Tag: NWKSRTC

  • ಅಪಘಾತ ಪರಿಹಾರ ಹಣ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ!

    ಅಪಘಾತ ಪರಿಹಾರ ಹಣ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ!

    ಚಿಕ್ಕೋಡಿ: ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪರಿಹಾರದ ಹಣವನ್ನು ನೀಡದ ಕಾರಣ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ವೊಂದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಅಪಘಾತದಿಂದಾಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಹಣವನ್ನು ನೀಡದ ಕಾರಣ, ಹುಕ್ಕೇರಿ ಜೆಎಂಎಫ್‍ಸಿ ನ್ಯಾಯಾಲಯ ಬಸ್ ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಏನಿದು ಪ್ರಕರಣ?
    2003ರಲ್ಲಿ ಸವದತ್ತಿ ತಾಲೂಕಿನ ಹಲ್ಕಿ ಕ್ರಾಸ್ ಬಳಿ, ನಿಂತಿದ್ದ ಕ್ರೂಸರ್ ವಾಹನಕ್ಕೆ ವಾಯುವ್ಯ ಸಾರಿಗೆಯ ಬಸ್ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ವಿಜಯ್ ಉಮಾರಾಣಿ (30) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಸಾರಿಗೆ ಸಂಸ್ಥೆಯ ವಿರುದ್ಧ ಮೃತ ಕುಟುಂಬದ ಸದಸ್ಯರು ದೂರು ನೀಡಿದ್ದರು. ದೂರು ನೀಡಿದ್ದರೂ ಸಹ ಪರಿಹಾರವನ್ನು ಮೃತ ಕುಟುಂಬಕ್ಕೆ ಸಾರಿಗೆ ಸಂಸ್ಥೆ ನೀಡಿರಲಿಲ್ಲ.

    ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ಮೃತ ವಿಜಯ್ ಉಮಾರಾಣಿ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹುಕ್ಕೇರಿಯ ಜೆಎಂಎಫ್‍ಸಿ ನ್ಯಾಯಾಲಯ ಪರಿಹಾರ ಮೊತ್ತ ನೀಡಿದ ವಾಯುವ್ಯ ಸಾರಿಗೆ ಸಂಸ್ಥೆ ವಿರುದ್ಧ ಬಸ್ ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾರಿಗೆ ಸಂಸ್ಥೆ ಬಸ್ ಗೆ ಬೆಂಕಿ-ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಸಾರಿಗೆ ಸಂಸ್ಥೆ ಬಸ್ ಗೆ ಬೆಂಕಿ-ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಗದಗ: ಮುಂಡರಗಿ ಡಿಪೋಕ್ಕೆ ಸೇರಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ಸು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಗೋವಾದ ಪೊಂಡಾ ಎಂಬಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ 10 ಗಂಟೆಗೆ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಪಣಜಿಯಿಂದ ಮುಂಡರಗಿ ಕಡೆಗೆ ಹೊರಟಿತ್ತು. ತಡರಾತ್ರಿ ಪೊಂಡಾ ಎಂಬಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ.

    ನೋಡ ನೋಡತ್ತಲೇ ಬಸ್ ಗೆ ಬೆಂಕಿ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಲ್ಲದೇ ಬಸ್ ನಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.

  • ಪ್ರತಿಷ್ಠಿತ ಐಶಾರಾಮಿ ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವರು!

    ಪ್ರತಿಷ್ಠಿತ ಐಶಾರಾಮಿ ವೋಲ್ವೋ ಕಂಪೆನಿಗೆ ಶಾಕ್ ನೀಡಿದ ಸಾರಿಗೆ ಸಚಿವರು!

    ಬೆಂಗಳೂರು: ರಾಜ್ಯದ ಎಲ್ಲಾ ಸಾರಿಗೆ ನಿಗಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣರವರು ಬ್ರೇಕ್ ಹಾಕಿದ್ದಾರೆ.

    ವೋಲ್ವೋ ಬಸ್‍ಗಳ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಎನ್‍ಇಕೆಎಸ್‍ಆರ್ ಟಿಸಿ, ಎನ್‍ಡಬ್ಲ್ಯೂಕೆಎಸ್‍ಆರ್ ಟಿಸಿಯ ನಿಗಮಗಳಿಗೆ ಸಾರಿಗೆ ಇಲಾಖೆ ತಣ್ಣೀರು ಎರಚಿದ್ದು, ಸಾರಿಗೆ ಸಂಸ್ಥೆಯವರು ಹೊಸ ಬಸ್ ಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವರು ಬ್ರೇಕ್ ಹಾಕುವ ಮೂಲಕ ವೋಲ್ವೋ ಕಂಪೆನಿಗೆ ಬಿಗ್ ಶಾಕ್ ನೀಡಿದ್ದಾರೆ.

    ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದು, ನಗರ ಸಾರಿಗೆಗೆ ವೋಲ್ವೋ ಬಸ್ ಖರೀದಿ ಮಾಡೋ ಹಾಗಿಲ್ಲ ಹಾಗೂ ದುಬಾರಿ ಬೆಲೆ ಬಸ್ ಖರೀದಿ ಪ್ರಸ್ತಾವನೆ ನನ್ನ ಮುಂದೆ ತರಬೇಡಿ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಚಿವರ ಈ ಖಡಕ್ ನಿರ್ಧಾರವು ವೋಲ್ವೋ ಕಂಪೆನಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಈ ವೇಳೆ ಮಾತನಾಡಿದ ಸಚಿವರು, ವೋಲ್ವೋ ಬಸ್ ನಿರ್ವಹಣೆ ದುಬಾರಿಯಾಗಿದ್ದು, ಮೈಲೇಜ್ ಸಹ ಕಡಿಮೆ ನೀಡುತ್ತದೆ. ಆದ್ದರಿಂದ ಹೊಸ ವೋಲ್ವೋ ಬಸ್ ಖರೀದಿ ನಿಲ್ಲಿಸಿದ್ದೇನೆ. ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಗಳು ಐಷಾರಾಮಿ ಬಸ್ ಗಳಿಂದ ಕೈ ಸುಟ್ಟುಕೊಂಡಿವೆ ಎಂದು ತಿಳಿಸಿದರು.

    ವೋಲ್ವೋ ಬಸ್ ಖರೀದಿಯಿಂದ ಅಧಿಕಾರಿಗಳು ದುಡ್ಡು ಮಾಡುತ್ತಾರೆಯೇ ಹೊರತು, ಸಂಸ್ಥೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ ಅವರು 1 ಕೋಟಿ ಬೆಲೆಯ ಬಸ್‍ಗಳು ಬೇಡ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.