Tag: O Panner Selvam

  • ತೂತುಕುಡಿ  ಸ್ಟರ್ಲೈಟ್  ತಾಮ್ರ ಘಟಕ ಮುಚ್ಚುವಂತೆ ತಮಿಳುನಾಡು ಸರ್ಕಾರದಿಂದ ಆದೇಶ

    ತೂತುಕುಡಿ ಸ್ಟರ್ಲೈಟ್ ತಾಮ್ರ ಘಟಕ ಮುಚ್ಚುವಂತೆ ತಮಿಳುನಾಡು ಸರ್ಕಾರದಿಂದ ಆದೇಶ

    ಚೆನ್ನೈ: ಸಾಕಷ್ಟು ಪ್ರತಿಭಟನೆ ಗೋಲಿಬಾರ್ ನಂತರ ತೂತುಕುಡಿ ಸ್ಟರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

    ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್ ನಿಂದ 13 ಜನ ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೆ ಜನತೆಯ ಆಗ್ರಹದಂತೆ ವೇದಾಂತ ಸಮೂಹ ಸಂಸ್ಥೆಗೆ ಸೇರಿರುವ ಸ್ಟರ್ಲೈಟ್ ತಾಮ್ರ ಘಟಕವನ್ನು ಸಂಪೂರ್ಣವಾಗಿ ಮುಚ್ಚುವಂತೆ ತಮಿಳುನಾಡು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಧೃಢವಾದ ನಿರ್ಧಾರ ತೆಗೆದುಕೊಂಡಿದ್ದಾರೆ.

    ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಮೇ 22 ರ ಪೊಲೀಸ್ ಕಾರ್ಯಾಚರಣೆ ವೇಳೆ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು ಅಮ್ಮ ಸರ್ಕಾರ ಘಟಕವನ್ನು ಮುಚ್ಚಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ:ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ಪೊಲೀಸ್ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರನ್ನು ನೆನೆದು ಅವರುಗಳ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಸಾಂತ್ವಾನವನ್ನು ಹೇಳಿದರು. 2013ರಲ್ಲಿ ಮಾಜಿ ಸಿಎಂ ಜೆ ಜಯಲಲಿತಾ ಘಟಕ ಮುಚ್ಚಿಸಿದ್ದನ್ನು ನೆನಪಿಸಿದರು.

    ಕೇಂದ್ರ ಹಸಿರು ಪೀಠದಿಂದ ಸ್ಟರ್ಲೈಟ್ ಕಂಪೆನಿ ಘಟಕವನ್ನು ನಡೆಸಲು ಅನುಮತಿ ತಂದಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮಾಡಿರುವ ದೂರಿನ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ಬಾಕಿ ಇದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಂಪೆನಿಯ ಪರವಾನಗಿಯನ್ನು ನವೀಕರಿಸುವುದಿಲ್ಲ ಹಾಗಾಗಿ ಘಟಕವನ್ನು ನಡೆಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

     

     

     

  • ಶಶಿಕಲಾ, ಸೆಲ್ವಂ ಬಣಗಳಿಗೆ ಶಾಕ್ – ಎಐಎಡಿಎಂಕೆಯ ಚಿನ್ಹೆ ತಡೆ ಹಿಡಿದ ಚುನಾವಣಾ ಆಯೋಗ

    ಶಶಿಕಲಾ, ಸೆಲ್ವಂ ಬಣಗಳಿಗೆ ಶಾಕ್ – ಎಐಎಡಿಎಂಕೆಯ ಚಿನ್ಹೆ ತಡೆ ಹಿಡಿದ ಚುನಾವಣಾ ಆಯೋಗ

    – ಜಯಲಲಿತಾ ಕ್ಷೇತ್ರದ ಉಪಸಮರಕ್ಕೆ ಎರಡೆಲೆ ಇಲ್ಲ

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾಗಿರೋ ಚೆನ್ನೈನ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಮಾನ್ಯತೆಯನ್ನೇ ಕಳೆದುಕೊಂಡಿದೆ.

    ಎಐಎಡಿಎಂಕೆ ಪಕ್ಷದ ಚಿಹ್ನೆ ತಮಗೆ ನೀಡುವಂತೆ ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದ್ರೆ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎರಡೂ ಬಣಕ್ಕೂ ಎಐಎಡಿಎಂಕೆ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸಿದೆ. ಅಲ್ಲದೆ ಎಐಎಡಿಎಂಕೆ ಪಕ್ಷದ ವಿಸ್ತøತ ಹೆಸರನ್ನು ಚುನಾವಣೆಯಲ್ಲಿ ಬಳಸುವಂತಿಲ್ಲ ಎಂದು ಹೇಳಿದೆ.

    ಸದ್ಯ ಪಕ್ಷದ ಚಿಹ್ನೆಯನ್ನ ಚುನಾವಣಾ ಆಯೋಗ ತಡೆ ಹಿಡಿದಿದೆ. ಹೀಗಾಗಿ ಆರ್‍ಕೆ ನಗರ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಹಾಗೂ ಸೆಲ್ವಂ ಬಣದ ಅಭ್ಯರ್ಥಿ ಮಧುಸೂದನನ್ ಬೇರೆ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಏಪ್ರಿಲ್ 12ರಂದು ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.