Tag: Oats

  • ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್

    ನಾವಿಂದು ಹೇಳಿಕೊಡುತ್ತಿರೋ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ತುಂಬಾ ಮೃದು, ಕುಂಬಳಕಾಯಿ ಸ್ವಾದದ, ಅಗಿಯಲು ಮಜವೆನಿಸೋ ಸಖತ್ ರುಚಿಯಾದ ರೆಸಿಪಿಯಾಗಿದೆ. ಸಂಜೆ ವೇಳೆ ಒಂದು ಕಪ್ ಚಹಾದೊಂದಿಗೆ ಇಲ್ಲವೇ ಫ್ರೀ ಟೈಮ್‌ನಲ್ಲಿ ಈ ಕುಕೀಸ್ ನಿಮಗೆ ಜೊತೆಯಾಗಬಲ್ಲದು. ಇದಕ್ಕೆ ಓಟ್ಸ್ ಬೆರೆಸಿರುವುದರಿಂದ ಆರೋಗ್ಯಕರವೂ ಎನಿಸುತ್ತದೆ. ಮೃದುವಾದ ಸಿಹಿ ಕುಂಬಳಕಾಯಿ ಓಟ್ಸ್ ಕುಕೀಸ್ ಮಡೋದು ಹೇಗೆಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 1 ಕಪ್
    ದಾಲ್ಚಿನ್ನಿ ಪುಡಿ – ಅರ್ಧ ಟೀಸ್ಪೂನ್
    ಅಡುಗೆ ಸೋಡಾ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಕರಗಿಸಿದ ಬೆಣ್ಣೆ – ಅರ್ಧ ಕಪ್
    ಬ್ರೌನ್ ಶುಗರ್ – ಅರ್ಧ ಕಪ್
    ಸಕ್ಕರೆ ಪುಡಿ – ಕಾಲು ಕಪ್
    ಮೊಟ್ಟೆಯ ಹಳದಿ ಭಾಗ – 1
    ವೆನಿಲ್ಲಾ ಸಾರ – 1 ಟೀಸ್ಪೂನ್
    ಸಿಹಿ ಕುಂಬಳಕಾಯಿ ಪ್ಯೂರಿ – ಅರ್ಧ ಕಪ್
    ಓಟ್ಸ್ – ಅರ್ಧ ಕಪ್  ಇದನ್ನೂ ಓದಿ: ಬೇಕರಿ ಸ್ಟೈಲ್ ಎಗ್‍ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟು, ದಾಲ್ಚಿನ್ನಿ ಪುಡಿ, ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಬೆಣ್ಣೆ, ಕಂದು ಸಕ್ಕರೆ, ಸಕ್ಕರೆ ಪುಡಿ ಸೇರಿಸಿ, 1-2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಮೊಟ್ಟೆಯ ಹಳದಿ ಭಾಗ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಕುಂಬಳಕಾಯಿ ಪ್ಯೂರಿಯನ್ನು ಸೇರಿಸಿ.
    * ಈಗ ಒಣ ಪದಾರ್ಥಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ನಿಧಾನವಾಗಿ ಬೆರೆಸಿ.
    * ಓಟ್ಸ್ ಅನ್ನು ಮಿಶ್ರಣಕ್ಕೆ ಹಾಕಿ ಬೆರೆಸಿ.
    * ಈಗ ಪಾತ್ರೆಗೆ ಪ್ಲಾಸ್ಟಿಕ್ ಕವರ್‌ನಿಂದ ಬಿಗಿಯಾಗಿ ಮುಚ್ಚಿ, 30 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
    * ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಹೊದಿಸಿ ಇಡಿ.
    * ಈಗ ಸುಮಾರು ಒಂದೂವರೆ ಚಮಚದಷ್ಟು ಮಿಶ್ರಣ ಬರುವಂತೆ ಕುಕೀಸ್ ಆಕಾರದಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿಕೊಳ್ಳಿ. ಪ್ರತಿ ಹಿಟ್ಟಿನ ಭಾಗಗಳ ನಡುವೆ ಸ್ವಲ್ಪ ಸ್ವಲ್ಪ ಅಂತರವಿರಲಿ.
    * ಈಗ ಬೇಕಿಂಗ್ ಶೀಟ್ ಅನ್ನು ಓವನ್‌ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಕುಕೀಸ್‌ಗಳನ್ನು ತೆಗೆದು 5 ನಿಮಿಷ ತಣ್ಣಗಾಗಿಸಿದರೆ ಮೃದುವಾದ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ರೋಗ್ಯಕರ ಮಾತ್ರವಲ್ಲದೇ ರುಚಿಕರವೂ ಆದ ಓಟ್ಸ್‌ನ (Oats) ಅಡುಗೆಯನ್ನು ಮಕ್ಕಳು ಮಾತ್ರವಲ್ಲದೇ ವಯಸ್ಕರೂ ಇಷ್ಟ ಪಡುತ್ತಾರೆ. ಹಾಲು ಅಥವಾ ಮೊಸರಿನೊಂದಿಗೆ ಓಟ್ಸ್ ಅನ್ನು ಹೆಚ್ಚಿನವರು ಸವಿಯಲು ಇಷ್ಟಪಡುತ್ತಾರಾದರೂ ಮಸಾಲೆಯುಕ್ತ ಪಾಕವಿಧಾನವೂ ಅಷ್ಟೇ ರುಚಿಕರವಾಗಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ವೆಜ್ ಮಾಸಾಲಾ ಓಟ್ಸ್ ಉಪ್ಪಿಟ್ಟನ್ನು(Veg Masala Oats Upma) ಒಮ್ಮೆ ನೀವೂ ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 2 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 1
    ಸಣ್ಣಗೆ ಹೆಚ್ಚಿದ ಬೀನ್ಸ್ – 3
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ

    ತಾಜಾ ಬಟಾಣಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲ ಪುಡಿ – ಅರ್ಧ ಟೀಸ್ಪೂನ್
    ರೋಲ್ಡ್ ಓಟ್ಸ್ – 1 ಕಪ್
    ನೀರು – 2 ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
    * ಈಗ ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಸಾಟ್ ಮಾಡಿ.
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಈಗ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
    * ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಮತ್ತು ಬಟಾಣಿ ಹಾಕಿ 2 ನಿಮಿಷ ಬೇಯಿಸಿ.
    * ಈಗ ಮೆಣಸಿನ ಪುಡಿ, ಗರಂ ಮಸಾಲ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಬೇಯಿಸಿ.
    * ಓಟ್ಸ್ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಇದೀಗ 2 ಕಪ್ ನೀರು ಸೇರಿಸಿ. ನಿಮಗೆ ಬೇಕಾಗಿರುವ ಸ್ಥಿರತೆಯನ್ನು ಅಂದಾಜಿಸಿ ಹೆಚ್ಚುವರಿ ನೀರು ಸೇರಿಸಬಹುದು.
    * ಈಗ ಎಲ್ಲವನ್ನೂ ನಿಧಾನವಾಗಿ ಮಿಶ್ರಣ ಮಾಡಿ, ಕಡಾಯಿಯನ್ನು ಮುಚ್ಚಿ, 5 ನಿಮಿಷಗಳ ಕಾಲ ಕುದಿಸಿ.
    * ಈಗ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಗೋಡಂಬಿಯನ್ನು ಹಾಕಿದರೆ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು ತಯಾರಾಗುತ್ತದೆ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ

    ಟ್ಸ್ ಉತ್ತಮ ಪೌಷ್ಟಿಕಾಂಶ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಡ್ಲಿ ಬೆಳಗ್ಗಿನ ಉಪಹಾರಕ್ಕೆ ಪರ್ಫೆಕ್ಟ್ ಆಗಿದೆ. ಇವೆರಡರ ಕಾಂಬಿನೇಶನ್‌ನಿಂದ ತುಂಬಾ ರುಚಿಯಾದ ಇಡ್ಲಿ ತಯಾರಿಸಿದರೆ ಹೇಗಿರುತ್ತೆ? ಸುಲಭವಾಗಿ ಮಾಡಬಹುದಾದ ಓಟ್ಸ್ ಇಡ್ಲಿ ರೆಸಿಪಿ ಇಲ್ಲಿದೆ. ನೀವೂ ಕೂಡಾ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 1 ಕಪ್ (ಇನ್‌ಸ್ಟಂಟ್ ಓಟ್ಸ್/ಸ್ಟೀಲ್ ಕಟ್ ಓಟ್ಸ್/ರೋಲ್ಡ್ ಓಟ್ಸ್)
    ರವೆ – ಅರ್ಧ ಕಪ್
    ಮೊಸರು – ಅರ್ಧ ಕಪ್
    ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ತುರಿದ ಕ್ಯಾರೆಟ್ – 1 (ಅಂದಾಜು ಅರ್ಧ ಕಪ್)
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 1 ಕಪ್
    ಅಡುಗೆ ಸೋಡಾ – ಮುಕ್ಕಾಲು ಟೀಸ್ಪೂನ್

    ಒಗ್ಗರಣೆಗೆ:
    ಎಣ್ಣೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಉದ್ದಿನ ಬೇಳೆ – ಅರ್ಧ ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆಗಳು – 7-8
    ಜೀರಿಗೆ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಓಟ್ಸ್ ಅನ್ನು 4-5 ನಿಮಿಷಗಳ ಕಾಲ ಹುರಿಯಿರಿ.
    * ಈಗ ಓಟ್ಸ್ ಅನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್‌ನಲ್ಲಿ ಸಣ್ಣಗೆ ಗ್ರೈಂಡ್ ಮಾಡಿ.
    * ಈಗ ಒಗ್ಗರಣೆಗೆ 1 ಚಮಚ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಎಲೆಗಳು ಹಾಗೂ ಜೀರಿಗೆ ಹಾಕಿ, ಬೇಳೆ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣವಾಗುವವರೆಗೆ ಕೈಯಾಡಿಸಿ.
    * ಬಳಿಕ ಅದಕ್ಕೆ ರವೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ 4-5 ನಿಮಿಷ ಹುರಿಯಿರಿ.
    * ಈಗ ಗ್ರೈಂಡ್ ಮಾಡಿದ ಓಟ್ಸ್ ಹಾಕಿ, ಮಿಕ್ಸ್ ಮಾಡಿ.
    * ಈಗ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ, ಅದನ್ನು ಆರಲು ಬಿಡಿ.
    * ಬಳಿಕ ಮೊಸರು, ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ.
    * ಈಗ ಇಡ್ಲಿ ಮಾಡಲು ಅಗತ್ಯವಿರುವಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿ 15-20 ನಿಮಿಷ ಬಿಡಿ.
    * ಈಗ ಇಡ್ಲಿ ತಯಾರಿಸಲು ಇಡ್ಲಿ ಮೇಕರ್ ಅಥವಾ ಸ್ಟೀಮರ್‌ನಲ್ಲಿ ಮೊದಲು ನೀರು ಹಾಕಿ ಬಿಸಿ ಮಾಡಿ.
    * ಹಿಟ್ಟಿಗೆ ಈಗ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ, ಇಡ್ಲಿ ತಟ್ಟೆಗಳಿಗೆ ಸುರಿಯಿರಿ.
    * ಅವುಗಳನ್ನು ಸ್ಟೀಮರ್‌ನಲ್ಲಿ ಹಾಕಿ, 15 ನಿಮಿಷಗಳ ಕಾಲ ಬೇಯಿಸಿ.
    * ಓಟ್ಸ್ ಇಡ್ಲಿಗಳು ಈಗ ಬಡಿಸಲು ಸಿದ್ಧವಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ

    ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ

    ನರು ಆರೋಗ್ಯವಾಗಿರುವುದು ತಿನ್ನುವ ಆಹಾರದಿಂದ. ಅದರಲ್ಲಿಯೂ ನಾವು ಯಾವ ರೀತಿಯ ಆಹಾರ ತಿನ್ನುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತೆ. ಅದಕ್ಕೆ ಓಟ್ಸ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಮುಖ್ಯವಾಗಿ ಬೆಳಗ್ಗಿನ ಆಹಾರಕ್ಕಾಗಿ ಸೇವಿಸಲಾಗುತ್ತದೆ. ಆದರೆ ಇದನ್ನು ಹೆಚ್ಚು ಜನರು ಹಾಲು ಅಥವಾ ಹಣ್ಣುಗಳ ಜೊತೆ ತಿನ್ನುತ್ತಾರೆ. ಆದರೆ ಇಂದು ನಾವು ಮಸಾಲೆಯುಕ್ತ ಓಟ್ಸ್ ಮಾಡುವುದು ಹೇಗೆ ಎಂದು ಸರಳ ಉಪಾಯದಲ್ಲಿ ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಓಟ್ಸ್ – 1 ಕಪ್
    * ಎಣ್ಣೆ – 1 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – ಅರ್ಧ ಟೀಸ್ಪೂನ್
    * ಜೀರಿಗೆ – ಅರ್ಧ ಟೀಸ್ಪೂನ್
    * ಕರಿಬೇವಿನ ಎಲೆ – 5 ರಿಂದ 10
    * ಗೋಡಂಬಿ – 10
    * ಶುಂಠಿ – 1 ಇಂಚು
    * ಮೆಣಸಿನಕಾಯಿ – 2


    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
    * ಕಟ್ ಮಾಡಿದ ಬೀನ್ಸ್ – ಅರ್ಧ ಕಪ್
    * ಕಟ್ ಮಾಡಿದ ಕ್ಯಾಪ್ಸಿಕಂ – ಕಾಲು ಕಪ್
    * ಬಟಾಣಿ – 2 ಟೇಬಲ್ಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನೀರು – 1 ಕಪ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 2 ಟೇಬಲ್ಸ್ಪೂನ್
    * ನಿಂಬೆ ರಸ – 1 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ಓಟ್ಸ್ ಅನ್ನು 5 ನಿಮಿಷಗಳ ಕಾಲ ಹುರಿಯಿರಿ. ಓಟ್ಸ್ ಗರಿಗರಿಯಾಗುವ ತನಕ ರೋಸ್ಟ್ ಮಾಡಿ. ಪಕ್ಕಕ್ಕೆ ಇರಿಸಿ.
    * ಈಗ ಒಂದು ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕರಿ ಬೇವು ಮತ್ತು ಗೋಡಂಬಿಗಳನ್ನು ಸೇರಿಸಿ. ಗೋಡಂಬಿಗಳು ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
    * ನಂತರ ಶುಂಠಿ, ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, ಅರಿಶಿನ ಮತ್ತು ಉಪ್ಪು ಸೇರಿಸಿ. 2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಅದಕ್ಕೆ ನೀರು ಸೇರಿಸಿ, ಮುಚ್ಚಿ ಮತ್ತು 5 ನಿಮಿಷಗಳ ಕಾಲ ಬಿಡಿ. ತರಕಾರಿಗಳನ್ನು ಚೆನ್ನಾಗಿ ಬೇಯುವ ತನಕ ಕುಕ್ ಮಾಡಿ.
    * ತರಕಾರಿಗಳು ಬೆಂದ ಮೇಳೆ ಅದಕ್ಕೆ ಹುರಿದ ಓಟ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಓಟ್ಸ್ ಎಲ್ಲ ನೀರನ್ನು ಹೀರಿಕೊಳ್ಳುವವರೆಗೂ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಮುಚ್ಚಿ.
    * ಕೊನೆಗೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ. ಓಟ್ಸ್ ಸಂಪೂರ್ಣವಾಗಿ ಬೇಯಲು ಬಿಡಿ.

    – ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]