Tag: oats soup

  • ತೂಕ ಇಳಿಸಿಕೊಳ್ಳಲು ಬಯಸುವವರು ಓಟ್ಸ್ ಸೂಪ್ ಮಾಡಿ ಸವಿಯಿರಿ

    ತೂಕ ಇಳಿಸಿಕೊಳ್ಳಲು ಬಯಸುವವರು ಓಟ್ಸ್ ಸೂಪ್ ಮಾಡಿ ಸವಿಯಿರಿ

    ಹೆಚ್ಚಿನವರು ತೂಕ ಇಳಿಸುವ ಸಮಯದಲ್ಲಿ ಆಹಾರದ ಮೇಲೆ ಗಮನ ಹರಿಸುತ್ತಾರೆ. ಅದು ಒಳ್ಳೆಯದು, ಆದರೆ ಕೆಲವೊಮ್ಮೆ ನಾವು ತೂಕ ಕಳೆದುಕೊಳ್ಳಲು ಕೆಲವೊಂದು ಆಹಾರಗಳನ್ನು ತ್ಯಜಿಸುತ್ತೇವೆ. ನಾವು ಪ್ರತಿನಿತ್ಯ ಸೇವಿಸುವ ಆಹಾರವು ಕೂಡ ಆರೋಗ್ಯದಾಯಕ ಆಗಿರಬೇಕು ಎಂಬುದು ಎಲ್ಲರ ಬಯಕೆ. ಎಣ್ಣೆ ಪದಾರ್ಥಗಳು ಮತ್ತು ಸಹಜ ಜೀವನ ಶೈಲಿಯು ದೇಹದಲ್ಲಿ ಕೊಬ್ಬು ಶೇಖರಣೆಯಾಗಲು ಸಹಾಯವಾಗುತ್ತವೆ. ಆದ್ದರಿಂದ ತುಂಬಾ ಜನರು ತೂಕ ಇಳಿಸಿಕೊಳ್ಳಲು ಮುಂದಾಗುತ್ತಾರೆ. ಅಂತಹವರು ಊಟದಲ್ಲಿ ನಿಯಂತ್ರಣ ಇಡಬೇಕಾಗುತ್ತದೆ. ಹಾಗಂತ ಕಡಿಮೆ ಊಟ ಮಾಡಲು ಆಗುವುದಿಲ್ಲ. ನಾವು ಸೇವಿಸುವ ಆಹಾರದಿಂದ ಹೊಟ್ಟೆಯು ತುಂಬಬೇಕು ಜೊತೆಗೆ ಆರೋಗ್ಯಕರವಾಗಿಯೂ ಇರಬೇಕು. ಅಂತಹ ಒಂದು ವಿಭಿನ್ನವಾದ ಸೂಪನ್ನು ಮಾಡೋಣ. ಓಟ್ಸ್ ಬಳಸಿ ಮಾಡುವಂತಹ ಸೂಪ್ ಇದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಓಟ್ಸ್ – 1 ಕಪ್
    * ಆಲಿವ್ ಎಣ್ಣೆ- 2 ಚಮಚ
    * ಬೆಳ್ಳುಳ್ಳಿ – 1
    * ಶುಂಠಿ – ಸ್ವಲ್ಪ
    * ಈರುಳ್ಳಿ – 2
    * ತರಕಾರಿಗಳು ( ಬೇಕಾದದ ತರಕಾರಿ)- 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಾಳು ಮೆಣಸಿನ ಪುಡಿ- 1 ಚಮಚ
    * ನಿಂಬೆ- 2 ಚಮಚ ಫಟಾ ಫಟ್ ಮಾಡಿ ಕಡಲೆಕಾಯಿ ಚಾಟ್

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಸೇರಿಸಿ ಹುರಿಯಿರಿ.
    * ಓಟ್ಸ್ ಸೇರಿಸಿ ಹುರಿಯಿರಿ.


    * ಮಿಕ್ಸ್ ತರಕಾರಿಗಳು, 4 ಕಪ್ ನೀರು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಇದನ್ನೂ ಓದಿ:  ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್
    * ಕಾಳು ಮೆಣಸಿನ ಪುಡಿ, ನಿಂಬೆ ಹಣ್ಣಿನ ರಸ, ಈರುಳ್ಳಿ ಸೇರಿಸಿ ಚೆನ್ನಾಗಿ ಬೆರೆಸಿ ಕುದಿಸಿದರೆ ರುಚಿಯಾದ ಓಟ್ಸ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್