Tag: Occupation

  • ಲಿಡ್ಕರ್ ಮೂಲಕ ಸ್ವಯಂ ಉದ್ಯೋಗ ಒದಗಿಸಲು ಆದ್ಯತೆ: ಬೊಮ್ಮಾಯಿ

    ಲಿಡ್ಕರ್ ಮೂಲಕ ಸ್ವಯಂ ಉದ್ಯೋಗ ಒದಗಿಸಲು ಆದ್ಯತೆ: ಬೊಮ್ಮಾಯಿ

    ಬೆಂಗಳೂರು: ರಾಜ್ಯದ ಪ್ರತಿ ತಾಲೂಕಿನಲ್ಲಿ 100 ಹೆಚ್ಚುವರಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದ್ದು, ಲಿಡ್ಕರ್ ಯುವಕರಿಗೆ ಉದ್ಯೋಗವನ್ನು ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತುಪ್ರದರ್ಶನ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಚಮ್ಮಾರರ ಅಭಿವೃದ್ಧಿ ಸರ್ಕಾರ ಬದ್ದ ಎಂದರು. ಇದನ್ನೂ ಓದಿ: ಟಾಪ್ 100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ‘ಕೂ’ ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣಗೆ ಸ್ಥಾನ

    ಲಿಡ್ಕರ್ ನಿಗಮಕ್ಕೆ ಈ ಬಾರಿ 25 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ನಿಗಮವು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಿದ್ದಲ್ಲಿ ಪೂರಕ ಬಜೆಟ್‍ನಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗುವುದು. ಯುವಕರಿಗೆ ಉದ್ಯೋಗ ನೀಡುವ ಮೂಲಕ ಸ್ವಾಭಿಮಾನದ ಸ್ವಾವಲಂಬಿ ಬದುಕು ನಡೆಸಲು ಅನುವು ಮಾಡಿಕೊಡಬೇಕು. ಚರ್ಮೋದ್ಯಮದ ಆಧುನೀಕರಣದಲ್ಲಿ ದೊಡ್ಡ ಬದಲಾವಣೆ ಆಗಿದೆ. ಅಂತರರಾಷ್ಟ್ರೀಯ ಮಟ್ಟದ ವಿನ್ಯಾಸವಿರುವ ಪೀಠೋಪಕರಣಗಳು ಪ್ರದರ್ಶನದಲ್ಲಿ ಲಭ್ಯವಿದೆ. ಪೀಠೋಪಕರಣ ಉದ್ಯಮ ವಿಸ್ತಾರವಾದದ್ದು, ಅವುಗಳಿಗೆ ಬ್ರ್ಯಾಡಿಂಗ್ ಮಾಡುವ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸಿಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲಹೆ ನೀಡಿದರು.

    ಚರ್ಮೋದ್ಯಮ ಅನಾದಿಕಾಲದಿಂದಲೂ ಇದೆ. ಚರ್ಮ ಕುಶಲಕರ್ಮಿಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿಯಬೇಕು. ಇದಕ್ಕಾಗಿ ಚರ್ಮೋದ್ಯಮದಲ್ಲಿ ನೂತನ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸುವ ಮೂಲಕ ಚರ್ಮದ ಉತ್ಪನ್ನ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಇತತರಿಗೆ ಪ್ರೇರಣೆಯನ್ನು ನೀಡುವಂತೆ ಬಾಳಬೇಕು. ಈ ದಿಸೆಯಲ್ಲಿ ಲಿಡ್ಕರ್ ಪಾತ್ರ ದೊಡ್ಡದಿದೆ. ಚರ್ಮೋದ್ಯಮದಲ್ಲಿ ಉದ್ಯೋಗ, ಉತ್ಪಾದನೆಗಳನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಲಿಡ್ಕರ್ ನಿಗಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಲಿಡ್ಕರ್ ಸಂಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸೇರಿಸಿ ಕಳೆದ ಐದು ವರ್ಷಗಳಿಂದ 237 ಕೋಟಿ ರೂ. ಅನುದಾನ ಒದಗಿಸುವ ಮೂಲಕ 33,000 ಉದ್ಯಮಗಳಿಗೆ ಸಹಾಯವನ್ನು ಮಾಡಲಾಗಿದೆ ಎಂದರು. ಇದನ್ನೂ ಓದಿ: ಕನ್ನಡದ ‘ಲಾಕ್ ಡೌನ್’ ಸಿನಿಮಾ ನಟಿ ಶಹಾನಾ ಅನುಮಾನಾಸ್ಪದ ಸಾವು – ಪತಿ ವಶಕ್ಕೆ

    ಎಸ್‍ಸಿ, ಎಸ್‍ಟಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿಯವರು ಜಮೀನು ಖರೀದಿಗೆ ಇದ್ದ 15 ಲಕ್ಷ ಅನುದಾನವನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿಯ 30 ಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ 75 ಲಕ್ಷ ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ವಿನೂತನ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣ ನೀತಿಯ ಆಧಾರದ ಮೇಲೆ ಕೆಲಸ ಮಾಡಲಾಗುತ್ತಿದೆ. ಎಸ್‍ಸಿ, ಎಸ್‍ಟಿ, ಓಬಿಸಿ ಜನಾಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ 1,000 ಕೊಠಡಿಗಳ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುವುದು. ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ, ಯುವಕರಿಗೆ ಉದ್ಯೋಗ ಸೃಷ್ಟಿ ಆದ್ಯತೆ ನೀಡಲಾಗಿದೆ. ಸರ್ಕಾರದ ಸಾಲ ಸೌಲಭ್ಯದ ಯೋಜನೆಗಳು ಜನರಿಗೆ ಒದಗಿಸಲು ಜಿಲ್ಲೆಗೊಂದಂತೆ ಆಂಕರ್ ಬ್ಯಾಂಕ್ ಮಾಡಲು ಆದೇಶ ನೀಡಲಾಗಿದೆ ಎಂದು ಹೇಳಿದರು.

  • ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಡೆಹ್ರಾಡೂನ್: ತನ್ನ ಮನಸ್ಸಿನ ಮಾತು ಕೇಳಿ, ದೇಶ ಸೇವೆ ಮಾಡಲು ಅಮೆರಿಕ ಕಂಪನಿ ನೀಡಿದ ಕೆಲಸ ತೊರೆದು ಯುವಕನೊಬ್ಬ ಭಾರತೀಯ ಸೈನ್ಯವನ್ನು ಸೇರಿದ್ದಾರೆ.

    ಬರ್ನಾನ ಯಾದಗಿರಿ ಎಂಬವರೇ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇರಿರುವ ಯುವಕನಾಗಿದ್ದು, ಶನಿವಾರ ಡೆಹ್ರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ತರಬೇತಿ ಪೂರ್ಣಗೊಳಿಸಿ ಸೇನೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

    ಬರ್ನಾನ ಯಾದಗಿರಿ ಅವರ ತಂದೆ ಬರ್ನಾನ ಗುನ್ನಯ್ಯ ಹಲವು ವರ್ಷಗಳಿಂದ ಹೈದರಾಬಾದ್‍ನ ಸಿಮೆಂಟ್ ಕಾರ್ಖಾನೆಯಲ್ಲಿ 100 ರೂ. ಪಡೆದು ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಡೆಹ್ರಾಡೂನ್ ನಲ್ಲಿ ಶನಿವಾರ ನಡೆದ ಪರೇಡ್ ನಂತರ ಮಾತನಾಡಿದ ಬರ್ನಾನ್ ತನ್ನ ತಂದೆ ತುಂಬ ಸರಳ ವ್ಯಕ್ತಿಯಾಗಿದ್ದು, ನಾನು ಮಿಲಿಟರಿಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿರುವುದಾಗಿ ತಿಳಿದಿದ್ದಾರೆ. ಆದರೆ ಮಿಲಿಟರಿ ಅಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಆದರೆ ನಮ್ಮ ಪೋಷಕರು ಉತ್ತಮ ಸಂಬಳ ದೊರೆಯುವ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸೈನ್ಯಕ್ಕೆ ಸೇರಿ ತಪ್ಪು ಮಾಡುತ್ತಿದ್ದೀಯಾ ಎಂದು ಎಚ್ಚರಿಸಿದರು. ಆದರೆ ನಾನು ಇಷ್ಟಪಟ್ಟಿದ್ದರೆ ಕಾರ್ಪೋರೆಟ್ ಸಂಸ್ಥೆಯಲ್ಲಿ ಕೆಲಸ ಪಡೆದು ಉತ್ತಮ ಸಂಬಳ ಪಡೆಯಬಹುದಿತ್ತು. ಆದರೆ ನನಗೆ ಸೈನ್ಯದಲ್ಲಿ ಸೇರಿ ಸೇವೆ ಮಾಡಬೇಕೆಂಬ ಕನಸು ಕಂಡಿದ್ದೆ ಅದನ್ನು ಸಾಧಿಸಿದ್ದೇನೆ. ಸೈನ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ನನ್ನ ಕರ್ತವ್ಯಗಳನ್ನು ಪಾಲಿಸುತ್ತೇನೆ ಎಂದರು.

    ಅಂದಹಾಗೇ, ಬರ್ನಾನ ಯಾದಗಿರಿ ಬಾಲ್ಯದಿಂದಲೂ ಕಡು ಬಡತನದಲ್ಲಿ ಬೆಳೆದ ಯುವಕ, ವಿದ್ಯಾಬ್ಯಾಸ ಸಮಯದಲ್ಲಿ ಸರ್ಕಾರ ನೀಡುವ ಪ್ರೋತ್ಸಹ ಹಣದಲ್ಲೇ ಪದವಿ ಪಡೆದವರು. ಅದರೂ ದೇಶ ಸೇವೆ ಮಾಡಬೇಕೆಂಬ ಕನಸಿನಿಂದ ಇಂಜಿನಿಯರ್ ಪದವಿ ಪಡೆದು, ಕ್ಯಾಟ್ (ಸಿಎಟಿ) ಪರೀಕ್ಷೆಯಲ್ಲಿ ಶೇ.93.4 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೇ ಅಮೆರಿಕದ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನೀಡಿದ ಉದ್ಯೋಗವನ್ನು ನಿರಾಕರಿಸಿದ್ದಾರೆ. ಇಂದೋರ್ ನ ಐಐಎಂ ಸಂಸ್ಥೆಯು ಇವರಿಗೆ ಉದ್ಯೋಗ ನೀಡಿತ್ತು.

    ತಮ್ಮ ಮಗ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸೈನ್ಯದ ಸಮವಸ್ತ್ರ ಧರಿಸಿದನ್ನು ಕಂಡು ತಂದೆ ಬರ್ನಾನ ಗುನ್ನಯ್ಯ ಅವರ ಕಣ್ಣುಗಳು ಸಂತೋಷ ತುಂಬಿ ಬಂದಿತ್ತು.