Tag: obbattu

  • ದಸರಾ 2025 | ನವರಾತ್ರಿಗೆ ಉತ್ತರ ಕರ್ನಾಟಕ ಶೈಲಿಯ ಸಜ್ಜಕದ ಹೋಳಿಗೆ ಮಾಡಿ

    ದಸರಾ 2025 | ನವರಾತ್ರಿಗೆ ಉತ್ತರ ಕರ್ನಾಟಕ ಶೈಲಿಯ ಸಜ್ಜಕದ ಹೋಳಿಗೆ ಮಾಡಿ

    ನ್ನೇನು ದಸರಾಗೆ ಕೆಲವೇ ದಿನಗಳು ಬಾಕಿಯಿವೆ. ನಾಳೆಯಿಂದಲೇ ನವರಾತ್ರಿ ಆರಂಭವಾಗುತ್ತಿದೆ. ಒಂಭತ್ತು ದಿನ ಬೇರೆ ಬೇರೆ ಬಣ್ಣದ ಸೀರೆ ಹಾಕಿಕೊಳ್ಳುವಂತೆ ಪ್ರತಿ ದಿನವೂ ವಿಭಿನ್ನ ಸಿಹಿ ಖಾದ್ಯವನ್ನು ಮಾಡಿ, ದೇವರಿಗೆ ಅರ್ಪಿಸಿ.

    ಹೌದು, ಸಜ್ಜಕದ ಹೋಳಿಗೆ ಉತ್ತರ ಕರ್ನಾಟಕದಲ್ಲಿ ಮಾಡುವ ಒಂದು ಸಿಹಿ ಖಾದ್ಯ. ನವರಾತ್ರಿ ಹಬ್ಬವಷ್ಟೇ ಅಲ್ಲ. ಬೇರೆ ಹಬ್ಬದ ಸಂದರ್ಭದಲ್ಲಿಯೂ ಸಜ್ಜಕದ ಹೋಳಿಗೆಯನ್ನು ಮಾಡಿ ದೇವರಿಗೆ ಅರ್ಪಿಸುತ್ತಾರೆ. ಹೂರಣದ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುವಂತೆಯೇ ಈ ಸಜ್ಜಕದ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇದನ್ನು ತಯಾರಿಸಲು ಬಳಸುವ ಸಾಮಗ್ರಿಗಳು ಮಾತ್ರ ಬೇರೆಯಾಗಿರುತ್ತದೆ. ವಿಧಾನ ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    ದಪ್ಪ ರವೆ
    ಗೋಧಿ ಹಿಟ್ಟು
    ಎಣ್ಣೆ
    ನೀರು
    ಬೆಲ್ಲ
    ತುಪ್ಪ
    ಏಲಕ್ಕಿ ಪುಡಿ

    ಮಾಡುವ ವಿಧಾನ:
    ಮೊದಲಿಗೆ ಒಂದು ಪಾತ್ರೆಯಲ್ಲಿ ಬೆಲ್ಲ ಹಾಗೂ ನೀರು ಹಾಕಿ, ಪಾಕದ ಹದಕ್ಕೆ ಬರುವಂತೆ ಬಿಸಿಮಾಡಿಕೊಳ್ಳಿ. ಚೆನ್ನಾಗಿ ಪಾಕದ ಹದ ಬಂದ ತಕ್ಷಣ ಅದಕ್ಕೆ ದಪ್ಪ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಉಂಡೆ ಮಾಡಲು ಬರುವ ಹಾಗೆ ಗಟ್ಟಿಯಾಗುವ ತನಕ ಕಲಸಿಕೊಳ್ಳಿ. ನಂತರ ಒಲೆ ಆರಿಸಿ, ರವೆಯ ಮಿಶ್ರಣ ತಣ್ಣಗಾಗಲು ಬಿಡಿ. ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

    ಇನ್ನೊಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.

    ಈಗ ರವೆಯ ಮಿಶ್ರಣದಿಂದ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ. ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್‌ ಮಾಡಿಕೊಳ್ಳಿ. ಅದನ್ನು ಚಪಾತಿ ರೀತಿ ಲಟ್ಟಿಸಿಕೊಂಡು, ಎಣ್ಣೆ ಹಚ್ಚಿ ಬೇಯಿಸಿಕೊಂಡರೆ ಸಜ್ಜಕದ ಹೋಳಿಗೆ ತಯಾರಾಗುತ್ತದೆ.

  • ಬಿಸಿ ಬಿಸಿ ಬೇಳೆ ಹೋಳಿಗೆ ಮಾಡಿ ತುಪ್ಪದ ಜೊತೆಗೆ ಸವಿಯಿರಿ

    ಬಿಸಿ ಬಿಸಿ ಬೇಳೆ ಹೋಳಿಗೆ ಮಾಡಿ ತುಪ್ಪದ ಜೊತೆಗೆ ಸವಿಯಿರಿ

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ಪ್ರತಿದಿನ ಮಾಂಸಹಾರ, ಸಸ್ಯಹಾರವನ್ನು ತಿಂದು ಬೇಸರವಾಗಿದೆ. ನಾಲಿಗೆ ರುಚಿ ಕೆಟ್ಟಿದೆ ಎನ್ನುವವರು ವಾರದಲ್ಲಿ ಒಮ್ಮೆಯಾದ್ರೂ ಸಿಹಿತಿಂಡಿಯನ್ನು ತಿನ್ನಬೇಕು ಎಂದು ಬಯಸುತ್ತಾರೆ. ಸಿಹಿಯಾದ ಅಡುಗೆಯನ್ನು ಹೆಚ್ಚು ಜನರು ಇಷ್ಟ ಪಟ್ಟು ಸವಿಯುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದು ನಾವು ಮನೆಯಲ್ಲಿ ಸರಳ ವಿಧಾನದಲ್ಲಿ ಬೇಳೆ ಹೋಳಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಬೇಳೆ- 2ಕಪ್
    * ಮೈದಾ ಹಿಟ್ಟು- 1ಕಪ್
    * ಅರಿಶಿಣ ಪುಡಿ- ಅರ್ಧ ಚಮಚ
    * ಬೆಲ್ಲ – 1ಕಪ್
    * ಉಪ್ಪು- ಸ್ವಲ್ಪ
    * ಏಲಕ್ಕಿ ಪುಡಿ- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡವು ವಿಧಾನ:

    * ಮೊದಲು ನೆನೆಸಿದ ಕಡಲೆ ಬೇಳೆ ಬೇಯಿಸಿಕೊಳ್ಳಿ.
    * ಬೇಯಿಸಿದ ಬೇಳೆಯ ಬಳಿಕ ನೀರು ತೆಗೆದು ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಬೇಳೆ ಮಿಶ್ರಣವನ್ನು ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ.
    * ಬಳಿಕ ಮೈದಾ ಹಿಟ್ಟಿಗೆ ಅರಿಶಿಣ, ಅಡುಗೆ ಎಣ್ಣೆ ಹಾಕಿ ಕಲಸಿಕೊಳ್ಳಿ.

    * ನಂತರ ಮೈದಾನ ಹಿಟ್ಟಿನ ಒಳಗೆ ಬೇಳೆ ಮಿಶ್ರಣವನ್ನು ಹಾಕಿ ಹೋಳಿಗೆ ಆಕಾರಕ್ಕೆ ತಟ್ಟಿಕೊಂಡು ಹೂರ್ಣ ಇಟ್ಟು ಲಟ್ಟಿಸಬೇಕು.


    * ಒಂದು ತವಾಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೋಳಿಗೆ ಹಾಕಿ ಕಾಯಿಸಿಕೊಳ್ಳಿ. ಈಗ ಬೇಳೆ ಹೋಳಿಗೆ ಸವಿಯಲು ಸಿದ್ಧವಾಗಿತ್ತದೆ.
    *ಬಿಸಿಯಾದ ಬೇಳೆ ಹೋಳಿಗೆ ತುಪ್ಪದೊಂದಿಗೆ ಸವಿಯಿರಿ

  • ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು ಮಾಡೋಕೆ ಸಿಂಪಲ್ ರೆಸಿಪಿ ಇಲ್ಲಿದೆ

    ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು ಮಾಡೋಕೆ ಸಿಂಪಲ್ ರೆಸಿಪಿ ಇಲ್ಲಿದೆ

    ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟಿನ ಘಮ ಇರಲೇಬೇಕು. ತೆಂಗಿನ ಕಾಯಿ ಹೋಳಿಗೆ, ತೊಗರಿಬೇಳೆ ಒಬ್ಬಟ್ಟು ಅಥವಾ ಕಡಲೆಬೇಳೆಯನ್ನ ಬಳಸಿಯೂ ಒಬ್ಬಟ್ಟು ಮಾಡ್ತಾರೆ. ಬೇಳೆ ಒಬ್ಬಟ್ಟು ಮಾಡೋಕೆ ಸಖತ್ ಸುಲಭವಾದ ವಿಧಾನ ಇಲ್ಲಿದೆ.

    ಬೇಗಾಗುವ ಸಾಮಾಗ್ರಿಗಳು:
    1. ತೊಗರಿ ಬೇಳೆ – 1/2 ಕೆಜಿ
    2. ಚಿರೋಟಿ ರವೆ – ಕಾಲು ಕಪ್
    3. ಮೈದಾಹಿಟ್ಟು – 2 ಬಟ್ಟಲು
    4. ಬೆಲ್ಲ – 1/2 ಕೆಜಿ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕೆ ಅನುಗುಣವಾಗಿ ಬಳಸಿ
    5. ತೆಂಗಿನಕಾಯಿ ತುರಿ – ಒಂದು ಬಟ್ಟಲು
    6. ಏಲಕ್ಕಿ ಪುಡಿ – ಸ್ವಲ್ಪ
    7. ತುಪ್ಪ – ಎರಡು ಚಮಚ
    8. ಎಣ್ಣೆ – 1 ಕಪ್
    9. ಉಪ್ಪು – 1 ಚಿಟಿಕೆ
    10. ಅರಿಸಿನ – 1 ಚಿಟಿಕೆ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಶಿನ, ಒಂದು ಚಿಟಿಕೆ ಉಪ್ಪು ಮತ್ತು ತುಪ್ಪ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚಪಾತಿ ಹಿಟ್ಟಿಗಿಂತ ತುಂಬಾ ಮೃದುವಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ 1/2 ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 30 ನಿಮಿಷ ನೆನೆಯಲು ಬಿಡಿ.
    * ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ.
    * ಒಂದು ಪಾತ್ರೆಯಲ್ಲಿ ತೊಗರಿಬೇಳೆ, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
    * ಬೇಳೆ ನುಣ್ಣಗಾಗುವಂತೆ ಬೇಯಿಸಬೇಡಿ. ಸ್ವಲ್ಪ ಗಟ್ಟಿಯಿರುವಾಗಲೇ ಇದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ತುರಿ, ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
    * ಈ ಮಿಶ್ರಣ ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು(ನೀರು ಸೇರಿಸಬರದು).
    * ಹೀಗೆ ನುಣ್ಣಗೆ ರುಬ್ಬಿದ ಮಿಶ್ರಣವನ್ನ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.

    ಹೋಳಿಗೆ ಮಾಡುವುದು:
    * ಕಲಸಿಟ್ಟ ಮೈದಾ ಮಿಶ್ರಣವನ್ನು ತೆಗೆದುಕೊಂಡು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
    * ಒಂದು ಮಣೆ ಮೇಲೆ ಬಾಳೆ ಎಲೆ/ ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಮೈದಾ ಮಿಶ್ರಣವನ್ನು ತೆಗೆದುಕೊಂಡು ಅದರ ಮೇಲೆ ತಟ್ಟಿಕೊಳ್ಳಿ.
    * ಇದರ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು ಎಲ್ಲಾ ಬದಿಯಿಂದ ಮೇಲ್ಮುಖವಾಗಿ ಮೈದಾ ಹಿಟ್ಟಿನಿಂದ ಹೂರಣವನ್ನು ಮುಚ್ಚಿ.


    * ಹೂರಣವನ್ನು ಮುಚ್ಚಿದ ತುದಿಯನ್ನು ಕೆಳಭಾಗಕ್ಕೆ ತಿರುಗಿಸಿ ಕೈಗೆ ಎಣ್ಣೆ ಸವರಿಕೊಂಡು ಲಘುವಾಗಿ ತಟ್ಟಿಕೊಳ್ಳಿ.
    * ಒಬ್ಬಟ್ಟು ತಟ್ಟುವಾಗಿ ತೀರಾ ತೆಳ್ಳಗೆ ತಟ್ಟಿದರೆ ಬೇಯಿಸುವಾಗ ಮುರಿದು ಹೋಗುತ್ತದೆ. ಆದ್ದರಿಂದ ತೀರಾ ತೆಳ್ಳಗೂ ಅಲ್ಲದೆ ದಪ್ಪವೂ ಅಲ್ಲದೆ ಮಧ್ಯಮ ಗಾತ್ರದಲ್ಲಿ ತಟ್ಟಿಕೊಳ್ಳಿ.

         
    * ಒಲೆ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ತವಾ ಬಿಸಿಯಾದ ನಂತರ ಅದರ ಮೇಲೆ ತಟ್ಟಿಕೊಂಡ ಒಬ್ಬಟ್ಟು ಹಾಕಿ ಎರಡೂ ಬದಿ ಹದವಾಗಿ ಬೇಯಿಸಿದ್ರೆ ಬೇಳೆ ಒಬ್ಬಟ್ಟು ರೆಡಿ.
    * ಇದನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಬಿಸಿ ಮಾಡಿದ ಹಾಲಿನೊಂದಿಗೆ ಸವಿಯಬಹುದು.