೆ. ಇದರಿಂದ ಪಾಕಿಸ್ತಾನದ ಆರ್ಥಿಕತೆಯೂ ಅಭಿವೃದ್ಧಿಯಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ನಜಮ್‌ ಸೇಥಿ ತಿಳಿಸಿದ್ದಾರೆ.

    ಏಕದಿನ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ತಟಸ್ಥ ಸ್ಥಳದಲ್ಲಿ ಆಡುವ ಬಗ್ಗೆ ಬಿಸಿಸಿಐ ಆಗಲಿ, ಐಸಿಸಿ ಆಗಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

    ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ: ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳು ಭಾಗಿಯಾಗಿದ್ದವು. ನಂತರ ಏಷ್ಯಾಕಪ್‌ ಆಡಲು ಭಾರತ ತಂಡವನ್ನು ತನ್ನ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಮನವಿಯನ್ನು ನಿರಾಕರಿಸಿದ್ದರು.