Tag: October

  • ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ವಿವಾದದ ನಡುವೆಯೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ದಾಸ ದರ್ಶನ್. ಅಕ್ಟೋಬರ್ (October)ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ ಡೆವಿಲ್ ಸಮೇತ ಮತ್ತೆ ಬರುವೆ ಎಂದು ಹೇಳಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗುವ ಕುರಿತು ಮಾತನಾಡಿದ್ದಾರೆ. ಕಾಟೇರ 50ನೇ ದಿನದ ಸಮಾರಂಭದಲ್ಲಿ ಈ ವಿಷಯ ತಿಳೀಸಿದ್ದಾರೆ.

    ರ್ಶನ್ (Darshan) ಅಭಿನಯಿಸುತ್ತಿರೋ ಮುಂದಿನ ಚಿತ್ರ ‘ಡೆವಿಲ್’ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ.

     

    ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

  • ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ಅಭಿಮಾನಿಗಳಿಗೆ ಗುಡ್ ನ್ಯೂಸ್ : ಯಶ್ ಹೊಸ ಸಿನಿಮಾ ಅಕ್ಟೋಬರ್ 19ಕ್ಕೆ

    ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅಕ್ಟೋಬರ್ (October) 19ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

    ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

    ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

     

    ಯಶ್ 19 (Yash 19) ಸಿನಿಮಾಗಾಗಿ ರಾಕಿಭಾಯ್ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗುವವರೆಗೂ ತಮ್ಮ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಲೀಕ್ ಆಗದಂತೆ ನಟ ನೋಡಿಕೊಳ್ತಿದ್ದಾರೆ. ಕೆಲವೇ ದಿನಗಳಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ

    ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ

    ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿದೆ.

    ಕೆಇಆರ್‌ಸಿ, 2022ರ ಸೆಪ್ಟೆಂಬರ್ 19 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ. ಕೆಇಆರ್‌ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು ನಿಯಮಗಳು, 2013 ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು 43 ಪೈಸೆ ಹೆಚ್ಚಳ ಮಾಡಿ ಬೆಸ್ಕಾಂಗೆ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

    ಕೇಂದ್ರ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (CGS), ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (KPCL) ಮತ್ತು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCL) ನಿಂದ ಎಲ್ಲಾ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ. ಏಪ್ರಿಲ್-2022 ರಿಂದ ಜೂನ್-2022 ರವರೆಗೆ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಬೆಸ್ಕಾಂ ಕೆಇಆರ್‌ಸಿಗೆ 2022ರ ಆಗಸ್ಟ್ 30 ರಂದು ಅರ್ಜಿ ಸಲ್ಲಿಸಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ PayCM ಅಸ್ತ್ರಕ್ಕೆ ಬಿಜೆಪಿಯಿಂದ KaiPe ಪ್ರತ್ಯಸ್ತ್ರ

    ಕಳೆದ ಜುಲೈ ನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆ ಆದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದ್ದು, ಈ ಮೊತ್ತವನ್ನು ಅಕ್ಟೋಬರ್‌ನಿಂದ ಮುಂದಿನ ಮಾರ್ಚ್-2023ರವರೆಗೆ ಸಂಗ್ರಹಿಸಲಾಗುತ್ತದೆ ಎಂದು ಮಹಾಂತೇಶ ಬೀಳಗಿ ವಿವರಿಸಿದರು. ಇದನ್ನೂ ಓದಿ: ಮತ್ತೊಂದು ಕ್ರಷರ್ ದುರಂತ- ನೂರು ಅಡಿ ಆಳಕ್ಕೆ ಬಿದ್ದು ಕಾರ್ಮಿಕ ದುರ್ಮರಣ

    ಇಂಧನ ವ್ಯತ್ಯಾಸ ದರಗಳನ್ನು KERC (ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು, 2013ರ ಪ್ರಕಾರ, ನಿರ್ದಿಷ್ಟಪಡಿಸಿದ ಉಷ್ಣ ವಿದ್ಯುತ್ ಸ್ಥಾವರಗಳಿಂದ ಖರೀದಿಸಿದ ವಿದ್ಯುಚ್ಛಕ್ತಿಯ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆ ವ್ಯತ್ಯಾಸದಿಂದಾಗಿ ಕಾಲಕಾಲಕ್ಕೆ ಜಾರಿಯಲ್ಲಿರುವ ಜಕಾತಿಗೆ ಅನುಸಾರವಾಗಿ, ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್‍ಸಿ ಮುಂದೆ ಅರ್ಜಿ ಸಲ್ಲಿಸಲಾಗುತ್ತದೆ. ಅರ್ಜಿಯನ್ನು ಆಯೋಗವು ಪರಾಮರ್ಶಿಸಿ, ಇಂಧನ ವ್ಯತ್ಯಾಸ ದರವನ್ನು ವಸೂಲಿ ಅಥವಾ ಕಡಿತಗೊಳಿಸಲು ಕಾಲಕಾಲಕ್ಕೆ ಆದೇಶಿಸುತ್ತದೆ. ಕಲ್ಲಿದ್ದಲು ಹಾಗೂ ತೈಲ ಬೆಲೆ ಹೆಚ್ಚಾದಾಗ ಹೊಂದಾಣಿಕೆ ವೆಚ್ಚ ಹೆಚ್ಚಾಗುತ್ತದೆ, ಕಡಿಮೆಯಾದಾಗ ವೆಚ್ಚ ಇಳಿಯುತ್ತದೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ: ಬೊಮ್ಮಾಯಿ

    ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ: ಬೊಮ್ಮಾಯಿ

    ಬೆಂಗಳೂರು: ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ – ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಸುಮಂಗಲಿ ಸೇವ ಆಶ್ರಮ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಬೊಮ್ಮಾಯಿ, ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್‌ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್ ನಂತಹ ಆನ್‍ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ರೂ. ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಕಿಡ್ನಾಪ್ ಮಾಡಿದ್ರು, ಸೂರತ್‌ನಿಂದ ತಪ್ಪಿಸಿಕೊಂಡು ಬಂದೆ: ಶಿವಸೇನೆ ಶಾಸಕನ ಸ್ಫೋಟಕ ಹೇಳಿಕೆ

    ಸೇವಾಸಂಸ್ಥೆಗಳಿಗೆ ಗುರಿ ಇರಬೇಕು:
    ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ನಮ್ಮ ಸ್ಥಳೀಯಮಟ್ಟದ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟವಾಗಬೇಕು ಎನ್ನುವ ಆಸೆ ಸರ್ಕಾರದ್ದು. ಆಗ ನಮ್ಮ ಆರ್ಥಿಕತೆಗೆ ಬಹಳ ಶಕ್ತಿ ಬರುತ್ತಿದೆ. ಈ ದೇಶದಲ್ಲಿನ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕಿದೆ. ಅವರಿಗೆ ಆರ್ಥಿಕ ಸ್ವಾತಂತ್ರ್ಯ ಬಂದಾಗ ಶೈಕ್ಷಣಿಕ, ಸಾಮಾಜಿಕವಾಗಿಯೂ ಸಬಲರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸೇವಾಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಒಳ್ಳೆಯ ಕೆಲಸ ಮಾಡುವ ಚಿಂತನೆ ಪ್ರೇರಣೆ ದೊರಕುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುವ ಚಿಂತನೆ ಹಾಗೂ ಕ್ರಿಯಾಯೋಜನೆ ಇರಬೇಕು. ಪ್ರತಿ ವರ್ಷ ಕನಿಷ್ಟ 5 ಕ್ಷೇತ್ಗಗಳಿಗೆ ಗುರಿ ನಿಗದಿಸಿ ಸಾಧಿಸಲು ಪ್ರಯತ್ನಸಿ, ಸರ್ಕಾರವೂ ಪೂರಕ ಸಹಕಾರವನ್ನು ನೀಡುತ್ತದೆ ಎಂದರು.

    ದೇಶ ಕಟ್ಟುವ ತಳಹಂತದ ಶ್ರಮಿಕ ವರ್ಗ:
    ದೇಶದ ತಲಾವಾರು ಆದಾಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಇದಕ್ಕೆ ಕೇವಲ ರಾಜ್ಯದ 30 % ಜನತೆ ಮಾತ್ರ ಕೊಡುಗೆ ನೀಡುತ್ತಿದ್ದು, 70% ಜನತೆ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ 70% ಜನರಿಗೆ ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆಗಳನ್ನು ನೀಡುವ ಮೂಲಕ ಶ್ರಮಿಕ ವರ್ಗದ ಜನರು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುವಂತಾಗುತ್ತದೆ. ಈಗ ದುಡಿಮೆಯೇ ದೊಡ್ಡಪ್ಪ. ತಳಹಂತದ ಶ್ರಮಿಕ ವರ್ಗದಿಂದಲೇ ದೇಶ ಕಟ್ಟುವ ಕೆಲಸವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಕುಶಲಕರ್ಮಿಗಳ ಉತ್ಪನ್ನಗಳಿಗೆ ಪ್ರೋತ್ಸಾಹ:
    ರೈತ ಉತ್ಪನ್ನಗಳ ಸಂಘಗಳ ಮೂಲಕ ರೈತ ಉತ್ಪನ್ನಗಳ ಮೌಲ್ಯವರ್ಧನೆ, ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ಅದನ್ನು ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೀನುಗಾರಿಕೆ, ಕುಶಲಕರ್ಮಿಗಳಿಗೂ ಈ ಯೋಜನೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಚೆನ್ನಪಟ್ಟಣದಲ್ಲಿ ಆಟಿಕೆ, ಇಳಕಲ್, ಬೆಳಗಾವಿ ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮೂರು ಸೀರೆ ಮೈಕ್ರೋಕ್ಲಸ್ಟರ್‍ನ್ನು ಅಭಿವೃದ್ಧಿಪಡಿಸಲಾಗುವುದು. ಹೀಗೆ ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಿನ್ನ ಅಹಂಕಾರ ನಾಲ್ಕೇ ದಿನ – ಸಂಜಯ್ ರಾವತ್ ಮನೆ ಎದುರು ಬ್ಯಾನರ್

    ಮಹಿಳೆಯರಿಗೆ ರೂಪಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಸರ್ಕಾರ ನಿಮ್ಮೊಂದಿಗಿದೆ. ಮಹಿಳೆಯರು ನಿಸರ್ಗದತ್ತವಾಗಿ ಶಕ್ತಿಯನ್ನು ಹೊಂದಿರುತ್ತಾರೆ. ಶಕ್ತಿಯ ಗುಣ ತಾಳ್ಮೆ. ಅದರಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯ. ನಮ್ಮದು ಉಳಿತಾಯ ಮಾಡುವ ಸಂಸ್ಕೃತಿ. ಸಂಸ್ಕೃತಿಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ದುಡಿಮೆಯನ್ನು ಗುರುತಿಸಬೇಕು. ನಿಮ್ಮ ಶ್ರಮಕ್ಕೆ ಬೆಲೆ, ಸ್ಥಾನಕ್ಕೆ ಗೌರವ, ನಿಮ್ಮ ಅಸ್ತಿತ್ವಕ್ಕೆ ದೊಡ್ಡ ಗುರುತು, ಬೆಂಬಲ ಕೊಟ್ಟಾಗ ದೇಶ ಸಮೃದ್ಧವಾಗಿ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ಮಹಿಳೆಯರಿಗೆ ರೂಪಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಸುಶೀಲಮ್ಮನವರ ಸೇವೆ ನಮ್ಮೆಲರಿಗೂ ಆದರ್ಶಪ್ರಾಯ
    ಇನ್ನಷ್ಟು ಬದ್ಧತೆಯಿಂದ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುವುದು. ವಿಶೇಷವಾಗಿ ಸುಶೀಲಮ್ಮನವರ ಸೇವೆ ನಮ್ಮೆಲರಿಗೂ ಆದರ್ಶಪ್ರಾಯ ಹಾಗೂ ಮಾರ್ಗದರ್ಶಕವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದರು. ಇದನ್ನೂ ಓದಿ: ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್

    ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಸುಮಾರು 75 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಆಡಿದ್ದನ್ನು ಮಾಡಿ ತೋರಿಸುವವರು ಅವರು. ರಾಜ್ಯ ವನ್ನು ಸುಭಿಕ್ಷವಾಗಿಸಲು ಸೇವಾ ಸಂಸ್ಥೆಗಳ ಪಾತ್ರ ದೊಡ್ಡದಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    Live Tv

  • ಅಕ್ಟೋಬರ್‍ ನಲ್ಲಿ ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ ಎಕ್ಸ್ ಯುವಿ 700

    ಅಕ್ಟೋಬರ್‍ ನಲ್ಲಿ ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ ಎಕ್ಸ್ ಯುವಿ 700

    ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಅಕ್ಟೋಬರ್ 2021ರ ವೇಳೆಗೆ ಹೊಸ ಎಕ್ಸ್ ಯುವಿ 700 ಎಸ್‍ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮಹೀಂದ್ರಾ ಈಗಾಗಲೇ ಎಕ್ಸ್ ಯುವಿ 700ಗಾಗಿ ಒಂದು ವೆಬ್ ಪೇಜನ್ನು ರಚಿಸಿದೆ. ಅಲ್ಲಿ ನೀವು ಈ ಕಾರಿನ ಅಪ್‍ಡೇಟ್ಸ್ ಗಾಗಿ ನೊಂದಾಯಿಸಿಕೊಳ್ಳಬಹುದು.

    ಮಹೀಂದ್ರಾ ಎಕ್ಸ್ ಯುವಿ 700 ಹೊಸ ಶೈಲಿಯೊಂದಿಗೆ ಬರಲಿದ್ದರೂ ಇದು ಮೂಲ ಎಕ್ಸ್ ಯುವಿ 500ನ ಹೋಲಿಕೆಗಳನ್ನು ಹೊಂದಿರುತ್ತದೆ. ಹೊಸ ಗ್ರಿಲ್, ವಿಶಿಷ್ಟವಾದ ಎಲ್‍ಇಡಿ ಡಿಆರ್‍ಎಲ್‍ಗಳನ್ನು ಹೊಂದಿರುವ ಸಿ-ಆಕಾರದ ಹೆಡ್‍ಲ್ಯಾಂಪ್‍ಗಳು, ಹೊಸ ಹಿಂಬದಿ ಲೈಟ್‍ಗಳು, ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ಮರು ವಿನ್ಯಾಸಗೊಳಿಸಿರುವ ಬಾನೆಟ್, ಬಂಪರ್ ಮತ್ತು ಹಿಂಬದಿ ಬಾಗಿಲನ್ನು ಈ ಹೊಸ ಕಾರು ಹೊಂದಿದೆ. ಕಾರಿನ ಡೋರ್ ಹ್ಯಾಂಡಲ್ಸ್ ಫ್ಲಶ್ ಮೌಂಟೆಡ್ ಲಿವರ್ಸ್‍ನೊಂದಿಗೆ ಬರಲಿದ್ದು ಹೆಚ್ಚು ಆಧುನಿಕ ನೋಟವನ್ನು ನೀಡುತ್ತದೆ.

    ಎಕ್ಸ್ ಯುವಿ 700 ಕಾರಿನಲ್ಲಿ ಡ್ಯಯಲ್ ಸ್ಕ್ರೀನ್ ಲೇಔಟ್ ಇರಲಿದೆ. ಒಂದು ಸ್ಕ್ರೀನ್ ಇನ್ಪೋಟೈನ್‍ಮೆಂಟ್‍ಗೆ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‍ ಗಾಗಿ. ಈ ಸೆಟಪ್ ಮರ್ಸಿಡಿಸ್ ಬೆಂಜ್ ಕಾರಿನ ಕೆಲವು ಮಾದರಿಗಳಲ್ಲಿ ಕಂಡು ಬರುತ್ತದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ,  ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೋಲ್(ಆಟೋಮ್ಯಾಟಿಕ್ ಆವೃತ್ತಿಗಾಗಿ), ವಿವಿಧ ಡ್ರೈವ್ ಮೋಡ್‍ಗಳು, ಪ್ಯಾನರೋಮಿಕ್ ಸನ್‍ರೂಫ್, ಕ್ಯಾಪ್ಟನ್ ಸೀಟ್ಸ್ ಹೊಂದಿರುವ 6 ಆಸನಗಳ ವಿನ್ಯಾಸ ಮತ್ತು ಮಧ್ಯದ ಸಾಲಿನಲ್ಲಿ ಬೆಂಚ್ ಸೀಟ್ ಹೊಂದಿರುವ 7 ಆಸನಗಳ ವಿನ್ಯಾಸ, ಇತ್ಯಾದಿಗಳನ್ನು ಹೊಸ ಎಸ್‍ಯುವಿ ಹೊಂದಿರಲಿದೆ.

    ಎಕ್ಸ್ ಯುವಿ 700 ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್ ಯುವಿ 500ಗಿಂತ ಹೆಚ್ಚು ಉದ್ದದ ವೀಲ್‍ಬೇಸ್ ಮತ್ತು ಅಗಲವನ್ನ ಹೊಂದಿರುತ್ತದೆ. ಇದರಿಂದ ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಎಕ್ಸ್ ಯುವಿ 700 ಅಡ್ವಾನ್ಸ್ ಡ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ 2(ಎಡಿಎಎಸ್ 2) ನೊಂದಿಗೆ ಬರಲಿದೆ.

    ಮಹೀಂದ್ರಾ ಎಕ್ಸ್ ಯುವಿ 700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರೆಯುತ್ತದೆ. ಹೊಚ್ಚ ಹೊಸ 2.2 ಲೀಟರ್, 4 ಸಿಲಿಂಡರ್ ಎಂ-ಹಾಕ್ ಡೀಸೆಲ್ ಎಂಜಿನ್ 185 ಹೆಚ್‍ಪಿ ಶಕ್ತಿ ಉತ್ಪಾದಿಸುವ ನಿರೀಕ್ಷೆಯಿದೆ. 2.0 ಲೀಟರ್, 4 ಸಿಲಿಂಡರ್ ಎಂ-ಫಾಲ್ಕಾನ್ ಪೆಟ್ರೋಲ್ ಎಂಜಿನ್ 190 ಹೆಚ್‍ಪಿ ಶಕ್ತಿ ಉತ್ಪಾದಿಸುತ್ತದೆ.  ಈ ಎರಡೂ ಎಂಜಿನ್‍ಗಳು ಈಗಾಗಲೇ ಹೊಸ ಥಾರ್ ಜೀಪ್‍ನಲ್ಲಿ ಬಳಕೆಯಾಗುತ್ತಿವೆ. 6 ಸ್ಪೀಡ್ ಮ್ಯಾನ್ಯುಯಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಎಕ್ಸ್ ಯುವಿ  700 ಹೊಂದಿದೆ.

    ಎಕ್ಸ್ ಯುವಿ 700 ಅತ್ಯಂತ ಜನಪ್ರಿಯ ಎಸ್‍ಯುವಿ ವಿಭಾಗದಲ್ಲಿ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಮತ್ತು ಮುಂಬರುವ ಹ್ಯುಂಡೈ ಅಲ್ಕಜ್ ನೊಂದಿಗೆ ದಿಗೆ ಸ್ಪರ್ಧಿಸಲಿದೆ.

    ಎಕ್ಸ್‍ಯುವಿ 500 ಕಾರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಹೀಂದ್ರಾ ಕಂಪನಿಯು ಈಗಾಗಲೇ ದೃಢಪಡಿಸಿದೆ.  ಎಕ್ಸ್ ಯುವಿ 700 ಕಾರಿನ ಐದು ಆಸನಗಳ ಆವೃತ್ತಿಗೆ ಎಕ್ಸ್ ಯುವಿ 500 ಹೆಸರನ್ನು ಬಳಸಲು ಇದಕ್ಕೆ ಕಾರಣವಿರಬಹುದು.

  • 13 ದಿನಗಳ ಕಾಲ ಅಶೋಕ್ ಲೇಲ್ಯಾಂಡ್ ಉತ್ಪಾದನೆ ಸ್ಥಗಿತ

    13 ದಿನಗಳ ಕಾಲ ಅಶೋಕ್ ಲೇಲ್ಯಾಂಡ್ ಉತ್ಪಾದನೆ ಸ್ಥಗಿತ

    ಚೆನ್ನೈ: ಕಮರ್ಷಿಯಲ್ ವಾಹನ ಮಾರಾಟ ಇಳಿಕೆಯಾದ ಹಿನ್ನೆಲೆಯಲ್ಲಿ ಘನ ವಾಹನ ಉತ್ಪಾದಕ ಕಂಪನಿ ಅಶೋಕ್ ಲೇಲ್ಯಾಂಡ್ 13 ದಿನ ಉತ್ಪಾದನೆ ನಿಲ್ಲಿಸಿದೆ. ಅ.2 ರಿಂದ 15 ರವರೆಗೆ ವಾಹನ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ಕಂಪನಿ ತಿಳಿಸಿದೆ.

    ಜುಲೈ ತಿಂಗಳಿನಿಂದ ಮಾರಾಟ ಗಣನೀಯವಾಗಿ ಇಳಿಕೆಯಾಗುತ್ತಿದ್ದು, 2018ರ ಸೆಪ್ಟೆಂಬರ್ ಗೆ ಹೋಲಿಸಿದರೆ ಶೇ.50 ರಷ್ಟು ಮಾರಾಟ ಇಳಿಕೆಯಾಗಿದೆ.

    ದೇಶದ ವಿವಿಧ ಕಡೆ ಇರುವ ಘಟಕದಲ್ಲಿ ಅ.2 ರಿಂದ 15 ರವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅಶೋಕ್ ಲೇಲ್ಯಾಂಡ್ ಕಂಪನಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೆಂಜ್ (ಎನ್‍ಎಸ್‍ಇ) ಶುಕ್ರವಾರ ತಿಳಿಸಿದೆ

    ಚೆನ್ನೈ ಕೇಂದ್ರ ಸ್ಥಳವನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ಕಳೆದ 4 ತಿಂಗಳಿನಿಂದ ಉತ್ಪಾದನೆ ಕಡಿತ ಮಾಡಿದೆ. ಕಳೆದ ತಿಂಗಳು ಚೆನ್ನೈನ ಎನ್ನೋರ್, ಉತ್ತಾರಖಂಡದ ಪಂತ್ ನಗರ್, ತಮಿಳುನಾಡಿನ ಹೊಸೂರು, ರಾಜಸ್ಥಾನದ ಅಲ್ವಾರ್ ಮತ್ತು ಮಹಾರಾಷ್ಟ್ರದ ಭಂಡಾರ ಘಟಕದಲ್ಲಿ 7 ದಿನಗಳ ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

    ಸೆಪ್ಟೆಂಬರ್ ತಿಂಗಳಿನಲ್ಲಿ ಮಾಧ್ಯಮ ಮತ್ತು ಭಾರೀ ವಾಹನಗಳ ಮಾರಾಟ ಇಳಿಕೆಯಾಗಿದ್ದು, ಟಾಟಾ ಮೋಟಾರ್ಸ್ ಶೇ.47 ರಷ್ಟು ಇಳಿಕೆ ಕಂಡಿದ್ದರೆ ಅಶೋಕ್ ಲೇಲ್ಯಾಂಡ್ ಶೇ.55 ರಷ್ಟು ಇಳಿಕೆ ಕಂಡಿದೆ.