Tag: Obesity

  • ಭಾರತದಲ್ಲಿ ಬೊಜ್ಜು  ಹೆಚ್ಚಾಗಲು ಕಾರಣವೇನು? ನಿಯಂತ್ರಣ ಹೇಗೆ?

    ಭಾರತದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವೇನು? ನಿಯಂತ್ರಣ ಹೇಗೆ?

    ಸಾಮಾನ್ಯವಾಗಿ ನಾವೆಲ್ಲರೂ ಅಡುಗೆಗೆ ಎಣ್ಣೆಯನ್ನು ಬಳಸುತ್ತೇವೆ. ಒಂದೊಂದು ರೀತಿಯ ಎಣ್ಣೆಯೂ ನಮ್ಮ ದೇಹದಲ್ಲಿನ ಬೊಜ್ಜಿನಾಂಶವನ್ನು ಹೆಚ್ಚಿಸುತ್ತದೆ. ಆದರೆ ದೇಹದ ಮಿತಿಮೀರಿ ಬೊಜ್ಜು ಬೆಳೆದಾಗ ಅದು ದೇಹಕ್ಕೆ ಕ್ರಮೇಣವಾಗಿ ಹಾನಿಯುಂಟು ಮಾಡುತ್ತದೆ.

    ಹೌದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ತಮ್ಮ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಬೊಜ್ಜು ಕುರಿತಾಗಿ ಮಾತನಾಡಿದರು. ಈ ಮೂಲಕ ಮೋದಿ ದೇಶ್ಯಾದ್ಯಂತ ಬೊಜ್ಜು ಕರಗಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನ ಬೊಜ್ಜು ಕರಗಿಸಲು ಉತ್ತೇಜನ ನೀಡುವುದರ ಜೊತೆಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಬೊಜ್ಜು ಕರಗಿಸುವ ಅಭಿಯಾನದಲ್ಲಿ 10 ವ್ಯಕ್ತಿಗಳ ಹೆಸರನ್ನು ನಾಮ ನಿರ್ದೇಶನ ಮಾಡಿದ್ದಾರೆ.

    ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿರುವವರ ಪೈಕಿ ಅಮೆರಿಕ, ಚೀನಾ ದೇಶಗಳ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 80 ಮಿಲಿಯನ್‌ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬೊಜ್ಜು ಎಂದರೆ ದೇಹದಲ್ಲಿ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯಾಗಿದ್ದು, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಿತಿಮೀರಿದ ಬೊಜ್ಜು ದೇಹದಲ್ಲಿ ಸಂಗ್ರಹವಾದಾಗ ಅಪಾಯಗಳಿಗೆ ಕಾರಣವಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ವಯಸ್ಕರು ಸೇರಿದಂತೆ ಮಕ್ಕಳಲ್ಲಿಯೂ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಈಗಿನ ಮಕ್ಕಳು ತಿನ್ನುವ ಆಹಾರ ಇದರ ಪ್ರಮುಖ ಪರಿಣಾಮ ಬೀರುತ್ತದೆ. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, 5 ರಿಂದ 19 ವರ್ಷದೊಳಗಿನ ಭಾರತೀಯ ಮಕ್ಕಳಲ್ಲಿ ಬೊಜ್ಜು 1990ರಲ್ಲಿ 0.4 ಮಿಲಿಯನ್‌ನಿಂದ 2022ರಲ್ಲಿ 12.5 ಮಿಲಿಯನ್ ಮಕ್ಕಳಲ್ಲಿ ಹೆಚ್ಚಾಗಿದೆ ಎಂದು ವರದಿ ಮಾಡಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಬೊಜ್ಜು 1990 ರಲ್ಲಿ 2.4 ಮಿಲಿಯನ್ ಮಹಿಳೆಯರಿಂದ 2022 ರಲ್ಲಿ 44 ಮಿಲಿಯನ್‌ಗೆ ಪಟ್ಟು ಹೆಚ್ಚಾಗಿದೆ. 2022 ರಲ್ಲಿ 197 ದೇಶಗಳ ಪೈಕಿ ಬೊಜ್ಜು ಹರಡುವಿಕೆಯಲ್ಲಿ ಭಾರತವು 182ನೇ ಸ್ಥಾನದಲ್ಲಿದೆ. ಪುರುಷರಲ್ಲಿ 180ನೇ ಸ್ಥಾನದಲ್ಲಿದೆ. ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಸಂಬಂಧಿಸಿದಂತೆ ದೇಶವು ವಿಶ್ವದಲ್ಲಿ 174ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. 2022ರ ಯುನಿಸೆಫ್‌ನ ವಿಶ್ವ ಬೊಜ್ಜು ಅಟ್ಲಾಸ್ ಪ್ರಕಾರ, 2030ರ ವೇಳೆಗೆ ಭಾರತದಲ್ಲಿ 27 ಮಿಲಿಯನ್‌ಗಿಂತಲೂ ಹೆಚ್ಚು ಬೊಜ್ಜು ಮಕ್ಕಳು ಹೊಂದಿರುವ ಮಕ್ಕಳು ಇರುತ್ತಾರೆ ಎಂದು ಊಹಿಸಲಾಗಿದೆ.

    ಪುರುಷರಿಗಿಂತ ಮಹಿಳೆಯರು ಹೆಚ್ಚು ಬೊಜ್ಜು ಹೊಂದಿರಲು ಕಾರಣವೇನು?
    ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಸಂಶೋಧನಾ ಕಾರ್ಯಾಚರಣೆಗಳು ಮತ್ತು ಮಧುಮೇಹ ತೊಡಕುಗಳ ವಿಭಾಗದ ಮುಖ್ಯಸ್ಥೆ ಮತ್ತು ಅಧ್ಯಯನದ ಸಹ-ಲೇಖಕಿ ಡಾ. ಪ್ರದೀಪ ಗುಹಾ ಅವರ ಪ್ರಕಾರ, ಒತ್ತಡ, ಸರಿಯಾಗದ ನಿದ್ರೆ, ಆಹಾರ ಪದ್ಧತಿ ಎಲ್ಲವೂ ಕಾರಣವಾಗುತ್ತದೆ. ಜೊತೆಗೆ ಗರ್ಭಧಾರಣೆ, ಹಾರ್ಮೋನ್‌ ಋತುಚಕ್ರದಂತಹ ಜೈವಿಕ ಅಂಶಗಳು ಮಹಿಳೆಯ ತೂಕದ ಮೇಲೆ ಪರಿಣಾಮ ಬೀರುತ್ತವೆ

    WHO ಪ್ರಕಾರ, 2022ರಲ್ಲಿ 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ 2.5 ಬಿಲಿಯನ್ ವಯಸ್ಕರು ಅಧಿಕ ತೂಕ ಹೊಂದಿದ್ದರು, ಇದರಲ್ಲಿ 890 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಬೊಜ್ಜು ಹೊಂದಿದ್ದರು. ಇದು 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ 43% (ಪುರುಷರಲ್ಲಿ 43% ಮತ್ತು ಮಹಿಳೆಯರು 44%) ಅಧಿಕ ತೂಕ ಹೊಂದಿದ್ದರು, 1990ರಲ್ಲಿ ಹೆಚ್ಚಳ, ಆಗ 25% ವಯಸ್ಕರು ಅಧಿಕ ತೂಕ ಹೊಂದಿದ್ದರು.

    2022 ರಲ್ಲಿ ವಿಶ್ವಾದ್ಯಂತ 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಸುಮಾರು 16% ಜನರು ಬೊಜ್ಜು ಹೊಂದಿದ್ದರು. 2022 ರಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂದಾಜು 37 ಮಿಲಿಯನ್ ಮಕ್ಕಳು ಅಧಿಕ ತೂಕ ಹೊಂದಿದ್ದರು. ಹೆಚ್ಚುವರಿಯಾಗಿ, 2035ರ ವೇಳೆಗೆ ಸುಮಾರು 3.3 ಬಿಲಿಯನ್ ವಯಸ್ಕರು ಬೊಜ್ಜುತನವನ್ನು ಎದುರಿಸುತ್ತಾರೆ ಮತ್ತು 5 ರಿಂದ 19 ವರ್ಷ ವಯಸ್ಸಿನ ಯುವ ವಯಸ್ಕರು ಅದೇ ವರ್ಷದ ವೇಳೆಗೆ 770 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತಾರೆ ಎಂದು 2024ರ ವರ್ಲ್ಡ್ ಒಬೆಸಿಟಿ ಅಟ್ಲಾಸ್ ತಿಳಿಸಿದೆ

    ಬೊಜ್ಜು ಕಡಿಮೆಗೊಳಿಸುವುದು, ಆಹಾರ ಪದ್ಧತಿ ನಿಯಂತ್ರಿಸುವುದು ಹೇಗೆ?
    ಉತ್ತಮ ಆಹಾರ ಪದ್ಧತಿ, ಹೃದಯ ಮತ್ತು ವ್ಯಾಯಾಮ ಮೂರನ್ನು ಒಟ್ಟಾಗಿ ಮಾಡುವುದರಿಂದ ಸ್ಥಿರವಾದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮನ್ನು ಸದೃಢವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಧೂಮಪಾನವನ್ನು ಕಡಿಮೆ ಮಾಡುವುದು ಅಥವಾ ತ್ಯಜಿಸುವುದು, ಸಂಯಮದ ಆಹಾರ ಪದ್ಧತಿ, ತಿಂಡಿಗಳು ಮತ್ತು ಅತಿಯಾಗಿ ತಿನ್ನುವುದನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ನಿರ್ದಿಷ್ಟ ಗಮನ ನೀಡಬೇಕು. ಸೋಡಾ, ಸಿಹಿಗೊಳಿಸಿದ ಕಾಫಿ ಮತ್ತು ಪಾನೀಯಗಳ ರೂಪದಲ್ಲಿ ಸೇರಿಸಿದ ಸಕ್ಕರೆ ಸೇವನೆಯು ದೇಹಕ್ಕೆ ಅಪಾಯಕಾರಿ.

    ಸದೃಢರಾಗಿ ಮತ್ತು ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 60 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರ ಮತ್ತು ಪಾನೀಯಗಳ ಮಾರಾಟ, ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಜಾಹೀರಾತುಗಳನ್ನು ನಿರ್ಬಂಧಿಸುವುದು, ಪೌಷ್ಠಿಕಾಂಶದ ಲೇಬಲಿಂಗ್ ಅನ್ನು ಸ್ಪಷ್ಟಪಡಿಸುವುದು ಮತ್ತು ಶಾಲಾ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಆಯ್ಕೆಗಳನ್ನು ಉತ್ತೇಜಿಸುವುದು ಅತ್ಯಗತ್ಯ. ಮಕ್ಕಳು ಶಾಲೆಯಿಂದ ಹಿಂದಿರುಗಿದ ನಂತರ ಫೋನ್‌ಗಳು, ಗ್ಯಾಜೆಟ್‌ಗಳು ಅಥವಾ ಟಿವಿ ನೋಡುವುದರಲ್ಲಿ ಹೆಚ್ಚು ಸಮಯ ಕಳೆಯುವ ಬದಲು ಹೊರಾಂಗಣ ಆಟಗಳು ಮತ್ತು ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಮನೆಕೆಲಸಗಳನ್ನು ಮಾಡಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

  • ಹೆಚ್ಚು ದಪ್ಪ ಆಗ್ತಿದ್ದಾರೆ ಭಾರತೀಯರು; ಸ್ಥೂಲಕಾಯತೆ ಬಗ್ಗೆ ಅಧ್ಯಯನ ಹೇಳೋದೇನು? – ಮಹಿಳೆಯರಿಗೆ ಇರುವ ಸವಾಲುಗಳೇನು?

    ಹೆಚ್ಚು ದಪ್ಪ ಆಗ್ತಿದ್ದಾರೆ ಭಾರತೀಯರು; ಸ್ಥೂಲಕಾಯತೆ ಬಗ್ಗೆ ಅಧ್ಯಯನ ಹೇಳೋದೇನು? – ಮಹಿಳೆಯರಿಗೆ ಇರುವ ಸವಾಲುಗಳೇನು?

    ಧುನಿಕ ಯುಗದಲ್ಲಿ ಮನುಷ್ಯನ ಜ್ಞಾನ ವಿಕಾಸವಾದಂತೆ ದೇಹದ ಕಾಯಿಲೆಗಳು ವಿಕಾಸಗೊಳ್ಳುತ್ತಿವೆ. ಮಾನವನ ಬದಲಾದ ಜೀವನಶೈಲಿ ನಾನಾ ಕಾಯಿಲೆಗಳಿಗೆ ದಾರಿಯಾಗಿದೆ. ‘ಸಿದ್ಧಿಗಳಲ್ಲಿ ಅತ್ಯುತ್ತಮವಾದದ್ದು ಆರೋಗ್ಯ’ ಎಂದು ಭಗವಾನ್ ಬುದ್ಧ ಹೇಳಿದ್ದಾನೆ. ಮನುಷ್ಯನಿಗೆ ಆರೋಗ್ಯವೇ ಅತಿ ಮುಖ್ಯವಾಗಬೇಕು. ಆದರೆ ಕ್ಷಣಿಕ ಆಸೆ-ಆಕಾಂಕ್ಷೆಗಳ ಬೆನ್ನು ಬಿದ್ದು, ಆರೋಗ್ಯವನ್ನ ಕಡೆಗಣಿಸಿದ್ದಾನೆ. ಈ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗುತ್ತಿರುವ ಸಂಶೋಧನಾ ವರದಿಗಳು ನಿಜಕ್ಕೂ ಆತಂಕಕಾರಿಯಾಗಿವೆ. ಅಂಥದ್ದೊಂದು ವರದಿ ಈಗ ಹೊರಬಂದಿದೆ.

    ಭಾರತವು (India Obesity) ಈಗಾಗಲೇ ಮಧುಮೇಹ, ಹೃದಯಾಘಾತ, ಪಾರ್ಶ್ವವಾಯುಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೊರೆ ಹೊತ್ತು ನಲುಗಿದೆ. ಅಧಿಕ ತೂಕದ ಲಕ್ಷಾಂತರ ಜನರು ಇಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳ ಮೂಡಿಸಿದೆ. ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ. ಅತಿಯಾದ ಬೊಜ್ಜು ಹೊಂದಿದವರ ಸಂಖ್ಯೆಯಲ್ಲಿ ಅಮೆರಿಕ ಮತ್ತು ಚೀನಾದ ನಂತರದ ಸ್ಥಾನದಲ್ಲಿ ಭಾರತ ಇದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮೈತ್ರಿ ಮಾತುಕತೆ ಯಶಸ್ವಿ – 13 ಸೀಟು ಶಿಂಧೆ ಬಣಕ್ಕೆ, 4 ರಲ್ಲಿ ಎನ್‌ಸಿಪಿ ಸ್ಪರ್ಧೆ

    ವೈದ್ಯಕೀಯ ಜರ್ನಲ್ ಭಾರತೀಯರಲ್ಲಿ ಸ್ಥೂಲಕಾಯದ (Obesity) ಅಪಾಯಕಾರಿ ದರವನ್ನು ಬಹಿರಂಗಪಡಿಸಿದೆ. ಒಟ್ಟು ಜನಸಂಖ್ಯೆಯಲ್ಲಿ 8 ಕೋಟಿ ಮಂದಿ ವಯಸ್ಕರು ಹಾಗೂ 5-19 ವಯಸ್ಸಿನ 1 ಕೋಟಿ ಮಕ್ಕಳು ಬೊಜ್ಜು ಹೊಂದಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯ ಜಾಗತಿಕ ಪ್ರವೃತ್ತಿಯನ್ನು ವರದಿ ಉಲ್ಲೇಖಿಸಿದೆ. 1990 ರಿಂದ 2022 ರ ವರೆಗೆ 188 ದೇಶಗಳ ಮಹಿಳೆಯರಲ್ಲಿ ಭಾರತದ ಬೊಜ್ಜು ದರವು 94% ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿದೆ.

    ವರದಿಯಲ್ಲಿ ಏನಿದೆ?
    1990 ರಲ್ಲಿ ಭಾರತದ 5-19 ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ಪ್ರಮಾಣವು 4 ಲಕ್ಷದಷ್ಟಿತ್ತು. 2022 ರ ಹೊತ್ತಿಗೆ ಅದು 1.02 ಕೋಟಿಗೆ ಏರಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ಥೂಲಕಾಯತೆಯು 1990 ರಲ್ಲಿ 20.04 ಲಕ್ಷದಷ್ಟಿತ್ತು. ಆದರೆ 2022ರ ವೇಳೆಗೆ 4.04 ಕೋಟಿಗಿಂತಲೂ ಹೆಚ್ಚಾಗಿದೆ. 1990 ರಲ್ಲಿ ಅದೇ ವಯೋಮಾನದ 2.06 ಕೋಟಿ ಪುರುಷರು ಬೊಜ್ಜು ಹೊಂದಿದ್ದರು.

    2022 ರಲ್ಲಿ ಮಹಿಳೆಯರಲ್ಲಿ ಸ್ಥೂಲಕಾಯತೆಗಾಗಿ 197 ದೇಶಗಳ ಪೈಕಿ ಭಾರತವು 182 ನೇ ಸ್ಥಾನದಲ್ಲಿದೆ. ಪುರುಷರ ಅಂಕಿಅಂಶಕ್ಕೆ ಬಂದಾಗ ಜಾಗತಿಕವಾಗಿ 180ನೇ ಸ್ಥಾನದಲ್ಲಿದೆ. ಇನ್ನು ಯುವಜನರ ವರ್ಗದಲ್ಲಿ 174ನೇ ಸ್ಥಾನದಲ್ಲಿ ಭಾರತ ಇದೆ. ಇದನ್ನೂ ಓದಿ: ನಕಲಿ ಕೀಮೋಥೆರಪಿ ಔಷಧ ತಯಾರಿಸಿ, ಆಸ್ಪತ್ರೆಗೆ ವಿತರಣೆ – 7 ಮಂದಿ ಅರೆಸ್ಟ್

    ಸ್ಥೂಲಕಾಯತೆ ಎಂದರೇನು?
    ದೇಹದಲ್ಲಿನ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯೇ ಬೊಜ್ಜು. ಅದು ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ತಿಳಿಸಿದೆ. 25 ಕ್ಕಿಂತ ಹೆಚ್ಚಿನ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅನ್ನು ‘ಅಧಿಕ ತೂಕ’ ಎಂದು ಪರಿಗಣಿಸಲಾಗುತ್ತದೆ. 30 ಕ್ಕಿಂತ ಹೆಚ್ಚಿನ ಬಿಎಂಐಯನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಬಿಎಂಐ ಎಂದರೆ, ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದ ಕೊಬ್ಬಿನ ಅಂಶವನ್ನು ಅಳತೆ ಮಾಡುವುದು. ಭಾರತ ಇದೀಗ ಬೊಜ್ಜು ಎಂಬ ಟೈಂಬಾಂಬ್ ಮೇಲೆ ಕುಳಿತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ಪುರುಷರಿಗಿಂತ ಮಹಿಳೆಯರಲ್ಲೇ ಬೊಜ್ಜು ಜಾಸ್ತಿ ಯಾಕೆ?
    ಮಹಿಳೆಯರು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ. ಹೆಚ್ಚಾಗಿ ಮನೆಗೆಲಸಕ್ಕೇ ಸೀಮಿತರಾಗಿದ್ದಾರೆ. ಭಾರತದಲ್ಲಿ ಮಹಿಳೆಯರು ಆರೋಗ್ಯ ಮತ್ತು ಶಿಕ್ಷಣ ವಿಷಯದಲ್ಲಿ ಸೀಮಿತ ತಿಳುವಳಿಕೆ ಹೊಂದಿದ್ದಾರೆ. ಪೌಷ್ಟಿಕಾಂಶದ ಅಗತ್ಯತೆಗಳಿಗಾಗಿ ಅವರ ಕುಟುಂಬದ ಇತರೆ ಸದಸ್ಯರಿಗೆ ಆದ್ಯತೆ ನೀಡುತ್ತಾರೆ ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಅಧ್ಯಯನದ ಸಹ-ಲೇಖಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರದೀಪ ಗುಹಾ ತಿಳಿಸಿದ್ದಾರೆ. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ

    ಅಷ್ಟೇ ಅಲ್ಲ, ಗರ್ಭಧಾರಣೆ, ಋತುಬಂಧದಂತಹ ಜೈವಿಕ ಅಂಶಗಳು ಮಹಿಳೆಯರ ತೂಕದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಪುರುಷರಲ್ಲಿ ಸಾಮಾನ್ಯವಾಗಿ ಟ್ರಂಕಲ್ ಸ್ಥೂಲಕಾಯತೆ ಇರುತ್ತದೆ. ಅದು ಹೆಚ್ಚಾಗಿ ಗೋಚರಿಸುವುದಿಲ್ಲ. ಆದರೆ ಅಪಾಯಕಾರಿ. ಇದರಿಂದ ಕೊಬ್ಬು ಕಿಬ್ಬೊಟ್ಟೆಯ ಭಾಗದಲ್ಲಿ ಸಂಗ್ರಹವಾಗುತ್ತದೆ.

    ಸ್ಥೂಲಕಾಯತೆ ನಿಯಂತ್ರಣ ಹೇಗೆ?
    ಉತ್ತಮ ಆಹಾರ ಪದ್ಧತಿ, ಹೃದಯ ಮತ್ತು ದೈಹಿಕ ಶಕ್ತಿ ವ್ಯಾಯಾಮಗಳು ಸ್ಥಿರವಾದ ತೂಕ ಕಾಪಾಡಿಕೊಳ್ಳಲು, ಫಿಟ್ ಆಗಿರಲು ಸಹಾಯ ಮಾಡುತ್ತವೆ.

    ಧೂಮಪಾನ ಕಡಿಮೆ ಮಾಡುವುದು ಅಥವಾ ತ್ಯಜಿಸುವುದು, ಮಿತ ಆಹಾರ ಪದ್ಧತಿ, ಸೋಡಾ ಹಾಗೂ ಸಿಹಿಯಾದ ಟೀ-ಕಾಫಿ, ಪಾನೀಯಗಳ ಸೇವಿಸುವುದನ್ನು ಕಡಿಮೆ ಮಾಡಬೇಕು. ಸಕ್ಕರೆ ಇರುವ ಇಂತಹ ಪಾನೀಯಾಗಳ ಸೇವನೆ ದೇಹಕ್ಕೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.

    ಮಕ್ಕಳಿಗೆ ಸಲಹೆ ಏನು?
    ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯು ಫಿಟ್ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಅನಾರಾಗ್ಯಕರ ಆಹಾರ ಮತ್ತು ಪಾನೀಯಗಳನ್ನು ನೀಡುವುದು ಒಳಿತಲ್ಲ. ಜಂಕ್ ಫುಡ್‌ಗಳಿಂದ ಆದಷ್ಟು ಅವರನ್ನು ದೂರ ಇಡುವುದು ಸೂಕ್ತ. ಆರೋಗ್ಯಕರ ಆಹಾರ ಆಯ್ಕೆಗೆ ಆದ್ಯತೆ ನೀಡಬೇಕು. ಮಕ್ಕಳು ಹೊರಾಂಗಣ ಆಟಗಳು ಮತ್ತು ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮಕ್ಕಳ ವೈದ್ಯರು ಸಲಹೆ ನೀಡುತ್ತಾರೆ.

  • ಬೊಜ್ಜುತನ ಸಾರ್ವಜನಿಕರಿಗೆ ಅರಿವು ಮೂಡಿಸಲು ಫೈಟ್ ಫಾರ್ ಓಬೇಸಿಟಿ ವಾಕಾಥನ್

    ಬೊಜ್ಜುತನ ಸಾರ್ವಜನಿಕರಿಗೆ ಅರಿವು ಮೂಡಿಸಲು ಫೈಟ್ ಫಾರ್ ಓಬೇಸಿಟಿ ವಾಕಾಥನ್

    ಬೆಂಗಳೂರು: ವಾಕಾಥಾನ್ ವಿವಿಧ ಆಸ್ಪತ್ರೆಯ ವೈದ್ಯರುಗಳು, ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿ ಫೈಟ್ ಫಾರ್ ಓಬೇಸಿಟಿ ವಾಕಾಥಾನ್ ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿಗಳು ಓಬೇಸಿಟಿ(ಬೊಜ್ಜುತನ)ದಿಂದ ದೇಹದ ಮೇಲೆ ದುಷ್ಟಪರಿಣಾಮ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಓಬೇಸಿಟಿ ಸಂಸ್ಥೆಯವರು ಫೈಟ್ ಫಾರ್ ಓಬೇಸಿಟಿ ವಾಕಾಥಾನ್ ಕಾರ್ಯಕ್ರಮವನ್ನು ಹೋಟೆಲ್ ಶಾರಟಾನ್ ಮುಂಭಾಗದಿಂದ ವಾಕಥಾನ್ ಹಮ್ಮಿಕೊಂಡಿದ್ದರು.

    ವಿವಿಧ ಆಸ್ಪತ್ರೆಯ ವೈದ್ಯರುಗಳು ಮತ್ತು ಸಾರ್ವಜನಿಕರು, ಆರೋಗ್ಯ ಸಿಬ್ಬಂದಿ ವಾಕಾಥಾನ್‍ನಲ್ಲಿ ಪಾಲ್ಗೊಂಡಿದ್ದರು. ಆಸ್ಟೆರ್ ಸಿ.ಎಂ.ಐ ಆಸ್ಪತ್ರೆಯ ಮೆಟಬಾಲಿಕ್ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ವಾಕಥಾನ್‍ಗೆ ಚಾಲನೆ ನೀಡಿದರು.

    ಬೊಜ್ಜು ರೋಗ ನಿರ್ಣಯ
    ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರ ಬೊಜ್ಜುತನದ ವಿಶಿಷ್ಟ ಲಕ್ಷಣಗಳೆಂದರೆ ಅತಿಯಾದ ಕೇಂದ್ರ ಬೊಜ್ಜು ಅಥವಾ ಕಿಬ್ಬೊಟ್ಟೆಯ ಬೊಜ್ಜು. ಬೊಜ್ಜುತನ ನಿರ್ಣಯವನ್ನು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಎಂಬ ವಿಧಾನದಿಂದ ನಿರ್ಣಯಿಸುತ್ತಾರೆ. ಬಿಎಂಐಯು ವ್ಯಕ್ತಿಯ ತೂಕವನ್ನು (ಕಿಲೋಗ್ರಾಂನಲ್ಲಿ) ಎತ್ತರ (ಮೀಟರ್‌ನ ವರ್ಗ)ದಿಂದ ಭಾಗಿಸಿದಾಗ ದೊರೆಯುತ್ತದೆ.

    ಬಿಎಮ್‍ಐ>23ಕೆಜಿ/ಎಮ್2 ಇರುವ ವ್ಯಕ್ತಿಯು ಅಧಿಕ ತೂಕ ಮತ್ತು ಬಿಎಮ್‍ಐ>25ಕೆಜಿ/ಎಮ್2ನ ವ್ಯಕ್ತಿಯು ಬೊಜ್ಜುತನ ಹೊಂದಿರುತ್ತಾರೆ. ಬಿಎಮ್‍ಐ>18-23ಕೆಜಿ/ಎಮ್2ನ ವ್ಯಕ್ತಿಯು ಆರೋಗ್ಯಕರ ದೇಹ ತೂಕ ಹೊಂದಿರುತ್ತಾರೆ.

    ಆರೋಗ್ಯಕರ ತೂಕಕ್ಕೆ ಮಾಡಬೇಕಾದ ಜೀವನಶೈಲಿ ಬದಲಾವಣೆಗಳು ಆರೋಗ್ಯಕರ ಆಹಾರಕ್ರಮ ಮತ್ತು ನಿಯಮಿತ ದೈಹಿಕ ವ್ಯಾಯಾಮವು ಆರೋಗ್ಯಕರ ದೇಹದ ತೂಕಕ್ಕೆ ಮೂಲಾಧಾರ.

    ಆರೋಗ್ಯಕರ ತಿನ್ನುವ ಹವ್ಯಾಸ:

    ತೂಕ ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ, ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು (ಸಂಕೀರ್ಣ ಕಾಬೊಹೈಡೇಟ್, ಪ್ರೋಟಿನ್, ಹಣ್ಣು, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವರ ಆಹಾರ) ನಾವು ತಿನ್ನುವ ಆಹಾರ ಪ್ರಮಾಣವು (ಕ್ಯಾಲೊರಿಯಲ್ಲಿ), ನಮ್ಮ ವಯಸ್ಸು, ದೈಹಿಕ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ.

    ಆರೋಗ್ಯಕರ ತೂಕ ನಿರ್ವಹಣೆಗೆ ಈ ಕೆಳಗಿನ ಐದು ಆಹಾರ ವಸ್ತುಗಳನ್ನು ಮಿತವಾಗಿ ಸೇವಿಸಬೇಕು.

  • ಬೊಜ್ಜನ್ನು ಕರಗಿಸಲು ಸರಳ ಉಪಾಯವೇನು ಗೊತ್ತಾ?

    ಬೊಜ್ಜನ್ನು ಕರಗಿಸಲು ಸರಳ ಉಪಾಯವೇನು ಗೊತ್ತಾ?

    ರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯದಲ್ಲಿ ಏರಿಳಿತವಾಗುವುದು ಸರ್ವೆ ಸಾಮಾನ್ಯವಾಗಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ತೂಕ ಹೆಚ್ಚಾಗುವುದರ ಜೊತೆಗೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ಆಹಾರವನ್ನು ಸೇವಿಸಬೇಕು, ನಮ್ಮ ಆಹಾರ ಕ್ರಮ ಹೇಗಿದ್ದರೆ ಒಳ್ಳೆಯದು ಎನ್ನುವ ಗೊಂದಲಗಳಿರುತ್ತವೆ.

    ದೇಹದ ತೂಕ ಹೆಚ್ಚಾಗಿದ್ದರೆ ಅದಕ್ಕೆ ಖಂಡಿತವಾಗಿಯೂ ಬೊಜ್ಜು ಕಾರಣವಾಗುವುದು. ಬೊಜ್ಜು ಕರಗಿಸಲು ಹೆಚ್ಚಿನವರು ತುಂಬಾ ಶ್ರಮ ಪಡುತ್ತಾರೆ. ಅಂತಹವರು ಯಾವ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

    * ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳಾಗಿವೆ. ಹೀಗಾಗಿ ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಕೆಲವೊಂದು ಬಗೆಯೆ ಐಸ್‍ಕ್ರೀಮ್‍ಗಳು ಮತ್ತು ಸಿಹಿ ತಿಂಡಿಗಳಿಂದ ದೂರವಿರಿ.

    * ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ.

    * ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

    * ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.

    * ಹೊಟ್ಟೆಯ ಬೊಜ್ಜು ಕರಗಿಸಲು ಇವುಗಳ ಬದಲಿಗೆ ರುಚಿಕರವಾದ ನೀರನ್ನು ಕುಡಿಯಿರಿ. ಇದಕ್ಕಾಗಿ ನೀವು ಒಂದು ಜಗ್ ನೀರಿನಲ್ಲಿ ಸ್ವಲ್ಪ ಸ್ಟ್ರಾಬೆರಿ, ತುಳಸಿ, ಹುಳಿ ಅಥವಾ ಲಿಂಬೆ ಹಾಕಿಕೊಂಡು ಇಡಬೇಕು. ಇದು ಕುಡಿಯಲು ತುಂಬಾ ರುಚಿಕರವಾಗಿರುವುದು ಮತ್ತು ಇದರಲ್ಲಿ ಕ್ಯಾಲರಿ ಕೂಡ ತುಂಬಾ ಕಡಿಮೆ ಇರುವುದು. ಇದರಿಂದ ನೀವು ಮತ್ತಷ್ಟು ನೀರು ಕುಡಿಯಲು ಪ್ರೇರಣೆ ಕೂಡ ಸಿಗುವುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಹಣ್ಣು, ಮೊಸರಿನಿಂದ ತಯಾರಿಸಿದ ಸ್ಮೂತಿ ಅಥವಾ ಸಲಾಡ್‍ ತಯಾರಿಸಿ ಸೇವಿಸಬಹುದಾಗಿದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

  • ಬೊಜ್ಜು ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

    ಬೊಜ್ಜು ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

    ನವದೆಹಲಿ: ಬಾಲಕಿಯೊಬ್ಬಳು ಬೊಜ್ಜು ಬಂದಿದೆ ಎನ್ನುವ ಕಾರಣಕ್ಕೆ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ನಗರದಲ್ಲಿ ನಡೆದಿದೆ.

    13 ವರ್ಷದ ಬಾಲಕಿ ಮೃತಳಾಗಿದ್ದಾಳೆ. 8 ನೇ ತರಗತಿಯ ವಿದ್ಯಾರ್ಥಿನಿ ಅಪ್ರಾಪ್ತ ಬಾಲಕಿ ಅಲೆಕ್ಸಾಂಡ್ರಿಯಾ ರಸ್ತೆಯ, ಕಂಟೋನ್ಮೆಂಟ್ ಪ್ರದೇಶದಲ್ಲಿ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    POLICE JEEP

    ಬಾಲಕಿಯ ತಾಯಿ ಬ್ಯಾಂಕ್ ಉದ್ಯೋಗಿಯಾಗಿದ್ದರು, ಅವರು ಕೆಲಸಕ್ಕೆ ಹೋಗಿದ್ದರು. ಆಕೆಯ ಅಜ್ಜಿ ಮನೆಯಲ್ಲಿದ್ದಳು. ಬಾಲಕಿಯ ಅಜ್ಜಿ ಸಂಜೆ ತಿಂಡಿ ನೀಡಲು ಹೋದಾಗ ಬಾಗಿಲು ಹಾಕಿರುವುದು ಕಂಡು ಬಂದಿದದೆ. ಹಲವಾರು ಬಾರಿ ಬಾಗಿಲು ಬಡಿದ ನಂತರ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಮನೆಯವರು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್

    ಬೊಜ್ಜು ಬಂದಿರುವ ಬಗ್ಗೆ ಬೇಸರಗೊಂಡಿದ್ದಳು. ಅವಳು ಬೊಜ್ಜು ಕರಗಿಸಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ತೂಕ ಹೆಚ್ಚಾಗಿರುವುದರಿಂದ ಬೇಸರಗೊಂಡು ಸಾಯುವ ನಿರ್ಧಾರ ಮಾಡಿದ್ದಾಳೆ ಎಂದು ಬಾಲಕಿ ತಾಯಿ, ಅಜ್ಜಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

  • ಕೊರೊನಾ ಬಳಿಕ ಮಕ್ಕಳನ್ನ ಕಾಡ್ತಿದೆ ಒಬೆಸಿಟಿ ಪ್ರಾಬ್ಲಂ

    ಕೊರೊನಾ ಬಳಿಕ ಮಕ್ಕಳನ್ನ ಕಾಡ್ತಿದೆ ಒಬೆಸಿಟಿ ಪ್ರಾಬ್ಲಂ

    ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮಕ್ಕಳಲ್ಲಿ ಇದೀಗ ಒಬೆಸಿಟಿ ಸಮಸ್ಯೆ ಕಾಡುತ್ತಿದೆ.

    ಡೆಡ್ಲಿ ಕೊರೊನಾ ಬಂದಿದ್ದೇ ತಡ, ಒಂದಿಲ್ಲ ಒಂದು ಸಮಸ್ಯೆ ದಿನ ದಿನ ಕಾಡುತ್ತಲೆ ಇದೆ. ಕೊರೊನಾ ಬಂದಾಗಿನಿಂದ ಜನರ ಲೈಫ್‍ಸ್ಟೈಲ್ ಬದಲಾಗಿದೆ. ಒಂದೆಡೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್, ಇನ್ನೊಂದೆಡೆ ದೊಡ್ಡವರಿಗೆ ವರ್ಕ್ ಫ್ರಮ್ ಹೋಂ ಇದೆ. ಇದರಿಂದ ಮಕ್ಕಳ ಜೀವನ ಶೈಲಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

    ಪ್ರಪಂಚದಾದ್ಯಂತ ಕೊರೊನಾ ತಾಂಡವವಾಡುತ್ತಿದ್ದ ವೇಳೆ ಜನರು ಲಾಕ್‍ಡೌನ್ ಆಗಬೇಕಾಗಿತ್ತು. ಅಲ್ಲದೆ ಡೆಡ್ಲಿ ಕೊರೊನಾದಿಂದ ಮಕ್ಕಳು ಕೂಡ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬೊಜ್ಜಿನ ಪ್ರಮಾಣ ದಿಢೀರ್ ಜಾಸ್ತಿಯಾಗಿದೆ. ಮಕ್ಕಳಿಗಂತೂ ಅತಿಯಾಗಿ ಆರೋಗ್ಯ ಸಮಸ್ಯೆ ಕಾಡುತ್ತಿದೆ.

    ಇನ್ನೂ ಒಬೆಸಿಟಿ ಸಮಸ್ಯೆಯನ್ನು ಹೊಂದಿರುವ ಶೇ.75ರಷ್ಟು ಪೇಷೆಂಟ್ ಗಳು ಹೆಚ್ಚಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇದ್ದರಿಂದ ಜನರು ವಿಟಮಿನ್ ಎ, ವಿಟಮಿನ್ ಡಿ, ಅನಿಮಿಯಾ ಎಂಬ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಇವೆಲ್ಲವನ್ನು ದೂರ ಮಾಡಿ ನಮ್ಮ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬೇಕಾದರೆ ಗುಡ್ ಲೈಫ್‍ಸ್ಟೈಲ್ ಬೆಳೆಸಿಕೊಳ್ಳ ಬೇಕು ಎಂದು ಮಕ್ಕಳ ತಜ್ಞರಾದ ವೈ ಡಾ. ಸೌಮ್ಯ ನಾಗರಾಜ್ ಹೇಳಿದ್ದಾರೆ.

  • ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ಚೆನ್ನೈ: ತೂಕ ಕಡಿಮೆ ಆಗಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಮಹಿಳೆಯೊಬ್ಬರು ಈಗ ಪ್ರಾಣವನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ನಡೆದಿದೆ.

    160 ಕೆಜಿ ತೂಗುತ್ತಿದ್ದ 46 ವರ್ಷದ ವಲರ್‍ಮತಿ ತೂಕ ಜಾಸ್ತಿ ಇದೆ ಎಂದು ಬರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಳು. ಆದರೆ ಈ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು ಚೆನ್ನೈ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಸ್ಥೂಲಕಾಯ ಚಿಕಿತ್ಸೆಯಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರಗೆ ದಾಖಲಿಸಿದ್ದೆ. ಆದರೆ ವೈದ್ಯರು ನಮ್ಮ ಮನೆಯಲ್ಲಿರುವ ನಾಲ್ಕು ಮಂದಿಗೂ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ನಮಗೆ ದುಡ್ಡು ಬೇಕಾಗಿಲ್ಲ, ನೀವು ನಮಗೆ ಶಸ್ತ್ರಚಿಕಿತ್ಸೆ ಆಗುವ ಮೊದಲು ಮತ್ತು ನಂತರದ ಫೋಟೋ ಕೊಡಬೇಕು ಅಂತ ವೈದ್ಯರು ಹೇಳಿದ್ದರು ಎಂದು ವಲರಾಮತಿಯ ಪತಿ ಅಲಗೆಸಾನ್ ಹೇಳಿದ್ದಾರೆ.

    ನಾವೂ ಚಿಕಿತ್ಸೆಗಾಗಿ ಮತ್ತು ಔಷಧಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಮೊದಲ ಶಸ್ತ್ರಚಿಕಿತ್ಸೆ ನಡೆದ ನಂತರ ವಲರಾಮತಿ ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಅಷ್ಟೇ ಅಲ್ಲದೇ ಆರೋಗ್ಯದಲ್ಲಿ ತೊಡಕುಗಳಿರುವ ಕಾರಣ ವೈದ್ಯರು ಒಂಬತ್ತು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.

    ವೈದ್ಯರ ನಿರ್ಲಕ್ಷ್ಯ ಎಂದು ಮಹಿಳೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಕೇಸನ್ನು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಗೆಗಾಗಿ ವಲರ್‍ಮತಿ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.