Tag: odela 2

  • ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

    ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ಕನ್ನಡದ ನಟ ವಸಿಷ್ಠ ಸಿಂಹ (Vasishta Simha) ನಟನೆಯ ‘ಒಡೆಲಾ 2’ (Odela 2) ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ‘ಒಡೆಲಾ 2’ ಚಿತ್ರವನ್ನು ಏಪ್ರಿಲ್‌ನಲ್ಲಿ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

    ಸದಾ ಬೋಲ್ಡ್ ಪಾತ್ರ ಹಾಗೂ ಐಟಂ ಡ್ಯಾನ್ಸ್‌ನಿಂದಲೇ ಸದ್ದು ಮಾಡುತ್ತಿದ್ದ ತಮನ್ನಾ ಅವರು ಇದೀಗ ಸಾದ್ವಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಡೆಲಾ 2’ನಲ್ಲಿ ಸಾದ್ವಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇನ್ನೂ ಈ ಚಿತ್ರ ಏ.17ರಂದು ಬಿಡುಗಡೆಯಾಗಲಿದೆ. ಇದನ್ನೂ ಓದಿ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ: ಅಂತಿಮ ವರದಿ ಸಲ್ಲಿಸಲಾಗಿದೆ

    ಕನ್ನಡದ ನಟ ವಸಿಷ್ಠ ಸಿಂಹ ಕೂಡ ‘ಒಡೆಲಾ 2’ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂದು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದಾರೆ.

    ಇನ್ನೂ ‘ಒಡೆಲಾ 2’ನಲ್ಲಿ ಯುವ, ನಾಗ ಮಹೇಶ್, ವಂಶಿ, ಸುರೇಂದರ್ ರೆಡ್ಡಿ, ಭೂಪಾಲ್, ಪೂಜಾ ರೆಡ್ಡಿ, ಹೆಬ್ಬಾ ಪಟೇಲ್ ನಟಿಸಿದ್ದಾರೆ. ಡಿ. ಮಧು ಮತ್ತು ಸಂಪತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಕಿರಿಕ್‌ ಪಾರ್ಟಿ’, ‘ಕಾಂತಾರ’ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಅಜನೀಶ್‌ ಲೋಕನಾಥ್‌ ಅವರು ‘ಒಡೆಲಾ 2’ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ‘ಓದೆಲಾ 2’ನಲ್ಲಿ ವಸಿಷ್ಠ ಸಿಂಹ ಪಾತ್ರ ಹೇಗಿದೆ? ಇಲ್ಲಿದೆ ಅಪ್‌ಡೇಟ್

    ‘ಓದೆಲಾ 2’ನಲ್ಲಿ ವಸಿಷ್ಠ ಸಿಂಹ ಪಾತ್ರ ಹೇಗಿದೆ? ಇಲ್ಲಿದೆ ಅಪ್‌ಡೇಟ್

    ಸ್ಯಾಂಡಲ್‌ವುಡ್‌ನ (Sandalwood) ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha) ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ `ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ.

    2022ರಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಓದೆಲಾ ರೈಲ್ವೆ ಸ್ಟೇಷನ್ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಕಾಣಿಸಿದ್ದಾರೆ. ಇದೀಗ ಓದೆಲಾ ರೈಲ್ವೆ ಸ್ಟೇಷನ್ ಪಾರ್ಟ್ 2 (Odela Railway Station 2) ತಯಾರಾಗುತ್ತಿದೆ. ಅದರ ಭಾಗವಾಗಿ ನಿನ್ನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಮಿಲ್ಕಿ ಬ್ಯೂಟಿ ತಮನ್ನಾ (Tamannaah Bhatia) ಮತ್ತು ವಸಿಷ್ಠ ಸಿಂಹ ಫೋಟೋಗೆ ಪೋಸ್ ಕೊಟ್ಟಿದ್ದು, ಇದರಲ್ಲಿ ಹರಿಪ್ರಿಯಾ ಕೂಡ ಇದ್ದಾರೆ. ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್‌ನ ಶೂಟಿಂಗ್ ನಿನ್ನೆಯಿಂದಲೇ ಪ್ರಾರಂಭವಾಗಿದೆ. ಇದನ್ನೂ ಓದಿ:ಅಂಬಾನಿ ಮಗನ ಅದ್ಧೂರಿ ಪ್ರೀ-ವೆಡ್ಡಿಂಗ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

    ಓದೆಲಾ ರೈಲ್ವೆ ಸ್ಟೇಷನ್ ಮೊದಲ ಭಾಗದಲ್ಲಿ ನಟಿ ಹೆಬಾ ಪಟೇಲ್ ಜೊತೆ ವಸಿಷ್ಠ ಸಿಂಹ ಅಭಿನಯಿಸಿದ್ದರು. ಆದರೆ ಎರಡನೇ ಭಾಗದಲ್ಲಿ ನಟಿ ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ ಹೆಜ್ಜೆ ಹಾಕಲಿದ್ದಾರೆ. ಹಾಗಂತ ಹೆಬಾ ಪಟೇಲ್ (Hebah Patel) ಇಲ್ಲ ಅಂತಲ್ಲ. ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕರಿಮಣಿ ಮಾಲೀಕನನ್ನು ಪರಿಚಯಿಸಿದ ದೀಪಿಕಾ ದಾಸ್

    ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಂ ವರ್ಕ್ ಬ್ಯಾನರ್ ನಡಿ ಡಿ.ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶೋಕ ತೇಜ ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಹಣ, `ಕಾಂತಾರ’ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

  • ತಮನ್ನಾ ಭಾಟಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ

    ತಮನ್ನಾ ಭಾಟಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ

    ಟ ವಸಿಷ್ಠ ಸಿಂಹ (Vasista Simha) ಇದೀಗ ಕನ್ನಡದ ಜೊತೆ ಪರಭಾಷೆಗಳತ್ತ ಮುಖ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ನಟನೆಯ ಸಿನಿಮಾದಲ್ಲಿ ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಹೆಂಡತಿ ಎಂಪಿ ಆಗಲಿ ಎಂಬ ಆಸೆಯಿದೆ- ಪಾಲಿಟಿಕ್ಸ್ ಬಗ್ಗೆ ಶಿವಣ್ಣ ಮಾತು

     

    View this post on Instagram

     

    A post shared by Vasishta N Simha (@imsimhaa)

    ವಾರಣಾಸಿ ಕಾಶಿಯಲ್ಲಿ ‘ಓದೆಲಾ 2’ (Odela 2) ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ತಮನ್ನಾ ಭಾಟಿಯಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದು, ವಸಿಷ್ಠ ಸಿಂಹ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್‌ 2ಗೆ ಕಾಂತಾರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಕನ್ನಡದ ಪ್ರತಿಭೆ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ ಈ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರಲಿದೆ.

    ಸದ್ಯ ‘ಓದೆಲಾ 2’ ಚಿತ್ರದ ಮುಹೂರ್ತ ಕಾರ್ಯಕ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಸಿಷ್ಠ ಸಿಂಹ ನಟಿಸುತ್ತಿರುವ ‘ಓದೆಲಾ 2’ ಮುಹೂರ್ತ ಕಾರ್ಯಕ್ರಮದಲ್ಲಿ ಪತ್ನಿ ಹರಿಪ್ರಿಯಾ ಕೂಡ ಭಾಗಿಯಾಗಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

    ತಮನ್ನಾ ಭಾಟಿಯಾ ಜೊತೆ ಮೊದಲ ಬಾರಿಗೆ ವಸಿಷ್ಠ ನಟಿಸುತ್ತಿರುವ ಕಾರಣ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. ವಸಿಷ್ಠ ಅವರ ಪಾತ್ರ ಮತ್ತು ಚಿತ್ರದ ಕಥೆ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.