Tag: oats idli

  • ಮನೆಯಲ್ಲೇ ತಯಾರಿಸಿ ರುಚಿಕರ ಓಟ್ಸ್‌ ಇಡ್ಲಿ

    ಮನೆಯಲ್ಲೇ ತಯಾರಿಸಿ ರುಚಿಕರ ಓಟ್ಸ್‌ ಇಡ್ಲಿ

    ಟ್ಸ್‌ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಓಟ್ಸ್‌ನ್ನು ಹಾಗೇ ಬಟ್ಟಲ ಮುಂದೆ ಇಟ್ಟರೆ ಯಾರು ತಿನ್ನಲ್ಲ.. ಹಾಗಾಗಿ ಇದರಿಂದ ತಿಂಡಿ ಮಾಡಿದರೆ ಮಕ್ಕಳು ಹಾಗೂ ದೊಡ್ಡವರಿಗೆ ಇಷ್ಟವಾಗುತ್ತೆ. ಈಗ ಓಟ್ಸ್‌ನಲ್ಲಿ ಇಡ್ಲಿ ಮಾಡೋದು ಹೇಗೆ ಎಂದು ನೋಡೋಣ.

    ಮಾಡಲು ಬೇಕಾಗುವ ಸಾಮಾಗ್ರಿಗಳು
    2 ಕಪ್ ಓಟ್ಸ್
    1 ಚಮಚ ಸಾಸಿವೆ
    ½ ಲೀಟರ್ ಮೊಸರು
    ½ ಟೀಸ್ಪೂನ್ ಚನಾ ದಾಲ್
    1 ಟೀಸ್ಪೂನ್ ಉದ್ದಿನ ಬೇಳೆ
    ½ ಚಮಚ ಎಣ್ಣೆ
    1 ಕಪ್ ತುರಿದ ಕ್ಯಾರೆಟ್
    2 ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ
    ರುಚಿಗೆ ತಕ್ಕಂತೆ ಉಪ್ಪು
    ½ ಚಮಚ ಅರಿಶಿನ ಪುಡಿ

    ಓಟ್ಸ್ ಅನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಮತ್ತು ದಾಲ್ ಸೇರಿಸಿ ಕೈ ಆಡಿಸುತ್ತಿರಿ. ದಾಲ್ ಕಂದು ಬಣ್ಣಕ್ಕೆ ತಿರುಗಿದ ನಂತರ ಕೊತ್ತಂಬರಿ ಮತ್ತು ಕ್ಯಾರೆಟ್ ಸೇರಿಸಿ. ಅದಕ್ಕೆ ಅರಿಶಿನ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ. ಒಂದು ಬಟ್ಟಲಿನಲ್ಲಿ, ಓಟ್ಸ್ ಮತ್ತು ತಯಾರಿಸಿದ ಮಸಾಲೆ ಮತ್ತು ಮೊಸರನ್ನು ಮಿಶ್ರಣ ಮಾಡಿ, ಚನ್ನಾಗಿ ಕಲಸಿ. ಇಡ್ಲಿ ಸ್ಟೀಮರ್‌ನಲ್ಲಿ ನೀವು ಮಾಡುವ ರೀತಿಯಲ್ಲಿ ಇಡ್ಲಿಯನ್ನು ತಯಾರಿಸಿ. ಬೆಂದ ಬಳಿಕ ಇಡ್ಲಿಗಳು ಸವಿಯಲು ಸಿದ್ಧ!

  • ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ಟ್ಸ್ ಉತ್ತಮ ಪೌಷ್ಟಿಕಾಂಶ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಡ್ಲಿ ಬೆಳಗ್ಗಿನ ಉಪಹಾರಕ್ಕೆ ಪರ್ಫೆಕ್ಟ್ ಆಗಿದೆ. ಇವೆರಡರ ಕಾಂಬಿನೇಶನ್‌ನಿಂದ ತುಂಬಾ ರುಚಿಯಾದ ಇಡ್ಲಿ ತಯಾರಿಸಿದರೆ ಹೇಗಿರುತ್ತೆ? ಸುಲಭವಾಗಿ ಮಾಡಬಹುದಾದ ಓಟ್ಸ್ ಇಡ್ಲಿ ರೆಸಿಪಿ ಇಲ್ಲಿದೆ. ನೀವೂ ಕೂಡಾ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 1 ಕಪ್ (ಇನ್‌ಸ್ಟಂಟ್ ಓಟ್ಸ್/ಸ್ಟೀಲ್ ಕಟ್ ಓಟ್ಸ್/ರೋಲ್ಡ್ ಓಟ್ಸ್)
    ರವೆ – ಅರ್ಧ ಕಪ್
    ಮೊಸರು – ಅರ್ಧ ಕಪ್
    ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ತುರಿದ ಕ್ಯಾರೆಟ್ – 1 (ಅಂದಾಜು ಅರ್ಧ ಕಪ್)
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 1 ಕಪ್
    ಅಡುಗೆ ಸೋಡಾ – ಮುಕ್ಕಾಲು ಟೀಸ್ಪೂನ್

    ಒಗ್ಗರಣೆಗೆ:
    ಎಣ್ಣೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಉದ್ದಿನ ಬೇಳೆ – ಅರ್ಧ ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆಗಳು – 7-8
    ಜೀರಿಗೆ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಓಟ್ಸ್ ಅನ್ನು 4-5 ನಿಮಿಷಗಳ ಕಾಲ ಹುರಿಯಿರಿ.
    * ಈಗ ಓಟ್ಸ್ ಅನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್‌ನಲ್ಲಿ ಸಣ್ಣಗೆ ಗ್ರೈಂಡ್ ಮಾಡಿ.
    * ಈಗ ಒಗ್ಗರಣೆಗೆ 1 ಚಮಚ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಎಲೆಗಳು ಹಾಗೂ ಜೀರಿಗೆ ಹಾಕಿ, ಬೇಳೆ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣವಾಗುವವರೆಗೆ ಕೈಯಾಡಿಸಿ.
    * ಬಳಿಕ ಅದಕ್ಕೆ ರವೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ 4-5 ನಿಮಿಷ ಹುರಿಯಿರಿ.
    * ಈಗ ಗ್ರೈಂಡ್ ಮಾಡಿದ ಓಟ್ಸ್ ಹಾಕಿ, ಮಿಕ್ಸ್ ಮಾಡಿ.
    * ಈಗ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ, ಅದನ್ನು ಆರಲು ಬಿಡಿ.
    * ಬಳಿಕ ಮೊಸರು, ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ.
    * ಈಗ ಇಡ್ಲಿ ಮಾಡಲು ಅಗತ್ಯವಿರುವಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿ 15-20 ನಿಮಿಷ ಬಿಡಿ.
    * ಈಗ ಇಡ್ಲಿ ತಯಾರಿಸಲು ಇಡ್ಲಿ ಮೇಕರ್ ಅಥವಾ ಸ್ಟೀಮರ್‌ನಲ್ಲಿ ಮೊದಲು ನೀರು ಹಾಕಿ ಬಿಸಿ ಮಾಡಿ.
    * ಹಿಟ್ಟಿಗೆ ಈಗ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ, ಇಡ್ಲಿ ತಟ್ಟೆಗಳಿಗೆ ಸುರಿಯಿರಿ.
    * ಅವುಗಳನ್ನು ಸ್ಟೀಮರ್‌ನಲ್ಲಿ ಹಾಕಿ, 15 ನಿಮಿಷಗಳ ಕಾಲ ಬೇಯಿಸಿ.
    * ಓಟ್ಸ್ ಇಡ್ಲಿಗಳು ಈಗ ಬಡಿಸಲು ಸಿದ್ಧವಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]