Tag: NY Gopalakrishna

  • ಮೊಳಕಾಲ್ಮೂರಲ್ಲಿ ಬೀದಿಗೆ ಬಂದ ‘ಕೈ’ ನಾಯಕರ ಶೀತಲ ಸಮರ – ಪ.ಪಂ. ಕಚೇರಿ ಬಳಿ ಯೋಗೀಶ್ ಬಾಬು ಧರಣಿ

    ಮೊಳಕಾಲ್ಮೂರಲ್ಲಿ ಬೀದಿಗೆ ಬಂದ ‘ಕೈ’ ನಾಯಕರ ಶೀತಲ ಸಮರ – ಪ.ಪಂ. ಕಚೇರಿ ಬಳಿ ಯೋಗೀಶ್ ಬಾಬು ಧರಣಿ

    ಚಿತ್ರದುರ್ಗ: ಒಳಗೊಳಗೆ ಹೊಗೆಯಾಡುತ್ತಿದ್ದ ಕಾಂಗ್ರೆಸ್ (Congress) ನಾಯಕರ ಶೀತಲ ಸಮರ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು (Molakalmuru) ಕ್ಷೇತ್ರದಲ್ಲಿ ಬೀದಿಗೆ ಬಂದಿದೆ.

    ಮೊಳಕಾಲ್ಮೂರು ಕಾಂಗ್ರೆಸ್ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೊಗೀಶ್ ಬಾಬು (Yogesh Babu) ನಡುವೆ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್‌ಗಾಗಿ ಆರಂಭವಾಗಿದ್ದ ಕದನಕ್ಕೆ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ರಾಜಿಸಂಧಾನ ಮಾಡಲಾಗಿತ್ತು. ಆದರೂ ಎಲ್ಲೂ ಕೂಡ ಶಾಸಕರೊಂದಿಗೆ ಗುರುತಿಸಿಕೊಳ್ಳದ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು ತಟಸ್ತವಾಗಿದ್ದರು. ಆದರೆ ಜುಲೈ 12 ರಂದು ಯೋಗೀಶ್ ಬಾಬು ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಮೊಳಕಾಲ್ಮೂರು ನಗರದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಜುಲೈ 13ರಂದು ಪಟ್ಟಣ ಪಂಚಾಯ್ತಿ ಸಿಬ್ಬಂದಿ ತೆರವುಗೊಳಿಸಿದ್ದರು. ಹೀಗಾಗಿ ಆಕ್ರೋಶಗೊಂಡ ಯೋಗೀಶ್ ಬಾಬು ಹಾಗೂ ಅವರ ನೂರಾರು ಜನ ಬೆಂಬಲಿಗರು ಮೊಳಕಾಲ್ಮೂರು ಪಟ್ಟಣ ಪಂಚಾಯ್ತಿ ಕಚೇರಿ ಬಳಿ ಭಾನುವಾರ ರಾತೋರಾತ್ರಿ ಧರಣಿ ನಡೆಸಿದರು. ಇದನ್ನೂ ಓದಿ: ಡಿವೋರ್ಸ್‌ ಘೋಷಿಸಿದ ಸೈನಾ ನೆಹ್ವಾಲ್‌-ಪರುಪಳ್ಳಿ ಕಶ್ಯಪ್ ದಂಪತಿ

    ಕೆಲವರ ಫ್ಲೆಕ್ಸ್‌ಗಳನ್ನು 3 ತಿಂಗಳಾದರು ತೆರವುಗೊಳಿಸಲ್ಲ. ನಾನು ನಿಗಮ ಮಂಡಳಿ ಅಧ್ಯಕ್ಷನಾದರೂ ಕೂಡ ಮೊಳಕಾಲ್ಮೂರಲ್ಲಿ ಯಾವುದೇ ಪ್ರೊಟೋಕಾಲ್ ಪಾಲನೆ ಮಾಡುತ್ತಿಲ್ಲ. ಸರ್ಕಾರದ ಒಂದೇ ಒಂದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಶಾಸಕ ಎನ್‌ವೈ ಗೋಪಾಲಕೃಷ್ಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಅಲ್ಲದೇ ರಾತ್ರಿ 11 ಗಂಟೆಗೆ ಮೊಳಕಾಲ್ಮೂರು ಪ.ಪಂ ಕಚೇರಿ ಎದುರು ನೆಲದ ಮೇಲೆ ಕುಳಿತು ಧರಣಿ ನಡೆಸಿದ ಯೋಗೀಶ್ ಬಾಬು ಎಲ್ಲಾ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಗಮನಕ್ಕೆ ತರುವತ್ತೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

  • ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ

    ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ

    ಚಿತ್ರದುರ್ಗ: ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ ಹಾಗೂ ಶಾಲೆ ನಿರ್ಮಿಸಲಾಗುತ್ತಿಲ್ಲ ಎಂದು ಮೊಳಕಾಲ್ಮೂರು (Molakalmuru) ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಅಸಮಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಖಾಸಗಿ ಕಂಪನಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ, ಶಾಲೆ ನಿರ್ಮಿಸಲಾಗುತ್ತಿಲ್ಲ ಎನ್ನುವ ಮೂಲಕ ಸರ್ಕಾರದಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂದು ಪರೋಕ್ಷವಾಗಿ ಅಸಹಾಯಕತೆ ಹೊರಹಾಕಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಶೈಲೇಂದ್ರ ಬೆಲ್ದಾಳೆ

    ಇನ್ನು ಈ ಗಡಿಭಾಗದಲ್ಲಿ ಆರಂಭಿಸುತ್ತಿರುವ ಖಾಸಗಿ ಕಂಪನಿಯವರಿಗೇನು ಮೂರ್ಖತನವೊ ತಿಳಿಯದು. ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ ಸೇರಿದಂತೆ ಶಾಲೆ ಸಹ ನಿರ್ಮಾಣ ಮಾಡಲಾಗುತ್ತಿಲ್ಲ. ಇಂತಹ ಸಮಯದಲ್ಲಿ ಈ ಭಾಗದಲ್ಲಿ ಬಂದು ಖಾಸಗಿ ಕಂಪನಿಯವರೇನು ಮಾಡುತ್ತಾರೆಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ತಾಂತ್ರಿಕ ದೋಷ – ಜಮ್ಮುವಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್

    ಇನ್ನು ಈ ಖಾಸಗಿ ಕಂಪನಿಗೆ ನಾನು ಸಹ ಕುಟುಂಬ ಸದಸ್ಯ ಎಂದುಕೊಳ್ಳಿ. ಹೀಗೆ ಹೇಳಿದ ಮಾತ್ರಕ್ಕೆ ಶೇರ್ ಹೋಲ್ಡರ್ ಎಂದುಕೊಳ್ಳಬೇಡಿ. ನಾನು ಉಚಿತ ಸೇವೆ ಮಾಡುವವನು ಎಂದು ಶಾಸಕ ಮಾತನಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ನಾವು, ನಮ್ಮ ಕುಟುಂಬ ಇ.ಡಿ ಎದುರಿಸಲು ರೆಡಿ ಇದ್ದೇವೆ: ಡಿಕೆಶಿ

  • ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ

    ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ

    ಚಿತ್ರದುರ್ಗ: ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ (BJP), ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು (Congress) ಎಂದು ಮೊಳಕಾಲ್ಮೂರು (Molakalmuru) ಕಾಂಗ್ರೆಸ್ ಶಾಸಕ ಎನ್‌ವೈ ಗೋಪಾಲಕೃಷ್ಣ (N.Y.Gopalakrishna) ಹೇಳಿದ್ದಾರೆ.

    ಚಿತ್ರದುರ್ಗದ (Chitradurga) ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಶನಿವಾರ ನಡೆದ ಭಾರತ್ ಜೋಡೋ (Bharat Jodo) ಯಾತ್ರೆಯ ವಾರ್ಷಿಕೋತ್ಸವದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕೂಡ್ಲಿಗಿ ಕೇತ್ರದ ಬಿಜೆಪಿ ಶಾಸಕ ಆಗಿದ್ದಾಗ ಸಹ ಕಾಂಗ್ರೆಸ್ ಬೆಂಬಲಿಸಿದ್ದೆ. ಭಾರತ್ ಜೋಡೋ ಯಾತ್ರೆ ವೇಳೆ ಹಾನಗಲ್‌ನಿಂದ ಕಣುಕುಪ್ಪೆಯವರೆಗೆ ಮೊಳಕಾಲ್ಮೂರು ಕ್ಷೇತ್ರದ ಜನರನ್ನು ಯಾತ್ರೆಗೆ ಕಳುಹಿಸಿದ್ದೆ. ಆಗ ಡಿ.ಸುಧಾಕರ್ ನನಗೆ ಜನ ಕಳುಹಿಸುವಂತೆ ಹೇಳಿದ್ದರು. ಅವರೇ ಇಂದು ನಮ್ಮೊಂದಿಗೆ ಸಾಕ್ಷಿಯಾಗಿದ್ದಾರೆ ಎಂದರು. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

    ನಮ್ಮ ಸಹೋದರರಾದ ಮಾಜಿ ಸಂಸದ ಎನ್‌ವೈ ಹನುಮಂತಪ್ಪ ಅವರು ನಾನು ಬಿಜೆಪಿಗೆ ಸೇರಿದ್ದಾಗ ಮತ ಹಾಕಿರಲಿಲ್ಲ. ನಾನು ಬಿಜೆಪಿ ಸೇರಿದ್ದೇನೆ. ನನಗೆ ಮತ ಹಾಕಿ ಎಂದಾಗ ನೀನು ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಎಂದಿದ್ದರು. ಹಾಗೆಯೇ ನಾನು ನೆಹರೂ, ಇಂದಿರಾಗಾಂಧಿಯವರ ಅನುಯಾಯಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದೇನೆ. ಹೀಗಾಗಿ ಬಡವರಿರುವ ಕಾಂಗ್ರೆಸ್ ಪಾರ್ಟಿಯಲ್ಲಿ ನಾನಿರುತ್ತೇನೆ ಹೊರತು ಶ್ರೀಮಂತರೊಂದಿಗೆ ಸೇರಲ್ಲ. ಜೊತೆಗೆ ಬಡವರು, ಎಸ್ಸಿ, ಎಸ್ಟಿ, ಮೈನಾರಿಟಿ ಜನರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ಭೇಟಿ

    ಕಾಂಗ್ರೆಸ್ ಇರುವವರೆಗೆ ಈ ದೇಶದ ಜನರು ಕಾಂಗ್ರೆಸನ್ನೇ ಬೆಂಬಲಿಸಲಿದ್ದಾರೆ. ಆದ್ದರಿಂದ ನೀನು ‘ಕೈ’ನೊಂದಿಗಿರು ಎಂದಿದ್ದ ಪರಿಣಾಮವಾಗಿ ನಾನು ಕೂಡ್ಲಿಗಿಯಲ್ಲೂ ಕಾಂಗ್ರೆಸ್ ಪಡೆ ಕಟ್ಟಿರುವೆ. ಕಾಂಗ್ರೆಸ್ ಕಾರ್ಯಕ್ರಮ ಅನುಷ್ಟಾನಗೊಳಿಸಿದೆ ಎಂದರು. ಈ ವೇಳೆ ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಪ್ಪ, ಸಚಿವ ಡಿ.ಸುಧಾಕರ್, ಶಾಸಕ ರಘುಮೂರ್ತಿ ಹಾಗೂ ‘ಕೈ’ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ:  G20 Summit: ಮೊದಲ ದಿನದ ಅಧಿವೇಶನಗಳು ಯಶಸ್ವಿ – ಇಂದಿನ ಕಾರ್ಯಕ್ರಮಗಳೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?

    ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?

    ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ (Molakalmuru constituency) ಬಿಜೆಪಿ (BJP) ಅಭ್ಯರ್ಥಿಯಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ (Thippeswamy), ಕಾಂಗ್ರೆಸ್‌ನಿಂದ (Congress) ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ಜೆಡಿಎಸ್‌ನಿಂದ (JDS) ವೀರಭದ್ರ ಬಾಬು (Veerabhadra Babu) ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಹಾಗೂ ತಿಪ್ಪೇಸ್ವಾಮಿ ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಇಬ್ಬರು ಸಹ ಸಮಬಲದ ಹೋರಾಟ ನಡೆಸುತಿದ್ದಾರೆ. ಆದರೆ ಜೆಡಿಸ್‌ನ ಅಭ್ಯರ್ಥಿ ವಲಸಿಗರಾಗಿದ್ದು, ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ.

    ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು ಸಚಿವರಾಗಿದ್ದ ಶ್ರೀರಾಮುಲು ಅವರ ಎದುರಾಳಿಯಾಗಿದ್ದ ತಿಪ್ಪೇಸ್ವಾಮಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಲು ಬೆಂಗಾವಲಾಗಿ ನಿಂತಿದ್ದಾರೆ. ಈ ಮಧ್ಯೆ ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಗೋಪಾಲಕೃಷ್ಣ ಕೂಡಾ ಸತತ 6 ಬಾರಿ ಶಾಸಕರಾಗಿದ್ದು, ತಿಪ್ಪೇಸ್ವಾಮಿ ವಿರುದ್ಧ ಭಾರೀ ಕಸರತ್ತು ಆರಂಭಿಸಿದ್ದಾರೆ.

    ಇಬ್ಬರು ನಾಯಕರು ಸಹ ಸ್ಥಳೀಯರಾಗಿದ್ದು, ದಿಗ್ಗಜರ ಮಧ್ಯೆ ಜಿದ್ದಾಜಿದ್ದಿನ 50:50 ಸ್ಪರ್ಧೆ ನಡೆಯುತ್ತಿದೆ. ಈ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬುಡಕಟ್ಟು ಸಂಪ್ರದಾಯದ ಮ್ಯಾಸನಾಯಕ ಸಮುದಾಯ ಹೆಚ್ಚಾಗಿದೆ. ಅವರೇ ಫಲಿತಾಂಶದ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಲ್ಲಿ ಊರು ನಾಯಕ ಸಮುದಾಯ ಅವರಿಗಿಂತ ಕಡಿಮೆ ಇದೆ. ಹೀಗಾಗಿ ಈ ಇಬ್ಬರು ಸ್ಪರ್ಧಿಗಳಲ್ಲಿ ತಿಪ್ಪೇಸ್ವಾಮಿ ಮ್ಯಾಸನಾಯಕ ಬೇಡರ ಸಮುದಾಯದವರಾಗಿದ್ದು, ಗೋಪಾಲಕೃಷ್ಣ ಊರು ನಾಯಕರಾಗಿರುವುದು ಬಿಜೆಪಿಗೆ ವರದಾನವಾಗಿದೆ.

    ಕಾಂಗ್ರೆಸ್ ಟಿಕೆಟ್ ವಂಚಿತ ಯೋಗೇಶ್ ಬಾಬು ಸಹ ಮ್ಯಾಸನಾಯಕ ಬುಡಕಟ್ಟಿನವರಾಗಿದ್ದು, ಗೋಪಾಲಕೃಷ್ಣ ಜೊತೆ ಗುರುತಿಸಿಕೊಂಡಿರುವುದು ಬಿಜೆಪಿಗೆ ತೀವ್ರ ಪೈಪೋಟಿ ಎನಿಸಿದೆ. ಈ ಜಿದ್ದಾಜಿದ್ದಿನ ಕಣದಲ್ಲಿ ಇಬ್ಬರು ಸ್ಪರ್ಧಿಗಳು ಸಹ ಭಾರೀ ಪೈಪೋಟಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ತಿಪ್ಪೇಸ್ವಾಮಿ ಪರ ಕಳೆದ ಬಾರಿ ಸೋತಿರುವ ಅನುಕಂಪ ಹಾಗೂ ಇತ್ತೀಚೆಗೆ ಅವರ ಏಕೈಕ ಪುತ್ರನ ಅಕಾಲಿಕ ಸಾವು ಸಹ ಮತದಾರರ ಮನ ಕರಗಿಸಿದೆ.

    ಕ್ಷೇತ್ರದಲ್ಲಿನ ಮತದಾರರೊಂದಿಗಿನ ಒಡನಾಟ ವರ್ಕೌಟ್ ಆದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಆದರೆ ತುಂಬಾ ಬುದ್ಧಿವಂತ ಹಾಗೂ ಚುನಾವಣಾ ತಂತ್ರಗಾರಿಕೆ ಬಲ್ಲ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ವಿರುದ್ಧ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆ ಸಹ ಕ್ಷೇತ್ರದಲ್ಲಿದೆ.

    ಇನ್ನು ಮಾಜಿ ಶಾಸಕ ತಿಪ್ಪೇಸ್ವಾಮಿ ಪರ ಮಾಜಿ ಸಚಿವ ಶ್ರೀರಾಮುಲು ಆಪ್ತ ಪಾಪೇಶ್ ನಾಯಕ ಓಡಾಡುತ್ತಿರುವುದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಕಳೆದ ಬಾರಿ ಗೆದ್ದಿದ್ದ ಶ್ರೀ ರಾಮುಲು ಪರ ಎಲ್ಲಾ ಕೆಲಸಗಳನ್ನು ಪಾಪೇಶ್ ನಾಯಕ ನೆರವೇರಿಸುತ್ತಿದ್ದು, ಕ್ಷೇತ್ರದಲ್ಲಿ ಜನವಿರೋಧಿ ಅಲೆ ಪರಿಣಾಮ ರಾಮುಲು ಕ್ಷೇತ್ರ ಬದಲಾವಣೆ ಮಾಡಿದ್ದರು. ಹೀಗಾಗಿ ಅದರ ಎಫೆಕ್ಟ್ ತಿಪ್ಪೇಸ್ವಾಮಿ ಮೇಲೆ ತಟ್ಟಿದರೆ ಬಿಜೆಪಿ ಗೆಲುವು ಕಷ್ಟವಾಗಲಿದೆ. ಇದನ್ನೂ ಓದಿ: ‘ಕೈ’, ‘ಕಮಲ’ದ ನಡುವೆ ಟಫ್ ಫೈಟ್ – ಕಾಗವಾಡ ಅಖಾಡ ಹೇಗಿದೆ?

    ಮತದಾರರು ಎಷ್ಟಿದ್ದಾರೆ?
    ಒಟ್ಟು ಮತದಾರರು: 2,43,027
    ಪುರುಷರು: 1,22,622
    ಮಹಿಳೆಯರು: 1,20,393

    ಯಾರ ವೋಟು ಎಷ್ಟು?
    ನಾಯಕ : 1,10,000
    ಎಸ್‌ಸಿ : 55,000
    ರೆಡ್ಡಿ ಲಿಂಗಾಯತ : 25,000
    ಗೊಲ್ಲ : 16,000
    ಮುಸ್ಲಿಂ : 9,000
    ಕುರುಬ : 10,000
    ನೇಕಾರ : 5,000
    ಇತರೆ: 13,000 ಇದನ್ನೂ ಓದಿ: ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು