Tag: ODI Cricket

  • ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ತಿರುವನಂತಪುರಂ: ಟೀಂ ಇಂಡಿಯಾ (Team India) ಸ್ಟಾರ್ ಕ್ರಿಕೆಟಿಗ, ಚೇಸ್ ಮಾಸ್ಟರ್ ಕೊಹ್ಲಿಗೆ (Virat Kohli) ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ ಅನ್ನೋದು ಗೊತ್ತಿದೆ. ಅಂತೆಯೇ ಕೊಹ್ಲಿ ಸಹ ತಮ್ಮ ಅಭಿಮಾನಿಗಳೊಂದಿಗೆ (Virat Kohli Fans)ಯಾವ ರೀತಿ ನಡೆದುಕೊಳ್ತಾರೆ, ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು ಕೆಲವು ಸನ್ನಿವೇಶಗಳಿಂದ ಸಾಕ್ಷಿಯಾಗುತ್ತಿದ್ದಾರೆ.

    ಭಾನುವಾರ ಶ್ರೀಲಂಕಾ (SriLanka) ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 317 ಭಾರೀ ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ವಿಶ್ವದಾಖಲೆ ಬರೆಯಿತು. ಈ ಪಂದ್ಯ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಸಂಭ್ರಮದಲ್ಲಿತ್ತು. ಈ ವೇಳೆ ಸ್ಟೇಡಿಯಂಗೆ ಧುಮುಕಿದ ಅಭಿಮಾನಿಯೊಬ್ಬ ನೇರವಾಗಿ ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದರು, ಕೊಹ್ಲಿ ದೇವರೆಂದು ಕೊಂಡಾಡಿದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನ ತಡೆದು, ಹೊರಹಾಕಲು ಪ್ರಯತ್ನಿಸಿದರು. ಆದ್ರೆ ಅಭಿಮಾನಿ ಪರ ನಿಂತ ಕೊಹ್ಲಿ ಸ್ಟೇಡಿಯಂನಲ್ಲೇ ತನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಟ್ಟರು. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಕೊಹ್ಲಿ ಅಭಿಮಾನಿಗಳಿಗೆ ಫೋಟೋ ಗ್ರಾಫರ್‌ಆಗಿ ನಿಂತರು. ಇದನ್ನೂ ಓದಿ: ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು – ವಿಶ್ವದಾಖಲೆಯೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌

    ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 390 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ 22 ಓವರ್‌ಗಳಲ್ಲೇ 73 ರನ್ ಗಳಿಸಿ ಸರ್ವಪತನ ಕಂಡಿತು. ಟೀಂ ಇಂಡಿಯಾ 317 ರನ್‌ಗಳ ಅಂತರದಿಂದ ಗೆದ್ದು ವಿಶ್ವದಾಖಲೆ ಬರೆಯಿತು. ಈ ಪಂದ್ಯದಲ್ಲಿ ಕೊನೆಯವರೆಗೂ ಅಜೇರಾಗಿ ಹೋರಾಡಿದ ಕೊಹ್ಲಿ 110 ಎಸೆತಗಳಲ್ಲಿ 166 ರನ್ (13 ಬೌಂಡರಿ, 8 ಸಿಕ್ಸ್) ಚಚ್ಚಿ ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ತಿರುವನಂತಪುರಂ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವರ್ಷದ ಮೊದಲ ಏಕದಿನ ಸರಣಿಯಲ್ಲಿ 2 ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಉಡೀಸ್ ಮಾಡಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದ ಕೊಹ್ಲಿ, ಸ್ವದೇಶದಲ್ಲಿ 21 ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಮುಖ್ಯವಾಗಿ ಏಕದಿನ ಪಂದ್ಯದಲ್ಲೀ ಶ್ರೀಲಂಕಾ (SriLanka) ವಿರುದ್ಧವೇ 10 ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆಯನ್ನ ಮುರಿದಿದ್ದಾರೆ. 

    ಸಚಿನ್ ತೆಂಡೂಲ್ಕರ್ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 104 ಪಂದ್ಯಗಳ 101 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಏಕದಿನದಲ್ಲಿ ಕೊಹ್ಲಿ ಒಟ್ಟು 46 ಶತಕ ಹೊಡೆದಿದ್ದು, ಲಂಕಾ ವಿರುದ್ಧವೇ 10 ಶತಕ ಬಾರಿಸಿದ್ದಾರೆ. ಈ ಹಿಂದೆ ಸಚಿನ್ ಲಂಕಾ ವಿರುದ್ಧ 9 ಶತಕ ಹೊಡೆದಿದ್ದರು. ಇದನ್ನೂ ಓದಿ: ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    16ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ಅಂತಿಮವಾಗಿ 50 ಓವರ್ ತನಕ ಔಟಾಗದೇ 166 ರನ್ ಚಚ್ಚಿದ್ದಾರೆ. 14 ಬೌಂಡರಿ, 8 ಸಿಕ್ಸರ್‌ಗಳೂ ಇದರಲ್ಲಿ ಸೇರಿವೆ. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಮೊದಲ 48 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅರ್ಧ ಶತಕ ಸಿಡಿಸಿದ್ದರು. ಬಳಿಕ 85 ಎಸೆತಗಳಲ್ಲಿ 100 ರನ್ ಚಚ್ಚಿದರು. ಶತಕದ ಬಳಿಕ 150.90 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಮುಂದಿನ 25 ಎಸೆತಗಳಲ್ಲಿ 66 ರನ್ ಬಾರಿಸಿದರು. ಪರಿಣಾಮ ಲಂಕಾಗೆ ಟೀಂ ಇಂಡಿಯಾ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು.

    ಈವರೆಗೆ ಒಟ್ಟಾರೆಯಾಗಿ 74 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ (ODI Cricket) 46 ಶತಕ ಸಿಡಿಸಿದ್ದಾರೆ. ಇನ್ನೂ 3 ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ನಂ.1 ಆಟಗಾರ ಅಗಲಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಟ್ಟು 100 ಶತಕ ಬಾರಿಸಿರುವ ಸಚಿನ್ ಟೆಸ್ಟ್ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನ ಸಿಡಿಸಿದ್ದಾರೆ.

    2012 ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 183 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಅವರ ಈವರೆಗಿನ ಅತಿಹೆಚ್ಚು ರನ್ ಆಗಿತ್ತು. ಇದೀಗ 162 ರನ್ ಕೊಹ್ಲಿಯ 2ನೇ ಅತ್ಯಧಿಕ ಸ್ಕೋರ್ ಆಗಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. ರೋಹಿತ್ ಶರ್ಮಾ 42, ಶುಭಮನ್ ಗಿಲ್ 116, ವಿರಾಟ್ ಕೊಹ್ಲಿ 166, ಶ್ರೇಯಸ್ ಅಯ್ಯರ್ 38, ಕೆ.ಎಲ್ ರಾಹುಲ್ 7, ಸೂರ್ಯಕುಮಾರ್ ಯಾದವ್ 4 ಹಾಗೂ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ಢಾಕಾ: ಶಕೀಬ್ ಅಲ್ ಹಸನ್ (Shakib Al Hasan) ಆಲ್‌ರೌಂಡರ್‌ ಆಟ, ಕೊನೆಯಲ್ಲಿ ಮೆಹಿಡಿ ಹಸನ್ ಮಿರಾಜ್ (Mehidy Hasan Miraz) ಜವಾಬ್ದಾರಿ ಬ್ಯಾಟಿಂಗ್‌ ಪ್ರದರ್ಶನದಿಂದ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

    ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್‌ ಪೂರ್ಣಗೊಳಿಸುವಲ್ಲಿ ವಿಫಲವಾಯಿತು. 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ದೇಶ 46 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿ ಟೀಂ ಇಂಡಿಯಾ (Team India) ಎದುರು ರೋಚಕ ಜಯ ಸಾಧಿಸಿತು.

    ಟೀಂ ಇಂಡಿಯಾ (Team India) ಸವಾಲು ಸ್ವೀಕರಿಸಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಜ್ಮುಲ್ ಹೊಸೈನ್ ಶಾಂಟೊ, ದೀಪಕ್‌ ಚಹಾರ್‌ ಮಾರಕ ಬೌಲಿಂಗ್‌ ದಾಳಿಗೆ ತುತ್ತಾಗಿ ಒಂದೇ ಎಸೆತಕ್ಕೆ ಔಟಾದರು. ನಂತರ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ನಾಯಕ ಲಿಟ್ಟನ್ ದಾಸ್ 63 ಎಸೆತಗಳಲ್ಲಿ 41 ರನ್‌ (1 ಸಿಕ್ಸರ್‌, 3 ಬೌಂಡರಿ) ಗಳಿಸಿ ತಂಡಕ್ಕೆ ಆಸರೆಯಾದರು. 3ನೇ ಕ್ರಮಾಂಕದಲ್ಲಿ ಬಂದ ಅನಾಮುಲ್ ಹಕ್ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ ಸೇರಿದ್ರು.

    ಇನ್ನೂ ಬೌಲಿಂಗ್‌ನಲ್ಲಿ ಮಿಂಚಿದ್ದ ಶಕೀಬ್‌ ಬ್ಯಾಟಿಂಗ್‌ನಲ್ಲೂ ಸಮಾಧಾನಕರ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಕೀಬ್‌ 38 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 29 ರನ್‌ ಕಲೆಹಾಕಿದರು. ನಂತರ ಜೊತೆಯಾದ ಮುಷ್ಫಿಕೂರ್ ರಹೀಮ್ ಮತ್ತು ಮಹಮದುಲ್ಲಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಲು ಮುಂದಾಯಿತು. 80 ಎಸೆತಗಳನ್ನು ಎದುರಿಸಿದ ಈ ಜೋಡಿ 32 ರನ್‌ ಗಳಿಸಿ ಸ್ಥಿರವಾಗಿತ್ತು. ಈ ವೇಳೆ ಸಿರಾಜ್‌ ಹಾಗೂ ಶಾರ್ದೂಲ್‌ ಠಾಕೂರ್‌ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಮುಷ್ಫಿಕೂರ್ ರಹೀಮ್ 45 ಎಸೆತಗಳಲ್ಲಿ 18 ರನ್‌ ಗಳಿಸಿದ್ರೆ, 35 ಎಸೆತ ಎದುರಿಸಿದ ಮಹಮದುಲ್ಲಾ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

    ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಮೆಹಿಡಿ ಹಸನ್ ಮಿರಾಜ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಿಧಾನಗತಿಯಲ್ಲೇ ಸಿಕ್ಸರ್‌, ಬೌಂಡರಿಗಳನ್ನು ಪೇರಿಸುತ್ತಾ ಭಾರತದ ಬೌಲರ್‌ಗಳ ಬೆವರಿಳಿಸಿದರು. 39 ಎಸೆತ ಎದುರಿಸಿದ ಮಿರಾಜ್‌ 38 ರನ್‌ (2 ಸಿಕ್ಸರ್‌, 4 ಬೌಂಡರಿ) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಸ್ತಫಿಜೂರ್ ರಹಮಾನ್ 10 ರನ್‌ ಗಳಿಸಿ ಕೊನೆಯ ವರೆಗೂ ಸಾಥ್‌ ನೀಡಿದರು. ಇಯಾಡೋಟ್ ಹೊಸೈನ್ ಮತ್ತು ಹಸನ್ ಮಹಮ್ಮದ್ ಶೂನ್ಯಕ್ಕೆ ನಿರ್ಗಮಿಸಿದರು. ಅಫಿಫ್ ಹೊಸೈನ್ 6 ರನ್‌ ಗಳಿಸಿದರು.

    ಟೀಂ ಇಂಡಿಯಾ ಪರ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಸೇನ್‌ ವಾಷಿಂಗ್ಟನ್‌ ಸುಂದರ್‌ ತಲಾ 2 ವಿಕೆಟ್‌ ಪಡೆದರು. ದೀಪಲ್‌ ಚಹಾರ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಕಿಂಗ್‌ ಕೊಹ್ಲಿ, ಧವನ್‌ ಕಳಪೆ ಬ್ಯಾಟಿಂಗ್‌:
    ಆರಂಭಿಕರಾಗಿ ಕಣಕ್ಕಿಳಿದ್ದ ರೋಹಿತ್‌ ಶರ್ಮಾ (Rohit Sharma) ಹಾಗೂ ಶಿಖರ್‌ ಧವನ್‌ ಅಲ್ಪಮೊತ್ತಕ್ಕ ಔಟಾದರು. ರೋಹಿತ್‌ 27 ರನ್‌ ಗಳಿಸಿದ್ರೆ, ಶಿಖರ್‌ ಧವನ್‌ ಕೇವಲ 7 ರನ್‌ಗಳಿಸಿದ್ರು. ಕಿಂಗ್‌ ಕೊಹ್ಲಿ (Virat Kohli) ಸಹ ನಿರೀಕ್ಷಿತ ಆಟವಾಡದೇ 9 ರನ್‌ಗಳಿಗೆ ಪೆವಿಲಿಯನ್‌ ಸೇರಿದ್ರು. ಮೊದಲ 10 ಓವರ್‌ಗಳಲ್ಲಿ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜೊತೆಗೂಡಿದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ (KL Rahul) ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಆದರೆ 43 ರನ್ ಜೊತೆಯಾಟದ ನಂತರ 39 ಎಸೆತಗಳಲ್ಲಿ 24 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದರು. ಇದರಿಂದ ಟೀಂ ಇಂಡಿಯಾ ಮತ್ತೆ ಹಿನ್ನಡೆ ಅನುಭವಿಸಿತ್ತು.

    ರಾಹುಲ್‌ ಏಕಾಂಗಿ ಹೋರಾಟ:
    ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಹೋರಾಡಿದರು. 70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 73 ರನ್ ಗಳಿಸಿದರು. ‌ಉಳಿದೆಲ್ಲ ಬ್ಯಾಟ್ಸ್‌ಮ್ಯಾನ್‌ಗಳು ಬಾಂಗ್ಲಾ ಬೌಲರ್‌ಗಳ ದಾಳಿಗೆ ಧೂಳಿಪಟವಾದ್ರು.

    ನಂತರ ಕ್ರೀಸ್‌ ಗಿಳಿದ ವಾಷಿಂಗ್ಟನ್ ಸುಂದರ್ ಅವರು ಕೆ.ಎಲ್ ರಾಹುಲ್ ಜೊಡಿ 60 ರನ್‌ಗಳ ಜೊತೆಯಾಟವಾಡಿ, ಭಾರತದ ಪಾಳಯದಲ್ಲಿ ನಗು ಮೂಡಿಸಿದ್ದರು. ಆದರೆ 42 ಎಸೆತಗಳಲ್ಲಿ 19 ರನ್‌ಗಳಿಸಿದ್ದ ವಾಷಿಂಗ್ಟನ್‌ ಸುಂದರ್‌ 43ನೇ ಎಸೆತದಲ್ಲಿ ಔಟಾದರು. ಶಾರ್ದೂಲ್‌ ಠಾಕೂರ್‌ 2 ರನ್‌, ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿದ್ರೆ, ಶಹಬಾಜ್‌ ಅಹ್ಮದ್‌, ದೀಪಕ್‌ ಚಹಾರ್‌ ಶೂನ್ಯಕ್ಕೆ ನಿರ್ಗಮಿಸಿದ್ರು. ಕುಲ್‌ದೀಪ್‌ ದೇನ್‌ 2 ರನ್‌ಗಳಿಸಿ ಅಜೇಯರಾಗುಳಿದರು.

    ರೋಹಿತ್‌ ಉತ್ತಮ ಬ್ಯಾಟಿಂಗ್‌ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್‌ಗಳ ಬೌಲಿಂಗ್ ದಾಳಿ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಭಾರತ 200ರ ಗಡಿ ಮುಟ್ಟಲೂ ಅಸಾಧ್ಯವಾಯಿತು.

    ಬಾಂಗ್ಲಾದೇಶದ ಪರ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ 36 ರನ್‌ ನೀಡಿ 5 ವಿಕೆಟ್‌ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್‌ಗಳಿಗೆ 4 ವಿಕೆಟ್‌ ಪಡೆದು ಮಿಂಚಿದರು. 43 ರನ್‌ ನೀಡಿದ ಮೆಹಿಡಿ ಹಸನ್ ಮಿರಾಜ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ವಿಶ್ವಕಪ್ 2019: ಸೋಲಿನೊಂದಿಗೆ ಕೆಟ್ಟ ವಿಶ್ವದಾಖಲೆ ಬರೆದ ಟೀಂ ಇಂಡಿಯಾ

    ವಿಶ್ವಕಪ್ 2019: ಸೋಲಿನೊಂದಿಗೆ ಕೆಟ್ಟ ವಿಶ್ವದಾಖಲೆ ಬರೆದ ಟೀಂ ಇಂಡಿಯಾ

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಗೆಲುವಿನೊಂದಿಗೆ ಮುನ್ನಗುತ್ತಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೋಲಿನೊಂದಿಗೆ ಕೆಟ್ಟ ದಾಖಲೆಗೆ ಬರೆದಿದೆ.

    ಇಂಗ್ಲೆಂಡ್ ವಿರುದ್ಧ 31 ರನ್ ಅಂತರದಲ್ಲಿ ಸೋಲುಂಡ ಭಾರತ ಈ ಬಾರಿಯ ವಿಶ್ವಕಪ್ ನಲ್ಲಿ ಮೊದಲ ಸೋಲುಂಡಿತ್ತು. ಇದರೊಂದಿಗೆ ಇದುವರೆಗೂ 972 ಏಕದಿನ ಪಂದ್ಯಗಳನ್ನು ಆಡಿರುವ ಭಾರತ 54.66 ಸರಾಸರಿಯಲ್ಲಿ 505 ಪಂದ್ಯಗಳನ್ನು ಗೆದ್ದರೆ, 418 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದಂತೆ 40 ಪಂದ್ಯಗಳು ರದ್ದಾದರೆ, 9 ಪಂದ್ಯಗಳು ಟೈ ಆಗಿದೆ.

    ಸದ್ಯ ಇಂಗ್ಲೆಂಡ್ ವಿರುದ್ಧ ಸೋಲಿನೊಂದಿಗೆ 418 ಪಂದ್ಯಗಳಲ್ಲಿ ಸೋಲುಂಡಿರುವ ಟೀಂ ಇಂಡಿಯಾ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಸೋಲುಂಡ ತಂಡಗಳ ಪಟ್ಟಿಯಲ್ಲಿ ಶ್ರೀಲಂಕಾದದೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳುವ ಸಿದ್ಧತೆಯಲ್ಲಿದೆ.

  • ಪಾಕ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್‍ರನ್ನ ಹಿಂದಿಕ್ಕಿದ ಧೋನಿ

    ಪಾಕ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್‍ರನ್ನ ಹಿಂದಿಕ್ಕಿದ ಧೋನಿ

    ಮ್ಯಾಂಚೆಸ್ಟರ್: ಪಾಕಿಸ್ತಾನ ವಿರುದ್ಧ ಮಹತ್ವದ ವಿಶ್ವಕಪ್ ಪಂದ್ಯದಲ್ಲಿ ಆಡುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಅಪರೂಪದ ಸಾಧನೆಯನ್ನು ಮಾಡಿದ್ದು, ಸಚಿನ್ ಬಳಿಕ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.

    ಇದುವರೆಗೂ ಧೋನಿ 341 ಏಕದಿನ ಪಂದ್ಯಗಳನ್ನು ಆಡಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 340 ಪಂದ್ಯಗಳನ್ನು ಆಡಿದ್ದರು. ಆ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ 461 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನ ಪಡೆದಿದ್ದಾರೆ.

    ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೇ ಧೋನಿ ಮಹತ್ವದ ಸಾಧನೆ ಮಾಡಿರುವುದು ಅಭಿಮಾನಿಗಳ ಸಂತಸ ಹೆಚ್ಚಾಗಲು ಕಾರಣವಾಗಿದೆ. 13 ವರ್ಷಗಳಿಂದ ಟೀಂ ಇಂಡಿಯಾ ತಂಡದ ಭಾಗವಾಗಿರುವ ಧೋನಿ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು. ಆ ಬಳಿಕ ತಮ್ಮ ನಾಯಕತ್ವದಲ್ಲಿ ಐಸಿಸಿ ನಡೆಸುವ ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಗೆಲುವು ಪಡೆದು ತಂಡವನ್ನು ಮುನ್ನಡೆಸಿದ್ದರು. ಉಳಿದಂತೆ ಧೋನಿ ಏಷ್ಯಾ IX ತಂಡದ ಪರ 3 ಪಂದ್ಯಗಳನ್ನಾಡಿದ್ದಾರೆ.

  • ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಆರ್‌ಪಿ  ಸಿಂಗ್ ನಿವೃತ್ತಿ

    ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಆರ್‌ಪಿ ಸಿಂಗ್ ನಿವೃತ್ತಿ

    ಮುಂಬೈ: ಟೀಂ ಇಂಡಿಯಾದ ಎಡಗೈ ವೇಗದ ಬೌಲರ್, 2007ರ ಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯ ರುದ್ರ ಪ್ರತಾಪ್ ಸಿಂಗ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಈ ಸಂಬಂಧ ಭಾವನಾತ್ಮಕ ಪತ್ರವನ್ನು ಬರೆದು ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ 32ರ ಹರೆಯದ ಆರ್‌ಪಿ ಸಿಂಗ್ ತಿಳಿಸಿದ್ದಾರೆ. ವಿಶೇಷ ಏನೆಂದರೆ 13 ವರ್ಷದ ಬಳಿಕ 2005ರ ಸೆಪ್ಟೆಂಬರ್ 4 ರಂದು ಆರ್‌ಪಿ ಸಿಂಗ್ ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿದ್ದರು.

    ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ನನ್ನ ಕನಸಿನ ಜೀವನದಲ್ಲಿ ಜೀವಿಸಲಿದ್ದೇನೆ ಎಂದುಕೊಂಡಿರಲಿಲ್ಲ. ನನ್ನ ಕನಸನ್ನು ನನಸಾಗಿಸಲು ನನ್ನ ಸಾಮಥ್ರ್ಯದಲ್ಲಿ ನಂಬಿಕೆ ಇಟ್ಟಿದ್ದಕ್ಕೆ, ವಿಮರ್ಷೆ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಎಂದು ತಿಳಿಸಿದ್ದಾರೆ

    2005ರ ಸೆಪ್ಟೆಂಬರ್ 4 ರಂದು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಪಂದ್ಯವಾಡಿದ್ದ ಆರ್‌ಪಿ ಸಿಂಗ್ 2011ರ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. 2006ರ ಜನವರಿಯಲ್ಲಿ ಪಾಕ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಸಿಂಗ್ ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು.

    14 ಟೆಸ್ಟ್ ಪಂದ್ಯಗಳ 25 ಇನ್ನಿಂಗ್ಸ್ ನಲ್ಲಿ 40 ವಿಕೆಟ್ ಪಡೆದಿರುವ ಆರ್‌ಪಿ ಸಿಂಗ್ 58 ಏಕದಿನ ಪಂದ್ಯಗಳ 57 ಇನ್ನಿಂಗ್ಸ್ ನಲ್ಲಿ 69 ವಿಕೆಟ್ ಪಡೆದಿದ್ದಾರೆ. 10 ಟಿ20 ಪಂದ್ಯವಾಡಿದ್ದು 15 ವಿಕೆಟ್ ಸಂಪಾದಿಸಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20ಯ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಪಿ ಸಿಂಗ್ 4 ಓವರ್ ಎಸೆದು ಮೂರು ವಿಕೆಟ್ ಕಿತ್ತಿದ್ದರು. ಮೊದಲ ಓವರ್ ನಲ್ಲೇ ಹಫೀಸ್ ವಿಕೆಟ್ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ಪುಣೆ: ಭಾರತ ನ್ಯೂಜಿಲೆಂಡ್ ಎರಡನೇ ಪಂದ್ಯಕ್ಕೂ ಮುನ್ನ ಪುಣೆ ಪಿಚ್ ಕ್ಯೂರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಅಮಾನತುಗೊಳಿಸಿದೆ.

    ಇಂಡಿಯಾ ಟುಡೇ ವಾಹಿನಿ ಬುಕ್ಕಿಗಳ ರೂಪದಲ್ಲಿ ತೆರಳಿ ನಡೆಸಿದ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಲ್‍ಗಾಂವ್ಕರ್ ಪಿಚ್ ಸ್ವಭಾವ ಏನು, ಪಿಚ್ ಹೇಗೆ ಇರಲಿದೆ ಎನ್ನುವುದನ್ನು ವಿವರಿಸಿದ್ದರು.

    ಈ ಸುದ್ದಿ ಬುಧವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದಂತೆ ಬಿಸಿಸಿಐ ಶಿಸ್ತುಕ್ರಮವನ್ನು ಕೈಗೊಂಡಿದೆ. ವೇಷಮರೆಸಿ ಬಂದಿದ್ದ ವಾಹಿನಿಯ ವರದಿಗಾರರು ತಮಗೆ ಬೇಕಾದಂತೆ ಪಿಚ್ ನಿರ್ಮಿಸಬೇಕೆಂದು ಹೇಳಿಕೊಂಡಿದ್ದರು. ಇದಕ್ಕೆ ಸಲ್‍ಗಾಂವ್ಕರ್ ಒಪ್ಪಿದ್ದರು.

    ಐಸಿಸಿ ನಿಯಮಗಳ ಅನ್ವಯ ಪಂದ್ಯ ಆರಂಭಕ್ಕೂ ಮುನ್ನ ಯಾವುದೇ ಕಾರಣಕ್ಕೂ ಪಿಚ್ ನ ಕುರಿತು ಮಾಹಿತಿಯನ್ನು ಕ್ಯೂರೇಟರ್ ಯಾರಿಗೂ ನೀಡುವಂತಿಲ್ಲ. ಆದರೆ ಸಲ್‍ಗಾಂವ್ಕರ್ ಈ ಪಿಚ್ ನಲ್ಲಿ 337 -340 ರನ್ ಪೇರಿಸಬಹುದು. 340 ರನ್ ಹೊಡೆದರೂ ಇದನ್ನು ಚೇಸ್ ಮಾಡಬಹುದು ಎಂದು ತಿಳಿಸಿದ್ದರು.

  • ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ – 104 ಬಾಲಲ್ಲಿ 176 ರನ್ ಬಾರಿಸಿದ ಎಬಿ!

    ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ – 104 ಬಾಲಲ್ಲಿ 176 ರನ್ ಬಾರಿಸಿದ ಎಬಿ!

    ಪಾರ್ಲ್: ಬಾಂಗ್ಲಾದೇಶದ ವಿರುದ್ಧದ 2ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. 104 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 15 ಬೌಂಡರಿಗಳ ನೆರವಿನಿಂದ 176 ರನ್ ಗಳಿಸಿ ಔಟಾದರು.

    ಒಂದು ಹಂತದಲ್ಲಿ ಡಿವಿಲಿಯರ್ಸ್ ದ್ವಿಶತಕ ಬಾರಿಸುತ್ತಾರೆ ಎಂಬಂತೆ ಆಟವಾಡುತ್ತಿದ್ದರು. ಆದರೆ ಪಂದ್ಯದಲ್ಲಿ ಇನ್ನೂ 14 ಎಸೆತ ಬಾಕಿ ಇರುವಂತೆಯೇ ರುಬೆಲ್ ಹೊಸೈನ್ ಎಸೆತದಲ್ಲಿ ಶಬ್ಬೀರ್ ರಹಮಾನ್ ಕೈಗೆ ಕ್ಯಾಚ್ ನೀಡಿ ಇನ್ನಿಂಗ್ಸ್ ಅಂತ್ಯಗೊಳಿಸಿದರು. 174 ರನ್ ಏಕದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಗಳಿಸಿದ ಗರಿಷ್ಠ ಮೊತ್ತ.

    43ನೇ ಓವರ್ ನಿಂದ 47ನೇ ಓವರ್ ವರೆಗೆ ತಾನು ಎದುರಿಸಿದ ಒಟ್ಟು 17 ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ್ದು ಡಿವಿಲಿಯರ್ಸ್ ಈ ಇನ್ನಿಂಗ್ಸ್ ನ ವಿಶೇಷತೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ತ್ಯಜಿಸಿದ್ದ ಡಿವಿಲಿಯರ್ಸ್ ಇದೇ ಮೊದಲ ಬಾರಿಗೆ ಆಟವಾಡಲು ಮೈದಾನಕ್ಕಿಳಿದಿದ್ದರು.

    ಹಶೀಂ ಆಮ್ಲ 85 ರನ್ ಗಳಿಸಿ ಔಟಾಗುತ್ತಿದ್ದಂತೆ ವೇಗದ ಆಟಕ್ಕೆ ಒತ್ತು ನೀಡಿದ ಡಿವಿಲಿಯರ್ಸ್ ಒಂದು ಹಂತದಲ್ಲಿ ದ್ವಿಶತಕ ಗಳಿಸುತ್ತಾರೆ ಎಂಬ ಭಾವನೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಮೂಡಿಸಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ 400 ರನ್ ಗಡಿ ದಾಟಲಿದೆ ಎಂಬಂತಿತ್ತು. ಆದರೆ ನಿಗದಿತ 50 ಓವರ್ ಮುಗಿದಾಗ ದಕ್ಷಿಣ ಆಫ್ರಿಕಾ 353 ರನ್ ಗಳಿಸಿತ್ತು.

    354 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ 249 ರನ್ ಗಳಿಸಿ 104 ರನ್ ಗಳಿಂದ ಸೋಲನ್ನೊಪ್ಪಿತು. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಫಿಲುಕ್ವಾಯೋ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. 3 ಪಂದ್ಯಗಳ ಸರಣಿಯಲ್ಲಿ ಆರಂಭದ 2 ಪಂದ್ಯಗಳನ್ನು ಗೆದ್ದು ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.