Tag: obscene video

  • ಅಶ್ಲೀಲ ವಿಡಿಯೋ ಹೇಳಿಕೆ: ನೊಂದುಕೊಂಡ ನಟಿ ರೋಜಾ

    ಅಶ್ಲೀಲ ವಿಡಿಯೋ ಹೇಳಿಕೆ: ನೊಂದುಕೊಂಡ ನಟಿ ರೋಜಾ

    ಮಾಜಿ ಸಚಿವರೊಬ್ಬರು ತಮ್ಮ ಬಳಿ ರೋಜಾ ಅವರ ಅಶ್ಲೀಲ ವಿಡಿಯೋ ಇರುವುದಾಗಿ ಹೇಳಿಕೊಂಡಿದ್ದರು. ನಿರಂತರವಾಗಿ ಅವರ ಮೇಲೆ ವಾಗ್ದಾಳಿ ಮಾಡುತ್ತಲೇ ಬಂದಿದ್ದರು. ಈ ವಿಚಾರವಾಗಿ ರೋಜಾ ನೊಂದುಕೊಂಡಿದ್ದಾರೆ. ಈಗ ರೋಜಾ ಕೇವಲ ನಟಿಯಲ್ಲ, ಜನಪ್ರತಿ ನಿಧಿ ಕೂಡ ಸಚಿವರಾಗಿಯೂ ಜಗನ್ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ.

    ಮಾಜಿ ಸಚಿವ ಅರೆಸ್ಟ್

    ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ , ಹೆಸರಾಂತ ನಟಿ ಹಾಗೂ ಆಂಧ್ರ ಪ್ರದೇಶದ ಸಚಿವೆಯೂ ಆಗಿರುವ ರೋಜಾ (Roja) ಅವರ ಅಶ್ಲೀಲ ವಿಡಿಯೋ (Porn video) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ನಿನ್ನೆ ಬಂಧಿಸಲಾಗಿದೆ.

    ಹಲವು ದಿನಗಳಿಂದ ರೋಜಾ ಮತ್ತು ಬಂಡಾರು ಸತ್ಯನಾರಾಯಣ (Bandaru Satyanarayan) ಅವರಿಗೆ ಜಟಾಪಟಿ ನಡೆಯುತ್ತಿದೆ. ರಾಜಕೀಯವಾಗಿ ವಿರೋಧಿಗಳು ಆಗಿರುವ  ಇವರು, ಹಾದಿ ರಂಪ ಬೀದಿ ರಂಪ ಮಾಡುತ್ತಿದ್ದಾರೆ. ಹಾಗಾಗಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು.

    ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿರುವ ಬಂಡಾರು ಅವರು, ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

     

    ಈ ಕುರಿತಂತೆ ರೋಜಾ ಅವರು ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ (arrested). ಈ ಸಮಯದಲ್ಲಿ ಮನೆಯ ಮುಂದೆ ಹೈ ಡ್ರಾಮಾ ಕೂಡ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ರೋಜಾ ಅಶ್ಲೀಲ ವಿಡಿಯೋ ಬೆದರಿಕೆ : ಮಾಜಿ ಸಚಿವ ಅರೆಸ್ಟ್

    ನಟಿ ರೋಜಾ ಅಶ್ಲೀಲ ವಿಡಿಯೋ ಬೆದರಿಕೆ : ಮಾಜಿ ಸಚಿವ ಅರೆಸ್ಟ್

    ನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ , ಹೆಸರಾಂತ ನಟಿ ಹಾಗೂ ಆಂಧ್ರ ಪ್ರದೇಶದ ಸಚಿವೆಯೂ ಆಗಿರುವ ರೋಜಾ (Roja) ಅವರ ಅಶ್ಲೀಲ ವಿಡಿಯೋ (Porn video) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ನಿನ್ನೆ ಬಂಧಿಸಲಾಗಿದೆ.

    ಹಲವು ದಿನಗಳಿಂದ ರೋಜಾ ಮತ್ತು ಬಂಡಾರು ಸತ್ಯನಾರಾಯಣ (Bandaru Satyanarayan) ಅವರಿಗೆ ಜಟಾಪಟಿ ನಡೆಯುತ್ತಿದೆ. ರಾಜಕೀಯವಾಗಿ ವಿರೋಧಿಗಳು ಆಗಿರುವ  ಇವರು, ಹಾದಿ ರಂಪ ಬೀದಿ ರಂಪ ಮಾಡುತ್ತಿದ್ದಾರೆ. ಹಾಗಾಗಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು.

    ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿರುವ ಬಂಡಾರು ಅವರು, ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

     

    ಈ ಕುರಿತಂತೆ ರೋಜಾ ಅವರು ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ (arrested). ಈ ಸಮಯದಲ್ಲಿ ಮನೆಯ ಮುಂದೆ ಹೈ ಡ್ರಾಮಾ ಕೂಡ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ಚಂಡೀಗಢ: ಶಾಲೆಯೊಂದರ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸಿದ ಶಿಕ್ಷಕನನ್ನು ಪಂಜಾಬ್ (Punjab) ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರಾಜೀವ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಗೋಬಿಂದಪುರ ಮೊಹಲ್ಲಾದ (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ (Vulgar Gestures) ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತ್ನಾಂಪುರನ (Satnampura) ಠಾಣಾಧಿಕಾರಿ ಗುರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

  • ರೈಲ್ವೆ ನಿಲ್ದಾಣದ ಟಿವಿಯಲ್ಲಿ ಪ್ರಸಾರವಾಯ್ತು ಅಶ್ಲೀಲ ವೀಡಿಯೋ – ಮುಜುಗರಕ್ಕೊಳಗಾದ ಜನ

    ರೈಲ್ವೆ ನಿಲ್ದಾಣದ ಟಿವಿಯಲ್ಲಿ ಪ್ರಸಾರವಾಯ್ತು ಅಶ್ಲೀಲ ವೀಡಿಯೋ – ಮುಜುಗರಕ್ಕೊಳಗಾದ ಜನ

    ಪಾಟ್ನಾ: ರೈಲ್ವೆ ನಿಲ್ದಾಣದಲ್ಲಿ (Railway Station) ಅಳವಡಿಸಲಾಗಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವೀಡಿಯೋ (Porn Clip) ಪ್ರಸಾರವಾಗಿ ಸ್ಥಳದಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಮುಜುಗರಕ್ಕೀಡಾದ ಪ್ರಸಂಗ ಬಿಹಾರದ (Bihar) ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ (Patna Railway Station) ನಡೆದಿದೆ.

    ಭಾನುವಾರ ಬೆಳಗ್ಗೆ 9:30ರ ವೇಳೆಗೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದಾರೆ.

    ಘಟನೆ ನಡೆದ ತಕ್ಷಣವೇ ಪ್ರಯಾಣಿಕರು ಈ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆಗೆ (RPF) ದೂರು ನೀಡಿದ್ದಾರೆ. ಬಳಿಕ ಪೊಲೀಸರು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಮುಂದೆ ಈ ರೀತಿ ಅಶ್ಲೀಲ ವೀಡಿಯೋ ಪ್ರದರ್ಶನ ಮಾಡಿದ್ದಕ್ಕಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಡುಹಗಲೇ ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ – ಬೆಚ್ಚಿಬಿದ್ದ ಸವಾರರು

    ಬಳಿಕ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಮತ್ತು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಅಶ್ಲೀಲ ವೀಡಿಯೋ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 10 ರಲ್ಲಿ ಮಾತ್ರವೇ ಪ್ರಸಾರವಾಗಿತ್ತು. ನಿರ್ಧಿಷ್ಟ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋ ಪ್ರಸಾರ ಮಾಡಿರುವುದನ್ನು ಗಮನಹರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯೂ ಪ್ರತ್ಯೇಕ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

  • ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಗಾಂಧಿನಗರ: ತನ್ನ ಮಗಳ ಅಶ್ಲೀಲ ವೀಡಿಯೋವನ್ನು (Obscene Video) ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು (BSF Jawan) ಥಳಿಸಿ ಕೊಂದಿರುವ ಘಟನೆ ಗುಜರಾತ್‌ನ (Gujarat) ನಾಡಿಯಾಡ್‌ನಲ್ಲಿ ನಡೆದಿದೆ.

    ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ (Boy) ಬಾಲಕಿಯ (Girl) ಅಶ್ಲೀಲ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಬಾಲಕಿಯ ತಂದೆ ಯೋಧ ಮೆಲ್ಜಿಭಾಯಿ ವಘೇಲಾ ಶನಿವಾರ ಬಾಲಕನ ಮನೆಗೆ ತೆರಳಿ ಹುಡುಗನ ನಡೆಯನ್ನು ಖಂಡಿಸಿದ್ದಾರೆ. ಈ ವೇಳೆ ಹುಡುಗನ ಮನೆಯವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

    ವರದಿಗಳ ಪ್ರಕಾರ, ಹುಡುಗ ಹಾಗೂ ಬಾಲಕಿ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರೂ ಸಂಬಂಧವನ್ನು ಹೊಂದಿದ್ದರು. ಆದರೆ ತನ್ನ ಮಗಳ ಅಶ್ಲೀಲ ವೀಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಬಿಎಸ್‌ಎಫ್ ಜವಾನ ತನ್ನ ಕುಟುಂಬದೊಂದಿಗೆ ಹುಡುಗನ ಮನೆಗೆ ಮಾತನಾಡಲು ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣ- ಓರ್ವ ಪರಾರಿ, ಮೂವರು ಆರೋಪಿಗಳ ಬಂಧನ

    CRIME

    ಶನಿವಾರ ರಾತ್ರಿ ಯೋಧ ತನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಸೋದರಳಿಯನೊಂದಿಗೆ ಯುವಕನ ಮನೆಗೆ ತೆರಳಿದ್ದರು. ಆದರೆ ಹುಡುಗನ ಕುಟುಂಬದವರು ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಇದನ್ನು ವಿರೋಧಿಸಿದಾಗ ಹುಡುಗನ ಮನೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ಧಾರವಾಡ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮ್ಮ ಖಾಸಗಿ ವೀಡಿಯೋಗಳನ್ನು ತೋರಿಸುವ ಮೂಲಕ ಜನರನ್ನು ಮರುಳು ಮಾಡಿ, ಅವರಿಂದ ಹಣ ಕಿತ್ತುಕೊಳ್ಳುವ ಜಾಲ ಹಬ್ಬುತ್ತಲೇ ಇದೆ. ಈಗ ಅದೇ ರೀತಿ ಯುವತಿಯೊಬ್ಬಳು ವೀಡಿಯೋ ಕಾಲ್ (Video Call) ಮುಖಾಂತರ ನಿವೃತ್ತ ಪ್ರೊಫೆಸರ್ (Retired Professor) ಒಬ್ಬರಿಗೆ ತನ್ನ ಖಾಸಗಿ ವೀಡಿಯೋ (Obscene Video) ತೋರಿಸಿ ದೊಡ್ಡ ಮೊಸವನ್ನೇ (Fraud) ಮಾಡಿದ್ದಾಳೆ.

    ಧಾರವಾಡದಲ್ಲಿ (Dharwad) ಇರುವ ನಿವೃತ್ತ ಪ್ರೊಫೆಸರ್ ಒಬ್ಬರಿಗೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಉಂಡೆ ನಾಮ ಹಾಕಿರುವ ಯುವತಿ, ತನ್ನ ಸಹೋದರಿ ಮದುವೆಗೆ ಹಣ ಬೇಕು ಎಂದು ಮೊಬೈಲ್ ಕರೆ ಮಾಡಿ ಬೇಡಿಕೆ ಇಟ್ಟಿದ್ದಳು. ಮೊದಲು ಈ ನಿವೃತ್ತ ಪ್ರೊಫೆಸರ್‌ಗೆ ಮೊಬೈಲ್‌ನಲ್ಲಿ ಮಾತನಾಡುತ್ತ ಪರಿಚಯ ಮಾಡಿಕೊಂಡ ಯುವತಿ, ನಂತರ ಹಣದ ಬೇಡಿಕೆ ಇಟ್ಟಿದ್ದಾಳೆ.

    ಯುವತಿ ಹಣ ಕೇಳಿದಾಗ ನಿವೃತ್ತ ಪ್ರೊಫೆಸರ್ ಹಣ ಕೊಟ್ಟಿರಲಿಲ್ಲ. ಆಗ ವೀಡಿಯೋ ಕಾಲ್ ಮಾಡಿದ ಆ ಯುವತಿ, ಇವರ ಫೋಟೋ ತೆಗೆದುಕೊಂಡು ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾರ್ಯಾದೆಗೆ ಅಂಜಿದ ನಿವೃತ್ತ ಪ್ರೊಫೆಸರ್, ಆಕೆ ಕೇಳಿದ್ದಕ್ಕೆ ಹಣ ಕೊಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್‌ ಆಯ್ತು ವಿಶ್ವದ ದೊಡ್ಡ ವಿಮಾನ

    ನಿವೃತ್ತ ಪ್ರೊಫೆಸರ್ 21 ಲಕ್ಷ ರೂ. ಕಳೆದುಕೊಂಡ ಬಳಿಕ ಹುಬ್ಬಳ್ಳಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿ ಶರ್ಮಾ ಎಂಬಾಕೆ ಇವರಿಗೆ ವಿಡಿಯೊ ಕಾಲ್ ಮಾಡಿದ್ರೆ, ಆಕೆಯ ಜೊತೆ ಇದ್ದ ವಿಕ್ರಂ ಸೈಬರ್ ಕ್ರೈಂ ದೆಹಲಿ ಪೊಲೀಸ್ ಎಂದು ಹೆಸರು ಹೇಳಿ ದುಡ್ಡು ಪೀಕಿದ್ದಾನೆ.

    ಸದ್ಯ ನನಗೆ ಆದ ರೀತಿ ಬೇರೆ ಯಾರಿಗೂ ಆಗದಿರಲಿ, ಅದರಲ್ಲೂ ಯುವಕರು ಇಂತಹ ಬಲೆಗೆ ಬೀಳಬಾರದು ಎಂದು ನಿವೃತ್ತ ಪ್ರೊಫೆಸರ್ ಹೇಳಿದ್ದಾರೆ. ಅಲ್ಲದೇ ದೆಹಲಿ ಸೈಬರ್ ಕ್ರೈಂ ಪೊಲೀಸರಿಗೂ ಈ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ಹೆಸರಿನಲ್ಲಿ ಬಲವಂತದ ಮತಾಂತರ- ಮದುವೆ ಕಥೆ ಕಟ್ಟಿ ಧರ್ಮವನ್ನೇ ಬದಲಿಸಿದ!

    Live Tv
    [brid partner=56869869 player=32851 video=960834 autoplay=true]

  • ಅಶ್ಲೀಲ ಸಂಭಾಷಣೆ ವೀಡಿಯೋ ಕಾಲ್ ಇಟ್ಟುಕೊಂಡು ವೈದ್ಯನಿಗೆ ಬ್ಲಾಕ್ ಮೇಲ್

    ಅಶ್ಲೀಲ ಸಂಭಾಷಣೆ ವೀಡಿಯೋ ಕಾಲ್ ಇಟ್ಟುಕೊಂಡು ವೈದ್ಯನಿಗೆ ಬ್ಲಾಕ್ ಮೇಲ್

    ಹುಬ್ಬಳ್ಳಿ: ಅಶ್ಲೀಲ ವೀಡಿಯೋ(Porn Video) ಇಟ್ಟುಕೊಂಡು ವೈದ್ಯರೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಬ್ಲಾಕ್ ಮೇಲ್(Black Mail) ಮಾಡಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.

    ನಗರದ ವೈದ್ಯ(Doctor) ಕಾಡಸಿದ್ಧೇಶ್ವರ ಜಿ.ಬಿ ಅವರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಹೆದರಿಸುವ ಮೂಲಕ 3.61 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್(Cyber Police) ಠಾಣೆಯಲ್ಲಿ ದಾಖಲಾಗಿದೆ.  ಇದನ್ನೂ ಓದಿ: ಉಕ್ರೇನ್‌ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ಸೀಟ್‌ ನೀಡಲು ಸಾಧ್ಯವಿಲ್ಲ: ಕೇಂದ್ರ

    ಕಾಡಸಿದ್ಧೇಶ್ವರ್‌ಗೆ ನಿಶಾ ಎಂಬ ಹೆಸರಿನ ಮಹಿಳೆ ವಾಟ್ಸಪ್‍ನಲ್ಲಿ(Whatsapp) ವೀಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾಳೆ. ವೈದ್ಯರು ಸಹ ಆಕೆಯ ಜೊತೆಗೆ ಸಲುಗೆಯಿಂದ ಮಾತಾಡಿದ್ದು ಇದನ್ನು ಮಹಿಳೆ ಸ್ಕ್ರೀನ್ ರೆಕಾರ್ಡ್(Screen Record) ಮಾಡಿಕೊಂಡಿದ್ದಾಳೆ. ಕೆಲವು ದಿನಗಳ ಬಳಿಕ ವೈದ್ಯರಿಗೆ ಕರೆ ಮಾಡಿ ಅಶ್ಲೀಲ ಸಂಭಾಷಣೆ ವೀಡಿಯೋವನ್ನು ನಿಮ್ಮ ಸಂಬಂಧಿಕರಿಗೆ ಕಳುಹಿಸುತ್ತೇನೆ ಎಂದು ಹೆದರಿಸಿ ಮೊದಲಿಗೆ 10 ಸಾವಿರ, ಆದಾದ ಬಳಿಕ 70,10 ಸಾವಿರ ಹಣ ವರ್ಗಾಯಿಸಿ ಕೊಂಡಿದ್ದಾಳೆ.

    ಅಷ್ಟೇ ಅಲ್ಲದೇ ಬಳಿಕ ಸಂಜೀವ ಹೆಸರಿನ ವ್ಯಕ್ತಿ ಯೂಟೂಬ್ ವಾಹಿನಿಯ ವರದಿಗಾರ ಹಾಗೂ ವಿಕ್ರಮ್ ಎಂಬುವವರು ದೆಹಲಿಯ ಕ್ರೈಂ ಬ್ರ್ಯಾಂಚ್ ಅಧಿಕಾರಿ ಎಂದು ಹೆದರಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಅರೆಸ್ಟ್

    ಮಹಿಳೆಯರಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ವ್ಯಕ್ತಿ ಅರೆಸ್ಟ್

    ಹೈದರಾಬಾದ್: ವಿವಿಧ ಫೋನ್ ನಂಬರ್‌ಗಳಿಂದ ಮಹಿಳೆಯರಿಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೈಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್‍ನ ಬಜಾರ್‍ಘಾಟ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಕುರಿತಂತೆ ವಿಚಾರಣೆ ವೇಳೆ ರೈಸುದ್ದೀನ್ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದ ಕಾರಣ ಕೆಲವು ತಿಂಗಳಿನಿಂದ ಬೇಸರಗೊಂಡಿದ್ದನು. ಹೀಗಾಗಿ ಮಹಿಳೆಯರ ಹೆಸರಿನಲ್ಲಿ ಫೇಸ್‍ಬುಕ್ ಅಕೌಂಟ್ ಕ್ರಿಯೆಟ್ ಮಾಡಿ. ನಂತರ ಮಹಿಳೆಯರ ಬಳಿ ನಂಬರ್ ಪಡೆದು ಅಶ್ಲೀಲ ವೀಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದಾಗಿ ಹೇಳಿದ್ದಾನೆ.  ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಕಳೆದ ಕೆಲವು ತಿಂಗಳುಗಳಿಂದ ಮೂರು ವಿಭಿನ್ನ ಮೊಬೈಲ್ ನಂಬರ್‌ಗಳಿಂದ 5ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿರುವ ವಿಚಾರ ತಿಳಿದುಬಂದಿದೆ. ಮಹಿಳೆಯರು ಒಂದು ಸಂಖ್ಯೆಯನ್ನು ಬ್ಲಾಕ್ ಮಾಡಿದರೆ, ಆತ ಮತ್ತೊಂದು ನಂಬರ್‌ನಿಂದ ಮತ್ತೆ ಅಶ್ಲೀಲ ವೀಡಿಯೋವನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಈತನ ಕಿರುಕುಳ ಸಹಿಸಲಾಗದೇ ಕೊನೆಗೆ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ಬೋವನಪಲ್ಲಿ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]