Tag: Obscene Pictures

  • ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

    ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

    ಲಕ್ನೋ: ಪತ್ನಿಯೊಂದಿಗೆ (Wife) ಜಗಳವಾಡಿ ಕೋಪಗೊಂಡಿದ್ದ ವ್ಯಕ್ತಿ (Man) ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಅಶ್ಲೀಲ ಫೋಟೋದೊಂದಿಗೆ (Obscene Phot0) ಆಕೆಯ ನಂಬರ್ ಅನ್ನು ಬರೆದು ಬೀದಿಗಳಲ್ಲಿ ಪೋಸ್ಟರ್ (Poster) ಹಚ್ಚಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಆಗ್ರಾದ (Agra) ವ್ಯಕ್ತಿ ತನ್ನದೇ ಪತ್ನಿಯ ಅಶ್ಲೀಲ ಫೋಟೋ ಇರುವ ಪೋಸ್ಟರ್‌ಗಳನ್ನು ಬೀದಿಗಳಲ್ಲಿ ಹಚ್ಚಿರುವ ವೀಡಿಯೋ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಕಳೆದ 6 ವರ್ಷಗಳಿಂದ ಪತಿ ಹಾಗೂ ಪತ್ನಿ ಜಗಳವಾಡುತ್ತಿದ್ದು, ವ್ಯಕ್ತಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಇಂತಹ ಕೃತ್ಯ ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೂಮಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಪರಾರಿ!

    ಘಟನೆ ಬಗ್ಗೆ ಮಹಿಳೆ ತನ್ನ ಪತಿಯ ವಿರುದ್ಧ ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾತ್ರವಲ್ಲದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಹಾಕಿದ್ದಾಳೆ. ಇದನ್ನೂ ಓದಿ: ಯುವತಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

  • ಮಾಜಿ ಪ್ರೇಯಸಿಗೆ ಅಶ್ಲೀಲ ಫೋಟೋ ಕಳುಹಿಸಿದ ಯುವಕ ಅಂದರ್!

    ಮಾಜಿ ಪ್ರೇಯಸಿಗೆ ಅಶ್ಲೀಲ ಫೋಟೋ ಕಳುಹಿಸಿದ ಯುವಕ ಅಂದರ್!

    ಅಹಮದಾಬಾದ್: ಬ್ರೇಕಪ್ ಆದ ನಂತರ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಹಾಗೂ ಆಕೆಯ ಗೆಳತಿಗೆ ಅಶ್ಲೀಲ ಫೋಟೋ ಹಾಗೂ ಮೆಸೆಜ್‍ಗಳನ್ನು ಕಳುಹಿಸಿ ಪೊಲೀಸರ ಅತಿಥಿಯಾಗಿದ್ದಾನೆ.

    ತಮಿಳುನಾಡು ಮೂಲದ ಅಭಿಷೇಕ್ ಶರ್ಮಾ (23) ಬಂಧಿತ ಆರೋಪಿ. ಖಾಸಗಿ ಕಂಪನಿಯೊಂದರಲ್ಲಿ ಛಾಯಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ತನ್ನ ಮಾಜಿ ಪ್ರೇಯಸಿಗೆ ಹಾಗೂ ಆಕೆಯ ಗೆಳತಿಗೆ ಅಶ್ಲೀಲ ಫೋಟೋ ಹಾಗೂ ಮೆಸೆಜ್‍ಗಳನ್ನು ಕಳುಹಿದ್ದಾನೆ. ಕಾಲೇಜಿಗೆ ಹೋಗುತ್ತಿದ್ದಾಗ ಅಭಿಷೇಕ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದ್ರೆ ಕಾರಣಾಂತರ ಅವರಿಬ್ಬರ ಪ್ರೀತಿ ಮುರಿದು ಬಿದ್ದಿತ್ತು. ಆದ್ರೆ ಮಾಜಿ ಪ್ರೇಯಸಿ ಬೇರೊಬ್ಬರನ್ನ ಪ್ರೀತಿ ಮಾಡುತ್ತಿದ್ದಾಳೆ ಎಂದು ತಿಳಿದ ಬಳಿಕ ಸಹಿಸಲಾಗದೆ ಆರೋಪಿ ಈ ರೀತಿ ಮಾಡಿದ್ದಾನೆ.

    ಅಲ್ಲದೆ ಇಬ್ಬರು ಪ್ರೀತಿಸುತ್ತಿದ್ದ ಸಮಯದಲ್ಲಿ ಯುವತಿಗೆ ಗೊತ್ತಾಗದಂತೆ ಆಕೆಯ ಅಶ್ಲೀಲ ಫೋಟೋಗಳನ್ನು ಯುವಕ ತೆಗೆದಿಟ್ಟುಕೊಂಡಿದ್ದ. ಬ್ರೇಕಪ್ ಆದ ಬಳಿಕ ಯುವತಿಗೆ ಬುದ್ಧಿ ಕಲಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದು ಅವಳ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಹಾಗೆಯೇ ಯುವತಿಗೂ ಆ ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡಿದ್ದಾನೆ.

    ಈ ಬಗ್ಗೆ ನೊಂದ ಯುವತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ ವೇಳೆ ಸತ್ಯಾಂಶವನ್ನು ಯುವಕ ಬಾಯ್ಬಿಟ್ಟಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

  • ಡಾಕ್ಟರ್ ಯುವತಿಯ ಖಾಸಗಿ ಚಿತ್ರಗಳನ್ನು ವಾಟ್ಸಪ್‍ನಲ್ಲಿ ಹರಿಬಿಟ್ಟ ಮಾಜಿ ಲವ್ವರ್

    ಡಾಕ್ಟರ್ ಯುವತಿಯ ಖಾಸಗಿ ಚಿತ್ರಗಳನ್ನು ವಾಟ್ಸಪ್‍ನಲ್ಲಿ ಹರಿಬಿಟ್ಟ ಮಾಜಿ ಲವ್ವರ್

    ಮುಂಬೈ: ಬೇರೋಬ್ಬನ ಜೊತೆಗೆ ವಿವಾಹವಾಗಿದ್ದ ಮಾಜಿ ಪ್ರೇಯಸಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

    ಅಂದೇರಿನ ನಗರದ ನಿವಾಸಿ 30 ವರ್ಷದ ಯುವಕ ಬಂಧಿತ ಆರೋಪಿ. ಆರೋಪಿ ಯುವಕನನ್ನು ತಿಲಕ್‍ನಗರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

    ಏನಿದು ಪ್ರಕರಣ?:
    ಸಂತ್ರಸ್ತ ಯುವತಿ ವೈದ್ಯಕೀಯ ವ್ಯಾಸಂಗಕ್ಕೆಂದು ಮಧ್ಯಪ್ರದೇಶದ ಇಂದೋರ್ ನಿಂದ ಮುಂಬೈಗೆ ಬಂದಿದ್ದಳು. ಸ್ಥಳೀಯ ಆಸ್ಪತ್ರೆಯೊ0ದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಚಿಕಿತ್ಸೆ ಪಡೆಯಲು ಬಂದಿದ್ದ ಸಂಬಂಧಿ ಯುವಕನೊಬ್ಬ ಪರಿಚಯವಾಗಿದ್ದಾನೆ. ಈ ವೇಳೆ ಮೊಬೈಲ್ ನಂಬರ್ ಪಡೆದು ಇಬ್ಬರು ಸಂಪರ್ಕ ಹೊಂದಿದ್ದಾರೆ.

    ಕೆಲವು ದಿನಗಳ ನಂತರ ಇಬ್ಬರೂ ಆತ್ಮೀಯವಾಗಿ ಬೆರೆತು, ವಾಟ್ಸಪ್ ಹಾಗೂ ಫೋನ್ ಚಾಟಿಂಗ್ ಮಾಡಿದ್ದಾರೆ. ಇದನ್ನೇ ಉಪಯೋಗ ಪಡೆದುಕೊಂಡ ಯುವಕ 2016ರಲ್ಲಿ ಪ್ರೀತಿಯ ಪ್ರಸ್ತಾಪ ಮಾಡಿದ್ದು ಯುವತಿ ನಿರಾಕರಿಸಿದ್ದಾಳೆ. ಆದರೂ ಯುವತಿ ಯುವಕನ ಸಂಪರ್ಕದಲ್ಲಿದ್ದಳು. ಇದಾದ ಬಳಿಕ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದ್ದು, ಆಗ ಆಕೆಗೆ ತಿಳಿಯದಂತೆ ಯುವಕ ಕೆಲವು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.

    ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಆತನ ನಡವಳಿಯಿಂದ ಬೇಸತ್ತ ಯುವತಿ ದೂರ ಉಳಿದಿದ್ದಾಳೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಬೇರೋಬ್ಬರ ಜೊತೆಗೆ ಯುವತಿ ವಿವಾಹವಾಗಿದ್ದಾಳೆ. ಈ ಕುರಿತು ಮಾಹಿತಿ ಗೊತ್ತಾಗುತ್ತಿದ್ದಂತೆ ಯುವತಿಯ ಮಾಜಿ ಲವ್ವರ್ ಕೋಪಗೊಂಡಿದ್ದಾನೆ. ಯುವತಿಯು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಹೋದ್ಯೋಗಿಗಳಿಗೆ ಆಕೆಯ ಜೊತೆಗಿದ್ದ ಖಾಸಗಿ ಚಿತ್ರಗಳನ್ನು ಕಳುಹಿಸಿದ್ದಾನೆ. ಈ ಕುರಿತು ಯುವತಿ ತಿಲಕ್‍ನಗರ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣದ ಕುರಿತು ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv