Tag: ODI Cricket

  • ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ಮೊಹಾಲಿ: ವಿಶ್ವಕಪ್‌ಗೂ (World Cup 2023) ಮುನ್ನ ಆರಂಭವಾಗಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿರುವ ಭಾರತ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ನಂ.1 ಸ್ಥಾನಕ್ಕೇರಿದೆ. ಇದರೊಂದಿಗೆ T20 ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲೂ (Test Cricket) ಅಗ್ರಸ್ಥಾನಕೇರಿದ್ದು, ಕ್ರಿಕೆಟ್‌ ಲೋಕದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ.

    ಭಾರತ ತಂಡ (Team India) 59 ಪಂದ್ಯಗಳಿಂದ 15,589 ಅಂಕಗಳು ಹಾಗೂ 264 ಶ್ರೇಯಾಂಕದೊಂದಿಗೆ (Rating) ಟಿ20 ಕ್ರಿಕೆಟ್‌ನಲ್ಲಿ, 42 ಪಂದ್ಯಗಳಿಂದ 4,864 ಅಂಕಗಳು ಹಾಗೂ 116 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಹಾಗೂ 29 ಪಂದ್ಯಗಳಿಂದ 3,434 ಅಂಕಗಳು ಹಾಗೂ 118 ಶ್ರೇಯಾಂಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

    ಟಿ20 ಕ್ರಿಕೆಟ್‌ನಲ್ಲಿ ಹಾಲಿ ವಿಶ್ವಕಪ್‌ ಚಾಂಪಿಯನ್‌ ಇಂಗ್ಲೆಂಡ್‌ (England) ತಂಡವು 261 ಶ್ರೇಯಾಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 254 ಶ್ರೇಯಾಂಕದೊಂದಿಗೆ 3ನೇ ಸ್ಥಾನ, 254 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 4ನೇ ಸ್ಥಾನ ಹಾಗೂ 251 ಶ್ರೇಯಾಂಕದೊಂದಿಗೆ ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.

    ಏಕದಿನ ಕ್ರಿಕೆಟ್‌ನಲ್ಲಿ 115 ಶ್ರೇಯಾಂಕದೊಂದಿಗೆ ಪಾಕಿಸ್ತಾನ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 111 ಶ್ರೇಯಾಂಕದೊಂದಿಗೆ 3ನೇ ಸ್ಥಾನದಲ್ಲಿ, ದಕ್ಷಿಣ ಆಫ್ರಿಕಾ 106 ಶ್ರೇಯಾಂಕದೊಂದಿಗೆ 4ನೇ ಸ್ಥಾನದಲ್ಲಿ ಹಾಗೂ ಇಂಗ್ಲೆಂಡ್‌ 105 ಶ್ರೇಯಾಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

    ಟೆಸ್ಟ್‌ ಕ್ರಿಕೆಟ್‌ನಲ್ಲಿ 118 ಶ್ರೇಯಾಂಕದೊಂದಿಗೆ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ 115 ಶ್ರೇಯಾಂಕದೊಂದಿಗೆ 3ನೇ ಸ್ಥಾನ, ದಕ್ಷಿಣ ಆಫ್ರಿಕಾ 104 ಶ್ರೇಯಾಂಕದೊಂದಿಗೆ 4ನೇ ಸ್ಥಾನ ಹಾಗೂ 100 ಶ್ರೇಯಾಂಕದೊಂದಿಗೆ ನ್ಯೂಜಿಲೆಂಡ್‌ 5ನೇ ಸ್ಥಾನದಲ್ಲಿದೆ.

    ಸದ್ಯ ಏಕದಿನ ವಿಶ್ವಕಪ್‌‌ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಕ್ರಿಕೆಟ್‌ ಸರಣಿಯನ್ನಾಡುತ್ತಿದೆ. ಇದು ವಿಶ್ವಕಪ್‌ ಟೂರ್ನಿಗೆ ಪೂರ್ವ ತಯಾರಿಯೂ ಆಗಿದ್ದು, ಮೊದಲ ಪಂದ್ಯದಲ್ಲೇ 5 ವಿಕೆಟ್‌ಗಳ ಜಯ ಸಾಧಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KL ರಾಹುಲ್‌ ಈಸ್‌ ಬ್ಯಾಕ್‌ – ‌ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕನ್ನಡಿಗನ ವಿಶೇಷ ಸಾಧನೆ

    KL ರಾಹುಲ್‌ ಈಸ್‌ ಬ್ಯಾಕ್‌ – ‌ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕನ್ನಡಿಗನ ವಿಶೇಷ ಸಾಧನೆ

    ಕೊಲಂಬೊ: 2023ರ ಐಪಿಎಲ್ ಟೂರ್ನಿ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಕೆ.ಎಲ್ ರಾಹುಲ್ (KL Rahul) ಇದೀಗ ಸಂಪೂರ್ಣ ಫಿಟ್ ಆಗಿ ವಾಪಸ್‌ ಆಗಿದ್ದಾರೆ. ಸುದೀರ್ಘ ಸಮಯದ ಬಳಿಕ ಟೀಂ ಇಂಡಿಯಾಕ್ಕೆ (Team India) ಮರಳಿದ ಮೊದಲ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

    ಏಕದಿನ ಏಷ್ಯಾಕಪ್‌ ಟೂರ್ನಿಯ ಸೂಪರ್‌-4ನಲ್ಲಿ (Asia Cup Super Four) ಪಾಕ್‌ ವಿರುದ್ಧದ ಕಣಕ್ಕಿಳಿದಿರುವ ರಾಹುಲ್‌ 28 ಎಸೆತಗಳಲ್ಲಿ 17 ರನ್‌ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 2,000 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ ಕೃಪೆ ತೋರಿದ್ನಾ ವರುಣ? ರಾತ್ರಿ 7ರ ವರೆಗೂ ಮಳೆ ಮುನ್ಸೂಚನೆ ಇಲ್ಲ

    ವಿಕೆಟ್‌ಕೀಪರ್ ಬ್ಯಾಟ್ಸ್‌ಮ್ಯಾನ್‌ ಆಗಿರುವ ಕೆ.ಎಲ್‌ ರಾಹುಲ್‌ 55 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಹಾಗೂ 53 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್‌ನಲ್ಲಿ ಇಷ್ಟು ರನ್‌ ಪೂರೈಸಿದ 3ನೇ ಭಾರತೀಯ ಬ್ಯಾಟ್ಸ್‌ಮ್ಯಾನ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಈ ಹಿಂದ ಶಿಖರ್‌ ಧವನ್‌ 48 ಇನ್ನಿಂಗ್ಸ್‌ಗಳಲ್ಲಿ, ನವಜೋತ್‌ ಸಿಂಗ್‌ ಸಿಧು ಮತ್ತು ಸೌರವ್‌ ಗಂಗೂಲಿ 52 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ ಜೊತೆಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.

    ಕೆ.ಎಲ್‌ ರಾಹುಲ್‌ 45+ ಸರಾಸರಿಯಲ್ಲಿ 2,000 ರನ್‌ ಪೂರೈಸಿದ್ದು, ಇದರಲ್ಲಿ 5 ಶತಕಗಳು ಹಾಗೂ 13 ಅರ್ಧಶತಕಗಳೂ ಒಳಗೊಂಡಿವೆ. ತವರಿನಲ್ಲೇ ನಡೆದ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 49.00 ಸರಾಸರಿಯಲ್ಲಿ 833 ರನ್‌ ಗಳಿಸಿದ್ರೆ, ವಿದೇಶಿ ನೆಲದಲ್ಲಿ ನಡೆದ 25 ಪಂದ್ಯಗಳಲ್ಲಿ 38.52 ಸರಾಸರಿಯಲ್ಲಿ 732 ರನ್‌ ಚಚ್ಚಿದ್ದಾರೆ. ಇದೀಗ ತಟಸ್ಥ ಸ್ಥಳಗಳಲ್ಲಿ 10ನೇ ಪಂದ್ಯ ಆಡುತ್ತಿರುವ ರಾಹುಲ್‌ 430ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್‌ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ

    16ನೇ ಆವೃತ್ತಿ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆ ನಂಥೃ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಫಿಟ್ನೆಸ್‌ ಸಮಸ್ಯೆ ಎದುರಿಸಿದ್ದ ರಾಹುಲ್, ಈ ಬಾರಿ ಏಷ್ಯಾಕಪ್‌ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸೂಫರ್‌-4 ಹಂತದಲ್ಲಿ ಪಾಕ್‌ ವಿರುದ್ಧ ಮೊದಲ ಪಂದ್ಯಕ್ಕೆ ಎಂಟ್ರಕೊಟ್ಟಿದ್ದು ಉತ್ತಮ ರನ್‌ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಂಗ್‌ ಕೊಹ್ಲಿ ಕಟ್ಟಿಹಾಕಲು ಬಾಬರ್‌ ಬಳಿ ಇದೆಯಾ ಮಾಸ್ಟರ್‌ ಪ್ಲ್ಯಾನ್‌? – ಇಬ್ಬರಲ್ಲಿ ಯಾರು ಬೆಸ್ಟ್‌?

    ಕಿಂಗ್‌ ಕೊಹ್ಲಿ ಕಟ್ಟಿಹಾಕಲು ಬಾಬರ್‌ ಬಳಿ ಇದೆಯಾ ಮಾಸ್ಟರ್‌ ಪ್ಲ್ಯಾನ್‌? – ಇಬ್ಬರಲ್ಲಿ ಯಾರು ಬೆಸ್ಟ್‌?

    ಕ್ಯಾಂಡಿ: ಕಳೆದ ವರ್ಷ ಟಿ20 ವಿಶ್ವಕಪ್‌ (WorldCup) ಟೂರ್ನಿಯಲ್ಲಿ ಪಾಕ್‌ ತಂಡದ ಗೆಲುವಿಗೆ ಅಡ್ಡಗೋಡೆಯಾಗಿದ್ದ ವಿರಾಟ್‌ ಕೊಹ್ಲಿ (Virat Kohli) ಅವರನ್ನ ಕಟ್ಟಿಹಾಕಲು ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ಆಟವಾಡಿದ್ದ ಕೊಹ್ಲಿ ಪಾಕ್‌ ವಿರುದ್ಧ 53 ಎಸೆತಗಳಲ್ಲಿ 82 ರನ್‌ ಚಚ್ಚಿದ್ದರು. ಕೊನೆಯ 8 ಎಸೆತಗಳಲ್ಲಿ 28 ರನ್‌ಗಳು ಬೇಕಿದ್ದಾಗ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸುವ ಮೂಲಕ ಟೀಂ ಇಂಡಿಯಾಕ್ಕೆ (Team India) ಗೆಲುವು ತಂದುಕೊಟ್ಟಿದ್ದರು. ಈ ವಿರೋಚಿತ ಸೋಲು ಮತ್ತೆ ಎದುರಾಗದಂತೆ ನೋಡಿಕೊಳ್ಳಲು ಬಾಬರ್‌ ಆಜಂ ಕೊಹ್ಲಿಯನ್ನ ಕಟ್ಟಿಹಾಕಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ನಡುವೆ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಆಟಗಾರನಾಗಿರುವ ಬಾಬರ್‌ ಆಜಂ ಹಾಗೂ ಹಲವು ದಿಗ್ಗಜರ ದಾಖಲೆಗಳನ್ನ ಉಡೀಸ್‌ ಮಾಡಿರುವ ಕೊಹ್ಲಿ ಇಬ್ಬರಲ್ಲಿ ಯಾರು ಬೆಸ್ಟ್‌ ಎಂಬ ಟ್ರೆಂಡ್‌ ಸಹ ಹುಟ್ಟಿಕೊಂಡಿದೆ. ಏಕೆಂದರೆ ಬಾಬರ್‌ ಹಾಗೂ ಕೊಹ್ಲಿ ಎಲ್ಲಾ ಸ್ವರೂಪದಲ್ಲಿ ಉತ್ತಮ ದಾಖಲೆಗಳನ್ನ ಮಾಡಿದ್ದಾರೆ. ಕೇವಲ ಏಕದಿನ ಕ್ರಿಕೆಟ್‌ ಅನ್ನು ನೋಡಿದಾಗ ವಿರಾಟ್‌ ಕೊಹ್ಲಿ 275 ಪಂದ್ಯಗಳಿಂದ 57.32ರ ಸರಾಸರಿಯ ಹಾಗೂ 93.62ರ ಸ್ಟ್ರೈಕ್‌ರೇಟ್‌ನಲ್ಲಿ 12,898 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ ಅವರು 46 ಶತಕಗಳು ಹಾಗೂ 65 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಇದನ್ನೂ ಓದಿ: AsiaCup 2023: ಬಾಂಗ್ಲಾಕ್ಕೆ ಲಗಾಮು ಹಾಕಿದ ಲಂಕಾ – 5 ವಿಕೆಟ್‌ಗಳ ಜಯದೊಂದಿಗೆ ಶುಭಾರಂಭ

    ಇನ್ನೂ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಜಂ 104 ಏಕದಿನ ಪಂದ್ಯಗಳಿಂದ 59.47ರ ಸರಾಸರಿ ಹಾಗೂ 89.39ರ ಸ್ಟ್ರೈಕ್‌ ರೇಟ್‌ನಲ್ಲಿ 5,353 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 18 ಶತಕಗಳು ಹಾಗೂ 28 ಅರ್ಧಶತಕಗಳನ್ನ ಬಾರಿಸಿದ್ದಾರೆ. ಶನಿವಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್‌ ಪಂದ್ಯದಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ. ಇದನ್ನೂ ಓದಿ: AsiaCup 2023: ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆಯಲು ಕಾಯ್ತಿದ್ದಾರೆ ಬಾಬರ್ ಆಜಂ

    ಪಾಕ್‌ ವಿರುದ್ಧ ಕೊಹ್ಲಿಯ ದಾಖಲೆ:
    ಪಾಕ್‌ ವಿರುದ್ಧ ನಡೆದಿರುವ ಏಕದಿನ ಕ್ರಿಕೆಟ್‌ ಮ್ಯಾಚ್‌ನಲ್ಲಿ ವಿರಾಟ್‌ ಉತ್ತಮ ಪ್ರದರ್ಶನವನ್ನೇ ತೋರುತ್ತಾ ಬಂದಿದ್ದಾರೆ. ಪ್ರಸಕ್ತ ಏಷ್ಯಾ ಕಪ್‌ ಟೂರ್ನಿಗೂ ಮುನ್ನ ವಿರಾಟ್‌ 13 ಏಕದಿನ ಪಂದ್ಯಗಳಿಂದ 48.72ರ ಸರಾಸರಿಯಲ್ಲಿ 2 ಶತಕಗಳು ಸೇರಿದಂತೆ 536 ರನ್‌ ಗಳಿಸಿದ್ದಾರೆ. ಅಲ್ಲದೇ ಏಕದಿನ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಸಹ ಆಗಿದ್ದಾರೆ. 2012ರಲ್ಲಿ ಮೀರ್‌ಪುರ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 148 ಎಸೆತಗಳಲ್ಲಿ 183 ರನ್‌ಗಳನ್ನ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಗರಿಷ್ಠ ಸ್ಕೋರ್‌ ಕೂಡ ಆಗಿದೆ.

    2015ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ವಿರುದ್ಧ ವಿರಾಟ್‌ ಕೊಹ್ಲಿ ತಮ್ಮ 2ನೇ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ 126 ಎಸೆತಗಳನ್ನ ಎದುರಿಸಿದ್ದ ಅವರು, 107 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 76 ರನ್‌ಗಳಿಂದ ಗೆಲುವು ಪಡೆದಿತ್ತು. ಇನ್ನು ಚಾಂಪಿಯನ್ಸ್ ಟ್ರೋಫಿಯ ಪಾಕ್‌ ವಿರುದ್ಧ ಕೊಹ್ಲಿ 68 ಎಸೆತಗಳಲ್ಲಿ ಅಜೇಯ 81 ರನ್‌ ಗಳಿಸಿದ್ದರು. ಇನ್ನೂ 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 65 ಎಸೆತಗಳಿಂದ 77 ರನ್‌ಗಳನ್ನು ಗಳಿಸಿದ್ದರು.

    ಭಾರತ ವಿರುದ್ಧ ಬಾಬರ್‌ ದಾಖಲೆಗಳು:
    ಪಾಕಿಸ್ತಾನ ನಾಯಕ ಬಾಬರ್‌ ಆಜಂ ಟೀಂ ಇಂಡಿಯಾ ವಿರುದ್ಧ 5 ಏಕದಿನ ಪಂದ್ಯಗಳಿಂದ 31.60ರ ಸರಾಸರಿಯಲ್ಲಿ 158 ರನ್‌ ಗಳಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಭಾರತ ವಿರುದ್ಧ ಬಾಬರ್‌ ಆಜಂ ಮೊದಲ ಬಾರಿ ಆಡಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 8 ರನ್‌ ಗಳಿಸಿ ಉಮೇಶ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದ್ದರು. ಇದೇ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಜಂ ಅವರು 52 ಎಸೆತಗಳಲ್ಲಿ 46 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 180 ರನ್‌ಗಳಿಂದ ಪಾಕಿಸ್ತಾನ ತಂಡವನ್ನ ಮಣಿಸಿತ್ತು.

    ಇನ್ನು 2018ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಬಾಬರ್‌ ಆಜಂ ಕ್ರಮವಾಗಿ 47 ಹಾಗೂ 9 ರನ್‌ ಗಳಿಸಿದ್ದರು. ಇನ್ನು 2019ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಬಾಬರ್‌ ಆಜಂ 57 ಎಸೆತಗಳಲ್ಲಿ 48 ರನ್‌ ಗಳಿಸಿದ್ದರು. ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಬಾಬರ್‌ ಆಜಂ ಅವರ ಗರಿಷ್ಠ ಮೊತ್ತ ಇದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆಯಲು ಕಾಯ್ತಿದ್ದಾರೆ ಬಾಬರ್ ಆಜಂ

    AsiaCup 2023: ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆಯಲು ಕಾಯ್ತಿದ್ದಾರೆ ಬಾಬರ್ ಆಜಂ

    ಇಸ್ಲಾಮಾಬಾದ್/ಕೊಲಂಬೊ: ಬಹುನಿರೀಕ್ಷಿತ ಏಕದಿನ ಏಷ್ಯಾಕಪ್ (AsiaCup 2023) ಟೂರ್ನಿ ಆರಂಭವಾಗಿದೆ. ರಣರೋಚಕ ಇಂಡೋ-ಪಾಕ್ ಕದನಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ನಂ.1 ಬ್ಯಾಟ್ಸ್‌ಮ್ಯಾನ್‌ ಆಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ (Babar Azam) ಶನಿವಾರ (ಸೆ.2) ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಹೊಸ ದಾಖಲೆ ಬರೆಯಲು ಎದುರು ನೋಡ್ತಿದ್ದಾರೆ.

    877 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್‌ ಆಗಿರುವ ಬಾಬರ್ ಆಜಂ 6 ಸಾವಿರ ರನ್ ಪೂರೈಸುವ ಸನಿಹದಲ್ಲಿದ್ದಾರೆ. 121 ಪಂದ್ಯಗಳಿಂದ 49.30 ಸರಾಸರಿಯಲ್ಲಿ 5,916 ರನ್ ಗಳಿಸಿರುವ ಬಾಬರ್ ಇನ್ನು 84 ರನ್ ಗಳಿಸಿದ್ರೆ 6 ಸಾವಿರ ರನ್ ಪೂರೈಸಲಿದ್ದಾರೆ. ಈ ಮೂಲಕ ದಿಗ್ಗಜರ ದಾಖಲೆ ಪಟ್ಟಿ ಸೇರಲು ಬಾಬರ್ ಸಜ್ಜಾಗಿದ್ದಾರೆ.

    121 ಪಂದ್ಯಗಳಿಂದ 49.30 ಸರಾಸರಿಯಲ್ಲಿ 5,916 ರನ್‌ಗಳಿಸಿರುವ ಬಾಬರ್ ಆಜಂ ಇದೀಗ ಟೀಂ ಇಂಡಿಯಾ ವಿರುದ್ಧ ಬೃಹತ್ ಮೊತ್ತ ದಾಖಲಿಸಲು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

    2023ರ ಏಷ್ಯಾಕಪ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಬಾಬರ್ ಆಜಂ ತಮ್ಮ ವೃತ್ತಿ ಜೀವನದ 19ನೇ ಏಕದಿನ ಶತಕ ಪೂರ್ಣಗೊಳಿಸಿದರು. ಈ ಮೂಲಕ ಪಾಕಿಸ್ತಾನ ಪರ ಅತಿ ಹೆಚ್ಚು ಏಕದಿನ ಶತಕ ಸಿಡಿಸಿರುವ 2ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ. 20 ಶತಕಗಳನ್ನು ಸಿಡಿಸಿದ್ದ ಸಯಿದ್ ಅನ್ವರ್ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

    ಅಲ್ಲದೇ ಬಾಬರ್ ಏಷ್ಯಾ ಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ 3ನೇ ಬ್ಯಾಟ್ಸ್‌ಮ್ಯಾನ್‌ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ 1 ಶತಕ ಸಿಡಿಸಿದ್ರೆ, ಶಾಹಿದ್ ಅಫ್ರಿದಿ 2 ಶತಕಗಳು ಹಾಗೂ ಶೋಯೆಬ್ ಮಲಿಕ್ 1 ಶತಕ ಸಿಡಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲು ಇದೀಗ ಸಮರಾಭ್ಯಾಸ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಗಿಲ್‌

    ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಗಿಲ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್‌ (ICC World Cup 2023) ಟೂರ್ನಿಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ನಡೆಯುವ ಲೀಗ್‌ ಹಾಗೂ ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌ ದರವನ್ನು ಬಹಿರಂಗಪಡಿಸಲಾಗಿದೆ.

    ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು 1 ಸೆಮಿಫೈನಲ್‌ ಸೇರಿದಂತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್​ (CAB) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ (Snehashis Ganguly) ವಿಶ್ವಕಪ್ ಪಂದ್ಯಗಳ ಟಿಕೆಟ್​ಗಳ ಬೆಲೆಯನ್ನ ಘೋಷಿಸಿದ್ದಾರೆ. ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲ ಪಂದ್ಯಗಳಿಗೆ 650 ರೂ.ಗಳಿಂದ 3,000 ರೂ.ಗಳವರೆಗೆ ಬೆಲೆಗಳು ಇರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಐತಿಹಾಸಿಕ ಮೈದಾನವು ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಭಾರತ-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು 2ನೇ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಯಾವ ಪಂದ್ಯಕ್ಕೆ ಎಷ್ಟು ಶುಲ್ಕ?
    ಮೊದಲ ಪಂದ್ಯಕ್ಕೆ (ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ) 650 ರೂ., 4ನೇ ಪಂದ್ಯಕ್ಕೆ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ಮತ್ತು 2ನೇ ಪಂದ್ಯಕ್ಕೆ (ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ) 800 ರೂ.ಗಳಿಂದ ಪ್ರಾರಂಭವಾಗಿ 2,200 ರೂ.ಗಳವರೆಗೆ ಟಿಕೆಟ್ ದರ ನಿಗದಿಮಾಡಲಾಗಿದೆ. ಮತ್ತೊಂದೆಡೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯದ ಟಿಕೆಟ್ ದರ 900-3,000 ರೂ.ವರೆಗೆ ಇರಲಿದೆ.

    ಅಕ್ಟೋಬರ್ 28 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮೇಲಿನ ಹಂತದ ಸೀಟುಗಳಿಗೆ ಕನಿಷ್ಠ ಟಿಕೆಟ್ ದರ 650 ರೂ. ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳ ಬೆಲೆ 1,000 ರೂ ಆಗಿದ್ದರೆ, ಬಿ, ಸಿ, ಕೆ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳ ಬೆಲೆ 1500 ರೂ. ನಿಗದಿಯಾಗಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ, ಹಾಗೆಯೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್ ದರವು ಮೇಲಿನ ಹಂತಗಳಿಗೆ 800 ರೂ. ಡಿ ಮತ್ತು ಎಚ್ ಬ್ಲಾಕ್ ಟಿಕೆಟ್‌ಗಳು ರೂ 1200, ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳು ರೂ 2,000 ಮತ್ತು ಬಿ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳು ಗರಿಷ್ಠ ರೂ 2,200ಗೆ ಲಭ್ಯವಿರುತ್ತವೆ.

    2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ, ಕೋಲ್ಕತಾದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಗಳಿಂದಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಳ ಮುಖಾಮುಖಿ ಪಂದ್ಯಕ್ಕೆ ಆತಿಥ್ಯ ವಹಿಸಲು ವಿಫಲಗೊಂಡಿತ್ತು. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಇಂಡೋ-ಪಾಕ್ ಕದನ ಕೂಡ ನಡೆಯಬಹುದು:
    ಈಡನ್‌ ಗಾರ್ಡನ್ಸ್‌ನ 5 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವೂ ಸೇರಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆದರೆ ನವೆಂಬರ್ 16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಿಗದಿಯಾಗಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್‌ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ

    ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್‌ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ

    ಮುಂಬೈ: ಏಕದಿನ ವಿಶ್ವಕಪ್‌ಗೂ (ICC WorldCup) ಮುನ್ನ ಜಸ್ಪ್ರೀತ್‌ ಬುಮ್ರಾ (Jasprit Bumrah) ಕಣಕ್ಕಿಳಿಯಲು ಸಿದ್ಧರಾಗಿರಬೇಕು ಎಂಬ ಕಾರಣಕ್ಕೆ, ಆತುರವಾಗಿ ಬುಮ್ರಾ ಅವರನ್ನ ಆಡಿಸುವ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಎಚ್ಚರಿಕೆ ಕೊಟ್ಟಿದ್ದಾರೆ.

    ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ವರ್ಷದ ಸಪ್ಟೆಂಬರ್ ತಿಂಗಳ ಬಳಿಕ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. 2022ರ T20 ಏಷ್ಯಾಕಪ್‌, T20 ವಿಶ್ವಕಪ್‌ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ ಪಂದ್ಯ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾದರು. ಇದನ್ನೂ ಓದಿ: ಕಿತ್ತು ತಿನ್ನುವ ಬಡತನ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಯುವಕ ಈಗ ಟೀಂ ಇಂಡಿಯಾ ಆಟಗಾರ

    ಈ ವರ್ಷಾಂತ್ಯಕ್ಕೆ ಭಾರತದಲ್ಲೇ ಏಕದಿನ ವಿಶ್ವಕಪ್‌ ನಡೆಯಲಿದ್ದು, ಬುಮ್ರಾ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ತಯಾರಿ ನಡೆಸಿದೆ. ಬುಮ್ರಾ ಬಹುತೇಕ ಫಿಟ್ ಆಗಿದ್ದು, ವಿಶ್ವಕಪ್‌ಗೂ ಮುನ್ನ ಐರ್ಲೆಂಡ್‌ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಕಂಬ್ಯಾಕ್‌ ಮಾಡಿಸುವ ಪ್ರಯತ್ನದಲ್ಲಿದೆ. ಈ ಬೆಳವಣಿಗೆಯ ಬಗ್ಗೆ ರವಿ ಶಾಸ್ತ್ರಿ ಟೀಂ ಇಂಡಿಯಾಗೆ (Team India) ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರವಿ ಶಾಸ್ತ್ರಿ, ಏಕದಿನ ವಿಶ್ವಕಪ್‌ಗೂ ಮುನ್ನ ಬುಮ್ರಾ ಅವರನ್ನು ಆಡಿಸುವ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಬೂಮ್ರಾ ಬಹಳ ಮುಖ್ಯ ಕ್ರಿಕೆಟಿಗ. ಆದ್ರೆ ವಿಶ್ವಕಪ್‌ನ ಹಿನ್ನೆಲೆಯಲ್ಲಿ ನೀವು ಆತುರಪಟ್ಟರೆ ನೀವು ಮತ್ತೆ 4 ತಿಂಗಳ ಕಾಲ ಅವರನ್ನ ಕಳೆದುಕೊಳ್ಳಬೇಕಾಗಬಹುದು. ಶಾಹಿನ್ ಅಫ್ರಿದಿ ಆದಂತೆಯೇ ಆಗಬಹುದು. ಇದು ಅತ್ಯಂತ ಸೂಕ್ಷ್ಮ ವಿಚಾರ ಎಂದು ಎಚ್ಚರಿಸಿದ್ದಾರೆ.

    ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟು ಟಿ20 ಕ್ರಿಕೆಟ್‌ನಲ್ಲಿ ಕೆಟ್ಟ ಸಾಧನೆ ಮಾಡಿದ್ದರು. ಯಾರ್ಕರ್‌ ಸ್ಪೆಷಲಿಸ್ಟ್‌ ಆಗಿರುವ ಬುಮ್ರಾ ಅಂದು ಯಾವುದೇ ವಿಕೆಟ್‌ ಸಹ ಪಡೆದಿರಲಿಲ್ಲ.

  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಹಿಟ್‌ಮ್ಯಾನ್

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಹಿಟ್‌ಮ್ಯಾನ್

    ಮುಂಬೈ: 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ್ದಾರೆ.

    2007ರ ಜೂನ್ 23ರಂದು ಭಾರತ ತಂಡದ (Team India) ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಐರ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಬೆಲ್ಫಾಸ್‌ನಲ್ಲಿ ಪೂರ್ಣ ತೋಳಿನ ಜಂಪರ್‌ಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿತ್ತು.

    ಇದುವೆರೆಗೆ 441 ಅಂತಾರಾಷ್ಟ್ರೀಯ (International Cricket) ಪಂದ್ಯಗಳನ್ನಾಡಿರುವ ಹಿಟ್‌ಮ್ಯಾನ್, 17,115 ರನ್ ಪೂರೈಸಿದ್ದಾರೆ. 43 ಅಂತಾರಾಷ್ಟ್ರೀಯ ಶತಕಗಳೂ ಇದರಲ್ಲಿ ಸೇರಿವೆ. 36ರ ಹರೆಯದ `ಹಿಟ್ ಮ್ಯಾನ್’ ಈಗ ತಮ್ಮ ವೃತ್ತಿಜೀವನದ ಪ್ರಮುಖ ಹೊಸ್ತಿಲಲ್ಲಿದ್ದಾರೆ. ಇದನ್ನೂ ಓದಿ: ಪೂಜಾರ ಔಟ್‌, ಯಶಸ್ವಿ ಇನ್‌ – ವಿಂಡೀಸ್‌ ಸರಣಿಗೆ ಭಾರತ ಟೆಸ್ಟ್‌, ಏಕದಿನ ತಂಡ ಪ್ರಕಟ

    3 ದ್ವಿಶತಕ ಸಿಡಿಸಿದ ನಂ.1 ಬ್ಯಾಟರ್:
    ಟೀಂ ಇಂಡಿಯಾ ಹಾಲಿ ನಾಯಕನಾಗಿರುವ ರೋಹಿತ್ ಶರ್ಮಾ ಮೂರು ದ್ವಿಶತಕ ಬಾರಿಸಿದ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್‌ ಸಹ ಆಗಿದ್ದಾರೆ. ಇದನ್ನೂ ಓದಿ: T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    ರೋಹಿತ್ ಶರ್ಮಾ 2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ 209 ರನ್ ಗಳಿಸಿದ್ದರು. 2014ರಲ್ಲಿ ಈಡನ್ ಗಾರ್ಡನ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 264 ರನ್ ಚಚ್ಚಿದ್ದರು. 2017ರಲ್ಲಿ ಮೂರನೇ ಬಾರಿಗೆ ಶ್ರೀಲಂಕಾ ವಿರುದ್ಧವೇ ಮೊಹಾಲಿಯಲ್ಲಿ 208 ರನ್ ಸಿಡಿಸಿದ್ದರು. ಈ ಮೂಲಕ ಮೂರು ಬಾರಿ ದ್ವಿಶತಕ ಸಿಡಿಸಿದ ನಂ.1 ಬ್ಯಾಟ್ಸ್‌ಮ್ಯಾನ್‌ ಎನಿಸಿಕೊಂಡರು.

    ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್, ಶುಭಮನ್ ಗಿಲ್ ತಲಾ ಒಂದೊಂದು ಬಾರಿ ದ್ವಿಶತಕ ಸಿಡಿಸಿದ್ದಾರೆ.

  • ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಭೋಪಾಲ್: ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) 1,101 ದಿನಗಳ ಬಳಿಕ ಅಂದರೆ 3 ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡಿದ್ದಾರೆ.

    ಇಂದೋರ್‌ನ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 101 ರನ್ ಬಾರಿಸಿದ್ದಾರೆ. 6 ಸಿಕ್ಸರ್, 9 ಬೌಂಡರಿಗಳು ಇದರಲ್ಲಿ ಸೇರಿವೆ. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    2020ರ ಜನವರಿ 19ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೊನೆಯ ಶತಕ ಸಿಡಿಸಿದ್ದರು. ಇಂದು 83 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಇದು ಅವರ 2ನೇ ವೇಗದ ಶತಕವಾಗಿದೆ. ಇದನ್ನೂ ಓದಿ: T20I TEAM OF THE YEAR 2022: ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ

    ಅಲ್ಲದೇ 1,101 ದಿನಗಳ ಬಳಿಕ 30ನೇ ಶತಕ ಸಿಡಿಸಿದ ಶರ್ಮಾ ಹೊಸ ದಾಖಲೆಯನ್ನೂ ಬರೆದಿದ್ದಾರೆ. ಆಸ್ಟ್ರೇಲಿಯಾ ಕೋಚ್ ಆಗಿರುವ ರಿಕ್ಕಿಪಾಟಿಂಗ್ ಏಕದಿನ ಕ್ರಿಕೆಟ್‌ನಲ್ಲಿ 30 ಶತಕ ಸಿಡಿಸಿ, ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ 3ನೇ ಆಟಗಾರನಾಗಿದ್ದರು. ಇದೀಗ ರೋಹಿತ್ ಶರ್ಮಾ, ರಿಕ್ಕಿ ಪಾಟಿಂಗ್ ಅವರ ಶತಕ ಸಾಧನೆಯನ್ನ ಸರಿಗಟ್ಟಿದ್ದಾರೆ. ಆದರೆ ರಿಕ್ಕಿ ಪಾಂಟಿಂಗ್ 365  ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ ಶರ್ಮಾ 234 ಇನ್ನಿಂಗ್ಸ್‌ಗಳಲ್ಲೇ ಸಾಧನೆ ಮಾಡಿರುವುದು ವಿಶೇಷ.

    ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ಪಡೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ (Shubman Gill) ಜೋಡಿ 212 ರನ್‌ಗಳ ಜೊತೆಯಾಟವಾಡಿತು.

    ಏಕದಿನ ಕ್ರಿಕೆಟ್‌ನ ಸೆಂಚುರಿ ಸ್ಟಾರ್ಸ್‌ 

    • ಸಚಿನ್ ತೆಂಡೂಲ್ಕರ್ – 79 ಶತಕ, 452 ಇನ್ನಿಂಗ್ಸ್
    • ವಿರಾಟ್ ಕೊಹ್ಲಿ – 46 ಶತಕ, 261 ಇನ್ನಿಂಗ್ಸ್
    • ರೋಹಿತ್ ಶರ್ಮಾ – 30 ಶತಕ, 234 ಇನ್ನಿಂಗ್ಸ್
    • ರಿಕ್ಕಿ ಪಾಂಟಿಂಗ್ – 30 ಶತಕ, 365 ಇನ್ನಿಂಗ್ಸ್
    • ಸನತ್ ಜಯಸೂರ್ಯ – 28 ಶತಕ, 433 ಇನ್ನಿಂಗ್ಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿತ್ ಶರ್ಮಾ ಈ ತಪ್ಪನ್ನು ಮಾಡ್ತಾರೆ: ಇರ್ಫಾನ್ ಪಠಾಣ್

    ರೋಹಿತ್ ಶರ್ಮಾ ಈ ತಪ್ಪನ್ನು ಮಾಡ್ತಾರೆ: ಇರ್ಫಾನ್ ಪಠಾಣ್

    ರಾಯ್‌ಪುರ: ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ (India) 2-0 ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ. 2ನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India) ಎದುರಾಳಿ ತಂಡವನ್ನ ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕಿತು.

    ಈ ಪಂದ್ಯದಲ್ಲಿ 50 ಎಸೆತ ಎದುರಿಸಿದ ನಾಯಕ ರೋಹಿತ್ ಶರ್ಮಾ (Rohit Sharma) 51 ರನ್ ಗಳಿಸಿ ಔಟಾದರು. ಎಲ್‌ಬಿಡಬ್ಲ್ಯೂ (LBW) ಆದ ನಂತರ ಅವಕಾಶವಿದ್ದರೂ ಡಿಆರ್‌ಎಸ್ (DRS) ತೆಗೆದುಕೊಳ್ಳದೇ ಕ್ರೀಸ್ ಬಿಟ್ಟು ಹೊರನಡೆದರು. ಈ ಕುರಿತು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಮಾತನಾಡಿದ್ದಾರೆ. ಇದನ್ನೂ ಓದಿ: 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್? – 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

    `ರೋಹಿತ್ ಶರ್ಮಾ (Rohit Sharma) ಈ ಒಂದು ತಪ್ಪನ್ನ ಮಾಡ್ತಾರೆ. ಬಾಲ್ ಅವರ ಪ್ಯಾಡ್‌ಗೇ ಬಡಿದು ಎಲ್‌ಬಿಡಬ್ಲ್ಯೂ ಆದಾಗ ಅವರಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೂ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಕನಸು ಮತ್ತೆ ಭಗ್ನ – ನ್ಯೂಜಿಲೆಂಡ್‌ ವಿರುದ್ಧ ಸೋತು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಭಾರತ

    ರೋಹಿತ್ ಶರ್ಮಾ ಈಗ ಫುಲ್ ಫಾರ್ಮ್‌ನಲ್ಲಿದ್ದಾರೆ. ಆಫ್ ಸೈಡ್ ಮತ್ತು ಲೆಗ್ ಸೈಡ್‌ನಲ್ಲಿ ಅವರ ಅದ್ಭುತ ಶಾಟ್‌ಗಳನ್ನ ನಾವು ನೋಡಿದ್ದೇವೆ. ಟಾರ್ಚ್ ಲೈಟ್ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಆದರೂ ರೋಹಿತ್ ಅವರು ಯಾವುದೇ ಒತ್ತಡವಿಲ್ಲದೇ ಮೈಲಿಗಲ್ಲು ಸಾಧಿಸಿದರು ಎಂದು ಪಠಾಣ್ ಶ್ಲಾಘಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಮಾರಕ ಬೌಲಿಂಗ್ ದಾಳಿ, ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಎದುರಾಳಿ ತಂಡವನ್ನು 2ನೇ ಪಂದ್ಯದಲ್ಲಿ 108ಕ್ಕೆ ಆಲೌಟ್ ಮಾಡಿತು. 109 ರನ್‌ಗಳ ಗುರಿ ಬೆನ್ನತ್ತಿ 20.1 ಓವರ್‌ಗಳಲ್ಲೇ 111 ರನ್ ಚಚ್ಚಿ ಗೆಲುವಿನ ನಗೆ ಬೀರಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k