Tag: ODI World Cup

  • ಬೃಹತ್‌ ಜಯದ ನಿರೀಕ್ಷೆಯಲ್ಲಿ ಪಾಕಿಸ್ತಾನ – ಸೆಮಿಸ್‌ ಹಾದಿಯ ಲೆಕ್ಕಾಚಾರ ಏನು?

    ಬೃಹತ್‌ ಜಯದ ನಿರೀಕ್ಷೆಯಲ್ಲಿ ಪಾಕಿಸ್ತಾನ – ಸೆಮಿಸ್‌ ಹಾದಿಯ ಲೆಕ್ಕಾಚಾರ ಏನು?

    ಮುಂಬೈ: ಸತತ 6 ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ (Team India) ಒಟ್ಟಾರೆ 12 ಅಂಕ ಕಲೆಹಾಕುವುದರೊಂದಿಗೆ ICC ಏಕದಿನ ವಿಶ್ವಕಪ್ (World Cup 2023) 13ನೇ ಆವೃತ್ತಿಯಲ್ಲಿ ಸೆಮಿಫೈನಲ್ಸ್ (World Cup Semi Final) ಸನಿಹಗೊಂಡಿದೆ. ನಾಕೌಟ್ ಹಂತಕ್ಕೆ ನೇರ ಪ್ರವೇಶ ಪಡೆಯಲು ಭಾರತ ಇನ್ನೊಂದೇ ಒಂದು ಪಂದ್ಯ ಗೆಲ್ಲಬೇಕಿದೆ. ಈಗಾಗಲೇ 12 ಅಂಕ ಪಡೆದಿರುವ ಭಾರತ ಇನ್ನೊಂದು ಪಂದ್ಯ ಗೆದ್ದರೆ 14 ಅಂಕಗಳೊಂದಿಗೆ ನೇರವಾಗಿ ಸೆಮಿಸ್‌ಗೆ ಎಂಟ್ರಿ ಕೊಡಲಿದೆ.

    40 ಲೀಗ್‌ ಪಂದ್ಯಗಳಲ್ಲಿ ಈಗಾಗಲೇ 30 ಪಂದ್ಯಗಳು ಮುಗಿದಿವೆಯಾದರೂ ಯಾವೊಂದು ತಂಡವೂ ಇನ್ನೂ ಅಧಿಕೃತವಾಗಿ ನಾಕೌಟ್‌ಗೆ ಅರ್ಹತೆ ಗಳಿಸಿಲ್ಲ. ಆದ್ರೆ 12 ಅಂಕ ಗಳಿಸಿ ಟಾಪ್‌ನಲ್ಲಿರುವ ಭಾರತ ಬಹುತೇಕ ಸೆಮಿಸ್‌ ಅರ್ಹತೆಯನ್ನು ಖಚಿತಪಡಿಸಿಕೊಂಡಿದೆ. ನವೆಂಬರ್‌ 2 ರಂದು ಶ್ರೀಲಂಕಾ ವಿರುದ್ಧ, ನವೆಂಬರ್‌ 5 ರಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮತ್ತು ನವೆಂಬರ್‌ 12 ರಂದು ನೆದರ್ಲೆಂಡ್ಸ್‌ ವಿರುದ್ಧ ಆಡಲಿರುವ ರೋಹಿತ್‌ ಸೈನ್ಯ ತನ್ನೆಲ್ಲಾ ಪಂದ್ಯಗಳಲ್ಲಿ ಸೋತರೂ ಅಗ್ರ 4 ಸ್ಥಾನಗಳಲ್ಲಿ ನಾಕೌಟ್‌ ಪ್ರವೇಶಿಸುವ ಅವಕಾಶ ಹೊಂದಿದೆ.

    ಈಗಾಗಲೇ 6 ಪಂದ್ಯಗಳಲ್ಲಿ 5 ರಲ್ಲಿ ಸೋತಿರುವ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌, ಮತ್ತು ಬಾಂಗ್ಲಾದೇಶ ತಂಡಗಳು ಸೆಮಿ ಫೈನಲ್ಸ್ ಸ್ಪರ್ಧೆಯಿಂದ ಹೊರಗುಳಿವೆ. ಈ ತಂಡಗಳು ತಮ್ಮ ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ತಲಾ ಅಂಕಗಳಿಗೆ 8 ಸೀಮಿತಗೊಳ್ಳಿವೆ. ಇನ್ನೂ 10 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ +2.032 ರನ್‌ ರೇಟ್‌ನೊಂದಿಗೆ ಅಂಕ ಪಡೆದಿದ್ದು, ಸೆಮಿಸ್‌ ತಲುಪುವ ಹಾದಿ ಸುಗಮವಾಗಿಸಿಕೊಂಡಿವೆ. 3 ಮತ್ತು 4ನೇ ಸ್ಥಾನದ ಪೈಪೋಟಿಗಾಗಿ ಕಿವೀಸ್‌ (New Zealand), ಆಸೀಸ್‌ (Australia), ಅಫ್ಘಾನ್‌ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

    6 ಪಂದ್ಯಗಳಲ್ಲಿ ತಲಾ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ಎಲ್ಲ ಪಂದ್ಯಗಳಲ್ಲೂ ಅತ್ಯಧಿಕ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದಲ್ಲಿ ಮಾತ್ರ 4ನೇ ಸ್ಥಾನಕ್ಕೆ ಜಿಗಿಯಬಹುದಾಗಿದೆ. ಇಷ್ಟೇ ಸಾಲುವುದಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳೂ ಮುಂದಿನ ಪಂದ್ಯಗಳಲ್ಲಿ ಸೋತರಷ್ಟೇ ಈ ಚಾನ್ಸ್‌ ಸಿಗಲಿದೆ ಎನ್ನಲಾಗಿದೆ.

    ಪಾಕ್‌ಗೆ ಮಾಡು ಇಲ್ಲವೇ ಮಡಿ: ಇನ್ನೂ ತನ್ನ ಸೆಮಿಸ್‌ ಹಾದಿಯ ಕನಸು ಕಂಡಿರುವ ಪಾಕಿಸ್ತಾನ ತಂಡ ಇಂದು (ಅ.31) ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಸೆಮಿಸ್‌ ಹಾದಿ ಸುಗಮವಾಗಿಸಿಕೊಳ್ಳಲು ಉತ್ತಮ ರನ್‌ರೇಟ್‌ನೊಂದಿಗೆ ಜಯ ದಾಖಲಿಸುವ ಕನಸು ಕಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ

    ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ

    ಚೆನ್ನೈ: ಟೀಂ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‍ನ (ODI World Cup) ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ ಗೆದ್ದ ಬಳಿಕ ಅವರಿಗೆ ಅತ್ಯುತ್ತಮ ಫಿಲ್ಡಿಂಗ್‍ಗಾಗಿ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ಪದಕ ಪಡೆದರು.

    ಕೋಚ್ ಪದಕ ನೀಡುತ್ತಿರುವ ವೀಡಿಯೋವನ್ನು ಬಿಸಿಸಿಐ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇದೇ ವೇಳೆ ಶ್ರೇಯಸ್ ಅಯ್ಯರ್ ಅವರ ಫೀಲ್ಡಿಂಗ್ ಪ್ರಯತ್ನಗಳಿಗಾಗಿ ಮೆಚ್ಚುಗೆಯನ್ನೂ ದಿಲೀಪ್ ಅವರು ವ್ಯಕ್ತಪಡಿಸಿದರು. ತಂಡದ ಒಟ್ಟಾರೆ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಸ್ಲಿಪ್‍ನಲ್ಲಿದ್ದ ಕೊಹ್ಲಿ ಮೈದಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಬುಮ್ರಾ ಎಸೆತದಲ್ಲಿ ಹಾರಿ ಮಿಚೆಲ್ ಮಾರ್ಷ್ ಅವರ ಕ್ಯಾಚನ್ನು ಪಡೆದರು. ಈ ಮೂಲಕ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಮುನ್ನಡೆ ಲಭಿಸಿತು. ಆಸ್ಟ್ರೇಲಿಯಾದ 199 ರನ್‍ಗಳನ್ನು ಬೆನ್ನಟ್ಟಿದ ಭಾರತ 6 ವಿಕೆಟ್‍ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿತು.

    ಚೇಸಿಂಗ್ ಆರಂಭಿಸಿದ ಭಾರತ 2ನೇ ಓವರ್‍ನಲ್ಲಿ ಕೇವಲ 2 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತ್ತು. ಬಳಿಕ 4ನೇ ವಿಕೆಟ್‍ಗೆ ಜೊತೆಯಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಜೋಡಿ ಆಟವನ್ನು ಮುಂದುವರಿಸಿತು. 15 ಓವರ್ ಪೂರ್ಣಗೊಂಡರೂ ಭಾರತ 49 ರನ್ ಗಳಿಸಿದ್ದರಿಂದ ಗೆಲವು ಅಸಾಧ್ಯವೆಂದೇ ಅಭಿಮಾನಿಗಳು ನಿರಾಸೆಯಲ್ಲಿದ್ದರು. ಬಳಿಕ ಸಮಯೋಚಿತ ಬ್ಯಾಟಿಂಗ್ ನಿಂದ ಒಂದೊಂದೇ ಬೌಂಡರಿಗಳನ್ನ ಸಿಡಿಸುತ್ತಾ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು.

    ಇವರಿಬ್ಬರ ಜೊತೆಯಾಟದಿಂದ ಭಾರತ 35 ಓವರ್‍ಗಳಲ್ಲಿ 151 ರನ್ ಬಾರಿಸಿತ್ತು. 4ನೇ ವಿಕೆಟ್‍ಗೆ ಕೆ.ಎಲ್ ರಾಹುಲ್ ಹಾಗೂ ಕೊಹ್ಲಿ 215 ಎಸೆತಗಳಲ್ಲಿ 165 ರನ್‍ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 85 ರನ್ ಚಚ್ಚಿ ಶತಕ ವಂಚಿರಾದರು. ಇನ್ನೂ ಕೊನೆಯವರೆಗೂ ಹೋರಾಡಿದ ಕೆ.ಎಲ್ ರಾಹುಲ್ 115 ಎಸೆತಗಳಲ್ಲಿ 97 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 11 ರನ್ ಕೊಡುಗೆ ನೀಡಿದರು.

    ಮುಂಬರುವ ಪಂದ್ಯದಲ್ಲಿ ಭಾರತವು ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಮೂರೇ ಪಂದ್ಯ – ಆರು ದಾಖಲೆ

    World Cup 2023: ಮೂರೇ ಪಂದ್ಯ – ಆರು ದಾಖಲೆ

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ (ICC World Cup) ಟೂರ್ನಿಯೂ ಅತ್ಯಂತ ವಿಶೇಷವಾಗಿದ್ದು, ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಸಿಡಿಯುತ್ತಲೇ ಇವೆ. ಆರಂಭಿಕ ಪಂದ್ಯದಲ್ಲೇ ಹಾಲಿಚಾಂಪಿಯನ್ಸ್‌ ಇಂಗ್ಲೆಂಡ್‌ (England) ತಂಡವನ್ನು ಬಗ್ಗು ಬಡಿದಿದ್ದ ಕಿವೀಸ್‌ ಚೊಚ್ಚಲ ಪಂದ್ಯದಲ್ಲೇ ದಾಖಲೆ ಸೃಷ್ಟಿಸಿತ್ತು.

    ಕಿವೀಸ್‌ ಆಟಗಾರರಾದ ಡಿವೋನ್‌ ಕಾನ್ವೆ ಮತ್ತು ರಚಿನ್‌ ರವೀಂದ್ರ 211 ಎಸೆತಗಳಲ್ಲಿ 273 ರನ್‌ ಜೊತೆಯಾಟ ನೀಡುವ ಮೂಲಕ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ದಾಖಲೆಯನ್ನ ಉಡೀಸ್‌ ಮಾಡಿದ್ದರು. ಅಷ್ಟೇ ಅಲ್ಲ ರಚಿನ್ ರವೀಂದ್ರ ಚೊಚ್ಚಲ ವಿಶ್ವಕಪ್​ನಲ್ಲೇ ಶತಕ ಸಿಡಿಸಿದ ವಿಶ್ವದ 16ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ 11 ಆಟಗಾರರೂ ಮೊದಲ ಬಾರಿಗೆ ಎರಡಂಕಿಯ ಸ್ಕೋರ್‌ ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

    ಆದ್ರೆ ಶನಿವಾರ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ವಿಶ್ವದಾಖಲೆಗಳ ಸುರಿಮಳೆಗೈದಿತು. ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಏಡನ್ ಮಾರ್ಕ್ರಮ್ (Adien Markram) ಅತ್ಯಂತ ವೇಗದ ಶತಕ ಸಿಡಿಸಿ 12 ವರ್ಷಗಳ ಹಳೆಯ ದಾಖಲೆಯನ್ನ ಉಡೀಸ್ ಮಾಡಿದರು. ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ 428 ರನ್ ಬಾರಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಸಿಡಿಸಿದ ವಿಶ್ವದಾಖಲೆಯನ್ನೂ ಮಾಡಿತು.

    ಟಾಸ್‌ ಸೋತು ಲಂಕಾ ವಿರುದ್ಧ ಮೊದಲು ಕ್ರೀಸ್‌ಗಿಳಿಸಿದ ದಕ್ಷಿಣ ಆಫ್ರಿಕಾ (South Africa) ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಹಾಗೂ ರಾಸಿ ವಾನ್‌ ಡೆರ್‌ ಡುಸೆನ್ ಇಬ್ಬರೂ ಭರ್ಜರಿ ಶತಕ ಸಿಡಿಸಿದರು. ಈ ಜೋಡಿ ವಿಕೆಟ್‌ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡೆನ್‌ ಮಾರ್ಕ್ರಮ್‌, ಲಂಕಾ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಮಾರ್ಕ್ರಮ್‌, 49 ಎಸೆತಗಳಲ್ಲೇ ಶತಕ ಸಿಡಿಸಿದರು. ಆ ಮೂಲಕ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ಸಿಡಿಸಿದ್ದ ಐರ್ಲೆಂಡ್ ಆಟಗಾರ ಕೆವಿನ್ ಓಬ್ರಿಯಾನ್ ದಾಖಲೆಯನ್ನ ನುಚ್ಚು ನೂರು ಮಾಡಿದರು. ಜೊತೆಗೆ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಮಾರ್ಕ್ರಮ್‌ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ 106 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.

    2015ರ ವಿಶ್ವಕಪ್‌ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎಬಿಡಿ ವಿಲಿಯರ್ಸ್‌ 31 ಎಸೆತಗಳಲ್ಲೇ ಶತಕ ಸಿಡಿಸಿರುವುದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಏಕದಿನ ವಿಶ್ವಕಪ್‌ನಲ್ಲಿ ಮೂಡಿಬಂದ ವೇಗದ ಶತಕಗಳು
    * ಏಡೆನ್ ಮಾರ್ಕ್ರಮ್ – ದಕ್ಷಿಣ ಆಫ್ರಿಕಾ- 49 ಎಸೆತಗಳು- ಶ್ರೀಲಂಕಾ ವಿರುದ್ಧ – ಹೊಸದಿಲ್ಲಿ- 2023
    * ಕೆವಿನ್ ಓಬ್ರಿಯನ್- ಐರ್ಲೆಂಡ್- 50 ಎಸೆತಗಳು- ಇಂಗ್ಲೆಂಡ್ ವಿರುದ್ಧ-ಬೆಂಗಳೂರು- 2011
    * ಗ್ಲೆನ್ ಮ್ಯಾಕ್ಸ್‌ವೆಲ್- ಆಸ್ಟ್ರೇಲಿಯಾ- 51 ಎಸೆತಗಳು- ಶ್ರೀಲಂಕಾ ವಿರುದ್ಧ- ಸಿಡ್ನಿ- 2015
    * ಎಬಿ ಡಿ ವಿಲಿಯರ್ಸ್- ದಕ್ಷಿಣ ಆಫ್ರಿಕಾ- 52 ಎಸೆತಗಳು- ವೆಸ್ಟ್ ಇಂಡೀಸ್ ವಿರುದ್ಧ- ಸಿಡ್ನಿ- 2015
    * ಐಯಾನ್ ಮಾರ್ಗನ್- ಇಂಗ್ಲೆಂಡ್- 57 ಎಸೆತಗಳು- ಆಫಾಘಾನಿಸ್ತಾನ ವಿರುದ್ಧ- ಓಲ್ಡ್ ಟಾಫರ್ಡ್- 2019

    ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು
    * 31 ಎಸೆತಗಳು – ಎಬಿಡಿ ವಿಲಿಯರ್ಸ್ – ವೆಸ್ಟ್ ಇಂಡೀಸ್ ವಿರುದ್ಧ- 2015
    * 44 ಎಸೆತಗಳು- ಮಾರ್ಕ್ ಬೌಚರ್- ಜಿಂಬಾಬ್ವೆ ವಿರುದ್ಧ-2006
    * 49 ಎಸೆತಗಳು- ಏಡೆನ್ ಮಾರ್ಕ್ರಮ್- ಶ್ರೀಲಂಕಾ ವಿರುದ್ಧ- 2023
    * 52 ಎಸೆತಗಳು- ಎಬಿಡಿ ವಿಲಿಯರ್ಸ್- ವೆಸ್ಟ್ ಇಂಡೀಸ್ ವಿರುದ್ಧ- 2015

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    ನವದೆಹಲಿ: ಸ್ಫೋಟಕ ಬ್ಯಾಟಿಂಗ್‌ ಮತ್ತು ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ, ಶ್ರೀಲಂಕಾ ವಿರುದ್ಧ 102 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಆದ್ರೆ ವಿಕೆಟ್‌ ಉರುಳಿದರೂ ಕೊನೆಯವರೆಗೂ ಹೋರಾಟ ನಡೆಸಿದ ಶ್ರೀಲಂಕಾ ತಂಡ ಸೋಲನುಭವಿಸಿದೆ.

    ಶನಿವಾರ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 429 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಸತತ ಹೋರಾಟದ ಹೊರತಾಗಿಯೂ 44.5 ಓವರ್‌ಗಳಲ್ಲಿ 326 ರನ್‌ ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಒಂದೆಡೆ ವಿಕೆಟ್‌ ಕಳೆದುಕೊಂಡರೂ ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸಿದ ಲಂಕಾ ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ಆರಂಭದಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡ ಲಂಕಾ ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ 3ನೇ ವಿಕೆಟ್‌ಗೆ ಕುಸಾಲ್ ಪೆರೆರಾ ಹಾಗೂ ಕುಸಲ್‌ ಮೆಂಡೀಸ್‌ ರಿಂದ 40 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಚರಿತ್‌ ಅಹಲಂಕಾ 65 ಎಸೆತಗಳಲ್ಲಿ 79 ರನ್‌ (4 ಸಿಕ್ಸರ್‌, 8 ಬೌಂಡರಿ) ಸಿಡಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು.

    ಒಂದೆಡೆ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದರೂ ಮತ್ತೊಂದೆಡೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ದಕ್ಷಿಣಾ ಆಫ್ರಿಕಾ ಬೌಲರ್‌ಗಳ ದಾಳಿಗೆ ತುತ್ತಾಗಿ ವಿಕೆಟ್‌ ಒಪ್ಪಿಸುತ್ತಿದ್ದರು. ಇದು ಲಂಕಾ ತಂಡನ್ನು ಸೋಲಿನ ಸುಳಿಗೆ ತಳ್ಳಿತ್ತು. ಕೊನೆಯಲ್ಲಿ ನಾಯಕ ದಸುನ್‌ ಶನಾಕ ಹೋರಾಟ ಕೂಡ ವ್ಯರ್ಥವಾಯಿತು. ಶನಾಕ 62 ಎಸೆತಗಳಲ್ಲಿ 68 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿಸಿದರೆ, ಕಸುನ್ ರಜಿತಾ 31 ಎಸೆತಗಳಲ್ಲಿ 33 ರನ್‌, ಮಥೀಶ ಪಥಿರಣ 5 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಲಂಕಾ 44.5 ಓವರ್‌ಗಳಲ್ಲಿ 326 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ದಕ್ಷಿಣಾ ಆಫ್ರಿಕಾ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಜೆರಾಲ್ಡ್ ಕೋಟ್ಜಿ 3 ವಿಕೆಟ್‌ ಕಿತ್ತರೆ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ತಲಾ ಎರಡೆರಡು ವಿಕೆಟ್‌ ಉರುಳಿಸಿದರು, ಲುಂಗಿ ಎನ್‌ಗಿಡಿ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 428 ರನ್‌ ಬಾರಿಸುವ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿತು. ಈ ಪೈಕಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ (Quinton de Kock) ಹಾಗೂ ತೆಂಬಾ ಬಹುಮಾ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರೂ 2ನೇ ವಿಕೆಟ್‌ಗೆ ಜೊತೆಯಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಡಿಕಾಕ್‌ ಜೋಡಿ 174 ಎಸೆತಗಳಲ್ಲಿ 204 ರನ್‌ ಸಿಡಿಸಿತ್ತು. ಡಿಕಾಕ್‌ 84 ಎಸೆತಗಳಲ್ಲಿ 100 ರನ್‌ (3 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, ಡುಸ್ಸೆನ್‌ 110 ಎಸೆತಗಳಲ್ಲಿ 108 ರನ್‌ (2 ಸಿಕ್ಸರ್‌, 13 ಬೌಂಡರಿ) ಬಾರಿಸಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್‌ ಮಾರ್ಕ್ರಮ್‌ (Adien Markram) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 196.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಾರ್ಕ್ರಮ್‌ 49 ಎಸೆತಗಳಲ್ಲೇ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಒಟ್ಟು 54 ಎಸೆತಗಳಲ್ಲಿ 106 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ಹೆನ್‌ರಿಚ್‌ ಕ್ಲಾಸೆನ್‌ 32 ರನ್‌, ಡೇವಿಡ್‌ ಮಿಲ್ಲರ್‌ 21 ಎಸೆತಗಳಲ್ಲಿ ಅಜೇಯ 39 ರನ್‌ ಹಾಗೂ ಮಾರ್ಕೊ ಜಾನ್ಸೆನ್‌ ಅಜೇಯ 12 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 428 ರನ್‌ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 2 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಮತೀಶ ಪಥಿರಣ, ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    World Cup 2023: ಭಾರತದ ನೆಲದಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ

    ನವದೆಹಲಿ: ಭಾರತದ ಆತಿಥ್ಯದಲ್ಲಿ ವಿಶ್ವಕಪ್‌ (ODI World Cup) ಟೂರ್ನಿ ಶುರುವಾಗಿದ್ದು, ದಕ್ಷಿಣ ಆಫ್ರಿಕಾ (South Africa) ತಂಡ ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ಬರೆದಿದೆ.

    ಶನಿವಾರ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 428 ರನ್‌ ಬಾರಿಸಿದೆ. ಈ ಪೈಕಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಶತಕ ಸಿಡಿಸಿರುವುದು ವಿಶೇಷ. ಅಲ್ಲದೇ ಇದು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ ಸಹ ಆಗಿದೆ. ಇದನ್ನೂ ಓದಿ: ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    2015ರ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾ (Australia) 6 ವಿಕೆಟ್‌ ನಷ್ಟಕ್ಕೆ 417 ರನ್‌ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದಕ್ಕೂ ಮುನ್ನ 2007ರ ವಿಶ್ವಕಪ್‌ನಲ್ಲಿ ಭಾರತ ತಂಡ ಬರ್ಮುಡಾ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 413 ರನ್‌, ದಕ್ಷಿಣ ಆಫ್ರಿಕಾ 2015ರ ಫೆಬ್ರವರಿ 27ರಂದು ವೆಸ್ಟ್‌ ಇಂಡೀಸ್‌ ವಿರುದ್ಧ 408 ರನ್‌ ಹಾಗೂ ಮಾರ್ಚ್‌ 3 ರಂದು ಐರ್ಲೆಂಡ್‌ ವಿರುದ್ಧ 411 ರನ್‌ ಸಿಡಿಸಿ ದಾಖಲೆ ಬರೆದಿತ್ತು. ಇದೀಗ 428 ರನ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದೆ. ಇದನ್ನೂ ಓದಿ: World Cup 2023: ನೆದರ್ಲ್ಯಾಂಡ್ಸ್‌ ವಿರುದ್ಧ 81 ರನ್‌ಗಳ ಜಯ – ಬೌಲರ್‌ಗಳ ಕೈಚಳಕದಿಂದ ಪಾಕ್‌ ಶುಭಾರಂಭ

    ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ (Quinton de Kock) ಹಾಗೂ ತೆಂಬಾ ಬಹುಮಾ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ಆದ್ರೆ 2ನೇ ವಿಕೆಟಿಗೆ ಜೊತೆಯಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಡಿಕಾಕ್‌ ಜೋಡಿ 174 ಎಸೆತಗಳಲ್ಲಿ 204 ರನ್‌ ಸಿಡಿಸಿತ್ತು. ಡಿಕಾಕ್‌ 84 ಎಸೆತಗಳಲ್ಲಿ 100 ರನ್‌ (3 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, ಡುಸ್ಸೆನ್‌ 110 ಎಸೆತಗಳಲ್ಲಿ 108 ರನ್‌ (2 ಸಿಕ್ಸರ್‌, 13 ಬೌಂಡರಿ) ಬಾರಿಸಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್‌ ಮಾರ್ಕ್ರಮ್‌ (Adien Markram) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 196.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಾರ್ಕ್ರಮ್‌ 49 ಎಸೆತಗಳಲ್ಲೇ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಒಟ್ಟು 54 ಎಸೆತಗಳಲ್ಲಿ 106 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌; 100 ಪದಕ ಗೆದ್ದು ಇತಿಹಾಸ ಬರೆದ ಭಾರತ  

    ಈ ಬೆನ್ನಲ್ಲೇ ಹೆನ್‌ರಿಚ್‌ ಕ್ಲಾಸೆನ್‌ 32 ರನ್‌, ಡೇವಿಡ್‌ ಮಿಲ್ಲರ್‌ 21 ಎಸೆತಗಳಲ್ಲಿ ಅಜೇಯ 39 ರನ್‌ ಹಾಗೂ ಮಾರ್ಕೊ ಜಾನ್ಸೆನ್‌ ಅಜೇಯ 12 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 428 ರನ್‌ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 2 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಮತೀಶ ಪಥಿರಣ, ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ತಂಡ:
    428/5 – ದಕ್ಷಿಣ ಆಫ್ರಿಕಾ V/S ಶ್ರೀಲಂಕಾ- 2023
    417/6 – ಆಸೀಸ್‌ V/S ಅಫ್ಘಾನಿಸ್ತಾನ- 2015
    413/5 – ಭಾರತ V/S ಬರ್ಮುಡಾ- 2007
    411/4 – ದಕ್ಷಿಣ ಆಫ್ರಿಕಾ V/S ಐರ್ಲೆಂಡ್‌-2015
    408/5 – ದಕ್ಷಿಣ ಆಫ್ರಿಕಾ V/S ವೆಸ್ಟ್‌ ಇಂಡೀಸ್‌- 2015

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ಹೈದರಾಬಾದ್: ವಿಶ್ವಕಪ್  (ODI World Cup) ಆರಂಭಕ್ಕೂ ಮುನ್ನ ನಡೆದಿರುವ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ (Pakistan) ಸೋಲು ಕಂಡಿದೆ. ಈ ಬಗ್ಗೆ ಪಾಕ್ ತಂಡದ ಉಪನಾಯಕ ಶಾದಾಬ್ ಖಾನ್ (Shadab Khan), ನಾವು ಪ್ರತಿದಿನ ಹೈದರಾಬಾದ್ ಬಿರಿಯಾನಿ ತಿನ್ನುತ್ತಿದ್ದೇವೆ. ಅದಕ್ಕೆ ಸ್ಲೋ ಆಗಿದ್ದೇವೆ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ಬಳಿಕ ಖಾನ್ ಮಾತನಾಡಿದ್ದಾರೆ. ನಾವು ಭಾರತಕ್ಕೆ ಏಳು ವರ್ಷಗಳ ಬಳಿಕ ಬಂದಿದ್ದೇವೆ. ನಮ್ಮ ತಂಡ ಹೈದರಾಬಾದ್‍ಗೆ ಆಗಮಿಸಿ ಒಂದು ವಾರ ಕಳೆದಿದೆ. ಇಲ್ಲಿ ಬಂದ ಮೇಲೆ ಇಲ್ಲಿನ ಬಿರಿಯಾನಿಯನ್ನು ಯಾಕೆ ರುಚಿ ನೋಡಬಾರದು ಎಂದು ಪ್ರತಿದಿನ ಬಿರಿಯಾನಿ ತಿನ್ನುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮಹಿ ನ್ಯೂ ಲುಕ್‌; ಯಾರಿದು ಹೀರೋ ಅಂತಿದ್ದಾರೆ ಫ್ಯಾನ್ಸ್‌

    ಮಂಗಳವಾರ ಹೈದರಾಬಾದ್‍ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ 15 ರನ್‍ಗಳಿಂದ ಸೋಲು ಕಂಡಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸೋತಿತ್ತು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಸಿರುವ ಶಾಬಾದ್ ಖಾನ್, ಹೈದರಾಬಾದಿ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ ಆಗಿದ್ದೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಎರಡೂ ಅಭ್ಯಾಸ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ವಿಶ್ವಕಪ್‍ನಲ್ಲಿ ಶುಭಾರಂಭ ಮಾಡಲು ಕಾಯುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ 300ಕ್ಕೂ ಅಧಿಕ ರನ್ ಗಳಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ 352 ರನ್‍ಗಳ ಗುರಿ ಬೆನ್ನಟ್ಟಿದಾಗ ಅಂತಿಮವಾಗಿ 337 ರನ್‍ಗಳಿಗೆ ಆಲೌಟ್ ಆಗಿತ್ತು.

    ಐಸಿಸಿ ಏಕದಿನ ವಿಶ್ವಕಪ್‍ಗೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ 10 ತಂಡಗಳು ಪೈಪೋಟಿ ನಡೆಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿವೆ. ಗುರುವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 6 ರಂದು ಪಾಕಿಸ್ತಾನ ತಂಡ ನೆದರ್‌ಲ್ಯಾಂಡ್ಸ್ ವಿರುದ್ಧ ಹೈದರಾಬಾದ್‍ನ ಉಪ್ಪಲ್ ಸ್ಟೇಡಿಯಂನಲ್ಲೇ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದನ್ನೂ ಓದಿ: Asian Games 2023: ಚೊಚ್ಚಲ ಅಂತಾರಾಷ್ಟ್ರೀಯ T20 ಶತಕ ಸಿಡಿಸಿ ಗಿಲ್‌ ದಾಖಲೆ ಮುರಿದ ಯಶಸ್ವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ: ನಸೀಮ್ ಶಾ

    ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ: ನಸೀಮ್ ಶಾ

    ಇಸ್ಲಾಮಬಾದ್: ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ (Pakistan) ವೇಗಿ ನಸೀಮ್ ಶಾ (Naseem Shah) ಅವರ ವಿಚಾರವಾಗಿ ಹರಿದಾಡಿದ್ದ ಆತಂಕದ ವರದಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಪಂದ್ಯದ ವೇಳೆ ಗಾಯಗೊಂಡಿದ್ದು ವಿಶ್ರಾಂತಿಯಲ್ಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡಿತ್ತು. ಅದಕ್ಕೆ ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿದ್ದಾರೆ.

    ಇತ್ತೀಚಿನ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ನಸೀಮ್ ಅನುಪಸ್ಥಿತಿಯ ನಂತರ ಊಹಾಪೋಹಗಳಿಗೆ ತೀವ್ರವಾಗಿ ಹರಿದಾಡಿದ್ದವು. ಇದು ವಿಶ್ವಕಪ್ (ODI World Cup) ಹೊತ್ತಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸಿತ್ತು. ಭರವಸೆಯ ಯುವ ಬೌಲರ್ ನಿರ್ಗಮಿಸುವ ಮೊದಲು ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಕೊಲಂಬೊ ಸ್ಟ್ರೈಕರ್‌ಗಳನ್ನು ಪ್ರತಿನಿಧಿಸುತ್ತಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್‌ – ಕಿಂಗ್‌ ಆದ ಕೊಹ್ಲಿಯ ರೋಚಕ ಜರ್ನಿ

    ಸ್ಟ್ರೈಕರ್ಸ್ ಪರ ಆಡಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳ ಗುರಿಯಾಗಿಸಿ ವಿಶ್ರಾಂತಿ ಪಡೆಯುವ ಪ್ರಾಮುಖ್ಯತೆಯನ್ನು ಬಾಬರ್ ಒತ್ತಿ ಹೇಳಿದರು. ನಾನು ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಡುತ್ತಿದ್ದೆ ಮತ್ತು ವಿಶ್ರಾಂತಿ ಪಡೆಯಲು ಸಮಯವಿರಲಿಲ್ಲ. ಈಗ ವಿಶ್ರಾಂತಿಯಲ್ಲಿದ್ದೇನೆ ಎಂದಿದ್ದಾರೆ.

    ನಸೀಮ್ ಏಳು ಪಂದ್ಯಗಳಲ್ಲಿ 10 ವಿಕೆಟ್‍ಗಳನ್ನು ಪಡೆಯುವ ಮೂಲಕ ಉತ್ತಮ ಬೌಲರ್ ಎಂಬ ಖ್ಯಾತಿಗಳಿಸಿದ್ದಾರೆ. ಶಾ ಎಲ್‍ಪಿಎಲ್ ವೇದಿಕೆಯಲ್ಲಿ ಪ್ರಮುಖ ಸಾಗರೋತ್ತರ ಆಟಗಾರರಲ್ಲಿ ಒಬ್ಬರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಗಾಲೆ ಟೈಟಾನ್ಸ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ನಂತರದ (8 ಪಂದ್ಯಗಳಲ್ಲಿ 12 ವಿಕೆಟ್) ಸ್ಥಾನದಲ್ಲಿ ನಸೀಮ್ ಇದ್ದಾರೆ.

    ಏಷ್ಯಾಕಪ್‍ನಲ್ಲಿ (Asia Cup) ಪಾಕಿಸ್ತಾನ ಸೆ.2 ರಂದು ಸಾಂಪ್ರದಾಯಿಕ ಎದುರಾಳಿಯಾದ ಭಾರತದ (Team India) ವಿರುದ್ಧ ಆಡಲಿದೆ. ಅಲ್ಲದೇ ಅಕ್ಟೋಬರ್ 14 ರಂದು ಅಹಮದಾಬಾದ್‍ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದನ್ನೂ ಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

    Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

    ಮುಂಬೈ: ಮುಂದಿನ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್‌ಜೂನಲ್ಲಿ ನಡೆಯುವ ಏಷ್ಯನ್‌ ಗೇಮ್ಸ್ (Asian Games 2023) ಕ್ರೀಡಾಕೂಟದಲ್ಲಿ ಟೀಂ ಇಂಡಿಯಾ (Team India) ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ಏಷ್ಯನ್‌ ಗೇಮ್ಸ್ ಟೂರ್ನಿಯಲ್ಲಿ ಕ್ರಿಕೆಟ್ ಕೂಡ ಸ್ಪರ್ಧೆಯ ಭಾಗವಾಗಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಈ ಟೂರ್ನಿ ನಡೆಯಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ತಂಡವನ್ನು ಕಣಕ್ಕಿಳಿಸಲು ಬಿಸಿಸಿಐನ (BCCI) ಅಪೆಕ್ಸ್ ಕೌನ್ಸಿಲ್ ಒಪ್ಪಿಗೆ ಸೂಚಿಸಿದೆ.

    2010 ಮತ್ತು 2014ರ ಏಷ್ಯನ್ ಗೇಮ್ಸ್‌ ಟೂರ್ನಿಯಲ್ಲಿ ಭಾರತ (Team India) ಭಾಗವಹಿಸಲು ನಿರಾಕರಿಸಿತ್ತು. 2028ಕ್ಕೆ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಬಿಸಿಸಿಐ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅನುಮತಿಸಿದೆ. ಇದನ್ನೂ ಓದಿ: Asian Games 2023 – ಶಿಖರ್‌ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?

    ಭಾರತದ ಪುರುಷರ ತಂಡ ಮತ್ತು ಮಹಿಳಾ ಕ್ರಿಕೆಟ್‌ ತಂಡಗಳು ಇದೇ ಮೊದಲಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿವೆ ಎಂಬುದನ್ನ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಖಚಿತಪಡಿಸಿದ್ದಾರೆ. ಇದನ್ನೂ ಓದಿ: Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ಈಗಾಗಲೇ ಸಾಲು-ಸಾಲು ಸರಣಿಗಳನ್ನ ಮುಂದಿಟ್ಟುಕೊಂಡಿರುವ ಟೀಂ ಇಂಡಿಯಾ, ಆಗಸ್ಟ್‌ 31 ರಿಂದ ಸೆಪ್ಟಂಬರ್‌ 17ರ ವರೆಗೆ ನಡೆಯುವ ಏಕದಿನ ಏಷ್ಯಾಕಪ್‌ ಟೂರ್ನಿಗೂ ತಂಡವನ್ನ ಅಣಿಗೊಳಿಸಬೇಕಿದೆ. ಆ ನಂತರ ಅಕ್ಟೋಬರ್‌ 5 ರಿಂದ ಆರಂಭವಾಗುವ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನ ಆಯ್ಕೆ ಮಾಡಬೇಕಿರುವುದು ಸವಾಲಾಗಿದೆ. ಹಾಗಾಗಿ ಬಿಸಿಸಿಐ ಟೀಂ ಇಂಡಿಯಾ 2ನೇ ಶ್ರೇಣಿಯ ಪುರುಷರ ತಂಡವನ್ನ ಏಷ್ಯನ್‌ ಗೇಮ್ಸ್‌ಗೆ ಕಳುಹಿಸುವ ನಿರೀಕ್ಷೆಯಿದೆ.

    ಈ ಹಿಂದೆ 2010ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಬಾಂಗ್ಲಾದೇಶ, 2014ರ ಆವೃತ್ತಿಯಲ್ಲಿ ಶ್ರೀಲಂಕಾ ಪುರುಷರ ತಂಡ ಚಿನ್ನದ ಪದಕಗಳನ್ನ ಗೆದ್ದಿತ್ತು. ಮಹಿಳಾ ವಿಭಾಗದಲ್ಲಿ ಪಾಕಿಸ್ತಾನ ತಂಡ 2 ಬಾರಿ ಚಿನ್ನದ ಪದಕ ಬಾಚಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ಬೌಲಿಂಗ್‌ ಯಾವಾಗ್ಲೂ ಕಳಪೆ, ನಾವ್‌ ತಲೆ ಕೆಡಿಸಿಕೊಳ್ಳಲ್ಲ – ಪಾಕ್‌ ಮಾಜಿ ಕ್ರಿಕೆಟಿಗ ವ್ಯಂಗ್ಯ

    ಟೀಂ ಇಂಡಿಯಾ ಬೌಲಿಂಗ್‌ ಯಾವಾಗ್ಲೂ ಕಳಪೆ, ನಾವ್‌ ತಲೆ ಕೆಡಿಸಿಕೊಳ್ಳಲ್ಲ – ಪಾಕ್‌ ಮಾಜಿ ಕ್ರಿಕೆಟಿಗ ವ್ಯಂಗ್ಯ

    ಇಸ್ಲಾಮಾಬಾದ್‌: ಭಾರತದ ಬೌಲಿಂಗ್‌ (Team India Bowling) ಯಾವಾಗ್ಲೂ ಕಳಪೆಯಾಗಿರುತ್ತೆ. ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಟ್ಯಾಕ್‌ ಮಾಡುತ್ತೆ ಅಂತಾ ನನಗೆ ಅನ್ನಿಸಲ್ಲ. ಹಾಗಾಗಿ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಸಾಯಿದ್‌ ಅಜ್ಮಲ್‌ (Saeed Ajmal) ವ್ಯಂಗ್ಯವಾಡಿದ್ದಾರೆ.

    ಇದೇ ಮೊದಲಬಾರಿಗೆ ಭಾರತ ಪೂರ್ಣ ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ (ICC WorldCup) ಆಯೋಜಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್‌ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ (Pakistan) ಸೆಣಸಲಿದೆ. ಈಗಾಗಲೇ ವಿಶ್ವಕಪ್‌ ಟೂರ್ನಿ ವೇಳಾಪಟ್ಟಿ ನಿಗದಿಯಾಗಿದ್ದು, ಭಾರತದ 5 ಪ್ರಮುಖ ನಗರಗಳಲ್ಲಿ ಪಾಕ್‌ ತಂಡ 9 ಪಂದ್ಯಗಳನ್ನಾಡಲಿದೆ. ಈ ನಡುವೆ ಟೀಂ ಇಂಡಿಯಾ ಬೌಲಿಂಗ್‌ ಪ್ರದರ್ಶನದ ಬಗ್ಗೆ ಅಜ್ಮಲ್‌ ಮಾತನಾಡಿದ್ದಾರೆ.

    ಪಾಕ್‌ನ ಪಾಡ್‌ಕಾಸ್ಟ್‌ ಸಂದರ್ಶನದಲ್ಲಿ ಮಾತನಾಡಿದ ಅಜ್ಮಲ್‌, ಉನ್ನತ ಮಟ್ಟದ ಪಂದ್ಯಗಳಲ್ಲಿ ಪಾಕಿಸ್ತಾನಿ ಬ್ಯಾಟರ್‌ಗಳಿಗೆ ಸವಾಲು ಹಾಕುವ ಬೌಲಿಂಗ್ ದಾಳಿಯನ್ನು ಭಾರತ ಹೊಂದಿದೆ ಎಂದು ನಿಮಗನ್ನಿಸುತ್ತಾ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್‌ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್‌ ಉತ್ತರ ಕೊಟ್ಟ ಅಖ್ತರ್‌

    ಟೀಂ ಇಂಡಿಯಾದ ಬೌಲಿಂಗ್‌ ವಿಭಾಗ ಯಾವಾಗಲೂ ದುರ್ಬಲವಾಗಿದೆ. ಇತ್ತೀಚೆಗೆ ಮೊಹಮ್ಮದ್‌ ಸಿರಾಜ್‌, ಶಮಿ ಉತ್ತಮವಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಸ್ಪಿನ್ನರ್‌ಗಳಲ್ಲಿ ರವೀಂದ್ರ ಜಡೇಜಾ ಫಾರ್ಮ್‌ನಲ್ಲಿದ್ದು ವಿಶ್ವಕಪ್‌ನಲ್ಲಿ ನಿರ್ಣಾಯಕರಾಗುತ್ತಾರೆ ಎಂದು ಭಾವಿಸುತ್ತೇನೆ. ಜಸ್ಪ್ರೀತ್‌ ಬುಮ್ರಾ ಪಾಕಿಸ್ತಾನಕ್ಕೆ ಬೆದರಿಕೆಯೊಡ್ಡಬಹುದಿತ್ತು. ಆದ್ರೀಗ ಅವರೂ ಅನ್‌ಫಿಟ್‌ ಆಗಿದ್ದಾರೆ. ಹಾಗಾಗಿ ಭಾರತದ ಬೌಲಿಂಗ್‌ ಪಾಕಿಸ್ತಾನಕ್ಕೆ ಹೆಚ್ಚು ಅಪಾಕಾರಿ ಎಂದು ಭಾವಿಸಬೇಡಿ ಎಂದಿದ್ದಾರೆ.

    ಇನ್ನೂ ವಿಶ್ವಕಪ್‌ನಲ್ಲಿ ಇಂಡೋ-ಪಾಕ್‌ ಕದನದ ಬಗ್ಗೆ ಮಾತನಾಡಿದ ಅಜ್ಮಲ್‌, ಬಾಬರ್‌ ಆಜಂ ನೇತೃತ್ವದ ಪಾಕಿಸ್ತಾನ ತಂಡ 60% ಗೆಲ್ಲುವ ಅವಕಾಶವಿದೆ. ಭಾರತದ ಬ್ಯಾಟಿಂಗ್‌ ಯಾವಾಗಲೂ ಬಲಿಷ್ಠವಾಗಿಯೇ ಇದೆ. ಆದ್ರೆ ನಮ್ಮ ತಂಡದ ಬೌಲಿಂಗ್‌ ಅಪಾಯಕಾರಿ ಆಗಿರೋದ್ರಿಂದ ಇದು ಸರಿಸಮಾನರ ಯುದ್ಧವೆಂದೇ ಭಾವಿಸಬಹುದು. ಪಾಕಿಸ್ತಾನ ಟೀಂ ಇಂಡಿಯಾವನ್ನ ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರೆ, ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ದುಬೈ: ಈ ಬಾರಿ ವಿಶ್ವಕಪ್‌ (ODI World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳದಿದ್ದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಕಣಕ್ಕಿಳಿಸಲು ಐಸಿಸಿ (ICC) ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ.

    ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಭಾರತದ ಐದು ಪ್ರಮುಖ ನಗರಗಳಲ್ಲಿ ಪಾಕಿಸ್ತಾನದ (Pakistan) 9 ಪಂದ್ಯಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ಆತಿಥ್ಯ ವಹಿಸಿಕೊಂಡಿದ್ದು, ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ಒಟ್ಟು 48 ಪಂದ್ಯಗಳು ಆಯೋಜನೆಗೊಂಡಿವೆ. ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಹಾಗೂ‌ ಫೈನಲ್‌ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲೇ (Narendra Modi Stadium) ನಡೆಯಲಿದೆ.

    ಏಕದಿನ ಏಷ್ಯಾಕಪ್‌ ಟೂರ್ನಿಗೆ (ODI Stadium) ಟೀಂ ಇಂಡಿಯಾವನ್ನ ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ (BCCI) ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಐಸಿಸಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡಲು ನಿರ್ಧರಿಸಿತು. ಹಾಗಾಗಿ ಪಾಕಿಸ್ತಾನ ಕೂಡ ಭಾರತದಲ್ಲಿ ವಿಶ್ವಕಪ್‌ ಪಂದ್ಯವನ್ನಾಡಲು ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವಕಪ್‌ ಟೂರ್ನಿಯನ್ನ ಬಾಯ್‌ಕಾಟ್‌ ಮಾಡಿದರೆ ಅದಕ್ಕೆ ಪರ್ಯಾಯವಾಗಿ ಐಸಿಸಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ಪಾಕ್‌ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅಲ್ಲಿನ ಸರ್ಕಾರವಾಗಲಿ, ಪಿಸಿಬಿಯಾಗಲಿ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಪಾಕಿಸ್ತಾನ ತಂಡ ಭಾಗವಹಿಸದಿದ್ದರೆ, ಕ್ವಾಲಿಫೈಯರ್‌ನಲ್ಲಿ 3ನೇ ರ‍್ಯಾಂಕ್‌ ಪಡೆದ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಿದೆ. ಈಗಾಗಲೇ 8 ತಂಡಗಳು ವಿಶ್ವಕಪ್‌ ಟೂರ್ನಿಗೆ ನೇರವಾಗಿ ಪ್ರವೇಶ ಪಡೆದುಕೊಂಡಿದ್ದು, ಉಳಿದ 2 ತಂಡಗಳಿಗಾಗಿ ಸೆಣಸಾಟ ನಡೆಯುತ್ತಿದೆ. ಇದನ್ನೂ ಓದಿ: Asian Games 2023 – ಶಿಖರ್‌ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?

    ಈಗಾಗಲೇ ಗ್ರೂಪ್‌ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಶ್ರೀಲಂಕಾ, ಜಿಂಬಾಬ್ವೆ, ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್, ವೆಸ್ಟ್‌ ಇಂಡೀಸ್‌ ಮತ್ತು ಒಮನ್ ಸೂಪರ್ ಸಿಕ್ಸ್ ಹಂತದಲ್ಲಿ ಸೆಣಸುತ್ತಿವೆ. ವೆಸ್ಟ್‌ ಇಂಡೀಸ್‌ ಈಗಾಗಲೇ 2 ಪಂದ್ಯಗಳನ್ನ ಸೋತಿರುವುದರಿಂದ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಹತೆ ಪಡೆಯುವುದಿಲ್ಲವೆನ್ನುವುದು ಖಚಿತವಾಗಿದೆ. ಜಿಂಬಾಬ್ವೆ, ಶ್ರೀಲಂಕಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪಾಕ್‌ ತಂಡ ಗೈರಾದರೆ, ಮತ್ತೊಂದು ತಂಡಕ್ಕೆ ಅವಕಾಶ ನೀಡಲು ಐಸಿಸಿ ನಿರ್ಧರಿಸಿದೆ. ಇದನ್ನೂ ಓದಿ: ಭಾರತ Vs ಐರ್ಲೆಂಡ್‌ T20 ಸರಣಿಗೆ ವೇಳಾಪಟ್ಟಿ ಪ್ರಕಟ – ಇಲ್ಲಿದೆ ಡಿಟೇಲ್ಸ್‌

    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]